Tag: ಕಿಡ್ನಿ ಮಾರಾಟ

  • 75 ಲಕ್ಷ ಕೊಡಿ ಇಲ್ಲ ಕಿಡ್ನಿ ಮಾರಲು ಬಿಡಿ- ಚುನಾವಣಾ ಆಯೋಗಕ್ಕೆ ಪತ್ರ ಬರೆದ ಅಭ್ಯರ್ಥಿ

    75 ಲಕ್ಷ ಕೊಡಿ ಇಲ್ಲ ಕಿಡ್ನಿ ಮಾರಲು ಬಿಡಿ- ಚುನಾವಣಾ ಆಯೋಗಕ್ಕೆ ಪತ್ರ ಬರೆದ ಅಭ್ಯರ್ಥಿ

    ಭೋಪಾಲ್: ಚುನಾವಣೆಗಾಗಿ 75 ಲಕ್ಷ ರೂಪಾಯಿ ಕೊಡಿ, ಇಲ್ಲವಾದರೆ ತನ್ನ ಕಿಡ್ನಿಯನ್ನಾದರೂ ಮಾರಾಟ ಮಾಡಲು ಅನುಮತಿ ನೀಡಿ ಎಂದು ಮಧ್ಯಪ್ರದೇಶದ ಸಮಾಜವಾದಿ ಪಕ್ಷದ(ಎಸ್‍ಪಿ) ಮಾಜಿ ನಾಯಕ ಹಾಗೂ ಬಾಲಘಾಟ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ಕೇಂದ್ರ ಚುನಾವಣಾ ಆಯೋಗದ ಮುಂದೆ ವಿಚಿತ್ರ ಮನವಿಯೊಂದನ್ನು ಇಟ್ಟಿದ್ದಾರೆ.

    ಪಕ್ಷೇತರ ಅಭ್ಯರ್ಥಿ ಕಿಶೋರ್ ಸಮ್ರಿತ್ ಅವರು ಜಿಲ್ಲಾ ಚುನಾವಣಾ ಅಧಿಕಾರಿ ದೀಪಕ್ ಆರ್ಯ ಅವರಿಗೆ ಈ ರೀತಿ ವಿಚಿತ್ರ ಕೋರಿಕೆ ಮುಂದಿಟ್ಟು ಪತ್ರ ಬರೆದಿದ್ದಾರೆ. ಚುನಾವಣಾ ವೆಚ್ಚಕ್ಕೆ 75 ಲಕ್ಷವನ್ನು ತಮಗೆ ಚುನಾವಣಾ ಆಯೋಗವೇ ನೀಡಲಿ ಅಥವಾ ಬ್ಯಾಂಕ್‍ನಿಂದ ಲೋನ್ ಕೊಡಿಸಲಿ. ಈ ಎರಡು ಕೆಲಸ ಅವರಿಂದ ಆಗದಿದ್ದರೆ ನನ್ನ ಕಿಡ್ನಿಯನ್ನಾದರೂ ಮಾರಾಟ ಮಾಡಲು ಅನುಮತಿ ನೀಡಲಿ ಎಂದು ಚುನಾವಣಾ ಆಯೋಗಕ್ಕೆ ಕೇಳಿಕೊಂಡಿದ್ದಾರೆ.

    ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 75 ಲಕ್ಷ ರೂ.ಗಳಿಗೆ ನಿಗದಿಗೊಳಿಸಿದೆ. ಆದ್ರೆ ಅಷ್ಟು ಹಣ ತಮ್ಮ ಬಳಿ ಇಲ್ಲದ ಕಾರಣ ಕಿಶೋರ್ ಸಮ್ರಿತ್ ಈ ರೀತಿ ಮನವಿ ಮಾಡಿದ್ದಾರೆ.

    ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಕಿಶೋರ್ ಸಮ್ರಿತ್ ಅವರು, ಚುನಾವಣಾ ಆಯೋಗ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಕೇವಲ 15 ದಿನಗಳ ಅವಕಾಶವನ್ನು ನೀಡದೆ. ಇಷ್ಟು ಹಣವನ್ನು ಈ ಅವಧಿಯಲ್ಲಿ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ನನ್ನ ಬಳಿ ಅಷ್ಟೊಂದು ಹಣವಿಲ್ಲ. ನಾನು ಸಮಾಜದಲ್ಲಿರುವ ಬಡವರನ್ನು ಉದ್ಧಾರ ಮಾಡಬೇಕು ಆದ್ದರಿಂದ ಗೆಲವು ಸಾಧಿಸಬೇಕು. ನನ್ನ ವಿರುದ್ಧ ಸ್ಪರ್ಧಿಸಿದವರು ಭ್ರಷ್ಟಾಚಾರಿಗಳು. ಅವರು ಆ ಅನ್ಯಾಯದ ಹಣವನ್ನು ಚುನಾವಣಾ ಪ್ರಚಾರಕ್ಕೆ ಖರ್ಚು ಮಾಡುತ್ತಿದ್ದಾರೆ. ಆದ್ರೆ ನನಗೆ ಆ ರೀತಿ ಅನ್ಯಾಯವಾಗಿ ಹಣ ಸಂಗ್ರಹಿಸಲು ಆಗಲ್ಲ. ಆದ್ದರಿಂದ ಚುನಾವಣಾ ಆಯೋಗ ನನ್ನ ಮನವಿಯನ್ನು ಪರಿಗಣಿಸಬೇಕೆಂದು ಕೋರಿದ್ದಾರೆ.

  • ದಿಢೀರ್ ಶ್ರೀಮಂತೆಯಾಗಲು ಹೋಗಿ ಮೋಸದ ಬಲೆಗೆ ಮಹಿಳೆ ಬಲಿ!

    ದಿಢೀರ್ ಶ್ರೀಮಂತೆಯಾಗಲು ಹೋಗಿ ಮೋಸದ ಬಲೆಗೆ ಮಹಿಳೆ ಬಲಿ!

    – ಕಿಡ್ನಿ ದಂಧೆಗೆ ಮಂಡ್ಯದ ಮಹಿಳೆ ಬಲಿ
    – ಮಧ್ಯವರ್ತಿಯಿಂದ ಮೋಸ ಹೋದ ಮಹಿಳೆ

    ಮಂಡ್ಯ: ಕಿಡ್ನಿ ದಂಧೆ ರಾಜ್ಯದ ಕೆಲ ಆಸ್ಪತ್ರೆಗಳಲ್ಲಿ ನಡೆಸುತ್ತಿರುವುದನ್ನು ನೀವು ಕೇಳಿದ್ದೀರಿ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಕಿಡ್ನಿ ಮಾರಿ ಮನೆ ಸಮಸ್ಯೆ ಬಗೆಹರಿಸಲು ಸಾಲ ಮಾಡಿ ಮಧ್ಯವರ್ತಿಯಿಂದ ಮೋಸ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮಳವಳ್ಳಿ ಪಟ್ಟಣದ ಗಂಗಾಮತ ಬೀದಿಯ ಮಲ್ಲಯ್ಯ ಪತ್ನಿ ವೆಂಕಟಮ್ಮ (48) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಮೃತ ವೆಂಕಟಮ್ಮ ಮಳವಳ್ಳಿ ಪಟ್ಟಣದಲ್ಲಿ ಸೊಪ್ಪು ಮಾರಿಕೊಂಡು ಜೀವನ ಸಾಗಿಸುತ್ತಿದ್ದರು. ತಾನು ಎಷ್ಟು ದಿನ ಕಷ್ಟ ಪಡುವುದು, ಶ್ರೀಮಂತೆಯಾಗಬೇಕು ಎಂದು ಕನಸು ಕಾಣುತ್ತಿದ್ದಾಗ ಅದೇ ಬೀದಿಯ ತಾರಾ ಎಂಬಾಕೆಯ ಪರಿಚಯವಾಗಿದೆ.

    ವೆಂಕಟಮ್ಮಳಿಗೆ ತಾರಾ ಹಣದಾಸೆ ತೋರಿಸಿ ನಿನ್ನ ಕಿಡ್ನಿ ಮಾರಿದರೆ 30 ಲಕ್ಷ ರೂ. ಕೊಡುತ್ತಾರೆ. ನನಗೆ 3 ಲಕ್ಷ ರೂ. ಕಮಿಷನ್ ನೀಡಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾಳೆ. ಬಳಿಕ ಮುಂಗಡವಾಗಿ 2 ಲಕ್ಷ ರೂ. ಕೊಡು ಎಂದು ಕೇಳಿದ್ದಾಳೆ. ಆಗ ಮೃತ ವೆಂಕಟಮ್ಮ ಸಾಲ ಮಾಡಿ ಹಣವನ್ನು ನೀಡಿದ್ದಳು ಎನ್ನಲಾಗಿದೆ. ವೆಂಕಟಮ್ಮ ಸಾಲಭಾದೆ ತಾಳಲಾರದೇ ಮತ್ತೆ ವಂಚಕಿ ಬಳಿ ಹೋಗಿ ನನ್ನ ಹಣವನ್ನು ವಾಪಸ್ ಕೊಡು ಎಂದು ಕೇಳಿದ್ದಾರೆ. ಆದರೆ ಮಹಿಳೆ ಹಣ ಕೊಡಲು ನಿರಾಕರಿಸಿದ್ದಾಳೆ.

    ಈ ಮಧ್ಯೆ ಮೃತ ವೆಂಕಟಮ್ಮ ತನ್ನ ನೋವನ್ನು ಬೆಂಗಳೂರಿನಲ್ಲಿರುವ ಸಹೋದರಿನಿಗೆ ಹೇಳಿಕೊಂಡಿದ್ದು, ಆ ಸಮಯದಲ್ಲಿ ಅವರು ಸ್ಪಲ್ಪ ಹಣವನ್ನು ನೀಡಿ ಸಹಾಯ ಮಾಡಿದ್ದರು ಎಂದು ತಿಳಿದು ಬಂದಿದೆ. ಆದರೂ ಕಳೆದ ಎರಡು ದಿನಗಳ ಹಿಂದೆ ಮನಸ್ಸಿಗೆ ನೋವಾಗಿ ಮಳವಳ್ಳಿ ಪಟ್ಟಣ ದೊಡ್ಡಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೃತ ವೆಂಕಟಮ್ಮ ರೀತಿಯೇ ಮತ್ತೋರ್ವ ಮಹಿಳೆಯೂ ಈ ವಂಚಕಿಗೆ 1.50 ಲಕ್ಷ ರೂ. ನೀಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರು ಪತಿಯಂದಿರು ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ದಂಧೆಯನ್ನು ನಿಲ್ಲಿಸುವಂತೆ ದೂರು ನೀಡಿದ್ದಾರೆ.

    ಈ ಸಂಬಂಧ ಮಳವಳ್ಳಿ ಪಟ್ಟಣದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಲ್ಲಿ ವಿದೇಶಿ ಪ್ರಜೆಯಿಂದ ಕಿಡ್ನಿ ಮಾರಾಟ ಜಾಲ

    ಬೆಂಗ್ಳೂರಲ್ಲಿ ವಿದೇಶಿ ಪ್ರಜೆಯಿಂದ ಕಿಡ್ನಿ ಮಾರಾಟ ಜಾಲ

    ಬೆಂಗಳೂರು: ವಿದೇಶಿ ಪ್ರಜೆಯೊಬ್ಬ ಬೆಂಗಳೂರಲ್ಲಿ ಕಿಡ್ನಿ ಮಾರಾಟ ಮಾಡಿ ಮೂರು ಕೋಟಿ ರೂ. ದುಡ್ಡು ಮಾಡಿರೋ ಬಗ್ಗೆ ಬೆಳಕಿಗೆ ಬಂದಿದೆ.

    ನೈಜೀರಿಯಾ ಪ್ರಜೆ ಡೇವಿಡ್ ಉಜ್ಮಾ ಉಭಾ ಬೆಂಗಳೂರಲ್ಲಿ ಕಿಡ್ನಿ ಕೊಡಿಸುತ್ತಾನಂತೆ. ಕೊತ್ತನೂರಿನ ನಾಗೇನಹಳ್ಳಿಯಲ್ಲಿ ವಾಸ ಮಾಡುತ್ತಿರೋ ಇವನು ಕಿಡ್ನಿ ಮಾರಾಟ ಜಾಲ ನಡೆಸುತ್ತಿದ್ದ ಅನ್ನೋ ಮಾಹಿತಿಯ ಆಧಾರದ ಮೇಲೆ ಕೊತ್ತನೂರು ಪೊಲೀಸರು ಈತನನ್ನ ವಶಕ್ಕೆ ಪಡೆದಿದ್ದಾರೆ.

    ಖಚಿತ ಮಾಹಿತಿ ಆಧಾರದ ಮೇಲೆ ಈತ ಬಾಡಿಗೆಗೆ ಇದ್ದ ಮನೆ ಮೇಲೆ ರೇಡ್ ಮಾಡಿದ ಪೊಲೀಸರು, ಕಿಡ್ನಿ ಮಾರಾಟ ಜಾಲದ ಹಲವಾರು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ. ಅಲ್ಲದೇ ಈ ರಾಕೆಟ್‍ನಲ್ಲಿ ಹಲವಾರು ಮಂದಿಯಿದ್ದು ವಿಚಾರಣೆಗಾಗಿ ಈತನನ್ನು ಪೊಲೀಸ್ ಕಸ್ಟಡಿಗೆ ಕೂಡ ಪಡೆಯಲಾಗಿದೆ.

    ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕಿಡ್ನಿಯನ್ನು ಕಸಿ ಮಾಡೋದಾಗಿ ಹಲವಾರು ಮಂದಿಯಿಂದ ಹಣ ಪಡೆದಿದ್ದಾನೆ. ಅಲ್ಲದೇ ಪ್ರತಿಷ್ಠಿತ ಆಸ್ಪತ್ರೆಗಳ ರೆಕಾಡ್ರ್ಸ್ ಕೂಡ ಈತನ ಮನೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.