Tag: ಕಿನಾರೆ

  • ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಯ್ತಾ ಕಿನಾರೆ ಚಿತ್ರತಂಡ?

    ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಯ್ತಾ ಕಿನಾರೆ ಚಿತ್ರತಂಡ?

    ಬೆಂಗಳೂರು: ಶುಕ್ರವಾರ ತೆರೆ ಕಂಡ ಕಿನಾರೆ ಚಿತ್ರವು ಹೂಸದೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದು, ಸಮಸ್ಯೆಗೆ ಸಿಲುಕಿಕೊಂಡಿದೆ.

    ಕಿನಾರೆ ಸಿನಿಮಾದಲ್ಲಿ ಐಟಂ ಹಾಡು ಇದೆ. ಯೋಗರಾಜ್ ಭಟ್ ಮತ್ತು ವಿಜಯ್ ಪ್ರಕಾಶ್ ಹಾಡಿರುವ ಹಾಡಿರುವ ನೃತ್ಯದ ದೃಶ್ಯಕ್ಕೆ ‘ಓಂ’ ಚಿತ್ರ ಇರುವ ಬಾವುಟಗಳನ್ನು ಬಳಸಲಾಗಿದೆ. ಐಟಂ ಹಾಡಿಗೆ `ಓಂ’ ಚಿತ್ರ ಇರುವ ಬಾವುಟಗಳನ್ನು ಬಳಸುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆಂದು ಆರೋಪ ಕೇಳಿಬಂದಿದೆ.

    ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡವ ಹಾಗೆ ಇದೆ. ಹಾಗಾಗಿ ಈ ಹಾಡನ್ನು ತೆಗೆದುಹಾಕಿ ಎಂದು ಹೇಳಿಕೊಂಡು ಚಿತ್ರದ ನಿರ್ದೇಶಕ ದೇವರಾಜ್ ಪೂಜಾರಿ ಮೇಲೆ ಕೆಲ ವ್ಯಕ್ತಿಗಳು ಹಲ್ಲೆ ಮಾಡಿ ಅವರ ಕಾರಿನ ಗಾಜುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ನಿರ್ದೇಶಕ ದೇವರಾಜ್ ಪೂಜಾರಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಇದರ ಬಗ್ಗೆ ನಮಗೂ ಸರಿಯಾದ ವಿವರಣೆ ಇಲ್ಲ. ಕಿನಾರೆ ಸಿನಿಮಾದ ಪ್ರಚಾರದಲ್ಲಿದ್ದಾಗ ಕಾರಿನ ಗ್ಲಾಸಿಗೆ ಕಲ್ಲು ಹೊಡೆದು, ಹಾಡಿನಲ್ಲಿ `ಓಂ’ ಚಿತ್ರ ಬಾವುಟ ಬಳಸಿದ್ದೀರಾ ಎಂದು ಹೇಳುತ್ತಿದ್ದರು. ಭಾನುವಾರ ಮಧ್ಯಾಹ್ನ ಮಾಗಡಿ ರಸ್ತೆಯಲ್ಲಿರುವ ಸುಜಾತ ಟಾಕೀಸ್ ಬಳಿ ಈ ಘಟನೆ ನಡೆದಿದೆ. ಸುಮಾರು 5-6 ಜನರು ದಾಳಿ ಮಾಡಿದ್ದಾರೆ. ಸದ್ಯಕ್ಕೆ ಸಿನಿಮಾ ರನ್ನಿಂಗ್ ನಲ್ಲಿ ಇದೆ, ಹಾಡನ್ನು ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಿವೀಲ್ ಆಯ್ತು `ಕಿನಾರೆ’ ಸಿನಿಮಾದ ಕೋಳಿ ಸಾಂಗು – ಚಂದನ್ ಹಾಡಿಗಿದೆ ಹುಚ್ಚು ಹಿಡಿಸೋ ಗುಂಗು !

    ರಿವೀಲ್ ಆಯ್ತು `ಕಿನಾರೆ’ ಸಿನಿಮಾದ ಕೋಳಿ ಸಾಂಗು – ಚಂದನ್ ಹಾಡಿಗಿದೆ ಹುಚ್ಚು ಹಿಡಿಸೋ ಗುಂಗು !

    ಬೆಂಗಳೂರು: ಮ್ಯೂಸಿಕ್ ಬಜಾರ್ ಗೆ  ಹೊಸದೊಂದು ಹಾಡು ಎಂಟ್ರಿ ಕೊಟ್ಟಿದೆ. ನಯಾ ಹಾಡಿನ ಬಗ್ಗೆ ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ ಮಾತನಾಡಿದ್ದಾರೆ.

    ಕಿನಾರೆ ನಿಮಗೆಲ್ಲಾ ತಿಳಿದಿರುವ ಹಾಗೇ ರೆಡ್ ಆ್ಯಪಲ್ ಮತ್ತು ಅದಿತಿ ಫಿಲ್‍ಂ ಬ್ಯಾನರ್ ನಲ್ಲಿ ರೆಡಿಯಾಗುತ್ತಿರುವ ಸಿನಿಮಾವಾಗಿದೆ. ಈ ಸಿನಿಮಾ ಒಂದು ಘಟನೆಯಿಂದ ಎರಡು ಮುಗ್ಧ ಜೀವಗಳ ಬದುಕಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಅನ್ನೋದನ್ನ ಹೇಳಲು ಹೊರಟಿದೆ. ಈಗಾಗಲೇ ಸಿನಿಮಾದ ಟೀಸರ್ ಮತ್ತು ಮೇಕಿಂಗ್ ಬಹಳಷ್ಟು ಭರವಸೆ ಮೂಡಿಸಿದೆ.

    ಚಿತ್ರತಂಡ ಈಗ ಮೊದಲ ಹಾಡನ್ನ ರಿವೀಲ್ ಮಾಡಿದ್ದು ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ. ಹೊಸ ಪ್ರತಿಭೆಗಳು ಸೇರಿಕೊಂಡು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ದೇವರಾಜ್ ಪೂಜಾರಿ ಆ್ಯಕ್ಷನ್ ಕಟ್ ಹೇಳಿದ್ದು, ನಟ ಸತೀಶ್ ಮತ್ತು ನಟಿ ಗೌತಮಿ ಬಣ್ಣ ಹಚ್ಚಿದ್ದಾರೆ. ಅಭಿಷೇಕ್ ಕಾಸರಗೋಡು ಕ್ಯಾಮೆರಾ ಕೈ ಚಳಕ ತೋರಿಸಿದ್ದಾರೆ.

    ನಿರ್ದೇಶಕ ರವಿ ಪೂಜಾರಿ ಬರೆದಿರುವ ಸಾಹಿತ್ಯಕ್ಕೆ ಸುರೇಂದ್ರನಾಥ್ ಟ್ಯೂನ್ ಕಂಪೋಸ್ ಮಾಡಿದ್ದಾರೆ. ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ಮೂಡಿಬಂದಿರುವ ಕೋಳಿ ಸಾಂಗ್ ಕಿನಾರೆಯ ಸತ್ವ ಸಾರುತ್ತಿದೆ. ಈ ತಿಂಗಳು ವಾರಕ್ಕೊಂದು ಹೊಸ ಹಾಡು ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ಟ್, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

    ಕಡಲ ಕಿನಾರೆಯ ಕಥೆಯನ್ನ ಹೇಳುತ್ತಿರುವ ಚಿತ್ರತಂಡ ಮಂಗಳೂರು, ಉಡುಪಿ, ಕಾಸರಗೋಡು ಸೇರಿದಂತೆ ಹಲವು ಕಡೆ ಚಿತ್ರೀಕರಣ ಕಂಪ್ಲೀಟ್ ಮಾಡಿಕೊಂಡಿದೆ. ಹಾಡುಗಳಿಂದ ಹೈಪ್ ಕ್ರಿಯೇಟ್ ಮಾಡಿ ಥೇಟರ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದು, ರಿವಿಲ್ ಆಗಿರೋ ಹಾಡು ಮತ್ತು ಟೀಜರ್ ನಿಂದ ಹೊಸ ಥರ ಸಿನಿಮಾ ಸಿನಿರಸಿಕರನ್ನ ರಂಜಿಸಬಹುದು ಅನ್ನೊ ಕ್ಲೂ ಸಿಕ್ಕಿದೆ.