Tag: ಕಿಚ್ಚ ಸುದೀಪ್

  • Bigg Boss: ಪವಿ ಮಾಡಿದ ಯಡವಟ್ಟಿಗೆ ಸುದೀಪ್‌ ಖಡಕ್‌ ಕ್ಲಾಸ್

    Bigg Boss: ಪವಿ ಮಾಡಿದ ಯಡವಟ್ಟಿಗೆ ಸುದೀಪ್‌ ಖಡಕ್‌ ಕ್ಲಾಸ್

    ಬಿಗ್ ಬಾಸ್ ಮನೆಯ (Bigg Boss Kannada 10) ಆಟಕ್ಕೆ 50 ದಿನ ಕಳೆಯುತ್ತಿದ್ದಂತೆ ಅವಿನಾಶ್ ಶೆಟ್ಟಿ- ಪವಿ ಪೂವಪ್ಪ ಎಂಟ್ರಿಯಾಗಿದೆ. ಮೊದಲ ವಾರವೇ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಸುದೀಪ್ ಅವರಿಂದ ಪಾಠ ಹೇಳಿಸಿಕೊಂಡಿದ್ದಾರೆ. ಬಳೆ ವಿಚಾರ ಮಾತೆತ್ತಿದ ಪವಿ ಪೂವಪ್ಪಗೆ(Pavi Poovappa)  ಸುದೀಪ್ ಕಡೆಯಿಂದ ಸ್ಪೆಷಲ್ ಕ್ಲಾಸ್ ಆಗಿದೆ. ಇದನ್ನೂ ಓದಿ:ವಿನಯ್ ಭವಿಷ್ಯದಂತೆ ಬಿಗ್ ಬಾಸ್ ಗೆಲ್ಲೋರು ಯಾರು?

    ಪವಿ ಪೂವಪ್ಪ- ಅವಿನಾಶ್ ಶೆಟ್ಟಿ (Avinash Shetty) ಅವರಿಗೆ ಹೊರಗಡೆಯ ಯಾವ ವಿಚಾರವನ್ನೂ ದೊಡ್ಮನೆಯಲ್ಲಿ ಚರ್ಚೆ ಮಾಡುವಂತಿಲ್ಲ ಎಂದು ಬಿಗ್ ಬಾಸ್ ಮೊದಲೇ ತಾಕೀತು ಮಾಡಿದ್ದರು. ಆದರೆ ಪವಿ ಅವರು ಬಾಯಿ ತಪ್ಪಿ ಟ್ರೋಲ್ ಪೇಜ್‌ಗಳಲ್ಲಿ ವಿನಯ್ ಗೌಡ ಬಳೆ ವಿಚಾರ ಚರ್ಚೆ ಆಗಿದ್ದನ್ನು ವಿನಯ್ ಮುಂದೆ ಹೇಳಿದ್ದರು. ರೂಲ್ಸ್ ಮರೆತು ಮನೆಯ ಹೊರಗಿನ ವಿಚಾರವನ್ನ ಪವಿ ರಿವೀಲ್ ಮಾಡಿದ್ದರು. ಈ ವಿಷಯ ತಿಳಿದ ಮೇಲೆ ವಿನಯ್, ನಾನು ಮಾಡಿದ ತಪ್ಪಿನಿಂದ ನನ್ನ ಹೆಂಡತಿ- ಮಗ ಅನುಭವಿಸುವ ಹಾಗಾಯ್ತು ಎಂದು ಬಾತ್‌ರೂಮ್‌ನಲ್ಲಿ ಕಣ್ಣೀರು ಹಾಕಿದರು. ಆನಂತರ ಏನೂ ಆಗಿಲ್ಲ ಎಂದು ಬಿಗ್ ಬಾಸ್ ವಿನಯ್‌ರನ್ನು (Vinay Gowda) ಸಂತೈಸಿದರು. ಹೊರಗೆ ಎಲ್ಲವೂ ಕ್ಷೇಮವಾಗಿದೆ ಎಂದು ಭರವಸೆ ನೀಡಿದ್ದರು.

    ಬಿಗ್ ಬಾಸ್ ಶೋ ಶುರುವಾಗಿ 50 ದಿನ ಆಗಿದೆ. ಎಲ್ಲರೂ ಬಳೆ ವಿಚಾರವನ್ನು ಮರೆತಿದ್ದಾರೆ. 50 ದಿನಗಳನ್ನು ಕಳೆದ ಸ್ಪರ್ಧಿಯ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು. ನನ್ನ ಸ್ಪರ್ಧಿಯ ಬಗ್ಗೆ ನೀವು ಹೇಗೆ ಮಾತನಾಡಿದ್ರಿ ಎಂದು ಕಿಚ್ಚ ಸುದೀಪ್ (Sudeep) ಅವರು ಪವಿಗೆ ಕ್ಲಾಸ್ ತಗೊಂಡಿದ್ದಾರೆ. ವಿನಯ್ ಗೌಡ ಹೆಂಡತಿ, ಮಗ ಹೇಗಿದ್ದಾರೆ? ಅವರು ಎಲ್ಲಿದ್ದಾರೆ? ಅವರ ಮನೆಗೆ ಹೋಗಿ ಬಂದಿದ್ದೀರಾ? ಏನೂ ನಿಮಗೆ ಗೊತ್ತಿಲ್ಲ. ಏನೂ ವಿಷಯ ಗೊತ್ತಿಲ್ಲದೆ ನೀವು ವಿನಯ್ ಬಳಿ ಹೋಗಿ ಟ್ರೋಲ್ ಪೇಜ್‌ಗಳಲ್ಲಿ ಬಳೆ ಬಗ್ಗೆ ಏನೋ ಬಂತು ಎಂದು ಹೇಳಿದ್ದೀರಿ. ಯಾವ ಎಪಿಸೋಡ್ ನೋಡದೆ ಒಂದು ವಿಷಯದ ಬಗ್ಗೆ ಹೇಗೆ ಕಾಮೆಂಟ್ ಪಾಸ್ ಮಾಡ್ತೀರಿ? ಒಂದು ಪಾಸಿಂಗ್ ಕಾಮೆಂಟ್‌ನಿಂದ ಒಬ್ಬ ವ್ಯಕ್ತಿಯ ಮನಸ್ಥಿತಿ ಬದಲಾಗತ್ತೆ. 100 ಕಿಮೀ ವೇಗದಲ್ಲಿ ಹೋಗುವ ಸ್ಪರ್ಧಿಗೆ ಅರ್ಧ ದಾರಿಗೆ ಎಂಡ್ ಬೋರ್ಡ್ ಹಾಕಿದರೆ ಏನಾಗುವುದು? ಎಂದು ಸುದೀಪ್ ಹೇಳಿದ್ದಾರೆ.

    ನನಗೋಸ್ಕರ ಟ್ರೋಲ್ ಪೇಜ್ ಆರಂಭ ಮಾಡಿಸಿ ನಾನು ಬೆಳಗ್ಗೆ ಗುಡ್ ಮಾರ್ನಿಂಗ್ ಅಂತ ಹೇಳಿದರೂ ಕೂಡ, ಸುದೀಪ್ ಗುಡ್ ಮಾರ್ನಿಂಗ್ ಅಂತ ಹೇಳ್ತಾನೆ ಅಂತ ಬೈತಾರೆ. ನನ್ನಿಂದ ಅವರು ಊಟ ಮಾಡುತ್ತಿದ್ದಾರೆ. ಅವರ ಟ್ರೋಲ್ ಪೇಜ್‌ಗಳನ್ನು ನೋಡಿ ನಾನು ಎಂಜಾಯ್ ಮಾಡ್ತೀನಿ. ನಾನು ಯಾವುದೋ ಕಿತ್ತೋದ ಕೆಲಸ ಮಾಡಿಲ್ಲ ಎಂದು ಸುದೀಪ್ ಹೇಳಿದ್ದಾರೆ.

    ನೀವು ಕೊನೆಯದಾಗಿ ಇಲ್ಲಿಗೆ ಬಂದು ಟ್ರೋಫಿ ಪಡೆಯುವ ಬಗ್ಗೆ ಯೋಚನೆ ಮಾಡಿ, ಅದನ್ನು ಬಿಟ್ಟು ಬೇರೆ ಏನೂ ತಲೆಕೆಡಿಸಿಕೊಳ್ಳಬೇಡಿ. ನೀವು ಯಾವ ಘಟನೆ ನಡೆಯಿತು ಅಂತ ಅಂದುಕೊಂಡಿದ್ದೀರೋ ಅದೆಲ್ಲ ಮುಗಿದು ಜನರು ಮರೆತಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ. ಕಳೆದ 10 ಸೀಸನ್‌ಗಳಲ್ಲಿ ಯಾವ ವೈಲ್ಡ್ ಕಾರ್ಡ್ ಎಂಟ್ರಿಗೂ ನಾನು ಈ ರೀತಿಯ ಸ್ವಾಗತ ನೀಡಿರಲಿಲ್ಲ ಎಂದು ಹೇಳಿದ್ದಾರೆ.

  • ಬಿಗ್‌ಬಾಸ್ ಮನೆಯಿಂದ ಇಶಾನಿ ಔಟ್- ‌ಇಂದು ಇನ್ನೊಬ್ಬರಿಗೆ ಕಾದಿದೆ ಶಾಕ್

    ಬಿಗ್‌ಬಾಸ್ ಮನೆಯಿಂದ ಇಶಾನಿ ಔಟ್- ‌ಇಂದು ಇನ್ನೊಬ್ಬರಿಗೆ ಕಾದಿದೆ ಶಾಕ್

    ಕೊನೆಗೂ ಬಿಗ್‍ಬಾಸ್ ಮನೆಯಲ್ಲಿ ಇಶಾನಿ (Eshani) ಜರ್ನಿ ಎಂಡ್ ಆಗಿದೆ. ಕಳೆದ ವಾರ ವರ್ತೂರ್ ಸಂತೋಷ್ (Varthur Santhosh) ಅವರ ಕಾರಣದಿಂದ ಎಲಿಮಿನೇಷನ್ (Elimination) ನಡೆದಿರಲಿಲ್ಲ. ಈ ವಾರ ಡಬಲ್ ಎಲಿಮಿನೇಷನ್ ವೀಕ್. ಇಬ್ಬರು ಈ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಕಿಚ್ಚ ಹೇಳಿದ್ದರು.

    ಶನಿವಾರದ ಎಪಿಸೋಡ್ ಕೊನೆಯಲ್ಲಿ ಕಿಚ್ಚ, ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರು ಎಂದು ನಿಮಗೇ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ’ ಎಂದು ಕೇಳಿದರು. ಇಶಾನಿ ಎದ್ದು ನಿಂತುಕೊಂಡರು. ಈ ವೇಳೆ ಕಿಚ್ಚ (Kichcha Sudeepa), ನಿಜ. ನಿಮ್ಮ ಪಯಣ ಬಿಗ್‍ಬಾಸ್ (Bigg Boss Kannada) ಮನೆಯಲ್ಲಿ ಮುಗಿಯುತ್ತಿದೆ. ಆಲ್‍ದಿ ಬೆಸ್ಟ್ ಎಂದು ಹೇಳಿದರು. ಭಾನುವಾರದ ಎಪಿಸೋಡ್‍ನಲ್ಲಿ ಇನ್ನೊಬ್ಬರು ಬಿಗ್‍ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ.

    ಹೊರಬಿದ್ದ ಇಬ್ಬರೂ ಸ್ಪರ್ಧಿಗಳ ಜೊತೆ ಇಂದಿನ ಎಪಿಸೋಡ್‍ನಲ್ಲಿ ಕಿಚ್ಚ ಸಂವಾದ ನಡೆಸಲಿದ್ದಾರೆ. ಕೊನೆಯದಾಗಿ ಇಶಾನಿ, ‘ನಾನು ಇನ್ನಷ್ಟು ಎಫರ್ಟ್ ಹಾಕಬೇಕಾಗಿತ್ತು, ಆಗಲಿಲ್ಲ. ಮನೆಯಿಂದ ಸಾಕಷ್ಟು ಕಲಿತುಕೊಂಡಿದ್ದೀನಿ. ಉಳಿದ ಎಲ್ಲ ಸ್ಪರ್ಧೆಗಳಿಗೆ ಆಲ್ ದಿ ಬೆಸ್ಟ್’ ಎಂದು ಹೇಳಿದರು. ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ ಅರ್ಜುನ್ ಸರ್ಜಾ

    ಅಲ್ಲಿಗೆ ಶನಿವಾರದ ‘ಕಿಚ್ಚನ ಪಂಚಾಯಿತಿ’ ಮುಗಿದಿದೆ. ಇಂದು ಮತ್ಯಾವ ಸ್ಪರ್ಧಿ ಮನೆಯಿಂದ ಹೊರಬೀಳಲಿದ್ದಾರೆ ಎಂಬ ಕುತೂಹಲ ಹಾಗೆಯೇ ಉಳಿದುಕೊಂಡಿದೆ.

  • ‘ಅನಾವರಣ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

    ‘ಅನಾವರಣ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

    ನಾವರಣ (Anavarana) ಸಿನಿಮಾದ ಹಾಡುಗಳು ಈಗಾಗಲೇ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಮೊದಲ ನೋಟ ಬಿಡುಗಡೆಯಾಗಿದೆ. ಪ್ರೀತಿ, ಕೊಲೆ ಕುಟುಂಬ, ಎಮೋಷನ್ ಜೊತೆಗೆ ಸಸ್ಪೆನ್ಸ್ ಅಂಶಗಳಿಂದ ಕೂಡಿರುವ ಚಿತ್ರದ ಟ್ರೈಲರ್ (Trailer) ನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ ಶುಭಾಶಯ ಕೋರಿದ್ದಾರೆ.

    ಕಿಚ್ಚ ಸುದೀಪ್ (Kiccha Sudeep) ಮಾತನಾಡಿ, ರಾಮಚಂದ್ರ, ಅದ್ವೈತ್ ಪ್ರಭಾಕರ್ ನಿರ್ಮಾಣ ಮಾಡಿರುವ, ಮೊದಲ ಬಾರಿಗೆ ಮಂಜು ಹರಿ ನಿರ್ದೇಶನ ಮಾಡಿರುವ, ಅರ್ಜುನ್ ಯೋಗಿ (Arjun Yogi) ನಟನೆಯ ಅನಾವರಣ ಸಿನಿಮಾದ ಟ್ರೈಲರ್ ನೋಡಿದೆ. ಅವರ ತಂಡಕ್ಕೆ ಅವರ ಪರಿಶ್ರಮಕ್ಕೆ ಒಳ್ಳೆದಾಗಲಿ. ಟ್ರೈಲರ್ ನೋಡ್ತಾ ಇರಬೇಕಾದ್ರೆ ಬಹಳ ಪರಿಚಯಸ್ಥರು ತುಂಬ ಜನ ಸಿನಿಮಾದಲ್ಲಿದ್ದಾರೆ. ಎಲ್ಲರಿಗೂ ಒಳ್ಳೆದಾಗಲಿ ಎಂದರು.

    ಫ್ಯಾಮಿಲಿ ಡ್ರಾಮಾ ಜೊತೆಗೆ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಾವರಣ ಸಿನಿಮಾ ಡಿಸೆಂಬರ್ ನಲ್ಲಿ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಹರೀಶ್ ಕುಮಾರ್ ಹಾಗೂ ಮಂಜುನಾಥ್ ಪಿಳ್ಳಪ್ಪ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ರಂಗ ಕಲಾವಿದರು ನಿರ್ದೇಶಕರು ಆಗಿರುವ ಹರೀಶ್ ಕುಮಾರ್ ಹಾಗೂ ಮಂಜುನಾಥ್ ಪಿಳ್ಳಪ್ಪ ಇಬ್ಬರು ಅನಾವರಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ 40ಕ್ಕೂ ಹೆಚ್ಚು ಕಿರು ಚಿತ್ರಗಳನ್ನು ಮಾಡಿರುವ ಅನುಭವ ಈ ಇಬ್ಬರು ನಿರ್ದೇಶಕರಿಗಿದೆ.

    ನಮ್ಮ ಸಿನಿಮಾ ಬ್ಯಾನರ್ ನಡಿ ಅದ್ವೈತ್ ಪ್ರಭಾಕರ್, ಆರ್.ರಾಮಚಂದ್ರ, ಸತ್ಯ ರಾಣಿ ಜಿ ಮತ್ತು ರಚನಾ ಬಿ. ಹೆಚ್ ನಿರ್ಮಾಣಗೊಂಡಿರುವ ಅನಾವರಣ ಸಿನಿಮಾದಲ್ಲಿ ಅರ್ಜುನ್ ಯೋಗಿ, ಸಾರಿಕಾ ರಾವ್ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರಥಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ, ಯುಕ್ತಾ, ಧರಣಿ ಕುಮಾರ್, ಸಿದ್ದೀ ವಿನಾಯಕ, ಗಿರೀಶ್ ಯು.ಬಿ, ಶಿವರಾಜ್, ರಂಗೋಲಿ ವಿಜಿ, ರಾಜುಹಾಸನ್, ಬೇಬಿ ದೃತಿ ಶುತ್ವ ಮತ್ತು ಅಭಿ ತಾರಾಬಳಗದಲ್ಲಿದ್ದಾರೆ.

    ವೆಂಕಿ ಸಂಕಲನ, ಡಾ.ವಿ.ನಾಗೇಂದ್ರ ಪ್ರಸಾದ್ ಮತ್ತು ಶಶಿಕುಮಾರ್ ಬೆಳಕವಾಡಿ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಹಿನ್ನಲೆ ಸಂಗೀತ ಬಿ.ಆರ್.ಹೇಮಂತ್ ಕುಮಾರ್, ವಿಶಾಲ್ ಸಿ ಕೃಷ್ಣ ಸಂಗೀತ, ನಂದಕುಮಾರ್ ಛಾಯಾಗ್ರಹಣ, ಮದನ್ ಹರಿಣಿ ಮತ್ತು ರಾಮ್ಜ್ ನೃತ್ಯ ಸಂಯೋಜನೆ ಸಿನಿಮಾಕ್ಕಿದೆ.

  • Bigg Boss: ಡ್ರೋನ್‌ಗೆ ಸಿಕ್ತು ಈ ವಾರದ ಕಿಚ್ಚನ ಚಪ್ಪಾಳೆ

    Bigg Boss: ಡ್ರೋನ್‌ಗೆ ಸಿಕ್ತು ಈ ವಾರದ ಕಿಚ್ಚನ ಚಪ್ಪಾಳೆ

    ದೊಡ್ಮನೆಯಲ್ಲಿ ಮನೆಯಲ್ಲಿ (Bigg Boss Kannada 10) ಈಗಾಗಲೇ 5 ವಾರಗಳು ಕಳೆದಿವೆ. ಇಷ್ಟು ವಾರಗಳಲ್ಲಿ ಒಂದು ವಾರ ಮಾತ್ರ ಕಿಚ್ಚ ಸುದೀಪ್ ಅವರು ಬಳೆಗೆ ಚಪ್ಪಾಳೆ ನೀಡಿದ್ದರು. ಆದರೆ ಈಗ ವಾರ ಕಿಚ್ಚ ಸುದೀಪ್ ಅವರು ಡ್ರೋನ್ ಪ್ರತಾಪ್‌ಗೆ ಚಪ್ಪಾಳೆ ನೀಡಿದ್ದಾರೆ. ಪ್ರತಾಪ್ ಆಟಕ್ಕೆ ಭೇಷ್ ಎಂದಿದ್ದಾರೆ. ಇದನ್ನೂ ಓದಿ:ಶಾರುಖ್ ಅಭಿಮಾನಿಗಳಿಗೆ ಗಿಫ್ಟ್ : ದೀಪಾವಳಿಗೆ ‘ಡಂಕಿ’ ಹೊಸ ಪೋಸ್ಟರ್

    ಬಿಗ್ ಮನೆಗೆ ಕಾಲಿಟ್ಟ ಮೊದಲ ದಿನದಿಂದಲೂ ಪ್ರತಾಪ್, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ರು. ಟಾರ್ಗೆಟ್ ಆಗುತ್ತಲೇ ಬಂದಿದ್ದರು. ಅಂದು ಟ್ರೋಲ್ ಆಗಿದ್ದ, ಜೋಕರ್ ಆಗಿದ್ದ ಪ್ರತಾಪ್ ಇಂದು ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ, ಈಗ ಕಿಚ್ಚನ ಚಪ್ಪಾಳೆ ಕೂಡ ಪಡೆದಿದ್ದಾರೆ. ಪ್ರತಾಪ್ ಅವರು ಟೀಂನಲ್ಲಿ ಕ್ಯಾಪ್ಟನ್ ಆಗಿ ತಂಡವನ್ನು ಮುಂದಾಳತ್ವ ವಹಿಸಿದ್ದರ ಬಗ್ಗೆ ಸುದೀಪ್ (Sudeep) ಅವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಮೂಲಕ ಈ ಶೋನಲ್ಲಿ ಮೊದಲ ಚಪ್ಪಾಳೆ ಸ್ಪರ್ಧಿಯಾಗಿ ಡ್ರೋನ್ ಪ್ರತಾಪ್ (Drone Prathap) ಅವರಿಗೆ ಸಲ್ಲಿದೆ. ಇದನ್ನೂ ಓದಿ:ಗ್ರ್ಯಾಮಿ ಪ್ರಶಸ್ತಿಗಾಗಿ ಪಿಎಂ ಮೋದಿ ವಿಡಿಯೋ ನಾಮ ನಿರ್ದೇಶನ

    ಹೊರಗಡೆ ನನ್ನ ಕಳ್ಳ, ಸುಳ್ಳ ಅಂದವರು, ಹೀಯಾಳಿಸಿದವರು, ಈ ಮನೆಯಲ್ಲಿ ಆರಂಭದಲ್ಲಿ ಆದಂತಹ ಘಟನೆಗಳನ್ನು ನೆನಪಿಸಿಕೊಂಡರೆ ಈಗ ಮನಸ್ಸು ಹಗುರವಾಗುತ್ತಿದೆ. ಥ್ಯಾಂಕ್ಯು ಸರ್. ಬಿಗ್ ಬಾಸ್ ಮನೆಯಲ್ಲಿ ಹೊರಗಡೆ ಇದ್ದಾಗ ಎರಡು ಸೈಡ್ ಕಾಣಿಸಲ್ಲ. ಹೌದು, ನಾನು ತಪ್ಪು ಮಾಡಿದ್ದೇನೆ, ಅದನ್ನು ನಾನು ಒಪ್ಪುತ್ತೇನೆ. ಆದರೆ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರಶ್ನಿಸೋದು ಸರಿ ಅಲ್ಲ. ಬಿಗ್ ಬಾಸ್ ಮನೆಯಲ್ಲಿ ಕ್ಯಾಮೆರಾ ಇರುತ್ತದೆ, ಅದು ಎಲ್ಲರಿಗೂ ಕಾಣುತ್ತದೆ ಎಂದು ಪ್ರತಾಪ್ ಅವರು ಕಿಚ್ಚ ಸುದೀಪ್‌ಗೆ ಧನ್ಯವಾದಗಳನ್ನು ಹೇಳಿದ್ದಾರೆ.

    ಪ್ರಪಂಚಕ್ಕೆ ನೀವು ಸುಳ್ಳು ಹೇಳಿರಬಹುದು, ಜನರಿಗೆ ಏನೇ ಹೇಳಿರಬಹುದು. ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಪ್ರತಾಪ್ ಮಾತಿಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

  • ಕಮಲ್ ‘ಇಂಡಿಯನ್-2’ಗೆ ಕಿಚ್ಚ ಸಾಥ್- ನಾಳೆ ರಿಲೀಸ್ ಆಗ್ತಿದೆ ಫಸ್ಟ್ ಗ್ಲಿಂಪ್ಸ್

    ಕಮಲ್ ‘ಇಂಡಿಯನ್-2’ಗೆ ಕಿಚ್ಚ ಸಾಥ್- ನಾಳೆ ರಿಲೀಸ್ ಆಗ್ತಿದೆ ಫಸ್ಟ್ ಗ್ಲಿಂಪ್ಸ್

    ಮಿಳಿನ ಖ್ಯಾತ ನಿರ್ದೇಶಕ ಎಸ್. ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಇಂಡಿಯನ್ 2’ (Indian 2) ಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ನಾಳೆ ಈ ಚಿತ್ರದ ಫಸ್ಟ್ ಗ್ಲಿಂಪ್ಸ್ ಹೊರಬೀಳಲಿದ್ದು, ಕಮಲ್ ಹಾಸನ್ (Kamal Haasan) ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

    ‘ಇಂಡಿಯನ್ 2’ ಚಿತ್ರ 1996ರಲ್ಲಿ ಮೂಡಿಬಂದ ‘ಇಂಡಿಯನ್’ನ ಮುಂದುವರಿದ ಭಾಗ. ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ಸೇನಾಪತಿ ಪಾತ್ರದಲ್ಲಿ ಮಿಂಚಿದ್ದರು. ಅದರ ಮುಂದುವರೆದ ಭಾಗವಾಗಿರುವಇಂಡಿಯನ್-2 ಚಿತ್ರದ ಇಂಟ್ರೋ ವೀಡಿಯೋ ನಾಳೆ ರಿಲೀಸ್ ಆಗ್ತಿದೆ.

    ಕನ್ನಡದಲ್ಲಿ ಕಿಚ್ಚ ಸುದೀಪ್(Kiccha Sudeep), ತಮಿಳಿನಲ್ಲಿ ರಜನಿಕಾಂತ್, ಹಿಂದಿ ಆಮಿರ್ ಖಾನ್, ತೆಲುಗಿನಲ್ಲಿ ರಾಜಮೌಳಿ, ಮಲಯಾಳಂನಲ್ಲಿ ಮೋಹನ್ ಲಾಲ್ ಇಂಡಿಯನ್-2 ಸಿನಿಮಾದ ಇಂಟ್ರೋ ವಿಡಿಯೋ ಅನಾವರಣ ಮಾಡಲಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಮಿಮಿಕ್ರಿ ಮಾಡಿದ ತುಕಾಲಿ ಸಂತು

    ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ಬ್ಯಾನರ್ ನಡಿ ಇಂಡಿಯನ್-2 ನಿರ್ಮಾಣವಾಗಿದ್ದು, ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಭ್ರಷ್ಟಾಚಾರ – ಅಪರಾಧ ಚಟುವಟಿಕೆಗಳ ವಿರುದ್ಧ ನಿಲ್ಲುವ ಕಥೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ನೆಡುಮುಡಿ ವೇಣು, ವಿವೇಕ್, ಸಮುದ್ರಖನಿ, ಬಾಬಿ ಸಿಂಹ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್, ಮನೋಬಾಲಾ, ವೆನ್ನೆಲ ಕಿಶೋರ್, ದೀಪಾ ಶಂಕರ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ, ರವಿವರ್ಮನ್ ಮತ್ತು ರತ್ನವೇಲು ಅವರ ಕ್ಯಾಮರಾ ವರ್ಕ್, ಎ.ಶ್ರೀಕರ್ ಪ್ರಸಾದ್ ಅವರ ಎಡಿಟಿಂಗ್ ಇರಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುದೀಪ್‌ ಕಾಲೆಳೆದ ತುಕಾಲಿ..!

    ಸುದೀಪ್‌ ಕಾಲೆಳೆದ ತುಕಾಲಿ..!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುದ್ಧಕ್ಕೆ ನಿಂತ ಮೇಲೆ ಸೋತರೂ ಪರವಾಗಿಲ್ಲ, ಸತ್ತಾದರೂ ಗೆಲ್ಲಿ- ಕಿಚ್ಚನ ಕ್ಲಾಸ್

    ಯುದ್ಧಕ್ಕೆ ನಿಂತ ಮೇಲೆ ಸೋತರೂ ಪರವಾಗಿಲ್ಲ, ಸತ್ತಾದರೂ ಗೆಲ್ಲಿ- ಕಿಚ್ಚನ ಕ್ಲಾಸ್

    ದೊಡ್ಮನೆಯ ಆಟ ಈಗ 2 ವಾರ ಕಳೆದಿದೆ. ಮೊದಲ ವಾರ ಸ್ನೇಕ್ ಶ್ಯಾಮ್ ಎಲಿಮಿನೇಟ್ ಆಗಿ ಹೊರನಡೆದಿದ್ದಾರೆ. 2ನೇ ವಾರದ ಎಲಿಮಿನೇಷನ್ ಬಿಸಿ ಮನೆಮಂದಿಗೆ ತಟ್ಟಿದೆ. ಇದರ ಮಧ್ಯೆ ಕಿಚ್ಚನ ಪಂಚಾಯಿತಿ ಎಪಿಸೋಡ್‌ನಲ್ಲಿ ಸುದೀಪ್ ಅವರು ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಮನೆಯ ಸದಸ್ಯರನ್ನು ಭೇಟಿಯಾಗುತ್ತಲೇ, ನೀವು ನೀವೇ ಡಿಸ್ಕಸ್ ಮಾಡಿಕೊಂಡು ಇಬ್ಬರನ್ನು ನಾಮಿನೇಟ್ ಮಾಡಿ ಎಂದರು. ಅದಕ್ಕೆ ಡ್ರೋನ್ ಪ್ರತಾಪ್ ಸೇರಿದಂತೆ ಕೆಲ ಹೆಸರುಗಳನ್ನು ಫೈನಲ್ ಮಾಡಲಾಯಿತು.

    ಈ ವಾರ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಸ್ಪರ್ಧಿಗಳಿಗೆ ಸಖತ್ ಆಗಿಯೇ ಬೆಂಡೆತ್ತಿದ್ದಾರೆ. ನೀವಿಲ್ಲಿ ಚಪ್ಪಾಳೆ ಹೊಡೆಯೋಕೆ ಬಂದ್ರಾ ಅಂತ ಖಡಕ್ ಆಗಿ ಮಾತನಾಡಿದ್ದಾರೆ. ಮನೆಯ ಸದಸ್ಯರು ನಾಮಿನೇಟ್ ಮಾಡಿದ ನಂತರ ಸೋಫಾ ಮೇಲೆ ವಿನಯ್ ಗೌಡ ಮತ್ತು ಕಾರ್ತಿಕ್ ಮಹೇಶ್ ಅವರನ್ನು ಬಿಟ್ಟು ಮಿಕ್ಕವರು ಕೂರಬಾರದು ಎಂದು ಸುದೀಪ್ (Sudeep) ಆದೇಶಿಸಿದರು. ನಂತರ ಎಲ್ಲರಿಗೂ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಕಾರಣ, ಮಂಗಳವಾರದ ಸಂಚಿಕೆಯಲ್ಲಿ ಮನೆಯಲ್ಲಿ ಇಬ್ಬರನ್ನು ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಮಾಡಬೇಕು ಎಂದು ಹೇಳಿದಾಗ, ಮನೆಯ ಸದಸ್ಯರು 20 ಸೆಕೆಂಡ್ ಕೂಡ ಯೋಚಿಸದೇ ಕಾರ್ತಿಕ್ ಮತ್ತು ವಿನಯ್ ಹೆಸರನ್ನು ಹೇಳಿದ್ದರು. ಇದು ಸುದೀಪ್‌ಗೆ ಕೋಪ ತರಿಸಿದೆ. ಇದನ್ನೂ ಓದಿ:ಸುದೀಪ್‌ಗೆ ನಾಯಕಿಯಾದ ‘ಕೆಜಿಎಫ್‌’ ಬ್ಯೂಟಿ ಶ್ರೀನಿಧಿ ಶೆಟ್ಟಿ

    ಈ ಮನೆಯನ್ನು ರಕ್ಷಕ್‌ನಂತಹ (Rakshak Bullet) ಚಿಕ್ಕ ಹುಡುಗನ ಕ್ಯಾಪ್ಟನ್‌ಶಿಪ್‌ನಲ್ಲಿ ನಡೆಸಲು ನೀವು ರೆಡಿ ಇದ್ದೀರಿ. ಆದರೆ ಒಬ್ಬ ಹೆಣ್ಣಿನ ಮೇಲೆ ನಿಮಗೆ ನಂಬಿಕೆ ಇಲ್ಲ. ಈಶಾನಿ (Eshani) ನೀವು ಏನಕ್ಕೆ ಇದ್ದೀರಾ ಮನೆಯೊಳಗೆ? ಈ ವೇದಿಕೆ ಮೇಲೆ ನಿಂತಾಗ, ಡ್ಯಾನ್ಸ್ ಮಾಡಿದ್ರಿ, ಕಾನ್ಫಿಡೆನ್ಸ್ ಅಲ್ಲಿ ಮಾತನಾಡಿದ್ರಿ, ಹೊರಗಡೆ ಒಬ್ಬರ ಅವಕಾಶವನ್ನು ಕಿತ್ತುಕೊಂಡು ನೀವು ಒಳಗೆ ಹೋದ್ರಿ. ನೀವಿಲ್ಲ ಇದ್ದಿದ್ದರೆ ಇನ್ನೊಬ್ಬರು ಯಾರಾದರೂ ಹೋಗಿರುತ್ತಿದ್ದರು ಎಂದು ಸುದೀಪ್ ಹೇಳಿದರು.

    ಬಿಗ್ ಬಾಸ್ (Bigg Boss Kannada) ಒಂದು ಫಿಸಿಕಲ್ ಟಾಸ್ಕ್‌ಗಳನ್ನು ಮಾಡುವಂತಹ ಶೋ. ಬಿಗ್ ಬಾಸ್ ನಿಮ್ಮಿಂದ ಇದು ಸಾಧ್ಯ ಎಂದು ನಂಬಿಕೆ ಇಟ್ಟು ಮನೆಯೊಳಗೆ ಮಹಿಳೆಯರನ್ನು ಕಳಿಸ್ತಾರೆ. ಆದರೆ ನಿಮಗೆ ನಿಮ್ಮ ಮೇಲೆ ನಂಬಿಕೆ ಇಲ್ವಾ? ಈ ಪ್ರಶ್ನೆಯನ್ನು ನಾನು ಲೇಡಿಸ್‌ಗೆ ಕೇಳ್ತಾ ಇದ್ದೇನೆ. ನಿಮಗೆ ಗೆಲ್ಲಬೇಕು ಅಂತ ಹಠ ಇದಿಯೋ, ಇಲ್ವೋ ಅಂತ ಡೌಟ್ ಆಗ್ತಾ ಇದೆ. ನೀವಿಲ್ಲಿ ಚಪ್ಪಾಳೆ ಹೊಡೆಯೋಕೆ ಬಂದಿದ್ದೀರಾ? ಅದನ್ನಂತೂ ಎಲ್ರೂ ತುಂಬ ಚೆನ್ನಾಗಿ ಮಾಡ್ತಾ ಇದ್ದೀರಾ. 9 ಸೀಸನ್‌ನಲ್ಲಿ ಒಬ್ಬರು ಶ್ರುತಿ ಅವರನ್ನು ಬಿಟ್ಟರೆ ಬೇರೆ ಯಾರೂ ಲೇಡಿಸ್ ಗೆದ್ದಿಲ್ಲ. ಯಾಕೆ ಅಂದ್ರೆ ನಿಮಗೆ ಗೆಲ್ಲಬೇಕು ಅಂತ ಅನ್ನಿಸ್ತಾ ಇಲ್ಲ ಎಂದು ಸುದೀಪ್ ಹೇಳಿದರು.

    ಎಲ್ರೂ ಏನ್ ಮಾಡಬೇಕು ಅಂತ ಇಲ್ಲಿಗೆ ಬಂದಿದ್ದೀರಿ? ನಾನು ನಿಮಗೆ ಎರಡು ಚಾಯ್ಸ್ ಕೊಡ್ತಿನಿ. ಯಾರಿಗೆ ಹಠ ಇಲ್ಲ, ಯಾರಿಗೆ ಸಿಕ್ಕ ಅವಕಾಶವನ್ನು ಹಾಳು ಮಾಡ್ಕೊಂಡು ಮನೆಗೆ ಹೋಗಬೇಕು ಅಂತ ಆಸೆ ಇದೆಯೋ ಕೈ ಎತ್ತಿ, ಈ ಕ್ಷಣವೇ ನಾನು ಬಾಗಿಲು ತೆರೆಸುತ್ತೇನೆ ಎಂದು ಬಿಗ್ ಬಾಸ್ ಮನೆಯ ಮೇನ್ ಡೋರ್ ಅನ್ನು ಸುದೀಪ್ ತೆರೆಸಿದರು. ಇಷ್ಟು ಸೀಸನ್‌ಗಳಲ್ಲಿ ಮೊದಲ ಬಾರಿಗೆ ತಮಗಿದ್ದ ಅಧಿಕಾರ ಬಳಸಿಕೊಂಡು, ಬಾಗಿಲು ತೆರೆಸಿ, ಮನೆಯೊಳಗೆ ಇರುವವರಿಗೆ, ಯಾರಿಗಾದರೂ ಇಷ್ಟವಿದ್ದರೆ ಹೋಗಬಹುದು ಎಂದು ನೇರವಾಗಿ ಹೇಳಿದರು.

    ಈ ವಾರ ನಾನು ಮನೆಯೊಳಗೆ ನೋಡಿದ್ದು ಇಷ್ಟ ಆಗಿಲ್ಲ. ಬಿಗ್ ಬಾಸ್ ಮನೆಯೊಳಗೆ ಗೆಲ್ಲುವುದಕ್ಕೆ ಬಂದಿರುವ ನೀವು, ಯಾವುದೇ ಡಿಸ್ಕಸ್ ಕೂಡ ಮಾಡದೇ ಇಬ್ಬರ ಹೆಸರನ್ನು ಹೇಳ್ತೀರಾ. ನಿಮ್ಮ ಕರಿಯರ್ ಬಗ್ಗೆ ನಿಮ್ಮ ಯೋಚನೆ ಇಲ್ವಾ? ನಾನ್ಯಾಕೆ ಕ್ಯಾಪ್ಟನ್ ಆಗಬಾರದು ಅಂತ ನಿಮಗೆ ಅನ್ನಿಸಲಿಲ್ವಾ? ಯುದ್ಧಕ್ಕೆ ಇಳಿದ ಮೇಲೆ ಸೋತರೂ ಪರವಾಗಿಲ್ಲ, ಸತ್ತಾದಾರೂ ಗೆಲ್ಲಿ. ಹೇಗಿರಬೇಕು ಅನ್ನೋದು ನಿಮಗೆ ಬಿಟ್ಟಿದ್ದು. ಆದರೆ ಈ ರೀತಿ ಮಾತ್ರ ಇರಬೇಡಿ ಎಂದು ಖಡಕ್ ವಾರ್ನಿಂಗ್ ಕೊಟ್ಟರು ಕಿಚ್ಚ.

  • ಸುದೀಪ್ ನಟನೆಯ ‘ಮ್ಯಾಕ್ಸ್’ ಟೀಮ್ ಸೇರಿಕೊಂಡ ವರಲಕ್ಷ್ಮಿ

    ಸುದೀಪ್ ನಟನೆಯ ‘ಮ್ಯಾಕ್ಸ್’ ಟೀಮ್ ಸೇರಿಕೊಂಡ ವರಲಕ್ಷ್ಮಿ

    ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ (Max) ಸಿನಿಮಾದಲ್ಲಿ ದಕ್ಷಿಣದ ಖ್ಯಾತ ನಟಿ ವರಲಕ್ಷ್ಮಿ (Varalakshmi) ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಅದು ಈಗ ನಿಜವಾಗಿದೆ. ಚೆನ್ನೈನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ವರಲಕ್ಷ್ಮಿ ಭಾಗಿಯಾಗಿದ್ದಾರೆ. ಅಧಿಕೃತವಾಗಿಯೇ ಈ ಮಾಹಿತಿಯನ್ನು ಚಿತ್ರತಂಡ ಹೇಳಿಕೊಂಡಿದೆ. ‘ವೆಲ್ ಕಮ್ ಆನ್ ಬೋರ್ಡ್ ಮಹಾಲಕ್ಷ್ಮಿ’ ಎಂದು ಪೋಸ್ಟರ್ ವೊಂದನ್ನು ರಿಲೀಸ್ ಮಾಡಿದೆ.

    ಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಿರಂತರವಾಗಿ ನಡೆಯುತ್ತಿದೆ. ಬಿಗ್ ಬಾಸ್ ನಡುವೆಯೂ ತಪ್ಪದೇ ಸುದೀಪ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಹೊತ್ತಿಗೆ ಮ್ಯಾಕ್ಸ್ (Max) ಸಿನಿಮಾದ ಬಹುತೇಕ ಶೂಟಿಂಗ್ ಮುಗಿಯಲಿದೆ. ಹಾಗಾಗಿ ಫೆಬ್ರವರಿಯಲ್ಲಿ (February) ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಿನಿಮಾ ತಂಡವು ಅಧಿಕೃತವಾಗಿ ಮಾಹಿತಿ ನೀಡದೇ ಇದ್ದರೂ, ಚಿತ್ರೋದ್ಯಮದಲ್ಲಿ ಕೇಳಿ ಬರುತ್ತಿರುವ ಮಾತಿನಂತೆ ಫೆಬ್ರವರಿಗೆ ಮ್ಯಾಕ್ಸ್ ತೆರೆ ಕಾಣಲಿದೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಸುದೀಪ್ ಒಪ್ಪಿಕೊಂಡಿದ್ದರಿಂದ ಮತ್ತು ಅವರೇ ಚಿತ್ರವೊಂದನ್ನು ನಿರ್ದೇಶನ ಮಾಡಬೇಕಾಗಿರುವುದರಿಂದ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಸಿನಿಮಾದ ಶೂಟಿಂಗ್ ಮುಗಿಸಲಿದ್ದಾರಂತೆ.

    ಮುಂದಿನ ಸಿನಿಮಾ ನಿರ್ದೇಶನ?

    ಕಿಚ್ಚ ಸುದೀಪ್ ನಿರ್ದೇಶನಕ್ಕೆ ಯಾವಾಗ ಮರಳುತ್ತಾರೆ ಎಂಬ ಪ್ರಶ್ನೆ ಅವರ ಅಭಿಮಾನಿಗಳ ವಲಯದಲ್ಲಿ ಇದ್ದೇ ಇತ್ತು. ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ‘ಮಾಣಿಕ್ಯಬಿಡುಗಡೆಯಾಗಿ 10 ವರ್ಷಗಳ ನಂತರ ಸುದೀಪ್ಕೆಕೆಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಚಿತ್ರವನ್ನು ಕೆ ಆರ್ ಜಿ ಸ್ಟುಡಿಯೋಸ್ ನಡಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸುತ್ತಿದ್ದಾರೆ.

    ಸುದೀಪ್ ಅವರ ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಅವರು ನಿರ್ದೇಶನಕ್ಕೆ ಮರಳಿರುವ ವಿಷಯ ಅವರ ಅಭಿಮಾನಿಗಳ ಸಂತಸವನ್ನು ಇನ್ನಷ್ಟು ಹೆಚ್ಚಿಸಿತ್ತು. ಚಿತ್ರಕ್ಕೆ ‘God Forgives, I don’t – King Kichcha’ ಎಂಬ ಅಡಿಬರಹವಿದ್ದು, ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

     

    ಮೈ ಆಟೋಗ್ರಾಫ್ಚಿತ್ರದ ಮೂಲಕ ನಿರ್ದೇಶಕರಾದ ಸುದೀಪ್, ಇದುವರೆಗೂ ಆರು ಚಿತ್ರಗಳನ್ನು ನಿರ್ದೇಶನ ಮಾಡಿದ್ದು, ‘ಕೆಕೆಅವರ ನಿರ್ದೇಶನದ ಏಳನೇ ಚಿತ್ರವಾಗಿದೆ. ಹಾಗೆಯೇ, ಇದು ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಾಣದ ಆರನೇ ಚಿತ್ರವಾಗಿದೆ . ‘ರತ್ನನ್ ಪ್ರಪಂಚಚಿತ್ರದ ಮೂಲಕ ಪ್ರಾರಂಭವಾದ ಕೆ ಆರ್ ಜಿ ಸ್ಟುಡಿಯೋಸ್ ಚಿತ್ರ ಪಯಣ, ಸತತವಾಗಿ ಮುಂದುವರೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಹಲವು ಗುಣಮಟ್ಟದ ಚಿತ್ರಗಳು ಬಿಡುಗಡೆಯಾಗಲಿಕ್ಕೆ ಸಜ್ಜಾಗಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss: ಕಿಚ್ಚನ ಬೆಂಬಲ ಸಿಗ್ತಿದ್ದಂತೆ ಜೂಮ್‌ನಲ್ಲಿ ಡ್ರೋನ್ ಪ್ರತಾಪ್

    Bigg Boss: ಕಿಚ್ಚನ ಬೆಂಬಲ ಸಿಗ್ತಿದ್ದಂತೆ ಜೂಮ್‌ನಲ್ಲಿ ಡ್ರೋನ್ ಪ್ರತಾಪ್

    ಬಿಗ್ ಬಾಸ್ (Bigg Boss Kannada) ವೀಕೆಂಡ್ ಪಂಚಾಯಿತಿಯಲ್ಲಿ ಸ್ಪರ್ಧಿಗಳಿಗೆ ಕಿಚ್ಚ ಚಳಿ ಬಿಡಿಸಿದ್ದಾರೆ. ಡ್ರೋನ್ ಪ್ರತಾಪ್ ಅವರನ್ನ ಹೀಯಾಳಿಸಿದವರಿಗೆ ಸುದೀಪ್ (Sudeep) ತಕ್ಕ ಪಾಠ ಮಾಡಿದ್ದಾರೆ. ಕಿಚ್ಚನ ಸಪೋರ್ಟ್ ಸಿಗ್ತಿದ್ದಂತೆ ಡ್ರೋನ್ ಪ್ರತಾಪ್ (Drone Prathap) ಜೂಮ್‌ನಲ್ಲಿದ್ದಾರೆ.

    ಡ್ರೋನ್ ಪ್ರತಾಪ್‌ಗೆ ಹೀಯಾಳಿಸಿದ್ದ ತುಕಾಲಿ ಸಂತೂಗೆ ಕಿಚ್ಚ ಖಡಕ್ ಕ್ಲಾಸ್ ಮಾಡಿದ್ದಾರೆ. ಇದಾದ ಬಳಿಕ ಪ್ರತಾಪ್ ಹೊಸ ಪ್ರತಾಪವನ್ನ ತೋರಿಸಿದ್ದಾರೆ. ಕಿಚ್ಚನ ಬೆಂಬಲ ಸಿಗ್ತಿದ್ದಂತೆ ಪ್ರತಾಪ್, ಹೊಸ ಜೋಶ್ ಆರಂಭವಾಗಿದೆ. ಪ್ರತಾಪ್ ನಡೆಯಲ್ಲಿ ಆಗಿರುವ ಬದಲಾವಣೆ ನೋಡಿ ಬಿಗ್‌ಬಾಸ್ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ದೊಡ್ಮನೆಯಲ್ಲಿ ಪ್ರತಾಪ್ ಅತೀ ಹೆಚ್ಚು ಟಾರ್ಗೆಟ್ ಆಗಿದ್ದರು. ಇದನ್ನೂ ಓದಿ:ಪತಿ ರಣ್‌ಬೀರ್, ರಶ್ಮಿಕಾ ಮಂದಣ್ಣ ಲಿಪ್‌ಲಾಕ್‌ಗೆ ಆಲಿಯಾ ಭಟ್ ಪ್ರತಿಕ್ರಿಯೆ

    ‘ಸೂಪರ್ ಸಂಡೇ ವಿತ್ ಸುದೀಪ್’ ಕಾರ್ಯಕ್ರಮದಲ್ಲಿ ಚಾರ್ಲಿ ನಟಿ ಸಂಗೀತಾ (Sangeetha), ತನಿಷಾ ಜೊತೆ ಮಸ್ತ್ ಆಗಿ ಡ್ರೋನ್ ಪ್ರತಾಪ್ ಹೆಜ್ಜೆ ಹಾಕಿದ್ದಾರೆ. ತುಕಾಲಿ ಸಂತೂ ಅವರೇ ಡ್ರೋನ್ ಪ್ರತಾಪ್‌ಗೆ ಓಪನ್ ಅಪ್ ಆಗಿ ಅಂತಿದ್ರಿ, ಓಪನ್ ಅಪ್ ಆಗೋದು ಹೀಗೆ ಎಂದು ಸುದೀಪ್ ಕಾಲೆಳೆದಿದ್ದಾರೆ. ಮನೆಮಂದಿ ಕೂಡ ಪ್ರತಾಪ ಅವರ ಜೋಶ್ ನೋಡಿ ನಕ್ಕಿದ್ದಾರೆ.

    ತುಕಾಲಿ ಸಂತೂ, ವರ್ತೂರ್ ಸಂತೋಷ್, ವಿನಯ್, ಸ್ನೇಹಿತ್ ಸೇರಿದಂತೆ ಅನೇಕರು ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದರ ಬಗ್ಗೆ ಮಾತನಾಡಿ, ತಿವಿದಿದ್ದರು. ಈ ವಿಚಾರಕ್ಕೆ ಡ್ರೋನ್ ಪ್ರತಾಪ್ ಕಣ್ಣೀರಿಟ್ಟಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅನ್ನ ಹಾಕಿದ ಕೈಗೆ ದ್ರೋಹ ಬಗೆದ ಭಾಗ್ಯಶ್ರೀ

    ಅನ್ನ ಹಾಕಿದ ಕೈಗೆ ದ್ರೋಹ ಬಗೆದ ಭಾಗ್ಯಶ್ರೀ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]