Tag: ಕಿಚ್ಚ ಸುದೀಪ್

  • ಆರ್‌ಸಿಬಿಯ ಹೊಸ ಅಧ್ಯಾಯ – ಪ್ಲೇ ಆಫ್‌ ಪ್ರವೇಶಿಸಿದ ಬೆಂಗಳೂರು ಬಾಯ್ಸ್‌ಗೆ ಹೊಗಳಿಕೆಯ ಮಹಾಪೂರ!

    ಆರ್‌ಸಿಬಿಯ ಹೊಸ ಅಧ್ಯಾಯ – ಪ್ಲೇ ಆಫ್‌ ಪ್ರವೇಶಿಸಿದ ಬೆಂಗಳೂರು ಬಾಯ್ಸ್‌ಗೆ ಹೊಗಳಿಕೆಯ ಮಹಾಪೂರ!

    ಬೆಂಗಳೂರು: ಈ ಬಾರಿ ಹೊಸ ಅಧ್ಯಾಯ ಎಂದು ಹೇಳಿಕೊಂಡು ಸೋಲಿನೊಂದಿಗೆ ಲೀಗ್‌ ಆರಂಭಿಸಿದ್ದ ಆರ್‌ಸಿಬಿ (RCB) ನಿಜಕ್ಕೂ ಹೊಸ ಅಧ್ಯಾಯವನ್ನೇ ಸೃಷ್ಟಿಸಿದೆ. ಮೊದಲ 8 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ ಲೀಗ್‌ ಸುತ್ತಿನಲ್ಲೇ ಹೊರ ಬೀಳುವ ಸಾಧ್ಯತೆಯಿತ್ತು. ಅಷ್ಟರಲ್ಲಿ ಪುಟಿದೆದ್ದ ಆರ್​ಸಿಬಿ ಇದೀಗ ಯಾರೂ ಊಹಿಸಿದ, ಪವಾಡ ಸಂಭವಿಸಿದ ರೀತಿಯಲ್ಲಿ ಗೆದ್ದು ಪ್ಲೇ ಆಫ್​ಗೆ (IPL Playoffs) ಅಧಿಕೃತ ಎಂಟ್ರಿ ಕೊಟ್ಟಿದೆ.

    ಪ್ಲೇ ಆಫ್​ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್ (CSK)​ ವಿರುದ್ಧ 27 ರನ್​ ಗಳ ಗೆಲುವು ಸಾಧಿಸಿ ಈ ಅಭೂತಪೂರ್ವ ಸಾಧನೆ ಮಾಡಿದೆ. ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳಬೇಕಿತ್ತು. ಸದ್ಯ ಆರ್‌ಸಿಬಿ ತಂಡದ ಅದ್ಭುತ ಜಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಎಕ್ಸ್‌, ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಅಭಿಮಾನಿಗಳು ಆರ್‌ಸಿಬಿ (RCB Fans) ಪಂದ್ಯದ ಒಂದೊಂದೇ ದೃಶ್ಯಗಳನ್ನು ಹಂಚಿಕೊಳ್ಳುತ್ತಾ ಕೊಂಡಾಡುತ್ತಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆಗೆ ಗೌತಮ್‌ ಗಂಭೀರ್‌ ಹೆಸರು ಪ್ರಸ್ತಾಪ!

    ಈ ಸಂಭ್ರಮದಲ್ಲಿ ಸಿನಿ ತಾರೆಯರೂ ಭಾಗಿಯಾಗಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾಗಳಲ್ಲಿ ಆರ್‌ಸಿಬಿ ತಂಡದ ಗೆಲುವನ್ನು ಕೊಂಡಾಡಿದ್ದಾರೆ. ಹಾಗಾದ್ರೆ ಯಾರು ಏನು ಹೇಳಿದ್ದಾರೆ ಎಂಬುದನ್ನೊಮ್ಮೆ ನೋಡೋಣ… ಇದನ್ನೂ ಓದಿ: ಆರ್‌ಸಿಬಿ ‘ರಾಯಲ್‌’ ಆಗಿ ಪ್ಲೇ-ಆಫ್‌ಗೆ; ಚೆನ್ನೈ ಮನೆಗೆ

    ಕಿಚ್ಚ ಸುದೀಪ್‌ (Kichcha Sudeep):
    ಅಭಿನಂದನೆಗಳು ಆರ್‌ಸಿಬಿ ಎಂತಹ ಹೊಂದಾಣಿಕೆ, ಆದ್ರೆ ದುರಾದೃಷ್ಟ ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚೆನ್ನಾಗಿ ಆಡಿದೆ ಎಂದು ಆರ್‌ಸಿಬಿ ಗೆಲುವನ್ನು ಹೊಗಳಿದ್ದಾರೆ.

    ನಿರ್ದೇಶಕ ಸಿಂಪಲ್‌ ಸುನಿ (Simple Suni):
    ಬರ್ತೀವಿ ಬರ್ತೀವಿ .. ಗುಜರಾತ್ ಗು ಬರ್ತೀವಿ, ಚೆನ್ನೈಗೂ ಬರ್ತೀವಿ, ಬರೀ ಹೊಡೆದಿಲ್ಲ ..ಇಷ್ಟ್ ರನ್ ಒಳಗೆ ಹೊಡಿತೀವಿ ಅಂತ ಹೇಳಿ ಹೊಡೆದಿರೋದು ಅಂತಾ ತಮ್ಮದೇ ಶೈಲಿಯಲ್ಲಿ ಶ್ಲಾಘಿಸಿದ್ದಾರೆ.

    ಪಂದ್ಯ ವೀಕ್ಷಿಸಿದ ರಿಷಭ್‌ ಶೆಟ್ಟಿ (Rishab Shetty):
    ಇನ್ನೂ ಮೊದಲಿನಿಂದಲೂ ಆರ್‌ಸಿಬಿ ಪಕ್ಕಾ ಫ್ಯಾನ್‌ ಆಗಿರುವ ಕಾಂತಾರ ನಟ ರಿಷಭ್‌ ಶೆಟ್ಟಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಸ್‌ಗೇಲ್‌ ಅವರೊಟ್ಟಿಗೆ ಕುಳಿತು ಪಂದ್ಯ ವೀಕ್ಷಣೆ ಮಾಡಿದ್ದಾರೆ. ಕೊನೆಯವರೆಗೂ ಕುಳಿತು ಆರ್‌ಸಿಬಿ ಗೆಲುವನ್ನು ಕಣ್ತುಂಬಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇದು ಇತಿಹಾಸ, ಕ್ರೀಡಾಂಗಣದಲ್ಲಿ ನಾನು ವೀಕ್ಷಿಸಿದ ಮೊದಲ ಪಂದ್ಯ. ಮೇಲ್ಭಾಗದಲ್ಲಿ ನಿಮ್ಮನ್ನು ನೋಡೋಣ ಆರ್‌ಸಿಬಿ! ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  • ಕಿಚ್ಚನಿಗೆ ವಿಶೇಷ ಉಡುಗೊರೆ ಕೊಟ್ಟ ರಾಜಸ್ಥಾನ್‌ ರಾಯಲ್ಸ್‌ – ಧನ್ಯವಾದ ಹೇಳಿದ ಸುದೀಪ್‌

    ಕಿಚ್ಚನಿಗೆ ವಿಶೇಷ ಉಡುಗೊರೆ ಕೊಟ್ಟ ರಾಜಸ್ಥಾನ್‌ ರಾಯಲ್ಸ್‌ – ಧನ್ಯವಾದ ಹೇಳಿದ ಸುದೀಪ್‌

    ಜೈಪುರ: ಸದ್ಯ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ರಾಜಸ್ಥಾನ್‌ ರಾಯಲ್ಸ್‌ ತಂಡವು ನಟ ಕಿಚ್ಚ ಸುದೀಪ್‌ ಅವರಿಗೆ ರಾಜಸ್ಥಾನ್‌ ತಂಡದ ಜೆರ್ಸಿಯನ್ನು (Rajasthan Royals Jersey) ಉಡುಗೊರೆಯಾಗಿ ಕಳುಹಿಸಿಕೊಟ್ಟಿದೆ.

    ಕಡುನೀಲಿ ಮತ್ತು ತಿಳಿಗೆಂಪು (ಪಿಂಕ್‌) ಮಿಶ್ರಿತ ಬಣ್ಣದ ಜೆರ್ಸಿ ಇದಾಗಿದೆ. ಜೆರ್ಸಿ ಹಿಂಭಾಗದಲ್ಲಿ ಸುದೀಪ್‌ (Kichcha Sudeepa) ಎಂದು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ. ಈ ಜೆರ್ಸಿ ಫೋಟೋವನ್ನು ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್‌ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ತುಂಬು ಹೃದಯದ ಧನ್ಯವಾದ ಹೇಳಿದ್ದಾರೆ.

    ರಾಜಸ್ಥಾನ್‌ನೊಂದಿಗೆ ಅವಿನಾಭಾವ ಸಂಬಂಧ:
    ಕ್ರಿಕೆಟ್‌ ಎಂದರೆ ಸುದೀಪ್‌ಗೆ ತುಂಬಾ ಅಚ್ಚುಮೆಚ್ಚು. ಬಾಲ್ಯದಿಂದಲೂ ಕ್ರಿಕೆಟ್‌ನ ಜೊತೆ ಉತ್ತಮ ನಂಟು ಹೊಂದಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ ಸುದೀಪ್‌, ಸಿಸಿಎಲ್, ಕೆಪಿಎಲ್ ಟೂರ್ನಿಗಳಲ್ಲಿ ಕರ್ನಾಟಕ ಬುಲ್ಡೋಜರ್ ತಂಡವನ್ನು ಮುನ್ನಡೆಸಿದ್ದಾರೆ. ಅಲ್ಲದೇ ರಾಜಸ್ಥಾನ್‌ ರಾಯಲ್ಸ್‌ ತಂಡದೊಂದಿಗೆ ಮೊದಲಿನಿಂದಲೂ ಸುದೀಪ್‌ ಅವಿನಾಭಾವ ಸಂಬಂಧ ಹೊಂದಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ತಂಡ ಈ ಹಿಂದೆಯೂ ಕಿಚ್ಚ ಸುದೀಪ್‌ ಅವರ 50ನೇ ವರ್ಷದ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ಶುಭ ಕೋರಿತ್ತು. ಸುದೀಪ್‌ ಅವರಿಗೆ ವಿಶೇಷ ಜೆರ್ಸಿಯೊಂದಿಗೆ ವಿಶ್‌ ಕಾರ್ಡ್‌ ಮಾಡಿ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿತ್ತು.

    ಬ್ಯಾಟ್‌ ಗಿಫ್ಸ್‌ ಕೊಟ್ಟಿದ್ದ ಜೋಸ್‌:
    2022ರ ಐಪಿಎಲ್‌ ಟೂರ್ನಿಯಲ್ಲಿ 863 ರನ್‌ ಬಾರಿಸುವ ಮೂಲಕ ಆವೃತ್ತಿಯ ಆರೆಂಜ್‌ ಕ್ಯಾಪ್‌ ವಿನ್ನರ್‌ ಆಗಿದ್ದ ಜೋಸ್‌ ಬಟ್ಲರ್‌, ನೆನಪಿನ ಕಾಣಿಕೆಯಾಗಿ ಸುದೀಪ್‌ಗೆ ರನ್‌ ಬಾರಿಸಿದ್ದ ಬ್ಯಾಟನ್ನೇ ಉಡುಗೊರೆಯಾಗಿ ಕೊಟ್ಟಿದ್ದರು. ಇದೀಗ ರಾಜಸ್ಥಾನ್‌ ರಾಯಲ್ಸ್‌ ತಂಡ ಮತ್ತೊಮ್ಮೆ ಜೆರ್ಸಿಯನ್ನು ಸುದೀಪ್‌ಗೆ ಉಡುಗೊರೆಯಾಗಿ ನೀಡಿದೆ.

    ಧನ್ಯವಾದ ಹೇಳಿದ ಸುದೀಪ್‌:
    ಜೆರ್ಸಿಯ ಚಿತ್ರಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್‌ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ತುಂಬು ಹೃದಯದ ಧನ್ಯವಾದ ಹೇಳಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಧನ್ಯವಾದಗಳು. ವರ್ಷ-ವರ್ಷವೂ ನಿಮ್ಮ ಪ್ರೀತಿ, ಬಾಂಧವ್ಯ ಹೆಚ್ಚಾಗುತ್ತಿದೆ. ತಂಡಗಳ ಅದ್ಭುತ ಪ್ರದರ್ಶನಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    ಅಗ್ರಸ್ಥಾನದಲ್ಲಿ ರಾಜಸ್ಥಾನ:
    2023ರ ಆವೃತ್ತಿಯಲ್ಲಿ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ 2024ರ ಆವೃತ್ತಿಯಲ್ಲಿ ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ. 10 ಪಂದ್ಯಗಳಲ್ಲಿ ಕೇವಲ 2ರಲ್ಲಿ ಸೋತಿರುವ ರಾಜಸ್ಥಾನ್‌ +0.622 ನೆಟ್‌ ರನ್‌ರೇಟ್‌ ಹಾಗೂ 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

  • Max: ಸಿನಿಮಾ ಸೆಟ್‌ನಲ್ಲಿ ಸುದೀಪ್‌ರನ್ನು ಭೇಟಿಯಾದ ಕಾರ್ತಿಕ್ ಮಹೇಶ್

    Max: ಸಿನಿಮಾ ಸೆಟ್‌ನಲ್ಲಿ ಸುದೀಪ್‌ರನ್ನು ಭೇಟಿಯಾದ ಕಾರ್ತಿಕ್ ಮಹೇಶ್

    ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ (Bigg Boss Kannada 10) ಕಾರ್ತಿಕ್ ಮಹೇಶ್ (Karthik Mahesh) ಇದೀಗ ಕಿಚ್ಚ ಸುದೀಪ್‌ರನ್ನು ಭೇಟಿಯಾಗಿದ್ದಾರೆ. ಚೆನ್ನೈನಲ್ಲಿ ನಡೆಯುತ್ತಿರುವ ಸುದೀಪ್ ನಟನೆಯ ‘ಮ್ಯಾಕ್ಸ್’ (Max Film) ಸಿನಿಮಾ ಸೆಟ್‌ಗೆ ಕಾರ್ತಿಕ್ ಆಗಮಿಸಿದ್ದು, ಕಿಚ್ಚನ ಜೊತೆಯಿರುವ ಫೋಟೋವನ್ನು ಕ್ಲಿಕ್ ಮಾಡಿದ್ದಾರೆ.

    ದೊಡ್ಮನೆ ಆಟ ಮುಗಿದ ಮೇಲೆ ಸುದೀಪ್‌ರನ್ನು ಕಾರ್ತಿಕ್ ಮಹೇಶ್ ಭೇಟಿಯಾಗಿರಲಿಲ್ಲ. ಬಹುದಿನಗಳ ನಂತರ ಚೆನ್ನೈ ಮಹಾಬಲಿಪುರಂನಲ್ಲಿ ಸುದೀಪ್‌ರನ್ನು ಭೇಟಿಯಾಗಿ ಕೆಲ ಕಾಲ ಸಮಯ ಕಳೆದಿದ್ದಾರೆ. ‘ಮ್ಯಾಕ್ಸಿಮಮ್ ಲವ್’ ಎಂದು ಅಡಿಬರಹ ನೀಡಿ ಕಿಚ್ಚನ ಜೊತೆಗಿನ ಫೋಟೋ ಶೇರ್ ಮಾಡಿ ಕಾರ್ತಿಕ್ ಮಹೇಶ್ ಸಂಭ್ರಮಿಸಿದ್ದಾರೆ.

     

    View this post on Instagram

     

    A post shared by Karthik Mahesh (@karthi_mahesh)


    ಕಣ್ಣಿಗೆ ಸ್ಟೈಲೀಶ್ ಸನ್‌ಗ್ಲಾಸ್ ತೊಟ್ಟು ಸುದೀಪ್ ಸಖತ್ ಸ್ಮಾರ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್ ಚಿತ್ರದ ಲುಕ್ ಲೀಕ್ ಆಗದೇ ಇರುವ ಹಾಗೇ ಎಚ್ಚರ ಕೂಡ ವಹಿಸಿದ್ದಾರೆ. ಇದನ್ನೂ ಓದಿ:ಚುನಾವಣೆ ಪ್ರಚಾರ ವೇಳೆ ‘ಡೆವಿಲ್’ ಡೈಲಾಗ್ ಹೊಡೆದ ದರ್ಶನ್

    ‘ವಿಕ್ರಾಂತ್‌ರೋಣ’ ಚಿತ್ರದ ನಂತರ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಈ ಸಿನಿಮಾಗೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  • ‘ಯುವ’ ಸಿನಿಮಾ ನೋಡಿ ಧನ್ಯವಾದ ತಿಳಿಸಿದ ಕಿಚ್ಚ ಸುದೀಪ್

    ‘ಯುವ’ ಸಿನಿಮಾ ನೋಡಿ ಧನ್ಯವಾದ ತಿಳಿಸಿದ ಕಿಚ್ಚ ಸುದೀಪ್

    ಕಿಚ್ಚ ಸುದೀಪ್ ‘ಯುವ’ (Yuva) ಸಿನಿಮಾವನ್ನು ನೋಡಿ ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ. ತಮಗಾಗಿ ಸ್ಪೆಷಲ್ ಶೋ ಆಯೋಜನೆ ಮಾಡಿದ್ದಕ್ಕೆ ಹೊಂಬಾಳೆ ಫಿಲ್ಮ್ಸ್ ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೇ, ಯುವರಾಜ್ ಕುಮಾರ್ ಅವರಿಗೆ ಉತ್ತಮ ಭವಿಷ್ಯವಿದೆ ಎಂದು ಹಾರೈಸಿದ್ದಾರೆ. ವಿಶೇಷ ಪ್ರದರ್ಶನವನ್ನು ಸುದೀಪ್ (Kichcha Sudeep) ಮನೆಯಲ್ಲೇ ಆಯೋಜನೆ ಮಾಡಲಾಗಿತ್ತು. ನಿರ್ದೇಶಕ ಸಂತೋಷ್ ಆನಂದ್ ರಾಮ್, ಯುವ (Yuvaraj Kumar) ಹಾಗೂ ಕಾರ್ತಿಕ್ ಸೇರಿದಂತೆ ಹಲವು ಭಾಗಿಯಾಗಿದ್ದರು.

    ಸಕ್ಸಸ್ ಸಂಭ್ರಮ

    ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತಹ ಕೆ.ಜಿ.ಎಫ್, ಕಾಂತಾರ, ರಾಜಕುಮಾರ ದಂತಹ ಯಶಸ್ವಿ ಚಿತ್ರಗಳ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಲಾಂಛದಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸಿರುವ, ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಯುವ ರಾಜಕುಮಾರ್ ನಾಯಕರಾಗಿ ನಟಿಸಿರುವ ಮೊದಲ ಚಿತ್ರ “ಯುವ” ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಮೂಲಕ ಹೊಂಬಾಳೆ ಫಿಲಂಸ್ ನ ಗೆಲುವಿನ ಓಟಕ್ಕೆ  ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ. ಈ ಯಶಸ್ಸಿನ ಸಂಭ್ರಮವನ್ನು ಸಂಭ್ರಮಿಸಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.

    ರಾಜ್ಯದ ಜನತೆ “ಯುವ” ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಚಿತ್ರ ಮೂರನೇ ವಾರಕ್ಕೆ ಕಾಲಿಟ್ಟಿದೆ. ಈಗಲೂ ಜನ ಕುಟುಂಬ ಸಮೇತ ಬಂದು ಸಿನಿಮಾ ನೋಡುತ್ತಿದ್ದಾರೆ. ಕನ್ನಡ ಕಲಾರಸಿಕರಿಗೆ, ಮಾಧ್ಯಮದವರಿಗೆ, ಹೊಂಬಾಳೆ ಫಿಲಂಸ್ ಸಂಸ್ಥೆಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಸಂತೋಷ್ ಆನಂದರಾಮ್.

    ಜನರು ನನ್ನ ಮೊದಲ ಚಿತ್ರಕ್ಕೆ ತೋರುತ್ತಿರುವ ಒಲವಿಗೆ ಮನ ತುಂಬಿ ಬಂದಿದೆ ಎಂದು ಮಾತನಾಡಿದ ನಾಯಕ ಯುವ ರಾಜಕುಮಾರ್, ಪ್ರಥಮವಾಗಿ ನಾನು ನನಗೆ ಅವಕಾಶ ನೀಡಿದ ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್ ಅವರಿಗೆ, ನಿರ್ದೇಶಕ ಸಂತೋಷ್ ಆನಂದರಾಮ್ ಅವರಿಗೆ ಕೃತಜ್ಞತೆ ತಿಳಿಸುತ್ತೇನೆ. ನನ್ನ ಸಹ ಕಲಾವಿದರ ಹಾಗೂ ತಂತ್ರಜ್ಞರ ಪ್ರೋತ್ಸಾಹವನ್ನು ಈ ಸಮಯದಲ್ಲಿ ನೆನೆಯುತ್ತೇನೆ. ಮೊದಲ ಚಿತ್ರದಲ್ಲಿ ನನ್ನಿಂದೇನಾದರೂ ಸಣ್ಣಪುಟ್ಟ ತಪ್ಪಾಗಿದ್ದರೆ ಮುಂದಿನ ಚಿತ್ರಗಳಲ್ಲಿ ಸರಿ ಪಡಿಸಿಕೊಳ್ಳುತ್ತೇನೆ. ಜನ ಫ್ಯಾಮಿಲಿ ಸಮೇತ ಬಂದು ಚಿತ್ರವನ್ನು ನೋಡುತ್ತಿರುವುದು ಬಹಳ ಖುಷಿಯಾಗಿದೆ. ಈ ಮೂಲಕ ರಾಜ್ಯದ ಜನತೆಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ ಎಂದರು.

    ನನ್ನ ಮಗನ ಮೊದಲ ಚಿತ್ರವನ್ನು  ನಿರ್ಮಾಣ ಮಾಡಿದ ಹೊಂಬಾಳೆ ಸಂಸ್ಥೆಗೆ ಮೊದಲು ಧನ್ಯವಾದ ಹೇಳುತ್ತೇನೆ. ನಂತರ ನನ್ನ ಮಗನ ಒಂದು ಬ್ರಾಂಡ್ ಗೆ ಸೀಮಿತ ಮಾಡದೆ ಎಲ್ಲಾ ರೀತಿಯ ನಟನೆಯನ್ನು ಅವನಿಂದ ಎಲ್ಲಾ ರೀತಿಯ ನಟನೆಯನ್ನು ಮಾಡಿಸಿರುವ ನಿರ್ದೇಶಕ ಸಂತೋಷ್ ಆನಂದರಾಮ್ ಅವರಿಗೂ ಧನ್ಯವಾದ ಹೇಳುತ್ತಾ, ಯುವನ ಸಿನಿಮಾ ಹಾದಿ ಈಗಷ್ಟೇ ಆರಂಭವಾಗಿದೆ. ‌ಮುಂದೆ ಬೇರೆಬೇರೆ ಪಾತ್ರಗಳಲ್ಲಿ ಅವನು ನಟಿಸಿ ಜನರಿಂದ ಸೈ ಎನಿಸಿಕೊಳ್ಳಬೇಕು ಎಂದು ರಾಘವೇಂದ್ರ ರಾಜಕುಮಾರ್ ತಿಳಿಸಿದರು.

    ಒಳ್ಳೆಯ ಪಾತ್ರ ನೀಡಿದ್ದಕ್ಕೆ ನಾಯಕಿ ಸಪ್ತಮಿ ಗೌಡ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ಹೇಳಿದರು ಚಿತ್ರದಲ್ಲಿ ಅಭಿನಯಿಸಿರುವ ಅಚ್ಯುತಕುಮಾರ್, ಸುಧಾರಾಣಿ, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ, ರಾಘು ಶಿವಮೊಗ್ಗ ಹಾಗೂ ಛಾಯಾಗ್ರಾಹಕ ಶ್ರೀಶ ಕುದುವಳ್ಳಿ “ಯುವ” ಚಿತ್ರದ ಗೆಲುವನ್ನು ‌ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.

  • ಅಂದು ಅಬ್ಬರ, ಇಂದು ಸ್ನೇಹ: ಶಿವಣ್ಣ ಜೊತೆಗಿನ ಪಯಣ ನೆನೆದ ಸುದೀಪ್

    ಅಂದು ಅಬ್ಬರ, ಇಂದು ಸ್ನೇಹ: ಶಿವಣ್ಣ ಜೊತೆಗಿನ ಪಯಣ ನೆನೆದ ಸುದೀಪ್

    ಶಿವಣ್ಣ (Shivaraj Kumar) ಹಾಗೂ ಸುದೀಪ್. ಇಬ್ಬರೂ ಈಗ ಆತ್ಮೀಯರು. ಅದಕ್ಕೆ ಸಾಕ್ಷಿಯಾಗಿ ವಿಲನ್ ಸಿನಿಮಾ ಮಾಡಿದರು. ಆದರೆ ಇದೇ ಜೋಡಿ ಅದೊಂದು ಕಾಲದಲ್ಲಿ ಹಲ್ಲಲ್ಲು ಕಡಿಯುತ್ತಿತ್ತು. ನಾನಾ ನೀನಾ ಎನ್ನುವಂತೆ ಮೈದಾನಕ್ಕೆ ಇಳಿದಿತ್ತು. ಇನ್ನೇನು ಇಬ್ಬರೂ ಯುದ್ಧಕ್ಕೆ ಇಳಿಯುತ್ತಾರೆ ಎನ್ನುವಷ್ಟರಲ್ಲಿ ಗೀತಕ್ಕ ಎಂಟ್ರಿಯಾದರು. ಶಿವಣ್ಣನ ಪತ್ನಿ ಗೀತಾ (Geetha Shivaraj Kumar) ಬಗ್ಗೆ ಸುದೀಪ್ ಅದ್ಯಾಕೆ ಅಷ್ಟು ಅಕ್ಕರೆ….ಗೌರವ ತೋರಿಸುತ್ತಾರೆ? ಶಿವಣ್ಣ ಹಾಗೂ ಸುದೀಪ್ ನಡುವಿನ ದ್ವೇಷಕ್ಕೆ ಗೀತಕ್ಕ ಪ್ರೀತಿ ಮುಲಾಮು ಹಚ್ಚಿದ್ದು ಹೇಗೆ? ಆ ಸ್ನೇಹದ ಕಡಲಿನಾಳದ ಕಥನ ನಿಮ್ಮ ಮುಂದೆ.

    ಶಿವಣ್ಣ ಹಾಗೂ ಸುದೀಪ್ (Kiccha Sudeep) ಇಬ್ಬರ ನಡುವಿನ ಅಂತರ ಕೇವಲ ಹತ್ತು ವರ್ಷ. ಅದಾಗಲೇ ಬೆಳೆದು ನಿಂತಿದ್ದ ಶಿವಣ್ಣ ಒಂದು ಕಡೆ, ಆಗಿನ್ನೂ ಬೆಳೆಯುತ್ತಿದ್ದ ಕಿಚ್ಚ ಇನ್ನೊಂದು ಕಡೆ. ಎಲ್ಲವೂ ಚೆನ್ನಾಗಿಯೇ ಇತ್ತು. ಕಿಚ್ಚನ ಶಾಂತಿ ನಿವಾಸ ಸಿನಿಮಾದಲ್ಲಿ ಶಿವಣ್ಣ ಹಾಡಿದರು. ಅವರಿಗಾಗಿ ಖುದ್ದು ಸುದೀಪ್ ಕಾಸ್ಟ್ಯೂಮ್ ಡಿಸೈನ್ ಮಾಡಿದರು. ಗೆಳೆತನ ಆಕಾಶದೆತ್ತರಕ್ಕೆ ಬೆಳೆಯುವ ಹಂತದಲ್ಲಿತ್ತು. ಆದರೆ ಅದೇ ಹೊತ್ತಿಗೆ ಹುಬ್ಬಳ್ಳಿ ಕ್ರಿಕೆಟ್ ಮೈದಾನದಲ್ಲಿ ನಡೆದ ಗಲಾಟೆ ಇಬ್ಬರ ನಡುವೆ ಕಿಡಿ ಹೊತ್ತಿಸಿತು. ರಾಘವೇಂದ್ರ ರಾಜ್‌ಕುಮಾರ್ ಸಮಾಧಾನ ಮಾಡಿದರು. ಶಿವಣ್ಣ ಹಾಗೂ ಸುದೀಪ್ ನಡುವೆ ಮೊದಲ ಬಿರುಕು ಬಿಟ್ಟಿದ್ದು ಆಗಲೇ.

    ಅಷ್ಟಕ್ಕೆ ಜಗಳ ನಿಲ್ಲಲಿಲ್ಲ. ಡಬ್ಬಿಂಗ್ ವಿವಾದದ ಸಮಯದಲ್ಲೂ ಇಬ್ಬರೂ ಒಂದೊಂದು ದಿಕ್ಕಿಗೆ ನಿಂತರು. ಸುದೀಪ್ ಹೇಳಿದ ಮಾತಿಗೆ, ಶಿವಣ್ಣ ಕೌಂಟರ್ ಕೊಟ್ಟರು. ಅದು ಕಿಚ್ಚನನ್ನು ಇನ್ನಷ್ಟು ಕೆರಳಿಸಿತು. ಬಿರುಕು ದೊಡ್ಡದಾಯಿತು. ನಾನಾ ನೀನಾ ಎನ್ನುವ ಮಟ್ಟಕ್ಕೆ ಬಂದು ನಿಂತರು. ಅದನ್ನು ಇಬ್ಬರೂ ಬಾಯಿ ಬಿಟ್ಟು ಹೇಳಲಿಲ್ಲ. ಆದರೆ ಒಳಗೊಳಗೆ ಹೊಗೆ ಆಡುವುದು ನಿಲ್ಲಲಿಲ್ಲ. ಆ ಕ್ಷಣವೇ ನೋಡಿ ದೊಡ್ಮನೆ ದೊಡ್ಡ ಸೊಸೆ ಹಾಜರಾದರು. ಗೀತಾ ಹಾಗೂ ಸುದೀಪ್…ಇಬ್ಬರದ್ದೂ ಶಿವಮೊಗ್ಗ. ಬಹುಶಃ ಹುಟ್ಟಿದ ಮಣ್ಣಿನ ಮೋಹ ಇವರನ್ನು ಅಕ್ಕ ತಮ್ಮನನ್ನಾಗಿಸಿತು. ಮುಂದಾಗಿದ್ದು ತಿಕ್ಕಿ ಒರೆಸಿದರೂ ಅಳಿಸಲಾಗದ ಇತಿಹಾಸ. ಅದಕ್ಕೇ ಕಿಚ್ಚ ಹೇಳಿದ್ದಾರೆ. `ಗೀತಕ್ಕ ಇರದಿದ್ದರೆ…ಏನಾಗುತ್ತಿತ್ತೋ..?’ ಅದು ಸತ್ಯ.

    ಶಿವಣ್ಣ ಹಾಗೂ ಸುದೀಪ್ ನಡುವೆ ಅಣ್ಣ ತಮ್ಮನ ಸಂಬಂಧ ಮೂಡಿಸಲು ಕಾರಣವಾಗಿದ್ದೇ ಗೀತಾ. ಅದುವರೆಗೆ ಇಬ್ಬರೂ ಹತ್ತಿರ ಬಂದಿರಲಿಲ್ಲ. ಬರೀ ದೂರದಿಂದಲೇ ಕಣ್ಣಿನ ಅಳತೆಯಲ್ಲೇ ಸಿಕ್ಕಿದ್ದರು. ಅದರಲ್ಲೇ ಮಾತಾಡಿದ್ದರು. ಅಕ್ಕ ಪಕ್ಕ ಕುಳಿತುಕೊಂಡರೂ ಅಂತರ ಇದ್ದೇ ಇತ್ತು. ಯಾವಾಗ ಗೀತಾ ಇವರಿಬ್ಬರನ್ನೂ ಒಂದೇ ಟೇಬಲ್ ಮುಂದೆ ಕೂಡಿಸಿ ಕೈಯಾರೆ ಅಕ್ಕಿ ರೊಟ್ಟಿ, ಕಾಯಿ ಚಟ್ನಿ ಬಡಿಸಿದರೋ ಮೊದಲ ಬಾರಿ ಸುದೀಪ್ ಕಣ್ಣಲ್ಲಿ ಶಿವಣ್ಣ ಆಕಾಶದೆತ್ತರಕ್ಕೆ ಬೆಳೆದಿರುವುದು ಕಾಣಿಸಿತು. ಆ ಸಜ್ಜನಿಕೆ, ಸಹನೆ, ಅಕ್ಕರೆ, ಪ್ರೀತಿ, ಎಲ್ಲವನ್ನೂ ಎದೆಯಾಳದಿಂದ ತಿನ್ನಿಸಿದರು ಶಿವಣ್ಣ. ಕಿಚ್ಚನ ಕಣ್ಣಿನಲ್ಲಿ ಬಿದ್ದಿದ್ದ ಧೂಳನ್ನು ಒರೆಸಲಿಲ್ಲ, ಬಿಸಿ ನೀರಿನಲ್ಲಿ ತೊಳೆದು ಬಿಟ್ಟರು. ಸ್ನೇಹ ಕೇಕೆ ಹಾಕಿತು.

     

    ಬಣ್ಣದ ಲೋಕದಲ್ಲಿ ಎಲ್ಲರೂ ದೂರದಿಂದಲೇ ಇನ್ನೊಬ್ಬರನ್ನು ಅಳೆಯುತ್ತಾರೆ. ಅಥವಾ ಯಾರೋ ಹೇಳಿದ ಮಾತನ್ನು ಕೇಳಿ ಒಬ್ಬೊಬ್ಬರ ಬಗ್ಗೆ ಅಭಿಪ್ರಾಯ ರೂಪಿಸಿಕೊಳ್ಳುತ್ತಾರೆ. ಸುದೀಪ್ ಕೂಡ ಅದನ್ನೇ ಮಾಡಿದ್ದರು. ಆದರೆ ದೇವರು ದೊಡ್ಡವನು ಗೀತಕ್ಕ ಅದೆಲ್ಲ ಹಳವಂಡ ದೂರ ಮಾಡಿದರು. ಅದೇ ಕಾರಣಕ್ಕಾಗಿ ವಿಲನ್ ಸಿನಿಮಾದಲ್ಲಿ ಈ ಜೋಡಿ ಅಬ್ಬರಿಸಲು ಸಾಧ್ಯವಾಯಿತು. ಈಗ ಸುದೀಪ್ ಹಾಗೂ ಶಿವಣ್ಣ ಬರೀ ಸ್ನೇಹಿತರಾಗಿ ಉಳಿದಿಲ್ಲ. ರಕ್ತ ಸಂಬಂಧ ಮೀರಿದ ಸಿಂಹಾಸನದಲ್ಲಿ ಹೆಗಲ ಮೇಲೆ ಕೈ ಹಾಕಿ ವಿರಾಜಮಾನರಾಗಿದ್ದಾರೆ. ಹಳೆ ಮುಳ್ಳನ್ನು ಮುರಿದು ಹಾಕಿ ಹೊಸ ಅರಮನೆಯಲ್ಲಿ ಮೆರವಣಿಗೆ ಹೊರಟಿದ್ದಾರೆ. ಪ್ರೀತಿ ಇಲ್ಲದೆ ಹೂವು ಅರಳಿತೂ ಹೇಗೆ ? ಅಲ್ಲವೆ?

  • ‘ಕರಟಕ ದಮನಕ’ ಚಿತ್ರದ ಕ್ಯಾರೆಕ್ಟರ್ ಟೀಸರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

    ‘ಕರಟಕ ದಮನಕ’ ಚಿತ್ರದ ಕ್ಯಾರೆಕ್ಟರ್ ಟೀಸರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

    ರಾಕ್ ಲೈನ್ ವೆಂಕಟೇಶ್ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivraaj Kumar), ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ನಾಯಕರಾಗಿ ನಟಿಸಿರುವ ‘ಕರಟಕ ದಮನಕ’ (Karataka Damanaka)  ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಈ ಚಿತ್ರದ  ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಸದ್ಯದಲ್ಲೇ ಟ್ರೇಲರ್ ಬರಲಿದ್ದು, ಮಾರ್ಚ್ 8 ಮಹಾ ಶಿವರಾತ್ರಿ ಶುಭದಿನದಂದು ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

    ಮೊನ್ನೆಯಷ್ಟೇ ಈ  ಚಿತ್ರದ ಎರಡನೇ ಗೀತೆ ಡೀಗ ಡಿಗರಿ ಅಬುದಾಬಿಯಲ್ಲಿ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಅವರು ಬರೆದಿರುವ ಈ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಅಬುದಾಬಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಈ ಹಾಡು ಬಿಡುಗಡೆಯಾಗಿದೆ.

    ಕರಟಕ ದಮನಕ ಎಂದರೆ ಎರಡು ಕುತಂತ್ರಿ ನರಿಗಳ ಹೆಸರು. ಸಾಮಾನ್ಯವಾಗಿ ಯಾವಾಗಲೂ ಒಟ್ಟಿಗೆ ಇಬ್ಬರನ್ನು ಹೆಚ್ಚು ಸಲ ನೋಡಿದಾಗ ಅವರನ್ನು ಕರಟಕ ದಮನಕ ಎನ್ನುತ್ತಾರೆ. ಅಬುದಾಬಿಯಲ್ಲಿ ನಮ್ಮ ಚಿತ್ರಕ್ಕಾಗಿ ನಾನೇ ಬರೆದಿರುವ ಎರಡನೇ ಹಾಡು   ಡೀಗ ಡಿಗರಿ ಬಿಡುಗಡೆಯಾಗಿದೆ. ವಿ.ಹರಿಕೃಷ್ಣ ಸಂಗೀತ ನೀಡಿರುವ ಈ ಹಾಡನ್ನು ಉಪೇಂದ್ರ ಹಾಗೂ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ಇದು  ಉತ್ತರ ಕರ್ನಾಟಕದಲ್ಲಿ ನಡೆಯುವ ಕಥೆ. ಈ ಚಿತ್ರ ನೋಡಿದ ಪ್ರತಿಯೊಬ್ಬ ವ್ಯಕ್ತಿಗೂ ಅವನ ಊರು, ಆ ಊರಿನಲ್ಲಿ ಎಳೆದ ತೇರು ಹಾಗೂ ಅವನು ಯಾವ ನೀರು ಕುಡಿದು ಬೆಳೆದಿದ್ದಾನೋ ಆ ನೀರು ನೆನಪಾಗುತ್ತದೆ ಎಂದಿದ್ದಾರೆ ನಿರ್ದೇಶಕ ಯೋಗರಾಜ್ ಭಟ್.

     

    ಎಲ್ಲರಿಗೂ ಒಂದು ಊರು ಇರುತ್ತದೆ. ಆ ಊರನ್ನು ಬಿಟ್ಟು ಬಂದ ಮೇಲೆ ಪುನಃ ಹೋದಾಗ ಅಲ್ಲಿ ಸಾಕಷ್ಟು ಬದಲಾವಣೆ ಆಗಿರುತ್ತದೆ. ಆ ವಿಷಯ ಇಟ್ಟುಕೊಂಡು ಸಾಕಷ್ಟು ಮನೋರಂಜನೆಯ ಅಂಶಗಳೊಂದಿಗೆ ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ಇನ್ನು  ಪ್ರಭುದೇವ ಅವರ ಜೊತೆ ಮೊದಲ ಬಾರಿ ನಟಿಸಿರುವುದು ಖುಷಿಯಾಗಿದೆ ಎನ್ನುವುದು ಶಿವರಾಜಕುಮಾರ್ ಮಾತು.

  • ಸಂದರ್ಶನದಲ್ಲಿ ಇದ್ದ ವಾಯ್ಸ್ ಈಗೇಕೆ ಇಲ್ಲ- ರಕ್ಷಕ್‌ಗೆ ಸುದೀಪ್ ಪ್ರಶ್ನೆ

    ಸಂದರ್ಶನದಲ್ಲಿ ಇದ್ದ ವಾಯ್ಸ್ ಈಗೇಕೆ ಇಲ್ಲ- ರಕ್ಷಕ್‌ಗೆ ಸುದೀಪ್ ಪ್ರಶ್ನೆ

    ಬಿಗ್ ಬಾಸ್ ಕನ್ನಡ 10 (Bigg Boss Kannada 10) ಫಿನಾಲೆಗೆ ಇಂದು (ಜ.27) ಅದ್ಧೂರಿಯಾಗಿ ಓಪನಿಂಗ್ ಪಡೆದಿದೆ. 6 ಫೈನಲಿಸ್ಟ್‌ಗಳ ಜೊತೆ ಎಲಿಮಿನೇಟ್ ಆಗಿರೋ ಸ್ಪರ್ಧಿಗಳು ಕೂಡ ಆಗಮಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದಾರೆ. ಈ ವೇಳೆ, ಸಂದರ್ಶನದಲ್ಲಿ ಇದ್ದ ವಾಯ್ಸ್ ಈಗೇಕೆ ಇಲ್ಲ ಎಂದು ರಕ್ಷಕ್‌ಗೆ (Rakshak Bullet) ಸುದೀಪ್ (Sudeep) ಪ್ರಶ್ನೆ ಮಾಡಿದ್ದಾರೆ.

    ಸುದೀಪ್ (Sudeep) ವೇದಿಕೆಗೆ ಬರುತ್ತಿದ್ದಂತೆ ಎಲ್ಲ ಹಳೆಯ ಸ್ಪರ್ಧಿಗಳನ್ನು ಮಾತನಾಡಿಸುತ್ತಾ ಹೇಗಿದ್ದೀರಿ? ಎಂದು ಕೇಳಿದರು. ರಕ್ಷಕ್ ಬಳಿ ಬರುತ್ತಿದ್ದಂತೆ, ಮೊದಲಿಗೆ ನಿಮ್ಮ ಕ್ಷಮೆ ಕೇಳಬೇಕು ನಾನು ಎಂದರು ರಕ್ಷಕ್. ಅದೆಲ್ಲ ಇರಲಿ ಪರವಾಗಿಲ್ಲ, ಸಂದರ್ಶನದಲ್ಲಿ ಇದ್ದ ವಾಯ್ಸ್ ಈಗೇಕೆ ಇಲ್ಲ ಎಂದು ಸುದೀಪ್‌ ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ:Bigg Boss: ವರ್ತೂರು ಜೈಲಿಗೆ ಹೋಗಿದ್ದ ಸಂಗತಿ ಬಿಚ್ಚಿಟ್ಟ ಕಿಚ್ಚ- ಸಂತೋಷ್ ತಾಯಿ ಕಣ್ಣೀರು

    ನೀವು ಎದುರಿಗೆ ಇದ್ದೀರಲ್ಲ, ಅದಕ್ಕೆ ಗೌರವ ತುಸು ಹೆಚ್ಚು ಎಂದು ರಕ್ಷಕ್‌ ಮಾತನಾಡಿದ್ದರು. ಇರಲಿ, ನಿಮಗೆ ಯಾರ ಬಗ್ಗೆಯಾದರೂ ಮಾತನಾಡುವ ಅಧಿಕಾರ ಇದೆ. ಮಾತನಾಡಿ, ಸಮಸ್ಯೆಯಿಲ್ಲ. ಕ್ಷಮೆ ಎಲ್ಲ ಕೇಳಬೇಡಿ ಎಂದು ಕಿಚ್ಚ ಸುದೀಪ್‌ ಪ್ರತಿಕ್ರಿಯೆ ನೀಡಿದ್ದರು. ಅದಕ್ಕೆ ರಕ್ಷಕ್, ಇಲ್ಲ ಅಣ್ಣ, ನನ್ನ ಉದ್ದೇಶ ಅದಾಗಿರಲಿಲ್ಲ ಎಂದು ಸ್ಪಷ್ಟನೆ ಕೊಡಲು ಪ್ರಯತ್ನಿಸಿದರು. ಆದರೆ ಸುದೀಪ್, ಪರವಾಗಿಲ್ಲ ಬಿಡಿ, ನಿಮ್ಮ ಜೀವನದಲ್ಲಿ ನಿಮಗೆ ಒಳ್ಳೆಯದಾಗಲಿ ಎಂದು ಮುಂದುವರೆದರು. ಇದನ್ನೂ ಓದಿ:Bigg Boss: ದೊಡ್ಮನೆಯಿಂದ ತುಕಾಲಿ ಸಂತು ಎಲಿಮಿನೇಟ್?

    ‘ಬಿಗ್ ಬಾಸ್ ಸೀಸನ್ 10’ರಲ್ಲಿ 3ನೇ ವಾರವೇ ರಕ್ಷಕ್ ಬುಲೆಟ್ (Rakshak Bullet) ಎಲಿಮಿನೇಟ್ ಆಗಿ ಹೊರಬಂದಿದ್ದರು. ಎಲಿಮಿನೇಷನ್ ನಂತರ ಶೋ ಕುರಿತು ಹಲವು ವಿಚಾರಗಳನ್ನು ರಕ್ಷಕ್ ಮಾತನಾಡಿದ್ದರು. ಸುದೀಪ್, ಬಿಗ್ ಬಾಸ್ ಶೋ ಕುರಿತು ರಕ್ಷಕ್ ಮಾತನಾಡಿದ್ದ ಮಾತುಗಳು ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು. ಹಾಗಾಗಿಯೇ ಇದೀಗ ಫಿನಾಲೆಯಲ್ಲಿ ರಕ್ಷಕ್‌ಗೆ ಸುದೀಪ್ ಪ್ರಶ್ನೆ ಮಾಡಿದ್ದಾರೆ. ನೇರವಾಗಿ ಹೇಳದೇ ಇದ್ದರೂ ಪರೋಕ್ಷವಾಗಿ ರಕ್ಷಕ್‌ಗೆ ಸುದೀಪ್ ಕಿವಿಹಿಂಡಿದ್ದಾರೆ.

  • ವಿನಯ್ ಟೀಮ್‌ನಿಂದ ಮತ್ತೊಂದು ವಿಕೆಟ್ ಪತನ – ದೊಡ್ಮನೆಯಿಂದ ಮೈಕಲ್ ಎಲಿಮಿನೇಟ್

    ವಿನಯ್ ಟೀಮ್‌ನಿಂದ ಮತ್ತೊಂದು ವಿಕೆಟ್ ಪತನ – ದೊಡ್ಮನೆಯಿಂದ ಮೈಕಲ್ ಎಲಿಮಿನೇಟ್

    ಬಿಗ್ ಬಾಸ್ (Bigg Boss) ಮನೆಯಲ್ಲಿ ಕಳೆದ ವಾರ ಸಿರಿ ಎಲಿಮಿನೇಟ್ ಆಗಿದ್ದರು. ಈ ವಾರ ವಿನಯ್ ಟೀಮ್‌ನ ಮತ್ತೊಂದು ವಿಕೆಟ್ ಪತನವಾಗಿದೆ. ಬಿಗ್ ಬಾಸ್ ಮನೆಯಿಂದ ಮೈಕಲ್ ಅಜಯ್ (Michael) ಔಟ್ ಆಗಿದ್ದಾರೆ.

    ಮಾಡೆಲ್ ಆಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೈಕಲ್, ಇಲ್ಲಿಗೆ ಬಂದ ಮೇಲೆ ಕನ್ನಡ ಕಲಿತು ಜನಮನ ಗೆದ್ದರು. ಕನ್ನಡ ಮಣ್ಣಿನ ಮಗನಾಗಿ ಗುರುತಿಸಿಕೊಂಡರು. ಸಾಕಷ್ಟು ಬಾರಿ ಬಿಗ್ ಬಾಸ್ ಶೋ ಬಂದಿದ್ದಕ್ಕೆ ಕನ್ನಡ ಕಲಿತೆ ಎಂದು ಅಭಿಮಾನದಿಂದ ಮೈಕಲ್ ಮಾತನಾಡಿದ್ದರು. ಇಶಾನಿ ಜೊತೆಗಿನ ಲವ್ವಿ-ಡವ್ವಿ ವಿಚಾರವಾಗಿ ಮೈಕಲ್ ಸಖತ್ ಹೈಲೆಟ್ ಆಗಿದ್ದರು. ಇದನ್ನೂ ಓದಿ: ಈ ವಾರ ‘ಬಿಗ್ ಬಾಸ್’ ಮನೆಯಿಂದ ಹೊರ ಬರೋದು ಯಾರು?

    ಬಿಗ್ ಬಾಸ್‌ಗೆ ಕಾಲಿಟ್ಟ 6 ವಾರಗಳ ಕಾಲ ಸಖತ್ ಆಗಿ ಮೈಕಲ್ ಆಟವಾಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮೈಕಲ್ ಮನೆಯಲ್ಲಿ ರಾಂಗ್ ಆಗಿ ವರ್ತಿಸುತ್ತಿದ್ದರು. ಬಿಗ್ ಬಾಸ್ ಆದೇಶಕ್ಕೆ ಮತ್ತು ಕ್ಯಾಪ್ಟನ್ ಸ್ಥಾನಕ್ಕೆ ಗೌರವ ಕೊಡದೇ ವರ್ತಿಸಿದ್ದರು. ಇದಕ್ಕೆ ಶನಿವಾರ ಎಪಿಸೋಡ್‌ನಲ್ಲಿ ಸುದೀಪ್ ಬೆಂಡೆತ್ತಿದ್ದರು.

    ನನಗೆ ರೂಲ್ಸ್ ಫಾಲೋ ಮಾಡೋಕೆ ಆಗಲ್ಲ ಎಂದು ಅಹಂನಿಂದ ಹೇಳಿದ್ದ ಮೈಕಲ್ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿ ಇಂದು ಮನೆಗೆ ಕಳುಹಿಸಿದ್ದಾರೆ. ಮೈಕಲ್ ಎಲಿಮಿನೇಷನ್ ಸಹಜವಾಗಿ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡ ಡ್ರೋನ್: ನಿಟ್ಟುಸಿರಿಟ್ಟ ಫ್ಯಾನ್

  • ಸಲ್ಮಾನ್ ಖಾನ್ ಹುಟ್ಟು ಹಬ್ಬಕ್ಕೆ ವಿಶ್ ಮಾಡಿದ ಸುದೀಪ್

    ಸಲ್ಮಾನ್ ಖಾನ್ ಹುಟ್ಟು ಹಬ್ಬಕ್ಕೆ ವಿಶ್ ಮಾಡಿದ ಸುದೀಪ್

    ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಇಂದು ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಸಲ್ಮಾನ್ ಹುಟ್ಟು ಹಬ್ಬಕ್ಕೆ ಕಿಚ್ಚ ಸುದೀಪ್ (Kiccha Sudeep) ಶುಭಾಶಯ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಅವರು ಬರೆದುಕೊಂಡಿದ್ದು, ನಿಮ್ಮೊಂದಿಗೆ ಕಳೆದ ಕ್ಷಣಗಳು ಯಾವತ್ತಿಗೂ ಹಸಿರಾಗಿರುತ್ತವೆ. ನಿಮ್ಮಂತಹ ಅದ್ಭುತ ಮನುಷ್ಯ ನನಗೆ ಸಿಕ್ಕಿದ್ದಕ್ಕೆ ಧನ್ಯವಾದಗಳು’ ಎಂದು ಅವರು ಹೇಳಿದ್ದಾರೆ.

    ಕೆಲ ತಿಂಗಳ ಹಿಂದೆಯಷ್ಟೇ ಕಿಚ್ಚ ಸುದೀಪ್ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ನಿರ್ದೇಶನದ ಬಗ್ಗೆ ಬ್ರೇಕಿಂಗ್ ಅಪ್‌ಡೇಟ್‌ವೊಂದನ್ನ ನೀಡಿದ್ದರು. ಬ್ಯಾಡ್ ಬ್ಯಾಯ್ ಸಲ್ಮಾನ್ ಖಾನ್‌ ಗಾಗಿ ಚಿತ್ರವೊಂದನ್ನು ನಿರ್ದೇಶನ ಮಾಡುವುದಾಗಿ ಹೇಳಿದ್ದರು.

    ಸಲ್ಲುಗಾಗಿಯೇ ಕಿಚ್ಚ ಭಿನ್ನ ಕಥೆ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಸಲ್ಮಾನ್ ಖಾನ್‌ಗೆ ಕಥೆ ಹೇಳಿ, ಸಿನಿಮಾ ಮಾಡುವುದಾಗಿ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ. ಈ ಮೂಲಕ ತಾವು ಮತ್ತೆ ನಿರ್ದೇಶನದ ಕ್ಯಾಪ್ ಧರಿಸುವ ಸೂಚನೆ ನೀಡಿದ್ದಾರೆ. ಇನ್ನು ವಿಕ್ರಾಂತ್ ರೋಣ ಚಿತ್ರದ ಹಿಂದಿ ವರ್ಷನ್ ಅನ್ನು ಸಲ್ಮಾನ್ ಖಾನ್ ಫಿಲ್ಮ್ಂ ಪ್ರೇಸೆಂಟ್ ಮಾಡಿದೆ. ಈ ಮೂಲಕ ಸುದೀಪ್ ಸಲ್ಮಾನ್ ಸಾಥ್ ನೀಡಿದ್ದಾರೆ.

     

    ಸಲ್ಮಾನ್ ಖಾನ್ ಮತ್ತು ಸುದೀಪ್ ಈಗಾಗಲೇ ಒಟ್ಟಿಗೆ ನಟಿಸಿದ್ದಾರೆ. ತೆರೆಮರೆಯಲ್ಲಿ ಕೂಡ ಒಳ್ಳೆಯ ಬಾಂಧವ್ಯವಿದೆ. ಈ ಸ್ನೇಹಕ್ಕೆ ಸಾಕ್ಷಿಯಾಗಿ ಕಿಚ್ಚನ ಸಿನಿಮಾಗೆ ಸಲ್ಲು ಸಾಥ್ ನೀಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ನೋಡುವುದು ಪಕ್ಕಾ ಎನ್ನಲಾಗುತ್ತಿದೆ.

  • ವಿಷ್ಣುವರ್ಧನ್ ಪುಣ್ಯಭೂಮಿ ಉಳಿವಿನ ಹೋರಾಟಕ್ಕೆ ಕಿಚ್ಚನ ಬೆಂಬಲ

    ವಿಷ್ಣುವರ್ಧನ್ ಪುಣ್ಯಭೂಮಿ ಉಳಿವಿನ ಹೋರಾಟಕ್ಕೆ ಕಿಚ್ಚನ ಬೆಂಬಲ

    ನ್ನಡ ಸಿನಿಮಾ ರಂಗದ ಹೆಸರಾಂತ ನಟ ವಿಷ್ಣುವರ್ಧನ್ (Vishnuvardhan) ಅವರ ಸಮಾಧಿ ಜಾಗವನ್ನುಉಳಿಸಿಕೊಳ್ಳುವ ನಿಟ್ಟಿನಲ್ಲಿ ಡಾ.ವಿಷ್ಣು ಸೇನಾ ಸಮಿತಿಯು ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಡಿ.17ರಂದು ಬೃಹತ್ ಹೋರಾಟವನ್ನು ಹಮ್ಮಿಕೊಂಡಿದೆ. ರಾಜ್ಯದ ಮೂಲೆ ಮೂಲೆಗಳಿಂದ ಅಂದು ಡಾ.ವಿಷ್ಣು ಸೇನಾ ಸಮಿತಿಯ ಸದಸ್ಯರು ಮತ್ತು ವಿಷ್ಣುವರ್ಧನ್ ಅವರ ಅಭಿಮಾನಿಗಳು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.

    ಈ ಹೋರಾಟಕ್ಕೆ ಈಗಾಗಲೇ ಬಹುತೇಕ ಕನ್ನಡಪರ ಸಂಘಟನೆ ಬೆಂಬಲ ಸೂಚಿಸಿವೆ. ಜೊತೆಗೆ ನಾನಾ ಸಂಘಟನೆಗಳು ಕೈ ಜೋಡಿಸಿವೆ. ಇದೀಗ ಕಿಚ್ಚ ಸುದೀಪ್ ಕೂಡ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ವಿಷ್ಣುಸೇನಾ ಸಮಿತಿ ವೀರಕಪುತ್ರ ಶ್ರೀನಿವಾಸ್ (Veerakaputra Srinivas)  ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಹೋರಾಟಕ್ಕೆ ಕಿಚ್ಚ (Kiccha Sudeep) ಬೆಂಬಲ ನೀಡಿರುವುದಾಗಿ ತಿಳಿಸಿದ್ದಾರೆ.

    ಪುಣ್ಯಭೂಮಿ ಉಳಿಸಿಕೊಳ್ಳಲು ಏನೆಲ್ಲಾ ಮಾಡಬಹುದೋ ಅದೆಲ್ಲವನ್ನೂ ಮಾಡುವೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ಮುನ್ನೆಡೆಯಿರಿ ಎಂದು ಸುದೀಪ್ ಹೇಳಿರುವುದಾಗಿ ವೀರಕಪುತ್ರ ಶ್ರೀನಿವಾಸ್ ಬರೆದುಕೊಂಡಿದ್ದಾರೆ. ನಮ್ಮ ಬೇಡಿಕೆ ನ್ಯಾಯವಿದ್ದಾಗ ಜಗವೂ ನ್ಯಾಯದ ಪರವೇ ನಿಲ್ಲುತ್ತದೆ ಎನ್ನುವ ಆತ್ಮವಿಶ್ವಾಸದ ಪದಗಳನ್ನು ಅವರು ಬರೆದುಕೊಂಡಿದ್ದಾರೆ.

     

    ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡುವ ಹುನ್ನಾರ ನಡೆದಿದೆ ಎಂದು ವಿಷ್ಣು ಸೇನಾ ಸಮಿತಿ ಆರೋಪಿಸಿದೆ. ಇದರ ವಿರುದ್ಧವೇ ಅವರು ಪ್ರತಿಭಟನೆಗೆ ಮುಂದಾಗಿದ್ದಾರೆ. ರವಿವಾರದಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನೂ ಹಮ್ಮಿಕೊಂಡಿದ್ದಾರೆ. ಈ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹೋರಾಟಕ್ಕೆ ಕಿಚ್ಚನ ಬೆಂಬಲ ಆನೆ ಬಲ ಬಂದಂತಾಗಿದೆ.