Tag: ಕಿಡ್ನಿ ಸಮಸ್ಯೆ

  • RCB ಖರೀದಿಸಿದ ದುಬಾರಿ ಆಟಗಾರನಿಗೆ ದೀರ್ಘಕಾಲದ ಕಿಡ್ನಿ ಕಾಯಿಲೆ – ಸತ್ಯ ಬಹಿರಂಗಪಡಿಸಿದ ಗ್ರೀನ್‌

    RCB ಖರೀದಿಸಿದ ದುಬಾರಿ ಆಟಗಾರನಿಗೆ ದೀರ್ಘಕಾಲದ ಕಿಡ್ನಿ ಕಾಯಿಲೆ – ಸತ್ಯ ಬಹಿರಂಗಪಡಿಸಿದ ಗ್ರೀನ್‌

    ಕ್ಯಾನ್ಬೆರಾ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಫ್ರಾಂಚೈಸಿಯು ಟ್ರೇಡ್‌ ವಿಂಡೋ (T) ನಿಯಮದ ಮೂಲಕ 17.5 ಕೋಟಿ ರೂ.ಗೆ ಖರೀದಿಸಿದ ದೈತ್ಯ ಆಸೀಸ್‌ ಆಟಗಾರ ಕ್ಯಾಮರೂನ್‌ ಗ್ರೀನ್‌ (Cameron Green) ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ (Chronic Kidney Disease) ಬಳಲುತ್ತಿರುವ ಸತ್ಯ ಬಹಿರಂಗವಾಗಿದೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್, ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಹುಟ್ಟಿನಿಂದಲೇ ಗ್ರೀನ್‌ ಅವರಿಗೆ ಈ ಕಾಯಿಲೆ ಇದೆ. ಗ್ರೀನ್‌ ತಾಯಿ ಬೀ ಟ್ರೇಸಿ ಅವರು 19 ವಾರಗಳ ಗರ್ಭಿಣಿಯಾಗಿದ್ದಾಗ ಸ್ಕ್ಯಾನಿಂಗ್ ವೇಳೆಯೇ ಈ ಸಮಸ್ಯೆ ಗೊತ್ತಾಗಿತ್ತು ಎಂದು ಗ್ರೀನ್ ತಿಳಿಸಿದ್ದಾರೆ.

    ಆಸೀಸ್‌ ತಂಡದ ಕಾಯಂ ಪ್ಲೇಯರ್‌ ಆಗಿರುವ ಗ್ರೀನ್‌, ಐಪಿಎಲ್‌ನಲ್ಲೂ (IPL) ಮಿಂಚುತ್ತಿದ್ದಾರೆ. 2023ರಲ್ಲಿ ಐಪಿಎಲ್‌ ಪ್ರವೇಶಿಸಿದ ಗ್ರೀನ್‌ ಮುಂಬೈ ಇಂಡಿಯನ್ಸ್‌ (Mumbai Indians) ತಂಡಕ್ಕೆ ಸೇರ್ಪಡೆಯಾಗಿದ್ದರು. ಆದ್ರೆ ತಮ್ಮ 2ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಇದನ್ನೂ ಓದಿ: RCB ಸೇರಿದ ದೈತ್ಯ ಆಸೀಸ್‌ ಆಟಗಾರ – ರಾಯಲ್‌ ಚಾಲೆಂಜರ್ಸ್‌ ಪರ್ಸ್‌ನಲ್ಲಿ ಇನ್ನೆಷ್ಟು ಹಣವಿದೆ?

    ಕ್ಯಾಮರೂನ್‌ ಗ್ರೀನ್‌ 12 ವರ್ಷ ದಾಟಿದಾಗ ಬದುಕುಳಿಯುತ್ತಾರೆ ಅನ್ನುವ ಬಗ್ಗೆ ಅನುಮಾನವಿತ್ತು ಎಂದು ತಂದೆ ಗ್ಯಾರಿ ಹೇಳಿಕೊಂಡಿದ್ದಾರೆ. ಹೀಗಿದ್ದೂ ಗ್ರೀನ್‌ ಕ್ರಿಕೆಟ್‌ ವೃತ್ತಿ ಬದುಕನ್ನು ರೂಪಿಸುವಲ್ಲಿ ಅವರ ಪಾತ್ರ ಅಪಾರವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

    2022ರಲ್ಲಿ ಆಸೀಸ್‌ ಟಿ20 ತಂಡದ ಭಾಗವಾಗಿದ್ದ ಗ್ರೀನ್‌ ಒಂದು ವರ್ಷದಲ್ಲೇ ಬ್ಯಾಟಿಂಗ್‌, ಬೌಲಿಂಗ್‌ ಫೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗುರುತಿಸಿಕೊಂಡರು. ಬಳಿಕ ಭಾರತದ ವಿರುದ್ಧವೇ ನಡೆದ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಟ್ರೋಫಿ ಸರಣಿಯ ತಮ್ಮ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಸಾಧನೆ ಮಾಡಿದರು. ಇದರಿಂದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಫೈನಲ್‌ನಲ್ಲೂ ಆಡುವ ಅವಕಾಶ ಪಡೆದುಕೊಂಡರು. ಇತ್ತೀಚೆಗೆ ಮುಕ್ತಾಯಗೊಂಡ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲೂ ಅವರು ಸ್ಥಾನ ಪಡೆದುಕೊಂಡಿದ್ದರು. ಮುಂದೆ ಪಾಕ್‌ ವಿರುದ್ಧ ನಡೆಯಲಿರುವ ಟೆಸ್ಟ್‌ ತಂಡಕ್ಕೂ ಆಯ್ಕೆಯಾಗಿದ್ದಾರೆ.

    ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಗ್ರೀನ್‌, ನನಗೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇದೆ ಎಂದು ನನ್ನ ಹೆತ್ತವರಿಗೆ ನಾನು ಹುಟ್ಟಿದಾಗಲೇ ವೈದ್ಯರು ಹೇಳಿದ್ದರು. ಆರಂಭದಲ್ಲಿ ಯಾವುದೇ ರೋಗಲಕ್ಷಣಗಳಿರಲಿಲ್ಲ. ಅಲ್ಟ್ರಾಸೌಂಡ್ ಮೂಲಕ ಇದು ತಿಳಿದುಬಂತು. ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯು ಮೂತ್ರಪಿಂಡದ ಆರೋಗ್ಯ ಕಾರ್ಯದ ಮೇಲೆ ಪ್ರಭಾವ ಬೀರುವ ಕಾಯಿಲೆಯಾಗಿದೆ. ದುರದೃಷ್ಟವಶಾತ್, ನನ್ನ ಕಿಡ್ನಿ ರಕ್ತವನ್ನು ಫಿಲ್ಟರ್ ಮಾಡುವುದಿಲ್ಲ. ಸದ್ಯ ನನಗೆ 2ನೇ ಸ್ಟೇಜ್‌ನಲ್ಲಿ ಕಾಯಿಲೆ ಇದ್ದು, ಸಮಸ್ಯೆಯೊಂದಿಗೆ ಕ್ರಿಕೆಟ್‌ ಬದುಕನ್ನು ಸಾಗಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 89 ಸಾವಿರ ಕೋಟಿ ತಲುಪಿತು ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ- ಯಾವ ತಂಡದ್ದು ಎಷ್ಟು?

    ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯಲ್ಲಿ 5 ಹಂತಗಳಿವೆ. ಮೊದಲ ಹಂತವು ಕಡಿಮೆ ತೀವ್ರತೆಯದ್ದು. ಐದನೇ ಹಂತವು ಕಿಡ್ನಿ ಕಸಿ ಅಥವಾ ಡಯಾಲಿಸಿಸ್ ಮಾಡುವಂಥದ್ದು. ಅದೃಷ್ಟವಶಾತ್, ನನ್ನದು 2ನೇ ಹಂತದಲ್ಲಿದೆ. ನಾನು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುತ್ತಿರಲಿಲ್ಲ, ಆಹಾರ ಸೇವಿಸುತ್ತಿರಲಿಲ್ಲ. ಅಲ್ಲದೇ ಆಟದ ಸಮಯದಲ್ಲೂ ನನ್ನ ಆರೋಗ್ಯ ಸರಿಯಾಗಿ ನೋಡಿಕೊಳ್ಳಲಿಲ್ಲ ಅಂತ ಅನ್ನಿಸುತ್ತೆ. ಕಾಲಾನಂತರದಲ್ಲಿ ನಿಧಾನವಾಗಿ ನಾನು ಎಲ್ಲವನ್ನೂ ಸರಿಯಾಗಿ ಅನುಸರಿಸುತ್ತಿದ್ದೇನೆ. ಆದರೂ ನನಗೆ ಅದರ ಸೆಳೆತವಿದೆ ಎಂದಿದ್ದಾರೆ.

  • Karnataka Election 2023: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯಿಂದ ಮತದಾನ

    Karnataka Election 2023: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯಿಂದ ಮತದಾನ

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023 (Karnataka Assembly Election 2023) ಹಿನ್ನೆಲೆಯಲ್ಲಿ ಮತದಾನ ನಡೆಯುತ್ತಿದ್ದು, ಎಲ್ಲರೂ ಅತ್ಯಂತ ಉತ್ಸಾಹದಿಂದಲೇ ಮತ ಹಾಕುತ್ತಿದ್ದಾರೆ. ಅಂತೆಯೇ ರೋಗಿಯೊಬ್ಬರು ತಮ್ಮ ಹಕ್ಕು ಚಲಾಯಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಆರ್ ಆರ್ ನಗರ ನಿವಾಸಿಯಾಗಿರುವ ಶೇಷಾದ್ರಿ (40) ಅವರು ಕಿಡ್ನಿ ಸಮಸ್ಯೆ (Kidney Problem) ಯಿಂದ ತಿಲಕ್ ನಗರದ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದನ್ನೂ ಓದಿ: Karnataka Election 2023 Live – ಅಮೆರಿಕದಿಂದ ವೋಟ್‌ ಹಾಕಲು ಬಂದ ಟೆಕ್ಕಿಗೆ ಶಾಕ್‌!

    ಇದೀಗ ಅವರು ಇಂದು ತಮ್ಮ ಅಮೂಲ್ಯವಾದ ಮತ ನೀಡಲು ತಿಲಕ್ ನಗರದ ಸಾಗರ್ ಆಸ್ಪತ್ರೆಯಿಂದ ಆರ್ ಆರ್‌ ನಗರಕ್ಕೆ ಬಂದು ಮತದಾನ ಮಾಡಲು ತೆರಳಿದ್ದಾರೆ.

     

  • ಇಡೀ ಶಾಲೆಯ ಸ್ನೇಹಿತರು ಸೇರಿ ಫ್ರೆಂಡ್‍ಶಿಪ್ ಬೆಲ್ಟ್ ಕಟ್ಟಿದ್ರು- ಮರುದಿನ ವಿದ್ಯಾರ್ಥಿ ಸಾವು

    ಇಡೀ ಶಾಲೆಯ ಸ್ನೇಹಿತರು ಸೇರಿ ಫ್ರೆಂಡ್‍ಶಿಪ್ ಬೆಲ್ಟ್ ಕಟ್ಟಿದ್ರು- ಮರುದಿನ ವಿದ್ಯಾರ್ಥಿ ಸಾವು

    ಕೊಪ್ಪಳ: ಎಲ್ಲ ಸ್ನೇಹಿತರು ಸೇರಿ ಒಟ್ಟಿಗೆ ಫ್ರೆಂಡ್‍ಶಿಪ್ ಬೆಲ್ಟ್ ಕಟ್ಟಿದ್ದವನ ಜೀವ ಕೊನೆಯುಸಿರೆಳೆದಿರುವ ಮನಕಲುಕುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕನನ್ನು ಸುಹಾಸ್ ಸೌದ್ರಿ ಎಂದು ಗುರುತಿಸಲಾಗಿದೆ. ಕಾರಟಗಿ ಪಟ್ಟಣ ನಿವಾಸಿ ಸುಹಾಸ್ ಸೌದ್ರಿ ಚಿಕ್ಕ ವಯಸ್ಸಿನಿಂದಲೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಸುಹಾಸ್ ಕಾರಟಗಿಯ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ. ಆದರೆ ಕಳೆದ ಒಂದು ತಿಂಗಳಿಂದ ಆತನ ಆರೋಗ್ಯ ತುಂಬಾ ಕೆಟ್ಟಿತ್ತು. ಈ ಹಿನ್ನೆಲೆ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರ ಅನಾರೋಗ್ಯದ ನಡುವೆಯೂ ಸುಹಾಸ್ ತನ್ನ ಶಾಲೆ, ಶಿಕ್ಷಕರು, ಸ್ನೇಹಿತರನ್ನು ನೆನೆಸಿಕೊಂಡಿದ್ದಾನೆ. ಇದನ್ನೂ ಓದಿ:  ಶಿಕ್ಷಕಿ ವೃತ್ತಿಯಿಂದ ನಿವೃತ್ತಿಗೊಂಡ ತಾಯಿಯನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದ ಮಗ! 

    ಈ ಹಿನ್ನೆಲೆ ತನ್ನ ಮಗನ ಕೊನೆ ಆಸೆ ಈಡೇರಿಸಲು ಪೋಷಕರು ಶಾಲೆಗೆ ಕರೆದುಕೊಂಡು ಹೋಗಿದ್ದಾರೆ. ಸುಹಾಸ್ ಶಾಲಾ ಆವರಣದಲ್ಲಿ ಕಾರಿನಲ್ಲಿಯೇ ಮಲಗಿದ್ದ. ಆತನನ್ನು ನೋಡಿ ಇಡೀ ಶಾಲೆಯೇ ಅತ್ತಿತ್ತು. ಸುಹಾಸ್ ಸ್ನೇಹಿತರು ಆತನ ಪರಿಸ್ಥಿತಿಯನ್ನು ಕಂಡು ಕಣ್ಣೀರು ಹಾಕುತ್ತಲೇ ಫ್ರೆಂಡ್‍ಶಿಪ್ ಬೆಲ್ಟ್ ಕಟ್ಟಿದ್ದರು.

    ಓದಿನಲ್ಲಿ ಟಾಪರ್
    ಸುಹಾಸ್ ಓದಿನಲ್ಲಿ ಟಾಪರ್ ಆಗಿದ್ದು, ಶಾಲೆಯಲ್ಲಿ ಎಲ್ಲರೊಂದಿಗೂ ಅನ್ಯೋನ್ಯವಾಗಿದ್ದ. ಅದಕ್ಕೆ ಇಡೀ ಶಾಲೆಯ ಸ್ನೇಹಿತರು ಫ್ರೆಂಡಶಿಪ್ ಬೆಲ್ಟ್ ಕಟ್ಟುವ ಮೂಲಕ ಅಂತಿಮ ವಿದಾಯವನ್ನು ಹೇಳಿದರು. ಇಂದು ಬೆಳಗ್ಗೆ ಸುಹಾಸ್ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಭದ್ರತಾ ಪಡೆಗಳ ಎನ್‍ಕೌಂಟರ್‌ನಲ್ಲಿ ಎಲ್‍ಇಟಿ ಉಗ್ರ ಬಲಿ

    Live Tv
    [brid partner=56869869 player=32851 video=960834 autoplay=true]

  • ಕಿಡ್ನಿ ಸಮಸ್ಯೆ ಇದ್ದರೂ ಸ್ಲಿಮ್ ಆಗಲು ಡಯಟ್ – ಬೆಂಗ್ಳೂರಿನಲ್ಲಿ ಬಾಲಿವುಡ್ ನಟಿ ಸಾವು

    ಕಿಡ್ನಿ ಸಮಸ್ಯೆ ಇದ್ದರೂ ಸ್ಲಿಮ್ ಆಗಲು ಡಯಟ್ – ಬೆಂಗ್ಳೂರಿನಲ್ಲಿ ಬಾಲಿವುಡ್ ನಟಿ ಸಾವು

    – 27ನೇ ವಯಸ್ಸಿಗೆ ಸಾವನ್ನಪ್ಪಿದ ಮಿಶ್ತಿ ಮುಖರ್ಜಿ

    ಬೆಂಗಳೂರು: ಎರಡೂ ಕಿಡ್ನಿ ವಿಫಲವಾಗಿ ಬಾಲಿವುಡ್ ಯುವನಟಿ ಮಿಶ್ತಿ ಮುಖರ್ಜಿಯವರು ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.

    ಇತ್ತೀಚೆಗೆ ಯುವನಟಿಯರು ಸ್ಲಿಮ್ ಆಗಿ ಕಾಣಬೇಕೆಂದು ಡಯೆಟ್ ಮಾಡುವುದು ಕಮಾನ್ ಆಗಿದೆ. ಆದರೆ ಆರೋಗ್ಯ ಸಮಸ್ಯೆ ಇದ್ದರೂ ಡಯಟ್ ಮಾಡಿದರೆ ಅದು ತಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಂತೆಯೇ ಮಿಶ್ತಿಯವರ ಆರೋಗ್ಯ ಸಮಸ್ಯೆ ಇದ್ದರೂ ಡಯೇಟ್ ಮಾಡಿ ಈಗ 27 ವರ್ಷಕ್ಕೆ ಬಾರದ ಲೋಕಕ್ಕೆ ತೆರಳಿದ್ದಾರೆ.

    ಬಾಲಿವುಡ್ ಮತ್ತು ಬೆಂಗಾಲಿ ವಿಡಿಯೋ ಆಲ್ಬಮ್ ಸಾಂಗ್ ಮತ್ತು ಕೆಲ ಚಿತ್ರದಲ್ಲಿ ನಟಿಸಿದ್ದ ಮಿಶ್ತಿ ಮುಖರ್ಜಿ ಅವರಿಗೆ ಕಿಡ್ನಿ ಸಮಸ್ಯೆ ಇತ್ತು. ಆದರೂ ಮಿಶ್ಠಿ ಅವರು ಸ್ಲಿಮ್ ಆಗಿ ಇರಬೇಕು ಎಂಬ ಕಾರಣಕ್ಕೆ ಕಟ್ಟಿನಿಟ್ಟಿನ ಕಿಟೋ ಡಯಟ್ ಮಾಡಿದ್ದಾರೆ. ಡಯಟ್ ವೇಳೆ ಅವರ ಕಿಡ್ನಿಯ ಮೇಲೆ ಹೆಚ್ಚು ಒತ್ತಡ ಬಿದ್ದಿದೆ. ಹೀಗಾಗಿ ಎರಡು ಕಿಡ್ನಿ ಫೇಲ್ ಆಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದ ಮಿಶ್ತಿ ಮತ್ತೆ ತಾನು ಸಿನಿಮಾಗೆ ಮರಳಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದರು. ಹೀಗಾಗಿ ಸ್ಲಿಮ್ ಆಗಬೇಕು ಎಂದು ಕಟ್ಟುನಿಟ್ಟಿನ ಡಯಟ್ ಮಾಡಿ ಈಗ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಮಿಶ್ತಿ ಮುಖರ್ಜಿಯವರು ಮೂಲತಃ ಪಶ್ಚಿಮ ಬಂಗಾಳದವರಾಗಿದ್ದಾರೆ. ಆದರೆ ಅವರ ಅಂತ್ಯಕ್ರಿಯೆಯನ್ನು ಮಿಶ್ತಿ ತಂದೆ, ತಾಯಿ ಮತ್ತು ಸಹೋದರ ಬೆಂಗಳೂರಿನಲ್ಲೇ ನೆರವೇರಿಸಿದ್ದಾರೆ.

    ಮಿಶ್ತಿ ಮುಖರ್ಜಿಯವರು 2012ರಲ್ಲಿ ಲೈಫ್ ಕಿ ತೋಹ್ ಲಾಗ್ ಗಯೀ ಎಂಬ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಮಿಶ್ಠಿ 2013ರಲ್ಲಿ ಮೇ ಕೃಷ್ಣ ಹೂ ಎಂಬ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ನಂತರ ಗೋವಿಂದ ಆಲೆ ರೇ ಎಂಬ ಡ್ಯಾನ್ಸ್ ಕಾರ್ಯಕ್ರಮದಲ್ಲಿ ರಜನೀಶ್ ದುಗ್ಗಲ್ ಅವರೊಂದಿಗೆ ನೃತ್ಯ ಪ್ರದರ್ಶಿಸಿದ್ದರು. ಇದರ ಜೊತೆಗೆ ಬಾಲಿವುಡ್ ಹಾಗೂ ಬೆಂಗಾಲಿಯ ಹಲವು ವಿಡಿಯೋ ಆಲ್ಬಮ್ ಸಾಂಗ್‍ಗಲ್ಲಿ ಮಿಶ್ತಿ ಅಭಿನಯಿಸಿದ್ದಾರೆ.

  • ಈ ಊರಿನ ತುಂಬೆಲ್ಲಾ ಕಿಡ್ನಿ ರೋಗಿಗಳು- ಶುದ್ಧ ಕುಡಿಯುವ ನೀರಿಗಾಗಿ ಬೇಕಿದೆ ಸಹಾಯ

    ಈ ಊರಿನ ತುಂಬೆಲ್ಲಾ ಕಿಡ್ನಿ ರೋಗಿಗಳು- ಶುದ್ಧ ಕುಡಿಯುವ ನೀರಿಗಾಗಿ ಬೇಕಿದೆ ಸಹಾಯ

    ರಾಯಚೂರು: ಜಿಲ್ಲೆಯ ಈ ಗ್ರಾಮಗಳಲ್ಲಿ ಎಲ್ಲಾ ಇದೆ ಉತ್ತಮ ರಸ್ತೆ, ಪ್ರತಿ ಮನೆಗೂ ಶೌಚಾಲಯ, ಒಂದು ಗುಡಿಸಲನ್ನ ಹುಡಿಕಿದ್ರೂ ಇಲ್ಲಿ ಸಿಕ್ಕಲ್ಲ. ಆದ್ರೆ ಈ ಎಲ್ಲದರ ಜೊತೆ ಪ್ರತಿ ಮನೆಯಲ್ಲೂ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಬೇಸಿಗೆ ಬಂದರಂತೂ ಗ್ರಾಮದ ಬಹಳಷ್ಟು ಜನ ಆಸ್ಪತ್ರೆಯಲ್ಲೇ ಇರ್ತಾರೆ. ದುಡಿದ ಹಣವೆಲ್ಲಾ ಆಸ್ಪತ್ರೆಯ ಚಿಕಿತ್ಸಾ ವೆಚ್ಚಕ್ಕೆ ಸುರಿಯುತ್ತಿದ್ದಾರೆ.

    ಹೀಗೇ ಕೈಯಲ್ಲಿ ವೈದ್ಯರ ಚಿಕಿತ್ಸಾ ವಿವರದ ಚೀಟಿಗಳನ್ನ ಹಿಡಿದು ನಿಂತಿರುವ ಇವರೆಲ್ಲಾ ರಾಯಚೂರಿನ ಮಾನ್ವಿ ತಾಲೂಕಿನ ಬೆಟ್ಟದೂರು ತಾಂಡ, ನೀರಮಾನ್ವಿ ತಾಂಡ, ಮುರಾನ್‍ಪುರ ತಾಂಡಗಳ ಜನ. ಇಲ್ಲಿನ ಸುಮಾರು ಒಂದು ಸಾವಿರ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ ಮೂತ್ರಪಿಂಡ ಸಮಸ್ಯೆ ಹಾಗೂ ಕೀಲು ನೋವಿನ ಸಮಸ್ಯೆಗಳು ವಿಪರೀತವಾಗಿ ಕಾಡುತ್ತಿವೆ. ಬೇಸಿಗೆ ಕಾಲದಲ್ಲಿ ಸಮಸ್ಯೆ ಉಲ್ಬಣಗೊಂಡು ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈಗಾಗಲೇ ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾದವರು ಗ್ರಾಮಕ್ಕೆ ಮರಳಿದ್ದಾರೆ. ವಯಸ್ಸಿನ ಬೇಧವಿಲ್ಲದೆ ಪ್ರತಿಯೊಬ್ಬರಲ್ಲೂ ಮೂತ್ರಪಿಂಡ ಹರಳುಗಳು ಕಾಣಿಸಿಕೊಳ್ಳುತ್ತಿದ್ದು, ನಿತ್ಯ ನೋವು ಅನುಭವಿಸುತ್ತಿದ್ದಾರೆ. ಇದಕ್ಕೆ ಈ ಗ್ರಾಮಗಳ ಜನ ಕುಡಿಯುತ್ತಿರುವ ಬೋರ್‍ವೆಲ್ ನೀರೇ ಮುಖ್ಯ ಕಾರಣ.

    ಪುಟ್ಟ ಗ್ರಾಮಗಳಾದ್ರೂ ರಸ್ತೆ, ಶೌಚಾಲಯ ಸೇರಿ ಎಲ್ಲಾ ವ್ಯವಸ್ಥೆಗಳನ್ನ ಹೊಂದಿರುವ ತಾಂಡಾದಲ್ಲಿ ಬೋರ್ ವೆಲ್ ನೀರು ಬಿಟ್ಟರೆ ಕುಡಿಯಲು ಬೇರೆ ನೀರಿಲ್ಲ. ಇಲ್ಲಿನ ಕೊಳವೆ ಬಾವಿ ನೀರಿನಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಮೂತ್ರಪಿಂಡ ಹರಳು ಹಾಗೂ ಕೈಕಾಲಿನ ಕೀಲು ನೋವಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಕಾಯಿಲೆಗೆ ಹೆದರಿ ಕೆಲವರು ಗ್ರಾಮವನ್ನೇ ತೊರೆದಿದ್ದಾರೆ. ಇನ್ನೂ ಕೆಲವರು ಪಕ್ಕದ ಊರುಗಳಿಗೆ ತೆರಳಿ ಶುದ್ದ ಕುಡಿಯುವ ನೀರನ್ನ ತಂದುಕೊಳ್ಳುತ್ತಿದ್ದಾರೆ.

    ಈ ಗ್ರಾಮಗಳ ಪಕ್ಕದಲ್ಲಿ ತುಂಗಭದ್ರಾ ಎಡದಂಡೆ ಉಪಕಾಲುವೆ ಹಾದು ಹೋಗಿದ್ದರೂ ಕಾಲುವೆಯ ಕೆಳಭಾಗವಾಗಿರುವುದರಿಂದ ನೀರು ಮರೀಚಿಕೆಯಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಮೂಲಕ ಈ ಗ್ರಾಮಗಳಿಗೆ ಕುಡಿಯುವ ನೀರನ್ನ ಒದಗಿಸುವುದು ಅವಶ್ಯಕವಾಗಿದೆ.

    https://www.youtube.com/watch?v=QMEWBdErnLE