ನ್ಯಾಷನಲ್ ಸ್ಟಾರ್ ಯಶ್ (Yash) ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾಗಾಗಿ ಅದರ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇದೀಗ ಈ ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಯಶ್ ಜೊತೆ ಕಿಯಾರಾ ಅಡ್ವಾಣಿ `ಟಾಕ್ಸಿಕ್’ ತಂಡ ಸೇರಿಕೊಳ್ತಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇತ್ತೀಚೆಗೆ ನಯನತಾರಾ ಅವರು ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಚಿತ್ರತಂಡಕ್ಕೆ ಸಾಥ್ ಕೊಟ್ಟಿರುವ ಬಗ್ಗೆ ವರದಿ ಆಗಿತ್ತು. ಈಗ ಮುಂದಿನ ಶೆಡ್ಯೂಲ್ ಶೂಟಿಂಗ್ ಬಗ್ಗೆ ಸುಳಿವು ಸಿಕ್ಕಿದೆ. ಅಕ್ಟೋಬರ್ ಅಂತ್ಯದಲ್ಲಿ ಯಶ್ ಜೊತೆ ಕಿಯಾರಾ (Kiara Advani) ಭಾಗದ ಚಿತ್ರೀಕರಣ ಮುಂಬೈನಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ:BBK 11: ಬಿಗ್ ಬಾಸ್ ಮನೆಯಿಂದ ಯಮುನಾ ಔಟ್

45 ದಿನಗಳ ಕಾಲ ಸುದೀರ್ಘವಾಗಿ ಚಿತ್ರೀಕರಣ ನಡೆಯಲಿದ್ದು, ‘ಟಾಕ್ಸಿಕ್’ (Toxic Film) ಚಿತ್ರದ ಜೋಡಿಗಳಾದ ಯಶ್ ಮತ್ತು ಕಿಯಾರಾ ಭಾಗದ ರೊಮ್ಯಾಂಟಿಕ್ ಸೀನ್‌ಗಳ ಶೂಟಿಂಗ್ ಮಾಡಲಿದ್ದಾರೆ ಎನ್ನಲಾಗಿದೆ. ಇನ್ನೂ ಆಗಸ್ಟ್ 8ರಂದು ಸರಳವಾಗಿ ಚಿತ್ರಕ್ಕೆ ಚಾಲನೆ ನೀಡಿದ್ದ ಯಶ್ ಅವರು ತಾರಾಗಣದ ಬಗ್ಗೆ ಚಿತ್ರೀಕರಣದ ಪ್ಲ್ಯಾನಿಂಗ್ ಬಗ್ಗೆ ಎಲ್ಲೂ ಗುಟ್ಟು ಬಿಟ್ಟು ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಅವರು ಚಿತ್ರದ ಬಗ್ಗೆ ಮಾಹಿತಿ ನೀಡ್ತಾರಾ? ಕಾದುನೋಡಬೇಕಿದೆ.
ಇನ್ನೂ ‘ಕೆವಿಎನ್ ಸಂಸ್ಥೆ’ ಜೊತೆ ಯಶ್ ಕೂಡ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಮುಂದಿನ ವರ್ಷ ಏಪ್ರಿಲ್‌ನಲ್ಲಿ ಸಿನಿಮಾ ರಿಲೀಸ್ ಮಾಡಲಿದ್ದಾರೆ. ಇನ್ನೂ ಮೊದಲ ಬಾರಿಗೆ ಯಶ್ ಜೊತೆ ಕಿಯಾರಾ ಅಡ್ವಾಣಿ ನಟಿಸುತ್ತಿರುವ ಕಾರಣ, ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದೆ.



ಈ ಚಿತ್ರದಲ್ಲಿ ಯಶ್ ಸ್ಟೈಲೀಶ್ ಡಾನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದು ಕೆಜಿಎಫ್ ಸರಣಿ (KGF) ಪಾತ್ರಕ್ಕಿಂತಲೂ ತುಂಭಾ ವಿಭಿನ್ನವಾಗಿದೆ. ಅಂಡರ್‌ವರ್ಲ್ಡ್ ಡಾನ್ ಪಾತ್ರಕ್ಕೆ ರಾಕಿ ಭಾಯ್ ಜೀವ ತುಂಬಲಿದ್ದಾರೆ. ಕಿಯಾರಾ (Kiara Advani) ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ರೆ, ನಯನತಾರಾ (Nayanathara) ಅವರು ಯಶ್ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.








ಅಧಿಕೃತವಾಗಿ ತಮ್ಮ ಮದುವೆಯ ಬಗ್ಗೆ ಸಿದ್, ಕಿಯಾರಾ ಹೇಳದೇ ಇದ್ದರೂ ಸದ್ಯಕ್ಕೆ ನಿರ್ಮಾಪಕ ಕರಣ್ ಜೋಹರ್ ಮತ್ತು ನಿರ್ಮಾಪಕಿ ಅಶ್ವಿನಿ ವರ್ಧಿ ಅವರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಿದ್ದಾರಂತೆ. ಎರಡು ಕಡೆಯಿಂದ 100 ಜನರಿಗೆ ಮಾತ್ರ ಮದುವೆಗೆ ಹಾಜರಾಗಲಿದ್ದಾರೆ. ಇದನ್ನೂ ಓದಿ: 


