Tag: ಕಿರಣ್ ಖೇರ್

  • ನಟಿ ಕಿರಣ್ ಖೇರ್ ಗೆ ಕೋವಿಡ್ : ಆತಂಕದಲ್ಲಿ ಬಾಲಿವುಡ್

    ನಟಿ ಕಿರಣ್ ಖೇರ್ ಗೆ ಕೋವಿಡ್ : ಆತಂಕದಲ್ಲಿ ಬಾಲಿವುಡ್

    ಬಾಲಿವುಡ್ ನ ಹೆಸರಾಂತ ನಟಿ, ರಾಜಕಾರಣಿ ಕಿರಣ್ ಖೇರ್ (Kiran Kher) ಕೋವಿಡ್ ನಿಂದಾಗಿ ಆಸ್ಪತ್ರೆ ಸೇರಿದ್ದಾರೆ. ನಿನ್ನೆಯಷ್ಟೇ ಅವರು ಟೆಸ್ಟ್ ಮಾಡಿಸಿಕೊಂಡಿದ್ದು, ಕೋವಿಡ್ (Covid) ಪಾಸಿಟಿವ್ (Positive) ಬಂದಿದೆ. ಹಾಗಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದ್ದು, ತಮ್ಮ ಸಂಪರ್ಕದಲ್ಲಿ ಇದ್ದವರು ಟೆಸ್ಟ್ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

    ಕಿರಣ್ ಖೇರ್ ತಮಗೆ ಕೊರೊನಾ (Corona) ಪಾಟಿಸಿವ್ ಬಂದಿರುವ ಕುರಿತು ಮಾಹಿತಿ ನೀಡುತ್ತಿದ್ದಂತೆಯೇ ಬಾಲಿವುಡ್ ನಲ್ಲಿ ಮತ್ತೆ ಆತಂಕ ಶುರುವಾಗಿದೆ. ಕೋವಿಡ್ ಕಾರಣದಿಂದಾಗಿ ಈಗಾಗಲೇ ತತ್ತರಿಸಿ ಹೋಗಿದ್ದ ಬಾಲಿವುಡ್, ಇತ್ತೀಚೆಗೆ ಚೇತರಿಸಿಕೊಂಡಿದೆ. ಮತ್ತೆ ಕೊರೊನಾ ಹರಡಿ, ಇನ್ನೇನು ಆಗತ್ತೋ ಅನ್ನುವ ಆತಂಕ ಬಿಟೌನನದ್ದು. ಹಾಗಾಗಿ ಕಿರಣ್ ಅವರಿಗೆ ಅನೇಕರು ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ : ನಟನ ನಿವಾಸಕ್ಕೆ ಫುಲ್ ಸೆಕ್ಯೂರಿಟಿ

    ಬಾಲಿವುಡ್ ನಟ ಅನುಪಮ್ ಖೇರ್ ಅವರ ಪತ್ನಿ ಕಿರಣ್ ಖೇರ್. ನಟಿಯಾಗಿ, ರಿಯಾಲಿಟಿ ಶೋ ತೀರ್ಪುಗಾರರಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡವರು. ಹಿಂದಿಯಲ್ಲಿ ಇವರಿಗೆ ಪ್ರೀತಿಯಿಂದ ಸರ್ವೋತ್ಕೃಷ್ಟ ತಾಯಿ ಎಂದೇ ಕರೆಯಲಾಗುತ್ತದೆ. ಅನೇಕ ಸ್ಟಾರ್ ಗಳಿಗೆ ತಾಯಿ ಪಾತ್ರ ಮಾಡಿದ ಹೆಗ್ಗಳಿಕೆ ಕಿರಣ್ ಅವರದ್ದು.

  • ಕಿರಣ್ ಖೇರ್​​ಗೆ ಬ್ಲಡ್ ಕ್ಯಾನ್ಸರ್ – ಪತಿ ಅನುಪಮ್ ಖೇರ್ ಭಾವನಾತ್ಮಕ ಸಂದೇಶ

    ಕಿರಣ್ ಖೇರ್​​ಗೆ ಬ್ಲಡ್ ಕ್ಯಾನ್ಸರ್ – ಪತಿ ಅನುಪಮ್ ಖೇರ್ ಭಾವನಾತ್ಮಕ ಸಂದೇಶ

    ಮುಂಬೈ: ಬಾಲಿವುಡ್ ಹಿರಿಯ ನಟಿ, ಬಿಜೆಪಿ ಸಂಸದೆ ಕಿರಣ್ ಖೇರ್ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪತ್ನಿ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿರುವ ಹಿರಿಯ ನಟ ಅನುಪಮ್ ಖೇರ್ ಭಾವನಾತ್ಮಕವಾಗಿ ಕೆಲ ಸಾಲುಗಳನ್ನ ಬರೆದುಕೊಂಡಿದ್ದಾರೆ.

    ಪತ್ನಿ ಆರೋಗ್ಯದ ಕುರಿತು ಕೆಲ ಸುದ್ದಿಗಳು ಹರಿದಾಡುತ್ತಿವೆ. ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಈ ಪೋಸ್ಟ್ ಮಾಡುತ್ತಿದ್ದೇನೆ. ಪತ್ನಿ ಕಿರಣ್ ಖೇರ್, ಮಲ್ಟಿಪಲ್ ಮೈಲೋವನಿಂದ ಬಳಲುತ್ತಿದ್ದರು. ಇಂದು ಒಂದು ರೀತಿ ಬ್ಲಡ್ ಕ್ಯಾನ್ಸರ್. ಸದ್ಯ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಿರಣ್ ತುಂಬಾ ಧೈರ್ಯಶಾಲಿ. ಹಾಗಾಗಿ ಈ ಎಲ್ಲ ಕಷ್ಟಗಳಿಂದ ಹೊರ ಬರುತ್ತಾರೆ.

    ಹಿರಿಯ ತಜ್ಞರು ಕಿರಣ್ ಅವರಿಗೆ ಚಿಕಿತ್ಸೆ ನೀಡುತ್ತಿರೋದು ಸಂತಸದ ವಿಚಾರ. ಕಿರಣ್ ಅವರಲ್ಲಿ ಹೋರಾಡುವ ಗುಣವಿದ್ದು, ಇದೆಲ್ಲವನ್ನ ಎದುರಿಸುವ ಸಾಮಾರ್ಥ್ಯ  ಅವರಲ್ಲಿದೆ. ಪ್ರೀತಿಯಿಂದ ಕಾಣುವ ಗುಣದಿಂದಲೇ ಕಿರಣ್ ಎಲ್ಲರಿಗೂ ಅಚ್ಚುಮೆಚ್ಚು. ನಿಮ್ಮ ಪ್ರೀತಿ, ಹಾರೈಕೆ ಮತ್ತು ಪ್ರಾರ್ಥನೆ ಅವರೊಂದಿಗರಿಲಿ ಎಂದು ಅನುಪಮ್ ಕೇರ್ ಮನವಿ ಮಾಡಿಕೊಂಡಿದ್ದಾರೆ.

    ವೈದ್ಯರ ಚಿಕಿತ್ಸೆಗೆ ಕಿರಣ್ ಸ್ಪಂದಿಸುತ್ತಿದ್ದು, ಶೀಘ್ರವೇ ಗುಣಮುಖರಾಗಲಿದ್ದಾರೆ. ಅಭಿಮಾನಿಗಳು, ಸಹೋದ್ಯೋಗಿಗಳು, ಆಪ್ತರ ಕಾಳಜಿಗೆ ಕಿರಣ್ ಅವರ ಪರವಾಗಿ ಅನುಪಮ್ ಖೇರ್ ಧನ್ಯವಾದ ಸಲ್ಲಿಸಿದ್ದಾರೆ.

  • ಮತದಾನದ ದಿನ ಎಡವಿ ಬಿದ್ದ ಬಿಜೆಪಿ ಸಂಸದೆ ಕಿರಣ್ ಖೇರ್

    ಮತದಾನದ ದಿನ ಎಡವಿ ಬಿದ್ದ ಬಿಜೆಪಿ ಸಂಸದೆ ಕಿರಣ್ ಖೇರ್

    ಚಂಡೀಗಢ: ಬಿಜೆಪಿ ನಾಯಕಿ, ಸಂಸದೆ ಕಿರಣ್ ಖೇರ್ ಮತದಾನದ ದಿನ ಮತಗಟ್ಟೆಗೆ ಆಗಮಿಸುವ ವೇಳೆ ಎಡವಿ ಬಿದ್ದಿದ್ದಾರೆ.

    ಚಂಡೀಗಢ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕಿರಣ್ ಖೇರ್ ಭಾನುವಾರ ತಮ್ಮ ಮತ ಚಲಾಯಿಸಲು ಮತಗಟ್ಟೆ ಬಳಿ ಬಂದಿದ್ದರು. ಇದ್ದಕ್ಕಿದ್ದಂತೆ ಕಿರಣ್ ಖೇರ್ ಎಡವಿದರು. ಸಂಸದೆ ಬೀಳುತ್ತಿದ್ದಂತೆ ಬೆಂಬಲಿಗರು ಮೇಲೆತ್ತಿದರು. ಸ್ವಲ್ಪ ಸಮಯದ ಬಳಿಕ ಸುಧಾರಿಸಿಕೊಂಡ ಕಿರಣ್ ಖೇರ್, ಈ ದೃಶ್ಯಗಳನ್ನು ಸೆರೆ ಹಿಡಿಯಬೇಡಿ ಎಂದು ಹೇಳಿ ಮತಗಟ್ಟೆಯತ್ತ ಹೆಜ್ಜೆ ಹಾಕಿದರು.

    ಕಿರಣ್ ಖೇರ್ ಎಡವಿ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಫಲಿತಾಂಶಕ್ಕೂ ಮುನ್ನವೇ ಬಿದ್ದ ಸಂಸದೆ ಎಂದು ಹೇಳಿ ಕಾಲೆಳೆಯುತ್ತಿದ್ದಾರೆ.

    2014ರ ಚುನಾವಣೆಯಲ್ಲಿ ಚಂಡೀಗಢ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಕಿರಣ್ ಖೇರ್ ಗೆಲುವು ದಾಖಲಿಸಿದ್ದರು. ಈ ಬಾರಿ ಮತ್ತೊಮ್ಮೆ ಕಣದಲ್ಲಿದ್ದು, ಕಾಂಗ್ರೆಸ್‍ನಿಂದ ಪವನ್ ಬನ್ಸಾಲ್ ಎದುರಾಳಿಯಾಗಿದ್ದಾರೆ. ಲೋಕಸಮರದ ಚುನಾವಣೋತ್ತರ ಸಮೀಕ್ಷೆ ಹೊರ ಬಂದಿದ್ದು 10 ರಲ್ಲಿ 9 ಸರ್ವೇಗಳು ಕೇಂದ್ರದಲ್ಲಿ ಎನ್‍ಡಿಎ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿವೆ ಎಂದು ಹೇಳಿವೆ.