Tag: ಕಿರಣ್ ಮಹೇಶ್ವರಿ

  • ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ಕೊರೊನಾ ವೈರಸ್‍ಗೆ ಬಲಿ

    ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ಕೊರೊನಾ ವೈರಸ್‍ಗೆ ಬಲಿ

    – ಪ್ರಧಾನಿ, ಸಿಎಂ ಮತ್ತಿತರರು ಸಂತಾಪ

    ಜೈಪುರ: ಸಾಮಾನ್ಯರಿಂದ ಹಿಡಿದು ಗಣ್ಯಾತಿಗಣ್ಯರು ಮಹಾಮಾರಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ಸಿನ ಹಿರಿಯ ನಾಯಕ ಅಹಮ್ಮದ್ ಪಟೇಲ್ ಕೂಡ ಕೊರೊನಾದಿಂದಾಗಿ ಮೃತಪಟ್ಟಿದ್ದರು. ಇದೀಗ ರಾಜಸ್ಥಾನದ ಬಿಜೆಪಿ ಶಾಸಕಿ ಕೋವಿಡ್ 19 ನಿಂದ ಇಹಲೋಕ ತ್ಯಜಿಸಿದ್ದಾರೆ.

    ಕೊರೊನಾ ಪಾಸಿಟಿವ್ ದೃಢಪಟ್ಟು ರಾಜಸ್ಥಾನದ ರಾಜಸಮಂದ್ ಕ್ಷೇತ್ರದ ಬಿಜೆಪಿ ನಾಯಕಿ, ಶಾಸಕಿ ಕಿರಣ್ ಮಹೇಶ್ವರಿ(59) ಗುರುಗ್ರಾಮದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.

    ಕಿರಣ್ ಮಹೇಶ್ವರಿ ಅವರಿಗೆ ನವೆಂಬರ್ ಮೊದಲ ವಾರದಲ್ಲಿಯೇ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಸ್ವಲ್ಪ ದಿನ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ದಿನದಿಂದ ದಿನ ಕ್ಷೀಣಿಸತೊಡಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಗುರುಗ್ರಾಮದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

    ರಾಜಸಮಂದ್ ಕ್ಷೇತ್ರದಲ್ಲಿ ಕಿರಣ್ ಮಹೆಶ್ವರಿ ಅವರು ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಸದ್ಯ ಶಾಸಕಿಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತಿತರ ಗಣ್ಯರು ಸಂತಾಸ ಸೂಚಿಸಿದ್ದಾರೆ.