Tag: ಕಿಚ್ಚ ಸುದೀಪ್

  • ಕಿಚ್ಚನನ್ನು ಬೆಸ್ಟಿ ಎಂದ ಸ್ಯಾಂಡಲ್‌ವುಡ್ ಕ್ವೀನ್

    ಕಿಚ್ಚನನ್ನು ಬೆಸ್ಟಿ ಎಂದ ಸ್ಯಾಂಡಲ್‌ವುಡ್ ಕ್ವೀನ್

    ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ಕಿಚ್ಚ ಸುದೀಪ್ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಸುದೀಪ್ ಜೊತೆಗಿನ ಸಂಭಾಷಣೆಯನ್ನ ರಮ್ಯಾ ಮೆಲುಕು ಹಾಕಿದ್ದಾರೆ. ಸಿನಿಮಾ ಸೆಟ್‌ನಲ್ಲಿ ನಡೆದ ಇಬ್ಬರ ಕೋಳಿ ಜಗಳದ ಬಗ್ಗೆ ಮಾತನಾಡಿದ್ದಾರೆ.

    `ರಂಗ ಎಸ್‌ಎಸ್‌ಎಲ್‌ಸಿ’, ಮುಸ್ಸಂಜೆ ಮಾತು, ಕಿಚ್ಚ ಹುಚ್ಚ, ಸಿನಿಮಾಗಳಲ್ಲಿ ರಮ್ಯಾ ಮತ್ತು ಸುದೀಪ್ ಒಟ್ಟಿಗೆ ನಟಿಸಿದ್ದಾರೆ. ಇಬ್ಬರೂ ಜೋಡಿಯಾಗಿ ತೆರೆಯ ಮೇಲೆ ಮೋಡಿ ಮಾಡಿದ್ದಾರೆ. ಹೀಗಿರುವಾಗ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಜಗಳದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ಕುರಿತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ನಾವು ಜಗಳ ಮಾಡೋಕೆ ಸ್ಟಾರ್ಟ್ ಮಾಡಿದಾಗ, ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ನಮ್ಮ ಸಿನಿಮಾದಲ್ಲಿ ಅಲ್ಲಲ್ಲಿ ಕಾಮಿಡಿ ಸೀನ್‌ಗಳಿದೆ ಆದರೆ ಕಾಮಿಡಿ ಸೀನ್‌ಗಿಂತ ನಮ್ಮ ಜಗಳಕ್ಕೆ ಚಪ್ಪಾಳೆ ತಟ್ಟಿದ್ದಾರೆ, ಏಂಜಾಯ್ ಮಾಡಿದ್ದಾರೆ ಎಂದು ಕಿಚ್ಚ ರಮ್ಯಾಗೆ ಕಾಲೆಳೆದಿದ್ದಾರೆ. ನಮ್ಮಿಬ್ಬರ ಈ ಜಗಳದಿಂದ ಎಂತಹ ಕೆಟ್ಟ ಹೆಸರು ಮಾಡಿದ್ದೀವಿ ಎಂದ ರಮ್ಯಾಗೆ, ಹೇ ಇದು ತುಂಬಾ ಒಳ್ಳೆಯ ಹೆಸರು ಎಂದು ಸುದೀಪ್‌ ತಮಾಷೆ ಮಾಡಿದ್ದಾರೆ. ಇದನ್ನೂ ಓದಿ:ರಾಖಿ ಸಾವಂತ್ ‘ಡುಮ್ಮಿ’ ಎಂದು ಕೆಣಕಿದ ನಟಿ ಶೆರ್ಲಿನ್ ಚೋಪ್ರಾ

    ನೀನೇ ಯಾವಾಗಲೂ ಜಗಳ ಮಾಡೋದು, ನೀನು ತಾನೇ ದೊಡ್ಡೋನು. ನೀನು ಯಾವ ಹೀರೋಯಿನ್ ಜೊತೆನೂ ಜಗಳ ಮಾಡಲ್ಲ. ನನ್ನ ಜೊತೆ ಜಗಳ ಮಾಡ್ತೀಯಾ ಬೇರೆಯವರಿಗೆ ಆದರೆ ಆಯ್ತು, ಓಕೆ ಅಂತಿಯಾ ಎಂದು ರಮ್ಯಾ ಕಿಚ್ಚನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಳಿಕ ಜಗಳ ಯಾರು ಮಾಡಿದ್ದು ಎಂದು ಕಿಚ್ಚ ಕೇಳಿದ್ರೆ, ನೀನೇ ಎಂದು ರಮ್ಯಾ ಕಂಪ್ಲೇಂಟ್ ಮಾಡಿದ್ದಾರೆ. ಈ ಮೂಲಕ ಕಿಚ್ಚ ಜೊತೆಗಿನ ಹಳೆಯ ವಿಡಿಯೋ ಶೇರ್ ಮಾಡುವ ರಮ್ಯಾ ಮೆಲುಕು ಹಾಕಿದ್ದಾರೆ. ಜೊತೆಗೆ ನೀವು ಸ್ವೀಟೆಸ್ಟ್ ಆ್ಯಂಡ್ ಬೆಸ್ಟಿ ಎಂದು ಕಿಚ್ಚನ ಬಗ್ಗೆ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್‌ನ ಇವರೇ ಗೆಲ್ಲುತ್ತಾರೆ ಸೀಕ್ರೆಟ್‌ ಬಿಚ್ಚಿಟ್ಟ ಮಯೂರಿ

    ಬಿಗ್ ಬಾಸ್‌ನ ಇವರೇ ಗೆಲ್ಲುತ್ತಾರೆ ಸೀಕ್ರೆಟ್‌ ಬಿಚ್ಚಿಟ್ಟ ಮಯೂರಿ

    ಶ್ವಿನಿ ನಕ್ಷತ್ರ, ಕೃಷ್ಣಲೀಲಾ, ಇಷ್ಟಕಾಮ್ಯ ಹೀಗೆ ಸಾಕಷ್ಟು ಸೀರಿಯಲ್ ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಹುಬ್ಬಳ್ಳಿ ಹುಡುಗಿ ಮಯೂರಿ(Mayuri) ನಾಲ್ಕನೇ ಸ್ಪರ್ಧಿಯಾಗಿ ಬಿಗ್ ಬಾಸ್‌ನಿಂದ ಹೊರಬಂದಿದ್ದಾರೆ. ಬಿಗ್ ಬಾಸ್ ಪಟ್ಟವನ್ನ ಯಾರು ಗೆಲ್ಲಬೇಕು, ಗೆಲ್ಲಬಹುದು ಎಂಬುದರ ಬಗ್ಗೆ ಮಯೂರಿ ಮಾತನಾಡಿದ್ದಾರೆ.

    ಚಂದನವನದಲ್ಲಿ ಸಾಕಷ್ಟು ಸಿನಿಮಾಗಳ ಕಮಾಲ್ ಪ್ರತಿಭಾನ್ವಿತ ನಟಿ ಮಯೂರಿ ಬಿಗ್ ಬಾಸ್ ಮನೆಯಲ್ಲಿ(Bigg Boss House) ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಆದರೆ ನಾಲ್ಕನೇ ವಾರಕ್ಕೆ ತಮ್ಮ ಆಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು. ಬಿಗ್ ಬಾಸ್ ಮನೆಯಲ್ಲಿನ ನೆನಪು ಮತ್ತು ಸ್ಪರ್ಧಿಗಳ ಗೆಲುವಿನ ಬಗ್ಗೆ ಮಯೂರಿ ಇದೀಗ ಮಾತನಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಸ್ಮಾರ್ಟ್ ಗೇಮ್ ಆಡ್ತಿದ್ದಾರೆ: ನೇಹಾ ಗೌಡ

    ಬಿಗ್ ಬಾಸ್‌ನ ಯಾರು ಗೆಲ್ಲಬೇಕು, ಗೆಲ್ಲಬಹುದು ಎಂದು ಹೇಳೋದು ತುಂಬಾ ಕಷ್ಟ. ಆ ಮನೆಯಲ್ಲಿ ಪ್ರತಿಯೊಬ್ಬರು ಗೆಲ್ಲುವಂತಹ ಅರ್ಹತೆ ಇರುವವರೇ ಇರೋದು. ಅದರಲ್ಲೂ ಈ ಬಾರಿ ಪ್ರವೀಣರು ಮತ್ತು ನವೀನರ ಪೈಪೋಟಿ ಜೋರಾಗಿ ಇರೋದರಿಂದ ಯಾರು ಗೆಲ್ಲುತ್ತಾರೆ ಅಂತಾ ಊಹೆ ಮಾಡೋದು ಅಸಾಧ್ಯ ಎಂದಿದ್ದಾರೆ. ಹೀಗಿರುವಾಗ ಟಾಪ್ 3ರಲ್ಲಿ ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ಇದ್ದೇ ಇರುತ್ತಾರೆ. ಇವರು ಚೆನ್ನಾಗಿ ಆಡುತ್ತಾ ಮನರಂಜನೆ ಕೊಡುತ್ತಿದ್ದಾರೆ ಎಂದು ಮಯೂರಿ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗರ್ಲ್‌ಫ್ರೆಂಡ್ಸ್‌ ಬಗ್ಗೆ ಬಾಯ್ಬಿಟ್ಟ ಸಾನ್ಯ ವಿರುದ್ಧ ಸಂಬರ್ಗಿ ಗರಂ

    ಗರ್ಲ್‌ಫ್ರೆಂಡ್ಸ್‌ ಬಗ್ಗೆ ಬಾಯ್ಬಿಟ್ಟ ಸಾನ್ಯ ವಿರುದ್ಧ ಸಂಬರ್ಗಿ ಗರಂ

    ಬಿಗ್ ಬಾಸ್ ಮನೆಯಲ್ಲಿ ಇತ್ತೀಚೆಗೆ ಸಾನ್ಯ ಅಯ್ಯರ್ ಅವರ ನಡೆ, ನುಡಿ ಮನೆಯವರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಇದೀಗ ಮತ್ತೆ ಸಾನ್ಯ ಮಾತು ಪ್ರಶಾಂತ್ ಸಂಬರ್ಗಿ ಅವರ ಬೇಸರಕ್ಕೆ ಕಾರಣವಾಗಿದೆ. ಗರ್ಲ್‌ಫ್ರೆಂಡ್ಸ್‌ ಬಗ್ಗೆ ಕಿಚ್ಚನ ಮುಂದೆ ಬಾಯ್ಬಿಟ್ಟ ಸಾನ್ಯ ವಿರುದ್ಧ ಸಂಬರ್ಗಿ ಕಿಡಿಕಾರಿದ್ದಾರೆ.

    ದೊಡ್ಮನೆಯಲ್ಲಿ ಸಾನ್ಯ ಮತ್ತು ಪ್ರಶಾಂತ್ ಸಂಬರ್ಗಿ ನಡುವೆ ಮೊದಲಿನಿಂದಲೂ ಒಳ್ಳೆಯ ಸ್ನೇಹವಿತ್ತು. ಇಬ್ಬರೂ ಸೇರಿ ರೂಪೇಶ್ ರಾಜಣ್ಣಗೆ ಬಕ್ರಾ ಮಾಡಿದ್ದರು. ಇದೀಗ ಸಾನ್ಯ ಮತ್ತು ಸಂಬರ್ಗಿ ನಡುವೆ ಕಿಡಿ ಹೊತ್ತಿಕೊಂಡಿದೆ. ನನ್ನ ಇಮೇಜ್ ಡ್ಯಾಮೇಜ್ ಮಾಡಬೇಡ ಎಂದು ಸಾನ್ಯಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ ಸಂಬರ್ಗಿ

    ಕಿಚ್ಚನ ವಾರ ಪಂಚಾಯಿತಿಯಲ್ಲಿ ಯಾರಿಗೆ ಉಡುಗೊರೆ ಕೊಡಲು ಬಯಸುತ್ತೀರಿ ಎಂದು ಸಾನ್ಯಗೆ ಕಿಚ್ಚ ಸುದೀಪ್ ಪ್ರಶ್ನಿಸಿದ್ದರು. ಆಗ,ಪ್ರಶಾಂತ್ ಸಂಬರ್ಗಿಗೆ ಅವರಿಗೆ ಅವರ ಹೆಂಡತಿ ಫೋಟೋ ಬೇಕೋ, ಗರ್ಲ್‌ಫ್ರೆಂಡ್ಸ್ ಫೋಟೋ ಬೇಕೋ, ಯಾವುದು ಬೇಕೋ ಅದು ಪಾಲಾಗುತ್ತೆ ಸರ್ ಎಂದರು ಸಾನ್ಯ. ಗರ್ಲ್‌ಫ್ರೆಂಡ್ಸ್ ವಿಚಾರ ಯಾಕೆ ಎಂದು ಕಿಚ್ಚ ಸುದೀಪ್ ಕೇಳಿದಾಗ, ಅವರು ಜಮಾನದಲ್ಲಿ ಇರಬೇಕಾದರೆ ಅವರಿಗೆ ಸಿಕ್ಕಾಪಟ್ಟೆ ಗರ್ಲ್‌ಫ್ರೆಂಡ್ಸ್ ಇದ್ದರು. ಹಳೇ ನೆನಪುಗಳನ್ನ ಮೆಲುಕು ಹಾಕಿ ಇನ್ನೂ ಯಂಗ್ ಆಗಲಿ ಅಂತ ಎಂದು ಸಾನ್ಯ ಅಯ್ಯರ್ ಉತ್ತರಿಸಿದರು. ಇದಾದ ಬಳಿಕ ಇದು ಡ್ಯಾಮೇಜಿಂಗ್ ಆಗಿದೆ ಎಂದು ಸಂಬರ್ಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ:ಅಂದು ಅಪ್ಪ, ಇಂದು ಅಪ್ಪು: ಕರ್ನಾಟಕ ರತ್ನ ಪ್ರಶಸ್ತಿಗೆ ರಾಘಣ್ಣ ಪ್ರತಿಕ್ರಿಯೆ

    ಕ್ಯಾಮೆರಾ ಮುಂದೆ ಹೇಳೋದಕ್ಕೂ, ಸ್ಟೇಜ್ ಮೇಲೆ ಮಾತನಾಡೋದಕ್ಕೂ ಸಾಕಷ್ಟು ವ್ಯತ್ಯಾಸವಿದೆ ನನ್ನ ಇಮೇಜ್ ಡ್ಯಾಮೇಜ್ ಮಾಡಬೇಡ ಎಂದು ಪ್ರಶಾಂತ್ ಸಂಬರ್ಗಿ ಸಾನ್ಯಗೆ ವಾರ್ನಿಂಗ್ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿರಹ ಮುಂದುವರೆಯಲಿ ಎಂದು ದಿವ್ಯಾ ಉರುಡುಗ ಕಾಲೆಳೆದ ಕಿಚ್ಚ

    ವಿರಹ ಮುಂದುವರೆಯಲಿ ಎಂದು ದಿವ್ಯಾ ಉರುಡುಗ ಕಾಲೆಳೆದ ಕಿಚ್ಚ

    ಕಿರುತೆರೆಯ ನಂಬರ್ ಒನ್ ಶೋ ಬಿಗ್ ಬಾಸ್(Bigg Boss) ಸಾಕಷ್ಟು ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚನನ್ನು ನೋಡಲೆಂದೇ ಕಾಯುವ ಅಪಾರ ಅಭಿಮಾನಿಗಳಿದ್ದಾರೆ. ಇನ್ನೂ ಈ ವಾರಾಂತ್ಯದ ಮಾತುಕತೆಯಲ್ಲಿ ದಿವ್ಯಾ ಉರುಡುಗ ಅವರಿಗೆ ಅರವಿಂದ್ (Arvind Kp) ವಿಷ್ಯವಾಗಿ ಸುದೀಪ್ ಕಾಲೆಳೆದಿದ್ದಾರೆ.

    ಪ್ರೇಕ್ಷಕರು ಮೆಚ್ಚಿರುವ ಬಿಗ್ ಬಾಸ್ ಶೋ ಸಾಕಷ್ಟು ವಿಚಾರವಾಗಿ ಸದ್ದು ಮಾಡುತ್ತಿದೆ. ಬಿಗ್ ಬಾಸ್‌ನ(Bigg Boss) ಎಲ್ಲಾ ಸ್ಪರ್ಧಿಗಳಿಗೆ ಕಿಚ್ಚ ಅಚ್ಚರಿಯ ಗಿಫ್ಟ್‌ವೊಂದನ್ನ ಕಳುಹಿಸಿ ಕೊಟ್ಟಿದ್ದಾರೆ. ತಮ್ಮ ಕೈ ಬರಹದ ರೂಪದಲ್ಲಿ ಕಿಚ್ಚ, ಪ್ರತಿ ಸ್ಪರ್ಧಿಗೂ ಪತ್ರದ ಮೂಲಕ ಉತ್ಸಾಹ ತುಂಬಿದ್ದಾರೆ. ಇನ್ನೂ ಸುದೀಪ್ ಕಳುಹಿಸಿದ್ದ ಪತ್ರದಲ್ಲಿ ದಿವ್ಯಾಗೆ ಬರೆದ ಬರಹ ಎಲ್ಲರ ಗಮನ ಸೆಳೆದಿದೆ.

    ಪ್ರೀತಿಯ ದಿವ್ಯಾ ಅವರೇ, ಈ ವಿರಹ ಮುಂದುವರೆಯಲಿ ಅಲ್ವಾ ಎಂದು ದಿವ್ಯಾಗೆ ಕಿಚ್ಚ ಕಾಲೆಳೆದಿದ್ದಾರೆ. ಕಿಚ್ಚನ ಬರಹಕ್ಕೆ ದಿವ್ಯಾ ನಾಚಿ ನೀರಾಗಿದ್ದಾರೆ. ಬಿಗ್ ಬಾಸ್ ಸೀಸನ್ 8ರಲ್ಲಿ ದಿವ್ಯಾ ಉರುಡುಗ(Divya Uruduga) ಮತ್ತು ಅರವಿಂದ್ ಪರಿಚಯವಾಗಿತ್ತು. ಈ ಸ್ನೇಹ ಪ್ರೀತಿಗೆ ತಿರುಗಿ, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. `ಅರ್ದಂ ಬರ್ಧ ಪ್ರೇಮ ಕಥೆ’ ಚಿತ್ರದ ಮೂಲಕ ದಿವ್ಯಾ ಮತ್ತು ಅರವಿಂದ್ ತೆರೆಯ ಮೇಲೂ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಮಗ ಯಥರ್ವ್ ಹುಟ್ಟುಹಬ್ಬಕ್ಕೆ ರಾಧಿಕಾ ಪಂಡಿತ್ ಲವ್ಲಿ ವಿಶ್

    ಸದ್ಯ ದಿವ್ಯಾ ಟಿವಿ ಬಿಗ್ ಬಾಸ್ 9ರಲ್ಲಿ ಪ್ರವೀಣರ ಸಾಲಿನಲ್ಲಿ ಪ್ರತಿ ಸ್ಪರ್ಧಿಗೂ ಟಫ್ ಸ್ಪರ್ಧೆ ನೀಡುತ್ತಿದ್ದಾರೆ. ಹೀಗೆ ಗೆಲುವಿನ ವಿಜಯಲಕ್ಷ್ಮಿ ದಿವ್ಯಾ ಪಾಲಿಗೆ ಸಿಗಲಿ ಎಂಬುದೇ ಅಭಿಮಾನಿಗಳ ಆಶಯ. ಈಗಾಗಲೇ ಐಶ್ವರ್ಯ, ನವಾಜ್, ದರ್ಶ್, ಮಯೂರಿ, ನೇಹಾ ಗೌಡ ಮನೆಯಿಂದ ಹೊರ ಬಂದಿದ್ದಾರೆ. ಮುಂದಿನ ವಾರ ದೊಡ್ಮನೆಯ ಆಟ ಯಾರಿಗೆ ಅಂತ್ಯವಾಗಲಿದೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ವೀಕೆಂಡ್ ಪಂಚಾಯಿತಿಯಲ್ಲಿ ಸಾನ್ಯಗೆ ಸುದೀಪ್ ಖಡಕ್ ಕ್ಲಾಸ್

    ವೀಕೆಂಡ್ ಪಂಚಾಯಿತಿಯಲ್ಲಿ ಸಾನ್ಯಗೆ ಸುದೀಪ್ ಖಡಕ್ ಕ್ಲಾಸ್

    ಬಿಗ್ ಬಾಸ್ ಮನೆಯ(Bigg Boss House) ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚನ ಕ್ಲಾಸ್‌ಗೆ ಬಿಗ್ ಬಾಸ್ ಮನೆಯೇ ಗಪ್‌ಚುಪ್ ಎಂದಿದೆ. ಕ್ಯಾಪ್ಟೆನ್ಸಿ ವಿಚಾರದಲ್ಲಿ ಸಾನ್ಯ ಅಯ್ಯರ್ (Sanya Iyer) ವರ್ತನೆಗೆ ಕಿಚ್ಚ ಮತ್ತೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆ ಮಂದಿಗೂ ಅವರವರ ತಪ್ಪುಗಳನ್ನ ಸುದೀಪ್ (Kiccha Sudeep) ಮನವರಿಕೆ ಮಾಡಿಸಿದ್ದಾರೆ.

    ದೊಡ್ಮನೆಯ ಆಟ ಕುತೂಹಲಕಾರಿಯಾಗಿ ನಡೆಯುತ್ತಿದೆ. ಕಳೆದ ವಾರ ಕಿಚ್ಚನ ಅನುಪಸ್ಥಿತಿಯಲ್ಲಿ ವೀಕೆಂಡ್ ಎಲಿಮಿನೇಷನ್(Elimination) ನಡೆದಿತ್ತು. ಸುದೀಪ್‌ ಮದುವೆ ವಾರ್ಷಿಕೋತ್ಸವದ ಪ್ರಯುಕ್ತ ವಿದೇಶಕ್ಕೆ ಪತ್ನಿಯ ಜತೆ ತೆರಳಿದ್ದರು. ಹಾಗಾಗಿ ಕಳೆದ ವಾರದ ಮಾತುಕತೆಯ ಜೊತೆ ಈ ವಾರದ ಭರ್ಜರಿ ಕ್ಲಾಸ್ ಅನ್ನ ಮನೆಮಂದಿಗೆ ಸುದೀಪ್ ತೆಗೆದುಕೊಂಡಿದ್ದಾರೆ. ಅದರಲ್ಲೂ ಕ್ಯಾಪ್ಟೆನ್ಸಿ ವೇಳೆಯಲ್ಲಿ ಸಾನ್ಯ ಮತ್ತು ದೀಪಿಕಾ ನಡೆದುಕೊಂಡ ರೀತಿಗೆ ಕಿಚ್ಚ ಜಬರ್‌ದಸ್ತ್ ಕ್ಲಾಸ್ ಮಾಡಿದ್ದಾರೆ. ಉಡುಗೊರೆ ಯಾರಿಗೆ ಬಂದಿದೆಯೋ, ಅವರಿಗೆ ಆಡೋಕೆ ಅವಕಾಶ ಇಲ್ಲ ಎನ್ನುವ ವಾತಾವರಣ ಕ್ರಿಯೇಟ್ ಆಗಿರೋದರ ಬಗ್ಗೆ ಸುದೀಪ್ ವಾರಾಂತ್ಯದಲ್ಲಿ ಪ್ರಸ್ತಾಪ ಮಾಡುತ್ತಾರೆ. ಇದನ್ನೂ  ಓದಿ:ಒಂದೇ ದಿನದಲ್ಲಿ ಕಾಡಿನಲ್ಲಿ ಶೂಟಿಂಗ್ – ಟವೆಲ್ ಸುತ್ತಿಡು ಕೊಂಅಭಿನಯಿಸಿದ್ದೆ

    ಸಾನ್ಯ ಅಯ್ಯರ್ ಕ್ಯಾಪ್ಟನ್ ಆಗಿದ್ದಾಗ ಹಲವು ನಿರ್ಧಾರಗಳು ತಪ್ಪಾಗಿದ್ವು. ಆಗ ಮನೆಯವರು ಅವರ ಕ್ಯಾಪ್ಟೆನ್ಸಿ ಇಷ್ಟ ಆಗಿಲ್ಲ ಎಂದು ಕಳಪೆ ಕೊಟ್ಟಿದ್ದರು. ಸಾನ್ಯ ನಿಮ್ಮ ದಾಟಿಯಿಂದ ಎಲ್ಲರಿಗೂ ನೋವಾಗಿದೆ. ನಿಮ್ಮ ನಿರ್ಧಾರದಿಂದ ಹಲವು ಗೊಂದಲಕ್ಕೆ ಎಡೆಮಾಡಿ ಕೊಟ್ಟಿದೆ. ಈ ಬಗ್ಗೆ ಸರಿಪಡಿಸಿಕೊಳ್ಳಿ ಎಂದು ಸಾನ್ಯಗೆ ಸುದೀಪ್ ಮನವರಿಕೆ ಮಾಡಿಸಿದ್ದರು.

    ದೀಪಿಕಾ ಕ್ಯಾಪ್ಟನ್ ಆಗಿದ್ದಾಗ ಒಂದು ತಂಡಕ್ಕೆ ಫೇವರಿಸಂ ಆಗಿದೆ ಎಂಬ ಚರ್ಚೆ ನಡೆದಿದೆ. ರೂಪೇಶ್ ರಾಜಣ್ಣ ಮತ್ತು ದಿವ್ಯಾ ಉರುಡುಗ, ದೀಪಿಕಾ ಒಂದು ತಂಡಕ್ಕೆ ಫೇವರಿಸಂ ಮಾಡಿದ್ದಾರೆ ಎಂದು ಸುದೀಪ್‌ಗೆ ಹೇಳ್ತಾರೆ. ಆಗ ನೇಹಾ ಗೌಡ, ಕ್ಯಾಪ್ಟೆನ್ಸಿ ವೇಳೆ ದೀಪಿಕಾ ಅವರು ನಡೆದುಕೊಂಡ ರೀತಿ ನನಗೆ ಇಷ್ಟ ಆಗಲಿಲ್ಲ ಎಂದು ಹೇಳ್ತಾರೆ. ದೀಪಿಕಾ(Deepika Das) ಕ್ಯಾಪ್ಟೆನ್ಸಿಯಲ್ಲಿ ಒಂದು ತಂಡಕ್ಕೆ ಗೇಮ್ ವೇಳೆ, ಎಲ್ಲೋ ಒಂದು ಕಡೆ ಫೇವರಿಸಂ ಆಗಿದೆ ಎಂದು ಕಿಚ್ಚ ದೀಪಿಕಾಗೆ ತಿದ್ದಿದ್ದಾರೆ. ಬಳಿಕ ದೀಪಿಕಾ, ಫೇವರಿಸಂನಿಂದ ನನಗೇನೂ ಸಿಗಲ್ಲ ಅಂತಾ ನನಗೆ ಗೊತ್ತು. ಗೊಂದಲಗಳಿಂದ ಹೀಗೆ ಆಗಿದೆ ಎಂದು ಎಲ್ಲರಲ್ಲಿ ಕ್ಷಮೆ ಕೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಅಯ್ಯರ್ ಜೊತೆ ರೂಪೇಶ್ ಶೆಟ್ಟಿ ಬ್ರೇಕ್ ಅಪ್ : ಪ್ರಣಯ ಹಕ್ಕಿಗಳು ದೂರ ದೂರ

    ಸಾನ್ಯ ಅಯ್ಯರ್ ಜೊತೆ ರೂಪೇಶ್ ಶೆಟ್ಟಿ ಬ್ರೇಕ್ ಅಪ್ : ಪ್ರಣಯ ಹಕ್ಕಿಗಳು ದೂರ ದೂರ

    ಬಿಗ್ ಬಾಸ್ (Bigg Boss Season 9) ಮನೆಯ ಪ್ರಣಯ ಪಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದವರು ರೂಪೇಶ್ ಶೆಟ್ಟಿ (Rupesh Shetty) ಹಾಗೂ ಸಾನ್ಯ ಅಯ್ಯರ್. ಈ ಜೋಡಿಯ ಬಗ್ಗೆ ಪ್ರೇಕ್ಷಕರು ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೂ ಈ ಜೋಡಿ ಹೀಗೆಯೇ ನಗ್ತಾ ಇರಲಿ ಎಂದು ಹಾರೈಸಿದ್ದರು. ಹಾಗಂತ ರೂಪೇಶ್ ಶೆಟ್ಟಿ ಆಗಲಿ, ಸಾನ್ಯ ಅಯ್ಯರ್ ಆಗಲಿ ನೋಡುಗರಿಗೆ ಮುಜುಗರ ಪಡುವಂತೆ ಯಾವತ್ತೂ ನಡೆದುಕೊಂಡವರಲ್ಲ. ಆದರೆ, ಮೊನ್ನೆ ಹಾಗಾಗಲಿಲ್ಲ. ಅವರ ಉದ್ದೇಶ ಅದಾಗದೇ ಇರಬಹುದು. ಅದೇ ಇರಬಹುದು ಎನ್ನುವ ಕಾರಣಕ್ಕಾಗಿ ಸುದೀಪ್ ಸಿಡಿದೆದ್ದರು.

    ಬಿಗ್ ಬಾಸ್ ಮನೆಯ ಕ್ಯಾಪ್ಟೆನ್ಸಿ ರೂಮ್ ನಲ್ಲಿ ರೂಪೇಶ್ ಶೆಟ್ಟಿ ಮೈಮೇಲೆ ಸಾನ್ಯ ಅಯ್ಯರ್  (Sanya Iyer) ಮಲಗಿಕೊಂಡಿದ್ದರು. ರೂಪೇಶ್ ಶೆಟ್ಟಿ ತಮ್ಮ ತೊಳಿನಿಂದ ಸಾನ್ಯ ಅಯ್ಯರ್ ಅನ್ನು ಬಿಗಿದಪ್ಪಿದ್ದರು. ಇವರ ಎದುರು ಆರ್ಯವರ್ಧನ್ (Aryavardhan Guruji) ಮಲಗಿದ್ದರು. ಮೂವರು ಮಲಗಿಕೊಂಡೇ ಹರಟೆ ಹೊಡೆಯುತ್ತಿದ್ದರು. ತಾವು ಮಲಗಿದ ರೀತಿ ಸರಿ ಇಲ್ಲ ಅಂತ ರೂಪೇಶ್ ಗಾಗಲಿ, ಸಾನ್ಯ ಅಯ್ಯರ್ ಗಾಗಲೇ ಅನಿಸದೇ ಇರಬಹುದು. ಆದರೆ, ಅದನ್ನು ಬಿಗ್ ಬಾಸ್ ನೋಟಿಸ್ ಮಾಡಿದ್ದಾರೆ. ಆ ರೀತಿ ವರ್ತಿಸೋದು ತಪ್ಪು ಎಂದು ಸುದೀಪ್ ಮೂಲಕ ಹೇಳಿಸಿದ್ದಾರೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

    ರೂಪೇಶ್ ಮತ್ತು ಸಾನ್ಯ ಆ ರೀತಿ ಮಾಡಿದ್ದಕ್ಕೆ  ಗರಂ ಆದ ಸುದೀಪ್ (Kichcha Sudeep) ‘ಕ್ಯಾಪ್ಟೆನ್ಸಿ ರೂಮ್ ನಲ್ಲಾಗಿದ್ದು ನಾಟ್ ಆಕ್ಸೆಪ್ಟಬಲ್. ಇದರಿಂದ ಕಂಟೆಂಟ್ ಸಿಗುತ್ತದೆ ಅಂದುಕೊಂಡಿದ್ದರೆ, ದಿಸ್ ಈಸ್ ನಾಟ್ ಎ ಶೋ ಫಾರ್ ದಟ್. ಈ ಮನೆ ಅದಕ್ಕಲ್ಲ’ ಎಂದು ಕಿಚ್ಚ ಖಡಕ್ಕಾಗಿಯೇ ವಾರ್ನಿಂಗ್ ಕೊಟ್ಟರು. ಸುದೀಪ್ ಅವರ ಮಾತಿನಿಂದ ಶಾಕ್ ಗೆ ಒಳಗಾದ ಈ ಜೋಡಿಗೆ ನಂತರ ಸಮಾಧಾನ ಮಾಡ್ತಾ, ‘ಯಾವುದೂ ಏನೂ ಹೊರಗೆ ಡ್ಯಾಮೇಜ್ ಆಗಿಲ್ಲ. ನೆಕ್ಸ್ಟ್ ಆಗೋದನ್ನ ತಡೆಯೋ ಪ್ರಯತ್ನ. ಫೋಕಸ್ ಮಿಸ್ ಮಾಡಬೇಡಿ’ ಎಂದು ಎಚ್ಚರಿಕೆ ನೀಡಿದರು.

    ಈ ಎಚ್ಚರಿಕೆಯನ್ನು ರೂಪೇಶ್ ಶೆಟ್ಟಿ ತುಂಬಾ ಸೀರಿಯಸ್ ಆಗಿ ತಗೆದುಕೊಂಡಿದ್ದಾರೆ. ಈ ಘಟನೆಯಿಂದ ನೊಂದುಕೊಂಡಿದ್ದ ರೂಪೇಶ್ ಮೊದಲು ಕಣ್ಣೀರು ಹಾಕಿದರು. ಇದೀಗ ಸಾನ್ಯರಿಂದ ದೂರ ಉಳಿಯುತ್ತಿದ್ದಾರೆ. ರೂಪೇಶ್ ಜೊತೆ ಊಟ ಮಾಡಲು ಸಾನ್ಯ ಕಾಯುತ್ತಿದ್ದರೂ, ಹೋಗಲಿಲ್ಲ. ಅಲ್ಲದೇ, ಸಾನ್ಯ ಜೊತೆ ಸರಿಯಾಗಿಯೂ ಅವರು ಮಾತನಾಡುತ್ತಿಲ್ಲ. ಪ್ರತಿ ನಿತ್ಯ ಸಾನ್ಯ ಜೊತೆನೇ ಕೂತು ಊಟ ಮಾಡುತ್ತಿದ್ದ ರೂಪೇಶ್, ಕಿಚ್ಚನ ಎಚ್ಚರಿಕೆಯ ಮಾತುಗಳ ನಂತರ ಸಾನ್ಯ ಜೊತೆ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ‘ಈ ರೀತಿ ನೀನು ಮಾಡಬೇಡ’ ಎಂದು ಸಾನ್ಯ ಹೇಳಿದರೂ, ರೂಪೇಶ್ ಈವರೆಗೂ ಬದಲಾಗಿಲ್ಲ.

    ರೂಪೇಶ್ ಈ ನಡೆಯಿಂದ ಸಾನ್ಯ ಕೂಡ ಅಪ್ ಸೆಟ್ ಆಗಿದ್ದಾರೆ. ನೇರವಾಗಿಯೇ ರೂಪೇಶ್ ಬಳಿ ಬಂದು ‘ಮೊದಲಿನ ಹಾಗೆ ನೀನು ಇಲ್ಲ. ತುಂಬಾ ಚೇಂಜ್ ಆಗಿದ್ದೀಯಾ. ನಿನಗೆ ಅಪ್ ಸೆಟ್ ಆಗಿದೆ ಅಂತಾನೇ ನಿನ್ನ ಜೊತೆ ನಾನು ಇರಬೇಕು ಅಂತ ಬರ್ತಿರೋದು. ಆದರೆ, ನೀನು ಅವೈಡ್ ಮಾಡ್ತಿದ್ದೀಯಾ’ ಎಂದು ಹಲವು ಪ್ರಶ್ನೆಗಳನ್ನು ಬೇಸರದಿಂದಲೇ ಕೇಳಿದರು ಸಾನ್ಯ. ‘ನನ್ನ ಬಗ್ಗೆ ಸದ್ಯ ನೀನೇ ಏನೇ ಅಂದುಕೊಂಡಿದ್ದರೂ, ನಿನ್ನ ಮೇಲಿನ ಕಾಳಜಿ ಬದಲಾಗಲ್ಲ’ ಎನ್ನುವ ಮೂಲಕ ರೂಪೇಶ್ ಆಕೆಗೆ ಸಮಾಧಾನ ಮಾಡಿದ್ದಾರೆ. ಆದರೆ, ಈ ಪ್ರೀತಿ ಹಾಗೆಯೇ ಉಳಿಯತ್ತಾ? ಅಥವಾ ಸುದೀಪ್ ಅವರ ಮಾತಿನ ಕಾರಣದಿಂದಾಗಿ ಬ್ರೇಕ್ ಅಪ್ ಆಗತ್ತಾ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಗುರೂಜಿ ಮೇಲೆ ಕಿಚ್ಚ ಕೆಂಡಾಮಂಡಲ

    ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಗುರೂಜಿ ಮೇಲೆ ಕಿಚ್ಚ ಕೆಂಡಾಮಂಡಲ

    ಸಂಖ್ಯಾಶಾಸ್ತ್ರದ ಮೂಲಕ ಗುರುತಿಸಿಕೊಂಡಿದ್ದ ಆರ್ಯವರ್ಧನ್ ಗುರೂಜಿ(Aryavardhan Guruji) ಇದೀಗ ಟಿವಿ ಬಿಗ್ ಬಾಸ್‌ನಲ್ಲಿ(Bigg Boss) ಕಮಾಲ್ ಮಾಡುತ್ತಿದ್ದಾರೆ. ತಮ್ಮ ನೇರವಾದ ಮಾತಿನ ಮೂಲಕ ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದು ಇದೆ. ಇದೀಗ ಮತ್ತೆ ದೊಡ್ಮನೆಯಲ್ಲಿ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಬಿಗ್ ಬಾಸ್ ಮೇಲೆ ಗುರೂಜಿ ಮ್ಯಾಚ್ ಫಿಕ್ಸಿಂಗ್ ಆರೋಪವನ್ನು ಮಾಡಿದ್ದಾರೆ. ಗುರೂಜಿ ಮಾತಿಗೆ ಕಿಚ್ಚ ಫುಲ್ ಗರಂ ಆಗಿದ್ದಾರೆ.

    ದೊಡ್ಮನೆಯಲ್ಲಿ ಸದಾ ಒಂದಲ್ಲಾ ಒಂದು ಕಿರಿಕ್ ಮೂಲಕ ಸದ್ದು ಮಾಡುವ ಗುರೂಜಿ ಇದೀಗ ಕಿಚ್ಚನ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೂಪರ್ ಸಂಡೇ ವಿತ್ ಸುದೀಪ ವೀಕೆಂಡ್ ಕಾರ್ಯಕ್ರಮದಲ್ಲಿ ಸುದೀಪ್ (Kiccha Sudeep) ಎಂದಿನಂತೆ ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ. ಸ್ಪರ್ಧಿಗಳಿಗೆ ಪ್ರಶ್ನೆ ಕೇಳಿದ್ದಾರೆ. ಟಾಪ್ 2 ಯಾರು ಆಗ್ತಾರೆ ಎಂದು ಕೇಳಿದರು. ಸ್ಪರ್ಧಿಗಳು ಒಬ್ಬರ ಹೆಸರನ್ನು ಹೇಳುತ್ತಿದ್ದರು. ಗುರೂಜಿ, ಅನುಪಮಾ ಹೆಸರು ಹೇಳಿ ಬಿಗ್ ಬಾಸ್‌ಗೂ ಅನುಪಮಾ(Anupama Gowda) ಒಳಗಡೆ ಬರ್ಬೇಕು ಅಂತ ಆಸೆ ಇತ್ತು ಎಂದು ಹೇಳಿದರು. ಇದರಿಂದ ಕೆರಳಿದ ಸುದೀಪ್ ಹಾಗೆಲ್ಲ ಮಾತನಾಡಬೇಡಿ ಸರ್ ಎಂದು ಹೇಳಿದರು. ಬಂಗಾರದ ಟಾಸ್ಕ್‌ನಲ್ಲಿ ಎಷ್ಟು ಬಂಗಾರ ಇದೆ ಅಂತ ಗೊತ್ತಿದ್ದರೂ ಅನುಪಮಾನ ಒಳಗಡೆ ಕರೆಸುತ್ತಾರೆ ಅಂದರೆ ಏನು ಅರ್ಥ. ಮ್ಯಾಚ್ ಫಿಕ್ಸಿಂಗ್ ಆಗಿದೆ ಇಲ್ಲಿ ಎಂದು ಗಂಭೀರ ಆರೋಪ ಮಾಡಿದರು. ಸುದೀಪ್ ಸ್ಪರ್ಧಿಗಳಲ್ಲಿ ನಿಮಗೆ ಹಾಗೆ ಅನಿಸಿತಾ ಎಂದು ಕೇಳಿದರು. ಸ್ಪರ್ಧಿಗಳೆಲ್ಲಾ ಇಲ್ಲಾ ಎಂದರು.

    ಗುರೂಜಿ ಮಾತಿನ ವರಸೆಗೆ ಕೆಂಡವಾದ ಸುದೀಪ್ (Kiccha Sudeep) ಮಾತಿನ ಮೇಲೆ ನಿಗಾ ಇರಲಿ ಎಂದು ಎಚ್ಚರಿಕೆ ನೀಡಿದರು. ಆದರೂ ಸಹ ಗುರೂಜಿ ಯೋಚನೆ ಮಾಡಿ ಹೇಳಬೇಕಲ್ಲ ಹಾಗಾಗಿ ಹೇಳುತ್ತಿದ್ದೀನಿ ಎಂದು ತನ್ನ ಮಾತನ್ನು ಸಮರ್ಥಿಸಿಕೊಂಡರು. ಮ್ಯಾಚ್ ಫಿಕ್ಸಿಂಗ್ ಅಂದರೆ ಏನು ಅಲ್ಲಿ ಕುಳಿತು ಆಡುತ್ತಿರುವವರೆಲ್ಲ ಏನು ಹಾಗಾದ್ರೆ, ಯಾರಿಗೂ ಯೋಗ್ಯತೆ ಇಲ್ವಾ, ಮೋಸ ಮಾಡಿ ಗೆಲ್ತಾ ಇದ್ದಾರಾ ಎಂದು ಸುದೀಪ್ ಖಡಕ್ ಆಗಿ, ಕೇಳಿದ್ದರು. ಸಹಜವಾಗಿ ನಾನು ಹೇಳಿದ್ದು ಎಂದು ಆರ್ಯವರ್ದನ್ ಮತ್ತೆ ಮಧ್ಯೆ ಮಾತಾಡಿದರು. ಇದನ್ನೂ ಓದಿ:`ಬಿಗ್ ಬಾಸ್’ ಖ್ಯಾತಿಯ ವೈಶಾಲಿ ಠಕ್ಕರ್ ಆತ್ಮಹತ್ಯೆ

    ನಿಮ್ಮ ವ್ಯಕ್ತಿತ್ವದ ಮೇಲೆ ಮಾತನಾಡಿದರೆ ಇಷ್ಟು ಉದ್ದ ಮಾತನಾಡುತ್ತೀರಾ. ಈ ವೇದಿಕೆ ಮರ್ಯಾದೆ ತೆಗೆದರೆ ಸತ್ಯವಾಗಿ ಹೇಳ್ತೀನಿ, ನನಗೆ ನಿಮಗೆ ಇಲ್ಲೆ ಕೊನೆಯಾಗುತ್ತೆ ಎಂದು ಸುದೀಪ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ರೂಪೇಶ್‌, ಸಾನ್ಯಗೆ ಖಡಕ್‌ ಕ್ಲಾಸ್‌ ಸುದೀಪ್ ತೆಗೆದುಕೊಂಡಿದ್ದರು.‌ ಇದೀಗ ಗುರೂಜಿಗೆ ವಾರ್ನ್‌ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಿಚ್ಚನ ವಾರ್ನಿಂಗ್‌ಗೆ ಗಳಗಳನೆ ಅತ್ತ ರೂಪೇಶ್‌ ಶೆಟ್ಟಿ

    ಕಿಚ್ಚನ ವಾರ್ನಿಂಗ್‌ಗೆ ಗಳಗಳನೆ ಅತ್ತ ರೂಪೇಶ್‌ ಶೆಟ್ಟಿ

    ದೊಡ್ಮನೆಯಲ್ಲಿ ನಾವಿಬ್ಬರು ಕ್ಲೋಸ್ ಫ್ರೆಂಡ್ಸ್ ಎಂದು ಹೇಳಿಕೊಂಡು ಬರುತ್ತಿದ್ದ ರೂಪೇಶ್(Roopesh Shetty) ಮತ್ತು ಸಾನ್ಯಳ (Sanya Iyer) ಮಿತಿ ಮೀರಿದ ರೊಮ್ಯಾನ್ಸ್‌ಗೆ ಸುದೀಪ್ ಬ್ರೇಕ್ ಹಾಕಿದ್ದಾರೆ. ಕ್ಯಾಪ್ಟೆನ್ಸಿ ಅವಧಿ ಮುಗಿದ ನಂತರ ಕ್ಯಾಪ್ಟನ್ ರೂಮ್‌ನಲ್ಲಿ ಗುರೂಜಿ ಜೊತೆ ಸಾನ್ಯ, ರೂಪೇಶ್ ಇದ್ದಂತಹ ರೀತಿಗೆ ಸುದೀಪ್(Kiccha Sudeep) ಎಚ್ಚರಿಕೆ ಕೊಟ್ಟಿದ್ದಾರೆ. ಕಿಚ್ಚನ ಕ್ಲಾಸ್‌ಗೆ ರೂಪೇಶ್ ಶೆಟ್ಟಿ ಗಳಗಳನೆ ಅತ್ತಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಪಕ್ಷಿಗಳಾಗಿ ಕಾಣಿಸಿಕೊಂಡಿದ್ದ ರೂಪೇಶ್ ಮತ್ತು ಸಾನ್ಯಗೆ ಕಿಚ್ಚ ಸುದೀಪ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕ್ಯಾಪ್ಟೆನ್ಸಿ ಅವಧಿಯ ನಂತರ ಗುರೂಜಿ ಜೊತೆ ಮಾತನಾಡುತ್ತ ಬೆಡ್ ಮೇಲೆ ರೂಪೇಶ್ ಮತ್ತು ಸಾನ್ಯ ಮಲಗಿರುವ ರೀತಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನೇನೂ ಮಾಡಿಲ್ಲ ಎಂದು ರೂಪೇಶ್ ಶೆಟ್ಟಿ ಈ ವೇಳೆ ಭಾವುಕರಾಗಿದ್ದಾರೆ.

    ವೀಕೆಂಡ್‌ನಲ್ಲಿ ಸುದೀಪ್ ರೂಪೇಶ್, ಸಾನ್ಯಗೆ ಕ್ಯಾಪ್ಟೆನ್ಸಿ ಅವಧಿ ಮುಗಿದ ನಂತರ ನೀವು ಪಿಕ್‌ನಿಕ್ ಮಾಡ್ತಾ ಇದ್ರಿ. ಆ ರೂಂಗೆ ಒಂದು ಗೌರವ ಇದೆ. ಅದು ಪಿಕ್‌ನಿಕ್ ಸ್ಪಾಟ್ ಅಲ್ಲ ಎಂದರು ಸುದೀಪ್. ನಮ್ಮ ಉದ್ದೇಶ ಆ ರೀತಿ ಇರಲಿಲ್ಲ. ನಾನು ಯಾವಾಗಲೂ ಆ ರೀತಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಲು ಬಂದರು ರೂಪೇಶ್. ನೀವು ಮಿತಿಮೀರಿ ನಡೆದುಕೊಂಡಿದ್ದೀರಿ. ಆ ರೀತಿ ಆಗಿದ್ದಕ್ಕಾಗಿಯೇ ನಾವು ಹೇಳ್ತಿರೋದು. ನೀವು ಮಧ್ಯರಾತ್ರಿ ಹಗ್ ಮಾಡಿಕೊಳ್ತೀರಿ. ಅದಕ್ಕೆ ನಾವು ಯಾವಾಗಲೂ ಅಪಸ್ವರ ತೆಗೆದಿಲ್ಲ. ಅದು ಇಲ್ಲಿ ಸಮಸ್ಯೆ ಅಲ್ಲ. ಈ ಮೊದಲು ಅನೇಕರು ಈ ಮನೆಯಲ್ಲಿ ಕ್ಲೋಸ್ ಆಗಿದ್ದರು. ಆದರೆ, ಈಗ ಇದನ್ನು ಹೇಳ್ತಿದೀವಿ ಎಂದರೆ ಅರ್ಥ ಮಾಡಿಕೊಳ್ಳಿ. ನೀವು ಈ ರೀತಿ ಮಾಡ್ತಾ ಇರೋದ್ರಿಂದಲೇ ನಮಗೆ ಕಂಟೆಂಟ್ ಸಿಗುತ್ತಿದೆ ಎಂದುಕೊಂಡರೆ ಈ ಮನೆ ಅದಕ್ಕಲ್ಲ ಎಂದು ಸುದೀಪ್ ಎಚ್ಚರಿಕೆ ನೀಡಿದರು. ಇದನ್ನೂ ಓದಿ:ನಯನತಾರಾ- ವಿಘ್ನೇಶ್ ಶಿವನ್ ಬಾಡಿಗೆ ತಾಯ್ತನದ ಕೇಸ್‌ಗೆ ಬಿಗ್ ಟ್ವಿಸ್ಟ್

    ಸುದೀಪ್ ಖಡಕ್ ಎಚ್ಚರಿಕೆ ನಂತರ ರೂಪೇಶ್ ಶೆಟ್ಟಿ ಭಾವುಕರಾಗಿದ್ದಾರೆ. ನಮ್ಮ ಉದ್ದೇಶ ಕೆಟ್ಟದಾಗಿ ಇರಲಿಲ್ಲ ನಾನು ಮನೆಯಿಂದ ವಾಕ್ ಔಟ್ ಆಗುತ್ತೇನೆ ಎಂದು ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಗೊತ್ತಿಲ್ಲ ಹೇಗೆ ಕಂಡಿದೆ ಅಂತ. ನಾನು ಆ ತರಹ ಅಲ್ಲ. ನನ್ನ ತಾಯಿಗಿಂತ ದೊಡ್ಡ ದೇವರಿಲ್ಲ. ನಾನು ಆ ತರಹ ಕಂಡಿದ್ದರೆ ಅದು ತಪ್ಪು. ಇವತ್ತೇ ವಾಕ್ ಆಫ್ ಆಗೋದಕ್ಕೆ ರೆಡಿ ಇದ್ದೇನೆ ಸರ್. ನನ್ನ ತಾಯಿ ಆಣೆಗೂ ಇಲ್ಲಿರೋರಲ್ಲಿ ಯಾರ ಮೇಲೂ ನನಗೆ ಆ ತರಹದ ಭಾವನೆ ಇಲ್ಲ. ಅದ್ಯಾಕೆ ಹಾಗೆ ಕಾಣ್ತು ಅಂತ ನನಗೆ ಗೊತ್ತಿಲ್ಲ. ಕಂಡಿದೆ ಅಂದ್ರೆ ಅದಕ್ಕೆ ನನ್ನದೇ ತಪ್ಪು. ವಾಕ್ ಆಫ್ ಆಗೋದಕ್ಕೂ ರೆಡಿ ಇದ್ದೀನಿ ಎಂದು ರೂಪೇಶ್ ಮಾತನಾಡಿದ್ದಾರೆ. ಸುದೀಪ್ ಅವರ ಮಾತುಗಳನ್ನ ಕೇಳಿದ ನಂತರ ನಾನೇನೂ ಮಾಡಿಲ್ಲ. ಹಗ್ ಕೊಡೋಕೆ ಹಿಂದೆ ಮುಂದೆ ನೋಡ್ತೀನಿ ಎಂದು ಹೇಳುತ್ತಾ ರೂಪೇಶ್ ಶೆಟ್ಟಿ ಮನೆಯವರ ಮುಂದೆ ಗಳಗಳನೆ ಅತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಈ ಮನೆ ಅದಕ್ಕಲ್ಲ; ಮಿತಿ ಮೀರಿದ ರೂಪೇಶ್, ಸಾನ್ಯ ರೊಮ್ಯಾನ್ಸ್‌ಗೆ ಕಿಚ್ಚ ವಾರ್ನಿಂಗ್

    ಈ ಮನೆ ಅದಕ್ಕಲ್ಲ; ಮಿತಿ ಮೀರಿದ ರೂಪೇಶ್, ಸಾನ್ಯ ರೊಮ್ಯಾನ್ಸ್‌ಗೆ ಕಿಚ್ಚ ವಾರ್ನಿಂಗ್

    ಬಿಗ್ ಬಾಸ್ ಮನೆಯ(Bigg Boss House) ಲವ್‌ ಬರ್ಡ್ಸ್ ಆಗಿ ಹೈಲೆಟ್ ಆಗಿದ್ದ ರೂಪೇಶ್ ಶೆಟ್ಟಿ(Roopesh Shetty) ಮತ್ತು ಸಾನ್ಯ ಅಯ್ಯರ್ ಗೆ(Sanya Iyer)‌ ಇದೀಗ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಿತಿ ಮೀರಿದ ಸಾನ್ಯ ಮತ್ತು ರೂಪೇಶ್ ರೊಮ್ಯಾನ್ಸ್‌ಗೆ ಕಿಚ್ಚ ಸುದೀಪ್ ಚಳಿ ಬಿಡಿಸಿದ್ದಾರೆ.

    ದೊಡ್ಮನೆಯಲ್ಲಿ ನಾವಿಬ್ಬರು ಕ್ಲೋಸ್ ಫ್ರೆಂಡ್ಸ್ ಅಷ್ಟೇ ಎಂದು ಹೇಳಿಕೊಂಡು ಬರುತ್ತಿದ್ದ ರೂಪೇಶ್ ಮತ್ತು ಸಾನ್ಯಳ ಮಿತಿ ಮೀರಿದ ಒಡನಾಟಕ್ಕೆ ಸುದೀಪ್ ಬ್ರೇಕ್ ಹಾಕಿದ್ದಾರೆ. ಕ್ಯಾಪ್ಟೆನ್ಸಿ ಅವಧಿ ಮುಗಿದ ನಂತರ ಕ್ಯಾಪ್ಟನ್ ರೂಮ್ ನಲ್ಲಿ ಗುರೂಜಿ ಜೊತೆ ಸಾನ್ಯ, ರೂಪೇಶ್ ಇದ್ದಂತಹ ರೀತಿಗೆ ಕಿಚ್ಚ ಎಚ್ಚರಿಕೆ ಕೊಟ್ಟಿದ್ದಾರೆ.‌ ಇದನ್ನೂ ಓದಿ:ಈ ವಾರ ಬಿಗ್ ಬಾಸ್ ಮನೆಯಿಂದ ದರ್ಶ್ ಚಂದ್ರಪ್ಪ ಔಟ್

    ಕ್ಯಾಪ್ಟನ್ಸಿ ಅವಧಿ ಮುಗಿದ ನಂತರ ನೀವು ಪಿಕ್​ನಿಕ್ ಮಾಡ್ತಾ ಇದ್ರಿ. ಆ ರೂಂಗೆ ಒಂದು ಗೌರವ ಇದೆ. ಅದು ಪಿಕ್​ನಿಕ್ ಸ್ಪಾಟ್​ ಅಲ್ಲ ಎಂದರು ಸುದೀಪ್. ಅದಕ್ಕೆ ರೂಪೇಶ್ ಸ್ಪಷ್ಟನೆ ನೀಡುವ ಕೆಲಸ ಮಾಡಿದರು. ನಮ್ಮ ಉದ್ದೇಶ ಆ ರೀತಿ ಇರಲಿಲ್ಲ. ನಾನು ಯಾವಾಗಲೂ ಆ ರೀತಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಲು ಬಂದರು ರೂಪೇಶ್.

    ನೀವು ಮಿತಿಮೀರಿ ನಡೆದುಕೊಂಡಿದ್ದೀರಿ. ಆ ರೀತಿ ಆಗಿದ್ದಕ್ಕಾಗಿಯೇ ನಾವು ಹೇಳ್ತಿರೋದು. ನೀವು ಮಧ್ಯರಾತ್ರಿ ಹಗ್ ಮಾಡಿಕೊಳ್ತೀರಿ. ಅದಕ್ಕೆ ನಾವು ಯಾವಾಗಲೂ ಅಪಸ್ವರ ತೆಗೆದಿಲ್ಲ. ಅದು ಇಲ್ಲಿ ಸಮಸ್ಯೆ ಅಲ್ಲ. ಈ ಮೊದಲು ಅನೇಕರು ಈ ಮನೆಯಲ್ಲಿ ಕ್ಲೋಸ್ ಆಗಿದ್ದರು. ಆದರೆ, ಈಗ ಇದನ್ನು ಹೇಳ್ತಿದೀವಿ ಎಂದರೆ ಅರ್ಥ ಮಾಡಿಕೊಳ್ಳಿ. ನೀವು ಈ ರೀತಿ ಮಾಡ್ತಾ ಇರೋದ್ರಿಂದಲೇ ನಮಗೆ ಕಂಟೆಂಟ್ ಸಿಗುತ್ತಿದೆ ಎಂದುಕೊಂಡರೆ ಈ ಮನೆ ಅದಕ್ಕಲ್ಲ ಎಂದು ಸುದೀಪ್ (Kiccha Sudeep) ಎಚ್ಚರಿಕೆ ನೀಡಿದರು.

    ಇನ್ನೂ ಸುದೀಪ್ ಖಡಕ್ ಎಚ್ಚರಿಕೆ ನಂತರ ರೂಪೇಶ್ ಶೆಟ್ಟಿ ಭಾವುಕರಾಗಿದ್ದಾರೆ. ನಮ್ಮ ಉದ್ದೇಶ ಕೆಟ್ಟದಾಗಿ ಇರಲಿಲ್ಲ ನಾನು ಮನೆಯಿಂದ ವಾಕ್ ಔಟ್ ಆಗುತ್ತೇನೆ ಎಂದು ರೂಪೇಶ್ ಬಿಕ್ಕಿ‌ ಬಿಕ್ಕಿ ಅತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೂಪರ್ ಟೆನ್ ಲೀಗ್‍ನಲ್ಲಿ ಗೇಲ್ ಜೊತೆ ಬ್ಯಾಟ್‍ ಬೀಸಲಿದ್ದಾರೆ ಕಿಚ್ಚ ಸುದೀಪ್

    ಸೂಪರ್ ಟೆನ್ ಲೀಗ್‍ನಲ್ಲಿ ಗೇಲ್ ಜೊತೆ ಬ್ಯಾಟ್‍ ಬೀಸಲಿದ್ದಾರೆ ಕಿಚ್ಚ ಸುದೀಪ್

    ಬೆಂಗಳೂರು: ಸ್ಯಾಂಡಲ್‍ವುಡ್ (Sandalwood) ಖ್ಯಾತ ನಟ ಕಿಚ್ಚ ಸುದೀಪ್ (Kichcha Sudeep) ಮತ್ತು ವೆಸ್ಟ್ ಇಂಡೀಸ್‍ನ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ (Chris Gayle) ಸೂಪರ್ ಟೆನ್ ಕ್ರಿಕೆಟ್ ಲೀಗ್‍ನಲ್ಲಿ (Super Ten League) ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

    ಸೂಪರ್ ಟೆನ್ ಕ್ರಿಕೆಟ್ ಲೀಗ್‍ನಲ್ಲಿ ಸೆಲೆಬ್ರಿಟಿಗಳು ಮತ್ತು ವಿಶ್ವದ ಮಾಜಿ ಕ್ರಿಕೆಟ್ ಆಟಗಾರರು ಜೊತೆ ಸೇರಿ ಆಡಲಿದ್ದಾರೆ. 10 ಓವರ್‌ಗಳ ಸ್ವರೂಪದ ಕ್ರಿಕೆಟ್ ಲೀಗ್ ಇದಾಗಿದ್ದು, 2 ದಿನ ಬೆಂಗಳೂರಿನಲ್ಲಿ ಸೂಪರ್ ಟೆನ್ ಲೀಗ್ ನಡೆಸಲು ಈಗಾಗಲೇ ಸಿದ್ಧತೆ ಆರಂಭವಾಗಿದೆ. ಕ್ರಿಕೆಟ್ ಲೀಗ್‍ನಲ್ಲಿ ಬಾಲಿವುಡ್ (Bollywood), ಕನ್ನಡ (Kannada), ತಮಿಳು (Tamil)  ಮತ್ತು ತೆಲುಗು (Telugu)  ಚಿತ್ರರಂಗದ ನಟರು ಮತ್ತು ವಿಶ್ವದ ಮಾಜಿ ಕ್ರಿಕೆಟಿಗರು ಒಟ್ಟಿಗೆ ಸೇರಿ ಕ್ರಿಕೆಟ್ ಟೂರ್ನಿ ಆಡಲಿದ್ದಾರೆ. ಇದನ್ನೂ ಓದಿ: ಶಿಫಾಲಿ, ದೀಪ್ತಿ ಆಟಕ್ಕೆ ಥಾಯ್ಲೆಂಡ್‌ ಥಂಡಾ – ಏಷ್ಯಾಕಪ್ ಫೈನಲ್‍ಗೆ ಭಾರತ

    ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಗೇಲ್, ಜಗತ್ತಿನಾದ್ಯಂತ ಇರುವ ನನ್ನ ಕ್ರಿಕೆಟ್ ಗೆಳೆಯರು ಮತ್ತು ಚಿತ್ರರಂಗದಲ್ಲಿರುವ ದಿಗ್ಗಜರೊಂದಿಗೆ ಕ್ರಿಕೆಟ್ ಆಡಲು ಉತ್ಸುಕನಾಗಿದ್ದೇನೆ. ಪಂದ್ಯಾವಳಿಯು ಸೂಪರ್ 10 ಮಾದರಿಯಲ್ಲಿ ಇರಲಿದ್ದು, ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಬುಮ್ರಾ ಬದಲು ಶಮಿ, ಚಹರ್ ಔಟ್ – ಆಸ್ಟ್ರೇಲಿಯಾಗೆ ಹಾರಲಿದ್ದಾರೆ ಶಾರ್ದೂಲ್, ಸಿರಾಜ್

    ನಮ್ಮ ದೇಶ ಕ್ರಿಕೆಟ್ ಆಟವನ್ನು ತುಂಬಾ ಪ್ರೀತಿಸುತ್ತದೆ. ಇದೀಗ ಮಾಜಿ ಕ್ರಿಕೆಟಿಗರು, ಚಿತ್ರರಂಗದ ಗೆಳೆಯರು ಮತ್ತು ಉದ್ಯಮಿಗಳೊಂದಿಗೆ ಕ್ರಿಕೆಟ್ ಟೂರ್ನಿ ನಡೆಸಲು ಮುಂದಾಗಿದ್ದೇವೆ. ಸ್ಪರ್ಧಾತ್ಮಕ ಕ್ರಿಕೆಟ್‌ ಟೂರ್ನಿಯ ಮೂಲಕ ಇನ್ನಷ್ಟು ಮನರಂಜನೆ ಸಿಗಲಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]