Tag: ಕಿರಣ್ ಗೋಸಾವಿ

  • ಆರ್ಯನ್ ಖಾನ್ ಬಂಧನ ಕೇಸ್‍ಗೆ ತಿರುವು – ಸಮೀರ್ ಆಪ್ತ ಕಿರಣ್ ಗೋಸಾವಿ ಬಂಧನ

    ಆರ್ಯನ್ ಖಾನ್ ಬಂಧನ ಕೇಸ್‍ಗೆ ತಿರುವು – ಸಮೀರ್ ಆಪ್ತ ಕಿರಣ್ ಗೋಸಾವಿ ಬಂಧನ

    ಮುಂಬೈ: ಡ್ರಗ್ಸ್ ಪ್ರಕರಣ ಸಂಬಂಧ ಸ್ಟಾರ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಜೈಲಿನಲ್ಲಿದ್ದರೆ, ಇತ್ತ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಸಮೀರ್ ವಾಂಖೆಡೆ ಆಪ್ತ ಕಿರಣ್ ಗೋಸಾವಿಯನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

    ಹೌದು. ಡ್ರಗ್ಸ್ ಪ್ರಕರಣ ಸಂಬಂಧ ಕಿರಣ್ ಗೋಸಾವಿಯನ್ನು ಬಂಧಿಸಲಾಗಿದೆ ಎಂದು ಪುಣೆ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ ಮಾಹಿತಿ ನೀಡಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಕಿರಣ್, ಉತ್ತರ ಪ್ರದೇಶದ ಲಕ್ನೋ ಪೊಲೀಸ್ ಠಾಣೆಗೆ ಶರಣಾಗುವುದಾಗಿ ಹೇಳಿಕೆ ನೀಡಿದ್ದ. ಈ ಬೆನ್ನಲ್ಲೇ ಕಾರ್ಯಾಚರಣೆಗಿಳಿದ ಎನ್‍ಸಿಬಿ ಅಧಿಕಾರಿಗಳು ಆತನನ್ನು ಇಂದು ಪುಣೆಯಲ್ಲಿ ಬಂಧಿಸಿದ್ದಾರೆ. ಇದನ್ನೂ ಓದಿ:  ಎನ್‍ಡಿಪಿಎಸ್ ಕಾಯ್ದೆಯನ್ನು ಎನ್‍ಸಿಬಿ ದುರುಪಯೋಗ ಪಡಿಸಿಕೊಂಡಿದೆ – ಆರ್ಯನ್ ಖಾನ್ ಜಾಮೀನು ಅರ್ಜಿ ಮುಂದೂಡಿಕೆ

    ಕಿರಣ್ ಮೇಲಿನ ಆರೋಪಗಳೇನು..?
    ಮಲೇಷಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ವ್ಯಕ್ತಿಯೊಬ್ಬನಿಗೆ ಆಮಿಷವೊಡ್ಡಿ ಹಣ ವಸೂಲಿ ಮಾಡಿದ ಆರೋಪ ಕೇಳಿಬಂದಿತ್ತು. ವ್ಯಕ್ತಿಗೆ ಉದ್ಯೋಗ ಕೊಡಿಸುವುದಾಗಲಿ, ಹಣ ವಾಪಸ್ ನೀಡುವುದಾಗಲಿ ಮಾಡಿರಲಿಲ್ಲ. ಹೀಗಾಗಿ ಕಿರಣ್ ವಿರುದ್ಧ 2018ರ ಮೇ 19ರಂದು ಪುಣೆಯ ಫರಸ್ಕನ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಇದಲ್ಲದೆ ಇನ್ನೂ ವಂಚನೆ ಆರೋಪಗಳು ಕೇಳಿಬಂದಿದ್ದವು. ಇತ್ತ ಕಿರಣ್ ಖಾಸಗಿ ಬಾಡಿಗಾರ್ಡ್ ಪ್ರಭಾಕರ್ ಸೈಲ್ ಮುಂಬೈ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದಾನೆ. ಇದನ್ನೂ ಓದಿ: ತಂದೆ ಹಿಂದೂ, ತಾಯಿ ಮುಸ್ಲಿಂ, ನಾನು ಜಾತ್ಯಾತೀತ ಕುಟುಂಬಕ್ಕೆ ಸೇರಿದ್ದೇನೆ: ಸಮೀರ್ ವಾಂಖೆಡೆ ತೀಕ್ಷ್ಣ ಪ್ರತಿಕ್ರಿಯೆ