Tag: ಕಿಚ್ಚ ಸುದೀಪ್

  • ಸ್ನೇಹ ಬೇರೆ, ನ್ಯಾಯ ಬೇರೆ, ಸಂಬಂಧನೇ ಬೇರೆ – ಕಿಚ್ಚ ಸುದೀಪ್‌

    ಸ್ನೇಹ ಬೇರೆ, ನ್ಯಾಯ ಬೇರೆ, ಸಂಬಂಧನೇ ಬೇರೆ – ಕಿಚ್ಚ ಸುದೀಪ್‌

    – ನನ್ನ ಕಣ್ಣಮುಂದೆ ರೇಣುಕಾಸ್ವಾಮಿ ಫ್ಯಾಮಿಲಿನೇ ಬರುತ್ತೆ

    ಬೆಂಗಳೂರು: ರೇಣುಕಾಸ್ವಾಮಿ (Renukaswamy) ಹತ್ಯೆ ಪ್ರಕರಣದಲ್ಲಿ ದರ್ಶನ್‌ ಬಂಧನದ ಕುರಿತು ಮಾತನಾಡಿರುವ ನಟ ಕಿಚ್ಚ ಸುದೀಪ್‌ (Kichcha Sudeep), ಫ್ರೆಂಡ್‌ಶಿಪ್‌ ಬೇರೆ, ನ್ಯಾಯ ಬೇರೆ, ಸಂಬಂಧ ಬೇರೆ, ನಾನು ಯಾರ ಬಗ್ಗೆಯೂ ಮಾತಾಡಿದವನಲ್ಲ. ಚಿತ್ರರಂಗ ಅಂತ ಬಂದಿದ್ದಕ್ಕೆ ಮಾತಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ಈ ಹಿಂದೆ ದರ್ಶನ್‌ (Actor Darshan) ಅವರ ಮೇಲೆ ಚಪ್ಪಲಿ ಎಸೆದು ಹಲ್ಲೆಗೆ ಮುಂದಾಗಿದ್ದಾ, ಅವರ ಬೆನ್ನಿಗೆ ನಿಂತಿದ್ರಿ. ಈಗ ಸ್ನೇಹಿತರಾಗಿ ದರ್ಶನ್‌ ಬಗ್ಗೆ ಏನ್‌ ಹೇಳ್ತೀರಿ? ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಸುದೀಪ್‌, ಏನೂ ನೋವು ಬಂದಿರುತ್ತೆ ಅಂತ ಆಸ್ಪತ್ರೆಗೆ ಹೋಗ್ತೀವಿ. ಆದ್ರೆ ಅಲ್ಲಿಗೆ ಹೋದಾಗ ಬೇಡಿಕೊಳ್ಳೋದು ಅದು ಆಗದೇ ಇರಲಿ ಅಂತ. ರಿಪೋರ್ಟ್‌ನಲ್ಲಿ ಏನೂ ಆಗಿಲ್ಲ ಅಂತ ಬಂದಾಗ ಖುಷಿಯಾಗಿ ಮನೆಗೆ ಹೋಗ್ತೀವಿ. ಆಗಿದೆ ಅಂತ ಬಂದಾಗ ಟ್ರೀಟ್ಮೆಂಟ್‌ ತಗೋಬೇಕು. ನಾನು ಈಗ ಆ ಹಂತದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

    ಸ್ನೇಹ ಬೇರೆ, ನ್ಯಾಯ ಬೇರೆ, ಸಂಬಂಧ ಬೇರೆ, ನಾನು ಯಾರ ಬಗ್ಗೆಯೂ ಮಾತಾಡಿದವನಲ್ಲ. ನನಗೆ ಬೇಕಾಗಿಯೂ ಇಲ್ಲ, ಚಿತ್ರರಂಗ ಅಂತ ಬಂದಿದ್ದಕ್ಕೆ ಮಾತಾಡುತ್ತಿದ್ದೇನೆ. ನಾನು ಚಿತ್ರರಂಗಕ್ಕೆ ಸೇರಿದವನು ಅದಕ್ಕೆ. ಇಲ್ಲಿ ಕೂತು ಜಡ್ಜ್‌ ಮಾಡಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪವಿತ್ರಾಗೌಡ ಮನೆಯಲ್ಲಿ ಸ್ಥಳ ಮಹಜರು – ಮನೆಯ ಮೂಲೆಮೂಲೆಯನ್ನೂ ಜಾಲಾಡಿದ ಅಧಿಕಾರಿಗಳು

    ಇವತ್ತು ನನ್ನ ಕಣ್ಮುಂದೆ ರೇಣುಕಾಸ್ವಾಮಿ ಫ್ಯಾಮಿಲಿನೇ ಬರುತ್ತೆ. ಈ ಪ್ರಕರಣದಲ್ಲಿ ನ್ಯಾಯ ಅನ್ನೋದು ತುಂಬಾನೇ ಮುಖ್ಯ. ನ್ಯಾಯದ ಮೇಲೆ ಜನರಿಗೆ ನಂಬಿಕೆ ಬರಬೇಕೆಂದರೆ, ನೊಂದ ಕುಟುಂಬಕ್ಕೆ ಒಳ್ಳೆ ನ್ಯಾಯ ಸಿಗಬೇಕು ಎಂದು ಸುದೀಪ್‌ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೂರು ಫ್ಲೋರ್‌ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ- ಪವಿತ್ರಾ ಐಷಾರಾಮಿ ಜೀವನ ಬಹಿರಂಗ

  • ಚಿತ್ರರಂಗದಿಂದ ದರ್ಶನ್‌ ಬ್ಯಾನ್‌? – ಕಿಚ್ಚ ಸುದೀಪ್‌ ಹೇಳಿದ್ದೇನು?

    ಚಿತ್ರರಂಗದಿಂದ ದರ್ಶನ್‌ ಬ್ಯಾನ್‌? – ಕಿಚ್ಚ ಸುದೀಪ್‌ ಹೇಳಿದ್ದೇನು?

    – ಪ್ರಕರಣದಲ್ಲಿ ಏನಾಗ್ತಿದೆ ಅಂತ ಜನ ದುರ್ಬೀನು ಹಾಕಿಕೊಂಡು ನೋಡ್ತಿದ್ದಾರೆ ಎಂದ ಕಿಚ್ಚ

    ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್‌ (Darshan) ಅವರನ್ನ ಕನ್ನಡ ಚಿತ್ರರಂಗದಿಂದಲೇ ಬ್ಯಾನ್‌ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದ್ದು, ಈ ಬಗ್ಗೆ ನಟ ಕಿಚ್ಚ ಸುದೀಪ್‌ (Kichcha Sudeep) ಪ್ರತಿಕ್ರಿಯಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬ್ಯಾನ್‌ ಮಾಡಲು ನಾವ್ಯಾರು ಕಾನೂನು ಅಲ್ಲ. ಕೇಸ್‌ನಿಂದ ಹೊರಗೆ ಬಂದ್ರೆ ಬ್ಯಾನ್‌ ಅನ್ನೋದು ಬರೋದೆ ಇಲ್ಲ. ಇಲ್ಲಿ ಬ್ಯಾನ್‌ ಅನ್ನೋದಕ್ಕಿಂತ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು ಅನ್ನೋದು ಮುಖ್ಯ. ಕೆಲ ವಾರಗಳ ಹಿಂದೆಯಷ್ಟೇ ನನ್ನ ಮೇಲೂ ಬ್ಯಾನ್‌ ಎಂಬ ಕೂಗು ಕೇಳಿಬಂದಿತ್ತು. ಹಾಗಾಗಿ ಬ್ಯಾನ್‌ ಮಾಡೋದು ಮುಖ್ಯ ಅಲ್ಲ ನ್ಯಾಯ ಅನ್ನೋದು ಮುಖ್ಯ. ಪೊಲೀಸರು, ಮಾಧ್ಯಮಗಳು ಹೇಗೆ ಕೆಲಸ ಮಾಡ್ತಿವೆ? ಕೋರ್ಟ್‌ನಲ್ಲಿ ಏನಾಗ್ತಿದೆ ಅನ್ನೋದರ ಬಗ್ಗೆ ಎಲ್ಲರೂ ದುರ್ಬೀನು ಹಾಕಿಕೊಂಡು ನೋಡ್ತಿದ್ದಾರೆ. ಗಮನ ಅಲ್ಲಿರಬೇಕು ಅಂತ ಹೇಳಿದ್ದಾರೆ. ಇದನ್ನೂ ಓದಿ: ಸೆಲೆಬ್ರಿಟಿ ಅಂದ ತಕ್ಷಣ‌ ದೇವ್ರು ಅಂತ ಭಾವಿಸಬೇಡಿ – ಫ್ಯಾನ್ಸ್‌ಗೆ ಕಿಚ್ಚನ ಸಲಹೆ

    ಇಂತಹ ವಿಚಾರದಲ್ಲಿ ಪರ ವಿರೋಧ ಮಾತನಾಡುವುದು ತಪ್ಪಾಗುತ್ತದೆ. ಮುಖ್ಯವಾಗಿ ರೇಣುಕಾಸ್ವಾಮಿ ಕುಟುಂಬಕ್ಕೆ, ಮಗುವಿಗೆ ನ್ಯಾಯ ಸಿಗಬೇಕು. ಬಾಳಿ ಬದುಕಬೇಕಾದ ರೇಣುಕಾಸ್ವಾಮಿ ಅವರಿಗೆ, ಮುಂದೆ ಹುಟ್ಟುವ ಅವರ ಮಗುವಿಗೆ ನ್ಯಾಯ ಸಿಗಬೇಕು. ನ್ಯಾಯದ ಮೇಲೆ ಜನರಿಗೆ ನಂಬಿಕೆ ಬರಬೇಕೆಂದರೆ, ಈ ಪ್ರಕರಣದಲ್ಲಿ ಒಳ್ಳೆ ನ್ಯಾಯ ಸಿಗಬೇಕು ಎಂದು ಸುದೀಪ್‌ ನೊಂದ ಕುಟುಂಬಕ್ಕೆ ದನಿಯಾಗಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್‌ ಪ್ರತಿ ಸೀಸನ್‌ನಲ್ಲಿ ಹೀರೋ ಹುಟ್ಟುತ್ತಾರೆ ಅದೇ ತಲೆನೋವು- ಕಾರ್ತಿಕ್‌ ಕಾಲೆಳೆದ ಕಿಚ್ಚ

    ಮುಂದುವರಿದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಾಧ್ಯಮಗಳಲ್ಲಿ ಏನು ತೋರಿಸುತ್ತಿದ್ದೀರೋ ಅದರಿಂದಲೇ ನಾನು ತಿಳಿದುಕೊಳ್ಳುತ್ತಿದ್ದೇನೆ. ಸತ್ಯಾಂಶ ಹೊರತರಬೇಕು ಅನ್ನೋ ನಿಟ್ಟಿನಲ್ಲಿ ಮಾಧ್ಯಮಗಳು, ಪೊಲೀಸರು ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಸಿಎಂ ಅವರು ಹಠ ಹಿಡಿದು ಕುಳಿತಿದ್ದಾರೆ ಅಂದ್ರೆ, ಎಲ್ಲರೂ ಸರಿಯಾದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಅಂತ ಅರ್ಥ. ನಾನು ಅವರ ಪರ ಇವರ ಪರ ಮಾತಾಡೋದಿಲ್ಲ. ಒಟ್ಟಿನಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ, ಅವ್ರ ಪತ್ನಿ, ಮಗುವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Breaking: ಚಿತ್ರರಂಗಕ್ಕೆ ಕಪ್ಪುಚುಕ್ಕೆ ಬರಬಾರದು – ದರ್ಶನ್‌ ಬಂಧನ ವಿಚಾರದಲ್ಲಿ ಕಿಚ್ಚ ಸುದೀಪ್‌ ಫಸ್ಟ್‌ ರಿಯಾಕ್ಷನ್‌

  • ಸೆಲೆಬ್ರಿಟಿ ಅಂದ ತಕ್ಷಣ‌ ದೇವ್ರು ಅಂತ ಭಾವಿಸಬೇಡಿ – ಫ್ಯಾನ್ಸ್‌ಗೆ ಕಿಚ್ಚನ ಸಲಹೆ

    ಸೆಲೆಬ್ರಿಟಿ ಅಂದ ತಕ್ಷಣ‌ ದೇವ್ರು ಅಂತ ಭಾವಿಸಬೇಡಿ – ಫ್ಯಾನ್ಸ್‌ಗೆ ಕಿಚ್ಚನ ಸಲಹೆ

    ಬೆಂಗಳೂರು: ಸೆಲೆಬ್ರಿಟಿಗಳು ಅಂದ ತಕ್ಷಣ ನಾವ್ಯಾರು ದೇವರಲ್ಲ, ದೇವರೂ ಅಂತಲೂ ಭಾವಿಸಬೇಡಿ ಎಂದು ನಟ ಕಿಚ್ಚ ಸುದೀಪ್‌ (Kichcha Sudeep) ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Case) ಬಂಧನಕ್ಕೆ ಒಳಗಾಗಿರುವ ನಟ ದರ್ಶನ್‌ (Darshan) ಅವರ ವಿಚಾರ ಕುರಿತು ನಟ ಕಿಚ್ಚ ಸುದೀಪ್‌ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: Breaking: ಚಿತ್ರರಂಗಕ್ಕೆ ಕಪ್ಪುಚುಕ್ಕೆ ಬರಬಾರದು – ದರ್ಶನ್‌ ಬಂಧನ ವಿಚಾರದಲ್ಲಿ ಕಿಚ್ಚ ಸುದೀಪ್‌ ಫಸ್ಟ್‌ ರಿಯಾಕ್ಷನ್‌

    ನಾನು ಮನೆಯಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಮಾಡಿ ಬೈಸಿಕೊಳ್ತೀನಿ. ಸೆಲೆಬ್ರಿಟಿ ಅಂದ ಮಾತ್ರಕ್ಕೆ ನಾವ್ಯಾರೂ ದೇವರಲ್ಲ. ಅಭಿಮಾನಿಗಳು ಆ ರೀತಿ ಭಾವಿಸಬೇಡಿ. ನಾವು ಮಾಡೋದೆಲ್ಲ ಸರಿನೇ ಮಾಡಬೇಕು ಅನ್ನೋ ಒತ್ತಡವನ್ನೂ ಹಾಕಬೇಡಿ. ಏಕೆಂದರೆ ತಪ್ಪು ಮಾಡೋನೆ ಮನುಷ್ಯ, ಫ್ಲಾಪ್‌ಗಳನ್ನ ಕೊಡೋನೇ ಹೀರೋ ಅಂತ ಹೇಳಿದ್ದಾರೆ. ಇದನ್ನೂ ಓದಿ: ಮೂರು ಫ್ಲೋರ್‌ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ- ಪವಿತ್ರಾ ಐಷಾರಾಮಿ ಜೀವನ ಬಹಿರಂಗ

    ಮುಂದುವರಿದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಾಧ್ಯಮಗಳಲ್ಲಿ ಏನು ತೋರಿಸುತ್ತಿದ್ದೀರೋ ಅದರಿಂದಲೇ ನಾನು ತಿಳಿದುಕೊಳ್ಳುತ್ತಿದ್ದೇನೆ. ಸತ್ಯಾಂಶ ಹೊರತರಬೇಕು ಅನ್ನೋ ನಿಟ್ಟಿನಲ್ಲಿ ಮಾಧ್ಯಮಗಳು, ಪೊಲೀಸರು ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಸಿಎಂ ಅವರು ಹಠ ಹಿಡಿದು ಕುಳಿತಿದ್ದಾರೆ ಅಂದ್ರೆ, ಎಲ್ಲರೂ ಸರಿಯಾದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಅಂತ ಅರ್ಥ. ನಾನು ಅವರ ಪರ ಇವರ ಪರ ಮಾತಾಡೋದಿಲ್ಲ. ಒಟ್ಟಿನಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ, ಅವ್ರ ಪತ್ನಿ, ಮಗುವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.

    ಇಂದು ಒಂದಿಲ್ಲೊಂದು ವಿಚಾರಗಳಿಗೆ ಚಿತ್ರರಂಗದ ಹೆಸರು ಬರುತ್ತಿದೆ. ಜನ ಬರ್ತಿಲ್ಲ ಅಂದ್ರೆ ಚಿತ್ರರಂಗ, ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಚಿತ್ರರಂಗ, ಏನೇ ವಿಷಯ ನಡೆದರೂ ಚಿತ್ರರಂಗ ಅಂತಾರೆ. ಹಾಗಾಗಿ ಚಿತ್ರರಂಗಕ್ಕೆ ಕ್ಲಿನ್ ಚಿಟ್ ಸಿಗ್ಬೇಕು. ತಪ್ಪತಸ್ಥರಿಗೆ ಶಿಕ್ಷೆ ಆಗ್ಬೇಕು ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಪವಿತ್ರಾಗೌಡ ಮನೆಯಲ್ಲಿ ಸ್ಥಳ ಮಹಜರು – ಮನೆಯ ಮೂಲೆಮೂಲೆಯನ್ನೂ ಜಾಲಾಡಿದ ಅಧಿಕಾರಿಗಳು

  • Breaking: ಚಿತ್ರರಂಗಕ್ಕೆ ಕಪ್ಪುಚುಕ್ಕೆ ಬರಬಾರದು – ದರ್ಶನ್‌ ಬಂಧನ ವಿಚಾರದಲ್ಲಿ ಕಿಚ್ಚ ಸುದೀಪ್‌ ಫಸ್ಟ್‌ ರಿಯಾಕ್ಷನ್‌

    Breaking: ಚಿತ್ರರಂಗಕ್ಕೆ ಕಪ್ಪುಚುಕ್ಕೆ ಬರಬಾರದು – ದರ್ಶನ್‌ ಬಂಧನ ವಿಚಾರದಲ್ಲಿ ಕಿಚ್ಚ ಸುದೀಪ್‌ ಫಸ್ಟ್‌ ರಿಯಾಕ್ಷನ್‌

    – ರೇಣುಕಾಸ್ವಾಮಿ ಪತ್ನಿ, ಮಗುವಿಗೆ ನ್ಯಾಯ ಸಿಗಬೇಕು ಎಂದ ಕಿಚ್ಚ

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್‌ (Darshan) ಅವರ ವಿಚಾರ ಕುರಿತು ನಟ ಕಿಚ್ಚ ಸುದೀಪ್‌ (Kichcha Sudeep) ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನಿನ ಬಲೆ ಅಂದ್ರೆ ತಪ್ಪಾಗುತ್ತೆ. ಮಾಧ್ಯಮಗಳಲ್ಲಿ ಏನು ತೋರಿಸುತ್ತಿದ್ದೀರೋ ಅದರಿಂದಲೇ ನಾನು ತಿಳಿದುಕೊಳ್ಳುತ್ತಿದ್ದೇನೆ. ಸತ್ಯಾಂಶ ಹೊರತರಬೇಕು ಅನ್ನೋ ನಿಟ್ಟಿನಲ್ಲಿ ಮಾಧ್ಯಮಗಳು, ಪೊಲೀಸರು ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.

    ಸಿಎಂ ಅವರು ಹಠ ಹಿಡಿದು ಕುಳಿತಿದ್ದಾರೆ ಅಂದ್ರೆ, ಸರಿಯಾದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಅಂತ ಅರ್ಥ. ನಾನು ಅವರ ಪರ ಇವರ ಪರ ಮಾತಾಡೋದಿಲ್ಲ. ಒಟ್ಟಿನಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ, ಅವ್ರ ಪತ್ನಿ, ಮಗುವಿಗೆ ನ್ಯಾಯ ಸಿಗಬೇಕು, ಚಿತ್ರರಂಗಕ್ಕೆ ನ್ಯಾಯ ಸಿಗಬೇಕು ಎಂದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೂರು ಫ್ಲೋರ್‌ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ- ಪವಿತ್ರಾ ಐಷಾರಾಮಿ ಜೀವನ ಬಹಿರಂಗ

    ಇಂದು ಒಂದಿಲ್ಲೊಂದು ವಿಚಾರಗಳಿಗೆ ಚಿತ್ರರಂಗದ ಹೆಸರು ಬರುತ್ತಿದೆ. ಜನ ಬರ್ತಿಲ್ಲ ಅಂದ್ರೆ ಚಿತ್ರರಂಗ, ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಚಿತ್ರರಂಗ, ಈಗ ಏನೋ ನಡೀತಿದೆ, ಅದಕ್ಕೂ ಚಿತ್ರರಂಗ ಅಂತಾರೆ. ಹಾಗಾಗಿ ಚಿತ್ರರಂಗಕ್ಕೆ ಕ್ಲಿನ್ ಚಿಟ್ ಸಿಗ್ಬೇಕು. ತಪ್ಪತಸ್ಥರಿಗೆ ಶಿಕ್ಷೆ ಆಗ್ಬೇಕು. ಬ್ಯಾನ್ ಮಾಡಬೇಕು ಅನ್ನೋದು ಮುಖ್ಯ ಅಲ್ಲ. ಬ್ಯಾನ್ ಅಂದ್ರೆ ಏನು? ಚೇಂಬರ್ ಇರೋದು ನ್ಯಾಯ ಕೊಡಿಸೋಕೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಪವಿತ್ರಾಗೌಡ ಮನೆಯಲ್ಲಿ ಸ್ಥಳ ಮಹಜರು – ಮನೆಯ ಮೂಲೆಮೂಲೆಯನ್ನೂ ಜಾಲಾಡಿದ ಅಧಿಕಾರಿಗಳು 

  • ಡಾಲಿ ಧನಂಜಯ್ ನಟನೆಯ ‘ಕೋಟಿ’ ಚಿತ್ರದ ಮೊದಲ ಟಿಕೇಟ್ ‘ಕಿಚ್ಚ’ನಿಗೆ

    ಡಾಲಿ ಧನಂಜಯ್ ನಟನೆಯ ‘ಕೋಟಿ’ ಚಿತ್ರದ ಮೊದಲ ಟಿಕೇಟ್ ‘ಕಿಚ್ಚ’ನಿಗೆ

    ಡಾಲಿ‌ ಧನಂಜಯ (Dhananjay) ಅಭಿನಯದ ‘ಕೋಟಿ’ (Kotee) ಸಿನಿಮಾದ ಮೊದಲ‌ ಟಿಕೇಟನ್ನು ಚಿತ್ರತಂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ನೀಡಿದೆ. ಅದ್ದೂರಿಯಾಗಿ ನಡೆದ ಕೋಟಿ ಸಿನಿಮಾದ ವಿಶೇಷ ಪ್ರೀರಿಲೀಸ್ ಟೀವಿ ಕಾರ್ಯಕ್ರಮಕ್ಕೆ ಸುದೀಪ್ (Kiccha Sudeep) ಆಗಮಿಸಿ ಸುಮಾರು ಒಂದು ಗಂಟೆಗಳಿಗೂ ಅಧಿಕ ಸಮಯ ವೇದಿಕೆಯ ಮೇಲಿದ್ದು‌ ನೆರೆದಿದ್ದ ಜನರ ರಂಜಿಸಿದರು. ಇದೇ ವೇದಿಕೆಯಲ್ಲಿ ಚಿತ್ರತಂಡ ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಕೋಟಿಯ ಮೊದಲ ಟಿಕೇಟ್ ನೀಡಿತು. ಚಿತ್ರದ ಹೊಸ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದ ಕಿಚ್ಚ ನಾಯಕನಟ ಧನಂಜಯ್ ಮತ್ತು ನಿರ್ದೇಶಕ  ಪರಮ್ ಅವರಿಗೆ ಯಶಸ್ಸು‌ ಸಿಗಲಿ ಎಂದು ಶುಭ ಕೋರಿದರು.

    ಈಗಾಗಲೇ ‘ಕೋಟಿ’ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದು ಭಾರಿ ಮೆಚ್ಚುಗೆ ಗಳಿಸುತ್ತಿದೆ. ಡಾಲಿ ಧನಂಜಯ್ ‘ಕೋಟಿ’ ಎಂಬ ಒಬ್ಬ ಸಾಮಾನ್ಯ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ತನ್ನ‌ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ. ಕೋಟಿಯ ಈ ಪಯಣದ ಕಥಾಹಂದರವನ್ನು‌ ಹೊಂದಿರುವ ಈ ಸಿನಿಮಾ ಜೂನ್ 14ಕ್ಕೆ ಬಿಡುಗಡೆಯಾಗಲಿದೆ.

    ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಕಂಗೆಟ್ಟಿರುವ ಕನ್ನಡ ಇಂಡಸ್ಟ್ರಿಗೆ ಅಪ್ಪಟ ಕನ್ನಡ ಮಣ್ಣಿನ ಕತೆಯಾದ ‘ಕೋಟಿ’ ಗೆಲ್ಲುವ ಭರವಸೆಯಾಗಿ ಕಂಡಿದೆ. ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

    ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

    ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

  • ವಿಶೇಷ ಅಭಿಮಾನಿಯ ಉಡುಗೊರೆ ಮೆಚ್ಚಿ, ಸುದೀಪ್ ಕೊಟ್ಟರು ಭರ್ಜರಿ ಗಿಫ್ಟ್

    ವಿಶೇಷ ಅಭಿಮಾನಿಯ ಉಡುಗೊರೆ ಮೆಚ್ಚಿ, ಸುದೀಪ್ ಕೊಟ್ಟರು ಭರ್ಜರಿ ಗಿಫ್ಟ್

    ಮ್ಮ ನೆಚ್ಚಿನ ನಟರನ್ನ ಭೇಟಿ ಆಗುವುದು ಅವರಿಗೆ ತಮ್ಮ ಕೈಲಾದ ಉಡುಗೊರೆ ಕೊಡುವುದು ಇದೇನು ಹೊಸತಲ್ಲ. ಆದರೆ ಇಲ್ಲೊಬ್ಬ ವಿಶೇಷಚೇತನ ಅಭಿಮಾನಿ ಅಂದರೆ ಮಾತು ಬಾರದ ಕಿಚ್ಚನ ಅಭಿಮಾನಿ ಸುದೀಪ್ (Kiccha Sudeep) ಭೇಟಿ ಮಾಡಿದ್ದಾನೆ. ಕಿಚ್ಚ ಸುದೀಪ್ ಕೂಡಾ ಅಭಿಮಾನಿಯನ್ನ (Fans) ಭೇಟಿ ಮಾಡಿದ್ದಾರೆ. ಕಿಚ್ಚನಿಗೆ ಏನು ಹೇಳಬೇಕು ಅದನ್ನ ಬರವಣಿಗೆಯಲ್ಲಿ ಬರೆದು ತಂದಿದ್ದಾನೆ. ಅಭಿಮಾನಿ ಬರೆದುಕೊಂಡು ಬಂದಿದ್ದ ಪತ್ರವನ್ನ ಸುದೀಪ್ ತಾಳ್ಮೆಯಿಂದ ಪೂರ್ತಿಯಾಗಿ ಓದಿದ್ದಾರೆ.

    ನಂತರ ನನ್ನಿಂದ ಏನಾಗ್ಬೇಕು ಅಂತ ಸುದೀಪ್ ಸನ್ನೆಯಿಂದಲೇ ಕೇಳಿದ್ದಾರೆ. ಅದಕ್ಕೆ ಅಭಿಮಾನಿ ಕೂಡಾ ಪ್ರತಿಕ್ರಿಯಿಸಿದ್ದಾನೆ. ಬಳಿಕ ಸುದೀಪ್ ವಿಶೇಷಚೇತನ ಅಭಿಮಾನಿಗೆ ಸಹಾಯವನ್ನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಊಟ ಆಯ್ತಾ ಅಂತಾ ಸುದೀಪ್ ಸನ್ನೆ ಮೂಲಕ ಕೇಳಿದ್ದಾರೆ ಸುದೀಪ್, ಇಲ್ಲ ಎಂದು ಅಭಿಮಾನಿ ಪ್ರತಿಕ್ರಿಯಿಸಿದ್ದಾನೆ. ಸರಿ ಇಲ್ಲೆ ಊಟ ಮಾಡಿ ಹೋಗಿ ಅಂತಾ ಸುದೀಪ್ ಅಭಿಮಾನಿಗೆ ಊಟ ಮಾಡಿಸಿ ಕಳುಹಿಸಿದ್ದಾರೆ.

    ಅಭಿಮಾನಿಗಳು ನೆಚ್ಚಿನ ನಟರನ್ನ ಹುಡುಕಿಕೊಂಡು ಬರ್ತಾರೆ ಅದಕ್ಕೆ ನಟರು ಸಹ ಅವರನ್ನ ಭೇಟಿ ಮಾಡಿ ಪ್ರತಿಕ್ರಿಯೆ ನೀಡುವುದು ವಿಶೇಷ. ಆದರೆ ವಿಶೇಷಗಳಲ್ಲಿ ವಿಶೇಷ ಅಂದರೆ ಈ ಅಭಿಮಾನಿಗೆ ಮಾತು ಬರುವುದಿಲ್ಲ ಆದರೂ ಕಿಚ್ಚ ಸುದೀಪ್ ಭೇಟಿ ಮಾಡಬೇಕು. ತನ್ನ ಮನದಾಳದ ಮಾತನ್ನ ಹಂಚಿಕೊಳ್ಳಬೇಕು ಅಂತ ಬಂದು ಭೇಟಿ ಮಾಡಿದ್ದಾನೆ. ಸುದೀಪ್ ಹಾಗೂ ಅಪ್ಪು ಇರುವ ಫೋಟೋವನ್ನ ಉಡುಗೊರೆಯಾಗಿ (Gift) ನೀಡಿದ್ದಾನೆ.

    ಮನೆ ಬಳಿ ಬಂದ ವಿಶೇಷಚೇತನ ಅಭಿಮಾನಿಯನ್ನ ಭೇಟಿ ಮಾಡಿ ಅವರ ಆಸೆಯನ್ನ ಈಡೇರಿಸಿದ್ದಾರೆ ಕಿಚ್ಚ ಸುದೀಪ್. ಈ ಸಂದರ್ಭಕ್ಕೆ ಕಿಚ್ಚನ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ `ಮ್ಯಾಕ್ಸ್’ ಸಿನಿಮಾದ ಶೂಟಿಂಗ್ ಮುಗಿಸಿರುವ ಸುದೀಪ್ ಮುಂದಿನ ದಿನಗಳಲ್ಲಿ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಾರೆ ಎನ್ನುವ ನಿರೀಕ್ಷಯಲ್ಲಿ ಅಭಿಮಾನಿ ಬಳಗ.

  • ಕಿಚ್ಚನ ಜೊತೆ ನಟಿಸಬೇಕಂತೆ ಮಹಾನಟಿ: ಅವಕಾಶ ಕೊಡ್ತಾರಾ ಸುದೀಪ್?

    ಕಿಚ್ಚನ ಜೊತೆ ನಟಿಸಬೇಕಂತೆ ಮಹಾನಟಿ: ಅವಕಾಶ ಕೊಡ್ತಾರಾ ಸುದೀಪ್?

    ಷ್ಟೋ ಅಭಿಮಾನಿಗಳ ಹೃದಯ ಸಿಂಹಾಸನಾಧೀಶ ಕಿಚ್ಚ ಸುದೀಪ (Kiccha Sudeep). ಅಭಿನಯ ಚಕ್ರವರ್ತಿಯ ಗತ್ತು-ಮಾತು ಇಡೀ ದೇಶಕ್ಕೇ ಗೊತ್ತು. ಹೀಗಿರುವಾಗ ಅಪ್ಪಟ ಕನ್ನಡದ ಮಣ್ಣಿನ ಹುಡುಗಿಗೆ ಅವರ ಮೇಲಿನ ಅಭಿಮಾನ ಎಂಥದ್ದಿರಬೇಡ. ನಟಿಯಾಗುವ ಕನಸು ಹೊತ್ತು ಮಹಾನಟಿ ವೇದಿಕೆ ಏರಿರುವ ಆಶಿಕಾ ಶರ್ಮಾಗೆ ಕಿಚ್ಚ ಅಂದ್ರೆ ಬರೀ ಅಭಿಮಾನ ಹುಚ್ಚು ಅಭಿಮಾನ. ಇದೀಗ ಮಹಾನಟಿ ಕಾರ್ಯಕ್ರಮದ ಸ್ಪರ್ಧಿಯಾಗಿರುವ ಡಬ್ಬಿಂಗ್ ಆರ್ಟಿಸ್ಟ್ ಆಶಿಕಾ ಶರ್ಮಾಗೆ (Aashika Sharma) ಕಿಚ್ಚನಿಂದ ಶುಭಾಶಯವೂ ಅದೇ ವೇದಿಕೆಯಲ್ಲಿ  ಸರ್ ಪ್ರೈಸ್ ಆಗಿ ಸಿಕ್ಕಿದೆ.

    ಹೀರೋಯಿನ್ ಇಂಟ್ರುಡಕ್ಷನ್ ರೌಂಡ್‌ನಲ್ಲಿ ಆಶಿಕಾ ಶರ್ಮಾ ಉತ್ತಮವಾಗಿ ನಟಿಸಿದ್ರು. ಬಳಿಕ ವೇದಿಕೆಯಲ್ಲೇ ಕಿಚ್ಚ ಆಶಿಕಾಗೆ ಆಡಿಯೋ ಮೂಲಕ ಶುಭಾಶಯ ತಿಳಿಸಿದ್ರು. ಅನಿರೀಕ್ಷಿತವಾಗಿ ಕಿಚ್ಚ ಧ್ವನಿ ಆಲಿಸಿದ ಆಶಿಕಾ ಖುಷಿಗೆ ಪಾರವೇ ಇರಲಿಲ್ಲ. ಬಳಿಕ ಕಿಚ್ಚನನ್ನ ಆಶಿಕಾ ಈ ಹಿಂದೆ ಭೇಟಿ ಮಾಡಿದ್ದ ಸಂಗತಿ ಹಾಗೂ ಎಷ್ಟು ದೊಡ್ಡ ಅಭಿಮಾನಿ ಅನ್ನೋದನ್ನ ಹೇಳಿಕೊಂಡಿದ್ದಾರೆ. ಆಶಿಕಾ ಶರ್ಮಾ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದು ವಿಕ್ರಾಂತ ರೋಣ (Vikrant Rona) ಚಿತ್ರದ ರಕ್ಕಮ್ಮ ಪಾತ್ರಕ್ಕೆ ಅಂದ್ರೆ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಧ್ವನಿ ಕೊಟ್ಟಿದ್ರು.

    `ಊರಲ್ಲಿ ಇವತ್ತು ಇವರೊಬ್ಬರದ್ದೇ ಹೆಸರು ಚಾಲ್ತಿಯಲ್ಲಿರೋದು’ ವಿಕ್ರಾಂತ ರೋಣ’ ಟ್ರೈಲರ್ ನಲ್ಲಿ ಇಣುಕಿದ್ದ ಈ ಡೈಲಾಗ್ ಚಿತ್ರ ರಿಲೀಸ್‌ಗೂ ಮುನ್ನವೇ ಭಾರೀ ವೈರಲ್ ಆಗಿತ್ತು. ಈ ಮ್ಯಾಜಿಕಲ್ ಧ್ವನಿಯ ಹಿಂದಿನ ಶಕ್ತಿಯೇ ಆಶಿಕಾ ಶರ್ಮಾ, ಬಳಿಕ ಸುದೀಪ್‌ರನ್ನ ಹಿಂದೊಮ್ಮೆ ಆಶಿಕಾ ಭೇಟಿಯಾಗಿದ್ದರಂತೆ. ಅದಾಗಿ ಎಷ್ಟೋ ವರ್ಷಗಳಾದ್ಮೇಲೆ ಆಶಿಕಾಗೆ ಇದೀಗ ಕಿಚ್ಚ ಸುದೀಪ್ ಶುಭಾಶಯ ತಿಳಿಸಿದ್ದಾರೆ. ಸುದೀಪ್ ಆಕಸ್ಮಿಕ ಸಂದೇಶಕ್ಕೆ ಥ್ರಿಲ್ ಆದ ಆಶಿಕಾ ವೇದಿಕೆಯಲ್ಲೇ ಅವರ ಜೊತೆ ನಟಿಸುವ ಅವಕಾಶವನ್ನ ಕೇಳಿದ್ದಾರೆ. ಆಶಿಕಾ ಮನವಿಗೆ ಕಿಚ್ಚ ಸುದೀಪ್ ಸ್ಪಂಧಿಸುತ್ತಾರಾ..? ತಮ್ಮ ಚಿತ್ರದಲ್ಲಿ ನಟಿಸೋಕೆ ಅವಕಾಶ ಕೊಡ್ತಾರಾ ? ಸಮಯ ಬಂದಾಗ ಗೊತ್ತಾಗುತ್ತೆ.

  • ಸಂದೇಶ್ ಪ್ರೊಡಕ್ಷನ್ಸ್ ಜತೆ ಕೈ ಜೋಡಿಸಿದ ಕಿಚ್ಚ ಸುದೀಪ್

    ಸಂದೇಶ್ ಪ್ರೊಡಕ್ಷನ್ಸ್ ಜತೆ ಕೈ ಜೋಡಿಸಿದ ಕಿಚ್ಚ ಸುದೀಪ್

    ನ್ನಡ ಚಿತ್ರೋದ್ಯಮಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಸಂದೇಶ್‌ ಪ್ರೊಡಕ್ಷನ್ಸ್‌ ಸಂಸ್ಥೆ, ಈಗಾಗಲೇ ಸದಭಿರುಚಿಯ ಚಿತ್ರಗಳ ಜತೆಗೆ ಬಿಗ್‌ ಬಜೆಟ್‌ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದೆ. ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ “ಘೋಸ್ಟ್‌” ಚಿತ್ರವೂ ಅದರಲ್ಲೊಂದು. ಇದೀಗ ಇದೇ ಸಂದೇಶ್‌ ಪ್ರೊಡಕ್ಷನ್ಸ್‌ ಸಂಸ್ಥೆ, ಮತ್ತೊಂದು ಬಿಗ್‌ ಸಿನಿಮಾವನ್ನು ಕೈಗೆತ್ತಿಕೊಂಡಿದೆ. ಈ ಸಲ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಜತೆಗೆ ಕೈ ಜೋಡಿಸಿದ್ದಾರೆ ನಿರ್ಮಾಪಕ ಎನ್‌. ಸಂದೇಶ್‌.

    ಸಂದೇಶ್‌ ನಾಗರಾಜ್‌ (Sandesh Nagaraj) ಅರ್ಪಿಸುವ ಸಂದೇಶ್‌ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಎನ್‌ ಸಂದೇಶ್‌ ನಿರ್ಮಾಣದಲ್ಲಿ ಕಿಚ್ಚ ಸುದೀಪ್‌ (Kichcha Sudeep) ಸಿನಿಮಾ ಮೂಡಿಬರುವುದು ಅಧಿಕೃತವಾಗಿದೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್‌ ಅವರ ಜತೆಗೆ ಸಂದೇಶ್‌ ನಾಗರಾಜ್ ಮತ್ತು ಎನ್ ಸಂದೇಶ್‌ ಅವರು ಒಟ್ಟಿಗೆ ಇರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ನಾಯಕರಾಗಿ ನಟಿಸುತ್ತಿರುವ ಚಿತ್ರ ಶುರುವಾಗಲಿದೆ ಎಂದೇ ಹೇಳಲಾಗಿತ್ತು. ಇದೀಗ ಆ ಊಹೆ ನಿಜವಾಗಿದೆ. ಸಂದೇಶ್‌ ಪ್ರೊಡಕ್ಷನ್ಸ್‌ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಕಿಚ್ಚ ಸುದೀಪ್‌ ಸಿನಿಮಾ ಸೆಟ್ಟೇರಲಿದೆ.

    ಹಾಗಾದರೆ ಯಾವಾಗ ಶುರು? ಸದ್ಯಕ್ಕೆ ಕಿಚ್ಚ ಸುದೀಪ್‌ ಸಂದೇಶ್‌ ಪ್ರೊಡಕ್ಷನ್ಸ್‌ ಅಡಿಯಲ್ಲಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ಯಾವಾಗ ಶುರು, ನಿರ್ದೇಶಕರು ಯಾರು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಮಾಪಕರು ಘೋಷಣೆ ಮಾಡಲಿದ್ದಾರೆ. ಈ ನಡುವೆ ಇದೇ ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಪ್ರಭುದೇವ ನಟನೆಯ “ವುಲ್ಫ್” ಸಿನಿಮಾ ರೆಡಿಯಾಗಿದೆ. ಸೃಜನ್‌ ಲೋಕೇಶ್‌ ಜತೆಗಿನ ಜಿಎಸ್‌ಟಿ ಚಿತ್ರದ ಶೂಟಿಂಗ್‌ ಕೆಲಸಗಳೂ ಮುಕ್ತಾಯವಾಗಿದ್ದು, ಬಿಡುಗಡೆಯ ಹೊಸ್ತಿಲಲ್ಲಿದೆ. ಇದರ ಜತೆಗೆ “ಘೋಸ್ಟ್‌ 2” ಅಥವಾ ಶಿವಣ್ಣನ ಜತೆಗಿನ “ದಳವಾಯಿ ಮುದ್ದಣ್ಣ”, “ಬೀರಬಲ್ 2” ಸಿನಿಮಾಗಳೂ ಸೆಟ್ಟೇರಲಿವೆ.

  • ಕರಾವಳಿಯವರು ಯಾರನ್ನೂ ಅಷ್ಟು ಬೇಗ ಇಷ್ಟಪಡಲ್ಲ: ಕಿಚ್ಚ ಸುದೀಪ್

    ಕರಾವಳಿಯವರು ಯಾರನ್ನೂ ಅಷ್ಟು ಬೇಗ ಇಷ್ಟಪಡಲ್ಲ: ಕಿಚ್ಚ ಸುದೀಪ್

    – ನನ್ನ ಅಪ್ಪಂಗೆ ಕರಾವಳಿ ಹುಡುಗಿನೇ ಇಷ್ಟ ಆಗಿದ್ದು
    – ತುಳು ಚಿತ್ರರಂಗ ಬೆಂಗ್ಳೂರಿಗೆ ಬಂದಿದ್ದು ಖುಷಿ

    ಮಂಗಳೂರು: ಕರಾವಳಿ ಜನ ತುಂಬಾ ಸ್ವಾಭಿಮಾನಿಗಳು. ಇಲ್ಲಿಯ ಜನ ಅಷ್ಟು ಬೇಗ ಯಾರನ್ನೂ ಇಷ್ಟಪಡಲ್ಲ. ಆದರೂ ನಿಮ್ಮ ಮನಸಿನಲ್ಲಿ ನನಗೆ ಜಾಗ ಕೊಟ್ಟಿದ್ದೀರಿ ಎಂದು ನಟ ಕಿಚ್ಚ ಸುದೀಪ್ (Kichcha Sudeep) ಹೇಳಿದ್ದಾರೆ.

    ಯಕ್ಷಧ್ರುವ ಪಟ್ಲ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಿರೂಪಕರು ಆಗಿನಿಂದ ನಮ್ಮ ತುಳುನಾಡಿಗೆ, ನಮ್ಮ ತುಳುನಾಡಿಗೆ ಸ್ವಾಗತ ಅಂತ ನಮ್ಮನ್ನು ಹೊರಗಿನವರು ಅಂತ ಮಾಡ್ತಿದ್ದಾರೆ. ತುಳುನಾಡು ನಮ್ಮ ಕರ್ನಾಟಕದಲ್ಲಿದೆ, ಕರ್ನಾಟಕ ನಮ್ಮ ಹೃದಯದಲ್ಲಿದೆ ತಾನೇ. ಮತ್ತೆ ಮಾತ್ ಮಧ್ಯೆ ಹೆಳ್ತಾರೆ ನಾವು ಅರ್ಧ ಈ ಕಡೆಯವರು ಅಂತ ಎಂದು ಕಿಚಾಯಿಸಿದರು. ಇದನ್ನೂ ಓದಿ: ಟ್ರೋಲಿಗರ ವಿರುದ್ಧ ಸಿಡಿದೆದ್ದ ‘ಬಿಗ್‌ ಬಾಸ್‌’ ಮಾಜಿ ಸ್ಪರ್ಧಿ- ಸೈಬರ್ ಠಾಣೆಗೆ ಸುಷ್ಮಾ ವೀರ್ ದೂರು

    ನನ್ನ ಅಪ್ಪಂಗೆ ಕರ್ನಾಟಕದ ಕರಾವಳಿ ಹುಡುಗಿನೇ ಇಷ್ಟ ಆಗಿದ್ದು. ಕರಾವಳಿ ಜನ ತುಂಬ ಸ್ವಾಭಿಮಾನಿಗಳು. ಇಲ್ಲಿಯ ಜನ ಅಷ್ಟು ಬೇಗ ಯಾರನ್ನು ಇಷ್ಟಪಡಲ್ಲ, ಅದ್ರು ನಿಮ್ಮ ಮನಸ್ಸಿನಲ್ಲಿ ನಂಗೆ ಜಾಗ ಕೊಟ್ಟಿದ್ದೀರಿ. ನಾನು ಗೌರವ ಪಡೆಯಲು ಬಂದಿಲ್ಲ. ನಿಮ್ಮ ಪ್ರೀತಿಗೆ ಬಂದಿದ್ದೇನೆ. ನನ್ನ ತಾಯಿ ಕರಾವಳಿಯವರು. ಅವರು ಚೆನ್ನಾಗಿ ತುಳು ಮಾತಾಡ್ತಾರೆ. ನನಗೆ ತುಳು ಅಷ್ಟೊಂದು ಬರಲ್ಲ ಎಂದರು.

    ಕನ್ನಡ ಚಿತ್ರರಂಗಕ್ಕೆ ಕರಾವಳಿಗರು ಬಂದು ಕನ್ನಡ ಯಾವುದು ತುಳು ಯಾವುದು ಗೊತ್ತಾಗ್ತಾ ಇಲ್ಲ. ತುಳು ಚಿತ್ರರಂಗ ಬೆಂಗಳೂರಿಗೆ ಬಂದದ್ದು ತುಂಬಾ ಖುಷಿಯಾಗಿದೆ. ಯಕ್ಷಗಾನ ಕಲೆ ಎದುರು ನಾವು ಇನ್ನೂ ಚಿಕ್ಕವರು. ಪಟ್ಲ ಫೌಂಡೇಷನ್ ದೊಡ್ಡ ಸಾಧನೆ ಮಾಡಿದೆ. 8 ವರ್ಷದಲ್ಲಿ 11 ಕೋಟಿ ಮೊತ್ತ ಬಡವರಿಗೆ ಸಹಾಯ ಮಾಡಿದ್ದಾರೆ. ಯಕ್ಷಗಾನ ಕಲಾವಿದ ಪಟ್ಲ ಸತೀಶ್ ಶೆಟ್ಟಿ ಸಾಧನೆ ಅಪಾರವಾದ್ದು ಎಂದು ಕಿಚ್ಚ ಸುದೀಪ್ ತಿಳಿಸಿದರು.

  • IPL Playoffs: ಪಂದ್ಯದ ಪ್ರತಿ ಕ್ಷಣವನ್ನೂ ಆನಂದಿಸಿದ್ದೇನೆ – ಆರ್‌ಸಿಬಿ ಗೆಲುವನ್ನು ಕೊಂಡಾಡಿದ ಸಿಎಂ!

    IPL Playoffs: ಪಂದ್ಯದ ಪ್ರತಿ ಕ್ಷಣವನ್ನೂ ಆನಂದಿಸಿದ್ದೇನೆ – ಆರ್‌ಸಿಬಿ ಗೆಲುವನ್ನು ಕೊಂಡಾಡಿದ ಸಿಎಂ!

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ (CSK) ವಿರುದ್ಧ ನಡೆದ ನಾಕೌಟ್‌ ಕದನದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಆರ್‌ಸಿಬಿ (RCB) ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮನಸಾರೆ ಹೊಗಳಿದ್ದಾರೆ. ಬ್ಯುಸಿ ರಾಜಕೀಯ ಒತ್ತಡದ ನಡುವೆಯೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಚಿವರೊಂದಿಗೆ ಕುಳಿತು ಪೂರ್ಣ ಪಂದ್ಯ ವೀಕ್ಷಣೆ ಮಾಡಿದ್ದಾರೆ.

    ಈ ಕುರಿತು ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ, ಸತತ 6ನೇ ಗೆಲುವಿನೊಂದಿಗೆ ನಮ್ಮ ಆರ್‌ಸಿಬಿ ಪ್ಲೇಆಫ್ ಸುತ್ತಿಗೆ ಲಗ್ಗೆಯಿಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಿದ್ದು ಪಂದ್ಯದ ಪ್ರತಿ ಕ್ಷಣವನ್ನು ಆನಂದಿಸಿದೆ. ನಮ್ಮ ಆರ್‌ಸಿಬಿ (Namma RCB) ತಂಡದ ಐತಿಹಾಸಿಕ ಗೆಲುವಿನ ಕ್ಷಣಗಳಿಗೆ ಸಾಕ್ಷಿಯಾದುದ್ದು ಖುಷಿಕೊಟ್ಟಿದೆ. ಇದು ಆರ್.ಸಿ.ಬಿ ಯ ಹೊಸ ಅಧ್ಯಾಯ ಎಂದು ಬರೆದುಕೊಂಡಿದ್ದಾರೆ.

    ಹೌದು. ʻಇದು ಹೊಸ ಅಧ್ಯಾಯʼ ಎಂದು ಹೇಳಿಕೊಂಡು ಸೋಲಿನೊಂದಿಗೆ ಲೀಗ್‌ ಆರಂಭಿಸಿದ್ದ ಆರ್‌ಸಿಬಿ ನಿಜಕ್ಕೂ ಹೊಸ ಅಧ್ಯಾಯವನ್ನೇ ಸೃಷ್ಟಿಸಿದೆ. ಮೊದಲ 8 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ ಲೀಗ್‌ ಸುತ್ತಿನಲ್ಲೇ ಹೊರ ಬೀಳುವ ಸಾಧ್ಯತೆಯಿತ್ತು. ಅಷ್ಟರಲ್ಲಿ ಪುಟಿದೆದ್ದ ಆರ್​ಸಿಬಿ ಇದೀಗ ಯಾರೂ ಊಹಿಸಿದ, ಪವಾಡ ಸಂಭವಿಸಿದ ರೀತಿಯಲ್ಲಿ ಗೆದ್ದು ಪ್ಲೇ ಆಫ್​ಗೆ ಅಧಿಕೃತ ಎಂಟ್ರಿ ಕೊಟ್ಟಿದೆ.

    ಪ್ಲೇ ಆಫ್​ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 27 ರನ್​ ಗಳ ಗೆಲುವು ಸಾಧಿಸಿ ಈ ಅಭೂತಪೂರ್ವ ಸಾಧನೆ ಮಾಡಿದೆ. ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳಬೇಕಿತ್ತು. ಸದ್ಯ ಆರ್‌ಸಿಬಿ ತಂಡದ ಅದ್ಭುತ ಜಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಎಕ್ಸ್‌, ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಅಭಿಮಾನಿಗಳು ಆರ್‌ಸಿಬಿ ಪಂದ್ಯದ ಒಂದೊಂದೇ ದೃಶ್ಯಗಳನ್ನು ಹಂಚಿಕೊಳ್ಳುತ್ತಾ ಕೊಂಡಾಡುತ್ತಿದ್ದಾರೆ.

    ಬೆಂಗಳೂರಿನಲ್ಲಂತೂ ಬೀದಿ ಬೀದಿಗಳಲ್ಲಿ ಪಟಾಕಿ ಸಿಡಿಸಿ, ತಡರಾತ್ರಿ ವರೆಗೂ ಕುಣಿದು ಕುಪ್ಪಳಿಸಿದ್ದಾರೆ. ಆರ್‌ಸಿಬಿ ಕಪ್‌ ಗೆಲ್ಲದಿದ್ದರೂ ಪರವಾಗಿಲ್ಲ, ಚೆನ್ನೈ ವಿರುದ್ಧ ಗೆದ್ದಿದ್ದೇ ನಮಗೆ ಖುಷಿ ಕೊಟ್ಟಿದೆ ಎಂದು ಕೂಗಿ ಹೇಳಿದ್ದಾರೆ.

    ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ 218 ರನ್‌ ಸಿಡಿಸಿ, ಸಿಎಸ್‌ಕೆ ಗೆಲುವಿಗೆ 219 ರನ್‌ಗಳ ಗುರಿ ನೀಡಿತ್ತು. ಆದ್ರೆ ಸಿಎಸ್‌ಕೆ ಪ್ಲೇ ಆಫ್‌ ತಲುಪಲು 201 ರನ್‌ಗಳ ಅಗತ್ಯವಿತ್ತು. ಕೊನೆಯವರೆಗೂ ಹೋರಾಡಿದ ಸಿಎಸ್‌ಕೆ 27 ರನ್‌ ಗಳ ಅಂತರದಿಂದ ಸೋತು ಪ್ಲೇ ಆಫ್‌ ಪ್ರವೇಶಿಸುವ ಅರ್ಹತೆಯನ್ನೇ ಕಳೆದುಕೊಂಡಿತು.