Tag: ಕಿರಾತಕ

  • ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ ‘ಕಿರಾತಕ’ ನಟಿಗೆ ಫ್ಯಾನ್ಸ್‌ ತರಾಟೆ

    ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ ‘ಕಿರಾತಕ’ ನಟಿಗೆ ಫ್ಯಾನ್ಸ್‌ ತರಾಟೆ

    ನ್ನಡದ ‘ಕಿರಾತಕ’ (Kirataka) ಸಿನಿಮಾದಲ್ಲಿ ಯಶ್ ಜೊತೆ ನಟಿಸಿದ್ದ ನಟಿ ಓವಿಯಾ (Oviya) ಅವರ ಮತ್ತೊಂದು ವಿಡಿಯೋ ಹಲ್‌ಚಲ್ ಎಬ್ಬಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಆರಾಮಾಗಿ ಧೂಮಪಾನ ಮಾಡುತ್ತಾ, ಕಡಲ ಕಿನಾರೆಯಲ್ಲಿ ಸ್ನೇಹಿತೆ ಜೊತೆ ತಿರುಗಾಡುತ್ತಾ ಇರುವ ವಿಡಿಯೋ ಕಂಡು ಅಭಿಮಾನಿಗಳೇ ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿ:ಲೈಫ್‌ಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿಯಾಗಿರೋಕೆ ತಂದೆಯೇ ಕಾರಣ- ನಿವೇದಿತಾ ಭಾವುಕ

    ನಟಿ ಓವಿಯಾ ಸದ್ಯ ಸಾರ್ವಜನಿಕ ಸ್ಥಳದಲ್ಲಿ ಆರಾಮಾಗಿ ಸಿಗರೇಟ್ ಸೇದಿದ್ದಾರೆ. ಧಮ್ ಎಳೆದು ಬೀಚ್‌ನಲ್ಲಿ ಓಡಾಡಿದ್ದಾರೆ. ಮೀನುಗಾರರ ಜೊತೆ ಮಾತನಾಡಿದ್ದಾರೆ. ಕಡಲ ಕಿನಾರೆಯಲ್ಲಿ ತಮ್ಮ ಸ್ನೇಹಿತೆಯ ಜೊತೆ ಸುತ್ತಾಡುತ್ತಾ ಅಲ್ಲಿಯೇ ಇದ್ದ ನಾಯಿಯ ಜೊತೆ ಆಟವನ್ನು ಆಡಿದ್ದಾರೆ. ಸದ್ಯಕ್ಕೆ ಓವಿಯಾ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:ಅದಿತಿ ಪ್ರಭುದೇವ ಮಗಳ ಗ್ರ್ಯಾಂಡ್ ಬರ್ತ್‌ಡೇ ಸೆಲಬ್ರೇಶನ್

     

    View this post on Instagram

     

    A post shared by Oviya (@happyovi)

    ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ನಟಿಯಾಗಿ ಸಂದೇಶವನ್ನು ಸಾರಬೇಕಾದ ನೀವೇ ಹೀಗೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಎಷ್ಟು ಸರಿ ಎಂದೆಲ್ಲಾ ನಟಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆಲ್ಲಾ ನಟಿ ಉತ್ತರ ನೀಡ್ತಾರಾ? ಎಂದು ಕಾದುನೋಡಬೇಕಿದೆ.

    ಕನ್ನಡದಲ್ಲಿ ‘ಕಿರಾತಕ’ ಸಿನಿಮಾದಲ್ಲಿ ಓವಿಯಾ ನಟಿಸಿ ಸೈ ಎನಿಸಿಕೊಂಡಿದ್ದರು. ತೆಲುಗು, ತಮಿಳು, ಮಲಯಾಳಂನಲ್ಲೂ ನಟಿ ಸಕ್ರಿಯರಾಗಿದ್ದಾರೆ.

  • ಕಣ್ಣುದಾನ ಮಾಡಿದ ನಟ ಡೇನಿಯಲ್ ಬಾಲಾಜಿ ಕುಟುಂಬ

    ಕಣ್ಣುದಾನ ಮಾಡಿದ ನಟ ಡೇನಿಯಲ್ ಬಾಲಾಜಿ ಕುಟುಂಬ

    ಶ್ ನಟನೆಯ ಕಿರಾತಕ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಖಳನಟರಾಗಿ ನಟಿಸಿರುವ ಡೇನಿಯಲ್ ಬಾಲಾಜಿ ಅವರ ಕಣ್ಣುಗಳನ್ನು ದಾನ ಮಾಡಲು ಅವರ ಕುಟುಂಬ ನಿರ್ಧರಿಸಿದೆ. ಕಣ್ಣುದಾನ ಮಾಡಬೇಕು ಎನ್ನುವುದು ನಟನ ಅಪೇಕ್ಷೆ ಕೂಡ ಆಗಿತ್ತಂತೆ. ಹಾಗಾಗಿ ಬಾಲಾಜಿ ನಿಧನಾ ನಂತರ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.

    ನಟ ಡೇನಿಯಲ್ ಬಾಲಾಜಿ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರಮುಖವಾಗಿ ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದ ನಟ ಡೇನಿಯಲ್ ಬಾಲಾಜಿ ನಿನ್ನೆ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ವರದಿಯಾಗಿದೆ.

    48 ವರ್ಷದ ನಟನ ಹಠಾತ್ ಸಾವು ತಮಿಳು ಚಿತ್ರರಂಗ ಮತ್ತು ಅವರ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಬಾಲಾಜಿ ಅವರ ನಿಧನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಲಾಗುತ್ತಿದೆ. ಡೇನಿಯಲ್ ಬಾಲಾಜಿ ಅವರು ಕಮಲ್ ಹಾಸನ್ ಅವರ ಅಪೂರ್ಣ ‘ಮರುದುನಾಯಗಂ’ನಲ್ಲಿ ಯುನಿಟ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ರಾಧಿಕಾ ಶರತ್‌ಕುಮಾರ್ ಅವರ ‘ಚಿತ್ತಿ’ ಯೊಂದಿಗೆ ದೂರದರ್ಶನಕ್ಕೆ ತೆರಳಿದರು. ಅಲ್ಲಿನ ಪಾತ್ರದ ಮೂಲಕ ಡೇನಿಯಲ್ ಎಂದು ಜನಪ್ರಿಯತೆ ಗಳಿಸಿದರು.

     

    ‘ಕಾಕ್ಕ ಕಾಕ್ಕ’ ಮತ್ತು ‘ವೆಟ್ಟಾಯಡು ವಿಲಾಯಡು’ ಚಿತ್ರಗಳಲ್ಲಿನ ಮರೆಯಲಾಗದ ನಟನೆಯು ಸಿನಿ ಜಗತ್ತಿನಲ್ಲಿ ಅವರ ಜನಪ್ರಿಯತೆಗೆ ಕಾರಣವಾಯಿತು. ನಟ ಡೇನಿಯಲ್‌ ಬಾಲಾಜಿ ಅವರು ಮಲಯಾಳಂ, ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲೂ ನಟಿಸಿದ್ದಾರೆ. ಅವರು ಅಭಿನಯಿಸಿದ ಕೊನೆಯ ಚಿತ್ರ ‘ಅರಿಯವನ್’.

  • ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಿ ಎಂದ ಕಿರಾತಕ ನಟಿ ಓವಿಯಾ

    ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಿ ಎಂದ ಕಿರಾತಕ ನಟಿ ಓವಿಯಾ

    ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕಿರಾತಕ’ (Kirataka) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ನಟಿ ಓವಿಯಾ (Oviya) ಇದೀಗ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರು ಆಡಿದ ಈ ಮಾತು ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಕೆಲವರು ಓವಿಯಾ ಮಾತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.

    ಅತ್ಯಾಚಾರ ಕುರಿತಂತೆ ಮಾತನಾಡಿರುವ ಓವಿಯಾ, ‘ವೇಶ್ಯಾವಾಟಿಕೆಯನ್ನು (Prostitution) ಕಾನೂನುಬದ್ಧ ಮಾಡಿದರೆ, ಅತ್ಯಾಚಾರವನ್ನು ತಡೆಗಟ್ಟಬಹುದು. ಅತ್ಯಾಚಾರಕ್ಕೆ ಕಡಿವಾಣ ಹಾಕಲು ಇದೊಂದು ಸೂಕ್ತ ಮಾರ್ಗ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ಲೈಂಗಿಕ ಶಿಕ್ಷಣದ ಬಗ್ಗೆಯೂ ಅವರು ಮಾತನಾಡಿದ್ದಾರೆ.

     

    ಎಲ್ಲರಿಗೂ ಲೈಂಗಿಕ ಆಸಕ್ತಿಗಳು ಇವೆ. ಅದನ್ನು ಅದುಮಿಟ್ಟುಕೊಂಡು ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ. ಮನುಷ್ಯರಿಗೆ ಸಹಜವಾದದ್ದು ಇರಲೇಬೇಕು ಎಂದು ಓವಿಯಾ ಮಾತನಾಡಿದ್ದಾರೆ. ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗಿದೆ. ಓವಿಯಾಗೆ ಅವಕಾಶಗಳು ಕಡಿಮೆ ಆಗುತ್ತಿವೆ. ಹಾಗಾಗಿ ಈ ರೀತಿ ಮಾತನಾಡಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗ್ಯಾಪು ಕೊಡದೆ ಮತ್ತೆ ಕಿರಾತಕನಾಗಲು ಯಶ್ ರೆಡಿ!

    ಗ್ಯಾಪು ಕೊಡದೆ ಮತ್ತೆ ಕಿರಾತಕನಾಗಲು ಯಶ್ ರೆಡಿ!

    ಬೆಂಗಳೂರು: ಎರಡು ವರ್ಷಗಳಿಗೂ ಹೆಚ್ಚು ಕಾಲ ತಮ್ಮನ್ನು ತಾವು ಕೆಜಿಎಫ್ ಚಿತ್ರಕ್ಕೆ ಸಮರ್ಪಿಸಿಕೊಂಡಿದ್ದವರು ರಾಕಿಂಗ್ ಸ್ಟಾರ್ ಯಶ್. ಅದಕ್ಕೆಂದೇ ಬೆಳೆಸಿಕೊಂಡಿದ್ದ ನೀಳವಾದ ಕೇಶರಾಶಿಯನ್ನು ಟ್ರಿಮ್ಮು ಮಾಡಿಕೊಂಡು ಹಳೇ ಲುಕ್ಕಿಗೆ ಮರಳಿರೋ ಯಶ್ ತಕ್ಷಣವೇ ಮೈ ನೇಮ್ ಈಸ್ ಕಿರಾತಕ ಚಿತ್ರದ ಚಿತ್ರೀಕರಣಕ್ಕೆ ಹೊರಟು ನಿಂತಿದ್ದಾರೆ.

    ಕೆಜಿಎಫ್ ಚಿತ್ರ ಆರಂಭವಾಗಿ ಅಖಂಡ ಎರಡು ವರ್ಷಗಳವರೆಗೂ ಯಶ್ ಬೇರ್ಯಾವುದರತ್ತಲೂ ಹೊರಳಿಯೂ ನೋಡಿರಲಿಲ್ಲ. ದಿನೇ ದಿನೇ ಕುತೂಹಲ ಹುಟ್ಟಿಸುತ್ತಾ ಅದೇ ಬಿಸಿಯನ್ನು ಈ ಕ್ಷಣದವರೆಗೂ ಕಾಯ್ದಿಟ್ಟುಕೊಂಡಿರುವ ಕೆಜಿಎಫ್ ಬಿಡುಗಡೆಗೆ ಸಜ್ಜಾಗಿದೆ. ಯಶ್ ಈ ಎರಡು ವರ್ಷಗಳಲ್ಲಿ ಕೆಜಿಎಫ್‍ಗಾಗಿ ಪಟ್ಟ ಪರಿಶ್ರಮ ನೋಡಿದವರೆಲ್ಲ ಚಿತ್ರೀಕರಣ ಮುಗಿಸಿಕೊಂಡ ನಂತರ ಅವರು ಸುದೀರ್ಘವಾಗಿ ರೆಸ್ಟು ತೆಗೆದುಕೊಳ್ಳ ಬಹುದೆಂದೇ ಭಾವಿಸಿದ್ದರು.

    ಆದರೆ ಯಶ್ ಭಾರೀ ಹುರುಪಿನೊಂದಿಗೆ ಮೈ ನೇಮ್ ಈಸ್ ಕಿರಾತಕ ಚಿತ್ರಕ್ಕಾಗಿ ತಯಾರಾಗಿದ್ದಾರೆ. ಆದ್ದರಿಂದಲೇ ಸೆಪ್ಟೆಂಬರ್ ಮೂರನೇ ತಾರೀಕಿನಿಂದ ಈ ಚಿತ್ರದ ಚಿತ್ರೀಕರಣವೂ ಶುರುವಾಗಲಿದೆ. ಈ ಚಿತ್ರವನ್ನು ಬಹು ಬೇಗನೆ ಮುಗಿಸಿಕೊಳ್ಳಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

    ಅತ್ತ ಮಗುವಾಗೋ ಖುಷಿ, ಇತ್ತ ಬಹು ನಿರೀಕ್ಷಿತ ಕೆಜಿಎಫ್ ಚಿತ್ರ ತೆರೆ ಕಾಣಲಿರೋ ಸಡಗರ… ಇಂಥಾದ್ದರ ಮಧ್ಯೆಯೇ ಯಶ್ ಬಿಡುವು ಕೊಡದೆ ಹೊಸಾ ಚಿತ್ರದತ್ತ ಮುಖ ಮಾಡಿರೋದನ್ನ ಕಂಡು ಅಭಿಮಾನಿಗಳು ಖುಷಿಗೊಂಡಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv