Tag: ಕಿರಣ್ ಕುಮಾರ್

  • ‘ಸೂತ್ರಧಾರಿ’ಗೆ ಡಬ್ಬಿಂಗ್ ಶುರು ಮಾಡಿದ ಚಂದನ್ ಶೆಟ್ಟಿ

    ‘ಸೂತ್ರಧಾರಿ’ಗೆ ಡಬ್ಬಿಂಗ್ ಶುರು ಮಾಡಿದ ಚಂದನ್ ಶೆಟ್ಟಿ

    ಗಾಯಕನಾಗಿ, ಗೀತರಚನೆಕಾರನಾಗಿ,‌ ಸಂಗೀತ ನಿರ್ದೇಶಕನಾಗಿ ಜನಪ್ರಿಯತೆ ಪಡೆದಿರುವ ಚಂದನ್ ಶೆಟ್ಟಿ,  ಈಗ ನಾಯಕನಾಗಿಯೂ‌ ಚಿರಪರಿಚಿತ. ಪ್ರಸ್ತುತ ಚಂದನ್ ಶೆಟ್ಟಿ (Chandan Shetty) ‘ಸೂತ್ರಧಾರಿ’ (Sutradhari) ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಡಬ್ಬಿಂಗ್ (Dubbing) ಕೆಲಸ ಆರಂಭವಾಗಿದ್ದು, ಇಂದಿನಿಂದ ಚಂದನ್ ಮಾತಿನ ಮರುಲೇಪನ ಮಾಡುತ್ತಿದ್ದಾರೆ. ಇದು ಇವರು ನಾಯಕನಾಗಿ ನಟಿಸುತ್ತಿರುವ ಎರಡನೇ ಚಿತ್ರವಾಗಿದೆ. ಮೈ ಮೂವೀ ಬಜಾರ್ ನ ನವರಸನ್ ಈ ಚಿತ್ರ ನಿರ್ಮಿಸುತ್ತಿದ್ದು, ಕ್ರಿಯೇಟಿವ್ ಹೆಡ್ ಆಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಕಿರಣ್ ಕುಮಾರ್ (Kiran Kumar) ನಿರ್ದೇಶನ ಮಾಡುತ್ತಿದ್ದಾರೆ.

    ಇದು ನನ್ನ ನಿರ್ಮಾಣದ ಐದನೇ ಚಿತ್ರ. ಈವರೆಗೂ ನಮ್ಮ ಸಂಸ್ಥೆಯ ಮೂಲಕ 180ಕ್ಕೂ ಹೆಚ್ಚು ಚಿತ್ರಗಳ ಇವೆಂಟ್ ನಡೆಸಿಕೊಟ್ಟಿದ್ದೇನೆ. ನಿರ್ದೇಶನದೊಂದಿಗೆ ವಿತರಕನಾಗೂ ಕಾರ್ಯ ನಿರ್ವಹಿಸಿದ್ದೇನೆ. ಪ್ರಸ್ತುತ ಸೂತ್ರಧಾರಿ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನಮ್ಮ‌ ತಂಡದವರೇ ಆದ ಕಿರಣ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಂದನ್ ಶೆಟ್ಟಿ ನಾಯಕನಾಗಿ, ಅಪೂರ್ವ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದಿದ್ದಾರೆ ನಿರ್ಮಾಪಕ ನವರಸನ್. ಇದನ್ನೂ ಓದಿ:ರಾಕಿ ಭಾಯ್ ಲೆಜೆಂಡ್ ಎಂದು ಹಾಡಿ ಹೊಗಳಿದ ಪೂಜಾ ಹೆಗ್ಡೆ

    ನಾಯಕನಾಗಿ ನಾನು ಅಭಿನಯಿಸುತ್ತಿರುವ ಮೊದಲ ಚಿತ್ರ ‘ಎಲ್ರ ಕಾಲೆಳಿಯುತ್ತೆ ಕಾಲ’. ಆ ಚಿತ್ರ ರೆಟ್ರೊ ಶೈಲಿಯಲ್ಲಿ ಇರುತ್ತದೆ.  ಸೂತ್ರಧಾರಿ ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಿರಣ್ ಕುಮಾರ್ ಉತ್ತಮ ಕಥೆ ಬರೆದಿದ್ದಾರೆ. ಮರ್ಡರ್ ಮಿಸ್ಟರಿ ಕಥೆ‌ ಅಂತ ಹೇಳಬಹುದು. ಈ ಚಿತ್ರಕ್ಕಾಗಿ ನಾನು ಹನ್ನೆರಡು ಕೆಜಿ ತೂಕ ಇಳಿಸಿಕೊಂಡಿದ್ದೀನಿ. ಸಂಗೀತ ನಿರ್ದೇಶನವನ್ನೂ ನಾನೇ ಮಾಡುತ್ತಿದ್ದೇನೆ. ‌ಎಲ್ಲರೂ ಗುನಗುವಂತಹ ಹಾಡುಗಳನ್ನು ಕೊಟ್ಟಿದ್ದೇನೆ ಎಂದಿದ್ದಾರೆ ಚಂದನ್ ಶೆಟ್ಟಿ.

    ಸೂತ್ರಧಾರಿ ಎಲ್ಲರಿಗೂ ಮೆಚ್ಚುಗೆಯಾಗುವಂತಹ ಕಥಾಹಂದರ ಹೊಂದಿದೆ. ನಾನು ನವರಸನ್ (Navarasan) ಅವರ ಬಳಿ ಸಹ ನಿರ್ದೇಶಕನಾಗಿ  ಹಾಗೂ ಪಿ.ಕೆ.ಹೆಚ್ ದಾಸ್ ಅವರ ಹತ್ತಿರ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ‌ ಮಾಡಿದ್ದೇನೆ.‌ ನಿರ್ದೇಶಕನಾಗಿ ಇದು ಮೊದಲ ಚಿತ್ರ ಎಂದು ಹೇಳಿದ್ದ ನಿರ್ದೇಶಕ ಕಿರಣ್ ಕುಮಾರ್, ಅವಕಾಶ ಕೊಟ್ಟ ನವರಸನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ‌ನಾಯಕಿಯಾಗಿ ಅಪೂರ್ವ (Apoorva), ಹಿರಿಯ ನಟ ತಬಲ ನಾಣಿ ಹಾಗೂ ಗಣೇಶ್ ನಾರಾಯಣ್ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.

  • ಭಿನ್ನಮತ ಸ್ಫೋಟ – ಬಿಜೆಪಿಗೆ ಮಾಜಿ ಶಾಸಕ ಕಿರಣ್ ಕುಮಾರ್ ಗುಡ್‌ಬೈ

    ಭಿನ್ನಮತ ಸ್ಫೋಟ – ಬಿಜೆಪಿಗೆ ಮಾಜಿ ಶಾಸಕ ಕಿರಣ್ ಕುಮಾರ್ ಗುಡ್‌ಬೈ

    ತುಮಕೂರು: ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ (JC Madhu Swamy) ತವರು ಕ್ಷೇತ್ರ ಚಿಕ್ಕನಾಯಕನಹಳ್ಳಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮಾಜಿ ಶಾಸಕ ಕಿರಣ್ ಕುಮಾರ್ ಬಿಜೆಪಿ (BJP) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಅಲ್ಲದೇ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.ʼ

    MADHUSWAMY

    ಕಿರಣ್ ಕುಮಾರ್ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಮಾಧುಸ್ವಾಮಿಯವರನ್ನು ಹೊರತುಪಡಿಸಿ ಇನ್ನಾರಿಗೂ ಟಿಕೆಟ್ ಕೊಡುವ ಸಾಧ್ಯತೆ ಇಲ್ಲ. ಆದ್ದರಿಂದ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತಿದ್ದ ಮಾಜಿ ಶಾಸಕ ಕಿರಣ್ ಕುಮಾರ್ ಕಾಂಗ್ರೆಸ್ ನತ್ತ (Congress) ಮುಖ ಮಾಡಿದ್ದಾರೆ. ಸೋಮವಾರ (ಫೆಬ್ರವರಿ 20) ಕೆಪಿಸಿಸಿ (KPCC) ಅಧ್ಯಕ್ಷರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸದಸ್ಯತ್ವ ಪಡೆಯಲಿದ್ದಾರೆ. ಇದನ್ನೂ ಓದಿ: ನಾವೆಲ್ಲಾ ಮೂಕ ಪ್ರೇಕ್ಷಕರಾಗಿರೋದು ನಮ್ಮ ದೌರ್ಭಾಗ್ಯ – ಬಿಜೆಪಿಯ ದೌರ್ಬಲ್ಯ ಹೇಳಿಕೊಂಡ ಮಾಧುಸ್ವಾಮಿ

    ಟಿಕೆಟ್ ಗೊಂದಲ ದೂರ: ಕಿರಣ್ ಕುಮಾರ್ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿನ ಟಿಕೆಟ್ ಗೊಂದಲ ದೂರವಾಗಿದೆ. ಇತ್ತ ಸಚಿವ ಮಾಧುಸ್ವಾಮಿಗೆ ಪ್ರಬಲ ಪೈಪೋಟಿ ನೀಡುತಿದ್ದ ಕಿರಣ್ ಕುಮಾರ್ ಪಕ್ಷ ತೊರೆದಿದ್ದರಿಂದ ಮಾಧುಸ್ವಾಮಿ ಹಾದಿ ಸುಗಮವಾಗಿದೆ. ಅತ್ತ ಕಾಂಗ್ರೆಸ್‌ನ ಸಮಸ್ಯೆಗೂ ಕಿರಣ್ ಕುಮಾರ್ ಪರಿಹಾರವಾಗಿದ್ದಾರೆ. ಇದನ್ನೂ ಓದಿ: ಬಸ್ ನಿಲ್ದಾಣ ಜಾಗದ ವಿಚಾರಕ್ಕೆ 2 ಗುಂಪುಗಳ ನಡುವೆ ಮಾರಾಮಾರಿ – ಚಾಕು ಇರಿತದಿಂದ ಯುವಕ ಗಂಭೀರ

    bjp flag 1

    ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಲ್ಲಿ ಸೂಕ್ತ ಅಭ್ಯರ್ಥಿ ಇಲ್ಲದೇ ಪಕ್ಷ ಕ್ಷೀಣಗೊಂಡಿತ್ತು. ಕಿರಣ್ ಕುಮಾರ್ ಆಗಮನದಿಂದ ಕಾಂಗ್ರೆಸ್‌ಗೆ ಬಲಬಂದತಾಗಿದೆ. 9 ಮಂದಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು, ಕಿರಣ್ ಕುಮಾರ್‌ಗೆ ಟಿಕೆಟ್ ಫಿಕ್ಸ್ ಆಗಿರೋದ್ರಿಂದ ಕಾಂಗ್ರೆಸ್ ಗೊಂದಲವೂ ಬಗೆಹರಿದಿದೆ. ಓರ್ವ ಮಾಜಿ ಶಾಸಕರ ರಾಜೀನಾಮೆಯಿಂದ ಎರಡೂ ಪಕ್ಷದ ಗೊಂದಲಕ್ಕೆ ತೆರೆ ಬಿದ್ದಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಡ್ಯಾಶ್’ ಹಾಡಿನ ಮೂಲಕ ಕೋಟಿ ಹೃದಯ ಗೆದ್ದ ಚಂದನ್ ಶೆಟ್ಟಿ

    ‘ಡ್ಯಾಶ್’ ಹಾಡಿನ ಮೂಲಕ ಕೋಟಿ ಹೃದಯ ಗೆದ್ದ ಚಂದನ್ ಶೆಟ್ಟಿ

    ಹೊಸ ವರ್ಷದ ಸಂಭ್ರಮಕ್ಕಾಗಿ  ಡಿಸೆಂಬರ್ ಕೊನೆಯಲ್ಲಿ  ‘ಸೂತ್ರಧಾರಿ’ (Sutradhari) ಚಿತ್ರದ ಡ್ಯಾಶ್ (Dash) ಹಾಡು ಬಿಡುಗಡೆಯಾಗಿತ್ತು. ಈ ಹಾಡಿಗೆ ಪ್ರೇಕ್ಷಕರಿಂದ ಅದ್ಭುತ ಪ್ರಶಂಸೆ ವ್ಯಕ್ತವಾಗುತ್ತಿದೆ.  ಕಡಿಮೆ ಸಮಯದಲ್ಲೇ   ಈ ಹಾಡು 10 ಮಿಲಿಯನ್ ಗೂ ಅಧಿಕ ಬಾರಿ ವೀಕ್ಷಣೆ ಗೊಂಡು ದಾಖಲೆ ನಿರ್ಮಿಸಿದೆ.

    ಇತ್ತೀಚಿಗೆ ಕೇಕ್ ಕಟ್ ಮಾಡುವ ಮೂಲಕ ಚಿತ್ರತಂಡ ಸಂಭ್ರಮಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ನವರಸನ್ (Navarasan),  ‘ನನಗೆ ಈ ಸಂಭ್ರಮ ವಿಶೇಷ. ನಾನು ಇಷ್ಟು ದಿನ ಮಾಡಿರುವ ಸಿನಿಮಾಗಳ ಪೈಕಿ ಇಷ್ಟು ಒಳ್ಳೆಯ ರೆಸ್ಪಾನ್ಸ್ ಯಾವ ಹಾಡಿಗೂ ಸಿಕ್ಕಿಲ್ಲ. ನನ್ನ ಚಿತ್ರದಲ್ಲಿ ಹಿಟ್ ಗೀತೆಯೊಂದು ಬರಬೇಕೆಂದು ಆಸೆಯಿತ್ತು.   ಈಗ ಇಡೇರಿದೆ. ಹೊಸ ವರ್ಷಕ್ಕಾಗಿಯೇ ಈ‌‌ ಸಾಂಗ್ ಮಾಡಿದ್ದೆವು.  ಚಿತ್ರದಲ್ಲಿ ಇನ್ನೂ ಮೂರು ಹಾಡುಗಳಿದ್ದು, ಆ ಹಾಡುಗಳು ಅದ್ಭುತವಾಗಿದೆ.  ಫೆಬ್ರವರಿಯಲ್ಲಿ ಟ್ರೇಲರ್ ಬಿಡುಗಡೆ ಮಾಡುತ್ತೇವೆ.  ಏಪ್ರಿಲ್, ಮೇನಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದೇವೆ. ಈ ಒಂದು ಕೋಟಿ ವೀಕ್ಷಣೆಯ ಸಕ್ಸಸ್ ಚಿತ್ರತಂಡಕ್ಕೆ ಸಲ್ಲುತ್ತದೆ’ ಎಂದರು.

    ಈ ಹಾಡನ್ನು ಬರೆದು,   ಸಂಗೀತ ಸಂಯೋಜಿಸುವ ಜೊತೆಗೆ ನಾಯಕನಾಗೂ ನಟಿಸಿರುವ ಚಂದನ್ ಶೆಟ್ಟಿ (Chandan Shetty) ಮಾತನಾಡಿ,  ‘ಸಾಂಗ್ ರಿಲೀಸ್ ಆದ ಮೂರು ವಾರದಲ್ಲೇ ಒಂದು ಕೋಟಿ ವೀಕ್ಷಣೆ ಆಗಿರುವುದು ಮಾಧ್ಯಮಗಳ ಸಹಕಾರದಿಂದ. ಈ ಗೀತೆಗೆ ನಾನು ಹಾಗೂ  ಚೇತನ್ ಸೇರಿ ಸಾಹಿತ್ಯ ಬರೆದಿದ್ದೇವೆ’ ಎಂದರು. ‘ಪ್ರಾರಂಭದಲ್ಲಿ ನಿರ್ಮಾಪಕರಿಗೆ ಹಾಡು ಚೆನ್ನಾಗಿ ಬರಬೇಕು ಸರ್. ಇದೇ ಮೊದಲಬಾರಿ ನಾನು ಬೇರೆ ಸಿನಿಮಾವೊಂದರ ಹಾಡಿನಲ್ಲಿ ನಟಿಸುತ್ತಿದ್ದೆನೆ ಎಂದಿದ್ದೆ. ಇಂದು ಈ ಗೀತೆಯಲ್ಲಿ ನಾನಿರುವುದು ಖುಷಿಯಾಗಿದೆ ಎನ್ನುತ್ತಾರೆ ನಟಿ ಸಂಜನಾ ಆನಂದ್. ಇದನ್ನೂ ಓದಿ: ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾದ `ವಿಕ್ರಮ್’ ನಟಿ ಸ್ವಾತಿಷ್ಟ ಕೃಷ್ಣನ್

    ‘ಈ ಗೀತೆ ನಮ್ಮ ಸಿನಿಮಾಗೆ ಆಮಂತ್ರಣ ಆಗಿದ್ದು, ಹಾಡು  ನೋಡಿ ಬಂದ ಜನರನ್ನು ಇಡೀ ಸಿನಿಮಾವನ್ನು ನೋಡುವ ಹಾಗೆ ಮಾಡುವ ಜವಾಬ್ದಾರಿ ನನ್ನದು  ಎಂದು ನಿರ್ದೇಶಕ ಕಿರಣ್ ಕುಮಾರ್   ತಿಳಿಸಿದರು. ಕೊರಿಯೋಗ್ರಾಫರ್ ಮೋಹನ್ ಮಾಸ್ಟರ್ ಮಾತನಾಡುತ್ತಾ, ಈ ಹಾಡು ಕೇವಲ ಎರಡು ದಿನಗಳಲ್ಲಿ ಆಗಿದೆ.   ನನ್ನ ಮತ್ತು ಚಂದನ್ ಶೆಟ್ಟಿ ಕಾಂಬಿನೇಷನ್ ನ ೨ನೇ ಹಿಟ್  ಗೀತೆ ಇದು ಎಂದರು. ಈ ಸಂತಸದ ಸಮಾರಂಭದಲ್ಲಿ ನಟ ತಬಲಾನಾಣಿ, ಸೆಟ್ ವರ್ಕ್ ಮಾಡಿರುವ ಕಿರಣ್, ನಟಿ ಪಲ್ಲವಿ ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್, ಸಾಹಿತಿ ಕಿನ್ನಾಲ್ ರಾಜ್ ತಮ್ಮ ಅನುಭವ ಹಂಚಿಕೊಂಡರು. ಸಸ್ಪೆನ್ಸ, ಥ್ರಿಲ್ಲರ್ ಕಥಾ ಹಂದರ ಒಳಗೊಂಡ ಈ ಚಿತ್ರದಲ್ಲಿ ಅಪೂರ್ವ ನಾಯಕಿಯಾಗಿ ಅಭಿನಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮತ್ತೊಂದು ಸಿನಿಮಾಗೆ ಚಂದನ್ ಶೆಟ್ಟಿ ಹೀರೋ : ವಿಜಯ ದಶಮಿಗೆ ನೂತನ ಚಿತ್ರ

    ಮತ್ತೊಂದು ಸಿನಿಮಾಗೆ ಚಂದನ್ ಶೆಟ್ಟಿ ಹೀರೋ : ವಿಜಯ ದಶಮಿಗೆ ನೂತನ ಚಿತ್ರ

    ಗಾಗಲೇ ಒಂದು ಸಿನಿಮಾದಲ್ಲಿ ಖ್ಯಾತ ಗಾಯಕ, ಸಂಗೀತ ನಿರ್ದೇಶಕ  ಚಂದನ್ ಶೆಟ್ಟಿ (Chandan Shetty) ನಟಿಸಿದ್ದಾರೆ. ಈಗ ಮತ್ತೊಂದು ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ. ಇವರು ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರ ವಿಜಯ ದಶಮಿ ಶುಭದಿನದಂದು ಆರಂಭವಾಗಲಿದೆ.‌ ನವರಸನ್ (Navarasan) ನಿರ್ಮಾಣದಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ಅಕ್ಟೋಬರ್ 10ರಿಂದ ಚಿತ್ರೀಕರಣ ಆರಂಭವಾಗಲಿದೆ.

    ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಹಾಡುಗಳ ಬಿಡುಗಡೆ, ಪ್ರೀ ರಿಲೀಸ್ ಇವೆಂಟ್ ಸೇರಿದಂತೆ ಸಾಕಷ್ಟು ಸಮಾರಂಭಗಳನ್ನು ಅದ್ದೂರಿಯಾಗಿ ಆಯೋಜಿಸುವುದರಲ್ಲಿ ಮುಂಚೂಣಿಯಲ್ಲಿರುವ ಮೈ ಮೂವೀ ಬಜಾರ್ ಹಾಗೂ ಶ್ರೇಯಸ್ ಮೀಡಿಯಾ ದ ಪ್ರಮುಖ ನವರಸನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈವರೆಗೂ “ದಮಯಂತಿ” ಸೇರಿದಂತೆ ನಾಲ್ಕು ಚಿತ್ರಗಳನ್ನು ನವರಸನ್ ನಿರ್ಮಾಣ ಮಾಡಿದ್ದಾರೆ. ನಿರ್ಮಾಣದೊಂದಿಗೆ ಕ್ರಿಯೇಟಿವ್ ನಿರ್ದೇಶಕನಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ‌.

    ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿರಣ್ ಕುಮಾರ್ (Kiran Kumar) ನಿರ್ದೇಶಿಸಲಿದ್ದಾರೆ. ಇದು ಅವರಿಗೆ ಮೊದಲ ಚಿತ್ರ. ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಲಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ತಬಲ ನಾಣಿ ಸೇರಿದಂತೆ ಅನೇಕ ಹಿರಿಯ ಕಲಾವಿದರು ಇದರಲ್ಲಿ ನಟಿಸುತ್ತಿದ್ದಾರೆ.ನಾಯಕಿಯ ಆಯ್ಕೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸಿನಿಮಾವಾಗ್ತಿದೆ ಮಾಜಿ ಡಾನ್, ಹಾಲಿ ಕನ್ನಡಪರ ಹೋರಾಟಗಾರನ ಜೀವನ ಕಥೆ

    ಸಿನಿಮಾವಾಗ್ತಿದೆ ಮಾಜಿ ಡಾನ್, ಹಾಲಿ ಕನ್ನಡಪರ ಹೋರಾಟಗಾರನ ಜೀವನ ಕಥೆ

    ಗಾಗಲೇ ಕನ್ನಡದಲ್ಲಿ ಸಾಕಷ್ಟು ಬಯೋಪಿಕ್ ಚಿತ್ರಗಳು ಬಂದಿವೆ. ಆ ಸಾಲಿಗೆ ಮತ್ತೊಂದು ಸಿನಿಮಾ ಸೇರಲಿದೆ. ಇದು ಪೂರ್ಣ ಪ್ರಮಾಣದಲ್ಲಿ ಬಯೋಪಿಕ್ ಅಲ್ಲದೇ, ಇದ್ದರೂ, ಮಾಜಿ ರೌಡಿ, ಹಾಲಿ ಕನ್ನಡಪರ ಹೋರಾಟಗಾರನೊಬ್ಬನ ಕಥೆಯನ್ನು ಚಿತ್ರ ಮಾಡಲಾಗುತ್ತಿದೆ. ಆದರೆ, ಆ ಡಾನ್ ಯಾರು? ಏನು ಕಥೆ ಎನ್ನುವ ವಿಚಾರ ಮಾತ್ರ ಚಿತ್ರತಂಡ ಗುಟ್ಟಾಗಿ ಇಟ್ಟಿದೆ. ಇದನ್ನೂ ಓದಿ : ನನ್ನ ಮುಗಿಸ್ಬಿಡ್ತೀನಿ ಅಂತಾನೆ: ಗಂಭೀರ ಆರೋಪ ಮಾಡಿದ ನಟಿ ಸಂಜನಾ

    ಭೂಗತ ಜಗತ್ತಿನ ಚಟುವಟಿಕೆಯಲ್ಲಿದ್ದ ಕೆಲವರು ಕನ್ನಡ ಪರ ಸಂಘಟನೆ ಕಟ್ಟಿಕೊಂಡು, ಹೋರಾಟ ಮಾಡುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ಆದರೆ, ಈ ಸಿನಿಮಾ ಯಾರ ಕುರಿತಾದದ್ದು ಎನ್ನುವುದೇ ಸಸ್ಪೆನ್ಸ್.  ಇದನ್ನೂ ನೋಡಿ : ನಟ ಚೇತನ್‌ಗೆ ನೀಡಿದ್ದ ಗನ್ ಮ್ಯಾನ್ ಹಿಂಪಡೆದ ಸರ್ಕಾರ

    ಗುರು ದೇಶಪಾಂಡೆ ಸಾರಥ್ಯದಲ್ಲಿ ಪೆಂಟಗನ್ ಸಿನಿಮಾ ಮೂಡಿ ಬರುತ್ತಿದೆ. ಐದು ಜನ ನಿರ್ದೇಶಕರು, ಐದು ಕಥೆಗಳನ್ನು ಈ ಸಿನಿಮಾದಲ್ಲಿ  ಹೇಳುತ್ತಿದ್ದಾರೆ. ಆ ಐದು ಕಥೆಗಳಲ್ಲಿ ಒಂದು ಕನ್ನಡ ಪರ ಹೋರಾಟಗಾರನ ಕುರಿತಾದದ್ದುಆಗಿದೆ ಎನ್ನುವುದು ವಿಶೇಷ. ಇದನ್ನೂ ಓದಿ : ಪ್ರಭಾಸ್‍ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!

    ಚೂರಿಕಟ್ಟೆ ಖ್ಯಾತಿಯ ರಾಘು ಶಿವಮೊಗ್ಗ, ಆಕಾಶ್ ‍ಶ್ರೀವತ್ಸ, ಚಂದ್ರ  ಮೋಹನ್, ಕಿರಣ್ ಕುಮಾರ್ ತಲಾ ಒಂದೊಂದು ಕಥೆಗೆ ನಿರ್ದೇಶನ ಮಾಡಿದ್ದರೆ, ಕನ್ನಡ ಪರ ಹೋರಾಟಗಾರನ ಕಥೆಗೆ ಗುರು ದೇಶಪಾಂಡೆ ನಿರ್ದೇಶಕರು. ಇದನ್ನೂ ಓದಿ: ಭಾಸ್ಕರ್.ವಿ.ರೆಡ್ಡಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ‘ಮೈಸೂರು

    ಈಗಾಗಲೇ ನಾಲ್ಕೂ ಕಥೆಗಳ ಚಿತ್ರೀಕರಣ ಮುಗಿದಿದ್ದು, ಐದನೇ ಕಥೆಯಾದ ಕನ್ನಡ ಪರ ಹೋರಾಟಗಾರನ ಕಥೆಯ ಚಿತ್ರೀಕರಣ ಕೂಡ ಕೊನೆಯ ಹಂತದಲ್ಲಿದೆ. ಈ ಪಾತ್ರವನ್ನು ಖ್ಯಾತ ನಟ ಕಿಶೋರ್ ಮಾಡುತ್ತಿದ್ದಾರೆ. ಅಲ್ಲದೇ, ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಗುರುತಿಸಿಕೊಂಡಿರುವ, ನಟಿ ಅಶ್ವಿನಿ ಗೌಡ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

  • ತುಮಕೂರು ಶಾಲೆಯಲ್ಲಿ ಮಕ್ಕಳ ಸಾವು ಪ್ರಕರಣ: ಪ್ರಮುಖ ಆರೋಪಿಗಳ ಬಂಧನ

    ತುಮಕೂರು ಶಾಲೆಯಲ್ಲಿ ಮಕ್ಕಳ ಸಾವು ಪ್ರಕರಣ: ಪ್ರಮುಖ ಆರೋಪಿಗಳ ಬಂಧನ

    – 6 ಮಂದಿ ವಿರುದ್ಧ ಎಫ್‍ಐಆರ್, ನಾಲ್ವರಿಗೆ ಜಾಮೀನು

    ತುಮಕೂರು: ನಗರದ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ವಿಷ ಆಹಾರ ಸೇವಿಸಿ ಮಕ್ಕಳ ಸಾವು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವಸತಿ ಶಾಲೆಯ ಮಾಲೀಕ ಕಿರಣ್ ಕುಮಾರ್, ಪತ್ನಿ ಕವಿತಾ ಕಿರಣ್‍ರನ್ನ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

    ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪೊಲೀಸರು ಶನಿವಾರ ರಾತ್ರಿ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ಇಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ರು. ಮಾತ್ರವಲ್ಲದೇ ಕಿರಣ್‍ಕುಮಾರ್ ಮತ್ತು ಕವಿತಾ ಇಬ್ಬರನ್ನೂ ಪೊಲೀಸರೇ ರಕ್ಷಣೆ ಮಾಡಿದ್ದರು. ಇದೀಗ ಅವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ನಡೆದಿದ್ದೇನು?: ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಬೋರ್ಡಿಂಗ್ ಶಾಲೆಯಲ್ಲಿ ವಿಷಯುಕ್ತ ಆಹಾರ ಸೇವಿಸಿ 15 ವರ್ಷದ ಶ್ರೇಯಸ್, ಆಕಾಂಕ್ಷ್ ಪಲ್ಲಕ್ಕಿ ಹಾಗೂ ಶಾಂತಮೂರ್ತಿ ಎಂಬ ಮೂವರು ಅಮಯಾಕ ಮಕ್ಕಳು ಸಾವನಪ್ಪಿದ್ದರು. ಈ ಶಾಲೆ ಬಿಜೆಪಿಯ ಮಾಜಿ ಶಾಸಕ ಕಿರಣ್ ಕುಮಾರ್ ಅವರಿಗೆ ಸೇರಿದ್ದಾಗಿದೆ. ಘಟನೆ ಸಂಬಂಧ ಆರು ಮಂದಿ ವಿರುದ್ದ ಎಫ್.ಐ.ಆರ್ ದಾಖಲಾಗಿತ್ತು. ಇದರಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅದೇ ದಿನ ಕೋರ್ಟ್ ನಾಲ್ವರಿಗೂ ಜಾಮೀನು ನೀಡಿ ಬಿಡುಗಡೆಗೊಳಿಸಿತ್ತು.

    ಇತ್ತ ವಿಷಾಹಾರ ಸೇವನೆಯಿಂದ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೆಕ್ಯೂರಿಟಿ ಗಾರ್ಡ್ ರಮೇಶ್ ಘಟನೆ ಬಗ್ಗೆ ಮಾಹಿತಿ ನೀಡಲು ಹಾತೊರೆಯುತ್ತಿದ್ದರು. ಆದ್ರೆ ವೆಂಟಿಲೇಟರ್‍ನಲ್ಲಿ ಅವರು ಉಸಿರಾಡುತ್ತಿದ್ದುದರಿಂದ ಮಾತನಾಡಲು ಸಾಧ್ಯವಾಗದೆ ವೇದನೆ ಅನುಭವಿಸಿದ್ದರು.

    ಇದನ್ನೂ ಓದಿ: ತುಮಕೂರು: ವಸತಿ ಶಾಲೆಯಲ್ಲಿ ಫುಡ್ ಪಾಯ್ಸನ್- 3 ವಿದ್ಯಾರ್ಥಿಗಳ ದುರ್ಮರಣ

    ಇದನ್ನೂ ಓದಿ: ತುಮಕೂರು ಶಾಲೆಯಲ್ಲಿ 3 ಮಕ್ಕಳ ಸಾವು ಪ್ರಕರಣ- ಮರಣೋತ್ತರ ಪರೀಕ್ಷೆಯಲ್ಲಿ ವಿಷದಂಶ ಪತ್ತೆ