Tag: ಕಿಯಾ

  • ಫೆಬ್ರವರಿಯಲ್ಲಿ ಅತಿ ಹೆಚ್ಚು ಕಿಯಾ ಕಾರು ಮಾರಾಟ

    ಫೆಬ್ರವರಿಯಲ್ಲಿ ಅತಿ ಹೆಚ್ಚು ಕಿಯಾ ಕಾರು ಮಾರಾಟ

    ನವದೆಹಲಿ: ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ದಕ್ಷಿಣ ಕೊರಿಯಾದ ಕಿಯಾ ಕಂಪನಿಯ ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ.

    ಜನವರಿಯಲ್ಲಿ 14,024 ಕಾರುಗಳು ಮಾರಾಟಗೊಂಡಿದ್ದರೆ ಫೆಬ್ರವರಿಯಲ್ಲಿ 15,644 ಕಾರುಗಳು ಮಾರಾಟಗೊಂಡಿದೆ. ಜನವರಿ ತಿಂಗಳಿಗೆ ಹೋಲಿಸಿದರೆ ಫೆಬ್ರವರಿ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಇಳಿಕೆ ಶೇ.4.4 ರಷ್ಟು ಇಳಿಕೆಯಾಗಿದ್ದರೆ ಈ ಅವಧಿಯಲ್ಲಿ ಕಿಯಾ ಶೇ.1.3 ರಷ್ಟು ಬೆಳವಣಿಗೆ ಸಾಧಿಸಿದೆ.

    ಕಳೆದ ತಿಂಗಳು ಕಿಯಾ 14,024 ಸೆಲ್ಟೋಸ್ ಕಾರು ಮಾರಾಟಗೊಂಡಿದ್ದರೆ ಹೊಸದಾಗಿ ಬಿಡುಗಡೆಯಾದ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಕಾರ್ನಿವಾಲ್ 1,620 ಮಾರಾಟಗೊಂಡಿದೆ.

    ಭಾರತದ ಕಿಯಾದ ಆಡಳಿತ ನಿರ್ದೇಶಕ ಕುಖಿಯಾನ್ ಶಿಮ್ ಪ್ರತಿಕ್ರಿಯಿಸಿ, ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ವಿನ್ಯಾಸವನ್ನು ಭಾರತದ ಜನರು ಮೆಚ್ಚಿಕೊಂಡಿದ್ದಾರೆ. ಉತ್ತಮ ಬೆಲೆಗೆ ಗುಣಮಟ್ಟದ ಕಾರನ್ನು ಜನ ಇಷ್ಟ ಪಟ್ಟಿದ್ದಾರೆ. ಈ ಪ್ರಗತಿಯಿಂದ ನಾವು ಉತ್ಸಾಹಗೊಂಡಿದ್ದು ಎರಡನೇ ಅವಧಿಯಲ್ಲಿ ನಾವು ಕಾಂಪ್ಯಾಕ್ಟ್ ಎಸ್‍ಯುವಿ (ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್) ಸೋನೆಟ್ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಕಿಯಾ ಕಾರ್ನಿವಾಲ್ ಬಿಡುಗಡೆಯಾದ 15 ದಿನಗಳಲ್ಲಿ 3,500 ಬುಕ್ಕಿಂಗ್ ಆಗಿತ್ತು. ಈಗ ಎಷ್ಟು ಕಾರು ಬುಕ್ಕಿಂಗ್ ಆಗಿದೆ ಎನ್ನುವುದನ್ನು ತಿಳಿಸಿಲ್ಲ. ಆದರೆ ಮೊದಲಿಗಿಂತ ದುಪ್ಪಟ್ಟು ಕಾರುಗಳು ಬುಕ್ ಆಗಿದೆ ವರದಿಯಾಗಿದೆ. ಶೋ ರೂಂ ಮಾಲೀಕರು ಹೇಳುವಂತೆ ಮಾದರಿಗೆ ಅನುಗುಣವಾಗಿ ಒಂದು ಕಾರು ಬರಲು ಮೂರು ತಿಂಗಳು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

    ಬೆಂಗಳೂರು ಶೋ ರೂಂ ದರ ಎಷ್ಟಿದೆ?
    ಕಿಯಾ ಸೆಲ್ಟೋಸ್ ಎಚ್‍ಟಿಇ(ಪಟ್ರೋಲ್) 9.89 ಲಕ್ಷ ರೂ., ಎಚ್‍ಟಿಕೆ ಜಿ(ಪೆಟ್ರೋಲ್) 10.29 ಲಕ್ಷ ರೂ. ಎಚ್‍ಟಿಇ (ಡೀಸೆಲ್) 10.34 ಲಕ್ಷ ರೂ. ದರ ಇದೆ. ಹೈ ಎಂಡ್ ಮಾಡೆಲ್ ಎಚ್‍ಟಿಎಕ್ಸ್ ಪ್ಲಸ್ ಎಟಿ ಡಿ(ಡೀಸೆಲ್) 16.34 ಲಕ್ಷ ರೂ. ಇದ್ದರೆ ಜಿಟಿಎಕ್ಸ್ ಪ್ಲಸ್ ಡಿಸಿಟಿ(ಪೆಟ್ರೋಲ್) 17.29 ಲಕ್ಷ ರೂ. ದರ ಇದ್ದರೆ ಜಿಟಿಎಕ್ಸ್ ಪ್ಲಸ್ ಎಟಿಡಿ (ಡೀಸೆಲ್) ಕಾರಿನ ಬೆಲೆ 17.34 ಲಕ್ಷ ರೂ. ಇದೆ.

    ಕಿಯಾ ಕಾರ್ನಿವಾಲ್ 5 ಡೀಸೆಲ್ ಮಾದರಿಯಲ್ಲಿ ಲಭ್ಯವಿದೆ. ಪ್ರೀಮಿಯಂ 24.85 ಲಕ್ಷ ರೂ. ಪ್ರೀಮಿಯಂ 8 ಎಸ್‍ಟಿಆರ್ 25.15 ಲಕ್ಷ ರೂ., ಪ್ರೆಸ್ಟೀಜ್ 28.95 ಲಕ್ಷ ರೂ., ಪ್ರೆಸ್ಟೀಜ್ 9 ಎಸ್‍ಟಿಆರ್ 29.95 ಲಕ್ಷ ರೂ., ಲಿಮೋಸಿನ್ 33.95 ಲಕ್ಷ ರೂ.

  • ಕಿಯಾ ಸ್ವದೇಶಿ ಎಸ್‍ಯುವಿ ಕಾರಿನ ವಿನ್ಯಾಸದ ಮಾದರಿ ಬಿಡುಗಡೆ – ಕಾರಿನ ಬೆಲೆ ಎಷ್ಟಿರಬಹುದು?

    ಕಿಯಾ ಸ್ವದೇಶಿ ಎಸ್‍ಯುವಿ ಕಾರಿನ ವಿನ್ಯಾಸದ ಮಾದರಿ ಬಿಡುಗಡೆ – ಕಾರಿನ ಬೆಲೆ ಎಷ್ಟಿರಬಹುದು?

    ಹೈದರಾಬಾದ್: ದಕ್ಷಿಣ ಕೊರಿಯಾದ ಪ್ರಸಿದ್ಧ ಆಟೋಮೊಬೈಲ್ ಕಂಪನಿ ಕಿಯಾ ಮೋಟಾರ್ಸ್ ಭಾರತದಲ್ಲಿ ಬಿಡುಗಡೆ ಮಾಡಲಿರುವ  ತನ್ನ ಸ್ಪೋರ್ಟ್ ಯುಟಿಲಿಟಿ ವೆಹಿಕಲ್(ಎಸ್‍ಯುವಿ) ಕಾರಿನ ವಿನ್ಯಾಸದ ಮಾದರಿಯನ್ನು ಬಿಡುಗಡೆ ಮಾಡಿದೆ.

    ನೂತನ ಎಸ್‍ಯುವಿ ಕಾರು ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆಯಿದೆ. ಹುಂಡೈ ಕಂಪನಿಯ ಕ್ರೇಟಾ, ಟಾಟಾ ಹ್ಯಾರಿಯರ್, ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ 500 ಪ್ರತಿ ಸ್ಪರ್ಧಿಯಾಗಿ ಕಿಯಾ ಎಸ್‍ಯುವಿ ಎಸ್‍ಪಿ2 ಮಾರಕುಟ್ಟೆಗೆ ಇಳಿಯಲಿದೆ.

    ಮೇಕ್ ಇನ್ ಇಂಡಿಯಾ ಅಭಿಯಾನದ ಅಡಿ ಎಸ್‍ಯುವಿ ಭಾರತದಲ್ಲಿ ತಯಾರಾಗಿ ವಿದೇಶಕ್ಕೆ ರಫ್ತು ಆಗಲಿದೆ. 12 ಲಕ್ಷ ರೂ. ಆರಂಭಿಕ ಬೆಲೆ ಇರುವ ಈ ಕಾರಿನ ಟಾಪ್ ಎಂಡ್ ಆವೃತ್ತಿಗೆ 16 ಲಕ್ಷ ರೂ. ದರ ನಿಗದಿಯಾಗುವ ಸಾಧ್ಯತೆಯಿದೆ.

    ದಕ್ಷಿಣ ಕೊರಿಯಾದ ಎರಡನೇ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಕಿಯಾದಲ್ಲಿ ಶೇ.33.88 ರಷ್ಟು ಷೇರುಗಳನ್ನು ಹುಂಡೈ ಕಂಪನಿ ಖರೀದಿಸಿದೆ.

    ಬೆಂಗಳೂರು ಮತ್ತು ಅನಂತಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಎರ್ರಾಮಂಚಿ ಗ್ರಾಮದಲ್ಲಿ ಕಿಯಾ ಮೋಟಾರ್ಸ್ ತನ್ನ ಘಟಕವನ್ನು ತೆರೆದು ಉತ್ಪಾದನಾ ಕಾರ್ಯವನ್ನು ಆರಂಭಿಸಿದೆ. 536 ಎಕ್ರೆ ಜಾಗದಲ್ಲಿ ಘಟಕ ನಿರ್ಮಾಣವಾಗಿದ್ದು, ಕಿಯಾ 100 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ವಾರ್ಷಿಕವಾಗಿ 3 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡುವ ಗುರಿಯನ್ನು ಕಿಯಾ ಹಾಕಿಕೊಂಡಿದೆ.