Tag: ಕಿಚ್ಚ

  • ನಾಳೆ ಬೆಳಗ್ಗೆ 11.46ಕ್ಕೆ ಕಿಚ್ಚನ ಹೊಸ ಸಿನಿಮಾದ ಗ್ಲಿಂಪ್ಸ್ ರಿಲೀಸ್

    ನಾಳೆ ಬೆಳಗ್ಗೆ 11.46ಕ್ಕೆ ಕಿಚ್ಚನ ಹೊಸ ಸಿನಿಮಾದ ಗ್ಲಿಂಪ್ಸ್ ರಿಲೀಸ್

    ಕಿಚ್ಚನ (Kiccha) ಅಭಿಮಾನಿಗಳಿಗೆ ನಾಳೆ ಹಬ್ಬವೋ ಹಬ್ಬ. ಅದೆಷ್ಟೋ ತಿಂಗಳುಗಳಿಂದ ಕಾಯುತ್ತಿದ್ದ ಕ್ಷಣ ನಾಳೆ ಬೆಳಗ್ಗೆ 11.46ಕ್ಕೆ ಮೊಟ್ಟೆಯೊಡೆದು ರೆಕ್ಕೆ ಬಿಚ್ಚಿ ಹಾರಲಿದೆ. ಅಂದರೆ, ಸುದೀಪ್ ನಟನೆಯ 46ನೇ ಸಿನಿಮಾದ ಗ್ಲಿಂಪ್ಸ್ (Glimpse) ರಿಲೀಸ್ ಆಗುವುದರ ಜೊತೆಗೆ ಆ ಹೊಸ ಸಿನಿಮಾದ ಸಾಕಷ್ಟು ವಿಷಯಗಳು ಅಭಿಮಾನಿಗಳಿಗೆ ಸಿಗಲಿವೆ.

    ಸುದೀಪ್ (Sudeep) ನಟನೆಯ ಈ ಹೊಸ ಸಿನಿಮಾಗೆ ತಮಿಳಿನ ಹೊಸ ಹುಡುಗ ವಿಜಯ್ ಕಾರ್ತಿಕೇಯ (Vijay Karthikeya) ಎನ್ನುವವರು ನಿರ್ದೇಶನ ಮಾಡಲಿದ್ದು, ಇದು ವಿಜಯ್ ಅವರ ಎರಡನೇ ಸಿನಿಮಾವಾಗಿದ್ದರೂ, ಮೊದಲ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ ಎನ್ನುವ ಮಾಹಿತಿ ಇದೆ. ಹಾಗಾಗಿ ಇದು ವಿಜಯ್ ಅವರ ಫಸ್ಟ್ ಸಿನಿಮಾ ಎಂದು ಹೇಳಲಾಗುತ್ತಿದೆ.

    ಈಗಾಗಲೇ ತಿಳಿದಿರುವಂತೆ ಕಿಚ್ಚ ಸುದೀಪ್​ ಅವರು ಮೂರು ಸಿನಿಮಾಗಳಿಗೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಆ ಪೈಕಿ ‘ವಿ ಕ್ರಿಯೇಷನ್ಸ್​’ನ ಕಲೈಪುಲಿ ಎಸ್​. ಧಾನು (Kalaipuli S. Dhanu) ಅವರು ನಿರ್ಮಾಣ ಮಾಡುತ್ತಿರುವ ಸಿನಿಮಾ ಮೊದಲು ಸೆಟ್ಟೇರಿದೆ. ಕೆಲವೇ ದಿನಗಳ ಹಿಂದೆ ಅವರು ಪ್ರೋಮೋ ಶೂಟಿಂಗ್​ನಲ್ಲಿ ಭಾಗಿ ಆಗಿದ್ದರು ಸುದೀಪ್. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್

    ಕಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ವಿ ಕ್ರಿಯೇಷನ್ಸ್​’ ಜೊತೆ ಕಿಚ್ಚ ಸುದೀಪ್ ​ ಅವರು ಕೈ ಜೋಡಿಸಿದ್ದು, ಅದ್ದೂರಿ ಬಜೆಟ್​ನಲ್ಲಿ ‘ಕಿಚ್ಚ 46’ ಚಿತ್ರ ನಿರ್ಮಾಣ ಆಗುತ್ತಿದೆ. ‘ಕಬಾಲಿ’, ‘ತುಪಾಕಿ’, ‘ಅಸುರನ್​’ ಮುಂತಾದ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಕಲೈಪುಲಿ ಎಸ್​. ಧಾನು ಅವರಿಗೆ ಇದೆ.

     

    ಡಾರ್ಲಿಂಗ್ ಕೃಷ್ಣ, ನವೀನ್ ಶಂಕರ್, ಕಾಂತಾರ ನಟಿ ಸಪ್ತಮಿ ಗೌಡ, ವಾಸುಕಿ ವೈಭವ್, ಅನುಪ್ ಭಂಡಾರಿ, ವಿನಯ್ ರಾಜ್‌ಕುಮಾರ್ ಮತ್ತು ಡಾಲಿ ಧನಂಜಯ ಮುಂತಾದ ಕನ್ನಡದ ಪ್ರಮುಖ ಕಲಾವಿದರನ್ನು ಒಳಗೊಂಡ ವಿಶೇಷ ವೀಡಿಯೊಂದನ್ನು ಗ್ಲಿಂಪ್ಸ್ ರಿಲೀಸ್ ಗಾಗಿ ಚಿತ್ರ ನಿರ್ಮಾಪಕರು ಶೂಟ್ ಮಾಡಿದ್ದರು. ಅದು ವೈರಲ್ ಕೂಡ ಆಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Breaking- ಸುದೀಪ್ ಹೊಸ ಅಪ್ ಡೇಟ್ : ತಮಿಳು ನಿರ್ಮಾಪಕರ ಜೊತೆ ಕೈ ಜೋಡಿಸಿದ ಕಿಚ್ಚ

    Breaking- ಸುದೀಪ್ ಹೊಸ ಅಪ್ ಡೇಟ್ : ತಮಿಳು ನಿರ್ಮಾಪಕರ ಜೊತೆ ಕೈ ಜೋಡಿಸಿದ ಕಿಚ್ಚ

    ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ನೀಡಿದ್ದರು ಕಿಚ್ಚ ಸುದೀಪ್. ಜೂನ್ 1ನೇ ತಾರೀಖಿನಂದು ಹೊಸ ಸಿನಿಮಾದ ಅಪ್ ಡೇಟ್ ನೀಡುವುದಾಗಿ ತಿಳಿಸಿದ್ದರು. ಹೊಸ ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡುವುದಾಗಿ ಘೋಷಿಸಿದ್ದರು. ಅದಕ್ಕೂ ಆರು ದಿನ ಮುಂಚೆಯೇ ಇಂದು ಆ ಸಿನಿಮಾದ ಸಣ್ಣ ಸುಳಿವು ಕೊಟ್ಟಿದ್ದಾರೆ. ಆ ಸಿನಿಮಾದ ನಿರ್ಮಾಪಕರು ಯಾರು ಎಂದು ಸಣ್ಣದೊಂದು ಝಲಕ್ ರಿಲೀಸ್ ಮಾಡುವ ಮೂಲಕ ತಿಳಿಸಿದ್ದಾರೆ.

    ಸುದೀಪ್ ಅವರ ಮುಂದಿನ ಸಿನಿಮಾವನ್ನು ತಮಿಳು (Tamil) ನಿರ್ಮಾಣ ಸಂಸ್ಥೆಯೊಂದು ನಿರ್ಮಾಣ ಮಾಡುತ್ತಿದ್ದು, ಸುದೀಪ್ ಟೀಸರ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಣ್ಣದೊಂದು ವಿಡಿಯೋ ರಿಲೀಸ್ ಮಾಡಿದೆ ತಮಿಳಿನ ಕಲೈಪುಲಿ ಎಸ್ ತನು (Kalaipuli S Tanu) ನಿರ್ಮಾಣ  ಸಂಸ್ಥೆ. ಕಿಚ್ಚ ಕಾರಿನಿಂದ ಇಳಿಯುವುದರ ಜೊತೆಗೆ ಮೇಕಪ್ ನಲ್ಲಿ ಭಾಗಿಯಾಗುವ ಸಣ್ಣದೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸುದೀಪ್ ಅವರ ಗೆಟಪ್ ಜಭರದಸ್ತಾಗಿ ಇರಲಿದೆ ಎನ್ನುವ ಸುಳಿವನ್ನೂ ನೀಡಿದ್ದಾರೆ.

    ಈ ಹಿಂದೆಯಷ್ಟೇ ತಾವು ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಕುರಿತು ಕಿಚ್ಚ ಸುದೀಪ್ (Sudeep) ಬಹಿರಂಗ ಪಡಿಸಿದ್ದರು. ಮೂರು ಸಿನಿಮಾಗಳಲ್ಲಿ ಮೊದಲು ಯಾವುದು ಶುರುವಾಗಲಿದೆ ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ಅದಕ್ಕೂ ಒಂದಷ್ಟು ಮಾಹಿತಿ ಸಿಕ್ಕಿದೆ. ಕೈಯಲ್ಲಿರುವ ಮೂರು ಸಿನಿಮಾಗಳಲ್ಲಿ ಮೊದಲ ಶುರುವಾಗುವ ಚಿತ್ರದ ಬಗ್ಗೆ ಅವರು ಆಪ್ತರು ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಹೃದಯಾಘಾತದಿಂದ ಫೇಮಸ್ ನಟ ನಿತೇಶ್ ಪಾಂಡೆ ನಿಧನ

    ಮೂರರಲ್ಲಿ ಮೊದಲ ಶುರುವಾಗುವ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಅವರ ಅಭಿಮಾನಿಗಳದ್ದು. ಪಬ್ಲಿಕ್ ಟಿವಿ ಡಿಜಿಟಲ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಮೊದಲು ಸಿನಿಮಾವಾಗಿ ‘ಬಿಲ್ಲ ರಂಗ ಬಾಷಾ’ (Billa Ranga Basha) ಮೂಡಿ ಬರಲಿದೆ. ಈ ಸಿನಿಮಾದ ಟೀಸರ್ ಮೇ 22ರಿಂದ ಶೂಟಿಂಗ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾಗೆ ಅನೂಪ್ ಭಂಡಾರಿ ನಿರ್ದೇಶನ ಮಾಡಲಿದ್ದು, ವಿಕ್ರಾಂತ್ ರೋಣದ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದೆ.

    ನಂತರದ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ತಮಿಳು ನಿರ್ದೇಶಕ ಚರಣ್ (Charan)  ಕನ್ನಡಕ್ಕೆ ಬರುತ್ತಿರುವುದಾಗಿ ಸುದ್ದಿ ಆಗಿದೆ. ವಿಕ್ರಾಂತ್ ರೋಣ ಚಿತ್ರದ ನಂತರ ಕಿಚ್ಚನಿಗಾಗಿ ಸಿನಿಮಾ ಮಾಡುತ್ತಿರುವುದಾಗಿ ಅನೂಪ್ ಭಂಡಾರಿ (Anoop Bhandari) ಈ ಹಿಂದೆಯೇ ಹೇಳಿಕೊಂಡಿದ್ದರು. ಅವರಿಗಾಗಿಯೇ ಕಥೆ ಬರೆಯುತ್ತಿರುವುದಾಗಿಯೂ ತಿಳಿಸಿದ್ದರು. ಅಲ್ಲದೇ, ನಂದಕಿಶೋರ್ (Nandakishore) ಕೂಡ ಕಿಚ್ಚನಿಗಾಗಿ ಸಿನಿಮಾವೊಂದನ್ನು ಮಾಡಲಿದ್ದಾರೆ. ಆ ಕಥೆಯೂ ಲಾಕ್ ಆಗಿದೆ.

    ಚರಣ್ ತಮಿಳಿನಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟವರು. ತಮ್ಮ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಅವರು ಪಡೆದಿದ್ದಾರೆ. ಸುದೀಪ್ ಗಾಗಿ ಪ್ಯಾನ್ ಇಂಡಿಯಾ ಸಿನಿಮಾವನ್ನು ಅವರು ಮಾಡಲಿದ್ದಾರಂತೆ. ಅಧಿಕೃತವಾಗಿ ಈ ವಿಷಯವನ್ನು ಚರಣ್ ಆಗಲಿ ಅಥವಾ ಸುದೀಪ್ ಆಗಲಿ ಹೇಳದೇ ಇದ್ದರೂ ಗಾಂಧಿನಗರದಲ್ಲಂತೂ ಈ ಸುದ್ದಿ ಭರ್ಜರಿಯಾಗಿ ಸೇಲ್ ಆಗುತ್ತಿದೆ.

  • ಬಿದ್ದ ಪೊಲೀಸ್ ಏಟಿಗೆ ಕ್ಷಮೆ ಇರಲಿ ಎಂದ ಕಿಚ್ಚ ಸುದೀಪ್

    ಬಿದ್ದ ಪೊಲೀಸ್ ಏಟಿಗೆ ಕ್ಷಮೆ ಇರಲಿ ಎಂದ ಕಿಚ್ಚ ಸುದೀಪ್

    ವಿಧಾನಸಭಾ ಚುನಾವಣೆ ಪ್ರಚಾರ ಮುಗಿಸಿ ಇದೀಗ ಹೊಸ  ಸಿನಿಮಾದ (New Movie) ಪ್ರೊಮೋ ಶೂಟಿಂಗ್ ಕೆಲಸದಲ್ಲಿ ಬ್ಯುಸಿಯಾಗಿರುವ ಕಿಚ್ಚ (Kiccha)ಸುದೀಪ್ (Sudeep), ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಪತ್ರವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ಪ್ರಚಾರದ ವೇಳೆಯಲ್ಲಿ ಆದ ಅನುಭವವನ್ನು ಅವರು ಅಕ್ಷರ ರೂಪದಲ್ಲಿ ಇಳಿಸಿದ್ದಾರೆ. ಜೊತೆಗೆ ಪೊಲೀಸ್ ಏಟು ತಿಂದವರ ಕ್ಷಮೆಯನ್ನೂ ಅವರು ಕೇಳಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಪತ್ರದಲ್ಲಿ ‘ನಿಮ್ಮ ಕಣ್ಣಲ್ಲಿ ಕಂಡ ಅಪಾರ ಪ್ರೀತಿ ನನ್ನ ಬದುಕಿನ ರೀತಿ. ನಿಮ್ಮ ನಿರಂತರ ರಣಕೇಕೆ ಸಾಕಿಷ್ಟು ಈ ಜನುಮಕೆ. ಹಣತೆ ಹೊತ್ತಿಸಿ ಆರತಿ ಎತ್ತಿದಿರಿ. ದಾರಿಯುದ್ದಕ್ಕೂ ಹೂವ ಚೆಲ್ಲಿದಿರಿ. ನಿಮ್ಮ ಎದೆಯ ಮೇಲಿನ ಹಚ್ಚೆಯಂತೆ ಸದಾ ಜೊತೆಗಿರುವ’ ಎಂದು ಅಭಿಮಾನಿಗಳಿಗೆ ಮತ್ತು ನಾಡಿನ ಜನತೆಗೆ ಅವರು ಧನ್ಯವಾದಗಳನ್ನು ಹೇಳಿದ್ದಾರೆ. ಇದನ್ನೂ ಓದಿ:ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ

    ಮುಂದುವರೆದ ಪತ್ರದಲ್ಲಿ, ‘ಜನಸಾಗರದ ನೂಕು ನುಗ್ಗಲಿನಲ್ಲಿ ಕೆಲವರಿಗೆ ಬಿದ್ದ ಪೊಲೀಸ್ ಲಾಠಿ ಏಟಿಗೆ ಕ್ಷಮೆ ಇರಲಿ. ಸ್ನೇಹಿತರೆ, ನಿಮ್ಮ ಪ್ರತಿ ಮನದಲ್ಲಿ ಈ ಪ್ರೀತಿ ಹೀಗೇ ಇರಲಿ. ಕರುನಾಡಲ್ಲಿ ನಡೆದ ಈ ಮೆರವಣಿಗೆಯುದ್ದಕ್ಕೂ ಜೊತೆಯಾಗಿ ಸಾಗಿ ಮಾಧ್ಯಮ ಮಿತ್ರರಿಗೆ, ಕಾಳಜಿಯಿಂದ ಕಾವಲಿಟ್ಟ ಪೊಲೀಸ್ ಸಿಬ್ಬಂದಿಗೆ, ಮಿಲಿಟರಿ ಕಮಾಂಡೋ ಸಿಬ್ಬಂದಿಗೆ, ಲಕ್ಷಾಂತರ ಕಾರ್ಯಕರ್ತರಿಗೆ ಮತ್ತು ಹೃದಯಗೀತೆಯಾದ ನನ್ನ ಪ್ರೀತಿಯ ಸ್ನೇಹಿತರಿಗೆ ಚಿರಋಣಿ’ ಎಂದು ಅವರು ಬರೆದಿದ್ದಾರೆ.

    ಪ್ರಚಾರ ಕಾರ್ಯ ಮುಗಿಯುತ್ತಿದ್ದಂತೆಯೇ ಅವರು ಹೊಸ ಸಿನಿಮಾದ ಪ್ರೋಮೋ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ತಿಂಗಳು ಪ್ರೋಮೋ ಶೂಟಿಂಗ್ ನಡೆಯಲಿದ್ದು, ಇದರ ಮಾಹಿತಿಯನ್ನು ಜೂನ್ 1ರಂದು ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಹೊಸ ಸಿನಿಮಾದ ಮತ್ತಷ್ಟು ಸುದ್ದಿಗಳು ಜೂನ್ ನಂತರವೇ ಅಭಿಮಾನಿಗಳಿಗೆ ಲಭ್ಯವಾಗಲಿವೆ.

  • ನಾಳೆ ಗದಗ ಜಿಲ್ಲೆಯಲ್ಲಿ ಕಿಚ್ಚ ಸುದೀಪ್ ಪ್ರಚಾರ

    ನಾಳೆ ಗದಗ ಜಿಲ್ಲೆಯಲ್ಲಿ ಕಿಚ್ಚ ಸುದೀಪ್ ಪ್ರಚಾರ

    ಳೆದ ಎರಡು ದಿನಗಳಿಂದ ಬಿಟ್ಟೂ ಬಿಡದೇ ಬಿಜೆಪಿ (BJP) ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ ಕಿಚ್ಚ (Kiccha) ಸುದೀಪ್. ಇಂದು ಹಾವೇರಿ ಜಿಲ್ಲೆಯ ಹಿರೇಕೆರೂರು ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಅವರು ಬಿರುಸಿನ ಪ್ರಚಾರ ಕೈಗೊಂಡಿದ್ದರು. ಮೊನ್ನೆ ಚಿತ್ರದುರ್ಗ, ದಾವಣೆಗೆರೆ ಸೇರಿದಂತೆ ಐದು ಕ್ಷೇತ್ರಗಳ ಪ್ರಚಾರದಲ್ಲಿ ಭಾಗಿಯಾಗಿದ್ದರು. ನಾಳೆ ಗದಗ (Gadag) ಜಿಲ್ಲೆಯ ಹಲವು ಕ್ಷೇತ್ರಗಳ ಪ್ರಚಾರದಲ್ಲಿ ತೊಡಗಲಿದ್ದಾರಂತೆ.

    ನೆಚ್ಚಿನ ನಟನನ್ನು ಬರಮಾಡಿಕೊಳ್ಳಲು ಕೇವಲ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲ, ಕಿಚ್ಚನ ಅಭಿಮಾನಿಗಳು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಗದಗ ತುಂಬಾ ಕಿಚ್ಚನ ಕಟೌಟ್ ಮತ್ತು ಬ್ಯಾನರ್ಸ್ ರಾರಾಜಿಸುತ್ತಿವೆ. ಗದಗ ಬಿಜೆಪಿ ಕ್ಷೇತ್ರದ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಸೇರಿದಂತೆ ಹಲವು ಅಭ್ಯರ್ಥಿಗಳ ಪರವಾಗಿ ಕಿಚ್ಚ ಮತಯಾಚನೆ ಮಾಡಲಿದ್ದಾರೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಮೇಲಿನ ಪ್ರೀತಿಯಿಂದಾಗಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿರುವ ಸುದೀಪ್ (Sudeep), ಇನ್ನೂ ಐದಾರು ದಿನಗಳ ಕಾಲ ಇದೇ ಕೆಲಸದಲ್ಲಿ ನಿರತರಾಗಲಿದ್ದಾರೆ. ಅವರ ಜೊತೆ ನಿರ್ಮಾಪಕ ಜಾಕ್ ಮಂಜು ಪ್ರಯಾಣ ಬೆಳೆಸಿದ್ದಾರೆ. ಸುದೀಪ್ ಹೋದ ಕಡೆಗೆಲ್ಲ ಸಾವಿರ ಸಾವಿರ ಅಭಿಮಾನಿಗಳು ಸೇರುತ್ತಿದ್ದಾರೆ.

  • ಸುದೀ‍ಪ್ ಅವರಿಗೆ ಗನ್ ಮ್ಯಾನ್ ನೀಡುವಂತೆ ಜಾಕ್ ಮಂಜು ಮನವಿ

    ಸುದೀ‍ಪ್ ಅವರಿಗೆ ಗನ್ ಮ್ಯಾನ್ ನೀಡುವಂತೆ ಜಾಕ್ ಮಂಜು ಮನವಿ

    ಕನ್ನಡದ ಹೆಸರಾಂತ ನಟ ಕಿಚ್ಚ (Kiccha) ಸುದೀಪ್ (Sudeep) ಅವರಿಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ಗನ್ ಮ್ಯಾನ್ (Gunman) ನೀಡುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲು ಜಾಕ್ ಮಂಜು (Jack Manju) ತೆರಳಿದ್ದರು ಎಂದು ಗೊತ್ತಾಗಿದೆ. ಪೊಲೀಸ್ ಅಧಿಕಾರಿಗಳು ಮೀಟಿಂಗ್ ನಲ್ಲಿ ಇರುವ ಕಾರಣದಿಂದಾಗಿ ಅವರು ವಾಪಸ್ಸಾಗಿದ್ದಾರಂತೆ. ಈ ನಡುವೆ ಖಾಸಗಿ ವಿಡಿಯೋ (private video) ಬೆದರಿಕೆಗೆ ಸಂಬಂಧಿಸಿದಂತೆ ಸುದ್ದಿ ಪ್ರಸಾರ ಮಾಡದಂತೆ ಕೋರ್ಟಿಗೆ ಮಂಜು ಮೊರೆ ಹೋಗಿರುವುದಾಗಿ ತಿಳಿದುಬಂದಿದೆ.

    ಸುದೀಪ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸುವ ದಿನವೇ ಖಾಸಗಿ ವಿಡಿಯೋಗೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಮಂಜು ದೂರು ನೀಡಿದ್ದರು. ಸುದೀಪ್ ಅವರ ಹೆಸರಿನಲ್ಲಿ ಎರಡು ಪತ್ರಗಳು ಬಂದಿದ್ದು, ಮಾನಹಾನಿ ಮಾಡುವಂತಹ ಕೆಲಸಕ್ಕೆ ಪತ್ರ ಬರೆದವರು ಕೈ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿತ್ತು. ಇದನ್ನೂ ಓದಿ:ರಾಖಿ ಸಾವಂತ್ ಲಿಪ್ ಕಿಸ್ ಪ್ರಕರಣ: ಕೋರ್ಟ್ ಮುಂದೆ ಅರ್ಜಿ

    ಪತ್ರಗಳ ಗಂಭೀರತೆಯನ್ನು ಅರಿತ ಪುಟ್ಟೇನಹಳ್ಳಿ ಪೊಲೀಸರು ಆ ದೂರನ್ನು ಸಿಸಿಬಿಗೆ ವರ್ಗಾಯಿಸಿದ್ದರು. ಸದ್ಯ ಸಿಸಿಬಿ ಪತ್ರಗಳ ಬರೆದವರ ಹಿಂದೆ ಬಿದ್ದಿದೆ. ಆ ಪತ್ರಗಳು ಎಲ್ಲಿಂದ ಬಂದಿವೆ, ಯಾರು ಬರೆದದ್ದು, ಯಾವ ಉದ್ದೇಶದಿಂದ ಬರೆಯಲಾಗಿದೆ ಎಂಬಿತ್ಯಾದಿ ವಿವರಗಳನ್ನು ಸಿಸಿಬಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಈ ಪತ್ರದ ಕುರಿತಂತೆ ಹಲವು ವಿವರಗಳು ಲಭ್ಯವಾಗಿವೆ ಎಂದು ಹೇಳಲಾಗುತ್ತಿದೆ.

    ಪತ್ರಗಳ ಕುರಿತಂತೆ ದೂರು ದಾಖಲಾದ ದಿನವೇ ಸುದೀಪ್ ಮಾಧ್ಯಮಗಳ ಜೊತೆ ಮಾತನಾಡಿ, ‘ಆ ಪತ್ರದ ಹಿಂದೆ ಯಾರಿದ್ದಾರೆ ಎಂದು ನನಗೆ ಗೊತ್ತಿದೆ. ಸಿನಿಮಾ ಇಂಡಸ್ಟ್ರಿಯವರೇ ಈ ಕೃತ್ಯದ ಹಿಂದೆ ಇದ್ದಾರೆ. ಅವರಿಗೆ ಕಾನೂನು ಮೂಲಕವೇ ಉತ್ತರಿಸುತ್ತೇನೆ’ ಎಂದು ತಿಳಿಸಿದ್ದರು.

  • ಸುದೀಪ್ ಖಾಸಗಿ ವಿಡಿಯೋ ಬೆದರಿಕೆ ಪತ್ರ : ಸಿಸಿಬಿ ಕಚೇರಿಯಲ್ಲಿ ಜಾಕ್ ಮಂಜು

    ಸುದೀಪ್ ಖಾಸಗಿ ವಿಡಿಯೋ ಬೆದರಿಕೆ ಪತ್ರ : ಸಿಸಿಬಿ ಕಚೇರಿಯಲ್ಲಿ ಜಾಕ್ ಮಂಜು

    ಖಾಸಗಿ ವಿಡಿಯೋ (Private Video) ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಕಂ ಸುದೀಪ್  (Sudeep)  ಆಪ್ತ ಜಾಕ್ ಮಂಜು (Jack Manju) ಸಿಸಿಬಿ ಕಚೇರಿಗೆ ಭೇಟಿ ನೀಡಿದ್ದಾರೆ. ಸಿಸಿಬಿ (CCB) ಅಧಿಕಾರಿಗಳು ವಿವರಣೆಗೆ ಕರೆದ ಹಿನ್ನೆಲೆಯಲ್ಲಿ ಮಂಜು ಭೇಟಿ ನೀಡಿದ್ದು,  ಸುದೀಪ್ ಅವರಿಗೆ ಬಂದಿದ್ದ ಎರಡು ಪತ್ರಗಳು ಕುರಿತಾಗಿ ವಿವರಣೆ ಪಡೆದಿದ್ದಾರೆ. ಅಲ್ಲದೇ, ಕೆಲವರ ಬಗ್ಗೆ ಅನುಮಾನವನ್ನೂ ವ್ಯಕ್ತ ಪಡಿಸಿದ್ದಾರೆ ಎನ್ನಲಾಗುತ್ತಿದೆ. ಈವರೆಗೂ ಸುದೀಪ್ ಮೇಲೆ ನಡೆದ ಕುತಂತ್ರಗಳ ಬಗ್ಗೆಯೂ ಮಂಜು ಅಧಿಕಾರಿಗಳಿಗೆ ವಿವರಿಸಿದ್ದಾರೆ ಎನ್ನಲಾಗುತ್ತಿದೆ.

    ಬೆದರಿಕೆ ಪತ್ರದ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಮೊನ್ನೆಯಷ್ಟೇ ಸುದೀಪ್‍ ಹೇಳಿದ್ದರು. ಸಿನಿಮಾ ರಂಗದವರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಾನೂನು ಮೂಲಕವೇ ಅವರಿಗೆ ಉತ್ತರ ಕೊಡುತ್ತೇನೆ ಎಂದೂ ಹೇಳಿಕೊಂಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸುಳಿವು ಸಿಕ್ಕಿದೆ. ಸುದೀಪ್ ಮನೆಗೆ ಬಂದಿದ್ದ ಆ ಎರಡೂ ಬೆದರಿಕೆ ಪತ್ರಗಳು ದೊಮ್ಮಲೂರಿನಿಂದ ಪೋಸ್ಟ್ ಆಗಿವೆ ಎಂದು ಹೇಳಲಾಗುತ್ತಿದೆ. ಆ ಬೆದರಿಕೆ ಪತ್ರಗಳ ಸಂಬಂಧ ಸಿಸಿಬಿಯಿಂದ ತನಿಖೆ ಶುರುವಾಗಿದ್ದು, ಶಂಕೀತ ಜಾಡು ಹಿಡಿದು ಹೊರಟಿದ್ದಾರಂತೆ ಸಿಸಿಬಿ ಅಧಿಕಾರಿಗಳು.

    ಮೊದಲ ಪತ್ರ ಬಂದಾಗ ಸುದೀಪ್ ಅವರೇ ನಿರ್ಲಕ್ಷ್ಯ ವಹಿಸಿದ್ದರಂತೆ. ದುಷ್ಟರು ಬರೆದ ಮೊದಲನೇ ಪತ್ರಕ್ಕೆ ಯಾವಾಗ ಸುದೀಪ್ ರಿಯಾಕ್ಟ್ ಆಗ್ಲಿಲ್ವೋ, ಈತ ಏನೂ ಮಾಡಲ್ಲ ಎಂಬ ಭಂಡ ಧೈರ್ಯದಿಂದ ಮತ್ತೊಂದು ಪತ್ರ ಕಳಿಸಿದ್ದಾನಂತೆ ಆ ಭೂಪ. ಯಾವಾಗ ಎರಡನೇ ಪತ್ರ ಕೈ ಸೇರಿತೋ ಇದರ ಗಂಭೀರತೆಯನ್ನು ಅರಿತು ಕಾನೂನು ಪ್ರಕ್ರಿಯೆಯೇ ಸೂಕ್ತ ಎಂದು ತಮ್ಮ ಆಪ್ತ ಜಾಕ್ ಮಂಜು ಮೂಲಕ ದೂರು ನೀಡಿದ್ದರು ಸುದೀಪ್. ಸದ್ಯ ಈ ಪತ್ರದ ಸುತ್ತ ಪೊಲೀಸರು ತನಿಖೆಗಿಳಿದಿದ್ದಾರೆ. ಇದನ್ನೂ ಓದಿ: ‘ವಿಷ್ಣುಪ್ರಿಯಾ’ಗಾಗಿ ಕೇರಳದಿಂದ ಹಾರಿಬಂದ ಕಣ್ಸನ್ನೆ ಬೆಡಗಿ ಪ್ರಿಯಾ

    ಮಾರ್ಚ್ 10ನೇ ತಾರೀಕು ಸುದೀಪ್ ಮನೆಗೆ ಮೊದಲ ಪತ್ರ ತಲುಪಿದೆ. ಆ ಪತ್ರದ ಬಗ್ಗೆ ಅಷ್ಟಾಗಿ ಸುದೀಪ್ ತಲೆ ಕೆಡಿಸಿಕೊಂಡಿರಲಿಲ್ಲ‌. ಆದರೂ ಇಂಟರ್ ನಲ್ ಎನ್ಕೈರಿಯಂತೆ ಮಾಹಿತಿಯನ್ನು ಕಲೆ ಹಾಕುವುದಕ್ಕೆ ಯತ್ನಿಸಿದ್ದರಂತೆ. ಅದರ ಬೆನ್ನಲ್ಲೆ ಮತ್ತೊಂದು ಪತ್ರ ಬಂದಿದ್ದರಿಂದ ಸಹಜವಾಗಿಯೇ ಇದು ಗಂಭೀರ ಪ್ರಕರಣ ಅನಿಸಿ ದೂರು ನೀಡಲಾಗಿತ್ತು. ಇನ್ನು ಆ ಪತ್ರದ ಮೂಲ ಹುಡುಕುತ್ತಾ ಹೋದಾಗ ಸಿಕ್ಕಿದ್ದು ದೊಮ್ಮಲೂರು ಪೋಸ್ಟ್ ಬಾಕ್ಸ್.  ಸುದೀಪ್ ಮನೆಗೆ ಬಂದ  ಎರಡೂ ಪತ್ರಗಳು ದೊಮ್ಮಲೂರಿನಿಂದ ಬಂದಿದ್ದವು. ಹೀಗಾಗಿ ಆ ಪತ್ರವನ್ನು ಯಾರು ಪೋಸ್ಟ್ ಮಾಡಿದ್ದು ಎಂಬುದರ ಬಗ್ಗೆ ಅಲ್ಲಿನ ಸಿಸಿಟಿವಿ ಪರಿಶೀಲನೆಗೆ ಸಿಸಿಬಿ ಮುಂದಾಗಿದೆ.

    ಈ ಹಿಂದೆ ಸುದೀಪ್ ಜೊತೆ ಇದ್ದ ಕಾರು ಚಾಲಕನ ಮೇಲೆ ಪೊಲೀಸರಿಗೆ ಬಲವಾದ ಶಂಕೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೆ ದೂರು ದಾಖಲಿಸಿ ತನಿಖೆ ನಡೆಸಿದ್ದ ಪುಟ್ಟೇನಹಳ್ಳಿ ಪೊಲೀಸರು ಸುದೀಪ್ ಮನೆಯಲ್ಲಿ ಸ್ಪಾಟ್ ಇನ್ವೆಷ್ಟಿಗೇಷನ್ ಕೂಡ ನಡೆಸಿದ್ದಾರೆ. ಕೆಲವೊಂದು ಸಾಂಧರ್ಭಿಕ ಸಾಕ್ಷಿಗಳ ಅನ್ವಯ ಈ ಹಿಂದೆ ಇದ್ದ ಸುದೀಪ್ ಮನೆಯ ಕಾರು ಚಾಲಕನ ಮೇಲೆ ಅನುಮಾನ ಬಂದಿದೆ ಎಂದು ಹೇಳಲಾಗುತ್ತಿದೆ. ಇವೆಲ್ಲ ವರದಿಯನ್ನು ಪುಟ್ಟೇನಹಳ್ಳಿ ಪೊಲೀಸರು ಸಿಸಿಬಿಗೆ ನೀಡಿದ್ದಾರೆ. ಇನ್ನು ಈ ಕಾರು ಚಾಲಕನನ್ನು ಬಳಸಿಕೊಂಡು ಚಿತ್ರ ರಂಗದ ಆ ವ್ಯಕ್ತಿ ಕೃತ್ಯವನ್ನು ಎಸಗಿದ್ದನಾ ಎಂಬ ಶಂಕೆ ವ್ಯಕ್ತವಾಗಿದೆ.  ಇದೊಂದು ಪ್ರೀ ಪ್ಲಾನ್ ಕೃತ್ಯ ಎಂಬುದಕ್ಕೆ ಸಿಸ್ಟಂ ಟೈಪಿಂಗ್ ಪತ್ರವೇ ಸಾಕ್ಷಿಯಾಗಿದೆ.  ಕೈ ಬರಹ ಪತ್ರವನ್ನು ಕಳಿಸಿದರೆ ಸಾಕ್ಷಿ ಸಿಗುತ್ತೆ ಎಂಬ ಕಾರಣಕ್ಕೆ ಟೈಪ್ ಮಾಡಿ ಆ ಪತ್ರವನ್ನು ಪೋಸ್ಟ್ ಮಾಡಲಾಗಿದೆ. ಪೊಲೀಸರು ದೂರು ಪಡೆದುಕೊಳ್ಳುವಾಗಲೇ ಇದೊಂದು ಕ್ರಿಮಿನಲ್ ಕಾನ್ಸ್ ಪೆರೆಸಿ ಎಂದು ತಿಳಿದು ಸೆಕ್ಷನ್ 120b ಒಳಸಂಚು ಅಡಿಯಲ್ಲಿ ಕೇಸು ದಾಖಲಿಸಿದ್ದರು. ಸದ್ಯ ಅವರ ಅನುಮಾನ ಕೂಡ ನಿಜವಾಗ್ತಿದೆ ಎಂಬುದಕ್ಕೆ ಸಿಸಿಬಿಗೆ ಸಿಕ್ಕ ಬೇಸಿಕ್ ಇನ್ಪಾರ್ಮೇಷನ್ ಗಳೆ ಸಾಕ್ಷಿಯಾಗಿವೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯ ಸೈಬರ್ ವಿಂಗ್ ಕೂಡ ಕೆಲಸ ಮಾಡುತ್ತಿದ್ದು ಮುಂದಿನ ದಿನದಲ್ಲಿ ನಟ ಸುದೀಪ್ ಗೂ ನೊಟೀಸ್ ನೀಡಿ ಹೇಳಿಕೆಗಳನ್ನು ಪಡೆಯಲು ಸಿದ್ಧತೆಯನ್ನ ನಡೆಸುತ್ತಿದ್ದಾರೆ. ಸದ್ಯ ಆ ಕಾರು ಚಾಲಕ ಸಿಕ್ಕ ಬಳಿಕವಷ್ಟೆ ಅಸಲಿ ಸಂಗತಿ ಹೊರ ಬರಬೇಕಿದೆ.

  • ಸುದೀಪ್ ವಿರುದ್ಧ ಚುನಾವಣೆ ಆಯೋಗಕ್ಕೆ ಜೆಡಿಎಸ್ ಪತ್ರ

    ಸುದೀಪ್ ವಿರುದ್ಧ ಚುನಾವಣೆ ಆಯೋಗಕ್ಕೆ ಜೆಡಿಎಸ್ ಪತ್ರ

    ಕಿಚ್ಚ ಸುದೀಪ್ (Sudeep) ಚುನಾವಣಾ ಅಖಾಡಕ್ಕೆ ಇಳಿದ ಬೆನ್ನಲ್ಲೇ ಅವರ ನಟನೆಯ ಸಿನಿಮಾ, ಜಾಹೀರಾತು, ಪೋಸ್ಟರ್ ಹಾಗೂ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಬೇಕು ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರರು ಹಾಗೂ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮುಖ್ಯ ಚುನಾವಣಾ (Election) ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

    ಚುನಾವಣಾಧಿಕಾರಿಗೆ ಬರೆದ ಪತ್ರದಲ್ಲಿ ‘ಖ್ಯಾತ ಚಲನಚಿತ್ರ ನಟರಾದ ಕಿಚ್ಚ (Kiccha) ಸುದೀಪ್ ಅವರು ಪ್ರಸ್ತುತ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಾಗಿರುವುದರಿಂದ ಇವರು ನಟಿಸಿರುವ ಜಾಹೀರಾತು, ಪೋಸ್ಟರ್ ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಚುನಾವಣೆ ಮುಗಿಯುವವರೆಗೆ ಟಿವಿ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ತಡೆಹಿಡಿಯುವುದು ಮತ್ತು ಇವರ ಭಾವಚಿತ್ರವಿರುವ ಪೋಸ್ಟರ್ ಜಾಹೀರಾತುಗಳನ್ನು ಕೂಡಲೇ ತೆರವುಗೊಳಿಸಿ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ’ ಎಂದಿದೆ.

    ಎರಡು ದಿನಗಳ ಹಿಂದೆಯಷ್ಟೇ ಶಿವಮೊಗ್ಗದ ವಕೀಲರೊಬ್ಬರು ಚುನಾವಣೆ ಆಯೋಗಕ್ಕೆ ಪತ್ರ ಬರೆದು ಸುದೀಪ್ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಪ್ರಚಾರ ಮಾಡುವುದಾಗಿ ತಿಳಿಸಿದ್ದರಿಂದ, ಅವರ ನಟನೆಯ ಚಿತ್ರಗಳನ್ನು ಪ್ರಸಾರ ಮಾಡದಂತೆ ತಡೆಯಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದರು. ಇದನ್ನೂ ಓದಿ: ಅನುಷ್ಕಾ ಕೆರಿಯರ್ ಹಾಳು ಮಾಡಲು ಹೊರಟಿದ್ರಾ ಕರಣ್ ಜೋಹರ್?

    ವಕೀಲರು ಚುನಾವಣಾ ಅಧಿಕಾರಿಗಳಿಗೆ ನೀಡಿದ ಪತ್ರದಲ್ಲಿ ‘ಕನ್ನಡದ ಚಲನಚಿತ್ರ ನಟ ಕಿಚ್ಚ  ಸುದೀಪ್  ಅವರು ಭಾರತೀಯ ಜನತಾ  ಪಕ್ಷದ  ಸ್ಟಾರ್ ಪ್ರಚಾರಕರಾಗಿರುವುದರಿಂದ  ಚುನಾವಣೆ ಮುಗಿಯುವವರೆಗೂ ಅವರ ನಟನೆಯ  ಯಾವುದೇ ಚಲನಚಿತ್ರಗಳು ಚಿತ್ರ ಮಂದಿರಗಳಲ್ಲಿ ಮತ್ತು  ಟಿವಿಗಳಲ್ಲಿ  ಪ್ರದರ್ಶನವಾಗದಂತೆ, ಅವರು ನಡೆಸಿಕೊಡುವ  ಟಿವಿಶೋಗಳು  ಪ್ರಸಾರವಾಗದಂತೆ  ಮತ್ತು  ಅವರು ನಟಿಸಿರುವ  ಜಾಹೀರಾತುಗಳು ಸಹ ಪ್ರಸಾರವಾಗದಂತೆ  ಚುನಾವಣಾ ಆಯೋಗ  ಕಟ್ಟು ನಿಟ್ಟಿನ ಕ್ರಮಜರುಗಿಸಬೇಕು’ ಎಂದು ಬರೆದಿದ್ದರು.

    ಅಲ್ಲದೇ, ‘ಅವರು  ಒಂದು ರಾಜಕೀಯ ಪಕ್ಷದ ಪರವಾಗಿ ಪ್ರಚಾರಮಾಡುತ್ತಿರುವುದನ್ನು ಅವರೆ ಘೋಷಣೆ ಮಾಡಿದ್ದರಿಂದ  ಅವರ  ನಟನೆಯ ಚಲನಚಿತ್ರಗಳು  ಮತ್ತು  ಟಿವಿಶೋಗಳು  ಹಾಗೂ ಜಾಹೀರಾತುಗಳು  ಮತದಾರರ  ಮೇಲೆ   ಪ್ರಭಾವ ಬೀರುವುದರಿಂದ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ.  ಆದ್ದರಿಂದ ತಕ್ಷದಿಂದ ಚುನಾವಣಾ ಆಯೋಗ  ಈ ವಿಷಯಕ್ಕೆ  ಸಂಬಂದಿಸಿದಂತೆ  ತುರ್ತು ಕ್ರಮ ಜರುಗಿಸಬೇಕೆಂದು ಒಬ್ಬ ಜವಾಬ್ದಾರಿಯುತ ನಾಗರೀಕನಾಗಿ  ಒತ್ತಾಯಿಸುತ್ತಿದ್ದೇನೆ’ ಎಂದು ಕೆ.ಪಿ ಶ್ರೀಪಾಲ್ ಪತ್ರ ನೀಡಿದ್ದರು.

  • ಸುದೀಪ್ ಖಾಸಗಿ ವಿಡಿಯೋ ಬೆದರಿಕೆ ಹಿಂದೆ ಕಾರು ಡ್ರೈವರ್ ಇರುವ  ಶಂಕೆ

    ಸುದೀಪ್ ಖಾಸಗಿ ವಿಡಿಯೋ ಬೆದರಿಕೆ ಹಿಂದೆ ಕಾರು ಡ್ರೈವರ್ ಇರುವ ಶಂಕೆ

    ಟ ಕಿಚ್ಚ ಸುದೀಪ್ (Sudeep) ಅವರ ಖಾಸಗಿ ವಿಡಿಯೋ (Private Video) ಬಹಿರಂಗ ಪಡಿಸುವುದಾಗಿ ಬರೆದ ಬೆದರಿಕೆ ಪತ್ರದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ನಿನ್ನೆಯಷ್ಟೇ ಸುದೀಪ್‍ ಹೇಳಿದ್ದರು. ಸಿನಿಮಾ ರಂಗದವರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಾನೂನು ಮೂಲಕವೇ ಅವರಿಗೆ ಉತ್ತರ ಕೊಡುತ್ತೇನೆ ಎಂದೂ ಹೇಳಿಕೊಂಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸುಳಿವು ಸಿಕ್ಕಿದೆ. ಸುದೀಪ್ ಮನೆಗೆ ಬಂದಿದ್ದ ಆ ಎರಡೂ ಬೆದರಿಕೆ ಪತ್ರಗಳು ದೊಮ್ಮಲೂರಿನಿಂದ ಪೋಸ್ಟ್ ಆಗಿವೆ ಎಂದು ಹೇಳಲಾಗುತ್ತಿದೆ. ಆ ಬೆದರಿಕೆ ಪತ್ರಗಳ ಸಂಬಂಧ ಸಿಸಿಬಿಯಿಂದ (CCB)ತನಿಖೆ ಶುರುವಾಗಿದ್ದು, ಶಂಕೀತ ಜಾಡು ಹಿಡಿದು ಹೊರಟಿದ್ದಾರಂತೆ ಸಿಸಿಬಿ ಅಧಿಕಾರಿಗಳು.

    ಮೊದಲ ಪತ್ರ ಬಂದಾಗ ಸುದೀಪ್ ಅವರೇ ನಿರ್ಲಕ್ಷ್ಯ ವಹಿಸಿದ್ದರಂತೆ. ದುಷ್ಟರು ಬರೆದ ಮೊದಲನೇ ಪತ್ರಕ್ಕೆ ಯಾವಾಗ ಸುದೀಪ್ ರಿಯಾಕ್ಟ್ ಆಗ್ಲಿಲ್ವೋ, ಈತ ಏನೂ ಮಾಡಲ್ಲ ಎಂಬ ಭಂಡ ಧೈರ್ಯದಿಂದ ಮತ್ತೊಂದು ಪತ್ರ ಕಳಿಸಿದ್ದಾನಂತೆ ಆ ಭೂಪ. ಯಾವಾಗ ಎರಡನೇ ಪತ್ರ ಕೈ ಸೇರಿತೋ ಇದರ ಗಂಭೀರತೆಯನ್ನು ಅರಿತು ಕಾನೂನು ಪ್ರಕ್ರಿಯೆಯೇ ಸೂಕ್ತ ಎಂದು ತಮ್ಮ ಆಪ್ತ ಜಾಕ್ ಮಂಜು ಮೂಲಕ ದೂರು ನೀಡಿದ್ದರು ಸುದೀಪ್. ಸದ್ಯ ಈ ಪತ್ರದ ಸುತ್ತ ಪೊಲೀಸರು ತನಿಖೆಗಿಳಿದಿದ್ದಾರೆ. ಇದನ್ನೂ ಓದಿ: ಯಶ್‌ ಜೊತೆ ದಿಲ್‌ ರಾಜು ಹೊಸ ಸಿನಿಮಾ- ಅಪ್‌ಡೇಟ್‌ ಹಂಚಿಕೊಂಡ ನಿರ್ಮಾಪಕ

    ಮಾರ್ಚ್ 10ನೇ ತಾರೀಕು ಸುದೀಪ್ ಮನೆಗೆ ಮೊದಲ ಪತ್ರ ತಲುಪಿದೆ. ಆ ಪತ್ರದ ಬಗ್ಗೆ ಅಷ್ಟಾಗಿ ಸುದೀಪ್ ತಲೆ ಕೆಡಿಸಿಕೊಂಡಿರಲಿಲ್ಲ‌. ಆದರೂ ಇಂಟರ್ ನಲ್ ಎನ್ಕೈರಿಯಂತೆ ಮಾಹಿತಿಯನ್ನು ಕಲೆ ಹಾಕುವುದಕ್ಕೆ ಯತ್ನಿಸಿದ್ದರಂತೆ. ಅದರ ಬೆನ್ನಲ್ಲೆ ಮತ್ತೊಂದು ಪತ್ರ ಬಂದಿದ್ದರಿಂದ ಸಹಜವಾಗಿಯೇ ಇದು ಗಂಭೀರ ಪ್ರಕರಣ ಅನಿಸಿ ದೂರು ನೀಡಲಾಗಿತ್ತು. ಇನ್ನು ಆ ಪತ್ರದ ಮೂಲ ಹುಡುಕುತ್ತಾ ಹೋದಾಗ ಸಿಕ್ಕಿದ್ದು ದೊಮ್ಮಲೂರು ಪೋಸ್ಟ್ ಬಾಕ್ಸ್.  ಸುದೀಪ್ ಮನೆಗೆ ಬಂದ  ಎರಡೂ ಪತ್ರಗಳು ದೊಮ್ಮಲೂರಿನಿಂದ ಬಂದಿದ್ದವು. ಹೀಗಾಗಿ ಆ ಪತ್ರವನ್ನು ಯಾರು ಪೋಸ್ಟ್ ಮಾಡಿದ್ದು ಎಂಬುದರ ಬಗ್ಗೆ ಅಲ್ಲಿನ ಸಿಸಿಟಿವಿ ಪರಿಶೀಲನೆಗೆ ಸಿಸಿಬಿ ಮುಂದಾಗಿದೆ.

    ಈ ಹಿಂದೆ ಸುದೀಪ್ ಜೊತೆ ಇದ್ದ ಕಾರು ಚಾಲಕನ (Car Driver) ಮೇಲೆ ಪೊಲೀಸರಿಗೆ ಬಲವಾದ ಶಂಕೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೆ ದೂರು ದಾಖಲಿಸಿ ತನಿಖೆ ನಡೆಸಿದ್ದ ಪುಟ್ಟೇನಹಳ್ಳಿ ಪೊಲೀಸರು ಸುದೀಪ್ ಮನೆಯಲ್ಲಿ ಸ್ಪಾಟ್ ಇನ್ವೆಷ್ಟಿಗೇಷನ್ ಕೂಡ ನಡೆಸಿದ್ದಾರೆ. ಕೆಲವೊಂದು ಸಾಂರ್ಭಿಕ ಸಾಕ್ಷಿಗಳ ಅನ್ವಯ ಈ ಹಿಂದೆ ಇದ್ದ ಸುದೀಪ್ ಮನೆಯ ಕಾರು ಚಾಲಕನ ಮೇಲೆ ಅನುಮಾನ ಬಂದಿದೆ ಎಂದು ಹೇಳಲಾಗುತ್ತಿದೆ. ಇವೆಲ್ಲ ವರದಿಯನ್ನು ಪುಟ್ಟೇನಹಳ್ಳಿ ಪೊಲೀಸರು ಸಿಸಿಬಿಗೆ ನೀಡಿದ್ದಾರೆ. ಇನ್ನು ಈ ಕಾರು ಚಾಲಕನನ್ನು ಬಳಸಿಕೊಂಡು ಚಿತ್ರ ರಂಗದ ಆ ವ್ಯಕ್ತಿ ಕೃತ್ಯವನ್ನು ಎಸಗಿದ್ದನಾ ಎಂಬ ಶಂಕೆ ವ್ಯಕ್ತವಾಗಿದೆ.  ಇದೊಂದು ಪ್ರೀ ಪ್ಲಾನ್ ಕೃತ್ಯ ಎಂಬುದಕ್ಕೆ ಸಿಸ್ಟಂ ಟೈಪಿಂಗ್ ಪತ್ರವೇ ಸಾಕ್ಷಿಯಾಗಿದೆ.  ಕೈ ಬರಹ ಪತ್ರವನ್ನು ಕಳಿಸಿದರೆ ಸಾಕ್ಷಿ ಸಿಗುತ್ತೆ ಎಂಬ ಕಾರಣಕ್ಕೆ ಟೈಪ್ ಮಾಡಿ ಆ ಪತ್ರವನ್ನು ಪೋಸ್ಟ್ ಮಾಡಲಾಗಿದೆ. ಪೊಲೀಸರು ದೂರು ಪಡೆದುಕೊಳ್ಳುವಾಗಲೇ ಇದೊಂದು ಕ್ರಿಮಿನಲ್ ಕಾನ್ಸ್ ಪೆರೆಸಿ ಎಂದು ತಿಳಿದು ಸೆಕ್ಷನ್ 120b ಒಳಸಂಚು ಅಡಿಯಲ್ಲಿ ಕೇಸು ದಾಖಲಿಸಿದ್ದರು. ಸದ್ಯ ಅವರ ಅನುಮಾನ ಕೂಡ ನಿಜವಾಗ್ತಿದೆ ಎಂಬುದಕ್ಕೆ ಸಿಸಿಬಿಗೆ ಸಿಕ್ಕ ಬೇಸಿಕ್ ಇನ್ಪಾರ್ಮೇಷನ್ ಗಳೆ ಸಾಕ್ಷಿಯಾಗಿವೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯ ಸೈಬರ್ ವಿಂಗ್ ಕೂಡ ಕೆಲಸ ಮಾಡುತ್ತಿದ್ದು ಮುಂದಿನ ದಿನದಲ್ಲಿ ನಟ ಸುದೀಪ್ ಗೂ ನೊಟೀಸ್ ನೀಡಿ ಹೇಳಿಕೆಗಳನ್ನು ಪಡೆಯಲು ಸಿದ್ಧತೆಯನ್ನ ನಡೆಸುತ್ತಿದ್ದಾರೆ. ಸದ್ಯ ಆ ಕಾರು ಚಾಲಕ ಸಿಕ್ಕ ಬಳಿಕವಷ್ಟೇ ಅಸಲಿ ಸಂಗತಿ ಹೊರ ಬರಬೇಕಿದೆ.

  • ಸುದೀಪ್ ಖಾಸಗಿ ವಿಡಿಯೋ ಲೀಕ್ ಬೆದರಿಕೆ: ಸಿಸಿಬಿಗೆ ಮಹತ್ವದ ಸುಳಿವು

    ಸುದೀಪ್ ಖಾಸಗಿ ವಿಡಿಯೋ ಲೀಕ್ ಬೆದರಿಕೆ: ಸಿಸಿಬಿಗೆ ಮಹತ್ವದ ಸುಳಿವು

    ಖಾಸಗಿ ವಿಡಿಯೋ ಹರಿಬಿಡುವುದಾಗಿ ಕಿಚ್ಚ ಸುದೀಪ್ ಗೆ (Sudeep) ಎರಡು ಬೆದರಿಕೆ ಪತ್ರ (Threat letter) ಬರೆದವರ ಪತ್ತೆಗೆ ಬಲೆ ಬೀಸಿರುವ ಸಿಸಿಬಿ (CCB) ಹಲವರನ್ನು ಕರೆದು ವಿಚಾರಣೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಜಾಕ್ ಮಂಜು ಮತ್ತು ಸುದೀಪ್ ಅವರಿಂದಲೂ ಹೇಳಿಕೆ ಪಡೆದುಕೊಳ್ಳಲಿದೆಯಂತೆ. ಈಗಾಗಲೇ ಬೆದರಿಕೆ ಹಾಕಿದವರ ಸುಳಿವು ಕೂಡ ಸಿಸಿಬಿಗೆ ಸಿಕ್ಕಿದ್ದು, ಅಧಿಕಾರಿಗಳು ಅವರ ಬೆನ್ನು ಹತ್ತಿದ್ದಾರಂತೆ.

    ತಮ್ಮ ಮನೆಯ ವಿಳಾಸಕ್ಕೆ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಸಿ ಪತ್ರ ಬರೆದವರು ಬೇರೆ ಯಾರೂ ಅಲ್ಲ, ಅವರು ಸಿನಿಮಾ ರಂಗದವರೇ ಆಗಿದ್ದಾರೆ ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ.  ಅಲ್ಲದೇ, ಅವರು ಯಾರು ಅಂತಾನೂ ಗೊತ್ತಿದೆ. ಮುಂದಿನ ದಿನಗಳಲ್ಲಿ ಅವರಿಗೆ ಪಾಠ ಕಲಿಸಲಾಗುವುದು ಎಂದು ಸುದೀಪ್ ತಿಳಿಸಿದ್ದಾರೆ. ಯಾವುದರ ಮೂಲಕ ಅವರಿಗೆ ಉತ್ತರ ಕೊಡಬೇಕು ಎನ್ನುವುದು ಗೊತ್ತಿದೆ. ಹಾಗೆಯೇ ಕೊಡುತ್ತೇನೆ ಎಂದು ಮಾಧ್ಯಮಗಳೊಂದಿಗೆ ಸುದೀಪ್ ಮಾತನಾಡಿದರು.

    ಸುದೀಪ್ ಗೆ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಮಾರ್ಚ್ 29 ರಂದೇ ಆ ಪತ್ರವನ್ನು ಬರೆದಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ಸುದೀಪ್ ಅವರ ಆಪ್ತ ಜಾಕ್ ಮಂಜು ದೂರು ನೀಡಿದ್ದರು.

    ಜಾಕ್ ಮಂಜು (Jack Manju) ನೀಡಿದ ದೂರಿನನ್ವಯ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುತ್ತೇವೆ ಎನ್ನುವುದರ ಜೊತೆಗೆ  ಕೆಲ ಅವಾಚ್ಯ ಶಬ್ದಗಳನ್ನು ಸಹ ಲೆಟರ್ ನಲ್ಲಿ  ದುಷ್ಕರ್ಮಿಗಳು ಬರೆದಿದ್ದಾರೆ ಎನ್ನಲಾಗುತ್ತಿದೆ. ಈ ಪತ್ರವು ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜುಗೆ ಸಿಕ್ಕಿದ್ದು ಅದನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಜಾಕ್ ಮಂಜು ನೀಡಿದ ದೂರನ್ನು ಆಧರಿಸಿ ಐಪಿಸಿ 504, 506 ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.

  • ಕಿಚ್ಚ ಸುದೀಪ್ ನಡೆ ಅಚ್ಚರಿಯಲ್ಲ, ನೋವು ತಂದಿದೆ : ಪ್ರಕಾಶ್ ರಾಜ್

    ಕಿಚ್ಚ ಸುದೀಪ್ ನಡೆ ಅಚ್ಚರಿಯಲ್ಲ, ನೋವು ತಂದಿದೆ : ಪ್ರಕಾಶ್ ರಾಜ್

    ಕಿಚ್ಚ (Kiccha) ಸುದೀಪ್ ಬಿಜೆಪಿ (BJP) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಬಲಿಸಿದ್ದಕ್ಕೆ ನಟ ಪ್ರಕಾಶ್ ರಾಜ್ ಪ್ರತಿಕ್ರಿಸಿದ್ದಾರೆ. ಸುದೀಪ್ (Sudeep) ತಮ್ಮನ್ನು ತಾವು ಮಾರಿಕೊಳ್ಳುವುದಿಲ್ಲವೆಂದು ಭಾವಿಸಿದ್ದೇನೆ ಎಂದು ನಿನ್ನೆಯಷ್ಟೇ ಟ್ವಿಟ್ ಮಾಡಿದ್ದ ಪ್ರಕಾಶ್ ರಾಜ್ (Prakash Raj) ನಂತರದ ಬೆಳವಣಿಕೆ ಕಂಡು ಸುದೀಪ್ ನೆಡೆಯು ನನಗೆ ಕೇವಲ ಅಚ್ಚರಿ ತಂದಿಲ್ಲ, ಅಪಾರ ನೋವನ್ನುಂಟು ಮಾಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ, ಪ್ರಕಾಶ್ ಅವರ ಮಾತಿಗೆ ಸುದೀಪ್ ‘ಅವರೊಂದಿಗೆ ನಾನು ನಟಿಸಲು ಕಾಯುತ್ತಿದ್ದೇನೆ’ ಎಂದಷ್ಟೇ ಉತ್ತರ ನೀಡಿದ್ದಾರೆ.

    ಸುದೀಪ್ ಬಿಜೆಪಿಗೆ ನೇರವಾಗಿ ಬೆಂಬಲಿಸುತ್ತೇನೆ ಎಂದು ಹೇಳದೇ ಇದ್ದರೂ, ‘ನನಗೆ ಆತ್ಮೀಯರು, ಆಪ್ತರು ತುಂಬಾ ಜನ ರಾಜಕಾರಣದಲ್ಲಿ ಸಕ್ರೀಯರಾಗಿದ್ದಾರೆ. ಅಲ್ಲದೇ, ಅವರು ನನ್ನ ಕಷ್ಟದ ಕಾಲದಲ್ಲಿ ಕೈ ಹಿಡಿದಿದ್ದಾರೆ. ಅವರ ಪರವಾಗಿ ನಿಲ್ಲಬೇಕಾಗಿದ್ದು ನನ್ನ ಕರ್ತವ್ಯ ಈ ಕಾರಣದಿಂದಾಗಿ ನಾನು ಇಂಥದ್ದೊಂದು ನಿರ್ಧಾರವನ್ನು ತಗೆದುಕೊಂಡಿದ್ದೇನೆ’ ಎಂದಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್-ಸುಕುಮಾರ್ ಕಾಂಬೋ ಬ್ಯಾಕ್, ಧೂಳ್ ಎಬ್ಬಿಸಿದ ‘ಪುಷ್ಪ 2’ ಗ್ಲಿಂಪ್ಸ್

    ಬಿಜೆಪಿ ಜೊತೆಗಿನ ಸಂಬಂಧವನ್ನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ‘ಈ ಸಂದರ್ಭದಲ್ಲಿ ಒಂದು ಸ್ಪಷ್ಟನೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಇದನ್ನು ಅಭಿಮಾನಿಗಳಿಗೆ ಸ್ಪಷ್ಟನೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ಟಿಕೆಟ್ ಕೇಳುವುದಿಲ್ಲ’ ಎಂದಿದ್ದಾರೆ ಸುದೀಪ್.

    ಈ ಕುರಿತಂತೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಆರಂಭಿಸಿದ್ದಾರೆ. ನೆಚ್ಚಿನ ನಟ ಈಗಾಗಲೇ ತಮ್ಮದೇ ಟ್ರಸ್ಟ್ ಮೂಲಕ ಸಮಾಜಸೇವೆ ಆರಂಭಿಸಿದ್ದಾರೆ. ರಾಜಕಾರಣಕ್ಕೆ ಹೋದರೆ ಮತ್ತಷ್ಟು ಸಹಾಯ ಮಾಡಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ಅವರು ರಾಜಕೀಯ ಕ್ಷೇತ್ರಕ್ಕೆ ಹೋಗುವುದು ಬೇಡ ಎಂದು ನೇರವಾಗಿ ಹೇಳಿಕೆ ನೀಡಿದ್ದಾರೆ.

    ನಟ ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿಯೇ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್, ಬಿಜೆಪಿ ಸೇರುವ ವಿಚಾರ ಮಾತನಾಡಲಿಲ್ಲ. ಪಕ್ಷದ ಪರವಾಗಿ ಪ್ರಚಾರ ಮಾಡುವೆ ಅಂತಾನೂ ಹೇಳಲಿಲ್ಲ. ಬಸವರಾಜ ಬೊಮ್ಮಾಯಿ ಪರವಾಗಿ ನಿಂತುಕೊಳ್ಳುತ್ತೇನೆ ಎಂದಷ್ಟೇ ಹೇಳಿದರು.