Tag: ಕಿಡಿ

  • ಯಡಿಯೂರಪ್ಪನವರೇ ಸಿಹಿ ಸುದ್ದಿ ಎಲ್ಲಿದೆ ಹೇಳ್ರೀ  – ಬಂಡೆಪ್ಪ ಕಾಶೆಂಪೂರ ವ್ಯಂಗ್ಯ

    ಯಡಿಯೂರಪ್ಪನವರೇ ಸಿಹಿ ಸುದ್ದಿ ಎಲ್ಲಿದೆ ಹೇಳ್ರೀ – ಬಂಡೆಪ್ಪ ಕಾಶೆಂಪೂರ ವ್ಯಂಗ್ಯ

    ಬೀದರ್: ಸಿಹಿ ಸುದ್ದಿ ಎಲ್ಲಿದೆ ಹೇಳ್ರೀ ಯಡಿಯೂರಪ್ಪನವರೇ? ಆ ಸಿಹಿಯನ್ನು ಕರ್ನಾಟಕ ಅಥವಾ ದೆಹಲಿಯಿಂದ ತರುತ್ತೀರೋ ಇಲ್ಲಾ ವಿದೇಶದಿಂದ ಬರಬೇಕೇ ಎಂದು ಪ್ರಶ್ನಿಸಿ ಬಂಡೆಪ್ಪ ಕಾಶೆಂಪೂರ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ರಂಗಮಂದಿರದಲ್ಲಿ ನಡೆದ ಬಡವರ ಬಂಧು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ಈಗಾಗಲೇ ಬಿಜೆಪಿಯ ಎಲ್ಲಾ ಬಾಂಬ್‍ಗಳು ಠುಸ್ಸಾಗಿದ್ದು, ಎಲ್ಲಾ ಅತೃಪ್ತ ಶಾಸಕರು ವಾಪಸ್ ಪಕ್ಷಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಅಥವಾ ಜೆಡಿಎಸ್‍ನ ಸಿಂಗಲ್ ಎಂಎಲ್‍ಎಗಳು ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿ ಈ ಆಟಕ್ಕೆ ರಾಜ್ಯದ ಜನ ಮುಂದೆ ತಕ್ಕ ಉತ್ತರ ಕೊಡುತ್ತಾರೆ ಎಂದು ಕಿಡಿಕಾರಿದರು.

    ಸಿಹಿ ಸುದ್ದಿ ಕೊಡುತ್ತೇವೆ ಎಂದು ಬಾಯಿ ಮಾತಿಗೆ ಹೇಳ್ತಾರೆ. ಯಡಿಯೂರಪ್ಪನವರೇ ಎಲ್ಲಿದೆ ಸಿಹಿ ಸುದ್ದಿ? ಕರ್ನಾಟಕದಲ್ಲಿ ಇದೆಯೇ? ದೆಹಲಿಯಲ್ಲಿ ಇದೆಯೋ? ಇಲ್ಲಾ ವಿದೇಶದಿಂದ ಬರಬೇಕೇ? ಇದೆಲ್ಲ ಬಿಜೆಪಿ ಅವರು ಜನರ ದಿಕ್ಕು ತಪ್ಪಿಸಲು ಮಾಡುತ್ತಿದ್ದಾರೆ. ಅವರ ಆಟ ನಡಿಯುವುದಿಲ್ಲ ಎಂದರು.

    ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಶ್ರೀಗಳ ಆರೋಗ್ಯ ಬೇಗ ಚೇತರಿಕೆಯಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ನಾನು ಕೂಡ ಹೋಗಿ ಶ್ರೀಗಳ ದರ್ಶನ ಪಡೆಯುವೆ. ಕರ್ನಾಟಕಕ್ಕೆ ನಡೆದಾಡುವ ದೇವರ ಕೊಡುಗೆ ಅಪಾರ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅವನೊಬ್ಬ ಮಂಗ, ಅವನಿಗೇನು ಗೊತ್ತು; ಎಂ.ಬಿ ಪಾಟೀಲ್ ವಿರುದ್ಧ ಶಾಮನೂರು ಶಿವಶಂಕರಪ್ಪ ಕಿಡಿ

    ಅವನೊಬ್ಬ ಮಂಗ, ಅವನಿಗೇನು ಗೊತ್ತು; ಎಂ.ಬಿ ಪಾಟೀಲ್ ವಿರುದ್ಧ ಶಾಮನೂರು ಶಿವಶಂಕರಪ್ಪ ಕಿಡಿ

    ದಾವಣಗೆರೆ: ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಶಾಮನೂರು ಶಿವಶಂಕರಪ್ಪ ಅವನೊಬ್ಬ ಮಂಗ, ಅವನಿಗೇನು ಗೊತ್ತು ಅಂತ ದಾವಣಗೆರೆಯಲ್ಲಿ ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಮ್ಮ ವಿಚಾರವಾಗಿ ಎಂ.ಬಿ ಪಾಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ನಾನು ಬೆಳೆದು ಬಂದಿರೋದು ಅವನಿಗೇನು ಗೊತ್ತು, ಅವನು ಇನ್ನು ಸಣ್ಣ ಹುಡುಗ. ನಾನು ಎಲ್ಲೂ ಎಂ.ಬಿ ಪಾಟೀಲ್ ಹೆಸರು ಬಳಸಿಲ್ಲ. ಅವನ ಬಗ್ಗೆ ಏನಾದ್ರು ಮಾತನಾಡಿದ್ನಾ? ಜನ ಮಾತಾಡ್ತಾ ಇರೋದು, ನಡಿದಿರೋದನ್ನ ಹೇಳಿದ್ದೇನೆ. ಅಷ್ಟೇ ಎಂದು ಹೇಳಿದರು. ಇದನ್ನೂ ಓದಿ: ಮಾಜಿ ಸಚಿವ ಶಾಮನೂರು ವಿರುದ್ಧ ಎಂ.ಬಿ ಪಾಟೀಲ್ ಕಿಡಿ

    ವೀರಶೈವ ಲಿಂಗಾಯತ ವಿಚಾರದಲ್ಲಿ 50-60 ವರ್ಷ ಮಲಗಿದ್ನಾ ಅಂತ ಪ್ರಶ್ನಿಸಿದ ಬಳಿಕ ಈ ಕುರಿತು ಏನು ಮಾತನಾಡಲ್ಲ, ನಾವು ನಾವೇ ಕೂತು ಈ ವಿಚಾರ ಬಗೆಹರಿಸಿಕೊಳ್ಳುತ್ತೇವೆ ಎಂದರು. ಹಾಗೆಯೇ ಎಂ.ಬಿ.ಪಾಟೀಲ್ ಅಡ್ಡ ದಾರಿ ಹಿಡಿದಿದ್ದ, ಅವನನ್ನು ಉದ್ದಾರ ಮಾಡಿದ್ದೇ ನಾನು ಮತ್ತು ಪ್ರಭಾಕರ್ ಕೋರೆ, ಅವನಿಗೇನು ಗೊತ್ತು ಅವನು ಮಂಗ ಎಂದು ಕಿಡಿಕಾರಿದ್ದಾರೆ.

    https://www.youtube.com/watch?v=6qGWZkPY2gQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv