Tag: ಕಿಯಾರಾ ಅಡ್ವಾನಿ

  • ಟಾಕ್ಸಿಕ್ ನಟಿಗಾಗಿ ಬೆಂಗಳೂರಿನಿಂದ ಮುಂಬೈಗೆ ಲೊಕೇಶನ್ ಶಿಫ್ಟ್ !

    ಟಾಕ್ಸಿಕ್ ನಟಿಗಾಗಿ ಬೆಂಗಳೂರಿನಿಂದ ಮುಂಬೈಗೆ ಲೊಕೇಶನ್ ಶಿಫ್ಟ್ !

    ಶ್ ನಟಿಸಿ ನಿರ್ಮಿಸುತ್ತಿರುವ ಟಾಕ್ಸಿಕ್ (Toxic) ಚಿತ್ರದ ಬಹುಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿಯೇ (Bengaluru) ನಡೆಯುತ್ತಿದೆ. ಚಿತ್ರದಲ್ಲಿ ತೊಡಗಿರುವ ಬಹುಭಾಷಾ ಕಲಾವಿದರು ಹಾಗೂ ತಂತ್ರಜ್ಞರನ್ನು ಯಶ್ (Yash) ಬೆಂಗಳೂರಿಗೆ ಕರೆಸಿ ಚಿತ್ರೀಕರಣ ಮಾಡಿದ್ದಾರೆ. ಆಗಾಗ ಮುಂಬೈಗೂ (Mumbai) ಶಿಫ್ಟ್ ಆಗುತ್ತಾರೆ. ಆದರೂ ಬೆಂಗಳೂರಿನ ಹೆಚ್‌ಎಂಟಿಯಲ್ಲಿ ಹಾಕಲಾದ ಬೃಹತ್ ಸೆಟ್‌ನಲ್ಲಿ ಆಗಾಗ ಚಿತ್ರೀಕರಣ ನಡೆಯುತ್ತದೆ. ಆದರೆ ಚಿತ್ರದ ನಾಯಕಿಯಾಗಿ ಯಶ್ ಬೆಂಗಳೂರಿನಲ್ಲಿ ಮಾಡಲು ಪ್ಲ್ಯಾನ್‌ ಆಗಿದ್ದ ಚಿತ್ರೀಕರಣವನ್ನು  ಮುಂಬೈಗೆ ಶಿಫ್ಟ್ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿದೆ.

    ಟಾಕ್ಸಿಕ್ ಚಿತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟಿ ಕಿಯಾರಾ ಅಡ್ವಾನಿಗಾಗಿ ಯಶ್ ಲೊಕೇಶನ್ ಶಿಫ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈಗಾಗ್ಲೇ ಕಿಯಾರಾ ಅಡ್ವಾನಿ (Kiara Advani) ಭಾಗದ ಬಹುಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ಹಾಕಲಾದ ಸೆಟ್‌ನಲ್ಲಿಯೇ ಪೂರ್ಣಗೊಂಡಿದೆ. ಇದೀಗ ಬಾಕಿ ಇರುವ ಕೆಲವು ದೃಶ್ಯಗಳು ಹಾಗೂ ಪ್ಯಾಚ್‌ವರ್ಕ್ ದೃಶ್ಯಕ್ಕಾಗಿ ಅವರನ್ನ ಮುಂಬೈನಿಂದ ಬೆಂಗಳೂರಿಗೆ ಕರೆಸುವ ಬದಲು ಮುಂಬೈನಲ್ಲೇ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಇಷ್ಟೊಂದು ಶ್ರಮ ತೆಗೆದುಕೊಂಡು ಚಿತ್ರತಂಡ ಚಿತ್ರೀಕರಣ ಮಾಡ್ತಿರೋದಕ್ಕೆ ಕಾರಣ ಕಿಯಾರಾ ಅಡ್ವಾನಿ ಈಗ ಗರ್ಭಿಣಿ. ಇದನ್ನೂ ಓದಿ: ಏನಿಲ್ಲ ಏನಿಲ್ಲ ಅನ್ನುತ್ತಲೇ ಒಂದೇ ಕಾರ್‌ನಲ್ಲಿ ಹೊರಟ ರಶ್ಮಿಕಾ, ದೇವರಕೊಂಡ

    ನಟಿ ಕಿಯಾರಾ ಅಡ್ವಾನಿ ಈಗ ಗರ್ಭಿಣಿಯಾಗಿದ್ದು ಅವರಿಗೆ ಈಗ ಪ್ರಯಾಣ ಮಾಡುವುದು ಕಷ್ಟದ ಕೆಲಸ. ಹೀಗಾಗಿ ಈ ನಾಯಕಿಗಾಗಿ `ಟಾಕ್ಸಿಕ್’ ಚಿತ್ರತಂಡ ಅವರಿರುವ ಜಾಗಕ್ಕೆ ಹೋಗಿ ಶೂಟಿಂಗ್ ಮಾಡಲು ತಯಾರಿ ಮಾಡಿಕೊಂಡಿದೆ. ಅಸಲಿಗೆ ಕಿಯಾರಾ ಭಾಗದ ಟಾಕ್ಸಿಕ್ ಚಿತ್ರೀಕರಣ ಮುಗಿದಿತ್ತು ಎನ್ನಲಾಗಿತ್ತು. ಆದರೆ ಸಿನಿಮಾ ಮುಗಿಯೋವರೆಗೂ ಕೆಲವೊಂದು ಬದಲಾವಣೆಗಳು, ದೃಶ್ಯಗಳನ್ನು ಸೇರಿಕೊಳ್ಳುವ ಪ್ರಕ್ರಿಯೆ ಸಾಮಾನ್ಯವಾಗಿದ್ದು ಈ ಚಿತ್ರೀಕರಣಕ್ಕಾಗಿ ಕಿಯಾರಾ ಡೇಟ್ ಅವಶ್ಯಕವಾಗಿತ್ತು. ಹೀಗಾಗಿ ಕಿಯಾರಾ ಭಾಗದ ಕೆಲ ದಿನಗಳ ಚಿತ್ರೀಕರಣವನ್ನ ಮುಂಬೈನಲ್ಲೇ ಮಾಡಲು ತಯಾರಿ ಮಾಡಲಾಗಿದೆ. ಇದನ್ನೂ ಓದಿ: ರಚಿತಾ ರಾಮ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ನಿರ್ದೇಶಕ ನಾಗಶೇಖರ್ ಒತ್ತಾಯ

    ಟಾಕ್ಸಿಕ್ ಚಿತ್ರವನ್ನು ಯಶ್ ಕೆವಿಎನ್ (KVN) ಫಿಲಂಸ್ ಜೊತೆಗೂಡಿ ತಮ್ಮ ಸ್ವಂತ ಬ್ಯಾನರ್ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್‌ನ ಮೂಲಕ ನಿರ್ಮಿಸುತ್ತಿದ್ದಾರೆ. ಗೀತು ಮೋಹನ್ ದಾಸ್ ಈ ಚಿತ್ರಕ್ಕೆ ನಿರ್ದೇಶಕಿ. 2026ರ ಮಾರ್ಚ್ 19ಕ್ಕೆ ಚಿತ್ರ ರಿಲೀಸ್ ಘೋಷಣೆಯಾಗಿದೆ. ಚಿತ್ರದಲ್ಲಿ ಯಶ್ ಜೊತೆ ನಯನತಾರಾ, ಕಿಯಾರಾ, ತಾರಾ ಸುತಾರಿಯಾ ಮುಂತಾದವರು ಅಭಿನಯಿಸುತ್ತಿದ್ದಾರೆ.

  • ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಬಾಲಿವುಡ್ ದಂಡು

    ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಬಾಲಿವುಡ್ ದಂಡು

    ಶ್ (Yash) ನಟನೆಯ ಟಾಕ್ಸಿಕ್ (Toxic) ಸಿನಿಮಾ ಬಗ್ಗೆ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಕೊಡದೇ ಇದ್ದರೂ, ಸಾಕಷ್ಟು ವಿಷಯಗಳು ಆಚೆ ಬರುತ್ತಿವೆ. ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ಬಾಲಿವುಡ್ ದಂಡೇ ಈ ಸಿನಿಮಾದಲ್ಲಿ ಇರಲಿದೆ. ಕನ್ನಡಕ್ಕೆ ಪ್ರತಿಭಾವಂತ ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಈ ಸಿನಿಮಾ ಮೂಲಕ ಯಶ್ ಕರೆಯಿಸಿಕೊಳ್ಳುತ್ತಿದ್ದಾರೆ.

    ಈಗಾಗಲೇ ಈ ಚಿತ್ರದಲ್ಲಿ ಕರೀನಾ ಕಪೂರ್ ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. ಇವರ ಜೊತೆಗೆ ಹಿಂದಿಯ ಫೇಮಸ್ ನಟ ನವಾಜುದ್ದೀನ್ ಸಿದ್ದಿಕ್ (Nawazuddin Siddique), ಖ್ಯಾತ ನಟಿ ಕಿಯಾರಾ ಅಡ್ವಾಣಿ (Kiara Advani), ಮಲಯಾಳಂ ನಟ ಶೈನ್ ಟಾಮ್ ಚಾಕೊ ಕೂಡ ಚಿತ್ರದಲ್ಲಿ ನಟಿಸಲಿದ್ದಾರಂತೆ. ಈ ಪಟ್ಟಿ ಅಧಿಕೃತವಾಗಿ ಸಿನಿಮಾ ತಂಡ ಹೇಳಿಲ್ಲವಾದರೂ, ಆಪ್ತರ ಪ್ರಕಾರ ನಿಜವಂತೆ.

    ಗೋವಾ, ಶ್ರೀಲಂಕಾ, ಲಂಡನ್ ಹೀಗೆ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಬಗ್ಗೆ ಸಾಕಷ್ಟು ಹೆಸರುಗಳು ಕೇಳಿ ಬಂದವು. ಈಗಾಗಲೇ ಗೋವಾದಲ್ಲಿ ಯಶ್ ಶೂಟಿಂಗ್ ಶೂರು ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಯಶ್ ಆಪ್ತರ ಪ್ರಕಾರ ಇನ್ನೂ ಸಿನಿಮಾದ ಶೂಟಿಂಗ್ ನಡೆದಿಲ್ಲವಂತೆ. ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 15ರಿಂದ ಬೆಂಗಳೂರಿನಿಂದಲೇ (Bangalore) ಮೊದಲ ಹಂತದ ಚಿತ್ರೀಕರಣ ಶುರುವಾಗಬೇಕಿತ್ತು. ಅದೂ ಆಗಿಲ್ಲ.

     

    ಬೆಂಗಳೂರಿನ ಎಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಶೂಟಿಂಗ್ ಗಾಗಿ ಬೃಹತ್ ಸೆಟ್ ಹಾಕಲಾಗಿದೆ. ಇನ್ನೂ ಕೆಲಸಗಳು ನಡೆದಿವೆ. ಜೊತೆಗೆ ಹೆಸರಾಂತ ಕಲಾವಿದರ ಡೇಟ್ ಹೊಂದಾಣಿಕೆ ಕಾರ್ಯ ನಡೆಯುತ್ತಿದೆ. ಹಾಗಾಗಿ ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಿಂದ ಚಿತ್ರೀಕರಣ ಶುರು ಮಾಡಲಿದ್ದಾರಂತೆ ಯಶ್.

  • ‘ಟಾಕ್ಸಿಕ್’ ಸಿನಿಮಾದಲ್ಲಿ ಕಿಯಾರಾ ಅಡ್ವಾನಿ: ಮೌನಕ್ಕೆ ಶರಣಾದ ಟೀಮ್

    ‘ಟಾಕ್ಸಿಕ್’ ಸಿನಿಮಾದಲ್ಲಿ ಕಿಯಾರಾ ಅಡ್ವಾನಿ: ಮೌನಕ್ಕೆ ಶರಣಾದ ಟೀಮ್

    ಟಾಕ್ಸಿಕ್ ಸಿನಿಮಾ ವಿಚಾರವಾಗಿ ದಿನಕ್ಕೊಬ್ಬರ ಹೆಸರು ತೇಲಿ ಬರುತ್ತಿದೆ. ಅದು ದೊಡ್ಡಮಟ್ಟದಲ್ಲೂ ಸುದ್ದಿ ಆಗಿತ್ತು. ಇಷ್ಟು ದಿನ ಕರೀನಾ ಕಪೂರ್, ಶ್ರುತಿ ಹಾಸನ್ ಸೇರಿದಂತೆ ನಾಲ್ಕೈದು ನಾಯಕಿಯರ ಹೆಸರು ಕೇಳಿ ಬಂದಿದ್ದವು. ಈಗ ಮತ್ತೊಂದು ಹೆಸರು ಅದಕ್ಕೆ ಪೋಣಿಸಿಕೊಂಡಿದೆ. ಅದೇ ಬಾಲಿವುಡ್ ನಟಿ ಕಿಯಾರಾ ಅಡ್ವಾನಿ (Kiara Advani). ಈ ನಟಿ ಕೂಡ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಕೇಳಿ ಬರುತ್ತಿದೆ.

    ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಕೂಡ ಟಾಕ್ಸಿಕ್ ನಲ್ಲಿ  ನಟಿಸ್ತಾರಾ? ಇಂಥದ್ದೊಂದು ಪ್ರಶ್ನೆ ಹಲವು ತಿಂಗಳ ಹಿಂದೆಯೇ ಶುರುವಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಂತೆ ಕಾಣುತ್ತಿದೆ. ಬಿಟೌನ್ ನಲ್ಲಿ ಸುದ್ದಿ ಆಗಿರುವ ಪ್ರಕಾರ, ಸ್ವತಃ ಕರೀನಾ ಅವರೇ ಹೇಳಿಕೊಂಡಂತೆ ಬಾಲಿವುಡ್ (Bollywood) ಚಿತ್ರದಲ್ಲಿ ಕರೀನಾ ನಟಿಸುತ್ತಿದ್ದಾರಂತೆ. ಆದರೆ, ಆ ಸಿನಿಮಾ ಯಾವುದನ್ನು ಎನ್ನುವುದನ್ನು ಸದ್ಯಕ್ಕೆ ಹೇಳಲಾರೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

    ಈ ಹಿಂದೆಯೇ ಸಂದರ್ಶನವೊಂದರಲ್ಲಿ ಕರೀನಾ ಅವರು, ಯಶ್ ಜೊತೆ ಮಾತ್ರ ನಟಿಸುತ್ತೇನೆ. ಪ್ರಭಾಸ್, ಅಲ್ಲು ನಕೋ ಬಾಬಾ ಎಂದಿದ್ದರು. ಯಶ್ ಜೊತೆ ನಟಿಸೋದು ಹೆವ್ವಿ ಇಷ್ಟ. ಅದೇ ಲೈಫ್ ಟೈಮ್ ಅಚೀವ್‌ಮೆಂಟು ಎಂದಿದ್ದರು. ಈ ಮೂಲಕ ತಾವು ಯಶ್ ಜೊತೆ ನಟಿಸುವ ಉತ್ಸಾಹವನ್ನೂ ತೋರಿಸಿದ್ದರು. ಆ ಕನಸು ನನಸಾದಂತೆ ಕಾಣುತ್ತಿದೆ.

    ಈ ನಡುವೆ ಯಶ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಇದೆ. ಟಾಕ್ಸಿಕ್ (Toxic) ಸಿನಿಮಾವನ್ನು ಗೀತು ಮೋಹನ್ ದಾಸ್ (Geethu Mohan Das) ನಿರ್ದೇಶನ ಮಾಡಲಿದ್ದಾರೆ ಎನ್ನುವ ವಿಷಯ ಬಿಟ್ಟರೆ, ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದ ಒಂದೇ ಒಂದು ಫೋಟೋ ಕೂಡ ಆಚೆ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಯಶ್ ಮತ್ತು ಗೀತು ಅವರ ಫೋಟೋ ಸಿಕ್ಕಿದೆ. ಗೋವಾದಲ್ಲಿ ಸಿನಿಮಾದ ಶೂಟಿಂಗ್ ನಡೆದಿದ್ದು, ಆ ಫೋಟೋ ಅದು ಎನ್ನಲಾಗುತ್ತಿದೆ.

     

    ಟೆಂಪಲ್ ರನ್ ಮುಗಿಸಿಕೊಂಡು ಸದ್ಯ ಯಶ್ (Yash) ಗೋವಾದಲ್ಲಿ (Goa) ಬೀಡು ಬಿಟ್ಟಿದ್ದಾರೆ. ಗೋವಾದ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಸದ್ಯ ಅವರು ಗೋವಾನಲ್ಲಿ ಬೀಡು ಬಿಟ್ಟಿರೋದು ಟಾಕ್ಸಿಕ್ ಸಿನಿಮಾದ ಶೂಟಿಂಗ್ ಗಾಗಿ ಎನ್ನುವ ವಿಚಾರ ಹರಿದಾಡುತ್ತಿತ್ತು. ಅದು ಈಗ ನಿಜವಾಗಿದೆ. ಶೂಟಿಂಗ್ ಸಮಯದ್ದು ಎನ್ನಲಾದ ಫೋಟೋ ವೈರಲ್ ಆಗಿದೆ.

  • ರೆಡ್ ಗೌನ್ ಧರಿಸಿ ಪಡ್ಡೆಗಳ ನಿದ್ದೆಗೆಡಿಸಿದ ನವವಧು ಕಿಯಾರಾ

    ರೆಡ್ ಗೌನ್ ಧರಿಸಿ ಪಡ್ಡೆಗಳ ನಿದ್ದೆಗೆಡಿಸಿದ ನವವಧು ಕಿಯಾರಾ

    ತ್ತೀಚೆಗಷ್ಟೇ ಬಾ‍ಯ್ ಫ್ರೆಂಡ್ ಸಿದ್ದಾರ್ಥ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ಕಿಯಾರಾ ಅಡ್ವಾಣಿ ಹನಿಮೂನ್ ಮುಗಿಸಿಕೊಂಡು ಮತ್ತೆ ಟ್ರ್ಯಾಕ್ ಗೆ ಮರಳಿದ್ದಾರೆ. ಖಾಸಗಿ ವಾಹಿನಿಯ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ಅವರು, ರೆಡ್ ಗೌನ್ ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ್ದಾರೆ.

    ಕಿಯಾರಾ ಅಡ್ವಾಣಿ ಕೆಂಪು ಗೌನ್ ನಲ್ಲಿ ಬರುತ್ತಿದ್ದಂತೆಯೇ ಇಡೀ ಕ್ಯಾಮೆರಾಗಳು ಅವರನ್ನು ಸುತ್ತುವರೆದವು. ಒಂದು ಕ್ಷಣ ಅಚ್ಚರಿಯಿಂದಲೇ ಕಿಯಾರಾ ಕ್ಯಾಮೆರಾಗೆ ಪ್ರತಿಕ್ರಿಯೆ ನೀಡಿದರು. ಹಲವು ಬಗೆಯ ಪೋಸ್ ಗಳನ್ನೂ ಕ್ಯಾಮೆರಾಗೆ ಅವರು ನೀಡಿದರು. ಆ ಫೋಟೋಗಳು ಇದೀಗ ವೈರಲ್ ಕೂಡ ಆಗಿವೆ. ಇದನ್ನೂ ಓದಿ: `ಆಚಾರ್ಯ’ ಚಿತ್ರಕ್ಕಾಗಿ ನಿರ್ಮಿಸಿದ್ದ 20 ಕೋಟಿ ವೆಚ್ಚದ ಸೆಟ್ ಬೆಂಕಿಗಾಹುತಿ

    Kiara Advani

    ಪ್ರಶಸ್ತಿ ಪ್ರದಾನ ಸಮಾರಂಭದ ರೆಡ್ ಕಾರ್ಪೆಟ್ ಗಾಗಿಯೇ ಅವರು ವಿಶೇಷ ಗೌನ್ ಅನ್ನು ಸಿದ್ಧಪಡಿಸಿದ್ದರು. ಹೊಸ ಬಗೆಯ ವಿನ್ಯಾಸದಲ್ಲಿ ತಯಾರಾಗಿದ್ದ ಗೌನ್ ಬಗ್ಗೆಯೂ ಅವರು ಹಲವು ಮಾಹಿತಿಗಳನ್ನು ಹಂಚಿಕೊಂಡರು. ಈ ಗೌನ್ ನಲ್ಲಿ ಅವರು ಮತ್ತಷ್ಟು ಸ್ಟೈಲೀಶ್ ಆಗಿ ಕಂಡಿದ್ದು ವಿಶೇಷ.

    ವೈಯಕ್ತಿಕ ಬದುಕು ಮತ್ತು ವೃತ್ತಿ ಬದುಕು ಎರಡನ್ನೂ ಸಮತೋಲನದಿಂದ ಕಾಪಾಡಿಕೊಂಡು ಬಂದವರು ಕಿಯಾರಾ. ಹಲವು ವರ್ಷಗಳಿಂದ ಸಿದ್ದಾರ್ಥ ಮಲ್ಹೋತ್ರಾ ಜೊತೆ ಡೇಟಿಂಗ್ ಮಾಡುತ್ತಿದ್ದವರು ಫೆಬ್ರವರಿ 7ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾದರು. ಮದುವೆಯ ನಂತರ ಈಗ ಮತ್ತೆ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಮ್ ಚರಣ್ ಜೊತೆ ಈಗ ಸಿನಿಮಾವೊಂದನ್ನು ಕಿಯಾರಾ ಮಾಡುತ್ತಿದ್ದಾರೆ.

  • ಮದುವೆ ಆಗದೆಯೇ ಸೆಟಲ್ ಆಗಿದ್ದೀನಿ: ಹಿಂಗ್ಯಾಕೆ ಅಂದ್ರು ಕಿಯಾರಾ ಅಡ್ವಾನಿ

    ಮದುವೆ ಆಗದೆಯೇ ಸೆಟಲ್ ಆಗಿದ್ದೀನಿ: ಹಿಂಗ್ಯಾಕೆ ಅಂದ್ರು ಕಿಯಾರಾ ಅಡ್ವಾನಿ

    ಬಾಲಿವುಡ್ ಹಾಟ್ ಬ್ಯೂಟಿ ಕಿಯಾರಾ ಅಡ್ವಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆಷ್ಟೇ ಕಿಯಾರಾ ತಮ್ಮ ಬಾಯ್‌ಫ್ರೆಂಡ್ ಸಿದ್ಧಾರ್ಥ್ ಮಲ್ಹೋತ್ರಾ ವಿಚಾರವಾಗಿ ಭಾರೀ ಸುದ್ದಿಯಲ್ಲಿದ್ದರು. ಈಗ ತಾನು ಮದುವೆ ಆಗದೆಯೇ ಸೆಟಲ್ ಆಗಿದ್ದೀನಿ ಅಂತಾ ಹೇಳಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

    ಬಿಟೌನ್ ಬ್ಯೂಟಿ ಕಿಯಾರಾ ಅಡ್ವಾನಿ ಸದ್ಯ `ಭೂಲ್ ಬುಲಯ್ಯ 2′ ಯಶಸ್ಸಿನ ಅಲೆಯಲ್ಲಿದ್ದಾರೆ. ಈ ಚಿತ್ರದ ಯಶಸ್ಸಿನಿಂದ ಬಾಲಿವುಡ್‌ಗೆ ಹೊಸ ಚೈತನ್ಯ ಸಿಕ್ಕಂತಾಗಿದೆ. ಈ ಬೆನ್ನಲ್ಲೇ ಕಿಯಾರಾ ನಟನೆಯ ಹೊಸ ಸಿನಿಮಾ `ಜುಗ್ ಜುಗ್ ಜೀಯೋ’ ಟ್ರೇಲರ್ ಕೂಡ ರಿಲೀಸ್ ಆಗಿದೆ. ಈ ವೇಳೆ ಕಿಯಾರಾ ಅವರಿಗೆ ಯಾವಾಗ ಸೆಟಲ್ ಆಗುತ್ತೀರಿ ಎಂದು ಕೇಳಲಾಯಿತು. ಆಗ ಕಿಯಾರಾ ನಾನು ಮದುವೆ ಆಗದೇನು ಸೆಟಲ್ ಆಗಬಹುದಲ್ವಾ ಸ್ಮಾರ್ಟ್ ಉತ್ತರ ನೀಡಿದ್ದಾರೆ. ಕೆಲಸ ಮಾಡುತ್ತಿದ್ದೇನೆ, ಹಣ ಮಾಡುತ್ತೀದ್ದೇನೆ, ಮತ್ತು ಖುಷಿಯಾಗಿದ್ದೇನೆ ಇಷ್ಟು ಸಾಕಲ್ವಾ ಎಂದಿದ್ದಾರೆ.ಇದನ್ನೂ ಓದಿ:ಸ್ಯಾಂಡಲ್‍ವುಡ್ ನಿರ್ದೇಶಕ ಕೆ.ಎನ್.ಮೋಹನ್ ಕುಮಾರ್ ವಿಧಿವಶ

    ಸದ್ಯ ಬಾಲಿವುಡ್‌ನ ಟಾಪ್ ನಾಯಕಿಯರಲ್ಲಿ ಒಬ್ಬರಾಗಿ ಮಿಂಚ್ತಿರೋ ಕಿಯಾರಾ, `ಭೂಲ್ ಬುಲಯ್ಯ ೨’ ಸಕ್ಸಸ್ ನಂತರ ಭಾರೀ ಡಿಮ್ಯಾಂಡ್‌ನಲ್ಲಿದ್ದಾರೆ. ಅಂದಹಾಗೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಜತೆ ಎಂಗೇಜ್ ಆಗಿರೋ ಕಿಯಾರಾ ಮುಂದೆ ಮದುವೆ ಅಂತಾ ಫ್ಯಾನ್ಸ್ ಕೇಳ್ತಿದ್ದಾರೆ. ಆದರೆ ಈ ಇಬ್ಬರು ಸ್ಟರ‍್ಸ್, ತಮ್ಮ ಮುಂಬರುವ ಪ್ರಾಜೆಕ್ಟ್ನಲ್ಲಿ ಬ್ಯುಸಿಯಾಗಿದ್ದಾರೆ.

  • ಮಾಲ್ಡೀವ್ಸ್ ಕಡಲ ತೀರದಲ್ಲಿ ಕಿಯಾರಾ ಅಡ್ವಾನಿ ಹಾಟ್ ಅವತಾರ

    ಮಾಲ್ಡೀವ್ಸ್ ಕಡಲ ತೀರದಲ್ಲಿ ಕಿಯಾರಾ ಅಡ್ವಾನಿ ಹಾಟ್ ಅವತಾರ

    ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಮಾಲ್ಡೀವ್ಸ್ ಕಡಲ ತೀರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Kiara Advani

    ಮಾಲ್ಡೀವ್ಸ್‌ನಲ್ಲಿ ಅದ್ಭುತವಾದಂತಹ ಕಾಲ ಕಳೆದ ಕಿಯಾರಾ ಅಡ್ವಾನಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದು, ವೀಡಿಯೋದಲ್ಲಿ ಕಿಯಾರಾ ಬಿಳಿ ಬಣ್ಣದ ಬಿಕಿನಿ ಹಾಗೂ ಸ್ಟೈಲಿಶ್ ಸನ್ ಗ್ಲಾಸ್ ತೊಟ್ಟು ಸಖತ್ ಹಾಟ್ ಆಗಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ನಟ ಧನುಷ್, ಐಶ್ವರ್ಯಾ ಡಿವೋರ್ಸ್- 18 ವರ್ಷದ ವೈವಾಹಿಕ ಸಂಬಂಧಕ್ಕೆ ಗುಡ್‍ಬೈ

    Kiara Advani

    ಇತ್ತೀಚೆಗಷ್ಟೇ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದ ಕಿಯಾರಾ ಅಷ್ಟಾಗಿ ಯಾವುದೇ ಫೋಟೋಗಳನ್ನು ಎಲ್ಲೂ ರಿವೀಲ್ ಮಾಡಿರಲಿಲ್ಲ. ಆದರೆ ಹಲವು ದಿನಗಳ ಗ್ಯಾಪ್ ಬಳಿಕ ಇದೀಗ ಕಿಯಾರಾ ಮಾಲ್ಡೀವ್ಸ್‌ನಲ್ಲಿ ತಾವು ಎಂಜಾಯ್ ಮಾಡಿರುವ ಕೆಲವು ಫೋಟೋ ಹಾಗೂ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ‘ಪುಷ್ಪಾ’ ಸಿನಿಮಾಗೆ ಮುದ್ದಾದ ಗೌರವ ಸಲ್ಲಿಸಿದ ಅಮುಲ್

     

    View this post on Instagram

     

    A post shared by KIARA (@kiaraaliaadvani)

    ಒಂದು ಫೋಟೋದಲ್ಲಿ ಕಿಯಾರ ಬೋಟ್‍ನಲ್ಲಿ ಕುಳಿತು ಆಕಾಶದತ್ತ ನೋಡುತ್ತಿದ್ದರೆ, ಮತ್ತೊಂದರಲ್ಲಿ ಸಮುದ್ರದಲ್ಲಿ ತಮ್ಮ ಕೂದಲನ್ನು ನೆನೆಸುತ್ತಾ ಕಣ್ಣು ಮುಚ್ಚಿ ಇದರಲ್ಲಿಯೂ ಆಕಾಶದತ್ತ ನೋಡಿದ್ದಾರೆ. ಇನ್ನೊಂದರಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದರ ಜೊತೆಗೆ ಬಿಕಿನಿ ತೊಟ್ಟು ದೂರದಿಂದ ಓಡಿ ಬರುತ್ತಿರುವ ಮತ್ತು ಬೋಟ್‍ನಲ್ಲಿ ಪ್ರಯಾಣಿಸುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಕ್ಯಾಪ್ಷನ್‍ನಲ್ಲಿ ಬಟರ್ ಫ್ಲೈ ಎಮೋಜಿಯನ್ನು ಹಾಕಿದ್ದಾರೆ. ಒಟ್ಟಾರೆ ಕಿಯಾರಾ ಹಾಟ್ ಲುಕ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ವೀಡಿಯೋಗೆ ಹಲವಾರು ಲೈಕ್‍ಗಳು ಹರಿದುಬರುತ್ತಿದೆ.

  • ನೀರಿನ ಒಳಗಡೆ ಹಾಟ್ ಅವತಾರ – ಕಿಯಾರಾ ಫೋಟೋ ವೈರಲ್

    ನೀರಿನ ಒಳಗಡೆ ಹಾಟ್ ಅವತಾರ – ಕಿಯಾರಾ ಫೋಟೋ ವೈರಲ್

    ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಬಿಕಿನಿ ಧರಿಸಿ ಹಾಟ್ ಆಗಿ ಪೋಸ್ ಕೊಟ್ಟಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಬಾಲಿವುಡ್ ಚಿತ್ರರಂಗದ ಸ್ಟಾರ್ ನಟರಿಗೆ ಜೋಡಿಯಾಗುವ ಮೂಲಕ ಬಿಟೌನ್‍ನಲ್ಲಿ ಶೈನ್ ಆಗುತ್ತಿರುವ ನಟಿ ಕಿಯಾರಾ ಅಡ್ವಾನಿ ಇತ್ತೀಚೆಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

    ಫೋಟೋದಲ್ಲಿ ಕಿಯಾರಾ ಗ್ರೀನ್ ಕಲರ್ ಬಿಕಿನಿ ತೊಟ್ಟು ಸ್ವಿಮಿಂಗ್ ಪೂಲ್ ಒಳಗೆ ಈಜುತ್ತಿರುವಂತೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಪಡ್ಡೆ ಹುಡುಗರ ನಿದ್ದೆಗೆಡಿಸುವಂತಿದ್ದು, ಕಿಯಾರಾ ಬೋಲ್ಡ್ ಲುಕ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇದನ್ನು ಓದಿ: ಕಂಗನಾ ರಣಾವತ್ ಗನ್ ಮ್ಯಾನ್ ಮಂಡ್ಯದಲ್ಲಿ ಅರೆಸ್ಟ್

    ಫೋಟೋ ಜೊತೆಗೆ ಕಿಯಾರಾ, ಅಲೆಗಳನ್ನು ನೀವು ತಡೆಯಲು ಆಗುವುದಿಲ್ಲ. ಆದರೆ ಈಜುವುದನ್ನು ನೀವು ಕಲಿಯಬಹುದು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಈ ಫೋಟೋವನ್ನು ಕಿಯಾರಾ ತಮ್ಮ ಬಾಯ್ ಫ್ರೆಂಡ್ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದ ವೇಳೆ ಈ ಫೋಟೋವನ್ನು ಕ್ಲಿಕ್ಕಿಸಿರಬಹುದು ಎಂದು ಹೇಳಲಾಗುತ್ತಿದೆ.

     

    View this post on Instagram

     

    A post shared by KIARA (@kiaraaliaadvani)

    ಎಂ.ಎಸ್ ಧೋನಿ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟ ಕಿಯಾರಾ ಮೊದಲ ಸಿನಿಮಾದಲ್ಲಿಯೇ ಖ್ಯಾತಿ ಪಡೆದರು. ನಂತರ ಟಾಲಿವುಡ್‍ನಲ್ಲಿ ಭರತ್ ಅನೆ ನೇನು ಸಿನಿಮಾದಲ್ಲಿ ನಟ ಮಹೇಶ್ ಬಾಬುಗೆ ನಾಯಕಿಯಾಗಿ ಅಭಿನಯಿಸಿದರು. ಇತ್ತೀಚೆಗೆ ನಟ ಶಾಹಿದ್ ಕಪೂರ್‍ಗೆ ಮತ್ತೊಮ್ಮೆ ಸಕ್ಸಸ್ ತಂದು ಕೊಟ್ಟ ಕಬೀರ್ ಸಿಂಗ್ ಚಿತ್ರದಲ್ಲಿ ನಟಿಸಿದ್ದರು. ಕಳೆದ ವರ್ಷ ಲಕ್ಷ್ಮಿ ಬಾಂಬ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಗೆ  ಜೋಡಿಯಾಗಿ ಮಿಂಚಿದ್ದರು.

  • ಮದುವೆಗೂ ಮೊದಲು ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ: ನಟಿ ಕಿಯಾರಾ

    ಮದುವೆಗೂ ಮೊದಲು ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ: ನಟಿ ಕಿಯಾರಾ

    ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಮದುವೆಗೂ ಮೊದಲು ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ಇತ್ತೀಚೆಗೆ ಕಿಯಾರಾ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು, ಮದುವೆಗೂ ಮೊದಲು ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಈ ವ್ಯಕ್ತಿಯ ಜೊತೆ ಮದುವೆಯಾಗಿ ಕೊನೆವರೆಗೂ ಜೊತೆಯಲ್ಲಿರುತ್ತೇನೆ ಎಂಬ ನಂಬಿಕೆ ನಿಮಗಿದ್ದರೆ, ನೀವು ದೈಹಿಕ ಸಂಬಂಧವನ್ನು ಹೊಂದಬಹುದು ಎಂದು ಹೇಳಿದ್ದಾರೆ.

    ಇದೇ ವೇಳೆ ಕಿಯಾರಾ, ನಾನು ಯಾರನ್ನು ಪ್ರೀತಿಸುತ್ತಿಲ್ಲ. ಹಾಗೇನಾದರು ಇದ್ದರೆ ನಾನು ಎಲ್ಲರಿಗೂ ನೇರವಾಗಿಯೇ ಹೇಳುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಕಿಯಾರಾ ‘ಲಕ್ಷ್ಮಿ ಬಾಂಬ್’, ‘ಭೂಲ್‍ಭುಲಯ್ಯ-2’, ‘ಶೇರ್ ಷಾ’ ಹಾಗೂ ‘ಇಂದೂ ಕಿ ಜವಾನಿ’ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ಕಿಯಾರಾ ಕೊನೆಯದಾಗಿ ‘ಕಬೀರ್ ಸಿಂಗ್’ ಹಾಗೂ ‘ಗುಡ್ ನ್ಯೂಸ್’ ಚಿತ್ರದಲ್ಲಿ ನಟಿಸಿದ್ದರು. ಇದೀಗ ಅವರು ಟಾಲಿವುಡ್ ನಟ ಪ್ರಿನ್ಸ್ ಮಹೇಶ್ ಬಾಬು ಅವರ ಹೊಸ ಚಿತ್ರಕ್ಕೆ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಕಿಯಾರಾ ಅಡ್ವಾನಿ ಹಾಗೂ ನಟ ಸಿದ್ಧಾರ್ಥ್ ಮಲ್ಹೋತ್ರಾ ಈ ಹಿಂದೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಿ- ಟೌನ್‍ನಲ್ಲಿ ಹರಿದಾಡುತ್ತಿತ್ತು. ಆದರೆ ಈಗ ಕಿಯಾರಾ ನಾನು ಯಾರನ್ನು ಪ್ರೀತಿಸುತ್ತಿಲ್ಲ ಎಂದು ಹೇಳುವ ಮೂಲಕ ಗಾಸಿಪ್‍ಗಳಿಗೆ ತೆರೆ ಎಳೆದಿದ್ದಾರೆ.

  • ನಟಿ ಜೊತೆ ಬಾಗಿಲು ಮುಚ್ಚಿಕೊಂಡ ಶಾಹಿದ್- ಪತ್ನಿ ಜೊತೆ ಜಗಳ ಆಗುತ್ತೆ ಎಂದು ಟ್ರೋಲ್

    ನಟಿ ಜೊತೆ ಬಾಗಿಲು ಮುಚ್ಚಿಕೊಂಡ ಶಾಹಿದ್- ಪತ್ನಿ ಜೊತೆ ಜಗಳ ಆಗುತ್ತೆ ಎಂದು ಟ್ರೋಲ್

    ಮುಂಬೈ: ಬಾಲಿವುಡ್ ಕಬೀರ್ ಸಿಂಗ್ ನಟ ಶಾಹಿದ್ ಕಪೂರ್ ಅವರು ನಟಿ ಕಿಯಾರಾ ಅಡ್ವಾನಿ ಅವರ ಹುಟ್ಟುಹಬ್ಬದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಾಹಿದ್ ಕಪೂರ್ ಅವರು ನಟಿ ಕಿಯಾರಾ ಜೊತೆ ಬಾಗಿಲು ಕ್ಲೋಸ್ ಮಾಡಿಕೊಂಡಿದ್ದಾರೆ.

    ಕಿಯಾರಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಇದು ಈಗ ಚರ್ಚೆ ಆಗುತ್ತಿದೆ. ವಿಡಿಯೋದಲ್ಲಿ ಶಾಹಿದ್ ಕಪೂರ್ ಹಾಗೂ ಕಿಯಾರಾ ಅಡ್ವಾನಿ ಮಾಧ್ಯಮಗಳ ಕ್ಯಾಮೆರಾಗೆ ಪೋಸ್ ನೀಡಿ ಬಳಿಕ ಡೋರ್ ಕ್ಲೋಸ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಬಾಲಿವುಡ್ ಫೋಟೋಗ್ರಾಫರ್ ವೈರಲ್ ಭಯಾನಿ ಅವರು ಪೋಸ್ಟ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಈಗ 2 ಲಕ್ಷಕ್ಕೂ ಹೆಚ್ಚು ವ್ಯೂ ಬಂದಿದ್ದು, ಜನರು ವಿವಿಧವಾಗಿ ಕಮೆಂಟ್ ಮಾಡುತ್ತಿದ್ದಾರೆ.

    ಈ ವಿಡಿಯೋ ನೋಡಿ ಕೆಲವರು, ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ. ಮೀರಾ (ಶಾಹಿದ್ ಪತ್ನಿ) ಇದನ್ನು ಗಮನಿಸಬೇಕು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅರೇ. ಏನಿದು? ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಮತ್ತೆ ಕೆಲವು ಮಂದಿ, ಈಗ ಶಾಹಿದ್ ಹಾಗೂ ಅವರ ಪತ್ನಿ ಮೀರಾ ನಡುವೆ ಜಗಳ ಆಗುತ್ತಿದೆ ಎಂದು ಹೇಳುವ ಮೂಲಕ ಶಾಹಿದ್ ಕಪೂರ್ ಅವರ ಕಾಲೆಳೆಯುತ್ತಿದ್ದಾರೆ.

    ಕಿಯಾರಾ ಜುಲೈ 31ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದಲ್ಲಿ ಅವರ ಪೋಷಕರು ಹಾಗೂ ತನ್ನ ಸಹೋದರ ಭಾಗಿಯಾಗಿದ್ದರು. ಶಾಹಿದ್ ಕಪೂರ್, ಕರಣ್ ಜೋಹರ್, ಅರ್ಮಾನ್ ಜೈನ್ ಸೇರಿದಂತೆ ಹಲವು ಬಾಲಿವುಡ್ ಕಲಾವಿದರು ಭಾಗಿಯಾಗಿದ್ದರು. ಕಿಯಾರಾ ಹುಟ್ಟುಹಬ್ಬದ ಪಾರ್ಟಿಗೆ ತನ್ನ ಪೋಷಕರ ಜೊತೆ ಬಂದಿದ್ದರು. ಬಳಿಕ ಪಾರ್ಟಿ ಮುಗಿಸಿಕೊಂಡು ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಹೋಗಿದ್ದಾರೆ. ಇದೀಗ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಬಿ-ಟೌನ್‍ನಲ್ಲಿ ಹರಿದಾಡುತ್ತಿದೆ.

     

    View this post on Instagram

     

    370 crores worldwide collection for #kabirsingh ???? #kiaraadvani #shahidkapoor have every reason to party like it is 1999 @viralbhayani

    A post shared by Viral Bhayani (@viralbhayani) on