Tag: ಕಿಚ್ಚ

  • ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

    ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

    ಪುನೀತ್ ರಾಜ್ ಕುಮಾರ್ ನಿಧನದ ನಂತರ ಬಹುತೇಕ ಕಲಾವಿದರ ಅಭಿಮಾನಿಗಳು ಒಂದಾಗಿ ‘ನಾವು ಫ್ಯಾನ್ಸ್ ವಾರ್ ಮಾಡಲ್ಲ’ ಎಂದು ಘೋಷಣೆ ಮಾಡಿದ್ದರು. ಈ ಕುರಿತು ಎಲ್ಲ ಸ್ಟಾರ್ ನಟರ ಫೋಟೋ ಒಳಗೊಂಡ ಪೋಸ್ಟರ್ ಕೂಡ ರಿಲೀಸ್ ಮಾಡಿದ್ದರು. ಈ ಪೋಸ್ಟರ್ ಹಂಚಿಕೊಂಡು ಇನ್ನೂ ಆರು ತಿಂಗಳು ಕಳೆದಿಲ್ಲ ಆಗಲೇ ಮತ್ತೆ ಫ್ಯಾನ್ಸ್ ವಾರ್ ಶುರು ಮಾಡಿಕೊಂಡಿದ್ದಾರೆ. ಕಾರಣ ಸುದೀಪ್ ಅವರು ಕೆಜಿಎಫ್ 2 ಚಿತ್ರಕ್ಕೆ ಶುಭ ಹಾರೈಸಿಲ್ಲ ಎನ್ನುವುದು. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

    ಯಶ್ ನಟನೆಯ ಕೆಜಿಎಫ್ 2 ಸಿನಿಮಾ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದಕ್ಷಿಣದ ಬಹುತೇಕ ತಾರೆಯರು ಮತ್ತು ಬಾಲಿವುಡ್ ಸಿನಿ ರಂಗ ಕೆಲವು ನಟ ನಟಿಯರು ಸಿನಿಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಬಗ್ಗೆ ಅಭಿಮಾನದಿಂದ ಬರೆದುಕೊಂಡಿದ್ದಾರೆ. ಆದರೆ, ಕನ್ನಡದ ಕೆಲ  ನಟರು ಕೆಜಿಎಫ್ 2 ಸಿನಿಮಾದ ಬಗ್ಗೆ ಒಂದು ಪೋಸ್ಟ್ ಕೂಡ ಮಾಡಿಲ್ಲ ಎನ್ನುವುದು ಹಲವು ಅಭಿಮಾನಿಗಳ ತಕರಾರು. ಅದಕ್ಕೆ ಗುರಿಯಾಗಿದ್ದು ಕಿಚ್ಚು ಸುದೀಪ್. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್ 

    ನೆನ್ನೆಯಷ್ಟೇ ಸುದೀಪ್ ಅವರು ಎಂದೋ ಆಡಿದ  ಐದತ್ತು ಸೆಕೆಂಡುಗಳು ವಿಡಿಯೋ ಕ್ಲಿಪ್ ಅನ್ನು ಇಟ್ಟುಕೊಂಡು ಕಿಚ್ಚನ ಬಗ್ಗೆ ಸಲ್ಲದ ಕಾಮೆಂಟ್ ಮಾಡಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ ಸುದೀಪ್ ಅವರ ಅಭಿಮಾನಿಗಳು ಕೂಡ ಕೌಂಟರ್ ಕಾಮೆಂಟ್ ನೀಡುತ್ತಿದ್ದಾರೆ. ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಫ್ಯಾನ್ಸ್ ವಾರ್ ಶುರು ಮಾಡಿದೆ. ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿ

    ಸದ್ಯ ಹರಿದಾಡುತ್ತಿರುವ ವಿಡಿಯೋ ಕ್ಲಿಪ್ ನಲ್ಲಿ ಪತ್ರಕರ್ತರೊಬ್ಬರು ‘ಕೆಜಿಎಫ್’ ಬಗ್ಗೆ ಹೇಳಿ ಎಂದು ಕೇಳುತ್ತಾರೆ. ‘ನಾನು ಆ ಸಿನಿಮಾದಲ್ಲಿ ಇಲ್ಲ’ ಎಂದಷ್ಟೇ ಚುಟುಕಾಗಿ ಸುದೀಪ್ ಉತ್ತರ ಕೊಟ್ಟಿದ್ದಾರೆ. ಅದನ್ನೇ ಹಿಡಿದುಕೊಂಡು ಕೆಲವರು ಕಿಚ್ಚನ ತೇಜೋವಧೆ ಮಾಡುತ್ತಿದ್ದಾರೆ. ಅದಕ್ಕೆ ಉತ್ತರವಾಗಿ ಸುದೀಪ್ ಅಭಿಮಾನಿಗಳು ಕೂಡ ಅಷ್ಟೇ ಖಡಕ್ಕಾಗಿಯೇ ಉತ್ತರ ನೀಡಿದ್ದು, ಈ ಹಿಂದೆ ಸುದೀಪ್ ಅವರು ಕೆಜಿಎಫ್ 1 ಸಿನಿಮಾ ರಿಲೀಸ್ ಆದಾಗ ಟ್ವಿಟ್ ಮಾಡಿರುವ ಸ್ಕ್ರೀನ್ ಶಾಟ್ ಹಾಕಿದ್ದಾರೆ ಅಲ್ಲದೇ ಈ ಹಿಂದೆ ಮತ್ತೊಬ್ಬ ಕನ್ನಡದ ಸ್ಟಾರ್ ನಟನ ಚಿತ್ರಕ್ಕೆ ಸುದೀಪ್ ಶುಭ ಹಾರೈಸಿದಾಗ, ಆ ನಟ ನಡೆದುಕೊಂಡ ರೀತಿಯ ಕುರಿತು ಅಭಿಮಾನಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.  ಇದನ್ನೂ ಓದಿ : ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಪುತ್ರನ ಸಾಹಸವಿದು

    ಸುದೀಪ್ ಕೂಡ ಭಾರತೀಯ ಸಿನಿಮಾ ರಂಗದ ನಟ. ಅವರಿಗೂ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಅಲ್ಲದೇ, ಗೌರವ ಇಲ್ಲದೇ ಇರುವ ಕಡೆ ಸುದೀಪ್ ಇರುವುದಿಲ್ಲ. ಅದು ಅವರ ಗುಣ. ಪ್ರೀತಿಯಿಂದಲೇ ಎಲ್ಲರನ್ನೂ ಅವರು ಕಾಣುತ್ತಾರೆ. ಸುಮ್ಮನೆ ಕಲಾವಿದರ ಮಧ್ಯೆ ತಂದಿಡುವ ಕೆಲಸ ನಡೆಯುತ್ತಿದೆ ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ ಡಾ.ವಿಷ್ಣು ಸೇನಾಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್. ಅಲ್ಲದೇ ಅನೇಕರು ಈ ಕುರಿತು ಬೇಸರ ವ್ಯಕ್ತ ಪಡಿಸಿದ್ದಾರೆ. ಫ್ಯಾನ್ಸ್ ನಿಂದಾಗಿ ಕಲಾವಿದರಿಗೆ ಮುಜಗರ ಆಗಬಾರದು ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  • ಕಿಚ್ಚನ ಭೇಟಿಗೆ 600 ಕಿಲೋ ಮೀಟರ್ ನಡೆದು ಬಂದ ಮಹಿಳಾ ಅಭಿಮಾನಿಗಳು

    ಕಿಚ್ಚನ ಭೇಟಿಗೆ 600 ಕಿಲೋ ಮೀಟರ್ ನಡೆದು ಬಂದ ಮಹಿಳಾ ಅಭಿಮಾನಿಗಳು

    ಕಿಚ್ಚನ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗಾಗಿ ಏನೆಲ್ಲ ಮಾಡುತ್ತಾರೆ. ಈ ಹಿಂದೆ ಹೈದರಾಬಾದ್ ಕರ್ನಾಟಕದಲ್ಲಿ ಅಭಿಮಾನಿಯೊಬ್ಬ ಸುದೀಪ್ ಅವರ ಗುಡಿ ಕಟ್ಟಿಸಿದ್ದ. ಅಲ್ಲದೇ ಅನೇಕ ಕಡೆ ಕಿಚ್ಚನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಮೈಮೇಲೆ ಹಚ್ಚೆ ಹಾಕಿಸಿಕೊಳ್ಳುವುದು ಕಾಮನ್ ಆಗಿದೆ. ಇದೀಗ ಮಹಿಳಾ ಅಭಿಮಾನಿ ಮೂವರು ಮತ್ತು ಮತ್ತೋರ್ವ ವ್ಯಕ್ತಿ ಸುದೀಪ್ ಅವರನ್ನು ನೋಡುವುದಕ್ಕಾಗಿಯೇ 600 ಕಿಲೋ ಮೀಟರ್ ನಡೆದುಕೊಂಡು ಬಂದಿದ್ದಾರೆ. ಬರೋಬ್ಬರಿ 16 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಬಂದ ಅಭಿಮಾನಿಗಳು ನೆಚ್ಚಿನ ನಟನ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

    ಈ ವಿಷಯ ತಿಳಿದ ಸುದೀಪ್ ಅವರು, ಅಭಿಮಾನಿಗಳನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಅವರ ಅಭಿಮಾನಕ್ಕೆ ಶರಣಾಗಿದ್ದಾರೆ. ಅವರ ಕಷ್ಟ ಸುಖಗಳನ್ನು ವಿಚಾರಿಸಿಕೊಂಡು ಕೆಲ ಹೊತ್ತು ಅವರೊಂದಿಗೆ ಕಾಲ ಕಳೆದಿದ್ದಾರೆ. ದೂರದ ಕಲಬುರಗಿ ಹಳ್ಳಿಯೊಂದರಿಂದ ಬಂದ ಆ ಅಭಿಮಾನಿಗಳು ನೆಚ್ಚಿನ ನಟ ಜತೆ ಕಳೆದ ಕ್ಷಣಗಳನ್ನು ಯಾವತ್ತೂ ಮರೆಯುವುದಕ್ಕೆ ಆಗಲ್ಲ ಅಂದಿದ್ದಾರೆ.  ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ

    ಅಭಿಮಾನಿಗಳ ವಿಷಯದಲ್ಲಿ ಸುದೀಪ್ ಯಾವತ್ತೂ ಗೌರವ ತೋರಿಸುತ್ತಾ ಬಂದಿದ್ದಾರೆ. ಹಾಗಾಗಿಯೇ ಸುದೀಪ್ ಅವರಿಗೆ ಪ್ರತ್ಯೇಕ ಮಹಿಳಾ ಅಭಿಮಾನಿ ಸಂಘಗಳು ಇವೆ. ಅನೇಕ ಸಂದರ್ಭದಲ್ಲಿ ಅಭಿಮಾನಿಗಳ ಪರ ನಿಂತು ಹೋರಾಟ ಮಾಡಿದ್ದಾರೆ. ಅವರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಅನೇಕ ಅಭಿಮಾನಿಗಳ ಜೀವನಕ್ಕೆ ದಾರಿಯೂ ಆಗಿದ್ದಾರೆ. ಹಾಗಾಗಿ ಅತೀ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಕನ್ನಡದ ನಟರಲ್ಲಿ ಇವರು ಒಬ್ಬರಾಗಿದ್ದಾರೆ. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್

    ಸದ್ಯ ಸುದೀಪ್ ಅವರ ‘ವಿಕ್ರಾಂತ ರೋಣ’ ಸಿನಿಮಾ ರಿಲೀಸ್ ಗೆ ರೆಡಿ ಇದೆ. ಮೊನ್ನೆಯಷ್ಟೇ ರಿಲೀಸ್ ಆದ ಚಿತ್ರದ ಟೀಸರ್ ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಕೂಡ ನಿರೀಕ್ಷೆ ಹುಟ್ಟು ಹಾಕಿದೆ. ಹತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಈ ಸಿನಿಮಾವನ್ನು ತೆರೆಗೆ ತರುವ ಪ್ಲ್ಯಾನ್ ಚಿತ್ರತಂಡದ್ದು.

  • ಸುದೀಪ್ ‘ಕಬ್ಜ’ ಚಿತ್ರದಿಂದ ಹೊರ ನಡೆದಿರುವ ಸುದ್ದಿ ಸುಳ್ಳು : ನಿರ್ದೇಶಕ ಆರ್.ಚಂದ್ರು

    ಸುದೀಪ್ ‘ಕಬ್ಜ’ ಚಿತ್ರದಿಂದ ಹೊರ ನಡೆದಿರುವ ಸುದ್ದಿ ಸುಳ್ಳು : ನಿರ್ದೇಶಕ ಆರ್.ಚಂದ್ರು

    ಹೆಸರಾಂತ ನಿರ್ದೇಶಕ ಆರ್.ಚಂದ್ರು ಅವರ ‘ಕಬ್ಜ’ ಸಿನಿಮಾದಿಂದ ಸುದೀಪ್ ಅವರು ಹೊರ ನಡೆದಿದ್ದಾರೆ ಎನ್ನುವ ಸುದ್ದಿ ನೆನ್ನೆಯಿಂದ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿತ್ತು. ಆರ್.ಚಂದ್ರು ಮತ್ತು ಸುದೀಪ್ ನಡುವೆ ಮನಸ್ತಾಪ ಕಾರಣದಿಂದಾಗಿ ಕಿಚ್ಚ ‘ಕಬ್ಜ’ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂಬ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು. ಇದನ್ನೂ ಓದಿ : ಪಾವನಾ ನಾಯಕಿಯಾಗಿ ನಟಿಸಿದ ‘ಇನ್’ ಚಿತ್ರದ ಟೀಸರ್ ರಿಲೀಸ್ ಮಾಡಿದ ಕಿಚ್ಚ

    ಸುದೀಪ್ ಮತ್ತು ಉಪೇಂದ್ರ ಕಾಂಬಿನೇಷನ್ ನ ಈ ಸಿನಿಮಾ ಭಾರೀ ಬಜೆಟ್ ನಲ್ಲಿ ಮೂಡಿ ಬರುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಈ ಸಿನಿಮಾದಲ್ಲಿ ಸುದೀಪ್ ಮತ್ತು ಉಪೇಂದ್ರ ವಿಭಿನ್ನ ರೀತಿಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಸುದೀಪ್ ಕೂಡ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳು ನಡೆದರೂ, ಕಿಚ್ಚ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನುವುದು ನಾನಾ ರೀತಿಯ ಅನುಮಾನಕ್ಕೂ ಕಾರಣವಾಗಿತ್ತು. ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಚಿತ್ರಕ್ಕೆ ಮತ್ತೆರಡು ಪುರಸ್ಕಾರ

    ಈ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಆರ್.ಚಂದ್ರು, “ಎಲ್ಲರಿಗೂ ನಮಸ್ಕಾರ, ನಿನ್ನೆಯಿಂದ ಸುದೀಪ್ ಅವರು ಕಬ್ಜ ಚಿತ್ರತಂಡದಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆ ಸುದ್ದಿ ಸತ್ಯಕ್ಕೆ ದೂರವಾದದ್ದು. ಕಿಚ್ಚು ಸುದೀಪ್ ಅವರು ಈಗಾಗಲೇ ಕಬ್ಜ ಚಿತ್ರೀಕರಣದಲ್ಲಿ ಪಾಲ್ಗೊಂಡು ನಟಿಸಿದ್ದಾರೆ. ಹಾಗಾಗಿ ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಗೆ ಯಾರೂ ಕಿವಿಗೊಡಬಾರದು” ಎಂದು ಟ್ವಿಟ್ ಮಾಡಿದ್ದಾರೆ ನಿರ್ದೇಶಕರು. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ

    ಇಬ್ಬರು ಸ್ಟಾರ್ ನಟರು ಸಿನಿಮಾದಲ್ಲಿ ಇದ್ದಾರೆ ಎಂದರೆ, ಸಿನಿಮಾ ಕುರಿತು ಹೈಪ್ ಕ್ರಿಯೇಟ್ ಆಗುವುದು ಸಹಜ. ಅಲ್ಲದೇ, ಈ ಇಬ್ಬರೂ ಸ್ಟಾರ್ ನಟರು ಈಗಾಗಲೇ ಹಲವು ಚಿತ್ರರಂಗಗಳ ಜತೆ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಕಬ್ಜ ಚಿತ್ರ ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲೇ ತಯಾರಾಗಿದೆ. ಅಷ್ಟೇ ಸದ್ದು ಮಾಡುತ್ತಿದೆ. ಹೀಗಾಗಿ ಕಿಚ್ಚನ ಬಗ್ಗೆ ಗಾಸಿಪ್ ಮೂಡಿದೆ. ಏ.1 ರಿಂದ ಈ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದ್ದರಿಂದ ಅದು ಏಪ್ರಿಲ್ ಫೂಲ್ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ, ಸುದ್ದಿ ಬೇರೆ ರೀತಿಯಲ್ಲಿ ಗಂಭೀರತೆಯನ್ನು ಸೃಷ್ಟಿ ಮಾಡಿತ್ತು. ಹಾಗಾಗಿ ಆರ್.ಚಂದ್ರು ಅವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

  • ಕಿಚ್ಚನ ‘ವಿಕ್ರಾಂತ್ ರೋಣ’ ಹಿಂದಿ ಟೀಸರ್ ರಿಲೀಸ್ ಮಾಡಲಿದ್ದಾರೆ ಸಲ್ಮಾನ್ ಖಾನ್

    ಕಿಚ್ಚನ ‘ವಿಕ್ರಾಂತ್ ರೋಣ’ ಹಿಂದಿ ಟೀಸರ್ ರಿಲೀಸ್ ಮಾಡಲಿದ್ದಾರೆ ಸಲ್ಮಾನ್ ಖಾನ್

    ಕಿಚ್ಚ ಸುದೀಪ್ ಅವರನ್ನು ತಮ್ಮ ಸಹೋದರ ಎಂದೇ ಕರೆಯುವ ಬಾಲಿವುಡ್ ನಟ ಸಲ್ಮಾನ್ ಖಾನ್ ಕಿಚ್ಚನ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಿದ್ದಾರೆ.  ಮೆಗಾ ಪ್ಯಾನ್ ಇಂಡಿಯಾ ಈ ಚಿತ್ರ ದ ಟೀಸರ್ ಬಿಡುಗಡೆ ಯುಗಾದಿ ಹಬ್ಬದಂದು ಬಿಡುಗಡೆ ಆಗುತ್ತಿದ್ದು, ಏಪ್ರಿಲ್ 2 ರಂದು ಬೆಳಗ್ಗೆ 9.55ಕ್ಕೆ ಹಲವು ಭಾಷೆಗಳಲ್ಲಿ ಈ ಟೀಸರ್ ಬಿಡುಗಡೆ ಆಗಲಿದೆ. ಆಯಾ ಭಾಷೆಗಳ ಹೆಸರಾಂತ ನಟರು ಈ ಟೀಸರ್ ಅನ್ನು ರಿಲೀಸ್ ಮಾಡುತ್ತಿರುವುದು ವಿಶೇಷ. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

    ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ನಲ್ಲೂ ಈ ಚಿತ್ರವನ್ನು ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ನಿರ್ಮಾಪಕ ಜಾಕ್ ಮಂಜು. ಅದಕ್ಕೂ ಮುನ್ನ ಟೀಸರ್ , ಹಾಡುಗಳನ್ನು ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದಾರೆ. ಪ್ರಿ ರಿಲೀಸ್ ಇವೆಂಟ್ ಕೂಡ ಆಯೋಜನೆ ಮಾಡುವ ಉದ್ದೇಶವೂ ಇದೆ. ಇದನ್ನೂ ಓದಿ: ʼಆರ್‌ಆರ್‌ಆರ್‌ʼ ರಿಲೀಸ್ ಆದ ಕೆಲವೇ ದಿನಗಳಲ್ಲಿ 100 ಮಿಲಿಯನ್ ದಾಖಲೆ

    ಏ.2 ರಂದು ರಿಲೀಸ್ ಆಗಲಿರುವ ಟೀಸರ್ ಅನ್ನು ಮಲಯಾಳಂ ಭಾಷೆಯಲ್ಲಿ ಖ್ಯಾತ ನಟ ಮೋಹನ್ ಲಾಲ್ ರಿಲೀಸ್ ಮಾಡುತ್ತಿದ್ದಾರೆ. ಮೋಹನ್ ಲಾಲ್ ಕಿಚ್ಚ ಸುದೀಪ್ ಅವರ ಜತೆ ನಟಿಸದೇ ಇದ್ದರೂ, ಸುದೀಪ್ ಅವರ ಮೇಲೆ ಅವರಿಗೆ ಅಪಾರ ಗೌರವ. ಅಲ್ಲದೇ ಕನ್ನಡದಲ್ಲಿ ಅವರು ಪುನೀತ್ ಅವರ ಜತೆ ನಟಿಸಿದ್ದಾರೆ. ಕಿಚ್ಚನಿಗೂ ಮತ್ತು ಪುನೀತ್ ಅವರಿಗೂ ಇದ್ದ ಬಾಂಧವ್ಯದ ಅರಿವು ಅವರಿಗಿದೆ. ಹೀಗಾಗಿ ಟೀಸರ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ : ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ

    ಮಲಯಾಳಂನಲ್ಲಿ ಮೋಹನ್ ಲಾಲ್ ಬಿಡುಗಡೆ ಮಾಡುತ್ತಿದ್ದರೆ, ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಟೀಸರ್ ಅನ್ನು ರಿಲೀಸ್ ಮಾಡು‍ತ್ತಿದ್ದಾರೆ. ಚಿರಂಜೀವಿ ಜತೆ ಕಿಚ್ಚನಿಗೆ ಒಳ್ಳೆಯ ಬಾಂಧವ್ಯವಿದೆ. ಅಲ್ಲದೇ ಒಟ್ಟಿಗೆ ಕೆಲಸ ಕೂಡ ಮಾಡಿದ್ದಾರೆ. ತೆಲುಗಿನಲ್ಲಿ ಕಿಚ್ಚನಿಗೆ ಉತ್ತಮ ಕಾಂಟ್ಯಾಕ್ಟ್ ಕೂಡ ಇದೆ. ಅಲ್ಲಿ ಕಿಚ್ಚನ ಅಪಾರ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ.

  • ಏ. 2 ರಂದು ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ : ತೆಲುಗಿನಲ್ಲಿ ಚಿರಂಜೀವಿ, ಮಲಯಾಳಂನಲ್ಲಿ ಮೋಹನ್ ಲಾಲ್

    ಏ. 2 ರಂದು ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ : ತೆಲುಗಿನಲ್ಲಿ ಚಿರಂಜೀವಿ, ಮಲಯಾಳಂನಲ್ಲಿ ಮೋಹನ್ ಲಾಲ್

    ಕಿಚ್ಚ ಸುದೀಪ್ ಅಭಿನಯದ ಕನ್ನಡದ ಮತ್ತೊಂದು ಮೆಗಾ ಪ್ಯಾನ್ ಇಂಡಿಯಾ ಚಿತ್ರ ‘ವಿಕ್ರಾಂತ್ ರೋಣ’ದ ಟೀಸರ್ ಬಿಡುಗಡೆ ಯುಗಾದಿ ಹಬ್ಬದಂದು ಬಿಡುಗಡೆ ಆಗುತ್ತಿದೆ. ಏಪ್ರಿಲ್ 2 ರಂದು ಬೆಳಗ್ಗೆ 9.55ಕ್ಕೆ ಹಲವು ಭಾಷೆಗಳಲ್ಲಿ ಈ ಟೀಸರ್ ಬಿಡುಗಡೆ ಆಗುತ್ತಿದ್ದು, ಆಯಾ ಭಾಷೆಗಳ ಹೆಸರಾಂತ ನಟರು ಈ ಟೀಸರ್ ಅನ್ನು ರಿಲೀಸ್ ಮಾಡುತ್ತಿರುವುದು ವಿಶೇಷ. ಇದನ್ನೂ ಓದಿ : ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್

    ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ನಲ್ಲೂ ಈ ಚಿತ್ರವನ್ನು ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ನಿರ್ಮಾಪಕ ಜಾಕ್ ಮಂಜು. ಅದಕ್ಕೂ ಮುನ್ನ ಟೀಸರ್ , ಹಾಡುಗಳನ್ನು ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದಾರೆ. ಪ್ರಿ ರಿಲೀಸ್ ಇವೆಂಟ್ ಕೂಡ ಆಯೋಜನೆ ಮಾಡುವ ಉದ್ದೇಶವೂ ಇದೆ. ಇದನ್ನೂ ಓದಿ : ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ಏ.2 ರಂದು ರಿಲೀಸ್ ಆಗಲಿರುವ ಟೀಸರ್ ಅನ್ನು ಮಲಯಾಳಂ ಭಾಷೆಯಲ್ಲಿ ಖ್ಯಾತ ನಟ ಮೋಹನ್ ಲಾಲ್ ರಿಲೀಸ್ ಮಾಡುತ್ತಿದ್ದಾರೆ. ಮೋಹನ್ ಲಾಲ್ ಕಿಚ್ಚ ಸುದೀಪ್ ಅವರ ಜತೆ ನಟಿಸದೇ ಇದ್ದರೂ, ಸುದೀಪ್ ಅವರ ಮೇಲೆ ಅವರಿಗೆ ಅಪಾರ ಗೌರವ. ಅಲ್ಲದೇ ಕನ್ನಡದಲ್ಲಿ ಅವರು ಪುನೀತ್ ಅವರ ಜತೆ ನಟಿಸಿದ್ದಾರೆ. ಕಿಚ್ಚನಿಗೂ ಮತ್ತು ಪುನೀತ್ ಅವರಿಗೂ ಇದ್ದ ಬಾಂಧವ್ಯದ ಅರಿವು ಅವರಿಗಿದೆ. ಹೀಗಾಗಿ ಟೀಸರ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:  ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

    ಮಲಯಾಳಂನಲ್ಲಿ ಮೋಹನ್ ಲಾಲ್ ಬಿಡುಗಡೆ ಮಾಡುತ್ತಿದ್ದರೆ, ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಟೀಸರ್ ಅನ್ನು ರಿಲೀಸ್ ಮಾಡು‍ತ್ತಿದ್ದಾರೆ. ಚಿರಂಜೀವಿ ಜತೆ ಕಿಚ್ಚನಿಗೆ ಒಳ್ಳೆಯ ಬಾಂಧವ್ಯವಿದೆ. ಅಲ್ಲದೇ ಒಟ್ಟಿಗೆ ಕೆಲಸ ಕೂಡ ಮಾಡಿದ್ದಾರೆ. ತೆಲುಗಿನಲ್ಲಿ ಕಿಚ್ಚನಿಗೆ ಉತ್ತಮ ಕಾಂಟ್ಯಾಕ್ಟ್ ಕೂಡ ಇದೆ. ಅಲ್ಲಿ ಕಿಚ್ಚನ ಅಪಾರ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಇದನ್ನೂ ಓದಿ: ಆರ್.ಆರ್.ಆರ್ ನಿಖರ ಗಳಿಕೆ 611 ರೂ.ಕೋಟಿ: ವಾರಾಂತ್ಯಕ್ಕೆ ಸಾವಿರ ಕೋಟಿ ನಿರೀಕ್ಷೆ

    ಉಳಿದಂತೆ ತಮಿಳು ಮತ್ತು ಹಿಂದಿಯ ಟೀಸರ್ ಅನ್ನು ಅಲ್ಲಿನ ಹೆಸರಾಂತ ಕಲಾವಿದರೇ ಬಿಡುಗಡೆ ಮಾಡುತ್ತಿದ್ದು, ಗಂಟೆಗೊಂದು ಈ ವಿಷಯವನ್ನು ಅಪ್ ಡೇಟ್ ಮಾಡುತ್ತಿದ್ದಾರೆ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ.

  • ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ತೀ ನಿರೀಕ್ಷಿತ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ’ ಕೃತಿಯನ್ನು ಹೆಸರಾಂತ ನಟ ಕಿಚ್ಚ ಸುದೀಪ್ ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದಿರುವ ಈ ಕೃತಿ ಈಗಾಗಲೇ ಬಿಡುಗಡೆಗೂ ಮುನ್ನ ಎರಡನೇ ಮುದ್ರಣ ಕಂಡಿದೆ.

    ಕೃತಿಯ ಬಿಡುಗಡೆ ನಂತರ ಮಾತನಾಡಿದ ಸುದೀಪ್, ‘ಒಂದೊಳ್ಳೆಯ ಕೃತಿಯ ಮೂಲಕ ಶರಣು ಹುಲ್ಲೂರು ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ. ಪುನೀತ್ ಅವರದ್ದು ಪುಸ್ತಕವಾಗುವಂತಹ ವ್ಯಕ್ತಿತ್ವ. ಈ ಕೃತಿ ಅವರ ಜೀವನವನ್ನು ಸೊಗಸಾಗಿ ಹಿಡಿದಿಟ್ಟಿದೆ’ ಎಂದರು. ಅಲ್ಲದೇ ‘ಯಾವತ್ತಿಗೂ ನಾನು ಪುನೀತ್ ಅವರನ್ನು ಮೀಸ್ ಮಾಡಿಕೊಳ್ಳುತ್ತೇನೆ’ ಎಂದರು. ಕಿಚ್ಚ ಸುದೀಪ್ ಅವರ ಪುಸ್ತಕವನ್ನು ಎರಡು ವರ್ಷಗಳ ಹಿಂದೆ ಪುನೀತ್ ರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದರು. ಪುನೀತ್ ಅವರ ಬಯೋಗ್ರಫಿಯನ್ನು ಇದೀಗ ಸುದೀಪ್ ಅವರು ರಿಲೀಸ್ ಮಾಡಿದ್ದು ಭಾವುಕತೆಗೆ ಸಾಕ್ಷಿಯಾಗಿತ್ತು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಈ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕರಾದ ಜಾಕ್ ಮಂಜು ಮತ್ತು ಕುಮಾರ್ ಹಾಗೂ ಸಾವಣ್ಣ ಪ್ರಕಾಶನದ ಜಮೀಲ್ ಮತ್ತು ಲೇಖಕ ಶರಣು ಹುಲ್ಲೂರು ಉಪಸ್ಥಿತರಿದ್ದರು.

    ಪುನೀತ್ ಅವರ ಕುರಿತಾಗಿ ಬಂದಂತಹ ಮೊದಲ ಬಯೋಗ್ರಫಿ ಇದಾಗಿದ್ದು, 260ಕ್ಕೂ ಹೆಚ್ಚು ಪುಟಗಳನ್ನು ಹೊಂದಿದೆ. ಪುನೀತ್ ಅವರ ಹುಟ್ಟು ಹಬ್ಬದ ದಿನದಂದು ಬಿಡುಗಡೆಯಾಗಿದೆ. ಪುನೀತ್ ಅವರ ಖಾಸಗಿ ಜೀವನ, ವೃತ್ತಿ ಜೀವನ, ಅಪರೂಪದ ಸಂಗತಿಗಳು ಮತ್ತು ಫೋಟೋಗಳನ್ನುಈ ಪುಸ್ತಕದಲ್ಲಿ ಸೊಗಸಾಗಿ ಹಿಡಿದಿಟ್ಟಿದ್ದಾರೆ ಲೇಖಕ ಶರಣು ಹುಲ್ಲೂರು.

  • ಸಲಾಂ ಸೋಲ್ಜರ್ ಬದಲು ಸಲಾಂ ಅಪ್ಪು ಅಂತಿದ್ದಾರೆ ಫ್ಯಾನ್ಸ್ : ಜೇಮ್ಸ್ ಮತ್ತೊಂದು ಹಾಡು ರಿಲೀಸ್

    ಸಲಾಂ ಸೋಲ್ಜರ್ ಬದಲು ಸಲಾಂ ಅಪ್ಪು ಅಂತಿದ್ದಾರೆ ಫ್ಯಾನ್ಸ್ : ಜೇಮ್ಸ್ ಮತ್ತೊಂದು ಹಾಡು ರಿಲೀಸ್

    ದಿನದಿಂದ ದಿನಕ್ಕೆ ಪುನೀತ್ ರಾಜ್ ಕುಮಾರ್ ನಟನೆಯ’ಜೇಮ್ಸ್’ ಸಿನಿಮಾದ ಕ್ರೇಜ್ ಹೆಚ್ಚಾಗುತ್ತಿದೆ. ಅಪ್ಪು ಅಭಿಮಾನಿಗಳು ಈ ಸಿನಿಮಾವನ್ನು ಭಾವನಾತ್ಮಕವಾಗಿ ರಿಸೀವ್ ಮಾಡಿರುವುದರಿಂದ ಒಂದು ರೀತಿಯಲ್ಲಿ ಜಾತ್ರೆಯಂತೆ ಸಿನಿಮಾ ರಿಲೀಸ್ಗೆ ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ : Breaking- ಉಪೇಂದ್ರ ಹೊಸ ಚಿತ್ರದ ಪೋಸ್ಟರ್ : ನೀವು ಏನ್ ಬೇಕಾದ್ರೂ ಅಂದ್ಕೊಳ್ಳಿ ಎಂದ ಉಪ್ಪಿದಾದ

    ಈಗಾಗಲೇ ರಾಜ್ಯಾದ್ಯಂತ ಸಿನಿಮಾದ ಪೋಸ್ಟರ್ಸ್ ಗೋಡೆಗಳನ್ನು ಅಲಂಕರಿಸಿವೆ. ಚಿತ್ರಮಂದಿರಗಳಲ್ಲಿ ಕಟೌಟ್ ಎದ್ದು ನಿಂತಿವೆ. ಟೀ ಶರ್ಟ್, ಆಟೋಗಳ ಮೇಲೆ ಅಪ್ಪು ರಾರಾಜಿಸುತ್ತಿದ್ದಾರೆ. ಅಲ್ಲದೇ, ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಅಪ್ಪು ಉತ್ಸವವೇ ನಡೆಯುತ್ತಿದೆ. ಅಷ್ಟರ ಮಟ್ಟಿಗೆ ಪುನೀತ್ ಬರ್ತಡೆ ಮತ್ತು ಜೇಮ್ಸ್ ಸಿನಿಮಾದ ರಿಲೀಸ್ ತಯಾರಿ ನಡೆದಿದೆ. ಇದನ್ನೂ ಓದಿ : ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿ

    ಈ ಹೊತ್ತಿನಲ್ಲಿ ಸಿನಿಮಾದ ಮತ್ತೊಂದು ಗೀತೆಯನ್ನು ಬಿಡುಗಡೆ ಮಾಡಿದೆ ಚಿತ್ರತಂಡ. ‘ಸಲಾಂ ಸೋಲ್ಜರ್’ ಲಿರಿಕಲ್ ಸಾಂಗ್ ಅನ್ನು ಇಂದು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ನಾಡಿನ ಸಮಸ್ತ ಸೈನಿಕರಿಗೆ ಅರ್ಪಿಸಿರುವುದಾಗಿ ನಿರ್ದೇಶಕ ಚೇತನ್ ತಿಳಿಸಿದ್ದಾರೆ. ಈ ಹಾಡಿನಲ್ಲಿ ಪುನೀತ್ ರಾಜ್ ಕುಮಾರ್ ಅವರು ಸೈನಿಕನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ : ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿ

    ಗೆಟಪ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ‘ಸಲಾಂ ಅಪ್ಪು’ ಎಂದೇ ಜೈಕಾರ ಹಾಕುತ್ತಿದ್ದಾರೆ. ಈ ಗೀತೆಯನ್ನು ಸ್ವತಃ ನಿರ್ದೇಶಕ ಚೇತನ್ ಕುಮಾರ್ ಅವರೇ ಬರೆದದ್ದು, ಸಂಜಿತ್ ಹೆಗಡೆ ಮತ್ತು ಚರಣ್ ರಾಜ್ ಹಾಡಿದ್ದಾರೆ. ಇದನ್ನೂ ಓದಿ : ಮಾರ್ಚ್ 14ಕ್ಕೆ ಆರ್.ಆರ್.ಆರ್ ‘ಎತ್ತುವ ಜಂಡಾ’ ಸಾಂಗ್ ರಿಲೀಸ್

    ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಇದಾಗಿದ್ದರಿಂದ, ಪ್ರಿ ರಿಲೀಸ್ ಇವೆಂಟ್ ಕೂಡ ಅದ್ಧೂರಿಯಾಗಿ ನಡೆಲಿದೆ. ಬೆಂಗಳೂರಿನಲ್ಲಿ ಇವೆಂಟ್ ಮಾಡಲು ಅರಮನೆ ಮೈದಾನ ಕೂಡ ಸಿದ್ಧವಾಗಿದೆ. ಮಾ.13 ರಂದು ಇಡೀ ಸಿನಿಮಾ ರಂಗವೇ ಅಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದೆ.

  • ರಾಜಮೌಳಿ ಹೊಸ ಸಿನಿಮಾದಲ್ಲಿ ಕಿಚ್ಚ ಸುದೀಪ್ : ಏನಿದು ಹೊಸ ಸುದ್ದಿ?

    ರಾಜಮೌಳಿ ಹೊಸ ಸಿನಿಮಾದಲ್ಲಿ ಕಿಚ್ಚ ಸುದೀಪ್ : ಏನಿದು ಹೊಸ ಸುದ್ದಿ?

    ಕ್ಷಿಣದ ಖ್ಯಾತ ನಿರ್ದೇಶಕ ರಾಜಮೌಳಿ ಅವರ ಎರಡು ಸಿನಿಮಾದಲ್ಲಿ ಈಗಾಗಲೇ ನಟಿಸಿರುವ ಕಿಚ್ಚ ಸುದೀಪ್, ಇದೀಗ ಅವರ ಮತ್ತೊಂದು ಸಿನಿಮಾದಲ್ಲಿ ಒಂದಾಗಿದ್ದಾರೆ. ಅದು ಆರ್.ಆರ್.ಆರ್ ಸಿನಿಮಾದಲ್ಲಿಯೇ ಎನ್ನುವುದು ಬಿಗ್ ಸರ್ ಪ್ರೈಸ್. ಇದನ್ನೂ ಓದಿ : ಮಾ.11ರ 12:46 ವೇಳೆ ಸೇವ್ ಮಾಡ್ಕೊಳ್ಳಿ: ಕನ್ ಫ್ಯೂಸ್ ಮಾಡಿದ ಉಪೇಂದ್ರ

    “ಈಗ’ ಮತ್ತು ‘ಬಾಹುಬಲಿ’ ಸಿನಿಮಾದಲ್ಲಿ ಕಿಚ್ಚನಿಗೆ ಒಂದೊಳ್ಳೆ ಪಾತ್ರ ಕೊಟ್ಟು ತಮ್ಮ ಟೀಮ್ ಗೆ ಸೇರಿಸಿಕೊಂಡಿದ್ದರು ರಾಜಮೌಳಿ. ಮತ್ತೆ ಮತ್ತೆ ಸುದೀಪ್ ಅವರ ಜತೆ ಸಿನಿಮಾ ಮಾಡುವ ಇಂಗಿತವನ್ನೂ ಅವರು ವ್ಯಕ್ತ ಪಡಿಸಿದ್ದರು. ಆದರೆ, ಆರ್.ಆರ್.ಆರ್ ಸಿನಿಮಾದಲ್ಲಿ ಸುದೀಪ್ ಅವರಿಗೆ ಸೂಟ್ ಆಗುವಂತಹ ಪಾತ್ರ ಇರಲಿಲ್ಲವಂತೆ. ಹಾಗಾಗಿ ಈ ಸಿನಿಮಾದಲ್ಲಿ ಕಿಚ್ಚನಿಗೆ ನಟಿಸುವುದಕ್ಕೆ ಆಗಲಿಲ್ಲ. ಆದರೇನಂತೆ, ಈ ಸಿನಿಮಾದಲ್ಲಿಯೂ ಕಿಚ್ಚ ಇರಲಿದ್ದಾರೆ. ಅದು ಟ್ರೇಲರ್ ರೂಪದಲ್ಲಿ ಎನ್ನುವುದು ವಿಶೇಷ. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್

    ಇನ್ನೇರಡು ವಾರ ಕಳೆದರೆ, ಆರ್.ಆರ್.ಆರ್ ಸಿನಿಮಾ ತೆರೆಯ ಮೇಲಿರುತ್ತದೆ. ಇತ್ತ ಸುದೀಪ್ ನಟನೆಯ ವಿಕ್ರಾಂತ್ ರೋಣ ಕೂಡ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸಿನಿಮಾದ ಟ್ರೇಲರ್ ಅನ್ನು ಆರ್.ಆರ್.ಆರ್ ಸಿನಿಮಾ ತೆರೆಕಂಡ ಚಿತ್ರಮಂದಿರಗಳಲ್ಲಿ ಒಟ್ಟಿಗೆ ನೋಡಬಹುದಂತೆ. ಆಗೊಂದು ಪ್ಲ್ಯಾನ್ ಮಾಡಿದೆ ಚಿತ್ರತಂಡ. ಇದನ್ನೂ ಓದಿ : ಟ್ರೋಲಿಗರ ಚಳಿ ಬಿಡಿಸಿದ ಸನ್ನಿ ಲಿಯೋನ್

    ಆರ್.ಆರ್.ಆರ್ ಸಿನಿಮಾ ಪ್ರದರ್ಶನ ಕಾಣುವಾಗ ತಮ್ಮೊಂದು ಟ್ರೇಲರ್ ತೋರಿಸಲು ಈಗಾಗಲೇ ಸಾಕಷ್ಟು ಚಿತ್ರ ನಿರ್ಮಾಪಕರು ರಾಜಮೌಳಿ ಅವರಿಗೆ ಮನವಿ ಮಾಡಿಕೊಂಡಿದ್ದಾರಂತೆ. ಆದರೆ, ಸಿನಿಮಾ ಉದ್ದ ಇರುವ ಕಾರಣಕ್ಕಾಗಿ ಹೆಚ್ಚಿನ ಚಿತ್ರಗಳಿಗೆ ಅವಕಾಶ ಸಿಕ್ಕಿಲ್ಲ. ಕಿಚ್ಚ ಸುದೀಪ್ ಅವರಿಗೂ ರಾಜಮೌಳಿ ಅವರಿಗೆ ಒಳ್ಳೆಯ ಬಾಂಧವ್ಯ ಇದೆ. ಹಾಗಾಗಿ ಆರ್.ಆರ್.ಆರ್ ಸಿನಿಮಾ ಮಧ್ಯೆ ವಿಕ್ರಾಂತ್ ರೋಣನಿಗೆ ಎಂಟ್ರಿ ಸಿಕ್ಕಿದೆ.

  • ಅನೂಪ್ ಭಂಡಾರಿ ಜತೆ 3 ಸಿನಿಮಾ ಮಾಡ್ತಾರಾ ಸುದೀಪ್? : ಬರಲಿದೆ ವಿಕ್ರಾಂತ್ ರೋಣ 2

    ಅನೂಪ್ ಭಂಡಾರಿ ಜತೆ 3 ಸಿನಿಮಾ ಮಾಡ್ತಾರಾ ಸುದೀಪ್? : ಬರಲಿದೆ ವಿಕ್ರಾಂತ್ ರೋಣ 2

    ಕಿಚ್ಚ ಸುದೀಪ್ ಅಂಗಳದಿಂದ ಭರ್ಜರಿ ಸುದ್ದಿಯೊಂದು ಬಂದಿದೆ. ವಿಕ್ರಾಂತ್ ರೋಣ ಸಿನಿಮಾದ ನಂತರ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಸುದೀಪ್ ಕಾಂಬಿನೇಷನ್ ನಲ್ಲಿ ಮೂರು ಚಿತ್ರಗಳು ಬರಲಿವೆ. ಕಿಚ್ಚನಿಗಾಗಿಯೇ ಅನೂಪ್ ಭಂಡಾರಿ ಮೂರು ಕಥೆಗಳನ್ನು ಸಿದ್ಧ ಮಾಡಿಕೊಂಡಿದ್ದಾರಂತೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

    ಸದ್ಯ ವಿಕ್ರಾಂತ್ ರೋಣ ಚಿತ್ರ ಬಿಡುಗಡೆಯ ಬ್ಯುಸಿಯಲ್ಲಿರುವ ಅನೂಪ್ ಈ ನಡುವೆಯೇ ‘ಬಿಲ್ಲ ರಂಗಾ ಬಾಷಾ’, ‘ಅಶ್ವತ್ಥಾಮ’ ಮತ್ತು ‘ವಿಕ್ರಾಂತ್ ರೋಣ 2’ ಸಿನಿಮಾದ ಕಥೆಗಳನ್ನೂ ರೆಡಿ ಮಾಡಿಕೊಂಡಿದ್ದಾರಂತೆ. ಆದರೆ, ಈ ಚಿತ್ರಗಳು ಯಾವಾಗ ಶುರುವಾಗುತ್ತವೆ ಎನ್ನುವ ಮಾಹಿತಿ ಸದ್ಯಕ್ಕಿಲ್ಲ. ಇದನ್ನೂ ಓದಿ : ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?

    ಅಂದುಕೊಂಡಂತೆ ಆಗಿದ್ದರೆ, ವಿಕ್ರಾಂತ್ ರೋಣಕ್ಕಿಂತಲೂ ಮೊದಲು ಬಿಲ್ಲ ರಂಗ ಬಾಷಾ ಕಥೆ ಸೆಟ್ಟೇರಬೇಕಿತ್ತು.  ಅದು ಆಗಲಿಲ್ಲ. ಈಗಲಾದರೂ ಈ ಸಿನಿಮಾ ಸೆಟ್ಟೇರತ್ತಾ ಅಥವಾ ಅಶ್ವತ್ಥಾಮ ಚಿತ್ರದ ನಂತರ ಆಗತ್ತಾ ನೋಡಬೇಕಿದೆ. ಇದನ್ನೂ ಓದಿ: ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ

    ಕಿಚ್ಚ ಸುದೀಪ್ ಅವರಿಗಾಗಿಯೇ ಸಿನಿಮಾ ಮಾಡಬೇಕು ಎಂದು ಚಿತ್ರರಂಗಕ್ಕೆ ಬಂದವರು ಅನೂಪ್ ಭಂಡಾರಿ. ಆದರೆ, ಆಗ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಸಹೋದರನನ್ನೇ ಹಾಕಿಕೊಂಡು ರಂಗಿತರಂಗ ಚಿತ್ರ ಮಾಡಿದ್ದರು. ಇದೀಗ ಅವರಿಗೆ ಅದೃಷ್ಟ ಹುಡುಕಿಕೊಂಡು ಬಂದಿದೆ. ಅತೀ ಕಡಿಮೆ ಸಮಯದಲ್ಲಿ ಹೆಸರಾಂತ ನಟನ ಜತೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುವ ಅವಕಾಶ ಇವರ ಪಾಲಾಗಿದೆ.

  • ಹಾಲಿವುಡ್ ಗೆ ಹಾರಿದ ಸುದೀಪ್ ನಟನೆಯ ವಿಕ್ರಾಂತ್ ರೋಣ

    ಹಾಲಿವುಡ್ ಗೆ ಹಾರಿದ ಸುದೀಪ್ ನಟನೆಯ ವಿಕ್ರಾಂತ್ ರೋಣ

    ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್’ ರೋಣ ಸಿನಿಮಾದ ತಂಡ ದಿನಕ್ಕೊಂದು ಕುತೂಹಲದ ಸುದ್ದಿ ಕೊಡುತ್ತಿದೆ. ನೆನ್ನೆಯಷ್ಟೇ ಚಿತ್ರದ ಕುರಿತು ಸಾಕಷ್ಟು ಅಪ್ ಡೇಟ್ ಕೊಟ್ಟಿತ್ತು. ಈಗ ಮತ್ತೊಂದು ಸರ್ ಪ್ರೈಸ್ ವಿಷಯ ಹಂಚಿಕೊಂಡಿದೆ. ಈ ಸಿನಿಮಾ ಬರೋಬ್ಬರಿ ಒಂಬತ್ತು ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು, ಅದರಲ್ಲಿ ಇಂಗ್ಲಿಷ್ ಕೂಡ ಸೇರಿದೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಇಂಗ್ಲಿಷ್ ಗೆ ಡಬ್ ಆಗಿ ಬಿಡುಗಡೆ ಆಗುತ್ತಿರುವುದು ವಿಶೇಷ. ಅಲ್ಲದೇ, ಸ್ವತಃ ಸುದೀಪ್ ಅವರೇ ತಮ್ಮ ಪಾತ್ರಕ್ಕೆ ಇಂಗ್ಲಿಷ್ ನಲ್ಲೂ ಡಬ್ ಮಾಡಿದ್ದಾರೆ. ಇದನ್ನೂ ಓದಿ : ಸ್ಸಾರಿ… ಥಿಯೇಟರ್ ಗೆ ಬರ್ತಿಲ್ಲ ತಮಿಳಿನ ಧನುಷ್ ನಟನೆಯ ಮಾರನ್ ಸಿನಿಮಾ

    ವಿಕ್ರಾಂತ್ ರೋಣ ಸಿನಿಮಾ 2 ಡಿ ಮತ್ತು 3 ಡಿ ಯಲ್ಲಿ ಸಿದ್ಧವಾಗಿದೆ. ಒಂದು ಅಂದಾಜಿನ ಪ್ರಕಾರ ಸಾವಿರಾರು ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದನ್ನೂ ಓದಿ : ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಅಪ್ಡೇಟ್ : ಯಾವಾಗ, ಏನು ಅಂತ ನೋಡ್ಕೊಂಡ್ ಬಿಡಿ

    ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಮೋಷನ್ ಶುರು ಮಾಡಲಿರುವ ಚಿತ್ರತಂಡ, ಆ ನಂತರ ‘ಹೇ ಫಕೀರಾ’ ಹಾಡು ರಿಲೀಸ್ ಆಗಲಿದೆ. ಈಗಾಗಲೇ ಟ್ರೇಲರ್ ಗೆ ಬಳಸಿಕೊಂಡಿರುವ ಮತ್ತು ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದ ‘ಗುಮ್ಮ ಬಂದ ಗುಮ್ಮ’ ಹಾಡು ಬಿಡುಗಡೆ ಆಗಲಿದೆ. ಇದಾದ ಕೆಲ ದಿನಗಳ ನಂತರ ‘ಚಿಕ್ಕಿ ಬೊಂಬೆ’ ಗೀತೆಯನ್ನು ರಿಲೀಸ್ ಮಾಡಲಿದ್ದಾರಂತೆ. ಬ್ಯಾಕ್ ಟು ಬ್ಯಾಕ್ ಎರಡು ಹಾಡುಗಳು ರಿಲೀಸ್ ಆದ ನಂತರ ಅಭಿಮಾನಿಗಳಿಗೆ ಒಂದ್ ಸರ್ ಪ್ರೈಸ್ ಕಾದಿದೆ. ಆ ಸರ್ ಪ್ರೈಸ್ ಏನು ಎನ್ನುವುದನ್ನು ಚಿತ್ರತಂಡ ಹೇಳಿಲ್ಲ. ಇದನ್ನೂ ಓದಿ : ಖ್ಯಾತ ಗಾಯಕ ಮಿಕಾ ಸಿಂಗ್ ಸ್ವಯಂವರ : ನೀವೂ ಭಾಗಿಯಾಗಬಹುದು

    ಸರ್ ಪ್ರೈಸ್ ಮುಗಿಯುತ್ತಿದ್ದಂತೆಯೇ ಮತ್ತೊಂದು ಗೀತೆಯನ್ನು ಬಿಡುಗಡೆ ಮಾಡುವ ಪ್ಲ್ಯಾನ್ ಚಿತ್ರತಂಡ ಮಾಡಿಕೊಂಡಿದ್ದು, ಈ ಗೀತೆ ರಿಲೀಸ್ ಆಗುತ್ತಿದ್ದಂತೆಯೇ ಮತ್ತೊಂದು ಸರ್ ಪ್ರೈಸ್ ಕಾದಿದೆ. ಅದು ಕೂಡ ಸಸ್ಪನ್ಸ್. ಎರಡು ಸರ್ ಪ್ರೈಸ್ ಮುಗಿಯುತ್ತಿದ್ದಂತೆಯೇ ‘ದ ಕ್ವೀನ್ ಆಫ್ ಗುಡ್ ಟೈಮ್ಸ್’ ಸಾಂಗ್ ರಿಲೀಸ್ ಆಗಲಿದೆ. ಆನಂತರ ವಿಕ್ರಾಂತ್ ರೋಣ ಚಿತ್ರದ ಟ್ರೇಲರ್ ಬಿಡುಗಡೆ. ಟ್ರೇಲರ್ ನೋಡಿದವರಿಗೂ ಮತ್ತೊಂದು ಸರ್ ಪ್ರೈಸ್ ಕಾದಿದೆ. ಇಷ್ಟೊಂದು ಸರ್ ಪ್ರೈಸ್ ಗಳನ್ನು ದಾಟಿಕೊಂಡು ಬಂದರೆ ಚಿತ್ರ ಬಿಡುಗಡೆ. ಇದನ್ನೂ ಓದಿ : EXCLUSIVE: ಸ್ಯಾಂಡಲ್‌ವುಡ್‌ಗೆ ವಾಪಸ್ಸಾದ ಮೀಟೂ ಪರ ಧ್ವನಿ ಎತ್ತಿದ್ದ ನಟಿ ಸಂಗೀತಾ

    ಮೂಲಗಳ ಪ್ರಕಾರ ಸರ್ ಪ್ರೈಸ್ ಅಂದರೆ, ದೇಶದ ನಾನಾ ರಾಜ್ಯಗಳಲ್ಲಿ ಇವೆಂಟ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ, ಆಯಾ ಭಾಷೆಯ ಚಿತ್ರರಂಗದ ಗಣ್ಯರ ಮಧ್ಯೆ ಇವೆಂಟ್ ಮಾಡುವ ಯೋಜನೆ ಸಿದ್ಧವಾಗಿದೆಯಂತೆ.