‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಕಾರ್ಯಕ್ರಮವು ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, 62 ದಿನಗಳನ್ನು ಪೂರೈಸಿದೆ. ಸದ್ಯ ಬಿಗ್ ಮನೆಯಲ್ಲಿ 13 ಸ್ಪರ್ಧಿಗಳು ಉಳಿದುಕೊಂಡಿದ್ದು, ಇದರಲ್ಲಿ ಒಬ್ಬರು ಇಂದು ಹೊರ ಹೋಗಲಿದ್ದಾರೆ. ಅದು ಯಾರು ಎಂಬುದೇ ಸೀಕ್ರೆಟ್. ಇದರ ನಡುವೆ ಶೋಭಾ ಶೆಟ್ಟಿ (Shobha Shetty) ಪ್ರೇಕ್ಷಕರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ನನಗೆ ಬಿಗ್ ಬಾಸ್ ಶೋ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದು ಸುದೀಪ್ ಮುಂದೆ ನಟಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ರೊಮ್ಯಾಂಟಿಕ್ ಡ್ಯಾನ್ಸ್- ‘ಪುಷ್ಪ 2’ ಪ್ರೋಮೋ ಔಟ್
ಭಾನುವಾರದ ಎಪಿಸೋಡ್‌ನ ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ಶೋಭಾ ಅವರೇ ನೀವು ಸೇಫ್ ಎಂದು ಸುದೀಪ್ (Sudeep) ಹೇಳಿದ್ದಾರೆ. ಆದರೆ ಇದಕ್ಕೆ ಅಳುತ್ತಲೇ ಶೋಭಾ ಶೆಟ್ಟಿ, ಸರ್ ನನಗೆ ಎಲ್ಲೋ ಒಂದು ಕಡೆ ಇಲ್ಲಿ ಇರೋಕೆ ಆಗುತ್ತಿಲ್ಲ ಅನಿಸುತ್ತಿದೆ. ಹೀಗೆ ಹೇಳುತ್ತಿದ್ದಂತೆ ಸ್ಪರ್ಧಿಗೆಲ್ಲಾ ಗಾಬರಿಯಿಂದ ಶೋಭಾರನ್ನು ನೋಡಿದ್ದಾರೆ. ಬಿಗ್ ಬಾಸ್‌ನಿಂದ ನನ್ನನ್ನು ಕಳುಹಿಸಿ ಎಂದು ಕೈ ಮುಗಿದು ಅಂಗಲಾಚಿರುವ ಶೋಭಾ ಕೇಳಿಕೊಂಡಿದ್ದಾರೆ.
ಅರ್ಥ ಮಾಡಿಕೊಳ್ಳಿ, ಯಾಕೆ ನೀವು ಒಳಗೆ ಹೋಗಿದ್ರಿ. ನಿಮ್ಮನ್ನು ಸೇಫ್ ಮಾಡಿದರಲ್ಲ ಜನ, ಅವರಿಗೆ ಈ ತರ ಉತ್ತರ ಕೊಡೋಕೆ ಆಗಲ್ಲ. ಹೊರಗಡೆ ಹೋಗಬೇಕಾ ಎಂದು ಕೈ ತೋರಿಸುತ್ತ ದೊಡ್ಡ ಧ್ವನಿಯಲ್ಲಿ ಕಿಚ್ಚ ಸುದೀಪ್ ಶೋಭಾಗೆ ಪ್ರಶ್ನಿಸಿದ್ದಾರೆ. ನಿಮಗಾಗಿ ಡೋರ್ ಓಪನ್ ಇದೆ ಎಂದು ಹೇಳಿದ್ದಾರೆ.
ಆದರೆ ಈ ವೇಳೆ ಶೋಭಾ ಶೆಟ್ಟಿ ಕಣ್ಣೀರಲ್ಲೇ ಕೈ ಮುಗಿದು, ನನಗೆ ಕಂಟಿನ್ಯೂ ಮಾಡೋಕೆ ಆಗಲ್ಲ ಅಂತ ಅನಿಸುತ್ತಿದೆ ಸರ್. ಇಲ್ಲಿ ಇರೋರ್ ನಿರೀಕ್ಷೆ ರೀಚ್ ಆಗೋದು ಕಷ್ಟ ಅನಿಸುತ್ತಿದೆ. ಹೋದ ಮೇಲೆ ಪೇಸ್ ಮಾಡುವುದು ಹೇಗಂತ ಗೊತ್ತಾಗುತ್ತಿಲ್ಲ. ಆಡಬೇಕು, ಇರಬೇಕೆಂದು ಇದೆ. ಆದರೆ ಭಯವಾಗುತ್ತಿದೆ ಎಂದಿದ್ದಾರೆ. ಶೋಭಾ ಶೆಟ್ಟಿ ಕಣ್ಣೀರು ಹಾಕುವಾಗ ಚೈತ್ರಾ ಅವರ ಸಮಾಧಾನ ಮಾಡುತ್ತಿದ್ದರು.
ಶೋಭಾಗೆ ‘ಬಿಗ್ ಬಾಸ್’ ಆಟ ಏನು ಹೊಸದಲ್ಲ. ತೆಲುಗಿನ ‘ಬಿಗ್ ಬಾಸ್ 7’ರಲ್ಲಿ (Bigg Boss Telugu 7) ಫಿನಾಲೆ ಮೆಟ್ಟಿಲು ತಲುಪೋ ಒಂದು ದಿನ ಮುಂಚೆ ಎಲಿಮಿನೇಟ್ ಆಗಿ ಹೊರಬಂದಿದ್ದರು. ಫೈರ್ ಲೇಡಿಯಾಗಿ, ಖಡಕ್ ಆಟಗರ‍್ತಿ ಗುರುತಿಸಿಕೊಂಡಿದ್ದ ಕನ್ನಡತಿ ಶೋಭಾ, ಈಗ ಕನ್ನಡದ ಬಿಗ್ ಬಾಸ್‌ನಲ್ಲಿ ಸದಾ ಕಣ್ಣೀರು ಸುರಿಸುತ್ತಿರೋದು ನೋಡಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ.
ಕಾರಣಾಂತಗಳಿಂದ ‘ಮ್ಯಾಕ್ಸ್’ ಸಿನಿಮಾದ ರಿಲೀಸ್‌ಗೆ ತಡವಾಗಿತ್ತು. ಇದೀಗ ಸುದೀಪ್ ಫ್ಯಾನ್ಸ್ ಚಿತ್ರತಂಡ ಸಿಹಿಸುದ್ದಿ ಕೊಟ್ಟಿದೆ. ಇದೇ ಡಿಸೆಂಬರ್ 25ಕ್ಕೆ ಮ್ಯಾಕ್ಸ್ ಚಿತ್ರ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಕ್ರಿಸ್‌ಮಸ್ ಹಬ್ಬದ ವೇಳೆ, ಥಿಯೇಟರ್‌ಗೆ ಸಿನಿಮಾ ಲಗ್ಗೆ ಇಡುತ್ತಿದೆ.
ಈ ಚಿತ್ರದಲ್ಲಿ ಸುದೀಪ್ ಜೊತೆ ‘ಬಿಗ್ ಬಾಸ್’ ಉಗ್ರಂ ಮಂಜು(Ugramm Manju), ಸಂಯುಕ್ತಾ ಹೊರನಾಡ್, ಸುಕೃತಾ ವಾಗ್ಲೆ, ವರಲಕ್ಷ್ಮಿ ಶರತ್ ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ.
ಮಂಡ್ಯ: ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kiccha Sudeep) ಅವರ ತಾಯಿ ವಿಧಿವಶರಾಗಿ ಇಂದಿಗೆ ಮೂರು ದಿನಗಳಾಗಿದೆ. ಈ ಹಿನ್ನೆಲೆ ಕಾವೇರಿ ನದಿಯಲ್ಲಿ (Cauvery River) ತಾಯಿ ಸರೋಜಾ ಅಸ್ತಿಯನ್ನು ಸುದೀಪ್ ವಿಸರ್ಜನೆ ಮಾಡಿದ್ದಾರೆ.
ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣದ (Srirangapatna) ಗೋಸಾಯಿಘಾಟ್ ಬಳಿಯ ಕಾವೇರಿ ನದಿಯಲ್ಲಿ ಸರೋಜಮ್ಮನ ಅಸ್ತಿ ವಿಸರ್ಜಿಸಿ ಸದ್ಗತಿಗಾಗಿ ಸುದೀಪ್ ಪ್ರಾರ್ಥಿಸಿದ್ದಾರೆ. ವಿಧಿ ವಿಧಾನ ಕಾರ್ಯದಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದಾರೆ. ಅಸ್ತಿ ವಿಸರ್ಜನೆ ಕಾರ್ಯ ಚಿತ್ರೀಕರಿಸದಂತೆ ಮಾಧ್ಯಮಗಳಿಗೆ ಸುದೀಪ್ ಮನವಿ ಮಾಡಿದ್ದರು. ಅಸ್ತಿ ವಿಸರ್ಜನೆ ವೇಳೆ ಸುದೀಪ್ ಕಣ್ಣೀರಿಟ್ಟಿದ್ದಾರೆ. ವಿಧಿ ವಿಧಾನ ಕಾರ್ಯದ ಬಳಿಕ ಬೆಂಗಳೂರಿನತ್ತ ಸುದೀಪ್ ತೆರಳಿದ್ದಾರೆ. ಇದನ್ನೂ ಓದಿ: ಅಜ್ಜಿಯ ನೆನೆದು ಭಾವನಾತ್ಮಕ ಪತ್ರ ಬರೆದ ಸುದೀಪ್ ಪುತ್ರಿ
ತಾಯಿಯನ್ನು ಕಳೆದುಕೊಂಡಿರುವ ನೋವಿನಲ್ಲಿರುವ ನಟ ಸುದೀಪ್ (Actor Sudeep) ತಾಯಿಯ ಕುರಿತು ಸುದೀರ್ಘವಾದ ಭಾವುಕ ಟ್ವೀಟ್‌ವೊಂದನ್ನು (Tweet) ಹಂಚಿಕೊಂಡಿದ್ದಾರೆ.
ನನ್ನ ತಾಯಿ, ಯಾವುದೇ ಪಕ್ಷಪಾತವಿಲ್ಲದ, ಅತ್ಯಂತ ಪ್ರೀತಿಯ, ಕ್ಷಮಿಸುವ, ಕಾಳಜಿ ವಹಿಸುವ ಮತ್ತು ಪ್ರೀತಿಯನ್ನು ಕೊಡುವ ನನ್ನ ಬದುಕಿನಲ್ಲಿ ಮೌಲ್ಯಯುತವಾದನ್ನು ತೋರಿಸಿದವಳು ಮತ್ತು ಯಾವಾಗಲೂ ಅದನ್ನು ಪಾಲಿಸುವ ಮೌಲ್ಯವನ್ನು ಹೇಳಿಕೊಟ್ಟ ಜೀವವದು. ಬದುಕಿನಲ್ಲಿ ನನ್ನ ಪಕ್ಕದಲ್ಲಿಯೇ ಇದ್ದ ಮಾನವ ರೂಪದ ನಿಜವಾದ ದೇವರಾಗಿದ್ದರು ನನ್ನಮ್ಮ ಎಂದು ಬರೆದುಕೊಂಡಿದ್ದಾರೆ.
ನಟ ಸುದೀಪ್ ತಾಯಿ ಸರೋಜ ಅವರು ಅ.20ರಂದು ಬೆಳಗ್ಗೆ ಇಹಲೋಕ ತ್ಯಜಿಸಿದರು. ನ್ಯುಮೋನಿಯದಿಂದ ಬಳಲುತ್ತಿದ್ದ ಸುದೀಪ್ ತಾಯಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಅ.20ರಂದು ಸಂಜೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು.ಇದನ್ನೂ ಓದಿ: ಹಾವೇರಿಯಲ್ಲಿ ಧಾರಾಕಾರ ಮಳೆ – ನಡು ನೀರಿನಲ್ಲಿ ಸಿಲುಕಿದ್ದ 30 ಭಕ್ತರ ರಕ್ಷಣೆ
ಪೋಸ್ಟ್‌ನಲ್ಲಿ ಏನಿದೆ?
ನನ್ನ ತಾಯಿ, ಯಾವುದೇ ಪಕ್ಷಪಾತವಿಲ್ಲದ, ಅತ್ಯಂತ ಪ್ರೀತಿಯ, ಕ್ಷಮಿಸುವ, ಕಾಳಜಿ ವಹಿಸುವ ಮತ್ತು ಪ್ರೀತಿಯನ್ನು ಕೊಡುವ ನನ್ನ ಬದುಕಿನಲ್ಲಿ ಮೌಲ್ಯಯುತವಾದನ್ನು ತೋರಿಸಿದವಳು ಮತ್ತು ಯಾವಾಗಲೂ ಅದನ್ನು ಪಾಲಿಸುವ ಮೌಲ್ಯವನ್ನು ಹೇಳಿಕೊಟ್ಟ ಜೀವವದು. ಬದುಕಿನಲ್ಲಿ ನನ್ನ ಪಕ್ಕದಲ್ಲಿಯೇ ಇದ್ದ ಮಾನವ ರೂಪದ ನಿಜವಾದ ದೇವರಾಗಿದ್ದರು ನನ್ನಮ್ಮ.
ನನಗೆ ಹಬ್ಬ ಎಂದರೆ ಅದು ನನ್ನ ತಾಯಿ. ನನ್ನ ಮೊದಲ ಅಭಿಮಾನಿ, ಹಿತೈಷಿ ಎಲ್ಲವೂ ಅವರಾಗಿದ್ದರು. ಕೆಟ್ಟ ಕೆಲಸವನ್ನೂ ಇಷ್ಟಪಟ್ಟವರು, ಒಳ್ಳೆಯ ಕೆಲಸ ಮಾಡಿದಾಗಲಂತೂ ಬೆನ್ನು ತಟ್ಟಿ ಸಂಭ್ರಮಿಸಿದವರು. ಈಗ ಆ ಎಲ್ಲ ಸುಂದರ ಘಳಿಗೆಗಳು ನೆನಪು ಮಾತ್ರ.
ನಾನೀಗ ಅನುಭವಿಸುತ್ತಿರುವ ಸಂಕಟವನ್ನು ಹಂಚಿಕೊಳ್ಳಲು ನನ್ನಲ್ಲಿ ಪದಗಳಿಲ್ಲ. ಅವರಿಲ್ಲದ ಶೂನ್ಯವನ್ನು ಒಪ್ಪಿಕೊಳ್ಳಲು ನನ್ನಿಂದ ಆಗುತ್ತಿಲ್ಲ. ಕೇವಲ 24 ಗಂಟೆಗಳಲ್ಲಿ ಎಲ್ಲವೂ ಬದಲಾಗಿ ಹೋಯಿತು.
My mother , the most unbiased, loving, forgiving, caring, and giving, in my life was valued , celebrated, and will always be cherished.
*Valued… because she was my true god next to me in the form of a human.
*Celeberated… because she was my festival. My teacher. My true… pic.twitter.com/UTU9mEq944
ಪ್ರತಿನಿತ್ಯವೂ ನನ್ನ ಮೊಬೈಲ್‌ಗೆ ಬೆಳಗ್ಗೆ 5.30ಕ್ಕೆ ಮೊದಲ ಮೆಸೇಜ್ ಬರುವುದು ಅದು ನನ್ನ ತಾಯಿಯಿಂದಲೇ. `ಗುಡ್ ಮಾರ್ನಿಂಗ್ ಕಂದ’ ಎಂಬ ಸಂದೇಶ ಬರುತ್ತಿತ್ತು. ಅಮ್ಮನಿಂದ ನನಗೆ ಕೊನೆಯ ಸಲ ಸಂದೇಶ ಬಂದಿದ್ದು, ಅಕ್ಟೋಬರ್ 18ರಂದು. ಮಾರನೇ ದಿನ ಬೆಳಗ್ಗೆ ನಾನು ಬಿಗ್‌ಬಾಸ್ ಮನೆಯ ಸೆಟ್‌ನಲ್ಲಿದ್ದೆ. ಅಂದು ಅಮ್ಮನ ಸಂದೇಶ ನನಗೆ ತಲುಪಲೇ ಇಲ್ಲ. ಕಳೆದ ಹಲವು ವರ್ಷಗಳಿಂದ ನಾನು ಯಾವತ್ತೂ ಸಂದೇಶವನ್ನು ಮಿಸ್ ಮಾಡಿಕೊಂಡವನು ಅಲ್ಲ. ಇದೇ ಮೊದಲ ಬಾರಿಗೆ ಅಮ್ಮ ಸಂದೇಶ ಕಳುಹಿಸಲಿಲ್ಲ.
ನಾನೇ ಅಮ್ಮನ ಮೊಬೈಲ್‌ಗೆ ಸಂದೇಶ ಕಳುಹಿಸಿದೆ. ಕರೆ ಮಾಡಿ ಈ ಕುರಿತು ವಿಚಾರಿಸೋಣವೆಂದರೆ, ಬಿಗ್‌ಬಾಸ್ ಚಿತ್ರೀಕರಣದ ಒತ್ತಡದಲ್ಲಿದ್ದೆ. ಹಾಗಾಗಿ ಸಾಧ್ಯವಾಗಲಿಲ್ಲ. ಶನಿವಾರದ ಬಿಗ್‌ಬಾಸ್ ಎಪಿಸೋಡ್ ಚಿತ್ರೀಕರಣಕ್ಕಾಗಿ ಇನ್ನೇನು ವೇದಿಕೆಯ ಮೇಲೆ ಹತ್ತಬೇಕು ಎನ್ನುವಷ್ಟರಲ್ಲಿ ಅಮ್ಮನಿಗೆ ಹುಷಾರಿಲ್ಲದ, ಅವರು ಆಸ್ಪತ್ರೆಗೆ ದಾಖಲಾಗಿರುವ ಸಂದೇಶ ಬಂತು. ಕೂಡಲೇ ಸಹೋದರಿಗೆ ಕರೆ ಮಾಡಿ, ಡಾಕ್ಟರ್ ಜೊತೆ ಮಾತನಾಡಿ ನಾನು ಸ್ಟೇಜ್ ಮೇಲೆ ಹತ್ತಿದೆ.
ನಾನು ಚಿತ್ರೀಕರಣದಲ್ಲಿ ಇರುವಾಗಲೇ ಅಮ್ಮನ ಆರೋಗ್ಯ ಸ್ಥಿತಿ ಗಂಭೀರ ಅಂತ ನನ್ನ ತಂಡದವರು ತಿಳಿಸಿದರು. ಎಂತಹ ಅಸಹಾಯಕ ಸ್ಥಿತಿ ನನ್ನದು. ಮೊದಲ ಬಾರಿಗೆ ಇಂಥದ್ದೊಂದು ಸನ್ನಿವೇಶ ನನಗೆ ಎದುರಾಗಿದ್ದು. ಶೂಟಿಂಗ್ ಮಾಡುತ್ತಿರುವಾಗಲೇ ನನ್ನ ತಲೆಯಲ್ಲಿ ಹಲವಾರು ವಿಷಯಗಳು ಚಲಿಸುತ್ತಿದ್ದವು. ಸಾಕಷ್ಟು ಭಯವಿತ್ತು. ಶನಿವಾರದ ಎಪಿಸೋಡ್ ಮುಗಿಸಲೇಬೇಕು ಎನ್ನುವ ಒತ್ತಡವೂ ಇತ್ತು. ಎಲ್ಲವನ್ನೂ ನಿಭಾಯಿಸಬೇಕಿತ್ತು. ಮನಸ್ಸನ್ನು ಶಾಂತಚಿತ್ತಕ್ಕೆ ತಂದು ಶನಿವಾರದ ಎಪಿಸೋಡ್ ಮುಗಿಸಿಕೊಟ್ಟೆ. ಇದೆಲ್ಲವೂ ಸಾಧ್ಯವಾಗಿದ್ದು, ನನ್ನ ತಾಯಿ ಹೇಳಿಕೊಟ್ಟ ಪಾಠದಿಂದ.
ಎಲ್ಲ ಒತ್ತಡವನ್ನೂ ನಿಭಾಯಿಸಿಕೊಂಡು ಶನಿವಾರದ ಎಪಿಸೋಡ್ ಮುಗಿಸಿಕೊಟ್ಟು ಕೂಡಲೇ ಆಸ್ಪತ್ರೆಯತ್ತ ಧಾವಿಸಿದೆ. ನಾನು ಆಸ್ಪತ್ರೆ ತಲುಪುವ ಮುನ್ನವೇ ಅಮ್ಮನನ್ನು ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರು. ಅತ್ಯಂತ ನೋವಿನ ಸಂಗತಿ ಅಂದರೆ, ನನ್ನ ತಾಯಿ ಪ್ರಜ್ಞೆಯಲ್ಲಿರುವಾಗ ಕೊನೆಯ ಬಾರಿಗೆ ಅವರನ್ನು ನೋಡಲು ಆಗಲೇ ಇಲ್ಲ. ಅವರು ಕೊನೆಯುಸಿರು ಎಳೆಯುವ ಮುನ್ನ ಅಮ್ಮ ನೋವಿನಲ್ಲೇ ಸಾಕಷ್ಟು ಹೋರಾಡಿದ್ದಳು. ಕೆಲವೇ ಕೆಲವು ಗಂಟೆಗಳಲ್ಲಿ ಏನೆಲ್ಲ ಬದಲಾವಣೆ ಆಗಿದ್ದವು.
ಅಮ್ಮ ಇಲ್ಲ ಅನ್ನುವುದು ಸತ್ಯ. ಆದರೆ, ವಾಸ್ತವವನ್ನು ಹೇಗೆ ಸ್ವೀಕರಿಸಬೇಕು ಅನ್ನೋದು ಗೊತ್ತಾಗಲಿಲ್ಲ. ಮೊನ್ನೆಯಷ್ಟೇ ಚಿತ್ರೀಕರಣಕ್ಕೆ ಹೊರಡುವ ಮುನ್ನ ಬಿಸಿ ಅಪ್ಪುಗೆಯೊಂದನ್ನು ಕೊಟ್ಟು ಕಳುಹಿಸಿದ್ದರು. ಕೆಲವೇ ಕೆಲವು ಗಂಟೆಗಳಲ್ಲಿ ಇಲ್ಲವಾಗಿ ಹೋದರು. ನಾನು ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ. ಈ ಮಂಗಳಕರ ದಿನವು ಪ್ರಕೃತಿಯು ಈ ಭೂಮಿಯಿಂದ ತಾಯಿಯನ್ನು ಕರೆದುಕೊಂಡು ಹೋಗಿದೆ ಎಂದು ಸಮಾಧಾನಿಸಿಕೊಳ್ಳುವೆ. ನನ್ನ ಬದುಕಿನ ಅತ್ಯಂತ ಬೆಲೆಬಾಳುವ ಮುತ್ತೊಂದು ನನ್ನಿಂದ ಜಾರಿಹೋಗಿದೆ. ನನ್ನ ತಾಯಿ ಶಾಂತಿಯಿಂದಲೇ ತುಂಬಿರೋ ಮಡಿಲನ್ನು ಸೇರಿದ್ದಾರೆ ಎಂದು ಖಾತ್ರಿಯಿದೆ.
ಅಮ್ಮನಿಗೆ ಗೌರವ ಸಲ್ಲಿಸಲು ಆಗಮಿಸಿದ್ದ ಪ್ರತಿಯೊಬ್ಬರಿಗೂ ನಾನು ಋಣಿ ಮತ್ತು ಧನ್ಯವಾದಗಳನ್ನು ತಿಳಿಸುತ್ತೇನೆ. ಇದು ನಿಜವಾಗಿಯೂ ನಿಮ್ಮೆಲ್ಲರ ಕರುಣೆಯಾಗಿತ್ತು. ನನ್ನ ತಾಯಿ ಆತ್ಮಕ್ಕೆ ಶಾಂತಿ ಕೋರಿದ ಎಲ್ಲರಿಗೂ ಧನ್ಯವಾದಗಳು
ಬೆಂಗಳೂರು: ಅನಾರೋಗ್ಯದಿಂದ ನಟ ಕಿಚ್ಚ ಸುದೀಪ್ (Kiccha Sudeep) ಅವರ ತಾಯಿ ಭಾನುವಾರ ಬೆಳಗ್ಗೆ ವಿಧಿವಶರಾಗಿದ್ದು, ಜೆಪಿ ನಗರದ (JP Nagar) ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಜಯನಗರದ ಅಪೋಲೋ ಆಸ್ಪತ್ರೆಯಿಂದ ಸರೋಜಾ ಅವರ ಪಾರ್ಥಿವ ಶರೀರವನ್ನು ಅಂಬುಲೆನ್ಸ್ ಮೂಲಕ ಜೆಪಿ ನಗರದ ನಿವಾಸಕ್ಕೆ ತರಲಾಗಿದೆ. ಈ ವೇಳೆ ನಟ ಕಿಚ್ಚ ಸುದೀಪ್ ಅವರು ಕೂಡ ಅಂಬುಲೆನ್ಸ್‌ನಲ್ಲಿಯೇ ಮನೆಗೆ ತೆರಳಿದ್ದಾರೆ. ಮನೆ ಬಳಿ ಅಂತಿಮ ದರ್ಶನಕ್ಕೆ ಶಾಮಿಯಾನ ಹಾಕಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುದೀಪ್ ಮನೆ ರಸ್ತೆಗೆ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದು, ಮನೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಇದನ್ನೂ ಓದಿ: ನಟ ಕಿಚ್ಚ ಸುದೀಪ್ ತಾಯಿ ನಿಧನ
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಟ ಕಿಚ್ಚ ಸುದೀಪ್ (Kiccha Sudeep) ತಾಯಿ ಸರೋಜಾ ಭಾನುವಾರ ನಿಧನರಾಗಿದ್ದಾರೆ.
ಅನಾರೋಗದ್ಯದ ಹಿನ್ನೆಲೆ ಸುದೀಪ್ ತಾಯಿ ಸರೋಜಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಗ್ಗೆ 07:04ಕ್ಕೆ ನಿಧನ ಆಗಿರೋ ಮಾಹಿತಿ ಲಭಿಸಿದೆ.
ಇಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ಕುಟುಂಬಸ್ಥರು ಪಾರ್ಥಿವ ಶರೀರವನ್ನು ಜೆಪಿ ನಗರದ ನಿವಾಸಕ್ಕೆ ತರಲಿದ್ದಾರೆ.
– ಕಲರ್ಸ್ ಕನ್ನಡ ಜೊತೆಗೆ ನನ್ನ ಬಾಂಧವ್ಯ ಚೆನ್ನಾಗಿದೆ ಎಂದ ಕಿಚ್ಚ
ಬಿಗ್‌ಬಾಸ್ (Bigg Boss Kannada 11) ನಿರೂಪಣೆಗೆ ವಿದಾಯ ಹೇಳಿದ್ದ ವಿಚಾರವಾಗಿ ಹಬ್ಬರುವ ವದಂತಿಗಳಿಗೆ ನಟ ಕಿಚ್ಚ ಸುದೀಪ್ (Kichcha Sudeepa) ಪ್ರತಿಕ್ರಿಯಿಸಿದ್ದಾರೆ. ಚಾನಲ್ ಮತ್ತು ನನ್ನ ನಡುವೆ ಯಾವುದೇ ಘರ್ಷಣೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
I appreciate all the love and support coming my way regarding my tweet; it truly makes me feel cherished. However, I kindly ask those creating comments and videos to refrain from making assumptions about any conflicts between the channel and myself. We have shared a long and…
ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಸುದೀಪ್, ನನ್ನ ನಿರ್ಧಾರದ ನಂತರ ನೀವು ತೋರಿಸಿದ ಪ್ರೀತಿ-ಬೆಂಬಲಕ್ಕೆ ಧನ್ಯವಾದ. ಚಾನಲ್ ಹಾಗೂ ನನ್ನ ನಡುವೆ ಯಾವುದೇ ಘರ್ಷಣೆ ಆಗಿಲ್ಲ. ಈ ಬಗ್ಗೆ ಬರ್ತಿರೋ ವೀಡಿಯೋಗಳು, ಪ್ರತಿಕ್ರಿಯೆಗಳೆಲ್ಲಾ ಆಧಾರ ರಹಿತ. ನನಗೆ ಅಗೌರವ ಆಗಿದೆ ಎಂಬ ಪದವನ್ನ ಇದಕ್ಕೆ ಸೇರಿಸೋದು ತಪ್ಪು ಎಂದಿರುವ ನಟ ವದಂತಿಗಳನ್ನು ಹರಡದಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ದರ್ಶನ್ ಇಂದೇ ಹೈಕೋರ್ಟ್ ಮೊರೆ ಹೋಗ್ತಾರಾ? – ಅರ್ಜಿ ಸಲ್ಲಿಸಿದ್ರೆ ಮುಂದೇನು?
ಈ ಸಮಸ್ಯೆಯ ಸುತ್ತಲಿನ ಯಾವುದೇ ಊಹೆಗಳು ಆಧಾರ ರಹಿತ. ಕಲರ್ಸ್ ಜೊತೆಗೆ ನನ್ನ ಬಾಂಧವ್ಯ ಚೆನ್ನಾಗಿದೆ. ನಮ್ಮ ನಡುವೆ ಏನೂ ಆಗಿಲ್ಲ. ಬಿಗ್‌ಬಾಸ್ ಡೈರೆಕ್ಟರ್ ಪ್ರಕಾಶ್ ಬಹಳ ಟ್ಯಾಲೆಂಟೆಡ್. ಅವರು ಯಾವಾಗಲೂ ನನ್ನ ಗೌರವದಿಂದ ನಡೆಸಿಕೊಳ್ತಾರೆ. ನಾನು ಅವರ ಬಗ್ಗೆ ಆಳವಾದ ಗೌರವ ಹೊಂದಿದ್ದೇನೆ ಎಂದು ಸುದೀಪ್ ತಿಳಿಸಿದ್ದಾರೆ.
ಕಿಚ್ಚ ಸುದೀಪ್ (Kichcha Sudeep) ನಿನ್ನೆ (ಅ.13) ಬಿಗ್ ಬಾಸ್ ಶೋಗೆ ವಿದಾಯ ಘೋಷಿಸಿದ ಬೆನ್ನಲ್ಲೇ ಈ ಕುರಿತು ರೂಪೇಶ್ ರಾಜಣ್ಣ (Rupesh Rajanna) ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದು ಹಂಚಿಕೊಂಡಿದ್ದಾರೆ. ದಿಢೀರ್ ಬಿಗ್ ಬಾಸ್‌ಗೆ ಸುದೀಪ್ ಯಾಕೆ ವಿದಾಯ ಹೇಳ್ತಿದ್ದಾರೆ ಎಂದು ಮಹತ್ವದ ಸುಳಿವೊಂದನ್ನು ಬಿಟ್ಟು ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಮಾಡಿದ ಅವಮಾನ ಸಹಿಸೋಲ್ಲ ಅಂತ ರೂಪೇಶ್ ರಾಜಣ್ಣ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
‘ಬಿಗ್ ಬಾಸ್’ ಎಂಬ ಕಾರ್ಯಕ್ರಮ ನಡೆಸುವ ಕೆಲ ಕನ್ನಡ ದ್ರೋಹಿಗಳ ನಿಮ್ಮ ಕಿತ್ತೋದ್ ಆಟಕ್ಕೆ, ಸುದೀಪ್ ಬಿಗ್ ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನವನ್ನು ಸಹಿಸಲ್ಲ. ಎ ಮುಂಬೈ ಮರಾಠಿ ಹಾಗೂ ತಮಿಳು ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ, ಇಲ್ಲ ಬಿಗ್ ಬಾಸ್ ನಿಲ್ಲಬೇಕು. ಅಸಲಿ ವಿಷಯ ಮಾತಾಡ್ತೀನಿ ಎಂದು ಮಾಜಿ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ರಾಜಣ್ಣ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಕುರಿತು ಪರ ಮತ್ತು ವಿರೋಧದ ಚರ್ಚೆ ನಡೆಯುತ್ತಿದೆ. ಸುದೀಪ್ ಅವರ ಈ ನಿರ್ಣಯ ಹಿಂದೆ ಬೇರೆ ಏನಾದರೂ ಕಥೆ ಇದ್ಯಾ? ಅಂತ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಸದ್ಯದಲ್ಲೇ ಇದಕ್ಕೆಲ್ಲಾ ಉತ್ತರ ಸಿಗುತ್ತಾ? ಕಾದುನೋಡಬೇಕಿದೆ.
ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ
ಕೆಲವು ಕನ್ನಡ ದ್ರೋಹಿಗಳ
ನಿಮ್ಮ ಕಿತ್ತೋದ್ ಆಟಕ್ಕೆ @KicchaSudeep ಬಿಗ್ ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ.
ಅವರಿಗೆ ಮಾಡಿದ ಅವಮಾನ ಸಹಿಸೋಲ್ಲ
ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ ಇಲ್ಲ ಬಿಗ್ ಬಾಸ್ ನಿಲ್ಲಬೇಕು
ಅಸಲಿ ವಿಷಯ ನಾಳೆ ಮಾತಾಡ್ತೀನಿ.@Chakravarthy_dj
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) October 13, 2024
ಕಿಚ್ಚನ ಎಕ್ಸ್ ಪೋಸ್ಟ್‌ನಲ್ಲಿ ಏನಿದೆ?
ನೀವೆಲ್ಲರೂ BBK 11ರಲ್ಲಿ ತೋರಿಸಿರುವ ಪ್ರತಿಕ್ರಿಯೆಗೆ ಧನ್ಯವಾದಗಳು. ಶೋ ಮತ್ತು ನನ್ನ ಮೇಲೆ ತೋರಿಸಿದ ಪ್ರೀತಿಯ ಬಗ್ಗೆ ಹಲವರು ಹೇಳುತ್ತಾರೆ. ಇದು ನಮ್ಮೊಂದಿಗೆ ಪ್ರಯಾಣಿಸಿದ 10+1 ವರ್ಷದ ಶ್ರೇಷ್ಠ ಅನುಭವವಾಗಿತ್ತು. ಮತ್ತು ಈಗ ನಾನು ನನ್ನ ಮುಂದಿನ ಹೆಜ್ಜೆಗೆ ಸಾಗುವ ಸಮಯವಾಗಿದೆ. ಇದು BBK ಯಲ್ಲಿನ ನನ್ನ ಕೊನೆಯ ಆವೃತ್ತಿಯಾಗಲಿದೆ. ನನ್ನ ನಿರ್ಧಾರವನ್ನು ನನ್ನ ಅಭಿಮಾನಿಗಳು ಮತ್ತು ಈ ವರ್ಷಗಳಲ್ಲಿ BB ಅನ್ನು ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂಬುದರಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ.
Thank you all for the great response shown towards #BBK11.
The TVR (number) speaks in volumes about the love you all have shown towards the show and me.
It’s been a great 10+1 years of travel together, and it’s time for me to move on with what I need to do. This will be my last… pic.twitter.com/uCV6qch6eS
ಈ ಆವೃತ್ತಿಯನ್ನು ಅತ್ಯುತ್ತಮವಾಗಿ ಮಾಡಲು ಪ್ರಯತ್ನಿಸೋಣ ಎಂದು ಕಿಚ್ಚ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಇತ್ತೀಚೆಗೆ ಸುದೀಪ್ ಅವರು ದೊಡ್ಮನೆ ಆಟ ಸೀಸನ್ 11 ನಡೆಸಿಕೊಡಲ್ಲ ಅಂತಾ ನೇರವಾಗಿ ತಿಳಿಸಿದ್ದರು. ಆದರೆ ವಾಹಿನಿಯ, ಅಭಿಮಾನಿಗಳ ಒತ್ತಾಯಕ್ಕೆ ಸುದೀಪ್ ಸಾಥ್ ನೀಡಿದ್ದರು. ಈಗ ಮುಂದಿನ ಸೀಸನ್ ನಡೆಸಿಕೊಡಲ್ಲ ಎಂದು ಅಧಿಕೃತವಾಗಿ ಘೋಷಿಸಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 11ರ ಮೊದಲ ವಾರದ ಎಲಿಮಿನೇಷನ್ ನಲ್ಲಿ ಯಮುನಾ ಶ್ರೀನಿಧಿ ಔಟ್ ಆಗಿದ್ದಾರೆ. ನಟಿಯ ಎಲಿಮಿನೇಷನ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.
ಮೊದಲ ವಾರವೇ ಯಮುನಾ ಎಲಿಮಿನೇಷನ್ ಆಗುತ್ತೆ ಎಂಬುದನ್ನು ಯಾರು ಊಹಿಸಿರಲಿಲ್ಲ. ವಯಸ್ಸು 45 ದಾಟಿದರೂ ಗಟ್ಟಿಗಿತ್ತಿ ಸಹ ಸ್ಪರ್ಧಿಗಳಿಗೆ ಠಕ್ಕರ್ ಕೊಡುತ್ತಿದ್ದರು. ಇದೀಗ ಅವರು ಔಟ್ ಎನ್ನುತ್ತಿದ್ದಂತೆ ಮನೆ ಮಂದಿಗೂ ಅಚ್ಚರಿ ಮೂಡಿಸಿದೆ.
ಇನ್ನೂ ನವರಾತ್ರಿ ಹಬ್ಬದ ಸಂದರ್ಭವಿರುವ ಕಾರಣ, ಎಲಿಮಿನೇಷನ್ ಇರೋದಿಲ್ಲ ಎಂದೇ ಅನೇಕರು ಭಾವಿಸಿದ್ದರು. ಆದರೆ ಈಗ ಯಮುನಾ ಅವರ ದೊಡ್ಮನೆ ಆಟಕ್ಕೆ ಬಿಗ್ ಬಾಸ್ ಅಂತ್ಯ ಹಾಡಿದ್ದಾರೆ.
ಇನ್ನೂ ಯಮುನಾ ಅವರು ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಪರಿಚಿತರಾಗಿದ್ದರು.ಆ ನಂತರ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಭರತನಾಟ್ಯ ಕಲಾವಿದೆಯಾಗಿ ಕೂಡ ಸೈ ಎನಿಸಿಕೊಂಡಿದ್ದಾರೆ.
ಕಿಚ್ಚ ಸುದೀಪ್ (Sudeep) ನಟನೆಯ ‘ಮ್ಯಾಕ್ಸ್’ (Max Film) ಸಿನಿಮಾ ರಿಲೀಸ್‌ಗೆ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಇದರ ನಡುವೆ ಸುದೀಪ್ ನಟಿಸಲಿರುವ ಮುಂದಿನ ಚಿತ್ರಕ್ಕಾಗಿ ಹೇಗೆ ತಯಾರಿ ಆಗುತ್ತಿದ್ದಾರೆ ಎಂಬುದನ್ನು ಫೋಟೋಶೂಟ್ ಮೂಲಕ ತಿಳಿಸಿದ್ದಾರೆ.
ರಗಡ್ ಲುಕ್‌ನಲ್ಲಿ ಪೋಸ್ ಕೊಟ್ಟಿರುವ ಸುದೀಪ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಿಲ್ಲ ರಂಗ ಭಾಷಾ ಚಿತ್ರಕ್ಕಾಗಿ ತಯಾರಿಯಾಗುತ್ತಿರುವ ಬಗ್ಗೆ ನಟ ತಿಳಿಸಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ:Thalapathy 69: ವಿಜಯ್ ಜೊತೆ ಕನ್ನಡದ ನಟಿ ಪ್ರಿಯಾಮಣಿ ಹೊಸ ಸಿನಿಮಾ
ಸಿನಿಮಾ ಮಾಡುವ ಬಗ್ಗೆ ಅಧಿಕೃತ ಘೋಷಣೆ ಆಗಿದೆ ಬಿಟ್ಟರೆ ಹೆಚ್ಚೆನೂ ಮಾಹಿತಿಯನ್ನು ಅನೂಪ್ ಭಂಡಾರಿ ಎಲ್ಲೂ ಬಿಟ್ಟು ಕೊಟ್ಟಿಲ್ಲ. ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಚಿತ್ರದ ಬಗ್ಗೆ ಏನಾದರೂ ಗುಡ್ ನ್ಯೂಸ್ ಸಿಗುತ್ತಾ? ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಈ ಸಿನಿಮಾದ ತಯಾರಿಯ ನಡುವೆ ಸುದೀಪ್ ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ನಿರೂಪಣೆ ಕೂಡ ಮಾಡುತ್ತಿದ್ದಾರೆ. ಶೋ ಜೊತೆ ಸಿನಿಮಾ ಕೆಲಸಗಳಿಗೂ ಸಮಯ ನೀಡುತ್ತಿದ್ದಾರೆ.