Tag: ಕಿಯೋನಿಕ್ಸ್

  • ವಿಷ ಕುಡಿಯುವ ಪ್ರತಿಭಟನೆಗೆ ಕಿಯೋನಿಕ್ಸ್ ವೆಂಡರ್ಸ್ ಕರೆ – ಕಚೇರಿ ಎದುರು ಹೈಡ್ರಾಮಾ

    ವಿಷ ಕುಡಿಯುವ ಪ್ರತಿಭಟನೆಗೆ ಕಿಯೋನಿಕ್ಸ್ ವೆಂಡರ್ಸ್ ಕರೆ – ಕಚೇರಿ ಎದುರು ಹೈಡ್ರಾಮಾ

    – ಪ್ರಿಯಾಂಕ್‌ ಖರ್ಗೆ, ಶರತ್ ಬಚ್ಚೇಗೌಡ ಹೆಸರಿನಲ್ಲಿ ಡೆತ್ ನೋಟ್

    ಬೆಂಗಳೂರು: ಇಲ್ಲಿನ ಕುಮಾರ ಪಾರ್ಕ್‌ ರಸ್ತೆಯಲ್ಲಿರುವ ಕಿಯೋನಿಕ್ಸ್‌ (KEONICS) ಕಚೇರಿ ಎದುರು ಭಾರೀ ಹೈಡ್ರಾಮಾ ನಡೆದಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿಷ ಕುಡಿಯುವ ಪ್ರತಿಭಟನೆಗೆ (KEONICS Protest) ಕರೆ ಕೊಟ್ಟಿದ್ದಾರೆ.

    ಈಗಾಗಲೇ ಬಾಕಿ ಹಣ ಪಾವತಿ ಮಾಡುವಂತೆ ಒತ್ತಾಯಿಸಿ ಈ ಹಿಂದೆ ದಯಾಮರಣ ಕೋರಿದ್ದ ಕಿಯೋನಿಕ್ಸ್‌ ವೆಂಡರ್ಸ್‌ ಇದೀಗ ವಿಷ ಕುಡಿಯುವ ಪ್ರತಿಭಟನೆಗೆ ಕರೆ ಕೊಟ್ಟಿದ್ದರು. ಅಲ್ಲದೇ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge), ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹೆಸರಿನಲ್ಲಿ ಡೆತ್ ನೋಟ್ ಸಹ ಬರೆದುಕೊಂಡಿದ್ದರು.

    ಕಚೇರಿಯ ಮುಂಭಾಗ ವೆಂಡರ್ಸ್ ಪ್ರತಿಭಟನೆ ಬೆನ್ನಲ್ಲೇ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಈ ವೇಳೆ ವೆಂಡರ್ಸ್ ಕಚೇರಿಗೆ ಬರುತ್ತಿದ್ದ ವ್ಯಕ್ತಿಯಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೇರೆ ಕಚೇರಿಗೆ ಹೋಗ್ತಾ ಇದ್ದೀನಿ ಅಂದ್ರೂ ಬಿಡದೇ ಸದಾಶಿವನಗರ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಕಿಯೋನಿಕ್ಸ್ ವೆಂಡರ್ಸ್ ಡೆತ್ ನೋಟ್ ನಿಂದ ಸರ್ಕಾರ ಮತ್ತೆ ಮುಜುಗರಕ್ಕೆ ಒಳಗಾದಂತಿದೆ.

    ಒಂದು ವಾರದ ಹಿಂದೆಯಷ್ಟೇ ಕಿಯೋನಿಕ್ಸ್ ವೆಂಡರ್ಸ್‌ಗಳಿಗೆ ಈಗಾಗಲೇ ಬಾಕಿ ಹಣ ಪಾವತಿ ಮಾಡ್ತಿದ್ದೇವೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹೇಳಿದ್ದರು.

    ಕಿಯೋನಿಕ್ಸ್ ವೆಂಡರ್ಸ್‌ಗಳಿಗೆ ಬಾಕಿ ಪಾವತಿ ವಿಚಾರ ಮತ್ತು ಕಿಯೋನಿಕ್ಸ್ ವೆಂಡರ್ಸ್‌ನಿಂದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಿಯೋನಿಕ್ಸ್ ವೆಂಡರ್ಸ್ ಜೊತೆ ನಾವು ಈಗಾಗಲೇ ಚರ್ಚೆ ಮಾಡಿದ್ದೇವೆ. ಸಚಿವ ಪ್ರಿಯಾಂಕ್ ಖರ್ಗೆ ಮತ್ತು ನಾನು ಇಬ್ಬರು ಚರ್ಚೆ ಮಾಡಿದ್ದೇವೆ. ಎಲ್ಲರಿಗೂ ಪರಿಹಾರ ಕೊಡುವ ಕುರಿತು ಚರ್ಚೆಗಳನ್ನ ನಡೆಸಿದ್ದೇವೆ. ಕಳೆದ ಸರ್ಕಾರದಲ್ಲಿ ನಡೆದ ಹಗರಣಗಳನ್ನ ನಾವು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ವೆಂಡರ್ಸ್‌ಗಳಿಗೆ ಮತ್ತು ಸಣ್ಣ ಗುತ್ತಿಗೆದಾರಿಗೆ ತೊಂದರೆ ಕೊಡುವ ಉದ್ದೇಶ ನಮಗೆ ಇಲ್ಲ. ಆದರೆ ಸರ್ಕಾರದ ಖಜಾನೆಗೆ ಆಗಿರುವ ಖೋತಾ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ತನಿಖೆಯನ್ನ ಗಂಭೀರವಾಗಿ ಮಾಡ್ತಿದ್ದೇವೆ ಎಂದು ಹೇಳಿದ್ದರು.

  • ಕಿಯೋನಿಕ್ಸ್ ವೆಂಡರ್ಸ್‌ಗಳ ಬಾಕಿ ಮೊತ್ತ ಬಿಡುಗಡೆಯಾಗುತ್ತಿದೆ – ಶರತ್ ಬಚ್ಚೇಗೌಡ

    ಕಿಯೋನಿಕ್ಸ್ ವೆಂಡರ್ಸ್‌ಗಳ ಬಾಕಿ ಮೊತ್ತ ಬಿಡುಗಡೆಯಾಗುತ್ತಿದೆ – ಶರತ್ ಬಚ್ಚೇಗೌಡ

    ಬೆಂಗಳೂರು: ಕಿಯೋನಿಕ್ಸ್ (KEONICS) ವೆಂಡರ್ಸ್‌ಗಳಿಗೆ ಈಗಾಗಲೇ ಬಾಕಿ ಹಣ ಪಾವತಿ ಮಾಡ್ತಿದ್ದೇವೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ (Sharath Bachegowda)ಹೇಳಿದರು.

    ಕಿಯೋನಿಕ್ಸ್ ವೆಂಡರ್ಸ್ಗಳಿಗೆ ಬಾಕಿ ಪಾವತಿ ವಿಚಾರ ಮತ್ತು ಕಿಯೋನಿಕ್ಸ್ ವೆಂಡರ್ಸ್‌ನಿಂದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಿಯೋನಿಕ್ಸ್ ವೆಂಡರ್ಸ್ ಜೊತೆ ನಾವು ಈಗಾಗಲೇ ಚರ್ಚೆ ಮಾಡಿದ್ದೇವೆ. ಸಚಿವ ಪ್ರಿಯಾಂಕ್ ಖರ್ಗೆ ಮತ್ತು ನಾನು ಇಬ್ಬರು ಚರ್ಚೆ ಮಾಡಿದ್ದೇವೆ. ಎಲ್ಲರಿಗೂ ಪರಿಹಾರ ಕೊಡುವ ಕುರಿತು ಚರ್ಚೆಗಳನ್ನ ನಡೆಸಿದ್ದೇವೆ. ಕಳೆದ ಸರ್ಕಾರದಲ್ಲಿ ನಡೆದ ಹಗರಣಗಳನ್ನ ನಾವು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ವೆಂಡರ್ಸ್‌ಗಳಿಗೆ ಮತ್ತು ಸಣ್ಣ ಗುತ್ತಿಗೆದಾರಿಗೆ ತೊಂದರೆ ಕೊಡುವ ಉದ್ದೇಶ ನಮಗೆ ಇಲ್ಲ. ಆದರೆ ಸರ್ಕಾರದ ಖಜಾನೆಗೆ ಆಗಿರುವ ಖೋತಾ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ತನಿಖೆಯನ್ನ ಗಂಭೀರವಾಗಿ ಮಾಡ್ತಿದ್ದೇವೆ ಎಂದು ತಿಳಿಸಿದರು.ಇದನ್ನೂ ಓದಿ: ವಿದೇಶಿಯರನ್ನು ಗಡಿಪಾರು ಮಾಡದ ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ತರಾಟೆ

    ಮಹೇಶ್ವರ್ ರಾವ್ ಅವರ ಸಮಿತಿ ತನಿಖೆ ಮಾಡ್ತಿದೆ. 2018 ರಿಂದ 2023ರವರೆಗೆ ನಡೆದ ಎಲ್ಲಾ ವ್ಯವಹಾರದ ಬಗ್ಗೆ ತನಿಖೆ ಮಾಡ್ತಿದೆ. ಪ್ರತಿ ಫೈಲ್ ಪರಿಶೀಲನೆ ಆಗ್ತಿದೆ. ಈಗಾಗಲೇ 1 ಸಾವಿರ ಫೈಲ್ ಪರಿಶೀಲನೆ ಆಗಿದೆ. 2-3 ಸಾವಿರ ಫೈಲ್ ಪರಿಶೀಲನೆ ಆಗಬೇಕಿದೆ. ಈ ವರದಿಯಲ್ಲಿ ಯಾರು ತಪ್ಪು ಮಾಡಿರುತ್ತಾರೋ ಎಲ್ಲರಿಗೂ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತೇವೆ ಎಂದರು.

    ಈಗ ಮಾಡಿರುವ ತನಿಖೆಯಲ್ಲಿ ಅಕ್ರಮ ಆಗಿರುವ ಅಂಶ ಬೆಳಕಿಗೆ ಬಂದಿದೆ. 30% ನಿಂದ 300% ವರೆಗೂ ವ್ಯತ್ಯಾಸ ಆಗಿವೆ. 30%-40% ರಷ್ಟು ಹೆಚ್ಚಿನ ಹಣದಲ್ಲಿ ಖರೀದಿ ಆಗಿದೆ. ಇದೆಲ್ಲವನ್ನೂ ನೋಡಿದರೆ ಯಾವ ಅಧಾರದಲ್ಲಿ ಅವರಿಗೆ ಹಣ ಬಿಡುಗಡೆ ಮಾಡೋಣ? ಸಮಿತಿ ವರದಿ ಕೊಡುವವರೆಗೂ ನಾವು ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ. ಹಣ ನಮ್ಮ ಬಳಿ ಇದೆ. ಬೇಕಿದ್ದರೆ ಆರ್‌ಟಿಐನಲ್ಲಿ ಅರ್ಜಿ ಹಾಕಿ ನೋಡಿ ಎಂದರು.

    ವೆಂಡರ್ಸ್ಗೆ ಬಾಕಿ ಹಣ ಕೊಡೋಕೆ ನಮಗೆ ಸಮಸ್ಯೆ ಇಲ್ಲ. ಎಷ್ಟು ಕೊಡಬೇಕು ಅಂತ ಸಮಿತಿ ಹೇಳಲಿ. ಸಮಿತಿ ಹೇಳಿದ ಕೂಡಲೇ ಹಣ ಬಿಡುಗಡೆ ಮಾಡ್ತೀವಿ. ಅವರ ಹಣ ಇಟ್ಟುಕೊಂಡು ನಮಗೇನು ಆಗಬೇಕಿಲ್ಲ. ಶೀಘ್ರವೇ ಅವರಿಗೆ ಪರಿಹಾರ ಕೊಡೋ ಕೆಲಸ ಮಾಡ್ತೀವಿ. 5 ಪ್ರಕರಣದಲ್ಲಿ ಸಮಿತಿ ಶಿಫಾರಸ್ಸಿನ ಮೇಲೆ ಹಣ ಬಿಡುಗಡೆ ಆಗಿದೆ. ನಿನ್ನೆ ಮತ್ತೆ 6 ಗುತ್ತಿಗೆದಾರಿಗೆ ಹಣ ಕೊಟ್ಡಿದ್ದೇವೆ. ಆರೋಪ ಇಲ್ಲದೇ ಇರುವ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡ್ತೀವಿ. ನಿಯಮ ಮೀರಿರುವ ಕಡೆ ಪರಿಶೀಲನೆ ಮಾಡಿ ಹಣ ಬಿಡುಗಡೆ ಮಾಡ್ತೀವಿ. ಪ್ರಾಮಾಣಿಕರಿಗೆ ಹಣ ಕೊಡುವ ಕೆಲಸ ಮಾಡ್ತೀವಿ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪಗೆ ಪಕ್ಷದ ಸಿದ್ದಾಂತ ಗೊತ್ತಿಲ್ಲ – ವೆಂಕಟೇಶ್ ಮೌರ್ಯ

     

  • ಕಿಯೋನಿಕ್ಸ್ ಹಗರಣದಲ್ಲಿ ಭಾಗಿಯಾದವರ ವಿರುದ್ದ ಶಿಸ್ತು ಕ್ರಮ – ಶರತ್ ಬಚ್ಚೇಗೌಡ

    ಕಿಯೋನಿಕ್ಸ್ ಹಗರಣದಲ್ಲಿ ಭಾಗಿಯಾದವರ ವಿರುದ್ದ ಶಿಸ್ತು ಕ್ರಮ – ಶರತ್ ಬಚ್ಚೇಗೌಡ

    ಬೆಂಗಳೂರು: ಕಿಯೋನಿಕ್ಸ್ ಹಗರಣದಲ್ಲಿ ಭಾಗಿಯಾದವರ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಿಯೋನಿಕ್ಸ್ (Karnataka State Electronics Development Corporation Limited) ಅಧ್ಯಕ್ಷ, ಶಾಸಕ ಶರತ್ ಬಚ್ಚೇಗೌಡ (Sharath Bachegowda) ಹೇಳಿದರು.

    ನಗರದಲ್ಲಿ ಕಿಯೋನಿಕ್ಸ್ ವೆಂಡರ್ಸ್ ದಯಾಮರಣಕ್ಕೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅಕೌಂಟೆಂಟ್ ಜನರಲ್ ವರದಿಯಲ್ಲಿ ಸರ್ಕಾರದ ಖಜಾನೆಗೆ ನೂರಾರು ಕೋಟಿ ನಷ್ಟ ಆಗಿದೆ. ಮಹೇಶ್ವರ್ ರಾವ್ ಕಮಿಟಿ ವರದಿ ಪಡೆದು ಬಿಲ್ ಕ್ಲಿಯರ್ ಮಾಡುತ್ತೇವೆ. ಸಾರ್ವಜನಿಕರ ಹಣ ಬಳಸಿ ಅನುದಾನ ನೀಡ್ತಿದ್ದೇವೆ. ಬೆಲೆ ನಿಗದಿ ವಿಚಾರದಲ್ಲೂ ಮಾರ್ಕೆಟ್ ಬೆಲೆಗಿಂದ ಹೆಚ್ಚಿನ ಬೆಲೆಗೆ ಸಪ್ಲೈ ಮಾಡಿರುವ ಆರೋಪ ಇದೆ. ಶೀಘ್ರವಾಗಿ ಹಣ ಬಿಡುಗಡೆಗೆ ಕ್ರಮವಹಿಸಲಾಗುವುದು. ಇನ್ನೂ ಕಿಯೋನಿಕ್ಸ್ ಹಗರಣದಲ್ಲಿ ಭಾಗಿಯಾದವರ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು. 2021, 22, 23ನೇ ಸಾಲಿನ ಮೂರು ವರ್ಷದ ಖರ್ಚು ವೆಚ್ಚಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.ಇದನ್ನೂ ಓದಿ: ಕಿಯೋನಿಕ್ಸ್ ವೆಂಡರ್ಸ್ ಆತ್ಮಹತ್ಯೆ ಮಾಡಿಕೊಂಡ್ರೆ ಪ್ರಿಯಾಂಕ್, ಶರತ್ ಬಚ್ಚೇಗೌಡ ಕಾರಣ: ರಾಷ್ಟ್ರಪತಿಗಳಿಗೆ ಪತ್ರ

    ಇದೇ ವೇಳೆ ಐಟಿ,ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ (Priyank Kharge)  ಮಾತನಾಡಿ, ಅಕೌಂಟೆಂಟ್ ಜನರಲ್ ಅವರು ಯಾವುದೇ ಮಾನದಂಡ ಪಾಲಿಸದೇ ಪರ್ಚೆಸಿಂಗ್ ಬಿಲ್ಲಿಂಗ್ ಟೆಂಡರ್ ಮಾಡಿದ್ದಾರೆ ಮತ್ತು ಡೂಪ್ಲಿಕೇಟ್ ಬಿಲ್, ಮಾರ್ಕೆಟ್ ರೇಟ್‌ಗಿಂತ ಹೆಚ್ಚಿನ ದರಕ್ಕೆ ಮಟಿರಿಯಲ್ ಸಪ್ಲೈ ಆರೋಪ ಇದೆ. ಅಂದಾಜು 500 ಕೋಟಿ ರೂ. ಅವ್ಯವಹಾರ ಕಂಡು ಬಂದಿದೆ. ಆಡಿಟ್ ರಿಪೋರ್ಟ್ನಲ್ಲಿ 300 ಕೋಟಿ ರೂ. ಆಡಿಟ್ ಅಬ್‌ಜಕ್ಷನ್ ಇದೆ. ನಾಲ್ಕು ವರ್ಷದ ಆಡಿಟ್ ರಿಪೋರ್ಟ್ ಮಾಡಬೇಕಿದೆ. ಇದಕ್ಕೆ ಕಾಲಾವಕಾಶ ಬೇಕಿದ್ದು, ರಿಪೋರ್ಟ್ ಆಧಾರದ ಮೇಲೆ ಕೊಡಲಾಗುತ್ತದೆ ಎಂದಿದ್ದಾರೆ.

    ಬ್ಲಾö್ಯಕ್ ಮೇಲ್ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಾವು ಭ್ರಷ್ಟಾಚಾರದಲ್ಲಿ ತೊಡಗಿರುವುದಾಗಿ ಎಲ್ಲೂ ಆರೋಪ ಇಲ್ಲ. ನಿಯಮಾವಳಿ ಪಾಲನೆ ಮಾಡಬೇಕಿದೆ. ಶರತ್ ಬಚ್ಚೇಗೌಡ ಚೇರ್ಮನ್ ಆದ ಬಳಿಕ ಪರಿಶೀಲನೆ ಮಾಡ್ತಿದ್ದಾರೆ. 5ಜಿ ಎಗ್ಸೆಮ್ಷನ್ ನಾನೇ ವಿತ್ ಡ್ರಾ ಮಾಡಿದ್ದೇನೆ. ಕೆಲವರಿಗೆ ತೊಂದರೆ ಆದರೂ ನಿಯಮ ಪಾಲಿಸಲೇಬೇಕಿದೆ ಎಂದು ಹೇಳಿದರು.ಇದನ್ನೂ ಓದಿ: ಗವಿಗಂಗಾಧರೇಶ್ವರನ ಸೂರ್ಯಾಭಿಷೇಕಕ್ಕೆ ಅಡ್ಡಿಯಾದ ಮೋಡ