Tag: ಕಿರಿಕ್

  • ನವೀನ್-ದಾನಿಶ್ ಕಾಂಬಿನೇಷನ್ ಚಿತ್ರ ಘೋಷಿಸಿದ ಕೆ.ಆರ್.ಜಿ ಸ್ಟುಡಿಯೋಸ್

    ನವೀನ್-ದಾನಿಶ್ ಕಾಂಬಿನೇಷನ್ ಚಿತ್ರ ಘೋಷಿಸಿದ ಕೆ.ಆರ್.ಜಿ ಸ್ಟುಡಿಯೋಸ್

    ಮೊನ್ನೆಯಷ್ಟೇ ಇಂದು ಹೊಸ ಸುದ್ದಿಯನ್ನು ಕೊಡುವುದಾಗಿ ಕೆಆರ್.ಜಿ ಸ್ಟುಡಿಯೋಸ್ (K.R.G ) ಘೋಷಣೆ ಮಾಡಿತ್ತು. ಅದು ಹೇಳಿಕೊಂಡಂತೆ ಇಂದು ಹೊಸ ಚಿತ್ರವೊಂದನ್ನು ಘೋಷಣೆ ಮಾಡಿದೆ. ಈ ಸಿನಿಮಾದಲ್ಲಿ ವಿಶೇಷ ತಾರಾಗಣವೇ ಇರಲಿದೆ. ಚಿತ್ರಕ್ಕೆ ಕಿರಿಕ್ ‘ಇಟಿ’1  (Kirik ET 1) ಎಂದು ಹೆಸರಿಡಲಾಗಿದೆ.

    ಕಿರಿಕ್ ‘et’ 11 ಚಿತ್ರ ಒಂದು ನಗೆ ಹಬ್ಬವಾಗಿ ತಯಾರಾಗಲಿದೆ. ಒಂದಷ್ಟು ಯುವಕರು ಯಾವುದೇ ರೀತಿಯಲ್ಲೂ ಅದೃಷ್ಟ ದೇವತೆ ಒಲಿಯದೆ ಇದ್ದಾಗ ಇಡೀ ದೇಶ ಅತ್ಯಂತ ಹುಮ್ಮಸ್ಸಿನಿಂದ ಆಡುವ, ನೋಡುವ ಕ್ರಿಕೆಟ್ ನಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗುತ್ತಾರೆ. ಮುಂದೆ ಅವರು ಭವಿಷ್ಯ ಏನಾಗಲಿದೆ ಎನ್ನುವುದೇ ಸಿನಿಮಾವಂತೆ.

    ಗುಳ್ಟು ಖ್ಯಾತಿಯ ನವೀನ್  ಶಂಕರ್ (Naveen Shankar) ಮತ್ತು ದಾನಿಶ್ ಸೇಠ್ (Danish Sait) ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಮನೋಜ್ ಕುಮಾರ್ ಕಾಲಾವನನ್ ಕಥೆ ಹೆಣೆದಿದ್ದರೆ, ಸುಮನ್ ಕುಮಾರ್ (Suman Kumar) ನಿರ್ದೇಶಿಸಲಿದ್ದಾರೆ. ಇದನ್ನೂ ಓದಿ:ಕೆಂಪು ಬಣ್ಣದ ಸೀರೆಯಲ್ಲಿ ಗ್ಲ್ಯಾಮರಸ್ ಆಗಿ ಮಿಂಚಿದ ಮಾನ್ವಿತಾ

    ಸುಮನ್ ಕುಮಾರ್ ಅವರು ಈ ಹಿಂದೆ ರಘುತಾತ ಚಿತ್ರವನ್ನು ನಿರ್ದೇಶಿಸಿದ್ದು , ವೆಬ್ ಸೀರಿಸ್ ಲೋಕದಲ್ಲಿ ಬಹಳ ಜನಪ್ರಿಯ ಆಗಿದ್ದಾರೆ. ಅಲ್ಲದೇ The Family Man ಮತ್ತು Farzi ಯ ಕಥೆಯನ್ನು ಹೆಣೆದಿದ್ದಾರೆ. ಈ ಚಿತ್ರಕ್ಕೆ ಸಂಗೀತವನ್ನು ಬಡವ ರಾಸ್ಕಲ್ ಚಿತ್ರಕ್ಕೆ ಸಂಗೀತ ನೀಡಿದ್ದ ವಾಸುಕಿ ವೈಭವ್ ಅವರು ನೀಡಲಿದ್ದಾರೆ.

     

    ಈ ಚಿತ್ರವನ್ನು ಕಾರ್ತಿಕ್, ವಿಜಯ್ ಸುಬ್ರಮಣ್ಯಂ ಮತ್ತು ಯೋಗಿ ಜಿ ರಾಜ್ ಅವರು ನಿರ್ಮಿಸಲಿದ್ದಾರೆ. ಕೆ ಆರ್ ಜಿ ಸ್ಟುಡಿಯೋಸಿನ 6 ವರ್ಷಗಳ ಚಿತ್ರರಂಗದ ಪಯಣದಲ್ಲಿ ಇದು 4 ನೇ ಚಿತ್ರ ನಿರ್ಮಾಣವಾಗಲಿದೆ. ಕಿರಿಕ್ et 11 ಚಿತ್ರದ ಚಿತ್ರೀಕರಣ ಈ ವರ್ಷ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಸಮಯದಲ್ಲೇ ಶುರುವಾಗಲಿದೆಯಂತೆ.

  • ಸ್ಯಾಂಡಲ್‍ವುಡ್ ಆಯ್ತು ಈಗ ಬಾಲಿವುಡ್‍ನಲ್ಲಿ ಸಂಯುಕ್ತ ಕಿರಿಕ್!

    ಸ್ಯಾಂಡಲ್‍ವುಡ್ ಆಯ್ತು ಈಗ ಬಾಲಿವುಡ್‍ನಲ್ಲಿ ಸಂಯುಕ್ತ ಕಿರಿಕ್!

    ಬೆಂಗಳೂರು: ಸ್ಯಾಂಡಲ್‍ವುಡ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಮಾಡಿಕೊಂಡಿದ್ದ `ಕಿರಿಕ್ ಪಾರ್ಟಿ’ ಚಿತ್ರದ ನಟಿ ಸಂಯುಕ್ತ ಹೆಗ್ಡೆ ಈಗ ಬಾಲಿವುಡ್ ನಲ್ಲೂ ಕಿರಿಕ್ ಮಾಡಿಕೊಂಡಿದ್ದಾರೆ. ಎಂಟಿವಿಯ `ಸ್ಪ್ಲಿಟ್ಸ್ ವಿಲ್ಲಾ’ ಡೇಟಿಂಗ್ ರಿಯಾಲಿಟಿ ಶೋನಲ್ಲಿ ಸಂಯುಕ್ತ ಇತರೇ ಸ್ಪರ್ಧಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ.

    ಸಂಯುಕ್ತ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಒಂದೇ ದಿನಕ್ಕೆ ಇತರ ಸ್ಪರ್ಧಿಗಳು ಅವರನ್ನು ಶೋದಿಂದ ಹೊರ ಕಳುಹಿಸಲು ಪ್ಲಾನ್ ಮಾಡುತ್ತಿದ್ದಾರೆ. ಸಂಯುಕ್ತ ಬಿಳಿ ಮತ್ತು ಕಪ್ಪು ಬಣ್ಣದ ಬಿಕಿನಿ ತೊಟ್ಟು ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟಿದ್ದರು. ಈ ಕಾರ್ಯಕ್ರಮದಲ್ಲಿ ಸಿಂಬಾ ಹಾಗೂ ಮೈರಾ ನಡುವೆ ಲ್ವವಿಡವಿ ನಡೆಯುತ್ತಿತ್ತು. ಇದೀಗ ಸಂಯುಕ್ತ ಅವರ ಎಂಟ್ರಿಯಿಂದ ಸಿಂಬಾ ಕಣ್ಣು ಸಂಯುಕ್ತ ಕಡೆಗೆ ಜಾರಿದೆ. ಇದರಿಂದಾಗಿ ಮೈರಾ ಸಿಟ್ಟು ಮಾಡಿಕೊಂಡಿದ್ದಾರೆ.

    ಇದೀಗ ಸಿಂಬಾ ಮತ್ತು ಸಂಯುಕ್ತ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದ್ದು, ಟೆಸ್ಟ್ ಯುವರ್ ಬಾಂಡ್ ಚಾಲೆಂಜ್‍ನಲ್ಲಿ ಸೋಲನ್ನು ಅನುಭವಿಸಿದ್ದರು. ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟ ಒಂದೇ ದಿನಕ್ಕೆ ಸಂಯುಕ್ತ ಹಲವು ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಶೋನಿಂದ ಹೋರಬರುತ್ತಾರಾ ಇಲ್ಲ ಅಲ್ಲೇ ಉಳಿಯುತ್ತಾರಾ ಎಂಬುದು ಮುಂದಿನ ಎಫಿಸೋಡ್‍ನಲ್ಲಿ ಗೊತ್ತಾಗಲಿದೆ. ಬಾಲಿವುಡ್ ನಟಿ ಸನ್ನಿಲಿಯೋನ್ ಮತ್ತು ರಣ್‍ವಿಜಯ್ ಸಿಂಗಾ ಈ ಕಾರ್ಯಕ್ರಮವನ್ನ ನಿರೂಪಿಸುತ್ತಿದ್ದಾರೆ.

    ಕನ್ನಡ ಬಿಗ್‍ಬಾಸ್ 5ನೇ ಆವೃತ್ತಿಯಲ್ಲಿ ಸಂಯುಕ್ತಾ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆಯನ್ನು ಪ್ರವೇಶಿಸಿದ್ದರು. ಅಲ್ಲೂ ಕೂಡ ಪ್ರತಿ ಸ್ಪರ್ಧಿಯಾಗಿದ್ದ ಸಮೀರ್ ಆಚಾರ್ಯ ಮೇಲೆ ಹಲ್ಲೆ ಮಾಡಿ ಕಿರಿಕ್ ಮಾಡಿ ಸುದ್ದಿಯಾಗಿದ್ದರು.

    https://www.facebook.com/mtvindia/videos/2188718738122121/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಿರಿಕ್ ಪಾರ್ಟಿ ಸ್ಟೈಲ್‍ನಲ್ಲಿ ಕುಂದಾಪುರದಲ್ಲಿ ಪಿ.ಯು ವಿದ್ಯಾರ್ಥಿಗಳಿಂದ ಕಿರಿಕ್

    ಕಿರಿಕ್ ಪಾರ್ಟಿ ಸ್ಟೈಲ್‍ನಲ್ಲಿ ಕುಂದಾಪುರದಲ್ಲಿ ಪಿ.ಯು ವಿದ್ಯಾರ್ಥಿಗಳಿಂದ ಕಿರಿಕ್

    ಉಡುಪಿ: ಸ್ಯಾಂಡಲ್ ವುಡ್ ಸಕ್ಸಸ್ ಫುಲ್ ಮೂವಿ ಕಿರಿಕ್ ಪಾರ್ಟಿ ಎಲ್ಲರೂ ನೋಡಿದ್ದಾರೆ. ಎಂಜಿನಿಯರ್ ಸ್ಟೂಡೆಂಟ್‍ಗಳು ಮಾಡೋ ಒಂದೊಂದು ಅವಾಂತರ ನಮ್ಮನ್ನು ಬಾಲ್ಯಕ್ಕೆ ಕೊಂಡೊಯ್ಯುತ್ತದೆ. ಈಗ ಕುಂದಾಪುರ ತಾಲೂಕಿನ ಹಾಸ್ಟೆಲ್ ವಿದ್ಯಾರ್ಥಿಗಳು ಶಿಫ್ಟ್ ಮಾಡುವ ವಿಚಾರದಲ್ಲಿ ಕಿರಿಕ್ ಮಾಡಿ ಸುದ್ದಿಯಾಗಿದ್ದಾರೆ.

    ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ಹಾಸ್ಟೆಲ್‍ನಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಹಾಸ್ಟೆಲ್‍ನನ್ನು ಬೇರೆಡೆ ಶಿಫ್ಟ್ ಮಾಡುವ ಆದೇಶ ಬಂದಿತ್ತು. ಬೇರೆಡೆ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡುವುದಾಗಿ ಹೇಳಿದ್ದರು. ಇದಕ್ಕೆ ವಿದ್ಯಾರ್ಥಿಗಳು ರೊಚ್ಚಿಗೆದ್ದು ಕೊಠಡಿಯ ಎಲ್ಲಾ ಫ್ಯಾನುಗಳಲ್ಲಿ ನೇತಾಡಿದ್ದು, ಫ್ಯಾನ್‍ಗಳೆಲ್ಲಾ ಬೆಂಡಾಗಿದೆ. ಗೋಡೆಗಳಲ್ಲಿ  ‘ಕಿರಿಕ್ ಬಾಯ್ಸ್’ ಎಂದು ಬರೆದಿದ್ದು ಮಾತ್ರವಲ್ಲದೇ  ಕಿರಿಕ್ ಪಾರ್ಟಿಯ ಕಾರಿನ ಚಿತ್ರವನ್ನು ರಚಿಸಿದ್ದಾರೆ.

    ಕೊಠಡಿಯ ಟ್ಯೂಬ್‍ಲೈಟ್, ಕುರ್ಚಿಗಳನ್ನು ಧ್ವಂಸಮಾಡಿದ್ದು ಕಬೋರ್ಡ್‍ನಲ್ಲಿದ್ದ ಪುಸ್ತಕ, ಪೇಪರ್‍ಗಳನ್ನೆಲ್ಲಾ ಕೆಡವಿ ಚಲ್ಲಾಪಿಲ್ಲಿ ಮಾಡಿದ್ದಾರೆ. ಮಕ್ಕಳು ಶಿಫ್ಟ್ ಆಗಿ ಬೇರೆ ಕೊಠಡಿಗೆ ಹೋಗುವ ಮುನ್ನ ಇಷ್ಟೆಲ್ಲಾ ಕಿರಿಕ್‍ಗಳನ್ನು ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ವಾರ್ಡನ್ ದೂರು ನೀಡಿದ್ದಾರೆ. ಇದನ್ನು ಹಾಸ್ಟೆಲ್ ಮೇಲಿನ ಪ್ರೀತಿ ಅನ್ನಬೇಕೋ ಅಥವಾ ವಿದ್ಯಾರ್ಥಿಗಳ ಹುಚ್ಚಾಟ ಅನ್ನಬೇಕೋ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.