Tag: ಕಿತ್ತೂರು ಕೋಟೆ

  • ಗುರುವಾರದಿಂದ ಲಾಲ್‌ಬಾಗ್‌ನಲ್ಲಿ 218ನೇ ಫಲಪುಷ್ಪ ಪ್ರದರ್ಶನ – ಹೂವಲ್ಲೇ ಕಿತ್ತೂರಿನ ಕೋಟೆ ಸೃಷ್ಟಿ

    ಗುರುವಾರದಿಂದ ಲಾಲ್‌ಬಾಗ್‌ನಲ್ಲಿ 218ನೇ ಫಲಪುಷ್ಪ ಪ್ರದರ್ಶನ – ಹೂವಲ್ಲೇ ಕಿತ್ತೂರಿನ ಕೋಟೆ ಸೃಷ್ಟಿ

    -ಆ.7ರಿಂದ 18ರವರೆಗೆ ನಡೆಯಲಿರುವ ಪ್ರದರ್ಶನ

    ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಗುರುವಾರದಿಂದ (ಆ.7) ನಗರದ ಲಾಲ್‌ಬಾಗ್‌ನಲ್ಲಿ (Lalbhag) 218ನೇ ಫಲಪುಷ್ಪ ಪ್ರದರ್ಶನ ನಡೆಯಲಿದೆ.

    ನಾಳೆ (ಗುರುವಾರ) ಬೆಳಿಗ್ಗೆ 10 ಗಂಟೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) 218ನೇ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಪ್ರದರ್ಶನ ಸಂಪೂರ್ಣವಾಗಿ ಕಿತ್ತೂರು ರಾಣಿ ಚೆನ್ನಮ್ಮನ (Kitturu Chennamma) ಆಸ್ಥಾನದ ಪರಿಕಲ್ಪನೆಯಲ್ಲಿ ಆಯೋಜನೆಯಾಗಲಿದೆ.ಇದನ್ನೂ ಓದಿ: ಗಂಗೆ ನಿಮ್ಮ ಪಾದವನ್ನು ಸ್ಪರ್ಶಿಸುತ್ತಿದ್ದಾಳೆ, ಇದು ನಿಮ್ಮನ್ನು ನೇರವಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತೆ – ಯುಪಿ ಸಚಿವ ವಿವಾದಾತ್ಮಕ ಹೇಳಿಕೆ

    ಆಂಧ್ರಪ್ರದೇಶ, ತಮಿಳುನಾಡು, ಪುಣೆ, ಕೇರಳದಿಂದ ಹೂವುಗಳಿಂದ ತರಿಸಲಾಗಿದ್ದು, 18 ಅಡಿ ಎತ್ತರ ಮತ್ತು 32 ಅಡಿ ಅಗಲದ ಕಿತ್ತೂರು ಕೋಟೆ, ಕಿತ್ತೂರು ರಾಣಿ ಚೆನ್ನಮ್ಮನವರ ಐಕ್ಯ ಮಂಟಪಗಳು ಸಿದ್ಧಗೊಳ್ಳುತ್ತಿವೆ. 600ಕ್ಕೂ ಹೆಚ್ಚು ಕಾರ್ಮಿಕರು, ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಭರ್ಜರಿಯಿಂದ ತಯಾರಿ ನಡೆಯುತ್ತಿದೆ.

    ಇನ್ನೂ ಪ್ರದರ್ಶನದಲ್ಲಿ ಹೈಡ್ರಾಂಜಿ, ಕ್ಯಾಲಲಿಲಿ, ಆರ್ಕಿಟ್ಸ್, ಟ್ಯೂಬ್ರೆಟ್ಸ್ ಬೆಗೆನಿಯಾ ಸೇರಿದಂತೆ 105ಕ್ಕೂ ವಿಶೇಷವಾದ ವಾರ್ಷಿಕ ಹೂವುಗಳ ಬಳಕೆ ಮಾಡಲಾಗಿದೆ. ಆ.7ರಿಂದ 18ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 80 ರೂ. ಹಾಗೂ ರಜಾ ದಿನಗಳಲ್ಲಿ ವಯಸ್ಕರಿಗೆ 100 ರೂ., ಮಕ್ಕಳಿಗೆ 30 ರೂ. ದರ ನಿಗದಿ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ.ಇದನ್ನೂ ಓದಿ: ಕಾಂಗ್ರೆಸ್ ಸಂಸದೆ ಸರ ಕಳವು ಪ್ರಕರಣ – ಆರೋಪಿಯನ್ನು ಬಂಧಿಸಿದ ದೆಹಲಿ ಪೊಲೀಸ್

  • ಬಚ್ಚನಕೇರಿ ಗ್ರಾಮದಲ್ಲಿ ಕಿತ್ತೂರು ಅರಮನೆ ನಿರ್ಮಾಣ – ಸ್ಥಳೀಯರಿಂದ ವಿರೋಧ

    ಬಚ್ಚನಕೇರಿ ಗ್ರಾಮದಲ್ಲಿ ಕಿತ್ತೂರು ಅರಮನೆ ನಿರ್ಮಾಣ – ಸ್ಥಳೀಯರಿಂದ ವಿರೋಧ

    ಬೆಳಗಾವಿ: ಕಿತ್ತೂರು ತಾಲೂಕಿನ ಬಚ್ಚನಕೇರಿ ಗ್ರಾಮದಲ್ಲಿ ಅರಮನೆ ನಿರ್ಮಾಣಕ್ಕೆ ಮುಂದಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಕಿತ್ತೂರು ಕೋಟೆ ನಿರ್ಮಾಣವನ್ನು ಕಿತ್ತೂರು ಪಟ್ಟಣದಲ್ಲಿರುವ ಚೆನ್ನಮ್ಮನ ಕೋಟೆ ಪಕ್ಕದಲ್ಲೇ ಅರಮನೆ ನಿರ್ಮಾಣ ಮಾಡುವಂತೆ ಸ್ಥಳೀಯರು ಈ ಹಿಂದೆಯೇ ಬೇಡಿಕೆ ಇಟ್ಟಿದ್ದರು. ಆದರೆ ಈಗ ಬೆಳಗಾವಿ ಜಿಲ್ಲಾಡಳಿತ ಕಿತ್ತೂರು ತಾಲೂಕಿನ ಬಚ್ಚನಕೇರಿ ಗ್ರಾಮದಲ್ಲಿ ಅರಮನೆ ನಿರ್ಮಾಣಕ್ಕೆ ತಯಾರಿ ನಡೆಸಿದೆ. ಇದನ್ನೂ ಓದಿ: ಮ್ಯೂಸಿಕ್ ಶೂಟ್ ವೇಳೆ ದಾಳಿ: 8 ಮಹಿಳಾ ರೂಪದರ್ಶಿಗಳ ಮೇಲೆ ಅತ್ಯಾಚಾರ 

    ಬಚ್ಚನಕೇರಿ ಗ್ರಾಮದಲ್ಲಿ ಕೋಟೆಯ ಪ್ರತಿರೂಪದ ಅರಮನೆ ಮಾಡಲು ಮುಂದಾಗಿದ್ದು, ಈಗಾಗಲೇ ರಾಜ್ಯ ಸರ್ಕಾರ ಅರಮನೆ ನಿರ್ಮಾಣಕ್ಕೆ ಬಚ್ಚನಕೇರಿ ಗ್ರಾಮದಲ್ಲಿರುವ 57 ಎಕರೆ ಜಾಗವನ್ನು ಮೀಸಲಿಟ್ಟಿದೆ.

    ಅರಮನೆ ನಿರ್ಮಾಣಕ್ಕೆ ಸರ್ಕಾರಿ ಜಾಗವನ್ನು ಕಿತ್ತೂರು ಪ್ರಾಧಿಕಾರಕ್ಕೆ ನೀಡಲು ಸರ್ಕಾರ ಉದ್ದೇಶಿಸಿದೆ. ಈ ಸಂಬಂಧ ಬೈಲಹೊಂಗಲ ಉಪವಿಭಾಗಾಧಿಕಾರಿಗೆ ಬೆಳಗಾವಿ ಜಿಲ್ಲಾಡಳಿತ ಪತ್ರ ಬರೆದಿದೆ. ಈ ಸಂಬಂಧ ಆಕ್ಷೇಪಗಳಿದ್ದರೆ ಸಮರ್ಥವಾದ ಕಾರಣ ನೀಡುವಂತೆ ಕೋರಲಾಗಿದೆ.

    ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೆ ಬಚ್ಚನಕೇರಿಯಲ್ಲಿ ಅರಮನೆ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಫೈನಲ್ ತಲುಪಿದ ಕನ್ನಡಿಗ, ಈಜುಪಟು ಶ್ರೀಹರಿ ನಟರಾಜ್ 

    Live Tv
    [brid partner=56869869 player=32851 video=960834 autoplay=true]