Tag: ಕಿಯಾ ಕಾರು

  • ಸೊಲ್ಲಾಪುರದಲ್ಲಿ ಚೈತ್ರಾ ಕಾರಿದ್ದು, ತಂದು ಇಟ್ಕೊಳಿ- ಕಿರಣ್‍ಗೆ ಕರೆ ಮಾಡಿದ್ದ ಶ್ರೀಕಾಂತ್

    ಸೊಲ್ಲಾಪುರದಲ್ಲಿ ಚೈತ್ರಾ ಕಾರಿದ್ದು, ತಂದು ಇಟ್ಕೊಳಿ- ಕಿರಣ್‍ಗೆ ಕರೆ ಮಾಡಿದ್ದ ಶ್ರೀಕಾಂತ್

    – ಕಿಯಾ ಕಾರು, ಸಿಸಿಬಿ ವಶಕ್ಕೆ
    – ಕಿರಣ್ ಯಾರು..?

    ಬಾಗಲಕೋಟೆ: ವಂಚಕಿ ಚೈತ್ರಾ ಕುಂದಾಪುರ ಡೀಲ್ ಪ್ರಕರಣವು (Chaitra Kundapura Deal Case) ದಿನಕ್ಕೊಂದು ತಿರುವು ಪಡೆಯುತ್ತಿದೆ. ಚೈತ್ರಾ ಪ್ರಕರಣ ಹೊರಬೀಳುತ್ತಿದ್ದಂತೆಯೇ ಆರೋಪಿ ಶ್ರೀಕಾಂತ್, ಕಿರಣ್‍ಗೆ (Kiran) ಕರೆ ಮಾಡಿದ್ದಾನೆ. ಕಾರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿದೆ. ಸೊಲ್ಲಾಪುರದ ಒಂದು ಬಾರ್ ಆ್ಯಂಡ್ ರೆಸ್ಟೊರೆಂಟ್ ಮುಂದೆ ಇದೆ. ಅದನ್ನು ತಂದು ನಿಮ್ಮ ಬಳಿ ಇಟ್ಕೊಳಿ ಎಂದು ಹೇಳಿರುವುದು ಇದೀಗ ಬಯಲಾಗಿದೆ.

    ಶ್ರೀಕಾಂತ್ ಹೇಳಿದಂತೆ ಕಿರಣ್ ಅವರು ಸೆಪ್ಟೆಂಬರ್ 9 ರಂದು ಸೊಲ್ಲಾಪುರಕ್ಕೆ ಹೋಗಿ ಕಿಯಾ ಕಾರೆನ್ಸ್ (Kia Carens) ತಂದು ತನ್ನ ಡ್ರೈವಿಂಗ್ ಸ್ಕೂಲ್‍ನಲ್ಲಿಟ್ಟುಕೊಂಡಿದ್ದರು. ಚೈತ್ರಾ ಕುಂದಾಪುರ, ಪಿಎ ಶ್ರೀಕಾಂತ್, ಕಿರಣ್ ಕರೆಯನ್ನು ಸಿಸಿಬಿ ಪೊಲೀಸರು ಟ್ರೇಸೌಟ್ ಮಾಡಿದ್ದಾರೆ. ಈ ಆಧಾರದ ಮೇಲೆ ಕಿರಣ್ ವಶಕ್ಕೆ ಪಡೆದು ಕಾರು ಜಪ್ತಿ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಅಂದರ್‌ಗೂ ಮುನ್ನ ಬಚಾವ್ ಆಗಲು ಕಾರನ್ನೇ ಮುಚ್ಚಿಟ್ಟಿದ್ದ ಚೈತ್ರಾ ಕುಂದಾಪುರ!

    ಕಿರಣ್ ಯಾರು..?: 32 ವರ್ಷದ ಕಿರಣ್ ಗಣಪ್ಪಗೊಳ ಹಿಂದೂ ಕಾರ್ಯಕರ್ತ. ಇವರು 26 ವರ್ಷದಿಂದ ರನ್ನ ಡ್ರೈವಿಂಗ್ ಸ್ಕೂಲ್ ಇಟ್ಟುಕೊಂಡಿದ್ದಾರೆ. ಮೊದಲು ಕಿರಣ್ ತಂದೆ ಭೀಮಶಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು. ಕಳೆದ ಹಲವಾರು ವರ್ಷಗಳಿಂದ ಮಗ ಕಿರಣ್ ಸ್ಕೂಲ್ ನೋಡಿಕೊಳ್ಳುತ್ತಿದ್ದಾರೆ. ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಕಾರಣ ಮೂರು ಬಾರಿ ಮುಧೋಳ ನಗರಕ್ಕೆ ಚೈತ್ರಾ ಕುಂದಾಪುರ ಅವರನ್ನು ಭಾಷಣಕ್ಕೆ ಕರೆಸಿದ್ದರು. ಈ ವೇಳೆ ಇಬ್ಬರ ಮಧ್ಯೆ ಪರಿಚಯ ಆಗಿತ್ತು.

    ಕಾರು ಪತ್ತೆ: ಸದ್ಯ ಕಿರಣ್ ಡ್ರೈವಿಂಗ್ ಸ್ಕೂಲ್‍ನಲ್ಲಿದ್ದ ಕಾರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಿಯಾ ಕಾರು ಚೈತ್ರಾ ಬಾಲಕೃಷ್ಣ ಕುಂದಾಪುರ ಹೆಸರಲ್ಲಿದೆ. ಇದನ್ನು 2023 ರಲ್ಲಿ ಚೈತ್ರಾ ಖರೀದಿ ಮಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರತಿ 2 ನಿಮಿಷಕ್ಕೆ 1 ಕಿಯಾ ಸೋನೆಟ್‌ ಕಾರು ಮಾರಾಟ

    ಪ್ರತಿ 2 ನಿಮಿಷಕ್ಕೆ 1 ಕಿಯಾ ಸೋನೆಟ್‌ ಕಾರು ಮಾರಾಟ

    ನವದೆಹಲಿ: ಅಟೋಮೊಬೈಲ್‌ ಕಂಪನಿ ಕಿಯಾ ಬಿಡುಗಡೆ ಮಾಡಿದ ಸ್ಫೋರ್ಟ್ಸ್‌ ಯುಟಿಲಿಟಿ ವೆಹಿಕಲ್‌(ಎಸ್‌ಯುವಿ) ಸೋನೆಟ್‌ ಕಾರು ಪ್ರತಿ ಎರಡು ನಿಮಿಷಕ್ಕೆ ಒಂದು ಮಾರಾಟವಾಗುತ್ತಿದೆ  ಎಂದು ಕಂಪನಿ ತಿಳಿಸಿದೆ.

    ಸೆ.18 ರಂದು ಸೋನೆಟ್‌ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಕೇವಲ 12 ದಿನದಲ್ಲಿ 9,266 ಕಾರು ಮಾರಾಟಗೊಂಡಿದೆ. ಕಿಯಾದ ಮೊದಲ ಕಾರು ಸೆಲ್ಟೋಸ್‌ಗೆ ಉತ್ತಮ ಬೇಡಿಕೆ ಇದ್ದು 9,079 ಕಾರುಗಳು ಮಾರಾಟಗೊಂಡಿದೆ.

    ಸೆಪ್ಟೆಂಬರ್‌ ತಿಂಗಳಿನಲ್ಲಿ ಕಿಯಾ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ್ದು ಒಟ್ಟು 18,676 ಕಾರು ಮಾರಾಟ ಮಾಡಿದೆ. ಸೋನೆಟ್‌, ಸೆಲ್ಟೋಸ್‌ ಅಲ್ಲದೇ ದುಬಾರಿ ಬೆಲೆ ಇರುವ 331 ಕಾರ್ನಿವಾಲ್‌ ಕಾರನ್ನು ಕಿಯಾ ಮಾರಾಟ ಮಾಡಿದೆ.

    ಕಿಯಾ ಮೋಟಾರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುಖಿಯುನ್ ಶಿಮ್ ಪ್ರತಿಕ್ರಿಯಿಸಿ, ಭಾರತೀಯ ವಾಹನ ಮಾರುಕಟ್ಟೆ ನಿರೀಕ್ಷೆಗಿಂತ ಉತ್ತಮ ವೇಗದಲ್ಲಿ ಚೇತರಿಸಿಕೊಳ್ಳುತ್ತಿದೆ. ಭಾರತೀಯ ಜನರ ಮನಸ್ಥಿತಿಗೆ ಅನುಗುಣವಾಗಿ ಬೆಲೆ, ವಿನ್ಯಾಸ ಮಾಡಿದ ಕಾರಣ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೆಲ್ಟೋಸ್ ಮತ್ತು ಕಾರ್ನಿವಲ್ ಸಹ ಬೇಡಿಕೆ ಇದೆ. ಇದೇ ರೀತಿಯ ಬೆಂಬಲ ಮುಂದೆಯೂ ಸಿಗಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಅವರು ಹೇಳಿದ್ದಾರೆ.

    ಸೋನೆಟ್‌ ಎಂಟ್ರಿ ಲೆವೆಲ್‌ ಎಚ್‌ಟಿಇ ಸ್ಮಾರ್ಟ್‌ಸ್ಟ್ರೀಮ್‌ ಜಿ1.2 5 ಎಂಟಿ ಮಾದರಿಯ ಕಾರಿಗೆ ಶೋರೂಂನಲ್ಲಿ 6.71 ಲಕ್ಷ ರೂ. ದರವಿದೆ. ಒಟ್ಟು 17 ಮಾದರಿಯಲ್ಲಿ ಸೋನೆಟ್‌ ಕಾರು ಲಭ್ಯವಿದೆ. ಇದನ್ನೂ ಓದಿ: ಇಂದಿನಿಂದ ನೀವು ಕಡಿಮೆ ಬೆಲೆಗೆ‌ ಕಾರು, ಬೈಕ್ ಖರೀದಿಸಬಹುದು

    ಹುಂಡೈ ವೆನ್ಯೂ, ಮಾರುತಿ ಸುಜುಕಿ ವಿಟಾರ ಬ್ರೀಜಾ, ಮಹೀಂದ್ರಾ ಎಕ್ಸ್‌ಯುವಿ 300 ಮತ್ತು ಟಾಟಾ ನೆಕ್ಸನ್‌ ಕಾರುಗಳಿಗೆ ಸ್ಪರ್ಧೆ ನೀಡಲು ಕಿಯಾ ಕಂಪನಿ ಸೋನೆಟ್‌ ಬಿಡುಗಡೆ ಮಾಡಿದೆ.