Tag: ಕಿಚ್ಚ

  • ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಅಪ್ಡೇಟ್ : ಯಾವಾಗ, ಏನು ಅಂತ ನೋಡ್ಕೊಂಡ್ ಬಿಡಿ

    ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಅಪ್ಡೇಟ್ : ಯಾವಾಗ, ಏನು ಅಂತ ನೋಡ್ಕೊಂಡ್ ಬಿಡಿ

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಕುರಿತು ಅಪ್ ಡೇಟ್ ಸುದ್ದಿಗಾಗಿ ಅಭಿಮಾನಿಗಳು ಕಾಯುತ್ತಿದ್ದರು. ಬಿಡುಗಡೆ ದಿನಾಂಕ, ಹಾಡು ಬಿಡುಗಡೆ, ಇವೆಂಟ್ ಪ್ಲ್ಯಾನ್ ಕುರಿತು ಕುತೂಹಲದಿಂದ ಕಾಯುತ್ತಿದ್ದರು. ಇದಕ್ಕೆಲ್ಲ ಇಂದು ಉತ್ತರ ಸಿಕ್ಕಿದೆ. ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಹುಟ್ಟು ಹಬ್ಬದ ದಿನದಂದು ವಿಶೇಷ ಅಪ್ ಡೇಟ್ ನೀಡಿದ್ದಾರೆ. ಅದನ್ನೂ ಸುಂದರವಾಗಿ ರೂಟ್ ಮ್ಯಾಪ್ ಮಾಡಿ, ಯಾವ ದಾರಿಯಲ್ಲಿ ಏನೆಲ್ಲ ಸಿಗಲಿದೆ ಎನ್ನುವ ಕುರಿತು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : ಖ್ಯಾತ ಗಾಯಕ ಮಿಕಾ ಸಿಂಗ್ ಸ್ವಯಂವರ : ನೀವೂ ಭಾಗಿಯಾಗಬಹುದು

    ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಮೋಷನ್ ಶುರು ಮಾಡಲಿದೆ ಚಿತ್ರತಂಡ. ನಂತರ ‘ಹೇ ಫಕೀರಾ’ ಹಾಡು ರಿಲೀಸ್ ಆಗಲಿದೆ. ಈಗಾಗಲೇ ಟ್ರೇಲರ್ ಗೆ ಬಳಸಿಕೊಂಡಿರುವ ಮತ್ತು ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದ ‘ಗುಮ್ಮ ಬಂದ ಗುಮ್ಮ’ ಹಾಡು ಬಿಡುಗಡೆ ಆಗಲಿದೆ. ಇದಾದ ಕೆಲ ದಿನಗಳ ನಂತರ ‘ಚಿಕ್ಕಿ ಬೊಂಬೆ’ ಗೀತೆಯನ್ನು ರಿಲೀಸ್ ಮಾಡಲಿದ್ದಾರಂತೆ. ಬ್ಯಾಕ್ ಟು ಬ್ಯಾಕ್ ಎರಡು ಹಾಡುಗಳು ರಿಲೀಸ್ ಆದ ನಂತರ ಅಭಿಮಾನಿಗಳಿಗೆ ಒಂದ್ ಸರ್ ಪ್ರೈಸ್ ಕಾದಿದೆ. ಆ ಸರ್ ಪ್ರೈಸ್ ಏನು ಎನ್ನುವುದನ್ನು ಚಿತ್ರತಂಡ ಹೇಳಿಲ್ಲ. ಇದನ್ನೂ ಓದಿ : ಉಕ್ರೇನ್ ನಿಂದ ಪಲಾಯನ ಮಾಡಿದ ಹಾಲಿವುಡ್ ಸ್ಟಾರ್

    ಸರ್ ಪ್ರೈಸ್ ಮುಗಿಯುತ್ತಿದ್ದಂತೆಯೇ ಮತ್ತೊಂದು ಗೀತೆಯನ್ನು ಬಿಡುಗಡೆ ಮಾಡುವ ಪ್ಲ್ಯಾನ್ ಚಿತ್ರತಂಡ ಮಾಡಿಕೊಂಡಿದ್ದು, ಈ ಗೀತೆ ರಿಲೀಸ್ ಆಗುತ್ತಿದ್ದಂತೆಯೇ ಮತ್ತೊಂದು ಸರ್ ಪ್ರೈಸ್ ಕಾದಿದೆ. ಅದು ಕೂಡ ಸಸ್ಪನ್ಸ್. ಎರಡು ಸರ್ ಪ್ರೈಸ್ ಮುಗಿಯುತ್ತಿದ್ದಂತೆಯೇ ‘ದ ಕ್ವೀನ್ ಆಫ್ ಗುಡ್ ಟೈಮ್ಸ್’ ಸಾಂಗ್ ರಿಲೀಸ್ ಆಗಲಿದೆ. ಆನಂತರ ವಿಕ್ರಾಂತ್ ರೋಣ ಚಿತ್ರದ ಟ್ರೇಲರ್ ಬಿಡುಗಡೆ. ಟ್ರೇಲರ್ ನೋಡಿದವರಿಗೂ ಮತ್ತೊಂದು ಸರ್ ಪ್ರೈಸ್ ಕಾದಿದೆ. ಇಷ್ಟೊಂದು ಸರ್ ಪ್ರೈಸ್ ಗಳನ್ನು ದಾಟಿಕೊಂಡು ಬಂದರೆ ಚಿತ್ರ ಬಿಡುಗಡೆ. ಇದನ್ನೂ ಓದಿ : ಪಟ್ಟಭದ್ರ ಹಿತಾಸಕ್ತಿಯಿಂದ ಪೆದ್ರೊ ವಂಚಿತ : ಚಿತ್ರೋತ್ಸವದ ಬಗ್ಗೆ ರಿಷಭ್ ಶೆಟ್ಟಿ ಅಸಮಾಧಾನ

    ಮೂಲಗಳ ಪ್ರಕಾರ ಸರ್ ಪ್ರೈಸ್ ಅಂದರೆ, ದೇಶದ ನಾನಾ ರಾಜ್ಯಗಳಲ್ಲಿ ಇವೆಂಟ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ, ಆಯಾ ಭಾಷೆಯ ಚಿತ್ರರಂಗದ ಗಣ್ಯರ ಮಧ್ಯೆ ಇವೆಂಟ್ ಮಾಡುವ ಯೋಜನೆ ಸಿದ್ಧವಾಗಿದೆಯಂತೆ.

  • ವೈರಲ್ ಆಯ್ತು ಕಿಚ್ಚನ ಮನೆಯ ಸ್ಕೂಟಿ ಟೇಬಲ್

    ವೈರಲ್ ಆಯ್ತು ಕಿಚ್ಚನ ಮನೆಯ ಸ್ಕೂಟಿ ಟೇಬಲ್

    ನೆಚ್ಚಿನ ನಟನ ಮನೆಯಲ್ಲಿರುವ ವಸ್ತುಗಳ ಬಗ್ಗೆ ಅವರ ಅಭಿಮಾನಿಗಳಿಗೆ ಯಾವತ್ತಿಗೂ ಕುತೂಹಲ. ಇವತ್ತು ಕಿಚ್ಚ ಸುದೀಪ್ ಅವರ ಮನೆಯ ವಿಶೇಷ ಟೇಬಲ್ ವೊಂದು ಫೋಟೋ ರೂಪದಲ್ಲಿ ಆಚೆ ಬಂದಿದೆ. ಸದ್ಯ ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ : ಯದುವೀರನಿಗಾಗಿ ಕನ್ನಡಕ್ಕೆ ವಾಪಸ್ಸಾದ ನೇಹಾ ಶೆಟ್ಟಿ


    ಅಷ್ಟಕ್ಕೂ ಈ ಟೇಬಲ್ ವಿಶೇಷ ಅಂದರೆ, ಸ್ಕೂಟರ್ ಮೇಲೆ ತಯಾರಾದ ಟೇಬಲ್ ಅದಾಗಿದ್ದು, ಸುಸಜ್ಜಿತ ಸ್ಕೂಟರ್ ನಲ್ಲಿ ಸೀಟ್ ಬದಲಾಗಿ ಟೇಬಲ್ ಅಳವಡಿಸಿದ್ದಾರೆ. ಸ್ಕೂಟರಿನ ವ್ಹೀಲ್ ಜತೆಗೆ ಟೇಬಲ್ ಗೂ ನಾಲ್ಕು ಚಕ್ರಗಳನ್ನು ಹಾಕಲಾಗಿದೆ. ಆರಾಮಾಗಿ ಕುಳಿತುಕೊಳ್ಳುವಂತೆ ಅದನ್ನು ವಿನ್ಯಾಸ ಮಾಡಲಾಗಿದೆ. ಇದನ್ನು ಓದಿ : ಡಾ.ವಿಷ್ಣು ಪುತ್ಥಳಿ ಅನಾವರಣಕ್ಕೆ ಹಿಜಬ್ -ಕೇಸರಿ ವಿವಾದ ಅಡ್ಡಿ


    ಸದ್ಯ ಹರಿದಾಡುತ್ತಿರುವ ಆ ಫೋಟೋದಲ್ಲಿ ಕಿಚ್ಚ ಸುದೀಪ್ ಕಾಫಿ ಕಪ್ ಜತೆ ಟೇಬಲ್ ಮೇಲೆ ಕೂತಿದ್ದಾರೆ. ನಿರ್ದೇಶಕ ಅನೂಪ್ ಭಂಡಾರಿ ಟೇಬಲ್ ಗೆ ಒರಗಿಕೊಂಡು ಎದ್ದು ನಿಂತಿದ್ದಾರೆ. ಈ ಫೋಟೋವನ್ನು ಸುದೀಪ್ ಅವರ ಫೆವರೆಟ್ ಕಿಚನ್ ಮುಂದೆಯೇ ತಗೆಯಲಾಗಿದೆ.

  • ಅನೂಪ್ ಭಂಡಾರಿ ಜತೆ ಮತ್ತೊಂದು ಚಿತ್ರ : ಸರ್ಪೈಸ್ ಕೊಟ್ಟ ಸುದೀಪ್

    ಅನೂಪ್ ಭಂಡಾರಿ ಜತೆ ಮತ್ತೊಂದು ಚಿತ್ರ : ಸರ್ಪೈಸ್ ಕೊಟ್ಟ ಸುದೀಪ್

    ಶುಕ್ರವಾರ ಬೆಳ್ಳಂಬೆಳಗ್ಗೆ ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟಿದ್ದಾರೆ ಕಿಚ್ಚ ಸುದೀಪ್. ವಿಕ್ರಾಂತ್ ರೋಣ ಸಿನಿಮಾದ ತ್ರಿಡಿ ವರ್ಷನ್ ನೋಡಿ ಮೆಚ್ಚಿಕೊಂಡಿದ್ದಲ್ಲದೇ, ಈ ಮೂಲಕ ಇಡೀ ಚಿತ್ರತಂಡಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ. ಇದನ್ನೂ ಓದಿ : ಭೋಜಪುರಿ ಚಿತ್ರರಂಗದಲ್ಲಿ ಕನ್ನಡ ನಾಯಕಿಯರ ಕಲರವ

    “ವಿಕ್ರಾಂತ್ ರೋಣ ತ್ರಿಡಿ ಅದ್ಭುತವಾಗಿ ಮೂಡಿ ಬಂದಿದೆ. ಈ ಸಿನಿಮಾದ ಬಿಡುಗಡೆಯ ದಿನಾಂಕಕ್ಕಾಗಿ ನಾನು ಕಾಯುತ್ತಿದ್ದೇನೆ. ಜತೆಗೆ ನಿರ್ದೇಶಕ ಅನೂಪ್ ಭಂಡಾರಿ ಅವರ ಜತೆಗಿನ ಮತ್ತೊಂದು ಸಿನಿಮಾ ಕುರಿತಾದ ಮಾಹಿತಿ ಹಂಚಿಕೊಳ್ಳಲು ಕಾತುರನಾಗಿದ್ದೇನೆ” ಎಂದು ಸುದೀಪ್ ಟ್ವಿಟ್ ಮಾಡಿದ್ದಾರೆ. ಇದನ್ನು ಓದಿ :ಗ್ಯಾಂಗ್ ಸ್ಟಾರ್ ಅವತಾರದಲ್ಲಿ ದೊಡ್ಮನೆ ಕುಡಿ


    ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ ನ ‘ವಿಕ್ರಾಂತ್ ರೋಣ’ ಸಿನಿಮಾದ ಕೆಲಸ ಬಹುತೇಕ ಮುಗಿದಿದೆ. ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಕೋವಿಡ್ ಮತ್ತು ಸರಕಾರದ ಕೆಲ ನಿಯಮಗಳಿಂದಾಗಿ ಬಿಡುಗಡೆ ಎರಡೆರಡು ಬಾರಿ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದಾರೆ. ಈ ಬಾರಿ ಪಕ್ಕಾ ದಿನಾಂಕವನ್ನು ಗೊತ್ತು ಮಾಡಿಕೊಂಡು ಅಖಾಡಕ್ಕೆ ಇಳಿಯಲಿದೆಯಂತೆ ಚಿತ್ರತಂಡ. ಇದನ್ನೂ ಓದಿ : ಈ ವರ್ಷ ಯಾರೆಲ್ಲ ನಟರು ನಿರ್ದೇಶನ ಮಾಡಲಿದ್ದಾರೆ ಗೊತ್ತಾ?


    ಅನೂಪ್ ಭಂಡಾರಿ ಜತೆ ಸುದೀಪ್ ಅವರು ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಅದನ್ನು ಇಷ್ಟು ಬೇಗ ಸುದೀಪ್ ಅವರು ಬಹಿರಂಗ ಪಡಿಸುತ್ತಾರೆ ಅಂದುಕೊಂಡಿರಲಿಲ್ಲ. ಸುದ್ದಿ ಬಹಿರಂಗವಾಗಿದ್ದರೂ, ಸಿನಿಮಾ ಆಗುವುದು ಸದ್ಯಕ್ಕಂತೂ ಅಲ್ಲ.

  • ನನ್ನ ಅಭಿಮಾನಿಗಳಿಂದಲೇ ನಾನು ಇಲ್ಲಿ ಇರೋದು: ಕಿಚ್ಚ

    ನನ್ನ ಅಭಿಮಾನಿಗಳಿಂದಲೇ ನಾನು ಇಲ್ಲಿ ಇರೋದು: ಕಿಚ್ಚ

    – ಪೈರಸಿ, ಕಳ್ಳರಿಗೆ ನಾನು ಹೆದರಲ್ಲ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಬಹುನೀರಿಕ್ಷೆಯನ್ನು ಹುಟ್ಟಿಸಿರುವ ಸಿನಿಮಾ ಕೋಟಿಗೊಬ್ಬ3. ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕುರಿತಾಗಿ ಕಿಚ್ಚ ಕೆಲವು ವಿಚಾರಗಳನ್ನು ಮಾಧ್ಯಮದವರ ಮುಂದೆ ಹಂಚಿಕೊಂಡಿದ್ದಾರೆ.


    ಕೋಟಿಗೊಬ್ಬ 3 ಸಿನಿಮಾ ಸುದೀಪ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14ರಂದು ಎರಡು ಸಿನಿಮಾ ರಿಲೀಸ್ ಆಗುತ್ತಿದ್ದು, ಖುಷಿಯಾಗುತ್ತಿದೆ. ಕಥೆ ಇಷ್ಟ ಆಗಿದೆ, ಸಿನಿಮಾ ಪ್ರೇಕ್ಷಕರಿಗೆ ಖುಷಿ ನೀಡುತ್ತದೆ. ಹುಚ್ಚ ಸಿನಿಮಾದಿಂದ ಶುರು ಮಾಡಿದರೆ, ಆ ಕಥೆ ಹೇಗೆ ಹೇಳಬೇಕೊ ಹಾಗೇ ಹೇಳಿದ್ದೇವೆ. ಹಾಗೇ ಈ ಕಥೆ ಹೇಗೆ ಹೇಳಬೇಕೊ ಹಾಗೆ ಹೇಳಿದ್ದೇವೆ ಎಂದಿದ್ದಾರೆ.

    ವಾಪಾಸು ಒಂದು ಪಯಣ ಶುರುವಾಗಿದೆ. ಕೊರೊನಾ ಸಮಯದಲ್ಲಿ ತುಂಬಾ ಎಫೆಕ್ಟ್ ಆಗಿದೆ. ಎಷ್ಟು ಜನ ಕೆಲಸ ಹೋಗಿದೆ. ಹಾಗಂತ ಕೆಲಸ ಮಾಡದು ನಿಲ್ಲಸಲ್ಲ ಎಂದಿದ್ದಾರೆ. ಯಶ್ ಜೊತೆ ಸೆಲ್ಫಿಗೆ ಮುಗಿಬಿದ್ದ ಮುಂಬೈ ಅಭಿಮಾನಿಗಳು

    ಅರ್ಜುನ್ ಮ್ಯೂಸಿಕ್ ಚೆನ್ನಾಗಿದೆ. ಹೊರ ದೇಶದ ರೋಡ್‍ಗಳಲ್ಲಿ ಆ್ಯಕ್ಷನ್ ಸಿಕ್ವೇಲ್‍ಗಳು ಚೆನ್ನಾಗಿದೆ. 50-30 ಕಾರುಗಳು ಚೇಸಿಂಗ್ ನೋಡೊಕೆ ಚೆನ್ನಾಗಿತ್ತು. ನನಗೆ ಹೊಸ ಅನುಭವವಾಗಿದೆ. ಪೈರಸಿಗೆ ಹೆದರಲ್ಲ. ಕಳ್ಳರಿಗೆ ನಾನು ಭಯ ಪಡಲ್ಲ. ನನ್ನ ಫ್ಯಾನ್ಸ್ ನಿಂದಲೇ ನಾನು ಇಲ್ಲಿ ಇರೋದು ಎಂದು ಹೇಳಿದ್ದಾರೆ.

  • ‘ಕಿಚ್ಚ’ ಅನ್ನೋ ಗುರುತು ನೀವು ಕೊಟ್ಟ ಗಿಫ್ಟ್, ಕೊನೆವರೆಗೂ ಕಾಪಾಡಿಕೊಳ್ತೀನಿ: ಸುದೀಪ್

    ‘ಕಿಚ್ಚ’ ಅನ್ನೋ ಗುರುತು ನೀವು ಕೊಟ್ಟ ಗಿಫ್ಟ್, ಕೊನೆವರೆಗೂ ಕಾಪಾಡಿಕೊಳ್ತೀನಿ: ಸುದೀಪ್

    – ಅಭಿಮಾನಿಗಳಿಗೆ ಅಭಿನಯ ಚಕ್ರವರ್ತಿ ಧನ್ಯವಾದ

    ಬೆಂಗಳೂರು: ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಸುದೀಪ್ ಅವರು ಇಂದು ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ನಟನ ಅಭಿಮಾನಿಯೊಬ್ಬರು, ಸುದೀಪ್ ಅವರ ಫೋಟೋವೊಂದನ್ನು ಬ್ಲ್ಯಾಕ್ ಆ್ಯಂಡ್ ವೈಟ್ ಮಾಡಿ ಅದರ ಮೇಲೆ ‘ಕಿಚ್ಚ ಫಾರೆವರ್’ ಎಂದು ಇಂಗ್ಲಿಷ್ ನಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋವನ್ನು ಅಭಿಮಾನಿ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಅಪ್ಲೋಡ್ ಮಾಡಿಕೊಂಡು ಕಿಚ್ಚ ಸುದೀಪ್ ಅವರ ಹೊಸ ಪ್ರೊಫೈಲ್ ಫೋಟೋ ಎಂದು ಬರೆದುಕೊಂಡಿದ್ದಾನೆ.

    https://twitter.com/SpreadSudeepism/status/1289442438285672448

    ಈ ಟ್ವೀಟ್ ಅನ್ನು ಸಂತಸದಿಂದಲೇ ಶೇರ್ ಮಾಡಿಕೊಂಡಿರುವ ಸುದೀಪ್, ”ಹೌದು. ಕಿಚ್ಚ ಎನ್ನುವುದು ನನ್ನ ಗುರುತಾಗಿದ್ದು, ಈ ಗುರುತನ್ನು ನೀವೇ ನನಗೆ ಕೊಟ್ಟಿದ್ದೀರಿ. ಈ ಗಿಫ್ಟ್ ಅನ್ನು ಕೊನೆಯವರೆಗೂ ಕಾಪಾಡಿಕೊಳ್ಳುತ್ತೇನೆ. ನೀವೆಲ್ಲ ನನ್ನನ್ನು ಕಿಚ್ಚ ಎಂದು ಪ್ರೀತಿಯಿಂದ ಕರೆಯುತ್ತಿದ್ದೀರಿ. ಹಾಗಾಗಿ ನಾನು ಕೂಡ ಕಿಚ್ಚನಾಗಿಯೇ ನಿಮ್ಮಲ್ಲರನ್ನೂ ಪ್ರೀತಿಸುತ್ತೇನೆ. ಹಾಗೆಯೇ ಈ ಪೋಸ್ಟರ್ ಡಿಸೈನ್ ಮಾಡಿದವರಿಗೆ ಧನ್ಯವಾದ” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಅದೇ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯ ಪ್ರೊಫೈಲ್ ಫೋಟೋ ಆಗಿ ಮಾಡಿಕೊಂಡಿದ್ದಾರೆ.

    ಸುದೀಪ್ ಅವರಿಗೆ ‘ಹುಚ್ಚ’ ಚಿತ್ರದ ‘ಕಿಚ್ಚ’ ಪಾತ್ರ ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಆ ಬಳಿಕ ‘ಕಿಚ್ಚ’ ಎಂಬ ಹೆಸರಿನ ಚಿತ್ರ ಕೂಡ ನಿರ್ಮಾಣವಾಯಿತು. ಬಳಿಕದಿಂದ ಸುದೀಪ್ ಕಿಚ್ಚ ಎಂಬ ಹೆಸರಿನಿಂದಲೇ ಪ್ರಸಿದ್ಧಿಯಾದರು. ಸದ್ಯ ಸುದೀಪ್ ತಮ್ಮ ‘ಫ್ಯಾಂಟಮ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಹೈದರಾಬಾದ್‍ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ.