Tag: ಕಿನ್ಯಾ

  • ಕೀನ್ಯಾ ಮಕ್ಕಳ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ಭರ್ಜರಿ ಡ್ಯಾನ್ಸ್

    ಕೀನ್ಯಾ ಮಕ್ಕಳ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ಭರ್ಜರಿ ಡ್ಯಾನ್ಸ್

    ಸ್ಯಾಂಡಲ್‌ವುಡ್‌ನ (Sandalwood) ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಸದ್ಯ `ಬಾನದಾರಿಯಲಿ’ (Banadariyali)  ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಚಿತ್ರೀಕರಣಕ್ಕಾಗಿ ಗಣೇಶ್ ಕೀನ್ಯಾಗೆ ಹಾರಿದ್ದಾರೆ. ಈ ವೇಳೆ ಕಿನ್ಯಾ ಮಕ್ಕಳ ಜೊತೆ ಗಣೇಶ್ ಹೆಜ್ಜೆ ಹಾಕಿರುವ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    `ದಿಲ್ ರಂಗೀಲಾ’ (Dilrangeela) ಮತ್ತು `99′ ಚಿತ್ರದ `ಬಾನದಾರಿಯಲಿ’ ನಂತರ ಮತ್ತೆ ಪ್ರೀತಂ ಗುಬ್ಬಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಆ್ಯಕ್ಷನ್ ಕಟ್ ಹೇಳಲಿ ಸಜ್ಜಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಕೂಡ ಭರ್ಜರಿ ಆಗಿ ನಡೆಯುತ್ತಿದ್ದು, ಈ ಸಿನಿಮಾದಮ ಶೂಟಿಂಗ್‌ಗಾಗಿ ಕಿನ್ಯಾಗೆ ಹಾರಿದ್ದಾರೆ. ಕೀನ್ಯಾ ಮಕ್ಕಳ ಜೊತೆ ಗಣೇಶ್ ಖುಷಿಯಿಂದ ಕುಣಿದಿದ್ದಾರೆ. ಈ ವೀಡಿಯೋಗೆ ಅಪಾರ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ:ಗನ್ ಹಿಡಿದು ಫೀಲ್ಡಿಗಿಳಿದ ರಾಕಿಭಾಯ್: ಮುಂದಿನ ಸಿನಿಮಾಗೆ ಯಶ್ ತಯಾರಿ

    ಇನ್ನೂ ಈ ಚಿತ್ರದಲ್ಲಿ ಗಣೇಶ್ ಭಿನ್ನ ಕಥೆ ಮತ್ತು ಪಾತ್ರದ ಮೂಲಕ ರಂಜಿಸಲು ರೆಡಿಯಾಗಿದ್ದಾರೆ. ಗಣೇಶ್‌ಗೆ ನಾಯಕಿಯರಾಗಿ ಕೊಡಗಿನ ಕುವರಿ ರೀಷ್ಮಾ ಮತ್ತು ರುಕ್ಮಿಣಿ ವಸಂತ್ ಕಾಣಿಸಿಕೊಳ್ಳುತ್ತಿದ್ದಾರೆ.

    `ಗಾಳಿಪಟ 2′ (Galipata 2) ಚಿತ್ರದ ಸಕ್ಸಸ್ ನಂತರ `ಬಾನದಾರಿಯಲಿ’ ಈ ಚಿತ್ರದ ಮೂಲಕ ಗಣೇಶ್ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಹೂಸು ವಾಸನೆ ತಾಳಲಾರದೆ ಕಲಾಪ ಮುಂದೂಡಿಕೆ

    ಹೂಸು ವಾಸನೆ ತಾಳಲಾರದೆ ಕಲಾಪ ಮುಂದೂಡಿಕೆ

    ಕೀನ್ಯಾ: ಹೂಸು ವಾಸನೆ ತಾಳಲಾರದೆ ಕಲಾಪ ಮುಂದೂಡಿದ ವಿಚಿತ್ರ ಪ್ರಸಂಗವೊಂದು ಕಿನ್ಯಾದಲ್ಲಿ ನಡೆದಿದೆ.

    ಕೀನ್ಯಾದ ಹೇಮಾ ಬೇ ಕೌಂಟಿ ಅಸೆಂಬ್ಲಿಯಲ್ಲಿ ಬುಧವಾರ ಕಲಾಪ ನಡೆದಿತ್ತು. ಈ ವೇಳೆ ಸದಸ್ಯರೊಬ್ಬರು ಹೂಸು ಬಿಟ್ಟಿದ್ದರಿಂದ ಭಾರೀ ದುರ್ವಾಸನೆ ಉಂಟಾಗಿತ್ತು. ಪರಿಣಾಮ ಕಲಾಪದಲ್ಲಿದ್ದ ಸದಸ್ಯರು ಹಾಗೂ ಸಿಬ್ಬಂದಿ ಪರದಾಡುವಂತಾಗಿತ್ತು.  ಇದನ್ನೂ ಓದಿ: ಹೂಸಿನ ದುರ್ವಾಸನೆಯನ್ನು ಸುವಾಸನೆಯಾಗಿ ಮಾಡೋ ಮಾತ್ರೆ ಮಾರುಕಟ್ಟೆಗೆ ಎಂಟ್ರಿ

    ಅಸೆಂಬ್ಲಿಯಲ್ಲಿ ದುರ್ವಾಸನೆ ಹರಡುತ್ತಿದ್ದಂತೆ ಅಸಮಾಧಾನ ಹೊರ ಹಾಕಿದ ಸ್ಪೀಕರ್ ಎಡ್ವಿನ್ ಕಾಕಾಚ್ ಅವರು, ನಮ್ಮ ಸದಸ್ಯದಲ್ಲಿ ಒಬ್ಬರು ಹೂಸು ಬಿಟ್ಟಿದ್ದಾರೆ. ಅವರು ಯಾರು ಅಂತ ನನಗೆ ಗೊತ್ತಿದೆ ಎಂದು ಹೇಳಿದರು.

    ತಕ್ಷಣವೇ ಆರೋಪ ಎದುರಿಸಿದ ಸದಸ್ಯರೊಬ್ಬರು ಎದ್ದು ನಿಂತು, ನಾನು ಹೂಸು ಬಿಟ್ಟಿಲ್ಲ. ಸಹೋದ್ಯೋಗಿಗಳ ಮುಂದೆ ಅಂತಹ ಕೆಟ್ಟ ಕೆಲಸ ಮಾಡುವವನು ನಾನಲ್ಲ ಎಂದು ಸ್ಪಷ್ಟನೆ ನೀಡಿದರು.

    ಸ್ಪೀಕರ್ ಎಡ್ವಿನ್ ಕಾಕಾಚ್ ಅವರು ಸಿಬ್ಬಂದಿಯನ್ನು ಕರೆದು ಏರ್ ಫ್ರೆಶನರ್, ವೆನಿಲ್ಲಾ ಅಥವಾ ಸ್ಟ್ರಾಬೆರಿ ಸುಗಂಧವನ್ನು ತಂದು ರೂಮ್‍ಗೆ ಸ್ಪೇಪ್ರೆ ಮಾಡಿ ಎಂದು ಸೂಚನೆ ನೀಡಿದರು. ಇದೇ ವೇಳೆ, ಇಂತಹ ದುರ್ವಾಸನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿ, ಸದನವನ್ನು ಕೆಲ ಸಮಯ ಮುಂದೂದರು ಎಂದು ವರದಿಯಾಗಿದೆ.

    ಹೂಸು ವಾಸನೆಗೆ ಕಲಾಪ ಮುಂದೂಡಿದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಕಿನ್ಯಾ ಸಂಸತ್‍ಗೆ ಮಹಿಳಾ ಸದಸ್ಯರೊಬ್ಬರು ಮಗುವನ್ನು ಹೊತ್ತುಕೊಂಡು ಬಂದಿದ್ದರು. ಮಗುವನ್ನು ನೋಡಿದ ಸ್ಪೀಕರ್ ಅವರು ಮಗುವನ್ನು ಎತ್ತಿಕೊಂಡು ಕಲಾಪದಿಂದ ಹೊರ ಹೋಗುವಂತೆ ಸೂಚನೆ ನೀಡಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.

  • ಕೀನ್ಯಾದಲ್ಲಿ ಭಾರತೀಯ ನಿರ್ಮಿಸಿದ್ದ ಡ್ಯಾಮ್ ಒಡೆದು 47 ಜನ ಸಾವು

    ಕೀನ್ಯಾದಲ್ಲಿ ಭಾರತೀಯ ನಿರ್ಮಿಸಿದ್ದ ಡ್ಯಾಮ್ ಒಡೆದು 47 ಜನ ಸಾವು

    ನೈರೋಬಿ: ಕೀನ್ಯಾದ ರಿಫ್ಟ್ ವ್ಯಾಲಿಯ ಸೊಲೈ ಪಟ್ಟಣದ ಬಳಿ ಭಾರತೀಯ ಮೂಲದ ಮನ್ಸೂಕಲ್ ಪಟೇಲ್ ನಿರ್ಮಿಸಿದ್ದ ಅಣೆಕಟ್ಟು ಒಡೆದು 47 ಮಂದಿ ಮೃತಪಟ್ಟಿದ್ದಾರೆ.

    ಮನ್ಸೂಕಲ್ ಪಟೇಲ್ ಅವರ ಒಡೆತನದ ಮೂರು ಜಲಾಶಯಗಳಲ್ಲಿ ಇದು ಒಂದಾಗಿದೆ. ಈ ಜಲಾಶಯದ ನೀರನ್ನು ಮೀನುಗಾರಿಕೆ ಹಾಗೂ ಕೃಷಿಗಾಗಿ ಬಳಸಲಾಗುತ್ತಿತ್ತು. ಕೀನ್ಯಾದಿಂದ ಯುರೋಪ್‍ಗೆ ಹೆಚ್ಚಿನ ಪ್ರಮಾಣದಲ್ಲಿ ಹೂವುಗಳು ರಫ್ತಾಗುತ್ತಿತ್ತು. ಅಲ್ಲದೇ ಪಟೇಲ್ ಅವರು ಜರ್ಮನಿ ಹಾಗೂ ನೆದರ್ಲೆಂಡ್‍ಗೆ ಹೂವುಗಳನ್ನು ರಫ್ತು ಮಾಡುತ್ತಿದ್ದರು ಎನ್ನಲಾಗುತ್ತಿದೆ.

    ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಡ್ಯಾಮ್ ಒಡೆದಿದ್ದು, ನೀರು ಹಾಗೂ ಕೆಸರು ಸಮೀಪದ ಎರಡು ಹಳ್ಳಿಗಳಿಗೆ ನುಗ್ಗಿದೆ. ಹೀಗಾಗಿ ಅಲ್ಲಿನ ನೂರಾರು ಮನೆಗಳು ಹಾನಿಯಾಗಿವೆ. ಅಲ್ಲದೇ ವಿದ್ಯುತ್ ವ್ಯತ್ಯಯವಾಗಿದ್ದು, ನೀರಿನಲ್ಲಿ ಕಾಣೆಯಾದ ವ್ಯಕ್ತಿಗಳಿಗಾಗಿ ಹುಡುಕಾಟ ನಡೆದಿದೆ. 47 ಜನರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದ್ದು, ಇನ್ನೂ ಅನೇಕ ಜನರು ಕಾಣೆಯಾಗಿದ್ದಾರೆ.

    ಕೀನ್ಯಾ ರೆಡ್ ಕ್ರಾಸ್ ಮತ್ತು ನಾಯಕರು, ದೇಶದ ವಿಪತ್ತು ನಿರ್ವಹಣಾ ತಂಡ ಗುರುವಾರ ಬೆಳಿಗ್ಗೆಯಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ರೋಂಗೈ ಪೊಲೀಸ್ ಮುಖ್ಯಸ್ಥ ಜೋಸೆಫ್ ಕಿಯಾಕೊ ತಿಳಿಸಿದ್ದಾರೆ.

    36ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು ಎರಡು ಕಿ.ಮೀ. ವಿಸ್ತೀರ್ಣದವೆರೆಗೆ ನೀರು ಆವರಿಸಿದ್ದು, ಅಲ್ಲಿನ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಾರ್ಚ್‍ನಿಂದ ಇಲ್ಲಿಯವರೆಗೂ ಕೀನ್ಯಾದಲ್ಲಿ ನಡೆದ ಪ್ರವಾಹ ಮತ್ತು ಜಲ ಸಂಬಂಧಿ ದುರಂತದಲ್ಲಿ 170 ಮಂದಿ ಮೃತಪಟ್ಟಿದ್ದಾರೆ. ಪ್ರವಾಹದ ಹಿನ್ನೆಲೆಯಲ್ಲಿ 2,25,436 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸೇನಾ ಹೆಲಿಕಾಪ್ಟರ್‍ಗಳು ಮತ್ತು ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಕೀನ್ಯಾ ಸರಕಾರ ತಿಳಿಸಿದೆ.

    ಸಂತ್ರಸ್ತರಿಗೆ 4 ಮಿಲಿಯನ್ ಯುರೋಗಳನ್ನು ಪರಿಹಾರವಾಗಿ ನೀಡಬೇಕು ಎಂದು ರೆಡ್ ಕ್ರಾಸ್ ಸಂಸ್ಥೆ ಮನವಿ ಮಾಡಿದೆ.