Tag: ಕಿಚ್ಚ ಸುದೀಪ್

  • ಜಾಲಿವುಡ್‌ ಸ್ಟುಡಿಯೋಸ್‌ ಬಂದ್‌ಗೆ ನೋಟಿಸ್ -‌ ಬಿಗ್‌ ಬಾಸ್‌ ಮನೆಗೆ ಬೀಳುತ್ತಾ ಬೀಗ?

    ಜಾಲಿವುಡ್‌ ಸ್ಟುಡಿಯೋಸ್‌ ಬಂದ್‌ಗೆ ನೋಟಿಸ್ -‌ ಬಿಗ್‌ ಬಾಸ್‌ ಮನೆಗೆ ಬೀಳುತ್ತಾ ಬೀಗ?

    – ಅರಣ್ಯ ಸಚಿವ ಈಶ್ವರ ಖಂಡ್ರೆ ಸಮರ್ಥನೆ ಏನು?

    ರಾಮನಗರ: ಜಿಲ್ಲೆಯ ಬಿಡದಿ (Bidadi) ಬಳಿಯಿರುವ ವೆಲ್ಸ್ ಸ್ಟುಡಿಯೋಸ್ & ಎಂಟರ್‌ಟೈನ್ಮೆಂಟ್ ಪ್ರೈ.ಲಿ. (Jollywood Studios) ಜಲ ಕಾಯಿದೆ, ವಾಯು ಕಾಯಿದೆಯಡಿ ಅನುಮತಿ ಪಡೆಯದೆ ಕಾರ್ಯಾಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

    ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಗ್ ಬಾಸ್ (Bigg Boss Kannada 12) ಕಾರ್ಯಕ್ರಮ ನಡೆಯುತ್ತಿರುವ ಸ್ಟುಡಿಯೋಗೆ ನೋಟಿಸ್ ನೀಡಿರುವ ವಿಚಾರ ತಿಳಿಯಿತು. ಈ ಬಗ್ಗೆ ಮಾಹಿತಿ ಪಡೆದಾಗ, ರಾಮನಗರ ಪ್ರಾದೇಶಿಕ ಕಚೇರಿಯಿಂದ 2024ರಲ್ಲೇ 2 ಬಾರಿ ನೋಟಿಸ್ ನೀಡಿದ್ದರೂ ಅನುಪಾಲನೆ ಮಾಡಿದ ಕಾರಣ ಈ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಅಕ್ಕ, ಬಾವನ ಜೊತೆ ಗಲಾಟೆ – ಬಿಗ್‌ ಬಾಸ್‌ ರಂಜಿತ್‌ ಮೇಲೆ ದೂರು ದಾಖಲು

    ಇಲ್ಲಿ ಎಸ್‌ಟಿಪಿ ಕಾರ್ಯನಿರ್ವಹಣೆ ಸೇರಿದಂತೆ ಸಮರ್ಪಕವಾಗಿ ತಾಜ್ಯ ವಿಲೇವಾರಿ ಆಗುತ್ತಿಲ್ಲ. ಜನರೇಟರ್ ಸೆಟ್‌ಗಳಿದ್ದು, ಅದಕ್ಕೂ ಅನುಮತಿ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಹೀಗಾಗಿ, ಮಂಡಳಿ ಕ್ರಮ ಕೈಗೊಂಡಿದೆ ಎಂದು ಹೇಳಿದರು.

  • ಬಿಗ್ ಬಾಸ್ ಸೀಸನ್-12ಗೆ ಆರಂಭದಲ್ಲೇ ವಿಘ್ನ – ಶೂಟಿಂಗ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ಬಂದ್‌ಗೆ ಆದೇಶ

    ಬಿಗ್ ಬಾಸ್ ಸೀಸನ್-12ಗೆ ಆರಂಭದಲ್ಲೇ ವಿಘ್ನ – ಶೂಟಿಂಗ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ಬಂದ್‌ಗೆ ಆದೇಶ

    – ಮಾಲೀನ್ಯ ನಿಯಂತ್ರಣ ಮಂಡಳಿಯಿಂದ ಆದೇಶ

    ರಾಮನಗರ: ಬಿಗ್ ಬಾಸ್ ಸೀಸನ್ 12ಕ್ಕೆ (BBK 12) ಆರಂಭದಲ್ಲೇ ವಿಘ್ನ ಎದುರಾಗಿದೆ. ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿರೋ ಬಿಡದಿ ಸಮೀಪದ ಜಾಲಿವುಡ್ ಸ್ಟುಡಿಯೋಸ್ & ಅಡ್ವೆಂಚರ್ಸ್ ಪಾರ್ಕ್ (Jollywood Studios and Adventures) ಬಂದ್ ಮಾಡಲು ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ.

    ಮಾಲೀನ್ಯ ನಿಯಂತ್ರಣ ಮಂಡಳಿ (Pollution Control Board) ಅನುಮತಿ ಪಡೆಯದೇ ಮನರಂಜನಾ ಪಾರ್ಕ್ ಓಪನ್ ಮಾಡಿರೋ ಆರೋಪ ಕೇಳಿಬಂದಿದೆ. ಅಲ್ಲದೇ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಹಾಗೂ ತ್ಯಾಜ್ಯದ ನೀರನ್ನ ಪರಿಸರಕ್ಕೆ ಬಿಡುವ ಮೂಲಕ ಮಾಲಿನ್ಯ ನಿಯಂತ್ರಣ ಕಾಯ್ದೆಗಳನ್ನ ಉಲ್ಲಂಘನೆ ಮಾಡಿರೋ ಆರೋಪ ಕೂಟ ಕೇಳಿಬಂದಿದೆ.

    ಕರ್ನಾಟಕ ಮಾಲಿನ್ಯ ನಿಯಂತ್ರಣ ಕಾಯ್ದೆ 1981ರ ಸೆಕ್ಷನ್ 31, ಕಾಯ್ದೆ 1983 ನಿಯಮ 20(ಎ) ಅನ್ವಯ ತಕ್ಷಣದಿಂದಲೇ ಸ್ಟುಡಿಯೋ ಬಂದ್ ಮಾಡಲು ಆದೇಶ ಹೊರಡಿಸಿದ್ದು, ಕೂಡಲೇ ಜಾಲಿವುಡ್ ಸ್ಟುಡಿಯೋಸ್ & ಅಡ್ವೆಂಚರ್ಸ್ ಪಾರ್ಕ್ ಬಂದ್ ಮಾಡಸಿ ಕ್ರಮವಹಿಸಲು ರಾಮನಗರ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ.

    ಜೊತೆಗೆ ತಕ್ಷಣದಿಂದಲೇ ಮನರಂಜನಾ ಪಾರ್ಕ್‌ಗೆ ವಿದ್ಯುತ್ ಸ್ಥಗಿತಗೊಳಿಸುವಂತೆ ಬೆಸ್ಕಾಂಗೂ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನ ನೀಡಿದೆ. ಬಿಗ್ ಬಾಸ್ ಸೀಸನ್ 12ರ ಶೂಟಿಂಗ್ ಸೆಟ್ ಕೂಡ ಜಾಲಿವುಡ್ ಸ್ಟುಡಿಯೋದಲ್ಲೇ ನಿರ್ಮಾಣ ಆಗಿರೋದ್ರಿಂದ ಬಿಗ್ ಬಾಸ್ ಶೂಟಿಂಗ್ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

  • BBK 12| ಬಂದ ದಿನವೇ ಔಟಾಗಿದ್ದ ರಕ್ಷಿತಾ ಶೆಟ್ಟಿ ವಾಪಸ್ – ಕಿಚ್ಚಿನೊಂದಿಗೆ ರೀ ಎಂಟ್ರಿ ಕೊಟ್ಟ ಕರಾವಳಿ ಬೆಡಗಿ

    BBK 12| ಬಂದ ದಿನವೇ ಔಟಾಗಿದ್ದ ರಕ್ಷಿತಾ ಶೆಟ್ಟಿ ವಾಪಸ್ – ಕಿಚ್ಚಿನೊಂದಿಗೆ ರೀ ಎಂಟ್ರಿ ಕೊಟ್ಟ ಕರಾವಳಿ ಬೆಡಗಿ

    ಬಿಗ್‌ಬಾಸ್ ಕನ್ನಡ ಸೀಸನ್ (Bigg Boss Kannada) 12 ಆರಂಭಗೊಂಡ ಮೊದಲ ದಿನವೇ ಔಟಾಗಿದ್ದ ಕರಾವಳಿಯ ಯೂಟ್ಯೂಬರ್ ರಕ್ಷಿತಾ ಶೆಟ್ಟಿ  (Rakshita Shetty) ರೀ ಎಂಟ್ರಿ ಕೊಟ್ಟಿದ್ದಾರೆ.

    ರಕ್ಷಿತಾ ಶೆಟ್ಟಿ ರೀ ಎಂಟ್ರಿ ಕೊಟ್ಟಿರುವ ಪ್ರೋಮೋ ಸದ್ಯ ರಿಲೀಸ್‌ ಆಗಿದ್ದು, ವಿಡಿಯೋದಲ್ಲಿ ಕಿಚ್ಚ ಸುದೀಪ್ (Kichcha Sudeep) ರಕ್ಷಿತಾ ಅವರನ್ನು ಮತ್ತೆ ಬಿಗ್‌ಬಾಸ್ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಮತ್ತೆ ಹೋಗಿ ಏನು ಮಾಡ್ತೀರಾ ಎಂದು ಕೇಳಿದ ಸುದೀಪ್‌ಗೆ ರಕ್ಷಿತಾ, ಎಲ್ಲರ ಹತ್ತಿರ ಪ್ರಾಪರ್ ರೀಸನ್ ಕೇಳ್ತಿನಿ. ಆವತ್ತು ಎಲ್ಲರೂ ಸಮಾಧಾನ ಮಾಡಿದ್ದರು. ಆದರೆ ಯಾರು ನನ್ನ ಜೊತೆ ನಿಲ್ಲಲಿಲ್ಲ. ನಾನು ಹೇಗೆ ಅಂತ ಗೊತ್ತಿಲ್ಲದೇ ಕವರ್ ನೋಡಿ ನನ್ನನ್ನು ಜಡ್ಜ್ ಮಾಡಿದರು. ನನಗೆ ಆ ಯೋಗ್ಯತೆ ಇದೆ ಎಂದು ಹೇಳಿ, ಕಿಚ್ಚಿನೊಂದಿಗೆ ಬಿಗ್‌ಬಾಸ್ ಮನೆಗೆ ಮರಳಿದ್ದಾರೆ.

    ಒಂದು ವಾರ ಮನೆಯಿಂದ ಹೊರಗುಳಿದಿದ್ದ ರಕ್ಷಿತಾ ಎಲ್ಲ ಸ್ಪರ್ಧಿಗಳ ನಡವಳಿಕೆ ತಿಳಿದು ಇದೀಗ ಸ್ಟ್ರಾಂಗ್‌ ಸ್ಪರ್ಧಿಯಾಗಿ ರೀ ಎಂಟ್ರಿಕೊಡುವ ಮೂಲಕ ಸ್ಪರ್ಧಿಗಳಿಗೆ ಬಿಗ್‌ಶಾಕ್ ನೀಡಿದ್ದಾರೆ.ಇದನ್ನೂ ಓದಿ: ಮೊದಲ ದಿನವೇ ಮನೆಯಿಂದ ಔಟ್‌ – ಕರಾವಳಿಯ ಯೂಟ್ಯೂಬರ್ ರಕ್ಷಿತಾ ಶೆಟ್ಟಿಗೆ ಗೇಟ್‌ಪಾಸ್‌

    ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-12 ಸೆ.28ರಂದು ಪ್ರಾರಂಭವಾಗಿತ್ತು. ಒಟ್ಟು 19 ಸ್ಪರ್ಧಿಗಳ ಪೈಕಿ 6 ಸ್ಪರ್ಧಿಗಳು ಒಂಟಿಗಳಾಗಿ, 5 ಸ್ಪರ್ಧಿಗಳು ಜಂಟಿಗಳಾಗಿ ಹಾಗೂ 3 ಸ್ಪರ್ಧಿಗಳು ಅತಂತ್ರರಾಗಿ ಬಿಗ್‌ಬಾಸ್ ಮನೆಯನ್ನು ಪ್ರವೇಶಿಸಿದ್ದರು. ರಕ್ಷಿತಾ ಶೆಟ್ಟಿ, ಮಾಳು ನಿಪನಾಳ, ಸ್ಪಂದನಾ ಅತಂತ್ರ ಸ್ಥಿತಿಯಲ್ಲಿ ಇದ್ದರು. ಮನೆಯಲ್ಲಿ ಅತಂತ್ರರಾಗಿದ್ದ ಮೂವರಲ್ಲಿ ಇಬ್ಬರನ್ನು ಉಳಿಸಿ, ಒಬ್ಬರನ್ನು ಹೊರಗೆ ಕಳಿಸುವಂತೆ ಬಿಗ್‌ಬಾಸ್‌ ಸೂಚಿಸಿದ್ದರು. ಹೊರಗೆ ಕಳುಹಿಸುವ ನಿರ್ಧಾರವನ್ನು 6 ಒಂಟಿಗಳಿಗೆ ನೀಡಲಾಗಿತ್ತು. ಅದರಂತೆ ರಕ್ಷಿತಾ ಶೆಟ್ಟಿಯನ್ನು ಎಲಿಮಿನೇಟ್ ಮಾಡಿದ್ದರು.ಇದನ್ನೂ ಓದಿ: ಬಿಗ್‌ಬಾಸ್ 12ರ ಮನೆಗೆ 19 ಸ್ಪರ್ಧಿಗಳ ಎಂಟ್ರಿ – ಒಂಟಿ, ಜಂಟಿ ಆಟಕ್ಕೆ ಕಾದಾಟ ಶುರು

  • ಮಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ `ಪಿಲಿನಲಿಕೆ’ – ಕಿಚ್ಚ ಸುದೀಪ್, ಜಿತೇಶ್ ಶರ್ಮಾ ಸೇರಿ ಸೆಲೆಬ್ರಿಟಿಗಳ ದಂಡು

    ಮಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ `ಪಿಲಿನಲಿಕೆ’ – ಕಿಚ್ಚ ಸುದೀಪ್, ಜಿತೇಶ್ ಶರ್ಮಾ ಸೇರಿ ಸೆಲೆಬ್ರಿಟಿಗಳ ದಂಡು

    – ಹುಲಿವೇಷ ತಂಡಕ್ಕೆ 2 ಲಕ್ಷ ರೂ. ಬಹುಮಾನ ಘೋಷಿಸಿದ ಝೈದ್ ಖಾನ್

    ಮಂಗಳೂರಿನಲ್ಲಿ ದಸರಾ (Mangaluru Dasara) ಹಿನ್ನೆಲೆ ಮಿಥುನ್ ರೈ ಅವರು ಆಯೋಜಿಸಿದ್ದ `ಪಿಲಿನಲಿಕೆ’ (Pilinalike) ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ತೆರೆದಿದ್ದು, ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್ (Kiccha Sudeep), ಬಾಲಿವುಡ್ ನಟಿ ಪೂಜಾ ಹೆಗ್ಡೆ, ಕ್ರಿಕೆಟಿಗ ಜಿತೇಶ್ ಶರ್ಮಾ ಸೇರಿ ಸೆಲೆಬ್ರಿಟಿಗಳ ದಂಡೇ ಆಗಮಿಸಿತ್ತು.

    ದಸರಾ ಹಿನ್ನೆಲೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅನೇಕ ತಂಡಗಳು ಹುಲಿಕುಣಿತ ಮಾಡಿತ್ತು. ಈ ಕಲಾವಿದರಾದ ಕಿಚ್ಚ ಸುದೀಪ್, ಸುನೀಲ್ ಶೆಟ್ಟಿ, ಝೈದ್ ಖಾನ್, ಪೂಜಾ ಹೆಗ್ಡೆ, ಕ್ರಿಕೆಟಿಗ ಅಜಿಂಕ್ಯ ರಹಾನೆ, ಜಿತೇಶ್ ಶರ್ಮ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಅಖಂಡ 2 ಸಿನಿಮಾ ರಿಲೀಸ್ ಡೇಟ್ ಫಿಕ್ಸ್ : ಬಾಲಯ್ಯ ನಟನೆಯ ಸಿನಿಮಾ

    ಕಾರ್ಯಕ್ರಮದಲ್ಲಿ ಒಂದು ತಂಡದ ನೃತ್ಯವನ್ನು ವೀಕ್ಷಿಸಿ ಬಹಳ ಸಂತೋಷಪಟ್ಟ ನಟ ಝೈದ್ ಖಾನ್ ಸ್ಥಳದಲ್ಲೇ ಆ ತಂಡಕ್ಕೆ 2 ಲಕ್ಷ ರೂ. ಬಹುಮಾನವನ್ನು ಘೋಷಣೆ ಮಾಡುವ ಮೂಲಕ ಹುಲಿಕುಣಿತಕ್ಕೆ ಪ್ರೋತ್ಸಾಹ ನೀಡಿದರು. ಇದನ್ನೂ ಓದಿ: ಕೊತ್ತಲವಾಡಿ ನಿರ್ದೇಶಕರ ಜೊತೆಗೆ ಪುಷ್ಪಮ್ಮ ಮತ್ತೊಂದು ಸಿನಿಮಾ

    ತುಂಬಾ ಸೊಗಸಾಗಿ ಹುಲಿನೃತ್ಯ ಮಾಡಿದ ಹುಡುಗನ ಪ್ರತಿಭೆಗೆ ಮನಸೋತ ಝೈದ್ ಖಾನ್, ಆತನಿಗೆ 50,000 ರೂ. ಹಣ ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ಪ್ರಸ್ತುತ ಝೈದ್ ಖಾನ್ ಅವರು ನಾಯಕನಾಗಿ ನಟಿಸುತ್ತಿರುವ `ಕಲ್ಟ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟೀಸರ್ ಪ್ರೇಕ್ಷಕರ ಮನ ಗೆದ್ದಿದೆ.

  • ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವ ಕಂಟೆಸ್ಟೆಂಟ್‌ ಯಾರ್ ಗೊತ್ತಾ? – ಇಲ್ಲಿದೆ ನೋಡಿ ಫೈನಲ್ ಲಿಸ್ಟ್

    ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವ ಕಂಟೆಸ್ಟೆಂಟ್‌ ಯಾರ್ ಗೊತ್ತಾ? – ಇಲ್ಲಿದೆ ನೋಡಿ ಫೈನಲ್ ಲಿಸ್ಟ್

    ನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-12 (Bigg Boss 12) ಶುರು ಆಗೋಕೆ ಕೌಂಟ್‌ಡೌನ್ ಶುರುವಾಗಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಯಾರ್ ಹೋಗಬಹುದು ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಕಿಚ್ಚ ಸುದೀಪ್ (Kichcha Sudeep) ನಿರೂಪಣೆಯಲ್ಲಿ ಮೂಡಿ ಬರ್ತಿರುವ ಬಿಗ್ ಬಾಸ್ ಮನೆಗೆ ಹೋಗುವ ಕೆಲವರ ಸಂಭಾವ್ಯ ಪಟ್ಟಿ ಸದ್ಯಕ್ಕೆ ಲಭ್ಯವಾಗಿದೆ.

    ಬಿಗ್ ಬಾಸ್ ಸೀಸನ್-12 ಗ್ರ್ಯಾಂಡ್ ಓಪನಿಂಗ್‌ಗೆ ಕೆಲವೇ ಗಂಟೆಗಳು ಬಾಕಿ ಇವೆ. ಈ ಬಾರಿಯ ಬಿಗ್ ಬಾಸ್ ಮನೆಗೆ ಹೋಗೋ 18 ಕಂಟೆಸ್ಟೆಂಟ್‌ಗಳು ಯಾರಿರಬಹುದು ಅನ್ನೋ ಕುತೂಹಲ ಮತ್ತಷ್ಟು ಜಾಸ್ತಿಯಾಗಿದೆ. ಇದನ್ನೂ ಓದಿ: ಬಿಗ್‌ ಬಾಸ್‌ ಪ್ರೋಮೋ ರಿಲೀಸ್‌ – ಸ್ಪರ್ಧಿಗಳ ಬಗ್ಗೆ ಮಾಹಿತಿಯೂ ಔಟ್‌

    ಬಿಗ್ ಬಾಸ್ ಸೀಸನ್ 12 ಸಂಭಾವ್ಯ ಪಟ್ಟಿಯಲ್ಲಿ ಖಳನಟ ಕಾಕ್ರೋಚ್ ಸುಧೀ ಹೆಸರು ಕೇಳಿಬಂದಿದೆ. ನಿರ್ಮಾಪಕ ಕೆ ಮಂಜು ಅವರ ಪುತ್ರ ನಟ ಶ್ರೇಯಸ್ ಕೆ. ಮಂಜು, ನಿರೂಪಕಿ ಹಾಗೂ ನಟಿ ಜಾಹ್ನವಿ ಕಾರ್ತಿಕ್, ರಿಯಾಲಿಟಿ ಶೋ ಮೂಲಕ ಗಮನ ಸೆಳೆದ ಹಾಸ್ಯನಟ ಗಿಲ್ಲಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರಂತೆ. ಇನ್ನು ಮನದ ಕಡಲು ನಟಿ ರಾಶಿಕ ಶೆಟ್ಟಿ, ಕರವೇ ರಾಜ್ಯ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ, ಕೊತ್ತಲವಾಡಿ ಸಿನಿಮಾದ ನಾಯಕಿ ಕಾವ್ಯ ಶೈವ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್, ನಟಿ ಸ್ಪಂದನ ಸೋಮಣ್ಣ, ಆರ್.ಜೆ. ಅಮಿತ್, ನಟಿ ಮೌನ ಗುಡ್ಡೆಮನೆ, ಡಾಗ್ ಸತೀಶ್, ಮಂಜು ಭಾಷಿಣಿ ಕಿರುತೆರೆ ನಟಿ ಇನ್ನು ಮುಂತಾದ ಹೆಸರುಗಳು ಕೇಳಿಬಂದಿವೆ. ಆದರೆ, ಇದು ಅಧಿಕೃತ ಪಟ್ಟಿಯಲ್ಲ. ಈ ಪಟ್ಟಿಯಲ್ಲಿರುವ ಹೆಸರುಗಳು ಬಹುತೇಕ ಖಚಿತ ಎನ್ನಲಾಗ್ತಿದೆ. ಆದರೆ ಅಧಿಕೃತವಾಗಿ ಘೋಷಣೆಗೆ ಇನ್ನು ಕೆಲವು ಗಂಟೆಗಳು ಕಾಯಬೇಕಿದೆ.

  • ಮ್ಯಾಕ್ಸ್ ಡೈರೆಕ್ಟರ್‌ಗೆ ಕಾರ್ ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್

    ಮ್ಯಾಕ್ಸ್ ಡೈರೆಕ್ಟರ್‌ಗೆ ಕಾರ್ ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್

    ಬಾದ್ ಷಾ ಕಿಚ್ಚ ಸುದೀಪ್‌ಗೆ ಮ್ಯಾಕ್ಸ್‌ನಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರಿಗೆ ಸುದೀಪ್ (Kichcha Sudeep) ಕಾರ್ ಗಿಫ್ಟ್ ನೀಡಿದ್ದಾರೆ. ತಮ್ಮ ಆಪ್ತ ಸ್ನೇಹಿತರಿಗೆ, ನಿರ್ದೇಶಕರಿಗೆ, ನಟರಿಗೆ ಸುದೀಪ್ ಕಾರ್, ಜಾಕೆಟ್, ಕ್ರಿಕೆಟ್ ಬ್ಯಾಟ್, ವಾಚ್ ಮುಂತಾದ ವಸ್ತುಗಳನ್ನ ಗಿಫ್ಟ್ ನೀಡುತ್ತಲೇ ಇರುತ್ತಾರೆ. ಇದೀಗ ಮ್ಯಾಕ್ಸ್ (Max) ಸಿನಿಮಾ ನಿರ್ದೇಶಕರಿಗೆ ಕಾರ್ ಗಿಫ್ಟ್ ಕೊಟ್ಟಿದ್ದಾರೆ.

    ವಿಜಯ್ ಕಾರ್ತಿಕೇಯ ಕಳೆದ ವರ್ಷ ಸುದೀಪ್ ಅವರ ಮ್ಯಾಕ್ಸ್ ಸಿನಿಮಾ ನಿರ್ದೇಶನ ಮಾಡಿದ್ದರು. ಇದೀಗ ಮಾರ್ಕ್ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕರ ಕೆಲಸವನ್ನ ಮೆಚ್ಚಿಕೊಂಡಿರುವ ನಟ ಕಿಚ್ಚ ಸುದೀಪ್ ಕಾರ್ ಗಿಫ್ಟ್ ಕೊಟ್ಟಿದ್ದಾರೆ. ಈ ಫೋಟೋಗಳನ್ನ ತಮ್ಮ ಜಾಲತಾಣದಲ್ಲಿ ನಿರ್ದೇಶಕ ವಿಜಯ್ ಕಾರ್ತಿಕೇಯ ಹಂಚಿಕೊಂದ್ದಾರೆ. ಕಿಚ್ಚ ಸುದೀಪ್ ಹಾಗೂ ಅವರ ಕುಟುಂಬಕ್ಕೆ ಧನ್ಯವಾದಗಳನ್ನ ಹೇಳಿದ್ದಾರೆ.ಇದನ್ನೂ ಓದಿ:

    ವಿಜಯ್ ಕಾರ್ತಿಕೇಯ ಅವರಿಗೆ ಸ್ಕೋಡಾ ಕಂಪನಿಯ ಕಾರ್‌ನ್ನ ಸುದೀಪ್ ತಮ್ಮ ಜೆಪಿ ನಗರದ ನಿವಾಸದಲ್ಲಿ ಉಡುಗೊರೆ ನೀಡಿದ್ದು, ಗಿಫ್ಟ್ ಪಡೆದ ನಿರ್ದೇಶಕ ಖುಷಿ ಪಟ್ಟಿದ್ದಾರೆ. ಸದ್ಯ ಮಾರ್ಕ್ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿರುವ ನಿರ್ದೇಶಕ ವಿಜಯ್ ಕಾರ್ತಿಕೇಯ ಹಾಗೂ ಸುದೀಪ್ ಇದೇ ವರ್ಷ ಸಿನಿಮಾವನ್ನ ತೆರೆಗೆ ತರೋಕೆ ಅನೌನ್ಸ್ ಮಾಡಿದ್ದಾರೆ. ಇನ್ನು ಇದೇ ಸೆ.28ರಂದು ಬಿಗ್‌ಬಾಸ್ ಗ್ರ್ಯಾಂಡ್‌ ಓಪನಿಂಗ್ ನಡೆಯಲಿದ್ದು, ಕಿಚ್ಚ ಸುದೀಪ್ ಅದಕ್ಕಾಗಿ ತಯಾರಿ ನಡೆಸಿದ್ದಾರೆ.

  • BBK 12 | ದೊಡ್ಮನೆಗೆ ಹೋಗ್ತಾರಾ ನಟಿ ಮೇಘಾ ಶೆಟ್ಟಿ?

    BBK 12 | ದೊಡ್ಮನೆಗೆ ಹೋಗ್ತಾರಾ ನಟಿ ಮೇಘಾ ಶೆಟ್ಟಿ?

    ಬಿಗ್‌ಬಾಸ್ (Bigg Boss Kannada) ಸೀಸನ್ 12ಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಸೆ.28ಕ್ಕೆ ಗ್ರ್ಯಾಂಡ್‌ ಓಪನಿಂಗ್ ಆಗಲಿರುವ ಈ ಬಾರಿಯ ಬಿಗ್‌ಬಾಸ್ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಹೆಚ್ಚಾಗಿದೆ. ಬಿಗ್‌ಬಾಸ್ ಅನೌನ್ಸ್ ಆಗುವ ಮುಂಚೆಯಿಂದಲೇ ಸಾಕಷ್ಟು ಸೆಲಬ್ರಿಟಿಗಳು, ಯೂಟ್ಯೂಬರ್ಸ್‌, ಸೀರಿಯಲ್ ಕಲಾವಿದರ ಹೆಸರುಗಳು ಜಾಲತಾಣದಲ್ಲಿ ಹರಿದಾಡುತ್ತಲೇ ಇವೆ. ಆದ್ರೆ ಅಧಿಕೃತವಾಗಿ ಯಾವುದು ಪಕ್ಕಾ ಆಗಿಲ್ಲ. ಇದೇ ಪಟ್ಟಿಯಲ್ಲಿ ನಟಿ ಮೇಘಾ ಶೆಟ್ಟಿ (Megha Shetty) ಅವರ ಹೆಸರು ಕೂಡಾ ಕೇಳಿಬಂದಿತ್ತು.

    ಕಿರುತೆರೆ ಹಾಗೂ ಹಿರಿತೆರೆ ಮೂಲಕ ಖ್ಯಾತಿ ಪಡೆದಿರುವ ನಟಿ ಮೇಘಾ ಶೆಟ್ಟಿ ಈ ಬಾರಿಯ ಬಿಗ್‌ಬಾಸ್ ಮನೆಗೆ ಹೋಗುತ್ತಾರೆ. ಅವರೇ ಮೊದಲ ಸ್ಪರ್ಧಿಯಾಗಿರುತ್ತಾರೆ ಅಂತೆಲ್ಲ ಹಬ್ಬಿಸಲಾಗಿತ್ತು. ಆದರೆ ಈ ಎಲ್ಲಾ ಅಂತೆ ಕಂತೆಗಳಿಗೆ ಗ್ಲ್ಯಾಮರ್‌ ಗೊಂಬೆ ನಟಿ ಮೇಘಾ ಶೆಟ್ಟಿ ತೆರೆ ಎಳೆದಿದ್ದಾರೆ. ಈ ಬಾರಿಯ ಬಿಗ್‌ಬಾಸ್‌ಗೆ ನಾನು ಹೋಗುವುದಿಲ್ಲ. ದಯವಿಟ್ಟು ಗಾಳಿಸುದ್ದಿ ಹಬ್ಬಿಸುವುದನ್ನ ನಿಲ್ಲಿಸಿ ಎಂದು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತುಮಕೂರು ದಸರಾಗೆ ರಮ್ಯಾ – ರವಿಚಂದ್ರನ್

    ಮೇಘಾ ಶೆಟ್ಟಿ ಕಿರುತೆರೆಯ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಖ್ಯಾತಿ ಪಡೆದು ನಂತರ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಸಿನಿಮಾ ನಿರ್ಮಾಣ ಮಾಡುವ ಕಾರ್ಯದಲ್ಲೂ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಹಬ್ಬಿದ್ದ ಬಿಗ್‌ಬಾಸ್ ಮನೆಯ ಸ್ಟೋರಿಗೆ ಇತಿಶ್ರೀ ಹಾಡಿದ್ದಾರೆ. ನಟಿ ಜಾಲತಾಣದ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್‌-1 ಟ್ರೈಲರ್‌ ಲಾಂಚ್‌ಗೆ ದಿನಾಂಕ, ಸಮಯ ಫಿಕ್ಸ್‌ – ಹೊಂಬಾಳೆ ಫಿಲ್ಮ್ಸ್ಅಧಿಕೃತ ಮಾಹಿತಿ

  • ವೀಕ್ಷಕರಿಗೆ ಚಮಕ್‌ ಕೊಟ್ಟ BBK 12 ಪ್ರೋಮೋ – AI ಮೂಲಕ ‘ಕಾಗೆ-ನರಿ’ ಕಥೆ ಹೇಳಿದ ಕಿಚ್ಚ ಸುದೀಪ್‌; ಟ್ವಿಸ್ಟ್‌ ಏನು?

    ವೀಕ್ಷಕರಿಗೆ ಚಮಕ್‌ ಕೊಟ್ಟ BBK 12 ಪ್ರೋಮೋ – AI ಮೂಲಕ ‘ಕಾಗೆ-ನರಿ’ ಕಥೆ ಹೇಳಿದ ಕಿಚ್ಚ ಸುದೀಪ್‌; ಟ್ವಿಸ್ಟ್‌ ಏನು?

    ‘ಬಿಗ್‌ ಬಾಸ್‌ ಕನ್ನಡ ಸೀಸನ್ 12‌’ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ಸೆ.28 ರಂದು ಪ್ರೀಮಿಯರ್‌ ಸಂಚಿಕೆ ಪ್ರಸಾರವಾಗಲಿದೆ. ಈ ಸಂಬಂಧ ಶನಿವಾರ ಕಾರ್ಯಕ್ರಮದ ಹೊಸ ಹಾಗೂ ವಿನೂತನ ಪ್ರೋಮೋ ಬಿಡುಗಡೆಯಾಗಿದೆ. ಹೊಸ ಪ್ರೋಮೋದಲ್ಲಿ ವೀಕ್ಷಕರಿಗೆ ಕ್ಯೂರಿಯಸ್‌ ಮೂಡಿಸಲು ಅಂಶಗಳಿವೆ.

    ಎಐ ಮಾದರಿ ವೀಡಿಯೋದ ಪ್ರೋಮೋದಲ್ಲಿ ಕಿಚ್ಚ ಸುದೀಪ್‌ ‘ಕಾಗೆ-ನರಿ’ ಕಥೆ ಹೇಳಿದ್ದಾರೆ. ಕಥೆ ಮೂಲಕ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಕಾನ್ಸೆಪ್ಟ್‌ ಬಗ್ಗೆ ಸುಳಿವು ಕೊಟ್ಟಿದ್ದಾರೆ.

    ಕಿಚ್ಚ ಸುದೀಪ್‌ ಹೇಳಿದ ಕಥೆ ಏನು?
    ಈ ಸಲ ನೀವಿದ್ದೀರಾ.. ನೀವಿದ್ದೀರಾ ಅಂತ ಕೇಳ್ತಾ ಇದ್ದೋರು, ಈಗ ನೆಕ್ಸ್ಟ್‌ ಏನು.. ನೆಕ್ಸ್ಟ್‌ ಏನು ಅಂತ ಕೇಳ್ತಿದ್ದೀರಾ. ಒಂದು ಕಥೆ ಹೇಳ್ಲಾ? ಒಂದೂರಲ್ಲಿ ಒಂದು ಕಾಗೆಯಿತ್ತು. ನೀವೆಲ್ಲ ಸ್ಕೂಲಲ್ಲಿ ಕೇಳಿದ್ದೀರಲ್ಲ ಅದೇ ಕಥೆ. ಆ ಕಾಗೆಗೆ ಹಸಿವಾಗಿದ್ದಾಗ, ವಡೆ ಮಾಡ್ತಾ ಇದ್ದ ಅಜ್ಜಿ ಹತ್ರ ಹೋಗಿ, ‘ಅಜ್ಜಿ.. ಅಜ್ಜಿ.. ನಂಗೊಂದು ವಡೆ ಕೊಡ್ತೀಯ ಅಂತ ಕೇಳ್ತು’. ಅಜ್ಜಿ ಪ್ರೀತಿಯಿಂದ ವಡೆ ಕೊಟ್ರು. ಕಾಗೆ ಆ ವಡೆನಾ ತಗೊಂಡು ಹಾರ್ಕೊಂಡು ಹೋಗಿ ಒಂದು ಮರದ ಮೇಲೆ ಕೂತು ಇನ್ನೇನು ತಿನ್ಬೇಕು. ಆಗ ಒಬ್ಬನ ಎಂಟ್ರಿ. ವಿಲನ್‌.. ಕಾಗೆ ಬಾಯಲ್ಲಿದ್ದ ವಡೆನಾ ಕಿತ್ತುಕೊಳ್ಳೋಕೆ ಸ್ಕೆಚ್‌ ಹಾಕಿದ್ದ ನರಿ. ‘ಕಾಕ.. ಕಾಕ.. ನೀನು ಕೋಗಿಲೆ ಥರ ಹಾಡು ಹಾಡ್ತೀಯಾ, ನನಗೋಸ್ಕರ ಒಂದು ಹಾಡು ಹಾಡು’ ಅಂತ ಕೇಳ್ತು. ನಿಮ್ಗೆಲ್ಲ ಗೊತ್ತಿರೋ ಹಾಗೆ, ಪಾಪ ಕಾಗೆ ನರಿ ಮಾತು ಕೇಳೋಕು, ಹಾಡು ಶುರು ಮಾಡೋಕು, ವಡೆ ಕಾಗೆ ಬಾಯಿಂದ ಕೆಳಗ್‌ ಬೀಳೋಕು, ಇನ್ನೇನ್‌ ವಡೆ ನರಿ ಬಾಯಿಗೆ ಸೇರ್ಬೇಕು ಅನ್ನುವಾಗ.. ನಿಮಗೆಲ್ಲಾ ಕ್ಲೈಮ್ಯಾಕ್ಸ್‌ ಗೊತ್ತಿದೆ ಅಂತ ಅನ್ಕೊಂಡ್ರೆ, ಓ ಭ್ರಮೆ..

    ಅಂತ ಹೇಳಿ ಸುದೀಪ್‌ ಕಥೆಯನ್ನ ಮುಗಿಸುತ್ತಾರೆ. ಆದರೆ, ವಡೆ ನರಿ ಬಾಯಿಗೆ ಬೀಳದೇ ಮತ್ತೆ ಕಾಗೆ ಬಾಯಿಗೆ ಹೋಗುತ್ತದೆ. ಆಗ ಕಾಗೆ ಕಣ್ಣು ಹೊಡೆಯುತ್ತದೆ. ನರಿ ನಿರಾಸೆಯಿಂದ ವಾಪಸ್‌ ಹೋಗುತ್ತದೆ (ಇದರ ಅರ್ಥ- ಸೀಸನ್‌ 12 ಯಾರ ಊಹೆಗೂ ನಿಲುಕಲ್ಲ. ಹೀಗೆಯೇ ಇರುತ್ತೆ ಎಂದುಕೊಳ್ಳುವವರಿಗೆ ನರಿ ಥರ ನಿರಾಸೆ ಖಂಡಿತ ಎಂಬುದನ್ನು ಪ್ರೋಮೋ ಸೂಚಿಸುವಂತಿದೆ).

    ಸುದೀಪ್‌ ಮುಂದುವರಿದು, ಈ ಸಲ ಹಾಗೇನೆ. ನಾವು 11 ಸೀಸನ್‌ ನೋಡಿದ್ದೀವಿ. ನಮಗೆ ಬಿಗ್‌ ಬಾಸ್‌ ಬಗ್ಗೆ ಎಲ್ಲಾ ಗೊತ್ತು ಅನ್ನೋರಿಗೆ.. ಅಂತ ಹೇಳಿ ತಮ್ಮ ಮಾತನ್ನು ಕೊನೆಗೊಳಿಸುತ್ತಾರೆ. ಆ ಮೂಲಕ ಸೀಸನ್‌ 12 ರಲ್ಲಿ ಸಾಕಷ್ಟು ಟ್ವಿಸ್ಟ್‌ ಇದೆ ಅಂತ ಸುಳಿವು ಕೊಟ್ಟಿದ್ದಾರೆ.

  • ಅಂಗ & ಅಂಗಾಂಶ ದಾನ ಮಾಡಿದ ಕಿಚ್ಚ ಸುದೀಪ್‌ ಪತ್ನಿ

    ಅಂಗ & ಅಂಗಾಂಶ ದಾನ ಮಾಡಿದ ಕಿಚ್ಚ ಸುದೀಪ್‌ ಪತ್ನಿ

    – ಪತಿ ಬರ್ತ್‌ಡೇಗೆ ಮಹತ್ತರ ಕಾರ್ಯ ಕೈಗೊಂಡ ಪ್ರಿಯಾ ಸುದೀಪ್‌

    ಟ ಕಿಚ್ಚ ಸುದೀಪ್‌ ಅವರ ಹುಟ್ಟುಹಬ್ಬಕ್ಕೆ ಪತ್ನಿ ಪ್ರಿಯಾ ಅವರು ಮಹತ್ತರ ಕಾರ್ಯ ಕೈಗೊಂಡಿದ್ದಾರೆ. ಅಂಗ ಮತ್ತು ಅಂಗಾಂಶ ದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

    ಕಿಚ್ಚ ಸುದೀಪ್ ಕೇರ್ ಫೌಂಡೇಶನ್‌ ಮೂಲಕ ಪ್ರಿಯಾ ಸುದೀಪ್‌ ಅವರು ಅಂಗ ಮತ್ತು ಅಂಗಾಂಶ ದಾನ ಮಾಡಿದ್ದಾರೆ. ಸುದೀಪ್ ಅವರ 52ನೇ ಹುಟ್ಟಿಹಬ್ಬದ ವಿಶೇಷವಾಗಿ ಮಹತ್ತರ ಕೆಲಸ ಆರಂಭಿಸಿದ್ದಾರೆ. ಈ ಬಗ್ಗೆ ವೀಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

    ಫ್ಯಾನ್ಸ್‌ಗೆ ಪ್ರಿಯಾ ಸುದೀಪ್‌ ಅವರ ಕರೆ ಏನು?
    ನಮಸ್ಕಾರ, ಪ್ರತಿ ವರ್ಷ ಸುದೀಪ್‌ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು, ಸ್ನೇಹಿತರು ಒಳ್ಳೆ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ರಕ್ತದಾನ, ಅನ್ನದಾನ, ಬಡಮಕ್ಕಳಿಗೆ ಸಹಾಯ ಹೀಗೆ ತಮ್ಮದೇ ಆದ ಸಣ್ಣ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಾ ಬಂದಿದ್ದಾರೆ. ಹಾಗೆಯೇ, ಈ ವರ್ಷ ನಾನು ಸುದೀಪ್‌ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಂಗ ಮತ್ತು ಅಂಗಾಂಶ ದಾನ ಮಾಡಿದ್ದೇನೆ. ಅದರ ಪ್ರಕ್ರಿಯೆ ಬಹಳ ಸುಲಭ. ನಮ್ಮ ಒಂದು ಸಣ್ಣ ನಿರ್ಧಾರದಿಂದ ಒಂದು ಜೀವ ಉಳಿಯುತ್ತದೆ ಅಂದ್ರೆ ಅದಕ್ಕಿಂತ ದೊಡ್ಡ ಕೆಲಸ ಬೇರೆ ಇಲ್ಲ. ಕಿಚ್ಚ ಸುದೀಪ್‌ ಕೇರ್‌ ಫೌಂಡೇಶನ್‌ ಮೂಲಕ ನಾನು ಅಂಗ ಮತ್ತು ಅಂಗಾಂಶ ದಾನ ಮಾಡಿದ್ದೇನೆ. ನೀವು ದಾನ ಮಾಡಿ ಎಂದು ಮನವಿ ಎಂದು ಜನತೆಗೆ ಸುದೀಪ್‌ ಪತ್ನಿ ಪ್ರಿಯಾ ಅವರು ಕರೆ ಕೊಟ್ಟಿದ್ದಾರೆ.

    ಅಂಗಾಂಗ ದಾನ ಮಾಡಬೇಕು ಅಂದ್ರೆ ನಮಗೆ ಜವಾಬ್ದಾರಿಗಳಿರುತ್ತವೆ. ಮೊದಲು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅದಕ್ಕಾಗಿ ನೀವು ಸ್ವಾಸ್ಥರಾಗಿರಿ, ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ. ಆಗ ಈ ಮಹತ್ಕಾರ್ಯಕ್ಕೆ ಅರ್ಥ ಬರುತ್ತದೆ. ನಾವು ಯಾವಾಗ ಹೋಗುತ್ತೇವೋ ನಮಗೆ ಗೊತ್ತಿಲ್ಲ. ನಮ್ಮ ಜೀವನ ನಮ್ಮ ಕೈಯಲ್ಲಿಲ್ಲ. ಹಾಗಾಗಿ, ಅಂಗಾಂಗ ದಾನ ಮಾಡಿ ಎಂದು ಜಾಗೃತಿ ಮೂಡಿಸಿದ್ದಾರೆ.

  • ಕಿಚ್ಚನ ಮಾರ್ಕ್ ಟೈಟಲ್ ಟೀಸರ್‌ಗೆ ಫುಲ್ ಮಾರ್ಕ್ಸ್

    ಕಿಚ್ಚನ ಮಾರ್ಕ್ ಟೈಟಲ್ ಟೀಸರ್‌ಗೆ ಫುಲ್ ಮಾರ್ಕ್ಸ್

    ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಮಾರ್ಕ್. ಕಿಚ್ಚನ ಬರ್ತಡೇಗೆ ಟೈಟಲ್ ಟೀಸರ್ ರಿಲೀಸ್ ಮಾಡಲಾಗಿತ್ತು. ಅಜಯ್ ಮಾರ್ಕಂಡೆ ಎಂಬ ಪಾತ್ರದಲ್ಲಿ ಸುದೀಪ್ ಅವರು ನಟಿಸುತ್ತಿದ್ದಾರೆ. ಈ ಟೈಟಲ್ ಟೀಸರ್ ದಾಖಲೆ ಬರೆದಿದೆ.

    ಮಾರ್ಕ್ (Mark) ಟೈಟಲ್ ಟೀಸರ್ ಯೂಟ್ಯೂಬ್ ನಲ್ಲಿ 5.01 ಮಿಲಿಯನ್ ವೀವ್ಸ್ ಕಂಡಿದೆ. ಇನ್‌ಸ್ಟಾಗ್ರಾಂನಲ್ಲಿ 4.3 ಮಿಲಿಯನ್ ವೀಕ್ಷಣೆ ಕಂಡಿದೆ. ಯೂಟ್ಯೂಬ್ ಹಾಗೂ ಇನ್‌ಸ್ಟಾ ಒಟ್ಟಾರೆ ಸೇರಿ ಮಾರ್ಕ್ ಟೈಟಲ್ ಟೀಸರ್ 9.3 ಮಿಲಿಯನ್ ವೀವ್ಸ್ ಕಂಡಿದೆ.ಇದನ್ನೂ ಓದಿ: ‘ಮಹಾನ್’ ಚಿತ್ರ ಒಪ್ಪಿಕೊಂಡ ಬಿಗ್ ಬಾಸ್ ಖ್ಯಾತಿಯ ನಟಿ ನಮ್ರತಾ

    ‘ಸತ್ಯಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್ಸ್’ ಬ್ಯಾನರ್‌ಗಳು ಜೊತೆಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿವೆ. ಈ ಮೊದಲು ‘ಮ್ಯಾಕ್ಸ್’ ಸಿನಿಮಾದ ಮೂಲಕ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದರು. ಅವರೇ ಈಗ ‘ಮಾರ್ಕ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಇದೇ ವರ್ಷ ಡಿಸೆಂಬರ್ 25ರಂದು ಮಾರ್ಕ್ ಚಿತ್ರ ತೆರೆಗೆ ಬರ್ತಿದೆ.