Tag: ಕಿಚ್ಚ ಸುದೀಪ್

  • ಬಿಗ್‌ ಬಾಸ್‌ ಆಟ ಬಿಟ್ಟು ಕೊಡಬೇಡ, ದಿವ್ಯಾಗೆ ಅರವಿಂದ್ ಪ್ರೀತಿಯ ಸಂದೇಶ

    ಬಿಗ್‌ ಬಾಸ್‌ ಆಟ ಬಿಟ್ಟು ಕೊಡಬೇಡ, ದಿವ್ಯಾಗೆ ಅರವಿಂದ್ ಪ್ರೀತಿಯ ಸಂದೇಶ

    ಬಿಗ್ ಬಾಸ್ ಮನೆಯ (Bigg Boss House) ಆಟ 10 ವಾರಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಸ್ಪರ್ಧಿ ದಿವ್ಯಾ ಉರುಡುಗ (Divya Uruduga) ಕೂಡ ಈ ಹಿಂದಿನ ಸೀಸನ್‌ನಲ್ಲಿ ಕೂಡ ಗುರುತಿಸಿಕೊಂಡಿದ್ದರು. ಇದೀಗ ಬಿಗ್ ಬಾಸ್ ಸೀಸನ್ 9ರಲ್ಲೂ ಖಡಕ್ ಸ್ಪರ್ಧಿಯಾಗಿ ಪೈಪೋಟಿ ನೀಡುತ್ತಿದ್ದಾರೆ. ಹೀಗಿರುವಾಗ ಭಾವಿ ಪತ್ನಿ ದಿವ್ಯಾ ಉರುಡುಗ ಅವರಿಗೆ ಅರವಿಂದ್‌ ಕೆ.ಪಿ(Aravind Kp) ಪ್ರೀತಿಯ ಸಂದೇಶವನ್ನ ಕೊಟ್ಟಿದ್ದಾರೆ.

    ಸೀರಿಯಲ್, ಸಿನಿಮಾ, ಟಿವಿ ಶೋ ಬಿಗ್ ಬಾಸ್ ಎಲ್ಲದರಲ್ಲೂ ಸೈ ಎನಿಸಿಕೊಂಡವರು ನಟಿ ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಪ್ರವಿಣರ ಸಾಲಿನಲ್ಲಿ ಪೈಪೋಟಿ ನೀಡುತ್ತಿದ್ದಾರೆ. ಇದರ ಮಧ್ಯೆ ದಿವ್ಯಾಗೆ ಬಿಗ್ ಬಾಸ್ ಆಟ ಬಿಟ್ಟು ಕೊಡಬೇಡ ಆಡು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಅರವಿಂದ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಉದ್ಯಮಿ ಸೋಹೈಲ್ ಕೈಹಿಡಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ

    View this post on Instagram

     

    A post shared by Aravind K P (@aravind_kp)

    ‌ʻಮರಿಹುಳುನ ಕೈಬಿಟ್ಟರೆ, ಅದು ಎಂದಿಗೂ ಸುಂದರವಾದ ಚಿಟ್ಟೆಯಾಗುವುದಿಲ್ಲ ನೆವರ್ ಗಿವ್ ಅಪ್ʼ ಎಂದು ಅರವಿಂದ್, ದಿವ್ಯಾ ಉರುಡುಗಗೆ ಬೆಂಬಲ ನೀಡಿದ್ದಾರೆ. ಈಗಾಗಲೇ 10 ವಾರಗಳನ್ನ ದೊಡ್ಮನೆಯಲ್ಲಿ ಪೂರೈಸಿರುವ ದಿವ್ಯಾ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ದಿವ್ಯಾ ಉರುಡುಗ ಗೆದ್ದು ಬರಲಿ ಎಂಬುದೇ ಅರವಿಂದ್ ಮತ್ತು ಅಭಿಮಾನಿಗಳ ಆಶಯ.

    ಇತ್ತೀಚೆಗೆ ಅರವಿಂದ್, ದಿವ್ಯಾ ಜೊತೆಗಿನ ಲವ್ ಲೈಫ್ ಬಗ್ಗೆ ರಿವೀಲ್ ಮಾಡಿದ್ದರು. ಇಬ್ಬರು ಎಂಗೇಜ್ ಆಗಿದ್ದು, ಸದ್ಯದಲ್ಲೇ ಹಸೆಮಣೆ ಏರೋದಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 8ರ ಇಬ್ಬರ ಪರಿಚಯ, ಪ್ರೀತಿಗೆ ತಿರುಗಿದೆ. ಬಿಗ್‌ ಬಾಸ್ ಶೋ ಬಳಿಕ ಹಸೆಮಣೆ ಏರಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸುದೀಪ್ ದಂಪತಿ ಭೇಟಿ

    ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸುದೀಪ್ ದಂಪತಿ ಭೇಟಿ

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ದಂಪತಿ ಕಟೀಲು ದುರ್ಗಾಪರಮೇಶ್ವರಿ (Kateel Durgaparameshwari Temple) ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಬಿಗ್ ಬಾಸ್‌ನ(Bigg Boss) ವಾರಾಂತ್ಯದ ಶೂಟಿಂಗ್ ಮುಗಿಸಿ, ಕಟೀಲು ದೇವಿಯ ದರ್ಶನಕ್ಕೆ ಸುದೀಪ್ ಬಂದಿದ್ದಾರೆ.

    ವಿಕ್ರಾಂತ್ ರೋಣ ಸಿನಿಮಾದ ನಂತರ ಬಿಗ್ ಬಾಸ್ ಸೀಸನ್ 9ರ ನಿರೂಪಣೆಯ ಹೊಣೆ ಹೊತ್ತಿರುವ ಕಿಚ್ಚ ಸುದೀಪ್ ಇದೀಗ ಖಾಸಗಿ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಮಂಗಳೂರಿಗೆ ಬಂದಿದ್ದಾರೆ. ಈ ವೇಳೆ ಕಟೀಲು ದುರ್ಗಾಪರಮೇಶ್ವರಿ ಸನ್ನಿಧಾನಕ್ಕೆ ಪತ್ನಿ ಪ್ರಿಯಾ(Priya Sudeep) ಜೊತೆ ಸುದೀಪ್ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ದೊಡ್ಮನೆ ಯುವರಾಜನಿಗೆ ನಾಯಕಿ ಯಾರು? ಕೊನೆಗೂ ಸಿಕ್ತು ಅಪ್‌ಡೇಟ್

    ಕಟೀಲು ಮತ್ತು ಮುಲ್ಕಿ ಕಾರ್ಯಕ್ರಮದಲ್ಲಿವೊಂದರಲ್ಲಿ ಭಾಗವಹಿಸಲು ಸುದೀಪ್ ತಮ್ಮ ಕುಟುಂಬದ ಜೊತೆ ಬಂದಿದ್ದಾರೆ. ಈ ವೇಳೆ ಕಟೀಲು ದೇವಸ್ಥಾನದ ವತಿಯಿಂದ ಸುದೀಪ್‌ಗೆ ಆತ್ಮೀಯವಾಗಿ ಗೌರವಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ಸ್ವಾರ್ಥಿ ಇವರೇ: ಕಿಚ್ಚನಿಗೆ ಸ್ಪರ್ಧಿಗಳಿಂದ ದೂರು

    ಬಿಗ್ ಬಾಸ್ ಮನೆಯಲ್ಲಿ ಸ್ವಾರ್ಥಿ ಇವರೇ: ಕಿಚ್ಚನಿಗೆ ಸ್ಪರ್ಧಿಗಳಿಂದ ದೂರು

    ಬಿಗ್ ಬಾಸ್(Bigg Boss Kannada) ಏಪಿಸೋಡ್ ಮಿಸ್ ಮಾಡದೇ ನೋಡುವ ಒಂದು ವರ್ಗದ ಜನರಿದ್ದರೆ, ಇನ್ನೊಂದ್ ಕಡೆ ಕಿಚ್ಚನಿಗಾಗಿ ವಾರದ ಪಂಚಾಯಿತಿ ನೋಡುವ ಬಹುದೊಡ್ಡ ವರ್ಗವೇ ಇದೆ. ಇದೀಗ ಕಿಚ್ಚನ ಪಂಚಾಯಿತಿಯಲ್ಲಿ ಹೆಚ್ಚು ಕಾಳಜಿ ಮಾಡುವುದು ಯಾರು ಮತ್ತು ಹೆಚ್ಚು ಸ್ವಾರ್ಥ ಬುದ್ದಿ ಹೊಂದಿರುವವರು ಯಾರು ಎಂದು ಸುದೀಪ್ (Kiccha Sudeep) ಎದುರಲ್ಲೇ ಸಖತ್ ಚರ್ಚೆ ಆಗಿದೆ.

    ದೊಡ್ಮನೆ ಆಟ ಇದೀಗ 57 ದಿನಗಳನ್ನ ಪೂರೈಸಿ, 60ನೇ ದಿನದತ್ತ ಮುನ್ನುಗ್ಗುತ್ತಿದೆ. ವಾರದ ಪಂಚಾಯಿತಿಯಲ್ಲಿ ಯಾರು ಹೆಚ್ಚು ಕಾಳಜಿ ಮಾಡ್ತಾರೆ ಮತ್ತು ಸ್ವಾರ್ಥ ಬುದ್ದಿ ಇರುವವರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆದಿದೆ. ರೂಪೇಶ್ ರಾಜಣ್ಣ ಅವರು ಕನ್ನಡಪರ ಹೋರಾಟದ ಮೂಲಕ ಗುರುತಿಸಿಕೊಂಡವರು. ಇದನ್ನೂ ಓದಿ: ಕ್ಯಾನ್ಸರ್‌ ಗೆದ್ದಿದ್ದ 24ರ ಹರೆಯದ ನಟಿ ಐಂದ್ರಿಲಾ ಶರ್ಮಾ ಹೃದಯಾಘಾತದಿಂದ ನಿಧನ

    ರಾಜಣ್ಣ ಅವರಿಗೆ ಬಿಗ್ ಬಾಸ್ ಶೋನಿಂದ ಜನಪ್ರಿಯತೆ ಹೆಚ್ಚಿದೆ. ಆರಂಭದ ವಾರಗಳಲ್ಲಿ ಕೊಂಚ ಸೈಲೆಂಟ್ ಆಗಿದ್ದ ಅವರು ಈಗ ವೈಲೆಂಟ್ ಆಗಿದ್ದಾರೆ. ತಮ್ಮ ಅನಿಸಿಕೆಯನ್ನು ನೇರವಾಗಿ ಹೇಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರಿಂದಾಗಿ ಮನೆಯಲ್ಲಿ ಕೆಲವೊಮ್ಮೆ ಜಗಳ ಆಗಿದ್ದು ಕೂಡ ಇದೆ. ಅವರಲ್ಲಿನ ಒಂದಷ್ಟು ಗುಣಗಳು ಇನ್ನಿತರ ಸ್ಪರ್ಧಿಗಳಿಗೆ ಇಷ್ಟ ಆಗಿಲ್ಲ. ಅವರಿಗೆ ಸ್ವಾರ್ಥ ಬುದ್ಧಿ ಹೆಚ್ಚಿದೆ ಎಂದು ಬಹುತೇಕರು ಹೇಳಿದ್ದಾರೆ.

    ಆರ್ಯವರ್ಧನ್ ಗುರೂಜಿ ಕೂಡ ಸಾಕಷ್ಟು ವಿಚಾರಗಳಿಂದ ಹೈಲೈಟ್ ಆಗಿದ್ದಾರೆ. ಬಿಗ್ ಬಾಸ್ ಒಟಿಟಿಯಿಂದ ಟಿವಿ ಸೀಸನ್ ತನಕ ಅವರ ಬಿಗ್ ಬಾಸ್ ಜರ್ನಿ ನಡೆದುಕೊಂಡು ಬಂದಿದೆ. ಕೆಲವೊಮ್ಮೆ ಮುಗ್ಧರಂತೆ ಕಾಣಿಸಿಕೊಳ್ಳುವ ಅವರಿಗೆ ದೊಡ್ಮನೆಯ ಒಂದಷ್ಟು ಸದಸ್ಯರಿಂದ ಸ್ವಾರ್ಥಿ ಎಂಬ ಹಣೆಪಟ್ಟಿ ಸಿಕ್ಕಿದೆ. ದೀಪಿಕಾ ದಾಸ್, ರಾಕೇಶ್ ಅಡಿಗ, ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿ ಕೂಡ ಸ್ವಾರ್ಥಿಗಳ ಪಟ್ಟಿಯಲ್ಲಿ ಇದ್ದಾರೆ. ಸ್ವಾರ್ಥಿ ಎಂದು ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಗುರೂಜಿಗೆ ಅತೀ ಹೆಚ್ಚು ವೋಟ್ ಬಿದ್ದಿದೆ. ಇನ್ನೂ ಬಿಗ್ ಬಾಸ್ ಮನೆಯಿಂದ ದೀಪಿಕಾ ದಾಸ್ ಹೊರ ನಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಿಚ್ಚನ ಕೈ ರುಚಿ ಸವಿದ ಬೆನ್ನಲ್ಲೇ ಮನೆಮಂದಿಗೆ ವಾರ್ನಿಂಗ್ ಕೊಟ್ರು ಸುದೀಪ್

    ಕಿಚ್ಚನ ಕೈ ರುಚಿ ಸವಿದ ಬೆನ್ನಲ್ಲೇ ಮನೆಮಂದಿಗೆ ವಾರ್ನಿಂಗ್ ಕೊಟ್ರು ಸುದೀಪ್

    ಬಿಗ್ ಬಾಸ್ ಮನೆ(Bigg Boss House) ಇದೀಗ 56 ದಿನಗಳನ್ನ ಪೂರೈಸಿ, 60ನೇ ದಿನದತ್ತ ಮುನ್ನುಗ್ಗುತ್ತಿದೆ. ಈ ವಾರ ಗೊಂಬೆ ಟಾಸ್ಕ್‌ಗಳ ಸ್ಪರ್ಧಿಗಳ ಜಟಾಪಟಿ ಜೋರಾಗಿತ್ತು. ಮನೆಯಲ್ಲಿ ರೇಷನ್ ಇಲ್ಲದೇ ಪರದಾಡುತ್ತಿದ್ದ ಮನೆಮಂದಿಗೆ ಕಿಚ್ಚ ಪ್ರೀತಿಯಿಂದ ತಾವೇ ಊಟ ತಯಾರಿಸಿ ಕಳುಹಿಸಿದ್ದರು. ಇದರ ಬೆನ್ನಲ್ಲೇ ಎಲ್ಲಾ ಸ್ಪರ್ಧಿಗಳಿಗೆ ಕಿಚ್ಚ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಈ ವಾರ ಗೊಂಬೆ ತಯಾರಿಸುವ ಟಾಸ್ಕ್ ತುಂಬಾನೇ ಟಫ್ ಆಗಿತ್ತು. ಕಾವ್ಯಶ್ರೀ ಕ್ಯಾಪ್ಟೆನ್ಸಿಯಲ್ಲಿ ಎರಡು ತಂಡಗಳ ಹಣಾಹಣಿ ರೋಚಕವಾಗಿತ್ತು. ಬಳಿಕ ಈ ವಾರ ಕಾವ್ಯಶ್ರೀ ಕ್ಯಾಪ್ಟೆನ್ಸಿ ಅವಧಿ ಮುಗಿದ ಕಾರಣ ಮನೆಮಂದಿಗೆ ಎರಡು ತಂಡಗಳಿಂದ ಕ್ಯಾಪ್ಟನ್ಸಿಗೆ ಸ್ಪರ್ಧಿಗಳನ್ನ ಆಯ್ಕೆ ಮಾಡುವ ಜವಾಬ್ದಾರಿಯನ್ನ ಕೊಟ್ಟಿದ್ದರು. ಈ ವಿಷ್ಯವಾಗಿ ಕಿಚ್ಚನ(Kiccha Sudeep) ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ದಿನದಿಂದ ದಿನಕ್ಕೆ ಬಿಗ್ ಬಾಸ್(Bigg Boss) ಮನೆಯ ಆಟ ಸಾಕಷ್ಟು ತಿರುವುಗಳನ್ನ ಪಡೆಯುತ್ತಿದೆ. ಗೊಂಬೆ ಟಾಸ್ಕ್ ಬಳಿಕ ಬೆಸತ್ತ ಸ್ಪರ್ಧಿಗಳಿಗೆ ಸುದೀಪ್ ಭರ್ಜರಿ ಭೋಜನ ಕಳುಹಿಸಿದ್ದರು. ಈ ಬೆನ್ನಲ್ಲೇ ಎಲ್ಲರಿಗೂ ಕಿಚ್ಚ ಬೆವರಿಳಿಸಿದ್ದಾರೆ. ಕ್ಯಾಪ್ಟೆನ್ಸಿ ವಿಷ್ಯವಾಗಿ ಒಮ್ಮತವಿಲ್ಲದ ಕಾರಣ ಬಿಗ್ ಬಾಸ್‌ಗೆ ಕ್ಯಾಪ್ಟನ್ ಆಯ್ಕೆ ಮಾಡಲು ಮನೆಮಂದಿ ಬಿಟ್ಟಿದ್ದರು. ಆದರೆ ಬಿಗ್ ಬಾಸ್ ಆದೇಶಕ್ಕೆ ಸ್ಪಂದಿಸದ ಕಾರಣ, ಮುಂದಿನ ವಾರ ಕ್ಯಾಪ್ಟನ್ ಇರುವುದಿಲ್ಲ ಎಂದು ಆದೇಶ ನೀಡಿದ್ದರು. ಈ ಕುರಿತು ಕಿಚ್ಚ ಮಾತನಾಡಿದ್ದಾರೆ. ಇದನ್ನೂ ಓದಿ:ದೀಪಿಕಾ ದಾಸ್ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್ – ದೊಡ್ಮನೆಯಿಂದ ಔಟ್

    ಬಿಗ್ ಬಾಸ್ ಒಬ್ಬಬ್ಬರ ಹೆಸರು ಕೊಡಿ ಎಂದಾಗ, ಯಾವ ಹೆಸರು ಬರಲ್ಲ. ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತೆ. ಬಿಗ್ ಬಾಸ್ ಮನೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದರಿಂದ ಎಸ್ಕೇಪ್ ಆಗಿ ಓಡಿ ಹೋಗುವವರಿದ್ರೆ, ಮೇನ್ ಡೋರ್ ಬಹಳ ಹತ್ತಿರ ಇದೆ. ಎಂದು ಸುದೀಪ್ ಅವರು ವಾರ್ನಿಂಗ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್‌ಗೆ ಆಪರೇಷನ್

    ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್‌ಗೆ ಆಪರೇಷನ್

    ಬಿಗ್ ಬಾಸ್ ಮನೆಯಲ್ಲಿ(Bigg Boss)  ಸದಾ ಒಂದಲ್ಲಾ ಒಂದು ವಿಚಾರಕ್ಕೆ ಕಿತ್ತಾಟ ಆಗುತ್ತಲೇ ಇರುತ್ತದೆ. ಗೊಂಬೆ ತಯಾರಿಸುವ ಟಾಸ್ಕ್‌ನಲ್ಲಿ ಅರುಣ್ ಸಾಗರ್ ಕೈ ಬೆರಳಿಗೆ ಪೆಟ್ಟಾಗಿದೆ. ಇದರ ಪರಿಣಾಮ, ಆಪರೇಷನ್ ಕೂಡ ಮಾಡಲಾಗಿದೆ.

    ದೊಡ್ಮನೆ ಇದೀಗ ಎಂಟನೇ ವಾರಕ್ಕೆ ಕಾಲಿಟ್ಟಿದೆ. ಸಾಕಷ್ಟು ಟ್ವಿಸ್ಟ್ ಮತ್ತು ತಿರುವುಗಳೊಂದಿಗೆ ಮುನ್ನಗ್ಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಇದೀಗ ಟಾಸ್ಕ್ ವೇಳೆ ಅರುಣ್ ಸಾಗರ್‌ಗೆ ಪೆಟ್ಟಾಗಿದೆ. ಟಾಯ್ ಫ್ಯಾಕ್ಟರಿ ಎಂಬ ಟಾಸ್ಕ್ ಕೊಟ್ಟಿದ್ದರು ಬಿಗ್ ಬಾಸ್. ಈ ಟಾಸ್ಕ್‌ನಲ್ಲಿ ಗೊಂಬೆಗಳನ್ನ ತಯಾರಿಸಲು ಕನ್ವೇಯರ್ ಬೆಲ್ಟ್‌ನಿಂದ ಸಾಮಾಗ್ರಿಗಳನ್ನ ಪಡೆಯಬೇಕಿತ್ತು.

    ಹೀಗಾಗಿ, ಸಾಮಾಗ್ರಿಗಳನ್ನ ಪಡೆಯಲು ಎರಡೂ ತಂಡಗಳು ಜಿದ್ದಾಜಿದ್ದಿಗೆ ಬಿದ್ದವು. ಸಾಮಾಗ್ರಿಗಳಿಗಾಗಿ ಎರಡೂ ತಂಡದ ಸದಸ್ಯರ ಮಧ್ಯೆ ಕಿತ್ತಾಟ, ನೂಕಾಟ, ತಳ್ಳಾಟ್ಟ ನಡೆಯಿತು. ಒಮ್ಮೆ ಪ್ರಶಾಂತ್ ಸಂಬರ್ಗಿ ಅವರಿಂದಾಗಿ ಅರುಣ್ ಸಾಗರ್ ಕೆಳಗೆ ಬಿದ್ದರು. ಮತ್ತೊಮ್ಮೆ ಅವರ ಕೈಗೆ ಪೆಟ್ಟು ಬಿತ್ತು. ಬಲಗೈ ಕಿರುಬೆರಳಿಗೆ ಪೆಟ್ಟು ಬಿದ್ದಿದ್ದ ಕಾರಣ ಅರುಣ್ ಸಾಗರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದನ್ನೂ ಓದಿ:ವಿಜಯ್ ದೇವರಕೊಂಡ ನಂತರ ಅವರ ತಾಯಿಯೂ ಅಂಗಾಂಗ ದಾನಕ್ಕೆ ನೋಂದಣಿ

    ಚಿಕಿತ್ಸೆ ಅವಶ್ಯವಿದ್ದ ಕಾರಣ ಒಂದು ದಿನ ಆಸ್ಪತ್ರೆಯಲ್ಲೇ ಅರುಣ್ ಸಾಗರ್ ಇದ್ದರು. ಪರಿಣಾಮ, ಕೊನೆಯ ದಿನದ ಟಾಸ್ಕ್‌ನಲ್ಲಿ ಅವರು ಭಾಗವಹಿಸಲಿಲ್ಲ. ಸದ್ಯ ಬಿಗ್ ಬಾಸ್ ಮನೆಗೆ ಅರುಣ್ ಸಾಗರ್ ವಾಪಸ್ ಆಗಿದ್ದಾರೆ. ತಮ್ಮ ಕೈಗೆ ಆಪರೇಷನ್ ಮಾಡಲಾಗಿದೆ ಎಂದು ಅರುಣ್ ಸಾಗರ್ ಮನೆಮಂದಿಗೆ ತಿಳಿಸಿದ್ದಾರೆ. ಸದ್ಯಕ್ಕೆ ಟಾಸ್ಕ್‌ನಿಂದ ದೂರವಿದ್ದು, ದೊಡ್ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಸುದೀಪ್‌ ದಂಪತಿ ಭೇಟಿ

    ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಸುದೀಪ್‌ ದಂಪತಿ ಭೇಟಿ

    `ವಿಕ್ರಾಂತ್‌ರೋಣ’ (Vikranthrona) ಚಿತ್ರದ ಸಕ್ಸಸ್ ನಂತರ ಕಿಚ್ಚ ಸುದೀಪ್ (Kiccha Sudeep) ಸದ್ಯ ಬಿಗ್ ಬಾಸ್ (Bigg Boss) ಕಾರ್ಯಕ್ರಮದ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣಕ್ಕೆ ಬ್ರೇಕ್ ಹಾಕಿ, ಕುಟುಂಬದ ಜೊತೆ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ(Shirdi) ಸುದೀಪ್ ಭೇಟಿ ಕೊಟ್ಟಿದ್ದಾರೆ.

    ಚಂದನವನದ ಪ್ರತಿಭಾನ್ವಿತ ನಟ ಕಿಚ್ಚ ಸುದೀಪ್, ವಿಕ್ರಾಂತ್ ರೋಣ ಚಿತ್ರದ ನಂತರ ಒಂದೊಳ್ಳೆ ಕಥೆಯ ಮೂಲಕ ಬರಲು ರೆಡಿಯಾಗಿದ್ದಾರೆ. ಚಿತ್ರದ ಆಯ್ಕೆ ಮತ್ತಷ್ಟು ಸೆಲೆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ಶೋ ಶೂಟಿಂಗ್ ನಡುವೆ ಪತ್ನಿ ಜೊತೆ ವಿದೇಶಕ್ಕೆ ಹೋಗಿ, ಕ್ರಿಕೆಟ್ ಮ್ಯಾಚ್ ವೀಕ್ಷಿಸಿದ್ದರು. ಈ ಬೆನ್ನಲ್ಲೇ ಈಗ ಪತ್ನಿ ಪ್ರಿಯಾ ಜೊತೆ ಶಿರಡಿ ಸನ್ನಿಧಿಗೆ ಸುದೀಪ್ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ರಣ್ವೀರ್ ಸಿಂಗ್ ಗೂ ಕಾಸ್ಟಿಂಗ್ ಕೌಚ್ ಅನುಭವ : ನಟ ಬಿಚ್ಚಿಟ್ಟ ಕರಾಳ ಸತ್ಯ

    ತಮ್ಮ ಎಲ್ಲಾ ಕೆಲಸಕ್ಕೂ ಬ್ರೇಕ್ ಹಾಕಿ, ಪತ್ನಿ ಪ್ರಿಯಾ(Priya Sudeep) ಜೊತೆ ಶಿರಡಿಗೆ ಸುದೀಪ್ ತೆರಳಿದ್ದಾರೆ. ಸಾಯಿಬಾಬಾ ಸನ್ನಿಧಿಯಲ್ಲಿ ವಿಶೇಷ ಪೂಜೆ ಕೂಡ ಮಾಡಿಸಿದ್ದಾರೆ. ಈಗ ಶಿರಡಿಗೆ ಭೇಟಿ ಕೊಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಇನ್ನೂ ಸುದೀಪ್, ಬಿಗ್ ಬಾಸ್ ಶೋ ಮುಕ್ತಾಯದ ನಂತರ ಡೈರೆಕ್ಟರ್ ನಂದಕಿಶೋರ್ ಜೊತೆ ಸಿನಿಮಾ ಮಾಡಲಿದ್ದಾರೆ. ಬಳಿಕ ರಮ್ಯಾ ಜೊತೆ ಕೂಡ ಕಿಚ್ಚ ನಟಿಸಲಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರಾಕೇಶ್ ಅಡಿಗ ಸ್ಮಾರ್ಟ್ ಗೇಮ್‌ಗೆ, ಸ್ಪರ್ಧಿಗಳಿಗೆ ಶುರುವಾಯ್ತು ಟೆನ್ಷನ್

    ರಾಕೇಶ್ ಅಡಿಗ ಸ್ಮಾರ್ಟ್ ಗೇಮ್‌ಗೆ, ಸ್ಪರ್ಧಿಗಳಿಗೆ ಶುರುವಾಯ್ತು ಟೆನ್ಷನ್

    ಬಿಗ್ ಬಾಸ್ ಮನೆಯ(Bigg Boss Kannada) ಸ್ಪರ್ಧಿಗಳಲ್ಲಿ ಅಜಾತಶತ್ರು ಅಂದ್ರೆ ರಾಕೇಶ್ ಅಡಿಗ. ಯಾರ ಕೆಂಗಣ್ಣಿಗೂ ಗುರಿಯಾಗದೇ ಕೂಲ್ ಆಗಿ ತಮ್ಮದೇ ಶೈಲಿಯಲ್ಲಿ ಆಡುತ್ತಿದ್ದಾರೆ. ದೊಡ್ಮನೆ ಆಟ 50 ದಿನ ಪೂರೈಸಿರುವ ಬೆನ್ನಲ್ಲೇ ರಾಕೇಶ್ ಅಡಿಗ ಅವರ ಆಟ ಈಗ ಮನೆಯವರ ಕಣ್ಣಿಗೆ ಹೈಲೈಟ್ ಆಗುತ್ತಿದೆ. ಇವರೂ ಹೀಗೆ ಆಡಿದರೆ ರಾಕೇಶ್(Rakesh Adiga) ಅವರೇ ಬಿಗ್ ಬಾಸ್ ವಿನ್ನರ್ ಪಟ್ಟ ತೆಗೆದುಕೊಳ್ಳುತ್ತಾರೆ ಎಂಬ ಟೆನ್ಷನ್ ಮನೆಮಂದಿಗೆ ಶುರುವಾಗಿದೆ.

    ದೊಡ್ಮನೆಯ ಆಟ 50 ದಿನ ಸಾಗಿದೆ. ಅರ್ಧ ದಾರಿ ಸಾಗಿರುವ ಬಿಗ್ ಬಾಸ್‌ನಲ್ಲಿ(Bigg Boss) ಒಂದು ಸರ್‌ಪ್ರೈಸ್ ಇತ್ತು. ಆರ್ಯವರ್ಧನ್(Aryavardhan) ಅವರನ್ನು ಮೊದಲು ಎಲಿಮಿನೇಟ್ ಮಾಡಲಾಗಿತ್ತು. ಆದರೆ, ಈ ವಾರ ಎಲಿಮಿನೇಷನ್ ಮಾಡಲ್ಲ ಎಂದು ಬಿಗ್ ಬಾಸ್ ನಂತರ ಘೋಷಿಸಿದರು. ಈ ವೇಳೆ ಎಲ್ಲಾ ಸ್ಪರ್ಧಿಗಳು ಖುಷಿಪಟ್ಟರು. ಮತ್ತೊಂದೆಡೆ ಈ ಫೇಕ್ ಎಲಿಮಿನೇಷನ್‌ನಿಂದ ಎಲ್ಲಾ ಸ್ಪರ್ಧಿಗಳಿಗೆ ಶಾಕ್ ಕೂಡ ಆಗಿತ್ತು.

    ಪ್ರತಿ ವೀಕೆಂಡ್‌ನಲ್ಲಿ ಕಿಚ್ಚ ಒಂದು ಸ್ಪರ್ಧಿಗೆ ಚಪ್ಪಾಳೆ ನೀಡುತ್ತಾರೆ. ಈ ಚಪ್ಪಾಳೆ ತೆಗೆದುಕೊಳ್ಳೋಕೆ ಸ್ಪರ್ಧಿಗಳು ಸಾಕಷ್ಟು ಶ್ರಮಪಡಬೇಕಾಗುತ್ತದೆ. ಕಳೆದ ವಾರವೂ ಸುದೀಪ್ ಚಪ್ಪಾಳೆ ನೀಡಿದ್ದಾರೆ. ಒಂದು ವಾರದ ಪರ್ಫಾರ್ಮೆನ್ಸ್ ನೋಡಿ ಅಲ್ಲ. ಬದಲಿಗೆ ಕಳೆದ 50 ದಿನಗಳನ್ನು ಗಮನಿಸಿ ಸುದೀಪ್ (Kiccha Sudeep) ಚಪ್ಪಾಳೆ ನೀಡಿದ್ದಾರೆ. ಈ ಚಪ್ಪಾಳೆ ಸಿಕ್ಕಿದ್ದು ರಾಕೇಶ್ ಪಾಲಿಗೆ. ಇದನ್ನೂ ಓದಿ: ಧ್ರುವ ಸರ್ಜಾ ಚಿತ್ರಕ್ಕೆ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿ

    ಬಿಗ್ ಬಾಸ್ ಒಟಿಟಿಯಿಂದ ರಾಕೇಶ್ ಅಡಿಗ ಗಮನ ಸೆಳೆದರು. ಇದೀಗ ಟಿವಿ ಬಿಗ್ ಬಾಸ್‌ನಲ್ಲಿ ರಾಕಿ ಹೈಲೈಟ್ ಆಗುತ್ತಿದ್ದಾರೆ. ಅಲ್ಲಿಂದ ಇಲ್ಲಿವರೆಗೆ ಅವರು ಒಂದೇ ರೀತಿಯ ಪರ್ಫಾರ್ಮೆನ್ಸ್ ನೀಡುತ್ತಾ ಬಂದಿದ್ದಾರೆ. ಅವರು ಜಗಳ ಮಾಡಿಕೊಳ್ಳೋದೇ, ಮನೆ ಮಂದಿಯ ನಂಬಿಕೆಗೆ ರಾಕೇಶ್ ಪಾತ್ರರಾಗಿದ್ದಾರೆ. ಟಾಸ್ಕ್‌ಗಳ ವಿಚಾರದಲ್ಲೂ ಅವರು ಹಿಂದೆ ಬಿದ್ದಿಲ್ಲ. ಸದ್ಯ ರಾಕೇಶ್ ಆಟ ನೋಡಿ ಮನೆಯವರಿಗೆ ಹೆಚ್ಚು ಟೆನ್ಷನ್ ಆಗಿದೆ. ರೂಪೇಶ್ ಶೆಟ್ಟಿ ಸೇರಿದಂತೆ ಮೊದಲಾದವರು ಈ ಬಗ್ಗೆ ಟೆನ್ಷನ್ ಮಾಡಿಕೊಂಡಿದ್ದಾರೆ. ರಾಕೇಶ್ ಅವರನ್ನು ಸೆಡ್ಡು ಹೊಡೆಯದೇ ಇದ್ದರೆ ಸಂಕಷ್ಟ ಪಕ್ಕಾ ಎಂಬುದು ಅವರಿಗೆ ಗೊತ್ತಾಗಿದೆ. ಹೀಗೆಯೇ ಮುಂದುವರಿದರೆ ಅವರು ಬಿಗ್ ಬಾಸ್ ವಿನ್ನರ್ ಆಗಬಹುದು ಎಂದು ಲೆಕ್ಕಚಾರ ಹಾಕುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ವಿಷ್ಯವಾಗಿ ರೂಪೇಶ್‌ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್‌

    ಸಾನ್ಯ ವಿಷ್ಯವಾಗಿ ರೂಪೇಶ್‌ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್‌

    ಬಿಗ್ ಬಾಸ್ ಮನೆಯಲ್ಲಿ(Bigg Boss House) ರೂಪೇಶ್ ಮತ್ತು ಸಾನ್ಯ ಜೋಡಿಯಾಗಿ ಹೈಲೈಟ್ ಆಗಿದ್ದರು. ಆದರೆ ದೊಡ್ಮನೆಯ ಎಲಿಮಿನೇಷನ್‌ನಿಂದ ಸಾನ್ಯ ಹೊರಬಂದಿದ್ದರು. ಇದಾದ ಬಳಿಕ ಸಾನ್ಯಗಾಗಿ ಕಣ್ಣೀರಿಡುತ್ತಲೇ ಎರಡೆರಡು ಪ್ಲೇಟ್ ಇಟ್ಟುಕೊಂಡು ಊಟ ಮಾಡಿದ್ದರು. ಇದೀಗ ಈ ವಿಷ್ಯವಾಗಿ ಶೆಟ್ಟ ಕಾಲೆಳೆದಿದ್ದಾರೆ ಕಿಚ್ಚ ಸುದೀಪ್.

    ಓಟಿಟಿಯಿಂದ ಟಿವಿ ಬಿಗ್ ಬಾಸ್‌ವೆರೆಗೂ ಸಾನ್ಯ ಮತ್ತು ರೂಪೇಶ್ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಲೇ ಬಂದಿದ್ದರು. ಜೊತೆಯಾಗಿಯೇ ಇರುತ್ತಿದ್ದರು. ಆದರೆ ಸಾನ್ಯ ಎಲಿಮಿನೇಷನ್‌ನಿಂದ ರೂಪೇಶ್ ಶೆಟ್ಟಿಗೆ(Roopesh Shetty) ದೊಡ್ಡ ಆಘಾತವೇ ಆಗಿತ್ತು. ಪ್ರತಿದಿನ ಕಣ್ಣೀರಿಡುತ್ತಲೇ ಇದ್ದರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಊಟ ಮಾಡುತ್ತಿರಲಿಲ್ಲ. ಸಾನ್ಯ ಹೋದ ನಂತರದಲ್ಲಿ ರೂಪೇಶ್‌ಗೆ ಒಂಟಿತನ ಕಾಡಿದೆ. ಈ ಕಾರಣಕ್ಕೆ ಅವರು ಕಣ್ಣೀರು ಹಾಕಿದ್ದಾರೆ. ಊಟ ಮಾಡುವಾಗ ಸಾನ್ಯ ಅಯ್ಯರ್(Sanya Iyer) ಹೆಸರಲ್ಲಿ ಒಂದು ಪ್ಲೇಟ್ ತೆಗೆದುಕೊಂಡು ಬಂದಿದ್ದಾರೆ ರೂಪೇಶ್ ಶೆಟ್ಟಿ. ತಮ್ಮ ಪ್ಲೇಟ್‌ನ ಊಟವನ್ನು ಆ ಪ್ಲೇಟ್‌ಗೆ ಹಾಕಿಕೊಂಡು ಊಟ ಮಾಡಿದ್ದಾರೆ. ಸಾನ್ಯ ನೆನಪಲ್ಲಿ ಎರಡು ಪ್ಲೇಟ್‌ನಲ್ಲಿ ಅವರು ಊಟ ಮಾಡಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ(Bigg Boss House) ಸಾನ್ಯ ಅವರ ಪಾಲಿಗೆ ಒಂದಷ್ಟು ಮೊಟ್ಟೆ ನೀಡಲಾಗಿತ್ತು. ಈ ಮೊಟ್ಟೆಯನ್ನು ರೂಪೇಶ್‌ಗೆ ಕೊಟ್ಟು ಹೋಗಿದ್ದರು. ಅದನ್ನು ರೂಪೇಶ್ ತಿಂದಿದ್ದಾರೆ. ಈ ಎಲ್ಲಾ ವಿಚಾರ ಇಟ್ಟುಕೊಂಡು ರೂಪೇಶ್ ಅವರ ಕಾಲೆಳೆದಿದ್ದಾರೆ ಕಿಚ್ಚ. ಆಪ್ತರಾದವರು ಬಿಟ್ಟು ಹೋದಾಗ ಊಟ ಮಾಡುವವರು ಊಟ ಬಿಟ್ಟಿದ್ದು ನೋಡಿದ್ದೀನಿ. ಗಡ್ಡ ಬಿಟ್ಟಿದ್ದನ್ನು ನೋಡಿದ್ದೀನಿ. ಆದರೆ, ಆಪ್ತರಾದವರು ಬಿಟ್ಟು ಹೋದಾಗ ಎರಡೆರಡು ಪ್ಲೇಟ್ ಊಟ ಮಾಡಿದ್ದು, ಎಕ್ಸ್ಟ್ರಾ ಮೊಟ್ಟೆ ತಿಂದ್ರಿ. ಮಿಸ್ ಮಾಡಿಕೊಂಡ್ರೆ ಹೀಗೆ ಮಿಸ್ ಮಾಡ್ಕೊಬೇಕು ಎಂದು ರೂಪೇಶ್ ಅವರ ಕಾಲೆಳೆದರು ಸುದೀಪ್. ಇದನ್ನೂ ಓದಿ:ಬಿಗ್ ಬಾಸ್ : ರೂಪೇಶ್ ರಾಜಣ್ಣ ಕಳಪೆ, ಕಾವ್ಯಶ್ರೀ ಗೌಡ ಕ್ಯಾಪ್ಟನ್

    ಅಂದಹಾಗೆ, ಸಾನ್ಯ ಅಯ್ಯರ್ 6ನೇ ಸ್ಪರ್ಧಿಯಾಗಿ ಎಲಿಮಿನೇಟ್ ಆಗಿದ್ದರು. ಇದೀಗ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಿಗ್ ಬಾಸ್ ಮನೆಗೆ ಮತ್ತೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷ್ಯ ನಿಜವೇ ಆದರೆ ಆಟದಲ್ಲಿ ಸಾಕಷ್ಟು ಟ್ವಿಸ್ಟ್ ಇರಲಿದೆ. ಎಲ್ಲದ್ದಕ್ಕೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡಿಗರ ಬಗ್ಗೆ ಮಾತನಾಡಿದ್ದ ಸಂಬರ್ಗಿ ವಿರುದ್ಧ ಸಿಡಿದೆದ್ದ ಕಿಚ್ಚ

    ಕನ್ನಡಿಗರ ಬಗ್ಗೆ ಮಾತನಾಡಿದ್ದ ಸಂಬರ್ಗಿ ವಿರುದ್ಧ ಸಿಡಿದೆದ್ದ ಕಿಚ್ಚ

    ಕಿರುತೆರೆಯ ಬಿಗ್ ಶೋ ಬಿಗ್ ಬಾಸ್‌ನಲ್ಲಿ(Bigg Boss House) ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ರಾಜಣ್ಣ (Roopesh Rajanna) ಸದಾ ಒಂದಲ್ಲಾ ಒಂದು ವಿಚಾರವಾಗಿ ಜಗಳ ಆಡುತ್ತಲೇ ಇರುತ್ತಾರೆ. ಈ ಕಿರಿಕ್ ದೊಡ್ಮನೆಯಲ್ಲಿ ತಾರಕಕ್ಕೇರಿದ್ದು ಇದೆ. ಈ ಮಾತಿನ ಚಕಮಕಿಯಲ್ಲಿ ಕನ್ನಡ ಪರ ಹೋರಾಟಗಾರರಿಗೆ ಸಂಬರ್ಗಿ ಅವಮಾನ ಮಾಡಿದ್ದಾರೆ. ಈ ವಿಷ್ಯವಾಗಿ ಸಂಬರ್ಗಿಗೆ ಕಿಚ್ಚ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಬಿಗ್ ಬಾಸ್‌ನಲ್ಲಿ ಕಿರಿಕ್ ಜೋಡಿ ಎಂದೇ ರೂಪೇಶ್ ರಾಜಣ್ಣ ಮತ್ತು ಸಂಬರ್ಗಿ ಹೈಲೈಟ್ ಆಗಿದ್ದಾರೆ. ರೂಪೇಶ್ ರಾಜಣ್ಣನ ಮೇಲೆ ಮಾತಿನ ಭರದಲ್ಲಿ ಪ್ರಶಾಂತ್ ಸಂಬರ್ಗಿ ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ. ರಾಜಣ್ಣ ಅವರನ್ನು ರೋಲ್ ಕಾಲ್ ಗಿರಾಕಿ, ಈ ಮನೆಯಲ್ಲಿ ಕನ್ನಡ ಹೋರಾಟಗಾರನ್ನು ಬಾಯಿ ಮುಚ್ಚಿಸಿದ್ದೇನೆ ಎಂದು ಪ್ರಶಾಂತ್(Prashanth Sambargi) ರಾಂಗ್ ಆಗಿದ್ದರು. ಸಂಬರ್ಗಿ ಈ ನಡೆಗೆ ಬಿಗ್ ಬಾಸ್(Bigg Boss) ಮನೆಯಿಂದ ಹೊರ ಹಾಕಿ ಎಂದು ಕನ್ನಡ ಪರ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ:ಸಾನ್ಯ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್: ಪುಟ್ಟಗೌರಿ ಔಟ್

    ಬಳಿಕ ಬಿಗ್ ಬಾಸ್ ಆದೇಶದ ನಂತರ ಕನ್ನಡ ಹೋರಾಟಗಾರರಿಗೆ ನೋವಾಗಿದ್ರೆ ಕ್ಷಮಿಸಿ. ನನ್ನ, ರಾಜಣ್ಣನ ಮೈಂಡ್ ಗೇಮ್ ಅದು. ನನ್ನ ಪ್ರೀತಿಯ ಕನ್ನಡಿಗರಿಗೆ ನೋವಾಗಿದ್ರೆ, ಕರ್ನಾಟಕದ ಜನತೆಗೆ ಕ್ಷಮೆ ಕೇಳುತ್ತೇನೆ. ರಭಸದಿಂದ ಬಂದ ಮಾತು, ವಿರುದ್ಧವಾಗಿರಬಹುದು. ದಯವಿಟ್ಟು ಕನ್ನಡ ಹೋರಾಟಗಾರರೇ ಕ್ಷಮೆ ಇರಲಿ, ನನ್ನಿಂದ ತಪ್ಪಾಗಿದೆ ಎಂದು ಕಣ್ಣೀರು ಹಾಕಿದ್ದರು. ಇದಾದ ಬಳಿಕ ವಾರದ ಪಂಚಾಯಿತಿಯಲ್ಲಿ ಸಂಬರ್ಗಿಗೆ ಸುದೀಪ್(Kiccha sudeep) ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಮಾತನಾಡುವ ಬರದಲ್ಲಿ ಕನ್ನಡ ಪರ ಹೋರಾಟಗಾರಿಗೆ ಅವಮಾನ ಮಾಡಿದ್ದೀರಿ. ನೀವು, ರಾಜಣ್ಣ ವೈಯಕ್ತಿಕವಾಗಿ ಎಷ್ಟಾದ್ರೂ ಜಗಳ ಮಾಡಿ. ಅದು ತಪ್ಪಲ್ಲ. ಯಾರೂ ಬೇಡ ಅನ್ನಲ್ಲ. ಆದ್ರೆ ಮಿತಿ ಮೀರಿ ಅದು ಕನ್ನಡ ಪರ ಹೋರಾಡುವವರಿಗೆ ನೋವಾಗಿದೆ. ಕನ್ನಡಕ್ಕಾಗಿ ಹೋರಾಟ ಮಾಡೋ ಎಷ್ಟೋ ಪ್ರಮಾಣಿಕರು ನಮ್ಮ ಮಧ್ಯೆ ಇದ್ದಾರೆ. ಅವರಿಗೆ ನಿಮ್ಮ ಮಾತು ಬೇಸರ ತಂದಿದೆ. ಇನ್ನೊಮ್ಮೆ ಆ ರೀತಿ ಮಾತನಾಡಬೇಡಿ ಎಂದು ವಾರ್ನಿಂಗ್ ಸುದೀಪ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್: ಪುಟ್ಟಗೌರಿ ಔಟ್

    ಸಾನ್ಯ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್: ಪುಟ್ಟಗೌರಿ ಔಟ್

    ಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ (Bigg Boss House) ಮೋಡಿ ಮಾಡಿದ್ದ ಸ್ಪರ್ಧಿ ಸಾನ್ಯ ಅಯ್ಯರ್ (Sanya Iyer) ಇದೀಗ ಮನೆಯಿಂದ ಹೊರಬಂದಿದ್ದಾರೆ. ಬಿಗ್ ಬಾಸ್‌ನ 6ನೇ ವಾರಕ್ಕೆ ಸಾನ್ಯ ಆಟ ಅಂತ್ಯವಾಗಿದೆ.

    ಕಿರುತೆರೆಯ ಪುಟ್ಟಗೌರಿಯಾಗಿ(PuttaGowri) ಅಪಾರ ಅಭಿಮಾನಿಗಳ ಮನಗೆದ್ದ ಕಲಾವಿದೆ ಸಾನ್ಯ ಅಯ್ಯರ್, ಓಟಿಟಿ ಸೀಸನ್(Bigg Boss Ott) ಮತ್ತು ಟಿವಿ ಬಿಗ್ ಬಾಸ್‌ನಲ್ಲಿ(Bigg Boss) ಸಖತ್ ಹೈಲೈಟ್ ಆಗಿದ್ದರು. ಟಾಸ್ಕ್, ಮನರಂಜನೆ, ಹೀಗೆ ಎಲ್ಲಾ ವಿಚಾರದಲ್ಲೂ ಸ್ಪರ್ಧಿಯಾಗಿ ಸಾನ್ಯ ಸೈ ಎನಿಸಿಕೊಂಡಿದ್ದರು.‌ ಸಾನ್ಯ ಮಾತನಾಡುವ ಸ್ಪಷ್ಟ ಕನ್ನಡ ವೀಕ್ಷಕರಿಗೆ ಮೆಚ್ಚುಗೆ ಆಗಿತ್ತು. ಇದೀಗ ಸಾನ್ಯ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

    ಟಿವಿ ಬಿಗ್ ಬಾಸ್‌ನಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಸಾನ್ಯ ಅಯ್ಯರ್ ಗುರುತಿಸಿಕೊಂಡಿದ್ದರು. ಜೊತೆಗೆ ರೂಪೇಶ್ ಶೆಟ್ಟಿ(Roopesh Shetty) ಜೊತೆಗಿನ ಫ್ರೆಂಡ್‌ಶಿಪ್ ವಿಷ್ಯವಾಗಿ ಸಾನ್ಯ ಹೈಲೈಟ್ ಆಗಿದ್ದರು. ಓಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ಇವರಿಬ್ಬರ ನಡುವಿನ ಗೆಳೆತನ ಗಟ್ಟಿಯಾಗುತ್ತಲೇ ಬಂದಿತ್ತು. ಇದೀಗ ಸಾನ್ಯ ಎಲಿಮಿನೇಟ್ ಆಗಿರೋದು ರೂಪೇಶ್ ಸೇರಿದಂತೆ ಮನೆ ಮಂದಿಗೆ ಶಾಕ್ ಕೊಟ್ಟಿದೆ. ಇದನ್ನೂ ಓದಿ:ರಾಜಕೀಯಕ್ಕೆ ಎಂಟ್ರಿ ಕೊಡ್ತೀರಾ..?- ರಾಕಿಂಗ್ ಸ್ಟಾರ್ ಯಶ್ ಹೇಳಿದ್ದು ಹೀಗೆ

    ಪುಟ್ಟಗೌರಿಯ ಗಟ್ಟಿ ಆಟವನ್ನ ಮೆಚ್ಚಿಕೊಂಡಿರುವ ಆಕೆಯ ಅಭಿಮಾನಿಗಳಿಗೂ ಶಾಕ್ ಕೊಟ್ಟಿದೆ. ದೊಡ್ಮನೆಯಿಂದ 6ನೇ ವಾರಕ್ಕೆ ಸಾನ್ಯ ಔಟ್ ಆಗಿದ್ದಾರೆ. ಇನ್ನೂ ನಟಿಯ ಮುಂದಿನ ಸಿನಿಪಯಣಕ್ಕೆ ಶುಭವಾಗಲಿ ಎಂಬುದೇ ಅಭಿಮಾನಿಗಳ ಆಶಯ.

    Live Tv
    [brid partner=56869869 player=32851 video=960834 autoplay=true]