Tag: ಕಿಚ್ಚ ಸುದೀಪ್

  • ಸುದೀಪ್ ಹುಟ್ಟುಹಬ್ಬಕ್ಕೆ ಬಿಲ್ಲ ರಂಗ ಬಾಷಾ ಫಸ್ಟ್ ಲುಕ್ ಪೋಸ್ಟರ್

    ಸುದೀಪ್ ಹುಟ್ಟುಹಬ್ಬಕ್ಕೆ ಬಿಲ್ಲ ರಂಗ ಬಾಷಾ ಫಸ್ಟ್ ಲುಕ್ ಪೋಸ್ಟರ್

    ಕಿಚ್ಚ ಸುದೀಪ್ (Kichcha Sudeep) ಅವರಿಗೆ ಇಂದು (ಸೆ.2) 52ನೇ ಹುಟ್ಟುಹಬ್ಬದ ಸಂಭ್ರಮ. ಈ ದಿನ ಊರಿನಲ್ಲಿ ಇರದ ಕಾರಣ ಸುದೀಪ್ ರಾತ್ರಿಯೇ ಅಭಿಮಾನಿಗಳ ಸಮ್ಮುಖದಲ್ಲಿ ಬರ್ತ್ಡೇ ಆಚರಿಸಿಕೊಂಡಿದ್ದಾರೆ.

    ಹುಟ್ಟುಹಬ್ಬದ ಅಂಗವಾಗಿ ಮಾರ್ಕ್ ಸಿನಿಮಾ ಟೈಟಲ್ ಟೀಸರ್ ರಿಲೀಸ್ ಆಗಿದೆ. ಜೊತೆಗೆ ಕ್ರಿಸ್‌ಮಸ್ ಹಬ್ಬಕ್ಕೆ ಸಿನಿಮಾ ಥಿಯೇಟರ್‌ಗೆ ಬರೋದಾಗಿ ಅಭಿಮಾನಿಗಳಿಗೆ ಕಿಚ್ಚನಿಂದ ಗುಡ್‌ನ್ಯೂಸ್ ಸಿಕ್ಕಿದೆ. ಇದೀಗ ಬಿಲ್ಲ ರಂಗ ಬಾಷಾ ಸಿನಿಮಾದ ಬಿಗ್ ಅಪ್‌ಡೇಟ್‌ವೊಂದು ಸುದೀಪ್ ಭಕ್ತಗಣಕ್ಕೆ ಸಿಕ್ಕಿದೆ. ಇದನ್ನೂ ಓದಿ: ಅಭಿಮಾನಿಗಳಿಗೆ ಬರ್ತ್‌ಡೇ ಗಿಫ್ಟ್‌ – ಕಿಚ್ಚನ ಹೊಸ ಚಿತ್ರಕ್ಕೆ ಟೈಟಲ್‌ ಫಿಕ್ಸ್‌

     

    View this post on Instagram

     

    A post shared by Anup Bhandari (@anupsbhandari)

    ವಿಕ್ರಾಂತ್ ರೋಣ ಚಿತ್ರದ ಸಕ್ಸಸ್‌ನ ನಂತರ ಅನೂಪ್ ಭಂಡಾರಿ ಹಾಗೂ ಸುದೀಪ್ ಕಾಂಬಿನೇಷನ್‌ನಲ್ಲಿ ಮೂಡಿ ಬರ್ತಿರುವ ಬಿಲ್ಲ ರಂಗ ಬಾಷಾ (Billa Ranga Baasha). ಈ ಸಿನಿಮಾದ ಖಡಕ್ ಪೋಸ್ಟರ್ ಬರ್ತ್ಡೇ ಸ್ಪೆಷಲ್ ರಿಲೀಸ್ ಮಾಡಿದೆ ಚಿತ್ರತಂಡ. ಕಿಚ್ಚನ ಬೆಂಕಿ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ತಯಾರಾಗ್ತಿರುವ ಬಿಲ್ಲ ರಂಗ ಬಾಷಾ ಹಾಗೂ ಮಾರ್ಕ್ ಚಿತ್ರದ ಚಿತ್ರೀಕರಣ ನಡೆಯುತ್ತಿವೆ.

    ತಮ್ಮ ಅಭಿಮಾನಿಗಳ ಆಸೆಯನ್ನ ನಿರಾಸೆ ಮಾಡದೇ ಸುದೀಪ್ ಅಭಿಮಾನಿಗಳೊಟ್ಟಿಗೆ ಬರ್ತ್ಡೇ ಅದ್ಧೂರಿಯಾಗಿ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳು ಖುಷಿಯಿಂದ ಕುಣಿದಾಡುವಂತಹ ಸರ್ಪ್ರೈಸ್‌ ಮೇಲೆ ಸರ್ಪ್ರೈಸ್ ಕೊಟ್ಟಿದ್ದಾರೆ. ಸದ್ಯ ಕಿಚ್ಚನ ಅಭಿಮಾನಗಳ ಚಿತ್ತ ಡಿಸೆಂಬರ್‌ನತ್ತ ನೆಟ್ಟಿದೆ. ಮಾರ್ಕ್ ಬೆಳ್ಳಿಪರದೆ ಮೇಲೆ ನೋಡಿ ಸಂಭ್ರಮಿಸೋಕೆ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಸುದೀಪ್ ಫ್ಯಾನ್ಸ್. ಇದನ್ನೂ ಓದಿ: 52ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ – ರಾತ್ರಿಯೇ ಕೇಕ್ ಕತ್ತರಿಸಿ ಫ್ಯಾನ್ಸ್ ಜೊತೆ ಸಂಭ್ರಮ…!

  • ಅಭಿಮಾನಿಗಳಿಗೆ ಬರ್ತ್‌ಡೇ ಗಿಫ್ಟ್‌ – ಕಿಚ್ಚನ ಹೊಸ ಚಿತ್ರಕ್ಕೆ ಟೈಟಲ್‌ ಫಿಕ್ಸ್‌

    ಅಭಿಮಾನಿಗಳಿಗೆ ಬರ್ತ್‌ಡೇ ಗಿಫ್ಟ್‌ – ಕಿಚ್ಚನ ಹೊಸ ಚಿತ್ರಕ್ಕೆ ಟೈಟಲ್‌ ಫಿಕ್ಸ್‌

    ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಕಿಚ್ಚ ಸುದೀಪ್‌ (Kichcha Sudeep) ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. `K47′ (ಕಿಚ್ಚ 47) ಹೆಸರಿನಲ್ಲಿ ಚಿತ್ರೀಕರಣವಾಗುತ್ತಿರುವ ಕಿಚ್ಚನ ಸಿನಿಮಾಕ್ಕೆ ಟೈಟಲ್‌ ಕೂಡ ಫಿಕ್ಸ್‌ ಆಗಿದೆ.

    ಯೆಸ್‌. ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿರೋ ಸ್ಟಾರ್ ಸಿನಿಮಾಗಳಿಗೆ (Cinema) ಕಿಚ್ಚ ಸುದೀಪ್ ಠಕ್ಕರ್ ಕೊಡುತ್ತಾರೆ ಅಂತ ಹೇಳಲಾಗಿತ್ತು. ಅದೀಗ ನಿಜವಾಗಿದೆ. ಕಿಚ್ಚ ಸುದೀಪ್ ಈ ವರ್ಷ ತಾವು ಅಂದುಕೊಂಡಂತೆ ಒಂದು ಸಿನಿಮಾವನ್ನ ತಮ್ಮ ಅಭಿಮಾನಿಗಳಿಗೆ ದರ್ಶನ ಮಾಡಿಸಲು ಶಪಥ ಮಾಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 25ರಂದು ತೆರೆಕಂಡ ಮ್ಯಾಕ್ಸ್ ಸಿನಿಮಾ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದನ್ನೂ ಓದಿ: `ತಿಪ್ಪರ್‌ಲಾಗ ಹೊಡೆದ್ರೂ ನೀನು ಬೇಡ ನಿನ್ನ ಕುದುರೆ ಸಹವಾಸನೂ ಬೇಡʼ – ದರ್ಶನ್‌ಗೆ ಸುದೀಪ್‌ ಹೀಗಂದಿದ್ಯಾಕೆ?

    ಹೀಗಾಗಿ ಈ ವರ್ಷವೂ ಡಿಸೆಂಬರ್‌ಗೆ ಸುದೀಪ್‌ ಅವರ ಹೊಸ ಚಿತ್ರ ತೆರೆಗೆ ಬರಲಿದ್ದು, ʻಮಾರ್ಕ್‌ʼ (MARK) ಅಂತ ಹೆಸರಿಡಲಾಗಿದೆ. ಮ್ಯಾಕ್ಸ್‌ ಚಿತ್ರತಂಡದ ಜೊತೆಗಿನ 2ನೇ ಸಿನಿಮಾ ಇದಾಗಿದ್ದು, ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಮೂಡಿಬರಲಿದೆ. ಹೊಸ ಚಿತ್ರದ ಟೈಟಲ್‌ ಟೀಸರ್‌ ಕೂಡ ರಿಲೀಸ್‌ ಆಗಿದ್ದು, ಖದರ್‌ ಲುಕ್‌ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಇದನ್ನೂ ಓದಿ: ನಾವೇನು ಚಿಕ್ಕ ಹುಡುಗರಾ? ಯಾಕೆ ದೂರಾದ್ವಿ ಅನ್ನೋದು ನಮಗೆ ಗೊತ್ತಿದೆ – ದರ್ಶನ್‌ ಬಗ್ಗೆ ಕಿಚ್ಚನ ಮಾತು

    52ನೇ ವಸಂತಕ್ಕೆ ಕಾಲಿಡುತ್ತಿರುವ ಕಿಚ್ಚ
    ಕಿಚ್ಚ ಸುದೀಪ್ ನಾಳೆ 52ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಮಾಧ್ಯಮದ ಜೊತೆ ಸುದ್ದಿಗೋಷ್ಠಿ ನಡೆಸಿರುವ ಸುದೀಪ್ ಒಂದಷ್ಟು ಪ್ರಸ್ತುತ ವಿಚಾರಗಳ ಕುರಿತು ಮಾತನಾಡಿದ್ರು. ರಾಜಕೀಯಕ್ಕೆ ಬರೋದ್ರ ಕುರಿತು, ದರ್ಶನ್ ಹಾಗೂ ತಮ್ಮ ನಡುವಿನ ಸ್ನೇಹ ಮತ್ತೆ ಬೆಸೆಯುತ್ತಾ ಅನ್ನುವ ಪ್ರಶ್ನೆಗಳಿಗೆಲ್ಲ ಮಾರ್ಮಿಕವಾಗಿ ಕಿಚ್ಚ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಡಿಕೆಶಿ ನಟ್ಟು ಬೋಲ್ಟು ಹೇಳಿಕೆ ಸಾಧು ಕೋಕಿಲ ಕಿತಾಪತಿ – ಕಿಚ್ಚ ಸುದೀಪ್‌

    K47 Kiccha Sudeep

    ಕಿಚ್ಚ ಸುದೀಪ್ ಓಪನ್ ಹಾರ್ಟ್
    ಪ್ರತಿ ಹುಟ್ಟುಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ಸಿಗುವ ವಾಡಿಕೆ ಇಟ್ಕೊಂಡಿದ್ದಾರೆ ಕಿಚ್ಚ. ಜಾಸ್ತಿ ಜನ ಸೇರೋದ್ರಿಂದ ಮನೆಯ ಮುಂದಿನ ದಾರಿ ಚಿಕ್ಕದಾಗಿರೋದ್ರಿಂದ ಮನೆಯ ಬದಲು ಬೆಂಗಳೂರಿನ ನಾಯಂಡಹಳ್ಳಿ ಬಳಿಯ ನಂದಿಲಿಂಕ್ಸ್ ಗ್ರೌಂಡ್‌ನಲ್ಲಿ ಅಭಿಮಾನಿಗಳನ್ನ ಭೇಟಿಯಾಗುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಒಂದಿನ ಮುಂಚಿತವಾಗೇ ಸಿಗುತ್ತಿದ್ದಾರೆ ಸುದೀಪ್. ಅದಕ್ಕೂ ಮುನ್ನವೇ ಮಾಧ್ಯಮಗೋಷ್ಠಿ ಕರೆದು ಒಂದಷ್ಟು ವಿಷಯಗಳನ್ನ ಸುದೀಪ್ ಹಂಚಿಕೊಂಡ್ರು.

    ಕಿಚ್ಚ ಸುದೀಪ್ ಅಭಿನಯದ ಕೆ47 ಚಿತ್ರ ಇದೇ ಡಿಸೆಂಬರ್ 25ಕ್ಕೆ ತೆರೆಕಾಣುತ್ತಿದೆ. ಇದೇ ತಿಂಗಳು ದರ್ಶನ್ ಅಭಿನಯಿಸಿರುವ ಡೆವಿಲ್ ಸಿನಿಮಾ ಕೂಡ ರಿಲೀಸ್ ಘೊಷಣೆಯಾಗಿದ್ದು ಕ್ಲ್ಯಾಶ್‌ ಆಗುತ್ತಾ ಎಂಬ ಪ್ರಶ್ನೆಗೆ ಸುದೀಪ್ ನೇರವಾಗೇ ಉತ್ತರಿಸಿದ್ದಾರೆ. ಡೆವಿಲ್ ಚಿತ್ರಕ್ಕೆ ಒಳ್ಳೆಯದಾಗ್ಲಿ. ಕ್ಲ್ಯಾಶ್‌ ಏನೂ ಇಲ್ಲ. ಅವರ ಪಾಡಿಗೆ ಅವರು ಬರ್ತಾರೆ ನಾವು ನಮ್ಮ ಪಾಡಿಗೆ ಬರ್ತೀವಿ ಎಂದಿದ್ದಾರೆ. ಜೊತೆಗೆ ಸದ್ಯದ ದರ್ಶನ್ ಸ್ಥಿತಿ ಬಗ್ಗೆ ಬೇಸರ ಇದೆ. ಆದರೆ ಕಾನೂನಿನಡಿ ಇರೋದ್ರಿಂದ ನಾನು ಮಾತನಾಡಿದ್ರೆ ತಪ್ಪಾಗುತ್ತೆ. ಅವರನ್ನ ಇಷ್ಟ ಪಡುವ ಅಭಿಮಾನಿ ಬಳಗದ ನಂಬಿಕೆಗೂ ಬೇಸರ ಮಾಡಿದಂತಾಗುತ್ತೆ ಅಂದಿದ್ದಾರೆ ಸುದೀಪ್‌.

  • `ತಿಪ್ಪರ್‌ಲಾಗ ಹೊಡೆದ್ರೂ ನೀನು ಬೇಡ ನಿನ್ನ ಕುದುರೆ ಸಹವಾಸನೂ ಬೇಡʼ – ದರ್ಶನ್‌ಗೆ ಸುದೀಪ್‌ ಹೀಗಂದಿದ್ಯಾಕೆ?

    `ತಿಪ್ಪರ್‌ಲಾಗ ಹೊಡೆದ್ರೂ ನೀನು ಬೇಡ ನಿನ್ನ ಕುದುರೆ ಸಹವಾಸನೂ ಬೇಡʼ – ದರ್ಶನ್‌ಗೆ ಸುದೀಪ್‌ ಹೀಗಂದಿದ್ಯಾಕೆ?

    ಅಭಿನಯ ಚಕ್ರವರ್ತಿ ಎಂದೇ ಫೇಮಸ್ ಆದವರು ಕಿಚ್ಚ ಸುದೀಪ್. ಯಾವುದೇ ಪಾತ್ರ ಕೊಟ್ಟರೂ ಜೀವ ತುಂಬುವ ಕಲಾವಿದ ಇವರು. ಆದರೆ ಕಿಚ್ಚ ಸುದೀಪ್ ಪೌರಾಣಿಕ ಪಾತ್ರಗಳಲ್ಲಿ ಕಾಣಿಸ್ಕೊಳ್ಳುವುದಿಲ್ಲ. ಯಾಕೆ ಅನ್ನೋ ಪ್ರಶ್ನೆಗೆ ಅಸಲಿ ಕಾರಣ ಇದೀಗ ಬಿಚ್ಚಿಟ್ಟಿದ್ದಾರೆ ಸುದೀಪ್. ಹುಟ್ಟುಹಬ್ಬದ ಪ್ರಯುಕ್ತ ನಡೆದ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ (Kichcha Sudeep) ಮನಬಿಚ್ಚಿ ಮಾತನಾಡಿದ್ದಾರೆ.

    ಪೌರಾಣಿಕ ಪಾತ್ರಗಳಲ್ಲಿ ಸುದೀಪ್ ಯಾಕೆ ಅಭಿನಯಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕುದುರೆ ಸವಾರಿ ಮಾಡಬೇಕಾದ ಕಾರಣಕ್ಕೆ ನನಗೆ ಪೌರಾಣಿಕ ಪಾತ್ರವೇ ಇಷ್ಟವಿಲ್ಲ. ಒಂದು ಬಾರಿ ಆದ ಅನುಭವದಿಂದ ನನಗೆ ಕುದುರೆ ಸವಾರಿ ಇಷ್ಟವಿಲ್ಲ ಎಂದಿದ್ದಾರೆ. ದರ್ಶನ್ ಫಾರ್ಮ್ಹೌಸ್‌ನಲ್ಲಿ ಓಡಿಸಿದ್ದೇ ಕೊನೆ ಮತ್ಯಾವತ್ತೂ ಕುದುರೆ ಸವಾರಿ ಮಾಡಿಯೇ ಇಲ್ಲ ಎಂದಿದ್ದಾರೆ ಸುದೀಪ್.ಇದನ್ನೂ ಓದಿ: ಡಿಕೆಶಿ ನಟ್ಟು ಬೋಲ್ಟು ಹೇಳಿಕೆ ಸಾಧು ಕೋಕಿಲ ಕಿತಾಪತಿ – ಕಿಚ್ಚ ಸುದೀಪ್‌

    ದರ್ಶನ್ ಒತ್ತಾಯ ಮಾಡಿದ್ದಕ್ಕೆ ಕುದುರೆ ಹತ್ತಿದ್ದರಂತೆ ಸುದೀಪ್ !

    ನಾವು ಒಮ್ಮೆ ದರ್ಶನ್ ತೋಟಕ್ಕೆ ಹೋಗಿದ್ವಿ, ಅಲ್ಲಿ ದರ್ಶನ್ ಕುದುರೆ ಹತ್ತು ಹತ್ತು ಅಂತ ತುಂಬಾ ಫೋರ್ಸ್ ಮಾಡ್ದ , ನೀನ್ ತಿಪ್ಪರಲಾಗ ಹೊಡೆದ್ರೂ ನೀನು ಬೇಡ ನಿನ್ನ ಕುದುರೆ ಸಹವಾಸನೂ ಬೇಡ ಅಂತ ಹೇಳ್ದೆ. ಆದ್ರೂ ಕುದುರೆ ಹತ್ತಿಸಿದ್ರು. ಸರಿ ಅಂತ ನಾನು ಮೆತ್ತಗೆ ಇದನ್ನ ಯಾರಾದ್ರೂ ಹಿಡ್ಕೊಳ್ರಪ್ಪ ನೀವೇ ಅಂತ ಹೇಳಿ ಹೋಗ್ತಾ ಇದ್ದೆ. ಕುದುರೆ ಹೋಗ್ತಾ ಇತ್ತು. ಮುಂದೆ ದರ್ಶನ್ ಕುದುರೆ ಟಕ್‌ ಟಕ್‌ ಹೋಗ್ತಾ ಇತ್ತು. ಹೋಗ್ತಾ ಹೋಗ್ತಾ ಆ ಕುದುರೆ ಲಾಡಿ ಬಿಚ್ಕೊಂಡ್ಬಿಡ್ತು. ಆಗ ದರ್ಶನ್ ಕೆಳಗೆ ಬಿದ್ದ. ಅದನ್ನ ನೋಡಿದ್ ತಕ್ಷಣನೇ ನಿಲ್ಸಪ್ಪ ಫಸ್ಟು ಅಂದೆ. ಆವತ್ತು ಇಳಿದವನು ಇವತ್ತಿನವರೆಗೂ ಕುದುರೆ ಹತ್ತಿಲ್ಲ.

    ಕುದುರೆ ಸವಾರಿಯ ಕೆಟ್ಟ ಅನುಭವ ಬಿಚ್ಚಿಟ್ಟ ಸುದೀಪ್ ?

    ನನಗೆ ಕುದುರೆ ಓಡ್ಸೋದು ಒಂದ ಆಗಲ್ಲ, ಯಾಕಂದ್ರೆ ಒಂದ್ ಅನುಭವ ಆಗಿದೆ, ನನಗೇನೇ ಪೌರಾಣಿಕ ಪಾತ್ರ ಬಂದಿತ್ತು ಆ ಟೈಮಲ್ಲಿ. ಅವರು ಹೇಳಿದ್ರು ಅಂತ ತುಂಬಾ ಪ್ರಾಕ್ಟೀಸ್ ಮಾಡಿದ್ದೆ. ನಾನ್ ಸೀರಿಯಸ್ ಆಗಿ ಒಂದಷ್ಟು ದಿನ ಹೋಗಿ ಕುದುರೆ ಓಡಿಸುವುದನ್ನು ಕಲಿತೆ. ಒಂದು ದಿನ ಸುಮ್ನೆ ನಿಂತಿದ್ದ ಕುದುರೆ ಯಾಕೆ ಎಗರ್ತು ಅಂತ ಗೊತ್ತಾಗ್ಲಿಲ್ಲ. 20 ಮೀಟರ್ ದೂರ ಎಳಕೊಂಡು ಹೋಗ್ಬಿಟ್ಟಿತ್ತು. ಆವಾಗ ಆಗಿರೋ ಭಯ ಇದ್ಯಲ್ಲ ಪ್ರಪಂಚನೆ ನೋಡಿಬಿಟ್ಟೆ ನಾನು. ಅದಾದ್ಮೇಲೆ ಅರ್ಥ ಆಯ್ತು ಒಂದು ವಿಚಾರ. ಯಾವುದರ ಮೇಲೆ ಹತ್ತಿದ್ರೂ ಅದರ ಬ್ರೇಕ್, ಹ್ಯಾಂಡಲ್ ಎಲ್ಲಿದೆ ಅಂತ ಗೊತ್ತಿರಬೇಕು. ಕುದುರೆಯಲ್ಲಿ ಎಲ್ಲಿದೆ ಅಂತ ನನಗೆ ಗೊತ್ತಿಲ್ಲ.ಇದನ್ನೂ ಓದಿ: ಡಿಸೆಂಬರ್‌ಗೆ ಕಿಚ್ಚನ ಡಿಚ್ಚಿ: ಕೆ-47 ರಿಲೀಸ್ ಡೇಟ್ ಫಿಕ್ಸ್

  • ಡಿಕೆಶಿ ನಟ್ಟು ಬೋಲ್ಟು ಹೇಳಿಕೆ ಸಾಧು ಕೋಕಿಲ ಕಿತಾಪತಿ – ಕಿಚ್ಚ ಸುದೀಪ್‌

    ಡಿಕೆಶಿ ನಟ್ಟು ಬೋಲ್ಟು ಹೇಳಿಕೆ ಸಾಧು ಕೋಕಿಲ ಕಿತಾಪತಿ – ಕಿಚ್ಚ ಸುದೀಪ್‌

    ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಸುದೀಪ್ (Kichcha Sudeep) ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ದರ್ಶನ್‌ ಹಾಗೂ ತಮ್ಮ ನಡುವಿನ ಸ್ನೇಹದ ಬಗ್ಗೆಯೂ ಒಂದಿಷ್ಟು ಮೆಲುಕು ಹಾಕಿದ್ದು, ಇದೇ ವೇಳೆ ಡಿಕೆ ಶಿವಕುಮಾರ್‌ ಅವರ ನಟ್ಟು ಬೋಲ್ಟು ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸುದೀಪ್‌, ನಟ್ಟು ಬೋಲ್ಟು ಕಿತಾಪತಿ ಸಾಧು ಕೋಕಿಲ (Sadhu Kokila) ಅವರದ್ದು, ಇದ್ರಲ್ಲಿ ಡಿಕೆ ಸಾಹೇಬರದ್ದು ಏನೂ ಇಲ್ಲ ಅಂತ‌ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಾವೇನು ಚಿಕ್ಕ ಹುಡುಗರಾ? ಯಾಕೆ ದೂರಾದ್ವಿ ಅನ್ನೋದು ನಮಗೆ ಗೊತ್ತಿದೆ – ದರ್ಶನ್‌ ಬಗ್ಗೆ ಕಿಚ್ಚನ ಮಾತು

    ಸಾಧು ಕೋಕಿಲ ಅವರಿ ಆಮೇಲೆ ಹೇಳ್ತಾರೆ, ಎಲ್ಲಾರನ್ನೂ ಒಟ್ಟಿಗೆ ಕರೆದ್ರೆ ನಾನು ಹೇಗೆ ಮೆಂಟೇನ್‌ ಮಾಡ್ಲಿ? ಯಾರಿಗೆ ಸೆಕ್ಯೂರಿಟಿ ಕೊಡ್ಲಿ ಅಂತಾರೆ. ಅದನ್ನ ಮೊದಲೇ ಅವರಿಗೆ ಹೇಳ್ಬೇಕು ತಾನೆ. ಅಲ್ಲಿ ಬಂದು ಹೇಳಿದಾಗ ಸೈಲೆಂಟ್‌ ಆಗಿದ್ದರು. ಇದು ಸಾಧು ಅವರದ್ದೇ ಕಿತಾಪತಿ. ವೈಯಕ್ತಿಕವಾಗಿ ಕಾರ್ಯಕ್ರಮಕ್ಕೆ ಕರೆದವರು ಬಂದಿದ್ದಾರೆ. ಕೆಲವರಿಗೆ ಬರೋಕಾಗಿಲ್ಲ. ಅಷ್ಟಕ್ಕೆ ಕೆಲವರು ದೊಡ್ಡ ದೊಡ್ಡ ಮಾತುಗಳನ್ನಾಡಿದ್ರು. ಪರ್ವಾಗಿಲ್ಲ ಅಂದರು.

    ಮುಂದುವರಿದು.. ಪಾಪ ಸಾಧು ಅವರದ್ದು ಇದರಲ್ಲಿ ಏನೂ ತಪ್ಪಿಲ್ಲ. ಅವರು ತಮಾಷೆ ಮಾಡಿಕೊಂಡೇ ಇರ್ತಾರೆ. ಇದನ್ನೂ ತಮಾಷೆಯಾಗೇ ಹೇಳಿದ್ದಾರೆ. ಆದ್ರೆ ಸೀರಿಯಸ್‌ ಆಗಿಬಿಡ್ತು ಅಷ್ಟೇ ಅಂತ ಹೇಳಿದರು. ಇದನ್ನೂ ಓದಿ: ಸದ್ದಿಲ್ಲದೇ ಹಾಸ್ಯನಟ ಚಿಕ್ಕಣ್ಣ ಮದ್ವೆ ನಿಶ್ಚಯ

    ಡಿಕೆಶಿ ನಟ್ಟು ಬೋಲ್ಟು ಟೈಟ್‌ ಮಾಡೋದಾಗಿ ಹೇಳಿದ್ದೇಕೆ?
    ಬೆಂಗಳೂರಲ್ಲೇ ಸಿನಿ ಕಾರ್ಯಕ್ರಮವೊಂದರಲ್ಲಿ ಡಿಕೆಶಿ ಮಾತನಾಡುವಾಗ, ಚಿತ್ರರಂಗದಲ್ಲಿ ಯಾರಿಗೆ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎನ್ನುವುದು ಗೊತ್ತಿದೆ. ಇದನ್ನು ವಾರ್ನಿಂಗ್ ಅಂತಾ ಆದ್ರೂ ಅಂದುಕೊಳ್ಳಿ, ಮನವಿ ಅಂತಾ ಆದ್ರೂ ಅಂದುಕೊಳ್ಳಿ. ಥಿಯೇಟರ್‌ಗೆ ಪರ್ಮಿಷನ್‌ ಕೊಡಲಿಲ್ಲಾ ಅಂದ್ರೆ ಸಿನಿಮಾನೇ ರಿಲೀಸ್‌ ಆಗಲ್ವಲ್ಲ ಅಂತ ಹೇಳಿದ್ದರು. ಈ ಹೇಳಿಕೆ ಸಿನಿಮಾರಂಗದಲ್ಲಿ ಭಾರೀ ಸಂಚಲನ ಮೂಡಿಸಿತ್ತು, ಇಡೀ ಚಿತ್ರರಂಗವೇ ದಂಗಾಗಿತ್ತು. ಆ ಸಮಯಕ್ಕೆ ಕೆಲವು ನಟ ನಟಿಯರು ಪ್ರತಿಕ್ರಿಯಿಸಿದ್ರು, ಕೆಲವರು ಡಿಕೆಶಿ ವಿರುದ್ಧ ಬೇಸರವನ್ನು ಹೊರ ಹಾಕಿದ್ರು. ಇದನ್ನೂ ಓದಿ: ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ತೆಲುಗು ಸ್ಟಾರ್‌ ರಾಮ್‌ ಚರಣ್‌

  • ನಾವೇನು ಚಿಕ್ಕ ಹುಡುಗರಾ? ಯಾಕೆ ದೂರಾದ್ವಿ ಅನ್ನೋದು ನಮಗೆ ಗೊತ್ತಿದೆ – ದರ್ಶನ್‌ ಬಗ್ಗೆ ಕಿಚ್ಚನ ಮಾತು

    ನಾವೇನು ಚಿಕ್ಕ ಹುಡುಗರಾ? ಯಾಕೆ ದೂರಾದ್ವಿ ಅನ್ನೋದು ನಮಗೆ ಗೊತ್ತಿದೆ – ದರ್ಶನ್‌ ಬಗ್ಗೆ ಕಿಚ್ಚನ ಮಾತು

    – ಸೂರ್ಯ – ಚಂದ್ರ ಅದರ ಜಾಗದಲ್ಲಿ ಎರಡು ಚೆನ್ನಾಗಿರುತ್ತೆ ಎಂದ ಸುದೀಪ್‌

    ನಾವೇನು ಚಿಕ್ಕವರಲ್ಲ, ನಾವು ದೂರಾಗಿದ್ದು ಯಾಕೆ ಅನ್ನೋದು ನಮಗೆ ಗೊತ್ತಿದೆ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರು ನಟ ದರ್ಶನ್ (Actor Darshan) ಬಗ್ಗೆ ಹೇಳಿದರು.

    ಸೆ.2ರಂದು ತಮ್ಮ ಹುಟ್ಟುಹಬ್ಬದ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನಟ ದರ್ಶನ್ ಹಾಗೂ ತಮ್ಮ ಸ್ನೇಹದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅವರ ಸಿನಿಮಾಗೆ ಒಳ್ಳೇದಾಗಲಿ. ಅವರಿಗೆ ಅವರದ್ದೇ ಆದ ನೋವು ಇರುತ್ತೆ. ಅದರ ಹಿಂದೆ ಅವರ ಅಭಿಮಾನಿಗಳು ಇರುತ್ತಾರೆ. ಅಭಿಮಾನಿಗಳಿಗೂ ಒಂದು ನಂಬಿಕೆ ಇರುತ್ತದೆ. ನಾವು ಮಾತಾಡೋದು ತಪ್ಪಾಗುತ್ತೆ. ಸರ್ಕಾರ, ಕಾನೂನು ಅಂತ ಬಂದಾಗ ಅವರೇನು ಮಾಡಬೇಕು ಅದನ್ನ ಮಾಡ್ತಾ ಇರ್ತಾರೆ. ಅದಕ್ಕೂ ನಾವು ಅಡ್ಡ ಬರಬಾರದು. ಯಾರೂ ಕೈಕಟ್ಕೊಂಡು ಸುಮ್ಮನೇ ಕುಳಿತಿರಲ್ಲ. ಆದರೆ ಕೆಲವೊಂದಕ್ಕೆ ನಾನು ತಲೆಹಾಕೋಕೆ ಹೋಗಲ್ಲ. ಯಾಕಂದ್ರೆ ನಂಗೆ ವೈಯಕ್ತಿಕವಾಗಿ ಇಂಟ್ರೆಸ್ಟ್ ಇಲ್ಲ. ಮಾತಾಡಿದ್ರೆ ಅದು ಎಲ್ಲವನ್ನೂ ಹಾಳಮಾಡುತ್ತೆ. ಜೊತೆಗೆ ಅದು ಕೆಲವೊಮ್ಮೆ ಅಂತರ ಸೃಷ್ಟಿ ಮಾಡುತ್ತೆ ಎಂದು ಹೇಳಿದರು.ಇದನ್ನೂ ಓದಿ: ಪರಮ ಸುಂದರಿಯಾದ ರಮ್ಯಾ!

    ಇನ್ನೂ ನಾವಿಬ್ಬರು ಯಾಕೆ ಮಾತಾಡಲ್ಲ ಅಂದ್ರೆ ಅದಕ್ಕೆ ಕೆಲವು ಕಾರಣಗಳಿವೆ. ಯಾರೂ ಆ ಕಾರಣಗಳ ಬಗ್ಗೆ ಕೇಳಲ್ಲ. ಆದ್ರೆ ನಮಗೆ ಗೊತ್ತಿರುತ್ತೆ. ಇನ್ನೂ ಯಾರದ್ದೋ ಮಾತು ಕೇಳಿಕೊಂಡು ಹೀಗೆ ಮಾಡುವಷ್ಟು ನಾವು ಚಿಕ್ಕವರಲ್ಲ, ನಮಗೆ ಕೆಲವು ವಿಷಯಗಳು ಅರ್ಥ ಆಗುತ್ತವೆ. ನಾವ್ಯಾಕೆ ಹೀಗೀದಿವಿ ಅಂತ ನಮ್ಮ ಸತ್ಯ ನಮಗೆ ಗೊತ್ತಿರುತ್ತೆ. ಸೂರ್ಯ ಹಾಗೂ ಚಂದ್ರ ಅದರ ಜಾಗದಲ್ಲಿ ಎರಡು ಚೆನ್ನಾಗಿರುತ್ತೆ ಎಂದರು.

    ಕಿಚ್ಚ ಸುದೀಪ್ ಸೋಮವಾರ (ಸೆ.1) ರಾತ್ರಿ 9 ರಿಂದ 12 ಗಂಟೆವರೆಗೆ ಅಭಿಮಾನಿಗಳ ಜೊತೆ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ. ಇದನ್ನೂ ಓದಿ: ಹೃದಯಾಘಾತ – ಸಿನಿಮಾ ರೈಟರ್ ಎಸ್.ಎಸ್ ಡೇವಿಡ್ ನಿಧನ

  • ʻಬಿಗ್ ಬಾಸ್ ಸೀಸನ್‌-12ʼನ ಬಿಗ್‌ ನ್ಯೂಸ್‌ – ಲಾಂಚ್‌ ಡೇಟ್‌ ಅನೌನ್ಸ್‌ ಮಾಡಿದ ಕಿಚ್ಚ ಸುದೀಪ್

    ʻಬಿಗ್ ಬಾಸ್ ಸೀಸನ್‌-12ʼನ ಬಿಗ್‌ ನ್ಯೂಸ್‌ – ಲಾಂಚ್‌ ಡೇಟ್‌ ಅನೌನ್ಸ್‌ ಮಾಡಿದ ಕಿಚ್ಚ ಸುದೀಪ್

    ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ʻಬಿಗ್‌ ಬಾಸ್‌ ಕನ್ನಡʼ ತನ್ನ 12ನೇ (Bigg Boss Kannada 12) ಆವೃತ್ತಿಗೆ ಸಜ್ಜಾಗಿದೆ. ಇತ್ತೀಚೆಗೆ ಲೋಗೋ ಲಾಂಚ್‌ ಆಗಿದ್ದು, ಈ ಸೀಸನ್‌ ಯಾವಾಗ ಶುರುವಾಗುತ್ತದೆ ಅನ್ನೋ ಕ್ಯೂರಿಯಾಸಿಟಿ ಪ್ರೇಕ್ಷಕರಲ್ಲಿ ಇದ್ದೇ ಇತ್ತು. ಈ ಹೊತ್ತಿನಲ್ಲೇ ಬಿಗ್‌ ಬಾಸ್‌ 12 ಪ್ರಾರಂಭದ ದಿನಾಂಕವನ್ನ ಖುದ್ದು ಕಿಚ್ಚ ಸುದೀಪ್‌ (Kichcha Sudeep) ಅವರೇ ಘೋಷಿಸಿದ್ದಾರೆ. ಯಾವಾಗ ಅಂತೀರಾ? ಮಾಹಿತಿ ಇಲ್ಲಿದೆ ನೋಡಿ..

    ಯೆಸ್‌. ಕಿಚ್ಚ ಸುದೀಪ್ ನಿರೂಪಣೆಯ ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12’ ರಿಯಾಲಿಟಿ ಶೋಗೆ ದಿನಗಣನೆ ಶುರುವಾಗಿದೆ. ಈ ಸೀಸನ್‌ ಅಭಿಮಾನಿಗಳಲ್ಲಿ ಅಪಾರ ಕುತೂಹಲವನ್ನ ಹುಟ್ಟುಹಾಕಿದೆ. ಹೊಸ ಥೀಮ್‌, ರೋಚಕ ಸ್ಪರ್ಧಿಗಳು ಮತ್ತು ಟ್ವಿಸ್ಟ್‌ಗಳೊಂದಿಗೆ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡುವ ನಿರೀಕ್ಷೆಯಿದೆ. ಇದನ್ನೂ ಓದಿ: ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ತೆಲುಗು ಸ್ಟಾರ್‌ ರಾಮ್‌ ಚರಣ್‌

    ನಿರ್ಮಾಪಕ ಸಂದೇಶ್‌ ನಾಗರಾಜ್‌ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಿಚ್ಚ ಸುದೀಪ್‌, ಅತೀ ಶೀಘ್ರದಲ್ಲೇ ಪರದೆ ಮೇಲೆ ಸಿಕ್ತೇನೆ. ಸೆಪ್ಟೆಂಬರ್‌ 28ರಿಂದ ನಿಮಗೆ ಟಿವಿಯಲ್ಲಿ ಸಿಗುತ್ತೇನೆ. ನಿಮ್ಮ ಪ್ರೀತಿಗೆ ಥ್ಯಾಂಕ್ಯೂ, ಲವ್‌ ಯೂ ಆಲ್ ಅಂತ ಹೇಳುವ ಮೂಲಕ ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12’ರ ಪ್ರಾರಂಭ ದಿನಾಂಕವನ್ನ ರಿವೀಲ್‌ ಮಾಡಿಬಿಟ್ರು. ಇದನ್ನೂ ಓದಿ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಿರುತೆರೆ ನಟಿ ಪ್ರಿಯಾ ಮರಾಠೆ ನಿಧನ; 38ನೇ ವಯಸ್ಸಿಗೆ ನಟಿ ದುರಂತ ಅಂತ್ಯ

    ಸಾಮಾನ್ಯವಾಗಿ ಸಪ್ಟೆಂಬರ್ ಅಂತ್ಯದಲ್ಲೇ ಕನ್ನಡದ ಬಿಗ್‌ಬಾಸ್‌ಗೆ ಪ್ರತಿವರ್ಷ ಚಾಲನೆ ಸಿಗುತ್ತಿತ್ತು. ಅದರಂತೆ ಈ ಬಾರಿಯೂ ಸಪ್ಟೆಂಬರ್‌ ಅಂತ್ಯದಲ್ಲೇ ಶುರುವಾಗಲಿದೆ. ಸಪ್ಟೆಂಬರ್ 28ರ ಭಾನುವಾರ ಕನ್ನಡದ ಬಿಗ್‌ಬಾಸ್ ಸೀಸನ್‌ಕ್ಕೆ ಚಾಲನೆ ಸಿಗಲಿದೆ. ಈ ಬಾರಿ ಯಾರೆಲ್ಲ ಕಂಟೆಸ್ಟಂಟ್ಸ್‌ ಇರ್ತಾರೆ? ಎಷ್ಟು ಮಂದಿ ಸ್ಪರ್ಧೆಯಲ್ಲಿರ್ತಾರೆ? ಏನೆಲ್ಲಾ ಬದಲಾವಣೆ ಆಗಿದೆ? ಎಲ್ಲವನ್ನೂ ಅಂದೇ ತಿಳಿದುಕೊಳ್ಳಬಹುದು. ಇದನ್ನೂ ಓದಿ: ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ತೆಲುಗು ಸ್ಟಾರ್‌ ರಾಮ್‌ ಚರಣ್‌

  • ಚಾಮುಂಡಿ ತಾಯಿ ದರ್ಶನ ಪಡೆದ ಕಿಚ್ಚ ಸುದೀಪ್

    ಚಾಮುಂಡಿ ತಾಯಿ ದರ್ಶನ ಪಡೆದ ಕಿಚ್ಚ ಸುದೀಪ್

    ಮೈಸೂರು: ನಟ ಕಿಚ್ಚ ಸುದೀಪ್ (Kiccha Sudeep) ಪತ್ನಿ ಸಮೇತರಾಗಿ ಮೈಸೂರಿನಲ್ಲಿರುವ ಚಾಮುಂಡಿ ಬೆಟ್ಟಕ್ಕೆ (Chamundi Betta) ಭೇಟಿ ನೀಡಿದ್ದಾರೆ.

    ಸುದೀಪ್ ದಂಪತಿ ಜೊತೆ ಬಿಗ್‌ಬಾಸ್ ಸ್ಪರ್ಧಿ ವಿನಯ್ ಗೌಡ (Vinay Gowda), ಪತ್ನಿ ಅಕ್ಷತಾ ಹಾಗೂ ಪುತ್ರ, ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ಈ ವೇಳೆ ಕಿಚ್ಚ ಸುದೀಪ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಅತ್ತೆಯ ಕಣ್ಗಳನ್ನು ದಾನ ಮಾಡಿದ ಮೆಗಾಸ್ಟಾರ್‌ ಚಿರಂಜೀವಿ

    ಇತ್ತೀಚೆಗಷ್ಟೆ ಅಗಲಿದ್ದ ತಾಯಿಯ ಹುಟ್ಟುಹಬ್ಬವನ್ನು ಶನಿವಾರ ಗಿಡ ನೆಡುವ ಮೂಲಕ ಸುದೀಪ್ ವಿಶೇಷವಾಗಿ ಆಚರಿಸಿದ್ದರು. ಅಲ್ಲದೇ ಇದೇ ಸೆಪ್ಟೆಂಬರ್ 2 ರಂದು ಸುದೀಪ್ ಕೂಡ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

  • ಅಮ್ಮನ ಹೆಸರಿನಲ್ಲಿ ಸುದೀಪ್ ಹಸಿರು ಕ್ರಾಂತಿ

    ಅಮ್ಮನ ಹೆಸರಿನಲ್ಲಿ ಸುದೀಪ್ ಹಸಿರು ಕ್ರಾಂತಿ

    ಸುದೀಪ್ (Kichcha Sudeepa) ಇಂದು ತಮ್ಮ ತಾಯಿಯ ಹುಟ್ಟು ಹಬ್ಬವನ್ನ ವಿಶೇಷವಾಗಿ ಆಚರಿಸಿದ್ದಾರೆ. ಇತ್ತೀಚೆಗಷ್ಟೇ ಅಗಲಿರುವ ಅಮ್ಮನ ನೆನಪು ಸದಾ ಉಳಿಯಲೆಂದು ಅವರು ಹಸಿರು ಕ್ರಾಂತಿಗೆ ಮುಂದಾಗಿದ್ದಾರೆ. ಅಮ್ಮನ ಹುಟ್ಟು ಹಬ್ಬದ ದಿನದಂದು ಕುಟುಂಬ ಸಮೇತ ಮರ ಬೆಳೆಸುವ ಸಂಕಲ್ಪ ಹೊತ್ತಿದ್ದಾರೆ.

    ಪ್ರತಿ ಮರಕ್ಕೂ ಒಂದು ಕಥೆ ಇದೆ. ಈ ಮರವು ನನ್ನ ಅಮ್ಮನ ಕಥೆ ಹೇಳಲಿ ಎಂದು ಭಾವುಕರಾಗಿ ಬರೆದುಕೊಂಡಿರುವ ಸುದೀಪ್, ಅಮ್ಮನ ಹುಟ್ಟು ಹಬ್ಬಕ್ಕೆ ಮರ ನೆಟ್ಟು ಭಾವುಕರಾಗಿದ್ದಾರೆ. ಇದೇ ಸೆಪ್ಟಂಬರ್ 2ಕ್ಕೆ ಸುದೀಪ್ ಕೂಡ ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದು, ಅದು ಅಮ್ಮನು ಇಲ್ಲದ ಮೊದಲ ಹುಟ್ಟು ಹಬ್ಬ ಎಂದು ನುಡಿದಿದ್ದಾರೆ.

    ಅಮ್ಮನ ಹೆಜ್ಜೆಗೆ ಹಸಿರು ಹೆಜ್ಜೆ ಅಭಿಯಾನದಡಿ ಸುದೀಪ್ ಗಿಡ ನೆಟ್ಟಿದ್ದು, ಈ ಅಭಿಯಾನ ನಿರಂತರವಾಗಿ ಇರಲಿದೆಯಂತೆ. ಈ ಅಭಿಯಾನಕ್ಕೆ ಸುದೀಪ್ ಸಹೋದರಿ ಮತ್ತು ಪತ್ನಿ ಕೂಡ ಸಾಥ್ ನೀಡಿದ್ದಾರೆ. ಎಲ್ಲರ ಅಮ್ಮನ ಹೆಸರಿನಲ್ಲಿ ಗಿಡ ನೆಟ್ಟು, ಅಮ್ಮನ ನೆನಪನ್ನು ಸದಾ ಹಸಿರಾಗಿ ಇರುವಂತೆ ನೋಡಿಕೊಂಡಿದ್ದಾರೆ.

  • ಸುದೀಪ್ ಹುಟ್ಟುಹಬ್ಬಕ್ಕೆ `ಬಿಗ್’ ಸರ್‌ಪ್ರೈಸ್

    ಸುದೀಪ್ ಹುಟ್ಟುಹಬ್ಬಕ್ಕೆ `ಬಿಗ್’ ಸರ್‌ಪ್ರೈಸ್

    ಸೆ.2ರಂದು ಸುದೀಪ್ (Kiccha Sudeep) ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚೆಯೇ ಅಭಿಮಾನಿಗಳಿಗೆ ಸಿಗೋದಾಗಿ ತಿಳಿಸಿದ್ದಾರೆ.

    ಕಳೆದ ಬಾರಿ ಜಯನಗರ ಮೈದಾನದಲ್ಲಿ ಅಭಿಮಾನಿಗಳ ಜೊತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು ಸುದೀಪ್. ಈ ಬಾರಿ ಸ್ಥಳ ತಿಳಿಸಿಲ್ಲ. ಆದರೆ, ಸೆ.2ನೇ ತಾರೀಖು ಮನೆ ಮುಂದೆ ಅಭಿಮಾನಿಗಳು ಬರಬೇಡಿ ಅಂತ ಹೇಳಿದ್ದು ನೋಡಿದರೆ, ಮನೆ ಮುಂದೆಯಂತೂ ಸಂಭ್ರಮ ಇರುವುದಿಲ್ಲ. ಇದನ್ನೂ ಓದಿ: ರಿಷಿಕೇಶದಲ್ಲಿ ಗಂಗಾರತಿ ಮಾಡಿದ ಫರ‍್ಹಾ ಖಾನ್

    ಸುದೀಪ್ ಇದೀಗ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಬಿಲ್ಲ ರಂಗ ಬಾಷಾ ಚಿತ್ರದಲ್ಲಿ ನಟಿಸುತ್ತಿದ್ದರೆ, ಮ್ಯಾಕ್ಸ್ ನಿರ್ದೇಶಕರ ಮತ್ತೊಂದು ಚಿತ್ರದಲ್ಲಿ ಕಿಚ್ಚ ನಟಿಸುತ್ತಿದ್ದಾರೆ. ಎರಡೂ ಚಿತ್ರಗಳ ಒಂದೊಂದು ಹಂತದ ಚಿತ್ರೀಕರಣ ಮುಗಿದಿದೆ. ಆ ಸಿನಿಮಾಗಳ ಅಪ್‌ಡೇಟ್ ಸಿಗಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಬಿಗ್‌ ಬಾಸ್ ಅಪ್‌ಡೇಟ್ ಸಿಗಲಿದೆ ಎಂದು ಹೇಳಲಾಗುತ್ತಿದೆ.

    ಕಿಚ್ಚನ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಲೆಂದೇ ಬಿಗ್ ಬಾಸ್ ಪ್ರೋಮೋ ರೆಡಿ ಮಾಡಲಾಗಿದೆಯಂತೆ. ಈ ಬಾರಿಯ ಪ್ರೋಮೋದಲ್ಲಿ ಹಲವು ವಿಶೇಷತೆಗಳು ಇರಲಿವೆಯಂತೆ. ಬಿಗ್ ಬಾಸ್ ಶುರುವಾಗುವ ದಿನಾಂಕವೂ ಗೊತ್ತಾಗಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ ಕಿಚ್ಚನ ಲುಕ್ ಕೂಡ ರಿವೀಲ್ ಆಗಲಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ದರ್ಶನ್ ಜೊತೆಗಿನ ಫೋಟೋ ಪೋಸ್ಟ್ ಮಾಡಿರುವ ವಿಜಯಲಕ್ಷ್ಮಿ

  • ರಾತ್ರಿನೇ ಸಿಗೋಣವಾ ಎಂದ ಕಿಚ್ಚ; ಅಭಿಮಾನಿಗಳಿಗೆ ಸುದೀಪ್‌ ಪತ್ರ

    ರಾತ್ರಿನೇ ಸಿಗೋಣವಾ ಎಂದ ಕಿಚ್ಚ; ಅಭಿಮಾನಿಗಳಿಗೆ ಸುದೀಪ್‌ ಪತ್ರ

    ಕಿಚ್ಚ ಸುದೀಪ್ ಹುಟ್ಟುಹಬ್ಬವೆಂದ್ರೆ ಅವರ ಅಭಿಮಾನಿಗಳು ವಾರದ ಮುಂಚೆಯೇ ವಿಧ ವಿಧವಾಗಿ ಪ್ಲ್ಯಾನ್‌ ಮಾಡಿಕೊಂಡಿರ್ತಾರೆ. ಈ ಸಲವೂ ಅವರ ಫ್ಯಾನ್ಸ್‌ ಹುಟ್ಟುಹಬ್ಬಕ್ಕಾಗಿ ಕಾದು ಕುಳಿತಿದ್ದರು. ಈ ವೇಳೆ ನಟ ಸುದೀಪ್ ಅವರ ಅಭಿಮಾನಿಗಳಿಗೆ ಪತ್ರದ ಮೂಲಕ ಹುಟ್ಟುಹಬ್ಬಕ್ಕೆ ಆಹ್ವಾನ ನೀಡಿದ್ದಾರೆ. ಜೊತೆಗೆ ಮನವಿಯನ್ನೂ ಮಾಡಿಕೊಂಡಿದ್ದಾರೆ.

    ಸೆಪ್ಟಂಬರ್ 2 ಕಿಚ್ಚ ಸುದೀಪ್ ಹುಟ್ಟುಹಬ್ಬ, ಈ ವರ್ಷ 52ನೇ ವಸಂತಕ್ಕೆ ಕಾಲಿಡಲಿದ್ದಾರೆ ಕಿಚ್ಚ ಸುದೀಪ್. ತಮ್ಮ ಹುಟ್ಟುಹಬ್ಬದ ಆಚರಣೆಗಾಗಿ ಕಾಯುವ ಅಭಿಮಾನಿಗಳಿಗೆ ನಿರಾಸೆ ಮಾಡಲಾರೆ. ಆದ್ರೆ ಸೆಪ್ಟಂಬರ್‌ 2ಕ್ಕೆ ಅಲ್ಲ, ಬದಲಾಗಿ ಒಂದರ ರಾತ್ರಿಯೇ ಸಿಗೋಣವಾ ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಜೊತೆಗೆ ಸೆ.2ರಂದು ಮನೆಯಲ್ಲಿ ಇರೊಲ್ಲ ಹಾಗಾಗಿ ಮನೆ ಬಳಿ ಬಂದು ಯಾರೂ ಕಾಯುವುದು, ಗಲಾಟೆ ಮಾಡೋದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಂಗಳಾಪುರಂ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಗೌತಮಿ ನಾಯಕಿ

    “ಸೆಪ್ಟಂಬರ್ 1ರ ರಾತ್ರಿ 12 ಗಂಟೆಗೆ ಗಡಿಯಾರದ ಶಬ್ದದ ಜೊತೆ ನಿಮ್ಮ ಶುಭಾಶಯಗಳೇ ನನ್ನ ಕಿವಿಗೆ ಕೇಳಬೇಕು. ಅವುಗಳೇ ಎದೆಗೆ ಇಳಿಯಬೇಕು. ಆದ್ದರಿಂದ ಸೆಪ್ಟಂಬರ್ 1ರ ರಾತ್ರಿ ನಾವೆಲ್ಲ ಒಂದು ಕಡೆ ಸೇರೋಣ. ಜಾಗ ಎಲ್ಲಿ, ಹೇಗೆ..? ಅನ್ನೋದನ್ನ ತಿಳಿಸುತ್ತೇನೆ. ಆದರೆ ಮಾರನೇ ದಿನ ಅಂದರೆ ಸೆಪ್ಟಂಬರ್ 2ರಂದು ನಾನು ಊರಿನಲ್ಲಿ ಇರುವುದಿಲ್ಲ. ಯಾರೂ ದಯವಿಟ್ಟು ಮನೆ ಹತ್ತಿರ ಬಂದು ಕಾಯುವುದು ಬೇಡ. ನಾನಿರುವುದಿಲ್ಲ ಎಂದು ಹೇಳಿದಮೇಲೂ ನೀವು ಮನೆ ಬಳಿ ಬಂದು ಕಾದರೆ ನನ್ನ ಮನಸ್ಸಿಗೆ ನೋವಾಗುತ್ತೆ. ಜೊತೆಗೆ ಈ ಸಲ ಅಮ್ಮನಿಲ್ಲದ ಮೊದಲ ವರ್ಷವಾಗಿರುವುದರಿಂದ ಮನೆ ಬಳಿ ಚೂರು ಶಾಂತಿ ವಾತಾವರಣ ಇರಲೆಂದು ಬಯಸುತ್ತಿದ್ದೇನೆ. ನನಗೆ ನಂಬಿಕೆ ಇದೆ, ನೀವು ನನ್ನನ್ನ ಅರ್ಥಮಾಡಿಕೊಳ್ಳುವಿರೆಂದು. ಅದು ಬಿಟ್ಟರೆ ಯಥಾಪ್ರಕಾರ ಪ್ರತಿವರ್ಷದಂತೆ ಈ ವರ್ಷವೂ ಸಾಮಾಜಿಕ ಕಾರ್ಯಗಳು ನಡೆಯಲಿವೆ. ನಿಮ್ಮ ಹಾರೈಕೆ, ಅಭಿಮಾನ, ಸಾಂಗತ್ಯವೇ ನನ್ನ ಬಹುದೊಡ್ಡ ಆಸ್ತಿ. ಎಂದು ಅಭಿಮಾನಿಗಳಿಗೆ ಸುದೀರ್ಘ ಪತ್ರ ಬರೆದಿದ್ದಾರೆ ನಟ ಕಿಚ್ಚ ಸುದೀಪ್. ಇದನ್ನೂ ಓದಿ: ಮದರಾಸಿ ಟ್ರೈಲರ್‌ ರಿಲೀಸ್ – ಮಾಸ್ ಲುಕ್‌ನಲ್ಲಿ ಶಿವಕಾರ್ತಿಕೇಯನ್