Tag: ಕಿರಿಯ ಶ್ರೀಗಳು

  • ಮಠಕ್ಕೆ ಯಾರೂ ಬರ್ಬೇಡಿ, ಅಜ್ಜರಕಾಡು ಮೈದಾನಕ್ಕೆ ಬನ್ನಿ: ಭಕ್ತರಲ್ಲಿ ಕಿರಿಯ ಶ್ರೀ ಮನವಿ

    ಮಠಕ್ಕೆ ಯಾರೂ ಬರ್ಬೇಡಿ, ಅಜ್ಜರಕಾಡು ಮೈದಾನಕ್ಕೆ ಬನ್ನಿ: ಭಕ್ತರಲ್ಲಿ ಕಿರಿಯ ಶ್ರೀ ಮನವಿ

    ಉಡುಪಿ: ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಸದ್ಯಕ್ಕೆ ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಪೇಜಾವರ ಶ್ರೀಗಳ ದರ್ಶನ ಮಾಡಲು ಅಪಾರ ಭಕ್ತರು ಮಠಕ್ಕೆ ಬರುತ್ತಿದ್ದಾರೆ. ಆದ್ದರಿಂದ ಭಕ್ತರೇ ಪೇಜಾವರ ಶ್ರೀಗಳನ್ನು ನೋಡಲು ಮಠಕ್ಕೆ ಬರಬೇಡಿ ಎಂದು ಕಿರಿಯ ಶ್ರೀಗಳು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿಗಳು ಬೆಂಗ್ಳೂರಿಗೆ ಶಿಫ್ಟ್

    ಚಿಕಿತ್ಸೆ ನಡುವೆಯೇ ಭಕ್ತರಿಗೆ ಪೇಜಾವರ ಶ್ರೀಗಳ ದರ್ಶನಕ್ಕೆ ಅವಕಾಶ ಮಾಡಿಕೊಡುವುದಾಗಿ ಹೇಳಲಾಗಿತ್ತು. ಆದರೆ ಶ್ರೀಗಳ ಆರೋಗ್ಯ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಕ್ತರೇ ಶ್ರೀಗಳನ್ನು ನೋಡಲು ಮಠಕ್ಕೆ ಬರಬೇಡಿ. ನಿಮಗಾಗಿ ಒಂದು ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಅಜ್ಜರಕಾಡು ಕ್ರೀಡಾಂಗಣಕ್ಕೆ ಬನ್ನಿ. ಅಲ್ಲಿ ಶ್ರೀಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಭಕ್ತರಲ್ಲಿ ಕಿರಿಯ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ಮನವಿ ಮಾಡಿಕೊಂಡಿದ್ದಾರೆ.

    ಪೇಜಾವರ ಮಠದಿಂದ ಸುಮಾರು 2 ಕಿ.ಮೀ ದೂರದಲ್ಲಿ ಅಜ್ಜರಕಾಡು ಕ್ರೀಡಾಂಗಣ ಇದೆ. ಈಗಾಗಲೇ ಮೈದಾನದಲ್ಲಿ ಪೊಲೀಸರು ತರಾತುರಿಯಲ್ಲಿ ಪೂರ್ವ ಸಿದ್ಧತೆ ಮಾಡುತ್ತಿದ್ದಾರೆ. ಜಿಲ್ಲಾಡಳಿತದಿಂದ ಪೇಜಾವರ ಶ್ರೀ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಸಾರ್ವಜನಿಕರು ಕೂಡ ಮೈದಾನಕ್ಕೆ ದೌಡಾಯಿಸುತ್ತಿದ್ದಾರೆ. ಇನ್ನೂ ಕೆಲವೇ ಗಂಟೆಯಲ್ಲಿ ಪೇಜಾವರ ಶ್ರೀಗಳನ್ನು ಮೈದಾನಕ್ಕೆ ಶಿಫ್ಟ್ ಮಾಡುವ ಸಾಧ್ಯತೆ ಇದೆ.

  • ನಿನ್ನೆಗಿಂತಲೂ ಚೇತರಿಕೆ – ಕಣ್ಣು ತೆರೆದು ಭಕ್ತರನ್ನು ಆಶೀರ್ವಾದಿಸಿದ ನಡೆದಾಡುವ ದೇವರು!

    ನಿನ್ನೆಗಿಂತಲೂ ಚೇತರಿಕೆ – ಕಣ್ಣು ತೆರೆದು ಭಕ್ತರನ್ನು ಆಶೀರ್ವಾದಿಸಿದ ನಡೆದಾಡುವ ದೇವರು!

    ತುಮಕೂರು: ಅನಾರೋಗ್ಯದಿಂದ ಬಳಲುತ್ತಿರುವ ಶ್ರೀ ಶ್ರೀ ಶಿವಕುಮಾರ ಸ್ವಾಮಿಜಿಯವರು ತಮ್ಮನ್ನು ನೋಡಲು ಆಗಮಿಸಿದ ಭಕ್ತರನ್ನು ಕಣ್ಣು ತೆರೆದು ನೋಡಿ ಆಶೀರ್ವಾದಿಸಿದ್ದಾರೆ.

    ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇಂದು ತಮ್ಮನ್ನು ನೋಡಲು ಬಂದ ಭಕ್ತರನ್ನು ಕಣ್ತೆರೆದು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಕಿರಿಯ ಶ್ರೀ ಸಿದ್ದಲಿಂಗಸ್ವಾಮೀಜಿಗಳು ಶ್ರೀಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ವೇಳೆ ಕಣ್ಣು ತೆರೆದು ಮುಗುಳ್ನಕ್ಕಿದ್ದಾರೆ. ಕಿರಿಯ ಶ್ರೀಗಳ ಸಹಾಯದೊಂದಿಗೆ ಇಷ್ಟಲಿಂಗ ಪೂಜೆಯಲ್ಲಿ ನಡೆದಾಡುವ ದೇವರು ಭಾಗಿಯಾಗಿದ್ದು, ಅವರ ಪಕ್ಕದಲ್ಲೇ ಕುಳಿತು ಕಿರಿಯ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ.

    ಶ್ರೀಗಳ ಆರೋಗ್ಯದಲ್ಲಿ ನಿನ್ನೆಗಿಂತಲೂ ಇಂದು ಚೇತರಿಕೆ ಕಂಡುಬಂದಿದ್ದು, ಸ್ವಯಂ ಉಸಿರಾಟ ಮುಂದುವರಿಸಿದ್ದಾರೆ. ಶ್ರೀಗಳು ದಿನದಿಂದ ದಿನಕ್ಕೆ ಉತ್ತಮವಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅಲ್ಲದೇ ಎಂದಿನಂತೆ ಇಂದು ಕೂಡ ಶ್ರೀಗಳನ್ನು ನೋಡಲು ಮಠಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.

    ಸದ್ಯ ಸಿದ್ದಗಂಗಾ ಮಠದಲ್ಲೇ ಶ್ರೀಗಳಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದ್ದು, ಎಂದಿನಂತೆ ರಕ್ತ ಪರೀಕ್ಷೆ, ಬಿ.ಪಿ. ಪಲ್ಸ್‌ಗಳ  ತಪಾಸಣೆಯನ್ನು ವೈದ್ಯರು ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಕಿರಿಯ ಶ್ರೀಗಳು

    ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಕಿರಿಯ ಶ್ರೀಗಳು

    ತುಮಕೂರು: ಸಿದ್ದಗಂಗಾ ಮಠಕ್ಕೆ ಶ್ರೀಗಳನ್ನು ಶಿಫ್ಟ್ ಮಾಡಲಾಗಿದ್ದು, ಮಠದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಮಠದ ವಿದ್ಯಾರ್ಥಿಗಳಿಗೆ ಶ್ರೀಗಳ ದರ್ಶನ ಸಿಗದ ಹಿನ್ನೆಲೆಯಲ್ಲಿ ಮಾಧ್ಯಮಗಳ ಮುಂದೆ ಕಿರಿಯ ಶ್ರೀಗಳು ಭಾವುಕರಾಗಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಕಿರಿಯ ಶ್ರೀಗಳು, ಶ್ರೀಗಳನ್ನು ಆಸ್ಪತ್ರೆಯಿಂದ ಮಠಕ್ಕೆ ಶಿಫ್ಟ್ ಆದ ಹಿನ್ನೆಲೆಯಲ್ಲಿ ಮಠದಲ್ಲೇ ಐಸಿಯೂ ಮಾದರಿಯ ಕೊಠಡಿ ನಿರ್ಮಾಣವಾಗಿದೆ. ಅದೇ ಕೊಠಡಿಯಲ್ಲೇ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಶ್ರೀಗಳು ಆರೋಗ್ಯವಾಗಿ ಇದ್ದಾರೆ. ಯಾರೋ ಇಲ್ಲಸಲ್ಲದ ಮಾಹಿತಿ ನೀಡುತ್ತಿದ್ದಾರೆ. ಆದರೆ ಶ್ರೀಗಳಿಗೆ ಸತತವಾಗಿ ಚಿಕಿತ್ಸೆ ನಡೆಯುತ್ತಿರುವುದರಿಂದ ಅವರಿಗೆ ತೊಂದರೆಯಾಗಬಾದರು. ಇಲ್ಲ ಸಲ್ಲದ ವದಂತಿಗೆ ಕಿವಿಗೊಡಬೇಡಿ ಎಂದು ಕಿರಿಯ ಶ್ರೀಗಳು ಜನರಲ್ಲಿ ಮನವಿ ಮಾಡಿಕೊಂಡರು.

    ನನಗೂ ಮಕ್ಕಳಿಗೆ ಶ್ರೀಗಳ ದರ್ಶನ ಮಾಡಿಸಬೇಕು ಅಂತ ಆಸೆ ಇದೆ ಎಂದು ತಕ್ಷಣ ಕಿರಿಯ ಶ್ರೀಗಳು ಮೌನವಾಗಿ ಕಣ್ಣೀರು ಹಾಕಿದ್ದಾರೆ. ಬಳಿಕ ನಮ್ಮ ಸಿಬ್ಬಂದಿಯೇ ಶ್ರೀಗಳನ್ನು ದರ್ಶನ ಮಾಡಲು ಬಿಡುತ್ತಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ. ಜನರು ಕೂಡ ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಆದರೆ ನಾವು ಶ್ರೀಗಳ ಆರೋಗ್ಯದ ಬಗ್ಗೆ ಯೋಚನೆ ಮಾಡಬೇಕು. ನಮಗೆ ಮಕ್ಕಳು, ಭಕ್ತರು ಮತ್ತು ಸಿಬ್ಬಂದಿಯೂ ಬೇಕು. ಚಿಕಿತ್ಸೆ ನೀಡುತ್ತಿರುವುದರಿಂದ ಎಲ್ಲರೂ ಸಹಕರಿಸಬೇಕು. ಎಲ್ಲರೂ ಸಹಕರಿಸುತ್ತಾರೆ ಎಂಬ ಭಾವನೆ ನನ್ನಲ್ಲಿದೆ ಎಂದು ಭಾವುಕರಾಗಿ ಹಳೆಯ ಮಠಕ್ಕೆ ಸಿದ್ದಲಿಂಗ ಸ್ವಾಮೀಜಿ ತೆರಳಿದರು.

    ಶ್ರೀಗಳು ಮಠಕ್ಕೆ ಹೋಗಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸಿದ್ದರು. ಆದ್ದರಿಂದ ಇಂದು ನಸುಕಿನ ಜಾವ ಸುಮಾರು 3.30ಕ್ಕೆ ಸಿದ್ದಗಂಗಾ ಆಸ್ಪತ್ರೆಯಿಂದ ಸಿದ್ದಗಂಗಾ ಮಠಕ್ಕೆ ಶ್ರೀಗಳನ್ನು ಶಿಫ್ಟ್ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸ್ಪತ್ರೆಗಳಿಗೆ ಅಲ್ಪಸಂಖ್ಯಾತರು ಅನ್ನೋ ಭೇದಭಾವ ಯಾಕೆ ತರಬೇಕು: ಸಿದ್ದಗಂಗಾ ಕಿರಿಯ ಶ್ರೀ

    ಆಸ್ಪತ್ರೆಗಳಿಗೆ ಅಲ್ಪಸಂಖ್ಯಾತರು ಅನ್ನೋ ಭೇದಭಾವ ಯಾಕೆ ತರಬೇಕು: ಸಿದ್ದಗಂಗಾ ಕಿರಿಯ ಶ್ರೀ

    ತುಮಕೂರು: ನಡೆದಾಡುವ ದೇವರ ಚಿಕಿತ್ಸೆಯಲ್ಲೂ ಸಚಿವ ಡಿ.ಕೆ. ಶಿವಕುಮಾರ್ ಅವರು ಧರ್ಮವನ್ನು ಕೆದಕಿದ್ದು, ಮುಸ್ಲಿಂ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಇದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಇವರ ಹೇಳಿಕೆಗೆ ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.

    ಈ ಕುರಿತು ಮಾಧ್ಯಮದವ ಜೊತೆ ಮಾತನಾಡಿದ ಸಿದ್ದಗಂಗಾ ಮಠದ ಕಿರಿಯ ಶ್ರೀಗಳು, ಆಸ್ಪತ್ರೆಗಳಿಗೆ ಅಲ್ಪಸಂಖ್ಯಾತರು ಅನ್ನೋ ಭೇದಭಾವ ಯಾಕೆ ತರಬೇಕು. ಶಾಲೆ, ಆಸ್ಪತ್ರೆಗಳಿಗೆಲ್ಲಾ ಈ ರೀತಿ ಭೇದಭಾವ ತರಬಾರದು. ಅವುಗಳು ಸರ್ವರಿಗೂ ಸೇರಿರುವಂತದ್ದಾಗಿದೆ ಎಂದು ಹೇಳಿದರು.

    ಆರೋಗ್ಯ ಎಲ್ಲರಿಗೂ ಕೆಡುತ್ತದೆ. ಎಲ್ಲಾ ಆಸ್ಪತ್ರೆಗಳಲ್ಲೂ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ವೈದ್ಯರು ಇರುತ್ತಾರೆ. ಇಂದು ವೈದ್ಯ ವೃತ್ತಿಯನ್ನ ಎಲ್ಲರೂ ಓದಿರುತ್ತಾರೆ. ಆದ್ದರಿಂದ ಆ ರೀತಿ ಭೇದಭಾವ ಇಲ್ಲ. ವೈದ್ಯರ ಹೆಸರು ರೇಲಾ ಆಗಿದ್ದರಿಂದ ಆ ರೀತಿಯ ಭಾವನೆಯಿಂದ ಹೇಳಿರಬಹುದು. ಅಲ್ಲಿ ವೈದ್ಯರ ಜೊತೆ ಆರೈಕೆ ಮಾಡುವ ತಂಡವೂ ಕೂಡ ಇರುತ್ತಾರೆ. ಯಾರೇ ಹೋದರು ಆರೈಕೆ ಮಾಡುತ್ತಾರೆ ಎಂದ್ರು.

    ಮೊಹಮ್ಮದ್ ರೇಲಾ ಒಬ್ಬ ವೈದ್ಯರು, ವೈದ್ಯೋ ನಾರಾಯಣ ಹರಿ ಅಂತಾರೆ. ನಾವು ಅವರನ್ನ ವೈದ್ಯರಾಗಿಯೇ ನೋಡಿದ್ದೇವೆ. ಅದನ್ನ ಹೊರತು ಬೇರೆ ಏನಿಲ್ಲ ಎಂದು ಶ್ರೀಮಠದಲ್ಲಿ ಕಿರಿಯ ಶ್ರೀ ಸಿದ್ದಲಿಂಗಸ್ವಾಮೀಜಿ ಉತ್ತರ ಕೊಟ್ಟಿದ್ದಾರೆ.

    ಡಿಕೆಶಿ ಹೇಳಿದ್ದೇನು?
    ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಸ್ಲಿಮ್ ಆಡಳಿತವಿದ್ದರೂ ಶ್ರೀಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಪಸಂಖ್ಯಾತ ಆಡಳಿತ ಮಂಡಳಿ ಇದ್ದರೂ ಶ್ರೀಗಳನ್ನ ಚೆನ್ನಾಗಿ ನೋಡ್ಕೊಂಡಿದ್ದಾರೆ. ಡಾಕ್ಟರ್ ಮೊಹಮ್ಮದ್ ರೆಲಾ ಮಾಲೀಕತ್ವದ ರೆಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವಾದತ್ಮಾಕ ಹೇಳಿಕೆ ನೀಡಿದ್ದರು.

    ನನಗೆ ಬಹಳ ಸಂತೋಷವಾಯ್ತು. ನಿಜವಾಗಲೂ ಕರ್ನಾಟಕ ರಾಜ್ಯದಲ್ಲಿ ಅಂತಹ ಆಸ್ಪತ್ರೆಯನ್ನು ನಾನು ನೋಡಿಲ್ಲ. ಜಾತಿ-ಧರ್ಮದ ಬಗ್ಗೆ ಮಾತನಾಡುತ್ತಿರುವ ನಾವು ಒಂದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊಹಮ್ಮದ್ ರೇಲಾ ಎಂಬಂತಹ ಮುಸಲ್ಮಾನ ಅಲ್ಪಸಂಖ್ಯಾತರು. ಅವರ ಹೆಸರಿನಲ್ಲಿ ರೇಲಾ ಅನ್ನುವ ಆಸ್ಪತ್ರೆಯೊಂದನ್ನು ಮಾಡಿದ್ದಾರೆ. ಅವರು ಒಬ್ಬ ಜಗತ್ತಿನ ಫೇಮಸ್ ಸರ್ಜನ್ ಆಗಿದ್ದಾರೆ. ನಮ್ಮ ಶ್ರೀಗಳಿಗೆ ಅವರು ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ ಅಂತ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv