Tag: ಕಿಚ್ಚ ಸುದೀಪ್

  • ಕಿಚ್ಚ ಸುದೀಪ್‌ ಅಭಿನಯದ ‘ಬಿಲ್ಲ ರಂಗ ಬಾಷಾ’ ಸಿನಿಮಾ ಶೂಟಿಂಗ್‌ ಶುರು – BRB ಫಸ್ಟ್‌ ಲುಕ್‌ ರಿವೀಲ್‌

    ಕಿಚ್ಚ ಸುದೀಪ್‌ ಅಭಿನಯದ ‘ಬಿಲ್ಲ ರಂಗ ಬಾಷಾ’ ಸಿನಿಮಾ ಶೂಟಿಂಗ್‌ ಶುರು – BRB ಫಸ್ಟ್‌ ಲುಕ್‌ ರಿವೀಲ್‌

    ಕಿಚ್ಚ ಸುದೀಪ್‌ (Kichcha Sudeep) ಅಭಿನಯಿಸುತ್ತಿರುವ ಬಿಗ್‌ ಬಜೆಟ್‌ನ ಬಹುನಿರೀಕ್ಷಿತ ‘ಬಿಲ್ಲಾ ರಂಗ ಬಾಷಾ’ (Billa Ranga Baashaa) ಸಿನಿಮಾ ಚಿತ್ರೀಕರಣ ಇಂದಿನಿಂದ (ಏ.16) ಪ್ರಾರಂಭವಾಗಿದೆ. ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ ಆಗಿದೆ.

    ಸಿನಿಮಾ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಸುದೀಪ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ. ‘2209 AD BRB first blood’ ಎಂದು ಸಿನಿಮಾಗೆ ಟೈಟಲ್‌ ಇಡಲಾಗಿದೆ. ಪೋಸ್ಟರ್‌ನಲ್ಲಿ ಸುದೀಪ್ ಜಬರ್ದಸ್ತ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

    ಎರಡು ಚಾಪ್ಟರ್‌ಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಮೊದಲ ಚಾಪ್ಟರ್‌ಗೆ ‘ಫಸ್ಟ್ ಬ್ಲಡ್’ ಎಂದು ಚಿತ್ರತಂಡ ಕರೆದಿದೆ. ಅನೂಪ್ ಭಂಡಾರಿ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ.

  • ಕಪ್‌ ತಗೊಂಡು ಅತ್ತೆ ಮನೆಗೆ ಯಾವಾಗ ಹೋಗ್ತೀರಿ?- ಹನುಮಂತ ಹೇಳಿದ್ದೇನು?

    ಕಪ್‌ ತಗೊಂಡು ಅತ್ತೆ ಮನೆಗೆ ಯಾವಾಗ ಹೋಗ್ತೀರಿ?- ಹನುಮಂತ ಹೇಳಿದ್ದೇನು?

    – ಅತ್ತೆ ಮನೆ, ಮದುವೆಯಾಗೋ ಹುಡುಗಿ ಬಗ್ಗೆ ಕೇಳಿದ್ದಕ್ಕೆ ನಾಚಿನೀರಾದ ಬಿಗ್‌ ಬಾಸ್‌ ವಿನ್ನರ್‌

    ಬಿಗ್‌ ಬಾಸ್‌ ಕನ್ನಡ 11ರ (Bigg Boss Kannada 11) ವಿನ್ನರ್‌ ಹನುಮಂತ (Hanumantha) ಅವರು ಅತ್ತೆ ಮನೆ, ಮದುವೆಯಾಗುವ ಹುಡುಗಿ ಬಗ್ಗೆ ‘ಪಬ್ಲಿಕ್‌ ಟಿವಿ’ ಜೊತೆ ಮಾತನಾಡಿದ್ದಾರೆ.

    ಕಪ್‌ ಹಿಡಿದುಕೊಂಡು ಅತ್ತೆ ಮನೆಗೆ ಯಾವಾಗ ಹೋಗ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಹನುಮಂತ, ಅದನ್ನೂ ಹೇಳ್ತೀನಿ. ಮೊದಲು ಊರಿಗೆ ಹೋಗ್ತೀನಿ. ಆಮೇಲೆ ವಿಚಾರ ಮಾಡ್ತೀನಿ ಎಂದು ತಿಳಿಸಿದರು. ಅತ್ತೆ ಮನೆ ಮತ್ತು ಮದುವೆಯಾಗುವ ಹುಡುಗಿ ಬಗ್ಗೆ ಕೇಳುತ್ತಿದ್ದಂತೆ ಹನುಮಂತ ನಾಚಿ ನೀರಾದರು. ಇದನ್ನೂ ಓದಿ: ಸುದೀಪ್‌ ಸರ್‌ ರೀತಿ ಬಿಗ್‌ ಬಾಸ್‌ ಶೋ ನಡೆಸೋಕೆ ಯಾರಿಂದಲೂ ಆಗಲ್ಲ: ಹನುಮಂತ

    ಬಿಗ್‌ ಬಾಸ್‌ ಮನೆಯಲ್ಲಿದ್ದಾಗ, ‘ಕಪ್‌ ಗೆಲ್ಲೋದೆ.. ಅತ್ತೆ ಮನೆ ಮುಂದೆ ಹೋಗಿ ಹೆಣ್ಣು ಕೇಳೋದೆ’ ಅಂತ ಹನುಮಂತ ಡೈಲಾಗ್‌ ಹೊಡೆದಿದ್ದರು. ಅದು ಕೂಡ ತುಂಬಾ ವೈರಲ್‌ ಆಗಿತ್ತು.

    ಹನುಮಂತ ವಿನ್ನರ್‌ ಆದ ಬೆನ್ನಲ್ಲೇ ಮದುವೆಯ ಸಿಹಿ ಸುದ್ದಿ ಕೂಡ ಸಿಕ್ಕಿದೆ. ಶೀಘ್ರವೇ ಮಗನ ಮದುವೆ ಮಾಡುತ್ತೇವೆ. ಶುಭ ಕಾರ್ಯಕ್ಕೆ ಸುದೀಪ್‌ ಸರ್‌ ಅವರನ್ನೂ ಕರೆಯುತ್ತೇವೆ ಎಂದು ಹನುಮಂತ ತಂದೆ-ತಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ದೋಸ್ತ ನನ್ನ ಪಾಲಿನ ದೇವರು: ಧನರಾಜ್‌ ಬಗ್ಗೆ ಹನುಮಂತನ ಮನದಾಳ

  • ಬಿಗ್‌ ಬಾಸ್‌ ಶೋ ಕಪ್‌ ಗೆಲ್ತೀನಿ ಅಂತ ನನ್ನ ತಲೆಯಲ್ಲೇ ಇರಲಿಲ್ಲ: ವಿನ್ನರ್‌ ಹನುಮಂತ

    ಬಿಗ್‌ ಬಾಸ್‌ ಶೋ ಕಪ್‌ ಗೆಲ್ತೀನಿ ಅಂತ ನನ್ನ ತಲೆಯಲ್ಲೇ ಇರಲಿಲ್ಲ: ವಿನ್ನರ್‌ ಹನುಮಂತ

    – ರೊಟ್ಟಿ ಇಲ್ಲದೇ ತಲೆಯೇ ಆಪ್‌ ಆಗಿತ್ತು; ಬಿಗ್‌ ಬಾಸ್‌ ಮನೆ ಕಷ್ಟ ಇತ್ತು
    – ಬಿಗ್‌ ಬಾಸ್‌ ಮನೆಯಲ್ಲಿ ಜೀವನದ ಪಾಠ ಇದೆ

    ಬಿಗ್‌ ಬಾಸ್‌ ಕನ್ನಡ 11ರ (Bigg Boss Kannada 11) ವಿನ್ನರ್ ಆಗಿರುವ ಹನುಮಂತ (Hanumantha) ಅವರು ದೊಡ್ಮನೆ ಬಗ್ಗೆ ಹಲವು ವಿಚಾರಗಳನ್ನು ‘ಪಬ್ಲಿಕ್‌ ಟಿವಿ’ ಜೊತೆಗೆ ಹಂಚಿಕೊಂಡಿದ್ದಾರೆ.

    ಬಿಗ್‌ ಬಾಸ್‌ ಶೋ ಗೆಲ್ತೀನಿ ಅಂತ ನನ್ನ ತಲೆಯಲ್ಲೇ ಇರಲಿಲ್ಲ. ಆ ಕನಸೂ ಇರಲಿಲ್ಲ. ಹೋದೆ, ನನ್ನ ಪಾಡಿಗೆ ನಾನು ಆಟ ಆಡಿದೆ. ನಾನು ಜಾಸ್ತಿ ಮಾತನಾಡಲ್ಲ. ನನ್ನಷ್ಟಕ್ಕೆ ನಾನು ಆಟ ಆಡಿದೆ ಅಷ್ಟೆ ಎಂದು ಹನುಮಂತ ತಿಳಿಸಿದರು. ಇದನ್ನೂ ಓದಿ: ‌’ಬಿಗ್‌ ಬಾಸ್’ ಗೆಲ್ಲುತ್ತೇನೆ ಎಂದಿದ್ದ ಗೆದ್ದೇ ಬಿಟ್ಟ: ಹನುಮಂತನ ತಾಯಿ ಸಂತಸ

    ವೈಟ್‌ ಕಾರ್ಡ್‌, ಪೈಟ್‌ ಕಾರ್ಡ್‌ ಅಂತ ಗೊತ್ತಿಲ್ಲ. ಅದು ತಲೆಯಲ್ಲೇ ಇರಲಿಲ್ಲ. ‘ಸುದೀಪ್‌ ಸರ್‌ ಇದೇ ಸೀಸನ್‌ ಲಾಸ್ಟ್‌ ಅಂತ ಬರೆದುಕೊಂಡಿದ್ದಾರೆ. ಒಮ್ಮೆ ಹೋಗಿ ಬಾ’ ಅಂತ ಸ್ನೇಹಿತರು ಒತ್ತಾಯಿಸಿದ್ದರು. ಕಳೆದ ಎರಡ್ಮೂರು ಸೀಸನ್‌ನಿಂದಲೂ ನನಗೆ ಕರೆ ಬರುತ್ತಿತ್ತು. ಶೋ ಬಗ್ಗೆ ನನಗೆ ಗೊತ್ತಿರಲಿಲ್ಲ. ಅದಕ್ಕೆ ಬರೋದಿಲ್ಲ ಅಂತ ಆಗ ಹೇಳಿದ್ದೆ. ಈ ಸಲ ನನ್ನ ಸ್ನೇಹಿತರ ಒತ್ತಾಯಕ್ಕೆ ಬಂದಿದ್ದೆ. ಶೋಗೆ ಅರ್ಧಕ್ಕೆ ಹೋದರೂ ನನಗೆ ಬಹಳ ಖುಷಿಯಾಯಿತು ಎಂದರು.

    ಅಲ್ಲಿ ರೊಟ್ಟಿ ಸಿಗುತ್ತಿರಲಿಲ್ಲ. ಅದೊಂದು ತಲೆನೋವಾಗಿತ್ತು ನನಗೆ. ಬರೀ ಚಪಾತಿ, ಅನ್ನ-ಸಾರು ತಿನ್ನುವ ಪರಿಸ್ಥಿತಿ ಇತ್ತು. ಚಿಕನ್‌ ಎಲ್ಲಾ ಬರ್ತಿತ್ತು. ಅದನ್ನು ತಿನ್ನುತ್ತಿದ್ದೆವು. ಆದರೆ, ಅವ್ವ-ಅಪ್ಪ ತಂದ ರೊಟ್ಟಿಯನ್ನು ಎಲ್ಲರೂ ಖುಷಿಯಿಂದ ತಿಂದರು. ಶೇಂಗಾ ಚಟ್ನಿ, ಕಾಳಿನ ಪಲ್ಯ ಎಲ್ಲವನ್ನೂ ಮಾಡಿಕೊಂಡು ಬಂದಿದ್ದರು. ಬಹಳ ಖುಷಿಯಾಯಿತು. ಎಲ್ಲರೂ ಖುಷಿಯಾದರು ಎಂದು ಹೇಳಿದರು. ಇದನ್ನೂ ಓದಿ: ಮಗನ ಮದುವೆಗೆ ಸುದೀಪ್‌ ಸರ್‌ನ ಕರೆಯುತ್ತೇವೆ: ಹನುಮಂತ ತಂದೆ ರಿಯಾಕ್ಷನ್‌

    ರೊಟ್ಟಿ ಇಲ್ಲದೇ ತಲೆ ಆಪ್‌ ಆಗಿತ್ತಣ್ಣೊ. ಒಮ್ಮೊಮ್ಮೆ ಊಟದ ಸಂಬಂಧ ಬೇಜಾರಾಗಿತ್ತು. ರೊಟ್ಟಿ ತಿನ್ನುವ ನಮಗೆ ಚಪಾತಿ ಅಷ್ಟು ಒಗ್ಗಲ್ಲ. ನಮಗೆ ರೊಟ್ಟಿ-ಖಾರ ಇದ್ದರೆ ಸಾಕು. ಅಲ್ಲಿನ ಎಸಿ ಕೂಟ ಆಗುತ್ತಿರಲಿಲ್ಲ. ಬಿಗ್‌ ಬಾಸ್‌ ಮನೆ ಕಷ್ಟ. ಆದರೆ, ಈಗ ನನಗೆ ಅನಿಸುತ್ತಿದೆ. ಬಿಗ್‌ ಬಾಸ್‌ ಮನೆ ಮಿಸ್‌ ಮಾಡ್ಕೊತ್ತಿದ್ದೀನಿ ಅಂತ. ಅಲ್ಲಿ ಕಲಿಯುವಂತಹದ್ದು ಬಹಳ ಇದೆ. ಅಲ್ಲಿ ಹೋದರೆ ಏನೈತೆ ಅಂತ ಎಲ್ಲರೂ ಕೇಳ್ತಾರೆ. ಅಲ್ಲಿ ಜೀವನದ ಪಾಠ ಇದೆ ಎಂದರು.

  • BBK 11| ಹನುಮಂತು ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತುನೇ ಗೆಲ್ತಿದ್ರು: ರಜತ್ ಕಿಶನ್

    BBK 11| ಹನುಮಂತು ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತುನೇ ಗೆಲ್ತಿದ್ರು: ರಜತ್ ಕಿಶನ್

    ಬೆಂಗಳೂರು: ಹನುಮಂತು (Hanumantha) ಮುಂದೆ ಗಾಂಧೀಜಿ ನಿಂತಿದ್ದರು ಹನುಮಂತುನೇ ಗೆಲ್ಲುತ್ತಿದ್ದರು ಎಂದು ಬಿಗ್ ಬಾಸ್ ಸೀಸನ್ 11ರ (Bigg Boss 11) ಸೆಕೆಂಡ್ ರನ್ನರ್ ಅಪ್ ರಜತ್ ಕಿಶನ್ (Rajath Kishan) ಸಂತಸ ವ್ಯಕ್ತಪಡಿಸಿದರು.

    ಬಿಗ್ ಬಾಸ್ 11ರ ಗ್ರ್ಯಾಂಡ್ ಫಿನಾಲೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಗ್ ಬಾಸ್ ಜರ್ನಿ ಚೆನ್ನಾಗಿತ್ತು. ಶಾರ್ಟ್ ಟೈಂನಲ್ಲಿ ಇಷ್ಟೊಂದು ಪ್ರೀತಿ ವಿಶ್ವಾಸ ಸಿಕ್ಕಿರೋದು ಖುಷಿ ಇದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇವರಾಣೆ ಗೆಲ್ತೀನಿ ಅಂತ ಬಂದಿರಲಿಲ್ಲ, ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ: ಹನುಮಂತ

    ಇನ್ನು ಮಾಜಿ ಪ್ರೇಯಸಿ ಜೊತೆ ಪೋಟೋ ವೈರಲ್ ಮಾಡಿ ಟ್ರೋಲ್ ಪೇಜ್‌ಗಳು ಬೆದರಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಹೊರಗಡೆ ಬಂದಿದ್ದೀನಲ್ಲ, ನೋಡಿಕೊಳ್ಳುತ್ತೇನೆ ಬಿಡಿ ಎಂದರು. ಇದನ್ನೂ ಓದಿ: BBK 11: ಬಿಗ್‌ ಬಾಸ್‌ ಟ್ರೋಫಿ ಗೆದ್ದು ಸುದೀಪ್‌ ಕಾಲಿಗೆ ಬಿದ್ದ ಹನುಮಂತ

    ಬಿಗ್ ಬಾಸ್ ಸೀಸನ್ 11ರಲ್ಲಿ ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದ್ರೆ, ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ಇನ್ನು ಬಿಗ್ ಬಾಸ್ 11ರ ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ರಜತ್ ಅವರು ಮನೆಯಲ್ಲಿ ವೈಲ್ಡ್ ಆಗಿ ಆಟ ಆಡಿ ಸೆಕೆಂಡ್ ರನ್ನರ್ ಅಪ್ ಪಟ್ಟ ಸ್ವೀಕರಿಸಿದ್ದಾರೆ.‌ ಇದನ್ನೂ ಓದಿ: BBK 11: ಹನುಮಂತ ಟ್ರೋಫಿ ಗೆದ್ದಿರೋದು ಖುಷಿಯಿದೆ- ತ್ರಿವಿಕ್ರಮ್‌ ರಿಯಾಕ್ಷನ್‌

  • BBK 11: ಬಿಗ್‌ ಬಾಸ್‌ ಟ್ರೋಫಿ ಗೆದ್ದು ಸುದೀಪ್‌ ಕಾಲಿಗೆ ಬಿದ್ದ ಹನುಮಂತ

    BBK 11: ಬಿಗ್‌ ಬಾಸ್‌ ಟ್ರೋಫಿ ಗೆದ್ದು ಸುದೀಪ್‌ ಕಾಲಿಗೆ ಬಿದ್ದ ಹನುಮಂತ

    – ಬಿಗ್ ಬಾಸ್ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ವಿನ್ನರ್ ಆಗಿದ್ದು ಇದೇ ಮೊದಲು
    – ಜವಾರಿ ಹೈದ ಈಗ 50 ಲಕ್ಷದ ಒಡೆಯ

    ಬಿಗ್‌ ಬಾಸ್‌ ಕನ್ನಡ 11ರ ವಿನ್ನರ್‌ ಆಗಿ ಹನುಮಂತ ಹೊರಹೊಮ್ಮಿದ್ದಾರೆ. ಟ್ರೋಫಿ ಗೆದ್ದ ಖುಷಿಯಲ್ಲಿ ಕಿಚ್ಚ ಸುದೀಪ್‌ ಅವರ ಕಾಲಿಗೆ ಬಿದ್ದು ಹಳ್ಳಿ ಹೈದ ಆಶೀರ್ವಾದ ಪಡೆದಿದ್ದಾರೆ.

    ಬಿಗ್‌ ಬಾಸ್‌ ಫಿನಾಲೆ ಕೊನೆ ಹಂತ ರೋಚಕತೆಯಿಂದ ಕೂಡಿತ್ತು. ಯಾರು ವಿನ್ನರ್‌ ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಸುದೀಪ್‌ ತಮ್ಮ ಬಲಭಾಗಕ್ಕೆ ಹನುಮಂತ ಹಾಗೂ ಎಡ ಭಾಗಕ್ಕೆ ತ್ರಿವಿಕ್ರಮ್‌ ನಿಂತಿದ್ದರು.

    ಕೊನೆಗೂ ಸುದೀಪ್‌ ಅವರು ಹನುಮಂತನ ಕೈ ಎತ್ತುವ ಮೂಲಕ ವಿನ್ನರ್‌ ಎಂದು ಘೋಷಿಸಿದರು. ಗೆದ್ದ ಖುಷಿಯಲ್ಲಿ ಹನುಮಂತ, ಸುದೀಪ್‌ ಕಾಲಿಗೆ ಬಿದ್ದು ನಮಸ್ಕರಿಸಿದರು. ಇತ್ತ ಹನುಮಂತನ ಫ್ಯಾನ್ಸ್‌ ಸಂಭ್ರಮಾಚರಣೆ ಮಾಡಿದರು.

    ಬಿಗ್ ಬಾಸ್ ಸೀಸನ್ ಹನ್ನೊಂದರ ಟ್ರೋಫಿ ಎತ್ತಿದ ಹನುಮಂತನಿಗೆ ಐದೂವರೆ ಕೋಟಿ ಕನ್ನಡಿಗರ ಆಶೀರ್ವಾದ ಸಿಕ್ಕಿದೆ. ಬಿಗ್ ಬಾಸ್ ಶುರುವಾದ ಹದಿನೈದು ದಿನಗಳ ನಂತರ ವೈಲ್ಡ್ ಕಾರ್ಡ್ ಮೂಲಕ ಹನುಮಂತ ಎಂಟ್ರಿ ಕೊಟ್ಟಿದ್ದರು.

    ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ವಿನ್ನರ್ ಆಗಿದ್ದು ಇದೇ ಮೊದಲು. ಈಗ ಹನುಮಂತ 50 ಲಕ್ಷದ ಒಡೆಯನಾಗಿದ್ದಾರೆ. ಜವಾರಿ ಹೈದ ಭಾರೀ ವೋಟ್ ಗಳಿಸಿ ದಾಖಲೆ ಸೃಷ್ಟಿಸಿದ್ದಾರೆ.

  • ದಾನ-ಧರ್ಮ ಬೇಕು.. ದಡ್ಡತನ ಬೇಡ: ಲಕ್ಷ ಲಕ್ಷ ಹಣವನ್ನ ದಾನ ಮಾಡ್ತೀನಿ ಎಂದ ಮಂಜು ಕಿವಿ ಹಿಂಡಿದ ಸುದೀಪ್‌

    ದಾನ-ಧರ್ಮ ಬೇಕು.. ದಡ್ಡತನ ಬೇಡ: ಲಕ್ಷ ಲಕ್ಷ ಹಣವನ್ನ ದಾನ ಮಾಡ್ತೀನಿ ಎಂದ ಮಂಜು ಕಿವಿ ಹಿಂಡಿದ ಸುದೀಪ್‌

    – ಕಷ್ಟದಲ್ಲಿರೋರಿಗೆ ನೀವು ಕೊಡಬೇಕೆಂದಿದ್ದ ಹಣವನ್ನು ನಾನೇ ಕೊಡ್ತೀನಿ ಎಂದ ಕಿಚ್ಚ

    ‘ಬಿಗ್‌ ಬಾಸ್‌ ಕನ್ನಡ 11′ ರೋಚಕ ಹಂತದಲ್ಲಿದೆ. ಬಿಗ್‌ ಬಾಸ್‌ ಟ್ರೋಫಿ ಎತ್ತಿ ಹಿಡಿಯಬೇಕೆಂಬ ಆಸೆಯಲ್ಲಿದ್ದ ಉಗ್ರಂ ಮಂಜು ಅವರು ಎಲಿಮಿನೇಟ್‌ ಆಗುವ ಮೂಲಕ ನಿರಾಸೆ ಅನುಭವಿಸಿದರು. ಕೊನೆದಾಗಿ ಬಿಗ್‌ ಬಾಸ್‌ ವೇದಿಕೆಯಲ್ಲಿ ಮಾತನಾಡುವಾಗ, ತಮಗೆ ಬಹುಮಾನವಾಗಿ ಬಂದ ಹಣವನ್ನೆಲ್ಲ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಹೋಗಿ ಕಿಚ್ಚ ಸುದೀಪ್‌ ಅವರಿಂದ ಕಿವಿ ಹಿಂಡಿಸಿಕೊಂಡರು.

    ಬಿಗ್‌ ಬಾಸ್‌ ಮನೆಯಿಂದ ಟಾಪ್‌ 5 ಸ್ಪರ್ಧಿಯಾಗಿ ‘ಮಂಜಣ್ಣ’ ಹೊರಬಿದ್ದರು. ದೊಡ್ಮನೆಯಲ್ಲಿ ಮಂಜು ಆಟವನ್ನು ಸುದೀಪ್‌ ಅವರು ಕೊಂಡಾಡಿದರು. ‘ನೀವಿಲ್ಲದೇ ಬಿಗ್‌ ಬಾಸ್‌ 11 ಸೀಸನ್ ಅಪೂರ್ಣ ಆಗ್ತಿತ್ತು’ ಎನ್ನುವ ದೊಡ್ಡ ಕ್ರೆಡಿಟ್‌ ಅನ್ನು ಮಂಜುಗೆ ಕೊಟ್ಟರು.

    ಐದನೇ ಸ್ಥಾನದಲ್ಲಿದ್ದ ಮಂಜುಗೆ ಅನೇಕ ಬಹುಮಾನಗಳು ಹರಿದುಬಂತು. ಎರಡು ಸಂಸ್ಥೆಯಿಂದ ಒಟ್ಟು 3 ಲಕ್ಷ ಹಣ ಬಂತು. ಮೊದಲು 2 ಲಕ್ಷ ರೂ. ಕ್ಯಾಶ್‌ ಪ್ರೈಸ್‌ ಸಿಕ್ಕಿತು. ಆದರೆ, ಆ ಹಣವನ್ನು ವಯಸ್ಸಾದ ತಾಯಂದಿರಿಗೆ ನೀಡುವುದಾಗಿ ಮಂಜು ವೇದಿಕೆಯಲ್ಲೇ ಘೋಷಿಸಿದರು. ಅವರ ತ್ಯಾಗಮಯಿ ಗುಣಕ್ಕೆ ಅಭಿಮಾನಿಗಳಿಂದ ಚಪ್ಪಾಳೆ ಸುರಿಮಳೆ ಹರಿಯಿತು.

    ಮತ್ತೆ 1 ಲಕ್ಷ ರೂ. ಬಹುಮಾನ ಸಿಕ್ಕಿತು. ಆಗ, ‘ಇದು ಯಾರಿಗೆ’ ಎಂದು ಸುದೀಪ್‌ ಕಿಚಾಯಿಸಿದರು. ಆ ಹಣವನ್ನೂ ಊರಲ್ಲಿ ಯಾರಾದರು ರೈತರಿಗೆ ಸಹಾಯ ಮಾಡಿ ಅಪ್ಪ ಎಂದು ಮಂಜು ತಮ್ಮ ತಂದೆಗೆ ಹೇಳಿದರು. ತಕ್ಷಣ ತಡೆದ ಸುದೀಪ್‌ ಅವರು, ನಿಮ್ಮ ತಂದೆಯೇ ರೈತರು.. ನೀವೆ ಇಟ್ಟುಕೊಳ್ಳಿ ಸರ್‌ ಎಂದು ಮಂಜು ಅವರ ತಂದೆಗೆ ತಿಳಿಸಿದರು.

    ‘ದಾನ-ಧರ್ಮ ಬೇಕು, ದಡ್ಡತನ ಬೇಡ.. 2 ಲಕ್ಷ ಕೊಟ್ಟಾಯ್ತು. ಈಗ ಸ್ವಲ್ಪ ಸುಮ್ನಿರಿ’ ಎಂದು ಸುದೀಪ್‌ ಅವರು ತಡೆದರು. ಮಂಜು ಅವರು ಕೊಡಬೇಕು ಎಂದುಕೊಂಡಿದ್ದ 2 ಲಕ್ಷ ಹಣವನ್ನು ನಾನೇ ಸಹಾಯ ಮಾಡ್ತೀನಿ. ಗಿಫ್ಟ್‌ ಆಗಿ ಬಂದ ಹಣವನ್ನು ಗೌರವಪೂರ್ವಕವಾಗಿ ಇಟ್ಕೊಳ್ಳಿ ಎಂದು ಮಂಜುಗೆ ಸುದೀಪ್‌ ಮನವರಿಕೆ ಮಾಡಿದರು.

    ಸಂಸ್ಥೆಯಿಂದ ಗೌರವಪೂರ್ವಕವಾಗಿ ಹಣ ನಿಮಗೆ ಬಂದಿದೆ. ಅದನ್ನು ನಿಮ್ಮ ತಂದೆ-ತಾಯಿಗೆ ಕೊಡಿ. ಕೊನೆಗೆ ಅವರಿಬ್ಬರು ಏನು ನಿರ್ಧಾರ ಮಾಡ್ತಾರೋ ಮಾಡ್ಲಿ ಎಂದು ಮಂಜುಗೆ ಕಿಚ್ಚ ಬುದ್ದಿಮಾತು ಹೇಳಿದರು. ಈ ವೇಳೆ, ಫ್ಯಾನ್ಸ್‌ ‘ಕಿಚ್ಚ.. ಕಿಚ್ಚ..’ ಎಂದು ಕೂಗಿ ಮೆಚ್ಚುಗೆ ವ್ಯಕ್ತಪಡಿಸಿದರು.

  • ಚಲನಚಿತ್ರ ರಾಜ್ಯ ಪ್ರಶಸ್ತಿ ನಿರಾಕರಿಸಿದ ನಟ ಸುದೀಪ್‌

    ಚಲನಚಿತ್ರ ರಾಜ್ಯ ಪ್ರಶಸ್ತಿ ನಿರಾಕರಿಸಿದ ನಟ ಸುದೀಪ್‌

    ರಾಜ್ಯ ಸರ್ಕಾರ ಘೋಷಿಸಿದ್ದ ಚಲನಚಿತ್ರ ರಾಜ್ಯ ಪ್ರಶಸ್ತಿಯನ್ನು ನಟ ಕಿಚ್ಚ ಸುದೀಪ್‌ ನಿರಾಕರಿಸಿದ್ದಾರೆ.

    2019ರ ಕ್ಯಾಲೆಂಡರ್‌ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು (2019 State Fim Awards) ಕರ್ನಾಟಕ ಸರ್ಕಾರವು ಘೋಷಿಸಿತ್ತು. ‘ಪೈಲ್ವಾನ್‌’ ಸಿನಿಮಾಗಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಸುದೀಪ್‌ (Sudeep) ಆಯ್ಕೆ ಮಾಡಿತ್ತು. ಆದರೆ ರಾಜ್ಯ ಪ್ರಶಸ್ತಿ ನಿರಾಕರಿಸಿ ಈ ಕುರಿತು ಸುದೀರ್ಘವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಸೋಶಿಯಲ್‌ ಮೀಡಿಯಾದಲ್ಲಿ ಕಿಚ್ಚ ಪ್ರತಿಕ್ರಿಯಿಸಿ, ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಒಂದು ಸೌಭಾಗ್ಯ. ಈ ಗೌರವಕ್ಕಾಗಿ ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಪ್ರಶಸ್ತಿಗಳನ್ನು ನಾನು ಎಂದೂ ನಿರೀಕ್ಷಿಸಲ್ಲ. ಹಲವು ವರ್ಷಗಳಿಂದ ನಾನು ಪ್ರಶಸ್ತಿ ಸ್ವೀಕರಿಸೋದನ್ನು ನಿಲ್ಲಿಸಿದ್ದೇನೆ. ವೈಯಕ್ತಿಕ ಕಾರಣಗಳಿಗಾಗಿ ನಾನು ಈ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ. ಅನೇಕ ಅರ್ಹ ನಟರು ಸಿನಿಮಾಗಾಗಿ ಕಷ್ಟಪಟ್ಟಿದ್ದಾರೆ. ಅವರಲ್ಲಿ ಒಬ್ಬರು ಈ ಪ್ರಶಸ್ತಿ ಸ್ವೀಕರಿಸುವುದನ್ನು ನೋಡಲು ಖುಷಿ ಕೊಡುತ್ತದೆ. ನನ್ನ ಗುರಿ ಜನರನ್ನು ರಂಜಿಸುವುದು. ಅದು ಯಾವಾಗಲೂ ಪ್ರಶಸ್ತಿಗಳ ನಿರೀಕ್ಷೆಯಿಲ್ಲದೆಯೇ ಇರುತ್ತದೆ ಎಂದು ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ನನ್ನನ್ನು ರಾಜ್ಯ ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದಕ್ಕಾಗಿ ನಾನು ಪ್ರತಿಯೊಬ್ಬ ಜ್ಯೂರಿ ಸದಸ್ಯರಿಗೆ ಕೃತಜ್ಞನಾಗಿದ್ದೇನೆ. ನನ್ನ ಕಲೆಯನ್ನು ನೀವು ಗುರುತಿಸಿರೋದು ನನ್ನ ಕೆಲಸಕ್ಕೆ ಸಿಕ್ಕಿರುವ ತಕ್ಕ ಪ್ರತಿಫಲ. ನನ್ನ ನಿರ್ಧಾರವು ಬೇಸರವುಂಟು ಮಾಡಬಹುದು. ತೀರ್ಪುಗಾರರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನೀವು ನನ್ನ ಆಯ್ಕೆಯನ್ನು ಗೌರವಿಸುತ್ತೀರಿ ಹಾಗೂ ನಾನು ಆಯ್ಕೆ ಮಾಡಿದ ಹಾದಿಯಲ್ಲಿ ನನ್ನನ್ನು ಬೆಂಬಲಿಸುತ್ತೀರಿ ಎಂದು ನಾನು ನಂಬುತ್ತೇನೆ. ಮತ್ತೊಮ್ಮೆ, ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ತೀರ್ಪುಗಾರರ ಗೌರವಾನ್ವಿತ ಸದಸ್ಯರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ನಟ ಬರೆದುಕೊಂಡಿದ್ದಾರೆ.

  • ದರ್ಶನ್, ಯಶ್, ಉಪ್ಪಿ ಸರ್, ಶಿವಣ್ಣ ಸೇರಿದ್ರೆನೆ ಕನ್ನಡ ಚಿತ್ರರಂಗ – ಸುದೀಪ್‌

    ದರ್ಶನ್, ಯಶ್, ಉಪ್ಪಿ ಸರ್, ಶಿವಣ್ಣ ಸೇರಿದ್ರೆನೆ ಕನ್ನಡ ಚಿತ್ರರಂಗ – ಸುದೀಪ್‌

    – ದರ್ಶನ್‌-ನಾನು ಕಷ್ಟಪಟ್ಟು ಮೇಲೆ ಬಂದಿದ್ದೇವೆ
    -‌ ಹಿಂದೆ ದರ್ಶನ್‌ ಫ್ಯಾನ್ಸ್‌ಗೆ ಬೈಬೇಡಿ ಅಂತ ನಾನೇ ಹೇಳಿದ್ದೆ ಎಂದ ಕಿಚ್ಚ

    ಬೆಂಗಳೂರು: ಯಶ್, ದರ್ಶನ್ (Darshan), ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ. ಅದರ ಹೊರತಾಗಿ ನಾವು ಯಾರಿಗೂ ಟಾಂಟ್‌ ಕೊಡಲ್ಲ, ಯಾಕೆ ಕೊಡಬೇಕು ಎಂದು ನಟ ಕಿಚ್ಚ ಸುದೀಪ್‌ (Kichcha Sudeep) ಹೇಳಿದ್ದಾರೆ.

    ಮ್ಯಾಕ್ಸ್‌ ಸಿನಿಮಾದ ಸಕ್ಸಸ್‌ ಮೀಟ್‌ನಲ್ಲಿ ಮಾತನಾಡಿದ ಕಿಚ್ಚ ಸುದೀಪ್‌, ʻಬಾಸ್ ಕಾಲ ಮುಗಿತು ಮ್ಯಾಕ್ಸ್ ಮಾಸ್ ಆಟ ಶುರುʼ ಕೇಕ್ ಕಂಟ್ರೋವರ್ಸಿಗೆ (Cake Controversy) ಕ್ಲಾರಿಟಿ ಕೊಟ್ಟಿದ್ದಾರೆ.

    ಯಶ್, ದರ್ಶನ್, ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ. ಇದೆ ದರ್ಶನ್ ಫ್ಯಾನ್ಸ್ ಬಗ್ಗೆ ಹೇಳ್ದಾಗ ನಾನು ಫ್ಯಾನ್ಸ್‌ಗೆ ಬೈಬೇಡಿ ಅಂದಿದ್ದೆ. ಅವರು ನೋವಿನಲ್ಲಿದ್ದಾರೆ ಏನ್‌ ಮಾತಡಬೇಕು ಅಂತ ಗೊತ್ತಾಗ್ತಿಲ್ಲ ಅಂತ ಹೇಳಿದೆ. ನಾವ್ಯಾಕೆ ಟಾಂಟ್‌ ಕೊಡಬೇಕು? ಯಶ್, ಶಿವಣ್ಣ, ಧ್ರುವ ಉಪ್ಪಿಗೆ ಬಾಸ್ ಅಂತ ಕರಿಯೋದಿಲ್ವಾ? ನನಗೂ ದರ್ಶನ್‌ಗೂ ಏನು ಇಲ್ಲ ಸರ್. ದರ್ಶನ್ ನಾನು ಇಬ್ರು ಕಷ್ಟ ಪಟ್ಟು ಮೇಲೆ ಬಂದಿದ್ದೀವಿ. ನನ್ನ ಫ್ಯಾನ್ಸ್ ಎಲ್ಲಾ ಹೀರೋಗಳ ಸಿನಿಮಾ ನೋಡ್ತಾರೆ. ಕೆಟ್ಟ ಅಹಂಕಾರ ನಮ್ಮಲಿ ಇದೆ ಅಂದು ಕೊಂಡಿರೋದೇ ತಪ್ಪು ಎಂದು ಹೇಳಿದ್ದಾರೆ.

    ಟಾಂಟ್ ಯಾಕ್ ಕೊಡ್ಬೇಕು ನಾವು.. ನಾವೇನು ಚಕ್ರವರ್ತಿಗಳಾ..? ಸಿನಿಮಾ ಮಾಡೋಣ ಖುಷಿ ಪಡೋಣ ಅಷ್ಟೇ. ಯಾರಿಗೆ ಟಾಂಗ್ ಕೊಡ್ತಾರೋ..? ಯಶ್ ಗೆ ಯಶ್ ಬಾಸ್ ಅಂತಾ ಕರಿಯೊಲ್ವಾ..? ಧ್ರುವಗೆ ಧ್ರುವ ಬಾಸ್ ಅಂತಾ ಕರಿಯಲ್ವಾ? ಶಿವಣ್ಣಗೆ ಶಿವಣ್ಣ ಬಾಸ್ ಅಂತಾ ಕರಿಯಲ್ವಾ? ಉಪ್ಪಿ ಬಾಸ್ ಅಂತಾ ಕರಿಯಲ್ವಾ..? ಒಂದು ಸಿನಿಮಾ ಹಿಟ್‌ ಆದಾಗ ಇನ್ನಷ್ಟು ಒಳ್ಳೆ ಸಿನಿಮಾ ಮಾಡೋಣ, ಚಿತ್ರರಂಗದ ಬೆಳವಣಿಗೆಗೆ ಶ್ರಮಿಸೋಣ. ನಾನು ನಮ್ ತಂದೆಗೆ ಬಾಸ್ ಅಂತಾ ಕರಿಯೋದು.. ಕನ್ನಡ ಚಿತ್ರರಂಗ ಮುಖ್ಯನಾ..? ನಾನು ಮುಖ್ಯನಾ..? ಇದೆಲ್ಲವನ್ನು ಅರ್ಥಮಾಡಿಕೊಳ್ಳಬೇಕು ಎಂದು ಸುದೀಪ್‌ ಹೇಳಿದ್ದಾರೆ.

  • ಮೈಸೂರಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ಕಿಚ್ಚ ಸುದೀಪ್

    ಮೈಸೂರಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ಕಿಚ್ಚ ಸುದೀಪ್

    – ನೆಚ್ಚಿನ ನಟನನ್ನು ಕಂಡು ಫ್ಯಾನ್ಸ್ ಶಿಳ್ಳೆ, ಚಪ್ಪಾಳೆ

    ಮ್ಯಾಕ್ಸ್ ಸಿನಿಮಾ ಯಶಸ್ವಿ ಪ್ರದರ್ಶನ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ (Kiccha Sudeep) ಭಾನುವಾರ ಚಾಮುಂಡಿ ಬೆಟ್ಟಕ್ಕೆ (Chamundi Hill) ಭೇಟಿ ನೀಡಿ ದೇವಿ ದರ್ಶನ ಪಡೆದಿದ್ದಾರೆ.

    ಬೆಳಗ್ಗೆಯೇ ಮೈಸೂರಿಗೆ ಭೇಟಿ ನೀಡಿದ ಅವರು ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನೆಚ್ಚಿನ ನಟ ಬರುವುದನ್ನು ತಿಳಿಯುತ್ತಿದ್ದಂತೆ ಬೆಟ್ಟದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಭಾವಿ ಪತ್ನಿ ಜೊತೆ ನಟ ಡಾಲಿ ಧನಂಜಯ್‌ ಭೇಟಿ – ಲಗ್ನ ಪತ್ರಿಕೆಗೆ ವಿಶೇಷ ಪೂಜೆ ಸಲ್ಲಿಕೆ

    ಕಿಚ್ಚ ಸುದೀಪ್ ನೋಡಿ ಫ್ಯಾನ್ಸ್ ಶಿಳ್ಳೆ ಹೊಡೆದು ಜೈಕಾರ ಕೂಗಿದರು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಪೂಜೆ ಬಳಿಕ ಸುದೀಪ್ ಹೊರಬಂದು ನೆರೆದಿದ್ದ ಅಭಿಮಾನಿಗಳತ್ತ ಕೈಬೀಸಿದರು. ನಟನನ್ನು ಕಂಡು ಫ್ಯಾನ್ಸ್ ಸಂತಸ ವ್ಯಕ್ತಪಡಿಸಿದರು.

    ‘ಮ್ಯಾಕ್ಸ್’ ಸಿನಿಮಾ ಇದೇ ಡಿ.25 ರಂದು ರಾಜ್ಯಾದ್ಯಂತ ತೆರೆ ಕಂಡಿತು. ರಿಲೀಸ್ ಆಗಿ 4 ದಿನವನ್ನು ಪೂರೈಸಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಇದನ್ನೂ ಓದಿ: ಇನ್ಮುಂದೆ ಡೈರೆಕ್ಷನ್‌ಗೆ ಜಾಸ್ತಿ ಗ್ಯಾಪ್ ಕೊಡಲ್ಲ: ‘ಯುಐ’ ಸಕ್ಸಸ್ ಮೀಟ್‌ನಲ್ಲಿ ಉಪ್ಪಿ ಮಾತು

  • ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಕಿಚ್ಚ

    ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಕಿಚ್ಚ

    ಚಿತ್ರದುರ್ಗ: ಕನ್ನಡ ಚಿತ್ರರಂಗದಲ್ಲಿ (Kannada Film Industry) ಸದಾ ಒಗ್ಗಟ್ಟು ಹೀಗೆ ಇರಲಿ ಎಂದು ಬಯಸೋನು ನಾನು ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಒಗ್ಗಟ್ಟಿನ ಮಂತ್ರ ಜಪಿಸಿದರು.

    ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ‘ಮ್ಯಾಕ್ಸ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಅದ್ಧೂರಿಯಾಗಿ ನಡೆಯಿತು. ಈ ವೇಳೆ ನಗರದ ಜಗದ್ಗುರು ಜಯದೇವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರ ದುರ್ಗದ ಸಹಸ್ರಾರು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ವಲಸೆ ಹೆಚ್ಚಲಿದೆ – ನಾರಾಯಣಮೂರ್ತಿ ಆತಂಕ

    ಹುಚ್ಚ ಸಿನಿಮಾದಿಂದ ಪ್ರಾರಂಭವಾದ ನಟ ಸುದೀಪ್ ಹಾಗೂ ಚಿತ್ರದುರ್ಗದೊಂದಿಗಿನ ಅವರ ನಂಟಿನ ವಿಶೇಷ ವೀಡಿಯೋವನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಇದೇ ವೇಳೆ ಚಿತ್ರದುರ್ಗದಲ್ಲಿ ಸುದೀಪ್ ಅವರ ‘ಮ್ಯಾಕ್ಸ್’ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ – ಕಾರ್ಯಕರ್ತರನ್ನು ಕಂಡು ಸಿ.ಟಿ ರವಿ ಭಾವುಕ

    ಈ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಕಿಚ್ಚ, ಈ ಹಿಂದೆ ದುರ್ಗಕ್ಕೆ ಬರುತ್ತೇನೆ ಎಂದು ಮಾತು ಕೊಟ್ಟಿದ್ದೆ. ಒಬ್ಬನೇ ಬಂದಿಲ್ಲ. ಈಗ ಕುಟುಂಬ ಸಮೇತ ಬಂದಿದ್ದೇನೆ. ಹಾಗೆಯೇ ಚಿತ್ರದುರ್ಗಕ್ಕೆ ಪ್ರತಿಸಲ ಬರುವಾಗಲೂ ಬಹಳ ಸಂತೋಷವಾಗುತ್ತದೆ. ಹುಚ್ಚ ಸಿನಿಮಾ ಯಾರೂ ಮರೆಯಲು ಸಾಧ್ಯವಿಲ್ಲ. ಅಂಥದ್ದೊಂದು ಪ್ರೀತಿಯನ್ನು ಚಿತ್ರದುರ್ಗ ಕೊಟ್ಟಿದೆ ಎಂದು ಸ್ಮರಿಸಿದರು. ಇದನ್ನೂ ಓದಿ: ವಿಚಾರಣೆಗೆ ಹಾಜರಾಗುವಂತೆ ರಾಹುಲ್‌ಗೆ ಕೋರ್ಟ್‌ ಸಮನ್ಸ್‌

    ಜೊತೆಗೆ ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ಇರೋದನ್ನು ನೋಡೋನು ನಾನು. ನಮ್ಮಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿವೆ. ಹೀಗಾಗಿ ನೀವೆಲ್ಲರೂ ಹೊಸ ಪ್ರತಿಭೆಗಳಿಗೆ ಸಪೋರ್ಟ್ ಮಾಡಬೇಕು ಎಂದರು. ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್‌ಗೆ ಮತ್ತೆ ದೆಹಲಿ ಟ್ಯಾಬ್ಲೋ ತಿರಸ್ಕಾರ – ಆಪ್‌, ಬಿಜೆಪಿ ನಡುವೆ ವಾಗ್ವಾದ

    ಈ ಕಾರ್ಯಕ್ರಮದಲ್ಲಿ ಸುದೀಪ್ ಪತ್ನಿ ಪ್ರಿಯಾ ಸುದೀಪ್, ಮಗಳು ಸಾನ್ವಿ, ಅಕ್ಕನ ಮಗ ಸಂಚಿತ್ ಕೂಡಾ ಭಾಗವಹಿಸಿದ್ದರು. ಇವರೊಂದಿಗೆ ನಾಯಕ ನಟರಾದ ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ನಿರ್ದೇಶಕರಾದ ಎ.ಪಿ.ಅರ್ಜುನ್, ರೋಹಿತ್ ಪದಕಿ, ಅನೂಪ್ ಭಂಡಾರಿ, ಶ್ರೇಯಸ್ ಮಂಜು, ನಿರೂಪ್ ಭಂಡಾರಿ ಮತ್ತಿತರರು ಭಾಗವಹಿಸಿದ್ದರು. ಇದನ್ನೂ ಓದಿ: ಮಂಡ್ಯ| ಮೂರು ದಿನಗಳ ಅಕ್ಷರ ಜಾತ್ರೆಗೆ ತೆರೆ

    ನಟ ಯುವ ರಾಜ್‌ಕುಮಾರ್ ಹಾಗು ಡಾಲಿ ಧನಂಜಯ ಕೂಡ ಸುದೀಪ್ ಅವರ ಮೇಲೆ ಅವರ ಅಭಿಮಾನಿಗಳು ತೋರಿದ ಪ್ರೀತಿ ಹಾಗೂ ಅಭಿಮಾನಕ್ಕೆ ಫುಲ್ ಫಿದಾ ಆದರು. ಸುದೀಪ್ ಅವರ ಒಗ್ಗಟ್ಟಿನ ಗುಣವನ್ನು ಶ್ಲಾಘಿಸಿದರು. ಇದನ್ನೂ ಓದಿ: ಉಪನ್ಯಾಸಕನ ಮೇಲೆ ವಿದ್ಯಾರ್ಥಿ, ಪೋಷಕರಿಂದ ಹಲ್ಲೆ – ದೂರು ದಾಖಲು