Tag: ಕಿಮ್ಸ್ ಆಸ್ಪತ್ರೆ

  • ಬೆಳಗಾವಿಯಿಂದ ಹುಬ್ಬಳ್ಳಿಗೆ ಶಿಫ್ಟ್‌ | ಗರ್ಭಿಣಿ ಸಾವು, ವಿಷ ಸೇವಿಸಿದ ಪತಿ – ಐಸಿಯುನಲ್ಲಿ ಚಿಕಿತ್ಸೆ

    ಬೆಳಗಾವಿಯಿಂದ ಹುಬ್ಬಳ್ಳಿಗೆ ಶಿಫ್ಟ್‌ | ಗರ್ಭಿಣಿ ಸಾವು, ವಿಷ ಸೇವಿಸಿದ ಪತಿ – ಐಸಿಯುನಲ್ಲಿ ಚಿಕಿತ್ಸೆ

    ಧಾರವಾಡ: ತೀವ್ರ ಅನಾರೋಗ್ಯ ಹಿನ್ನೆಲೆ ಬೆಳಗಾವಿಯಿಂದ (Belagavi) ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ (KIMS Hospital) ಶಿಫ್ಟ್‌ ಆಗಿದ್ದ ಗರ್ಭಿಣಿ (Pregnant Women) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಪತ್ನಿ ಮತ್ತು ಮಗು ಸಾವಿನಿಂದ ನೊಂದು ಪತಿ ಕೂಡ ಆಸ್ಪತ್ರೆಯಲ್ಲೇ ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿದೆ.

    ಬೆಳಗಾವಿಯ 19 ವರ್ಷ ರಾಧಿಕಾ ಮೃತ ಗರ್ಭಿಣಿ. ಎಂಟು ತಿಂಗಳ‌ ಗರ್ಭಿಣಿಯಾಗಿದ್ದ ರಾಧಿಕಾ, ಹೊಟ್ಟೆ ನೋವಿನಿಂದ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿತ್ತು.

    ಬಿಮ್ಸ್‌ನಲ್ಲಿ ಸರಿಯಾದ ಚಿಕಿತ್ಸೆ ಇಲ್ಲದ ಕಾರಣ ಬೆಳಗಾವಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಈ ಹೊತ್ತಿಗೆ ರಾಧಿಕಾ ಹೊಟ್ಟೆಯೊಳಗಿದ್ದ ಮಗು ಸಾವನ್ನಪ್ಪಿತ್ತು. ಹೀಗಿದ್ದರೂ ಕಳೆದ 24 ಗಂಟೆಯಿಂದ ಕಿಮ್ಸ್ ವೈದ್ಯರು ರಾಧಿಕಾ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಇಂದು (ಡಿ.31) ಬೆಳಗ್ಗೆ 11 ಗಂಟೆಗೆ ಕೊನೆಯುಸಿರೆಳೆದರು.  ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟ ಕೇಸ್‌ – ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು – 8 ಕ್ಕೇರಿದ ಸಾವಿನ ಸಂಖ್ಯೆ

    ಮಗು ಮತ್ತು ಪತ್ನಿಯ ಸಾವಿನ ಸುದ್ದಿ ತಿಳಿ ಪತಿ ಮಲ್ಲೇಶಿ ಆಸ್ಪತ್ರೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

     

    ಕಿಮ್ಸ್‌ ವೈದ್ಯರು ಹೇಳಿದ್ದೇನು?
    ಈ ಬಗ್ಗೆ ಮಾತನಾಡಿದ ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ, ಬೆಳಗಾವಿಯಿಂದ ಕಿಮ್ಸ್ ಆಸ್ಪತ್ರೆ ಬಂದಾಗಲೇ ಗರ್ಭಿಣಿ ರಾಧಿಕಾ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಬಿಪಿ, ನಾಡಿಮಿಡಿತ ಇರಲಿಲ್ಲ, ರಾಧಿಕಾ ಅವರಿಗೆ ಪ್ರಜ್ಞೆಯೇ ಇರಲಿಲ್ಲ. ಹೊಟ್ಟೆಯಲ್ಲಿ ಮಗು ಮೃತಪಟ್ಟು ಬಹಳಷ್ಟು ಸಮಯವಾಗಿತ್ತು. ಆದರೆ ನಮ್ಮ ವೈದ್ಯರು ಸಕಾಲದಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದರು. ರಾಧಿಕಾ ಅವರಿಗೆ ಪ್ರಜ್ಞೆ ಬಂದಾಗ ಗರ್ಭದಿಂದ ಮಗು ಹೊರ ತೆಗೆಯುವ ಆಲೋಚನೆ ಇತ್ತು. ಆದರೆ ಅವರ ಆರೋಗ್ಯ ಚೇತರಿಕೆ ಆಗಲೇ ಇಲ್ಲ. ಇಂದು ಬೆಳಗ್ಗೆ 11 ಗಂಟೆ ರಾಧಿಕಾ ಸಾವನ್ನಪ್ಪಿದ್ದಾರೆ. ಇದರಿಂದ ಮನನೊಂದು ಆಕೆ ಪತಿ ಮಲ್ಲೇಶಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದು ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಕಿಮ್ಸ್ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ಹೆಣ್ಣು ಮಗು ಎಂದು ತಿಳಿಸಿ, ಸತ್ತ ಗಂಡು ಮಗು ನೀಡಿದ್ದಾರೆ : ಆಸ್ಪತ್ರೆಯ ವಿರುದ್ಧ ತಾಯಿ ಆಕ್ರೋಶ

    ಹೆಣ್ಣು ಮಗು ಎಂದು ತಿಳಿಸಿ, ಸತ್ತ ಗಂಡು ಮಗು ನೀಡಿದ್ದಾರೆ : ಆಸ್ಪತ್ರೆಯ ವಿರುದ್ಧ ತಾಯಿ ಆಕ್ರೋಶ

    ಕೊಪ್ಪಳ: ಹೆಣ್ಣು ಮಗು ಜನಿಸಿದೆ ಎಂದು ತಿಳಿಸಿ, ಸತ್ತಿರುವ ಗಂಡು ಮಗು ನೀಡಿರುವ ಘಟನೆ ಜಿಲ್ಲೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.

    ವಿಜಯನಗರ (Vijayanagar) ಜಿಲ್ಲೆಯ ಹಗರಿಬೊಮ್ಮನಳ್ಳಿ (Hagaribommanahalli) ನಿವಾಸಿಯಾಗಿರುವ ಗೌರಿ ಅವರಿಗೆ ಹೆಣ್ಣು ಮಗು ಜನಿಸಿರುವುದಾಗಿ ತಿಳಿಸಿ ಸತ್ತಿರುವ ಗಂಡು ಮಗುವನ್ನು ನೀಡಿ ಆಸ್ಪತ್ರೆಯ ಸಿಬ್ಬಂದಿ ಯಡವಟ್ಟು ಮಾಡಿದ್ದಾರೆ.ಇದನ್ನೂ ಓದಿ:

    ಸೆ.23 ರಂದು ಗೌರಿ ಕೊಪ್ಪಳ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದರು. ಬಳಿಕ ಸೆ.25 ರಂದು ನಸುಕಿನ ಜಾವ ನಾಲ್ಕು ಗಂಟೆ ಸುಮಾರಿಗೆ ಹೆರಿಗೆಯಾಗಿತ್ತು. ಆ ವೇಳೆ ಹೆಣ್ಣು ಮಗು ಜನಿಸಿರುವುದಾಗಿ ಆಸ್ಪತ್ರೆಯ ಸಿಬ್ಬಂದಿಗಳು ತಿಳಿಸಿದ್ದರು. ಬಳಿಕ ಮಗುವಿನ ತೂಕ ಕಡಿಮೆ ಇದೆ ಎಂದು ತೀವ್ರ ನಿಗಾ ಘಟಕದಲ್ಲಿ (Intensive Care Unit) ಇಡಲಾಗಿತ್ತು. ಆದರೆ ಮಂಗಳವಾರ ಬೆಳಿಗ್ಗೆ ನಿಮ್ಮ ಮಗು ಸಾವನ್ನಪ್ಪಿದೆ. ಮಗುವನ್ನು ತೆಗೆದುಕೊಂಡು ಹೋಗಿ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದರು.

    ಕೊನೆಯ ಬಾರಿ ಮಗುವಿನ ಮುಖ ನೋಡಬೇಕು ಎಂದು ತೀವ್ರ ನಿಗಾ ಘಟಕಕ್ಕೆ ತೆರಳಿದ್ದರು. ಆದರೆ ಆ ಸಮಯದಲ್ಲಿ ಮೃತಪಟ್ಟಿರುವ ಮಗು ಹೆಣ್ಣಲ್ಲಾ, ಗಂಡು ಎನ್ನುವುದಾಗಿ ತಿಳಿದಿದೆ. ಹೀಗಾಗಿ ನಮ್ಮದು ಹೆಣ್ಣು ಮಗು ಆದರೆ ಇಲ್ಲಿ ಸತ್ತಿರುವುದು ಗಂಡು ಮಗು. ನಮ್ಮ ಮಗು ನಮಗೆ ಬೇಕು ಎಂದು ಮಗುವಿನ ತಾಯಿ ಆರೋಪಿಸಿದ್ದಾರೆ.

    ನಿಮಗೆ ಆಗಿರುವುದು ಗಂಡು ಮಗುವೇ ಆದರೆ ಕ್ಲರಿಕಲ್ ಎರರ್‌ನಿಂದ ಹೀಗಾಗಿದೆ. ಓಬಿಜಿ (OGC) ವಿಭಾಗದಿಂದ ಎನ್‌ಐಸಿಯು (NCU) ವಿಭಾಗಕ್ಕೆ ಬರುವಾಗ ಕ್ಲರಿಕಲ್ ಎರರ್ (Clerical Error) ಆಗಿದೆ. ಈ ಬಗ್ಗೆ ತನಿಖೆ ನಡೆಸುತ್ತೇವೆ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.ಇದನ್ನೂ ಓದಿ:

  • ಅಂತ್ಯಕ್ರಿಯೆ ವೇಳೆ ಬದುಕಿದ್ದ ಮಗು ಬಳಿಕ ಸಾವು – ಆಸ್ಪತ್ರೆಯಲ್ಲಿ ಸಾವನ್ನಪ್ಪಿರಲಿಲ್ಲ: ಕಿಮ್ಸ್ ಸ್ಪಷ್ಟನೆ

    ಅಂತ್ಯಕ್ರಿಯೆ ವೇಳೆ ಬದುಕಿದ್ದ ಮಗು ಬಳಿಕ ಸಾವು – ಆಸ್ಪತ್ರೆಯಲ್ಲಿ ಸಾವನ್ನಪ್ಪಿರಲಿಲ್ಲ: ಕಿಮ್ಸ್ ಸ್ಪಷ್ಟನೆ

    ಹುಬ್ಬಳ್ಳಿ/ಧಾರವಾಡ: ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿರುವುದಾಗಿ ನಾವು ತಿಳಿಸಿರಲಿಲ್ಲ. ಮಗು ನಮ್ಮ ಆಸ್ಪತ್ರೆಯಿಂದ ಬಿಡುಗಡೆಯಾದಾಗ ಬದುಕೇ ಇತ್ತು. ಸ್ವ ಇಚ್ಛೆಯಿಂದ ಪಾಲಕರೇ ತಮ್ಮ ಮಗುವನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಕಿಮ್ಸ್ ಆಸ್ಪತ್ರೆ (Hubballi KIMS) ಸ್ಪಷ್ಟನೆ ನೀಡಿದೆ.

    ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವುದಾಗಿ ಭಾವಿಸಿ ಅಂತ್ಯಕ್ರಿಯೆ ವೇಳೆ ಉಸಿರಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿ ಅರುಣ್ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

    ಮಗುವಿನ ಮೆದುಳಿನಲ್ಲಿ ನೀರು ತುಂಬಿಕೊಂಡಿತ್ತು. ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಬದುಕುವ ಸಾಧ್ಯತೆ ಬಹಳಷ್ಟು ಕಡಿಮೆ ಇತ್ತು. ಹೀಗಾಗಿ ಬಾಲಕನ ಪರಿಸ್ಥಿತಿಯನ್ನು ವಿವರಿಸಿ ಬದುಕುವುದು ಕಷ್ಟ ಎಂದು ಪಾಲಕರಿಗೆ ಹೇಳಿದ್ದೆವು. ಹೀಗಾಗಿ ಅವರು ಸ್ವ ಇಚ್ಛೆಯಿಂದಲೇ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.

    ಕಿಮ್ಸ್ ಆಸ್ಪತ್ರೆಯಿಂದ ಮಗು ಬಿಡುಗಡೆಯಾದಾಗ ಮೃತಪಟ್ಟಿರಲಿಲ್ಲ. ಮನೆಗೆ ಹೋಗಿ ಕೆಲವು ಗಂಟೆಗಳ ಬಳಿಕ ಮಗುವನ್ನು ಮತ್ತೆ ಕರೆದುಕೊಂಡು ಬಂದರು. ನಾವು ಅಡ್ಮಿಟ್ ಮಾಡುವಂತೆ ಹೇಳಿದ್ದೇವೆ. ಆದರೆ ಅವರು ಬೇಡ ಎಂದು ಮತ್ತೆ ವಾಪಸ್ ಕರೆದುಕೊಂಡು ಹೋಗಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಧಾರವಾಡದಲ್ಲಿ ವಿಚಿತ್ರ ಘಟನೆ – ಮೃತಪಟ್ಟಿದೆ ಎಂದ ವೈದ್ಯರು, ಅಂತ್ಯಕ್ರಿಯೆ ವೇಳೆ ಉಸಿರಾಡಿದ ಮಗು!

    ಘಟನೆಯೇನು?
    ಹೈಡ್ರೋ ಸೇಫಲಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಒಂದೂವರೆ ವರ್ಷದ ಆಕಾಶ್‌ನನ್ನು ಆಗಸ್ಟ್ 13 ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ವೇಳೆ ಮಗು ಬದುಕುವುದು ಕಷ್ಟ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದರು. ಆದರೆ ಪೋಷಕರು ಮಗು ಮೃತಪಟ್ಟಿದೆ ಎಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಬೆಳಗಾವಿ ವಿಭಜನೆ ಮಾಡೋದಾದರೆ ಮೊದಲ ಆದ್ಯತೆ ಬೈಲಹೊಂಗಲಕ್ಕೆ ಕೊಡಿ: ಜಾರಕಿಹೊಳಿ ಹೇಳಿಕೆಗೆ ವಿರೋಧ

    ಅಂತ್ಯಕ್ರಿಯೆ ಸಂದರ್ಭ ಬಾಯಿಗೆ ನೀರು ಬಿಟ್ಟ ತಕ್ಷಣ ಮಗು ಕೈ ಕಾಲು ಅಲುಗಾಡಿಸಿದೆ. ಮಗು ಉಸಿರಾಡುತ್ತಿದೆ ಎಂಬುದು ಗೊತ್ತಾದ ತಕ್ಷಣ ಗುರುವಾರ ರಾತ್ರಿ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ದುರಾದೃಷ್ಟವಶಾತ್ ಆಕಾಶ್ ಶುಕ್ರವಾರ ಉಸಿರು ಚೆಲ್ಲಿದ್ದಾನೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧಾರವಾಡದಲ್ಲಿ ವಿಚಿತ್ರ ಘಟನೆ – ಮೃತಪಟ್ಟಿದೆ ಎಂದ ವೈದ್ಯರು, ಅಂತ್ಯಕ್ರಿಯೆ ವೇಳೆ ಉಸಿರಾಡಿದ ಮಗು!

    ಧಾರವಾಡದಲ್ಲಿ ವಿಚಿತ್ರ ಘಟನೆ – ಮೃತಪಟ್ಟಿದೆ ಎಂದ ವೈದ್ಯರು, ಅಂತ್ಯಕ್ರಿಯೆ ವೇಳೆ ಉಸಿರಾಡಿದ ಮಗು!

    ಧಾರವಾಡ: ಮೃತಪಟ್ಟಿದೆ ಎಂದು ಭಾವಿಸಿ ಒಂದೂವರೆ ವರ್ಷದ ಮಗುವನ್ನು ಅಂತ್ಯಕ್ರಿಯೆಗೆಂದು ಸ್ಮಶಾನಕ್ಕೆ ತೆಗೆದುಕೊಂಡು ಹೋದಾಗ ಉಸಿರಾಡಿರುವ ವಿಚಿತ್ರ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.

    ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬಸಾಪೂರ ಗ್ರಾಮದಲ್ಲಿ ಬಸವರಾಜ್ ಎಂಬವರ ಮಗ ಒಂದೂವರೆ ವರ್ಷದ ಆಕಾಶ್ ಮೃತಪಟ್ಟಿರುವುದಾಗಿ ಹುಬ್ಬಳ್ಳಿ ಕಿಮ್ಸ್ (KIMS Hospital Hubli) ವೈದ್ಯರು ತಿಳಿಸಿದ್ದರು. ಅನಾರೋಗ್ಯದ ಕಾರಣ ಆಗಸ್ಟ್ 13 ರಂದು ಮಗುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕ್ಸಿಜನ್ ತೆಗೆದರೆ ಮಗು ಸಾವನ್ನಪ್ಪಬಹುದು ಎಂದು ವೈದ್ಯರು ಹೇಳಿದ್ದರು.

    ಆದರೆ ಗುರುವಾರ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದರು. ಈ ಹಿನ್ನೆಲೆ ಮಗುವಿನ ಪೋಷಕರು ಮಗುವನ್ನು ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿದ್ದಾರೆ. ಇದನ್ನೂ ಓದಿ: ಶಾಲಾ ಮಕ್ಕಳಿಗೆ ಗುಡ್‌ನ್ಯೂಸ್ – ಇಂದಿನಿಂದ ವಾರದಲ್ಲಿ 2 ದಿನ ಮೊಟ್ಟೆ ವಿತರಣೆ

    ಅಂತ್ಯಕ್ರಿಯೆ ಮಾಡುವ ಸಂದರ್ಭ ಬಾಯಿಗೆ ನೀರು ಹಾಕಿದ್ದೇ ತಡ ಮಗು ಜೀವಂತವಾಗಿದೆ. ಮಗು ಕೈಕಾಲು ಅಲುಗಾಡಿಸಿದ್ದಕ್ಕೆ ಪೋಷಕರು ಮತ್ತೆ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಮಗುವಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದನ್ನೂ ಓದಿ: ಆಪರೇಷನ್ ಬಿಪಿಎಲ್ ಕಾರ್ಡ್- ಸತ್ತವರ ಹೆಸ್ರಲ್ಲೂ ಅಕ್ಕಿ ಪಡೆಯುತ್ತಿದ್ದ ಕುಟುಂಬಸ್ಥರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ – ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳ ನರಳಾಟ

    ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ – ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳ ನರಳಾಟ

    ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ (KIMS Hospital) ಸಿಬ್ಬಂದಿ ನಿರ್ಲಕ್ಷ್ಯದಿಂದ ಬೇಡ್ ಇಲ್ಲದೆ ಇಬ್ಬರು ಮಹಿಳೆಯರು ಒಂದೇ ಬೆಡ್ ಮೇಲೆ ಮಲಗಿ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆದ ವೀಡಿಯೋ ವೈರಲ್ ಆಗಿದೆ.

    ಕಿಮ್ಸ್ ಪ್ರಸೂತಿ, ಮಹಿಳಾ ಮತ್ತು ಮಕ್ಕಳ ಘಟಕದ ವಾರ್ಡ್‌ನಲ್ಲಿ ಹುಬ್ಬಳ್ಳಿ (Hubballi) ನಿವಾಸಿ ಸರಳಾ ಮತ್ತು ಗ್ರಾಮೀಣ ಭಾಗದ ಮಂಜುಳಾ ಎಂಬ ಮಹಿಳೆಯರು ಚಿಕಿತ್ಸೆ ಪಡೆಯುತ್ತಿದ್ದರು. ಸರಳಾ ಬೆಡ್ ಮೇಲೆ ಮಲಗಿದ್ದು, ಎಚ್ಚರವಾಗಿ ಮೂತ್ರ ವಿಸರ್ಜನೆಗಾಗಿ ಶೌಚಾಲಯಲಕ್ಕೆ ತೆರಳಿದ್ದರು. ಅವರು ವಾಪಸ್‌ ಬರುವಷ್ಟರಲ್ಲಿ ಮಂಜುಳಾ ಎಂಬವರು ಬೆಡ್ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ಇದನ್ನು ಗಮನಿಸಿದ ಸರಳಾ ವಾರ್ಡ್ ನರ್ಸ್‌ಗೆ ತಿಳಿಸಿದ್ದಾರೆ. ನರ್ಸ್ ಬೇರೆ ಬೆಡ್ ವ್ಯವಸ್ಥೆ ಮಾಡುವುದಾಗಿ ತಿಳಿಸಿ, ಬೆಡ್ ಸಿಗುವವರೆಗೂ ನೆಲೆದ ಮೇಲೆ ಮಲಗುವಂತೆ ತಿಳಿಸಿದ್ದಾರೆ.

    ಅದರಂತೆ ಸುಮಾರು 2 ಗಂಟೆ ಸರಳಾ ನೆಲದ ಮೇಲೆ ವಿಶ್ರಾಂತಿ ಪಡೆದು, ಬಳಿಕ ನರ್ಸ್ ಬಳಿ ಹೋಗಿದ್ದಾರೆ. ಆಗ ನರ್ಸ್ ಬೆಡ್ ಸಿಕ್ಕಿಲ್ಲ ಸಿಕ್ಕಾಗ ಕರೆಯುತ್ತೇನೆಂದು ಗದರಿಸಿದ್ದಾರೆ.‌ ಆದರೆ ಸರಳಾಗೆ ಆಪರೇಷನ್ ಆಗಿರುವ ಹಿನ್ನೆಲೆ ಜಾಸ್ತಿ ಹೊತ್ತು ನೆಲದ ಮೇಲೆ ಮಲಗಲು ಆಗಿಲ್ಲ. ಹೀಗಾಗಿ ತಮ್ಮ ಬೆಡ್‌ಗೆ ಹೋಗಿ ಮಂಜುಳಾ ಅನುಮತಿ ಪಡೆದು ಇಬ್ಬರು ಒಂದೇ ಬೆಡ್‌ನಲ್ಲಿ ಮಲಗಿದ್ದಾರೆ.

    ಒಂದೇ ಬೆಡ್‌ನಲ್ಲಿ ಒಬ್ಬರ ಕಾಲ ಬಳಿ ಮತ್ತೊಬ್ಬರ ಮುಖ ಮಾಡಿ ಮಧ್ಯವಯಸ್ಕ ಮಹಿಳೆಯರು ವಿಶ್ರಾಂತಿ ಪಡೆದಿದ್ದಾರೆ. ಸ್ವಲ್ಪ ಆಚೆ, ಈಚೆ ಆದ್ರೆ ನೆಲಕ್ಕೆ ಬೀಳುವ ಸ್ಥಿತಿ, ಆತಂಕದಲ್ಲಿಯೇ ಮೈ ಬಿಗಿ ಹಿಡಿದುಕೊಂಡು ಮಲಗಿದ್ದಾರೆ. ಒಂದೇ ಬೆಡ್‌ನಲ್ಲಿ ಇಬ್ಬರು ನರಳಾಡುವ ದೃಶ್ಯ ಕಂಡು ಸಹ ರೋಗಿ ಸಂಬಂಧಿ ಈ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೋ ಈಗ ಫುಲ್ ವೈರಲ್ ಆಗಿದೆ.

    ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚರವಾಗದ ಕಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿ ಪ್ರಕರಣಕ್ಕೆ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ. ಆ ಸಮಯದಲ್ಲಿ ಹೆಚ್ಚು ಜನ ರೋಗಿಗಳು ದಾಖಲಾದ ಹಿನ್ನೆಲೆ ಬೆಡ್ ಅಭಾವ ಸೃಷ್ಟಿಯಾಗಿತ್ತು. ಇದರಲ್ಲಿ ನಮ್ಮ ಸಿಬ್ಬಂದಿಯದ್ದು ತಪ್ಪಾಗಿದೆ. ಮುಂದೆ ಈ ರೀತಿಯಲ್ಲಿ ಆಗದಂತೆ ಎಚ್ಚರ ವಹಿಸುತ್ತೇವೆ ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಸ್ಪಷ್ಟನೆ ನೀಡಿದ್ದಾರೆ.

    ಒಟ್ಟಿನಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿ ಬಡರೋಗಿಗಳ ಆರೈಕೆಗೆ ನೇಮಕ ಮಾಡಿರುವ ಸಿಬ್ಬಂದಿ ನಿರ್ಲಕ್ಷ್ಯದಿಂದ ರೋಗಿಗಳು ನಿತ್ಯ ನರಕದರ್ಶನ ಮಾಡುವಂತಾಗಿದೆ. ಮೊನ್ನೆ ನೆಲದ ಮೇಲೆ ವೃದ್ಧೆಗೆ ಚಿಕಿತ್ಸೆ ನೀಡಿ ಸುದ್ದಿಯಾಗಿದ್ದ ಕಿಮ್ಸ್ ಆಡಳಿತ ಮಂಡಳಿ, ಈಗ ಮತ್ತೆ ಅಂತಹದ್ದೇ ತಪ್ಪು ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

  • ವೃದ್ಧೆಗೆ ಬೆಡ್ ನೀಡದೆ ನೆಲದ ಮೇಲೆ ಕೂರಿಸಿ ಚಿಕಿತ್ಸೆ ನೀಡಿದ ವೈದ್ಯರು

    ವೃದ್ಧೆಗೆ ಬೆಡ್ ನೀಡದೆ ನೆಲದ ಮೇಲೆ ಕೂರಿಸಿ ಚಿಕಿತ್ಸೆ ನೀಡಿದ ವೈದ್ಯರು

    ಹುಬ್ಬಳ್ಳಿ: ಚಿಕಿತ್ಸೆಗೆಂದು ಬಂದ ವೃದ್ಧೆಗೆ ಬೆಡ್ ನೀಡದೆ ನೆಲೆದ ಮೇಲೆ ಕೂರಿಸಿ ವೈದ್ಯರು (Doctor) ಚಿಕಿತ್ಸೆ ನೀಡಿದ ಘಟನೆ ಹುಬ್ಬಳ್ಳಿ (Hubballi) ಕಿಮ್ಸ್ ಆಸ್ಪತ್ರೆಯಲ್ಲಿ (Hospital) ನಡೆದಿದೆ.

    ಹುಬ್ಬಳ್ಳಿಯನ್ನು ವಿಶ್ವದರ್ಜೆಯ ನಗರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಮಾತ್ರ ಇನ್ನೂ ಕೆಳಹಂತದ ಕರ್ಮಕಾಂಡದಲ್ಲಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಕುಂದಗೋಳ ತಾಲೂಕಿನ ಚೆನ್ನವ್ವ (67) ಎಂಬ ವೃದ್ಧೆ ಚಿಕಿತ್ಸೆಗೆಂದು ಹುಬ್ಬಳ್ಳಿ ಕಿಮ್ಸ್ ಬಂದಿದ್ದರು. ವೃದ್ಧೆ ನರಳಾಡುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಕಿಮ್ಸ್ ವೈದ್ಯರು, ನೆಲದ ಮೇಲೆ ಕೂರಿಸಿ ಚೆನ್ನವ್ವಗೆ ಚಿಕಿತ್ಸೆ ನೀಡಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಕಳ್ಳತನವಾದ ಬಸ್ ತೆಲಂಗಾಣದಲ್ಲಿ ಪತ್ತೆ

    ಗ್ಲೂಕೋಸ್‌ ಬಾಟಲಿ ಹಾಕಲು ಸ್ಟಾಂಡ್ ಸಹ ನೀಡಿರಲಿಲ್ಲ. ಇದರಿಂದಾಗಿ ಚೆನ್ನವ್ವ ಸಂಬಂಧಿಕರು ಬಾಟಲಿಯನ್ನು ಕೈಯಲ್ಲಿ ಹಿಡಿದು ನಿಲ್ಲಬೇಕಾಯಿತು. ಕಿಮ್ಸ್ ವೈದ್ಯರ ಅನಾಗರಿಕತೆ ಪ್ರದರ್ಶನದ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬಡವರ ಆರೋಗ್ಯ ಎಂದರೆ ಕಿಮ್ಸ್ ವೈದ್ಯರಿಗೆ ಬೆಲೆನೇ ಇಲ್ವಾ, ಹಿರಿಯ ನಾಗರಿಕರ ಮೇಲೆ ಕಿಮ್ಸ್ ವೈದ್ಯರಿಗೆ ಯಾಕಿಷ್ಟು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಜನ ಪ್ರಶ್ನೆ ಮಾಡುವಂತಾಗಿದೆ. ಇದನ್ನೂ ಓದಿ: 1 ರೂ. ಚಿಲ್ಲರೆ ನೀಡದ ಕಂಡಕ್ಟರ್- ನ್ಯಾಯಾಲಯದ ಮೆಟ್ಟಿಲೇರಿದ ಪ್ರಯಾಣಿಕ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಸ್ತೆ ಅಪಘಾತಕ್ಕೆ 5ರ ಮಗು ಬಲಿ – ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ರಸ್ತೆ ಅಪಘಾತಕ್ಕೆ 5ರ ಮಗು ಬಲಿ – ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ಹುಬ್ಬಳ್ಳಿ: ಮೇ 20ರಂದು ಧಾರವಾಡ ಜಿಲ್ಲೆಯಲ್ಲಿ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

    ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ 5 ವರ್ಷದ ಮಗು ಸೇರಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ 9 ಮಂದಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ

    ACCIDENT

    ಆರಾಧ್ಯ ಹುತಮಲ್ಲಣ್ಣವರ (5) ಹಾಗೂ ಮುತ್ತು ಮರಿಗೌಡ (16) ಎಂಬವರೇ ಮೃತಪಟ್ಟವರು. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಇಬ್ಬರನ್ನು 6 ದಿನಗಳ ಹಿಂದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಶೀಲ ಶಂಕಿಸಿ ತಲೆ ಹಿಡಿದು ನೆಲಕ್ಕೆ ಜಜ್ಜಿದ ಪತಿ – ಸ್ಥಳದಲ್ಲೇ ಪತ್ನಿ ಸಾವು 

    ಇದೇ ಮೇ 20 ರಂದು ಧಾರವಾಡದ ಬಾಡ ಬಳಿ ನಿಶ್ಚಿತಾರ್ಥ ಮುಗಿಸಿಕೊಂಡು ಹೊರಟಿದ್ದ ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಮೃತಪಟ್ಟಿದ್ದರು. ಐಸಿಯುನಲ್ಲಿದ್ದ ಇಬ್ಬರು ಇಂದು ಮೃತಪಟ್ಟಿದ್ದು ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

  • ಡೇಟಾ ಪ್ಯಾಕ್‌ ಹಾಕಲು ಹಣ ನೀಡಲ್ಲವೆಂದು ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡ ಯುವಕ

    ಡೇಟಾ ಪ್ಯಾಕ್‌ ಹಾಕಲು ಹಣ ನೀಡಲ್ಲವೆಂದು ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡ ಯುವಕ

    ಹುಬ್ಬಳ್ಳಿ: ವ್ಯಕ್ತಿಯೊಬ್ಬ ಮೊಬೈಲ್ ಡೇಟಾ ಹಾಕಿಸಲು  ಹಣ ನೀಡಿಲ್ಲವೆಂದು ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡ ಘಟನೆ ಧಾರವಾಡ ತಾಲೂಕಿನ ನವಲೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ನಿವಾಸಿ ಬಸವರಾಜ ಅವರ ಮಗ ಮೈಲಾರಿ ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡ ಯುವಕ. ಕೇವಲ ಆರನೇಯ ತರಗತಿ ಓದಿರುವ ಮೈಲಾರಿಯ ವಯಸ್ಸು 20 ದಾಟಿದ್ದರು, ಯಾವುದೇ ಕೆಲಸ ಮಾಡದೇ ಕಾಲ ಕಳೆಯುತ್ತಿದ್ದ. ಜೊತೆಗೆ ಮೊಬೈಲ್ ಹುಚ್ಚು ಜಾಸ್ತಿ ಹಿಡಿಸಿಕೊಂಡಿದ್ದ. ನಿನ್ನೆ ಮೈಲಾರಿಯ ಮೊಬೈಲ್ ಕರೆನ್ಸಿ ಖಾಲಿಯಾಗಿತ್ತು. ಹೀಗಾಗಿ ಮೈಲಾರಿ ತನ್ನ ತಂದೆ ಬಳಿ ಹಣ ಕೇಳಿದ್ದಾನೆ. ಆದರೆ ತಂದೆ ಮೊಬೈಲ್‍ಗೆ ಕರೆನ್ಸಿ ಹಾಕಿಸಲು ಒಪ್ಪಿರಲಿಲ್ಲ. ಈ ಕಾರಣಕ್ಕಾಗಿ ಮನೆಯಲ್ಲಿ ಜಗಳವಾಗಿದೆ. ಇದರಿಂದಾಗಿ ಕೋಪಗೊಂಡ ಯುವಕ ಗೊರಪ್ಪನ ವೇಶ ಹಾಕಿಕೊಂಡು ಮನೆಯ ಹತ್ತಿರ ದೇವಸ್ಥಾನಕ್ಕೆ ತೆರಳಿದ್ದಾನೆ. ದೇವಸ್ಥಾನಕ್ಕೆ ತೆರಳಿ ಅಲ್ಲಿರುವ ತ್ರಿಶೂಲವನ್ನು ತನ್ನ ಮರ್ಮಾಂಗಕ್ಕೆ ಚುಚ್ಚಿಕೊಂಡು ಅಸ್ವಸ್ಥನಾಗಿ ಬಿದ್ದಿದ್ದಾನೆ. ಇದನ್ನೂ ಓದಿ: ಲವ್ವರ್‌ ಭೇಟಿ ಮಾಡಲು ಗ್ರಾಮದ ಕರೆಂಟ್ ಕಟ್ ಮಾಡುತ್ತಿದ್ದ ಲೈನ್‌ಮ್ಯಾನ್

    ಇದನ್ನು ಕಂಡ ಸ್ಥಳೀಯರು ಅವರ ತಂದೆ ಬಸವರಾಜರಿಗೆ ವಿಷಯ ತಿಳಿಸಿದ್ದಾರೆ. ಸದ್ಯ ಮೈಲಾರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಪರೇಷನ್ ಮಾಡಿ ತ್ರಿಶೂಲ ಹೊರ ತೆಗೆಯಲಾಗಿದೆ. ಮೈಲಾರಿ ಮೊದಲಿಂದಲೂ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಂಡಿದ್ದ. ಆತನ ತಂದೆ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಖಾಲಿಯಾಗಿ ತಿರುಗಾಡುತ್ತಿದ್ದ ಮೈಲಾರಿ, ತನ್ನ ಬೇಸರ ಕಳೆಯಲು ಮೊಬೈಲ್ ನೆಚ್ಚಿಕೊಂಡಿದ್ದನು.  ಇದನ್ನೂ ಓದಿ: ಚಂಡಮಾರುತ ಎಫೆಕ್ಟ್- ಸಮುದ್ರದಲ್ಲಿ ತೇಲಿ ಬಂತು ಚಿನ್ನದ ರಥ!

    ಆದರೆ ದುಡಿಯದ ಮಗನನ್ನು ಕಂಡು ತಂದೆಗೆ ಸಹಜವಾಗಿ ಬೇಸರದ ಭಾವನೆಯಿತ್ತು. ಈ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳ ಕೂಡವಾಗುತಿತ್ತು. ಆದರೆ ಮೊನ್ನೆ ಜಗಳದಿಂದ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಮನೆಬಿಟ್ಟು ಹೋದ ಮೈಲಾರಿ, ಈ ಅನಾಹುತವನ್ನು ಮಾಡಿಕೊಂಡಿದ್ದಾನೆ.

  • ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಹುಚ್ಚಾಟ ನಡೆಸಿ ಆಸ್ಪತ್ರೆ ಸೇರಿದ ಉಗ್ರ

    ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಹುಚ್ಚಾಟ ನಡೆಸಿ ಆಸ್ಪತ್ರೆ ಸೇರಿದ ಉಗ್ರ

    ಹುಬ್ಬಳ್ಳಿ: ಧಾರವಾಡ ಕೇಂದ್ರ ಕಾರಾಗೃಹದಲ್ಲಿ ವಿವಿಧ ಬೇಡಿಕೆಯಿಟ್ಟು ಏಳು ದಿನಗಳಿಂದ ಉಪವಾಸ ಮಾಡಿ ಹುಚ್ಚಾಟ ನಡೆಸಿದ ಉಗ್ರ ಈಗ ಆಸ್ಪತ್ರೆ ಸೇರಿದ್ದಾನೆ.

    ಮೊಹಮ್ಮದ್ ಫಹಾದ್ (42) ಜೈಲಿನಲ್ಲಿ ಹುಚ್ಚಾಟ ನಡೆಸಿದ ಉಗ್ರ. ಕೆಆರ್‍ಎಸ್ ಡ್ಯಾಂ ಸೇರಿದಂತೆ ದೇಶದ ವಿವಿಧ ಕಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಮೊಹಮ್ಮದ್ ಫಹಾದ್‍ನನ್ನು, 2006ರ ಅಕ್ಟೋಬರ್ 26ರಲ್ಲಿ ಬಂಧಿಸಲಾಗಿತ್ತು. ಮೊದಲಿಗೆ ಮೈಸೂರು ಜೈಲಿನದ್ದ ಮೊಹಮ್ಮದ್‍ನ್ನನ್ನು, ಕಳೆದ ವರ್ಷ ಧಾರವಾಡ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಇದನ್ನೂ ಓದಿ: ಲವ್ವರ್‌ ಭೇಟಿ ಮಾಡಲು ಗ್ರಾಮದ ಕರೆಂಟ್ ಕಟ್ ಮಾಡುತ್ತಿದ್ದ ಲೈನ್‌ಮ್ಯಾನ್

    ತನ್ನ ಮೇಲಿರುವ ಪ್ರಕರಣಗಳ ತನಿಖೆ ಶೀಘ್ರವಾಗಿ ಪೂರ್ಣ ಮಾಡಬೇಕು. ತನ್ನ ಸಹಚರರು ಇರುವ ಬೆಂಗಳೂರು ಅಥವಾ ಕಾಶ್ಮೀರ ಜೈಲಿಗೆ ಸ್ಥಳಾಂತರಿಸಬೇಕು ಜೊತೆಗೆ ಬೇರೆ ಖೈದಿಗಳ ಜೊತೆಗೆ ಬೇರೆಯುವ ಅವಕಾಶ ನೀಡಬೇಕೆಂದು ಉಗ್ರ ಪಟ್ಟು ಹಿಡಿದಿದ್ದ. ಖೈದಿಯ ಬೇಡಿಕೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವ ಭರವಸೆಯನ್ನು ಜೈಲರ್ ನೀಡಿದ್ದರು. ಇದನ್ನೂ ಓದಿ: ಥೈಲ್ಯಾಂಡ್ ಪೂಲ್‌ನಲ್ಲಿ ಮೈಮರೆತ ಮಂದಿರಾ ಬೇಡಿ

    ಹೀಗಿದ್ದರೂ, ಕಳೆದ ಏಳು ದಿನಗಳಿಂದ ಉಪವಾಸ ಮಾಡಿ ಉಗ್ರ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಸದ್ಯ ಕಿಮ್ಸ್ ಉಗ್ರನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  • ರಾಜ್ಯದ ಮೊದಲ ಕಿಡ್ನಿ ಕಸಿಮಾಡಲು ಅನುಮತಿ ಪಡೆದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ

    ರಾಜ್ಯದ ಮೊದಲ ಕಿಡ್ನಿ ಕಸಿಮಾಡಲು ಅನುಮತಿ ಪಡೆದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ

    ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯು ಕಿಡ್ನಿ ಕಸಿ ಮಾಡಲು ಅನುಮತಿಯನ್ನು ಪಡೆದ ರಾಜ್ಯದ ಮೊದಲ ಆಸ್ಪತ್ರೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಈ ಭಾಗದ ರೋಗಿಗಳು ಕಿಡ್ನಿ ಕಸಿ ಮಾಡಿಸಿಕೊಳ್ಳಲು, ಬೆಂಗಳೂರು, ಮುಂಬೈನಂತ ಮಹಾನಗರಗಳಿಗೆ ಹೋಗುವ ಅನಿವಾರ್ಯತೆ ಈ ಹಿಂದಿತ್ತು. ಜೊತೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂ. ಖರ್ಚು ಮಾಡಬೇಕಿತ್ತು. ಹೀಗೆ ಮಾಡಲು ಶಕ್ತರಿಲ್ಲದವರು, ಸಕಾಲಕ್ಕೆ ಚಿಕಿತ್ಸೆ ಪಡೆಯದೆ ಸಾವಿಗೀಡಾದ ಉದಾಹರಣೆಗಳಿವೆ. ಇದನ್ನೂ ಓದಿ:  ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

    ಈ ದಿಸೆಯಲ್ಲಿ ಕಿಮ್ಸ್ ಆಡಳಿತ ಮಂಡಳಿ, ಕಿಮ್ಸ್‍ನಲ್ಲಿಯೇ ಕಿಡ್ನಿ ಕಸಿ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕಿಮ್ಸ್ ಮನವಿಯನ್ನು ಒಪ್ಪಿಕೊಂಡ ಸರ್ಕಾರ, ಕಳೆದ ಫೆಬ್ರವರಿ 18ಕ್ಕೆ ಕಿಡ್ನಿ ಕಸಿಗೆ ಅನುಮತಿ ನೀಡಿದೆ. ಈ ಮೂಲಕ ಕಿಡ್ನಿ ಕಸಿಗೆ ಅನುಮತಿ ಪಡೆದ ರಾಜ್ಯದ ಏಕೈಕ ಸರ್ಕಾರಿ ಮೆಡಿಕಲ್ ಕಾಲೇಜು ಎಂಬ ಹೆಗ್ಗಳಿಕೆಗೆ ಕಿಮ್ಸ್ ಪಾತ್ರವಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬ್ರಾಹ್ಮಣರನ್ನು ಸಿಎಂ ಆಗಿ ನೋಡಲು ಬಯಸುತ್ತೇನೆ: ರಾವ್‍ಸಾಹೇಬ್ ಪಾಟೀಲ್ ದಾನ್ವೆ

    ಇಷ್ಟು ದಿನ ಸರಿಯಾದ ಚಿಕಿತ್ಸೆಯಿಲ್ಲದೆ ಕಿಡ್ನಿ ಸೋಂಕಿನಿಂದ ಬಳಲಿ ಸಾವನ್ನಪ್ಪುತಿದ್ದ ಬಡ ರೋಗಿಗಳ ಪಾಲಿಗೆ ಕಿಮ್ಸ್ ಮತ್ತೊಂದು ಸಂಜೀವಿನಿಯಾಗಿದೆ.