Tag: ಕಿಚ್ಚ ಸುದೀಪ್

  • ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ

    ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ

    ರಿಯಲ್ ಸ್ಟಾರ್ ಉಪೇಂದ್ರ (Upendra) ಸದ್ಯ `ಕಬ್ಜ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬೈನಲ್ಲಿ ಚಿತ್ರತಂಡ ಬೀಡು ಬಿಟ್ಟಿದ್ದಾರೆ. ಸಿನಿಮಾದ ಸುದ್ದಿಗೋಷ್ಠಿಯಲ್ಲಿ ದೀಪಿಕಾ ಪಡುಕೋಣೆ (Deepika Padukone) ಬಗ್ಗೆ ನಟ ಉಪ್ಪಿ ಮೆಚ್ಚುಗೆಯ ಮಾತುಗಳನ್ನ ಹೇಳಿದ್ದಾರೆ.

    ಆರ್.ಚಂದ್ರು (R.Chandru) ನಿರ್ದೇಶನದ `ಕಬ್ಜ’ ಸಿನಿಮಾ ಬಹುಭಾಷೆಗಳಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಕಿಚ್ಚ ಮತ್ತು ಉಪ್ಪಿ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಉಪ್ಪಿ, ದೀಪಿಕಾ ಜೊತೆ ನಟಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.

    ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ನಾನು ʻಲಕ್ಕಿʼ ಎಂದು ನಟ ಉಪೇಂದ್ರ ಅವರು `ಕಬ್ಜ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ದೀಪಿಕಾ ಬಗ್ಗೆ ಉಪ್ಪಿ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ. ಇದನ್ನೂ ಓದಿ: ರೆಟ್ರೋ ಲುಕ್‌ನಲ್ಲಿ ಕಂಗೊಳಿಸಿದ ರಕ್ಷಿತ್ ಶೆಟ್ಟಿ ನಾಯಕಿ

    ದೀಪಿಕಾ ಪಡುಕೋಣೆ ಮೂಲತಃ ಕರ್ನಾಟಕದವರು. ಅವರು ಕನ್ನಡದ `ಐಶ್ವರ್ಯಾ’ ಚಿತ್ರದ ಮೂಲಕ ಉಪೇಂದ್ರ ಅವರಿಗೆ ನಾಯಕಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಬಾಲಿವುಡ್‌ನಲ್ಲಿ ಸಕ್ಸಸ್ ಕಂಡರು. ಇತ್ತೀಚಿನ `ಪಠಾಣ್’ ಚಿತ್ರದ ಮೂಲಕ ದೀಪಿಕಾ ಗಮನ ಸೆಳೆದಿದ್ದಾರೆ.

  • ಕೇರಳ ಸ್ಟ್ರೈಕರ್ಸ್‌ ಮೇಲೆ ಕರ್ನಾಟಕ ಬುಲ್ಡೋಜರ್ಸ್‌ ಸವಾರಿ – ಕಿಚ್ಚನ ಸೈನ್ಯಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ

    ಕೇರಳ ಸ್ಟ್ರೈಕರ್ಸ್‌ ಮೇಲೆ ಕರ್ನಾಟಕ ಬುಲ್ಡೋಜರ್ಸ್‌ ಸವಾರಿ – ಕಿಚ್ಚನ ಸೈನ್ಯಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ

    ತಿರುನಂತಪುರಂ: ಭರ್ಜರಿ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಕಿಚ್ಚ ಸುದೀಪ್‌ (Kiccha Sudeep) ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್‌ (Karnataka Bulldozers) ತಂಡವು ಕೇರಳ ಸ್ಟ್ರೈಕರ್ಸ್‌ (Kerala Strikers) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಕೇರಳ ಸ್ಟ್ರೈಕರ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಆಡಿದ ಎರಡೂ ಪಂದ್ಯಗಳನ್ನು ಗೆದ್ದ ಕರ್ನಾಟಕ ಬುಲ್ಡೋಜರ್ಸ್ ಪಾಯಿಂಟ್ ಪಟ್ಟಿಯಲ್ಲಿ ಏರಿಕೆ ಕಂಡಿದೆ. ಇದನ್ನೂ ಓದಿ: KCC 2023: ನಿನ್ನೆ ಪಂದ್ಯದಲ್ಲಿ ಸೋತವರು ಯಾರು? ಗೆದ್ದವರು ಯಾರು?

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೇರಳ ಸ್ಟ್ರೈಕರ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಳೆದುಕೊಂಡು 101 ರನ್ ಗಳಿಸಿತು. ವಿಕೆಟ್ ಕೀಪರ್ ಬ್ಯಾಟರ್ ರಾಜೀವ್ ಪಿಳ್ಳೈ 32 ಎಸೆತಗಳಲ್ಲಿ 54 ರನ್ (4 ಬೌಂಡರಿ 3 ಸಿಕ್ಸರ್) ಸಿಡಿಸಿದರೆ, ನಾಯಕ ಉನ್ನಿ ಮುಕುಂದನ್ 10 ಎಸೆತಗಳಲ್ಲಿ 19 ರನ್ ಗಳಿಸಿ ತಂಡಕ್ಕೆ ನೆರವಾದರು.

    ಈ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಪರ ಕರಣ್ ಆರ್ಯಾನ್ 2 ಓವರ್ ಗಳಲ್ಲಿ 20 ರನ್ ನೀಡಿ 2 ವಿಕೆಟ್ ಪಡೆದರೇ, ಜಯರಾಮ್ ಕಾರ್ತಿಕ್, ಪ್ರದೀಪ್ ಬೋಗಾದಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ತಲಾ ಒಂದೊಂದು ವಿಕೆಟ್ ಕಿತ್ತರು. ಇದನ್ನೂ ಓದಿ: KCC-2023: ಪಂದ್ಯ ಗೆದ್ದು ಅಪ್ಪುಗೆ ಕೆಸಿಸಿ ಕಪ್ ಅರ್ಪಿಸಿದ ಧನಂಜಯ್ ಟೀಮ್

    2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮಾಡಿದ ಕರ್ನಾಟಕ 5 ವಿಕೆಟ್ ಕಳೆದುಕೊಂಡು 124 ರನ್ ಗಳಿಸುವ ಮೂಲಕ 23 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು. ಈ ವೇಳೆ ಪ್ರದೀಪ್ ಬೋಗಾದಿ ಮತ್ತು ಡಾರ್ಲಿಂಗ್ ಕೃಷ್ಣ ಉತ್ತಮ ಶುಭಾರಂಭ ನೀಡಿದ್ದರು. ಕೃಷ್ಣ 13 ಎಸೆತಗಳಲ್ಲಿ 20 ರನ್ ಗಳಿಸಿದರೆ, ಪ್ರದೀಪ್ 29 ಎಸೆತಗಳಲ್ಲಿ 59 ರನ್ (7 ಬೌಂಡರಿ 2 ಸಿಕ್ಸರ್) ಚಚ್ಚಿ ಮಿಂಚಿದರು. ರಾಜೀವ್ ಹನು, ಕರಣ್ ಆರ್ಯಾನ್ ತಲಾ 13 ರನ್ ಗಳಿಸಿದರು.

    3ನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಕೇರಳ ಸ್ಟ್ರೈಕರ್ಸ್ ತಂಡ 5 ವಿಕೆಟ್ ಕಳೆದುಕೊಂಡು 105 ರನ್ ಗಳಿಸಿತು. ರಾಜೀವ್ ಪಿಳ್ಳೈ 18 ಎಸೆತಗಳಲ್ಲಿ 43 ರನ್ (3 ಬೌಂಡರಿ 3 ಸಿಕ್ಸರ್) ಚಚ್ಚಿ ಕೇರಳ ತಂಡಕ್ಕೆ ನೆರವಾದರು. ಆದರೆ 23 ರನ್‌ಗಳ ಮುನ್ನಡೆ ಕಾಯ್ದುಕೊಂಡಿದ್ದ ಕರ್ನಾಟಕ ತಂಡಕ್ಕೆ ಗೆಲುವಿಗಾಗಿ 83 ರನ್‌ಗಳ ಅವಶ್ಯಕತೆಯಿತ್ತು.

    ಈ ವೇಳೆ ಆರಂಭಿಕರಾಗಿ ಕಣಕ್ಕಿಳಿದ ರಾಜೀವ್ ಹನು ಮತ್ತು ಜಯರಾಮ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ರಾಜೀವ್ ಹನು 14 ಎಸೆತಗಳಲ್ಲಿ 34 ರನ್ (3 ಬೌಂಡರಿ 2 ಸಿಕ್ಸರ್) ಗಳಿಸಿದರೇ, ಜಯರಾಮ್ ಕಾರ್ತಿಕ್ 13 ಎಸೆತಗಳಲ್ಲಿ 31 ರನ್ (5 ಬೌಂಡರಿ 1 ಸಿಕ್ಸರ್) ಗಳಿಸಿದರು. ಒಟ್ಟು 6.4 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿದ ಕರ್ನಾಟಕ ಬುಲ್ಡೋಜರ್ಸ್ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

    ಸಿಸಿಎಲ್ 20 ಪಂದ್ಯಾವಳಿಯಲ್ಲಿ 4 ಇನ್ನಿಂಗ್ಸ್‌ಗಳಲ್ಲಿ ಆಡಲಾಗುತ್ತದೆ. ಪ್ರತಿ 10 ಓವರ್ ಗಳಿಗೆ ಒಂದು ಇನ್ನಿಂಗ್ಸ್ ಎಂದು ಪರಿಗಣಿಸಲಾಗುತ್ತದೆ.

  • KCC 3- ಕಿಚ್ಚನಿಗೆ ಧನ್ಯವಾದ ಹೇಳಿದ ಕ್ರಿಕೆಟಿಗ ಸುರೇಶ್ ರೈನಾ

    KCC 3- ಕಿಚ್ಚನಿಗೆ ಧನ್ಯವಾದ ಹೇಳಿದ ಕ್ರಿಕೆಟಿಗ ಸುರೇಶ್ ರೈನಾ

    ನಿನ್ನೆಯಷ್ಟೇ ಕೆಸಿಸಿ ಸೀಸನ್ 3 ಮುಕ್ತಾಯವಾಗಿದೆ. ವಿಜಯನಗರ ಪ್ಯಾಟ್ರಿಯಾಟ್ಸ್ ಮತ್ತು ಗಂಗಾ ವಾರಿಯರ್ಸ್ (Ganga Warriors) ನಡುವೆ ನಡೆದ ಪಂದ್ಯದಲ್ಲಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದವರು ಕ್ರಿಕೆಟಿಗ ಸುರೇಶ್ ರೈನಾ (Suresh Raina). 29 ಎಸೆತಗಳಲ್ಲಿ ಅಜೇಯ 54 ರನ್ ಬಾರಿಸುವ ಮೂಲಕ ತಂಡವನ್ನು ಗೆಲ್ಲುವಂತೆ ಮಾಡಿದರು. ಅಲ್ಲದೇ, ಬೌಲಿಂಗ್ ನಲ್ಲೂ ಅವರು ಹಿಂದೆ ಬೀಳಲಿಲ್ಲ. 2 ವಿಕೆಟ್ ಪಡೆಯುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಕಾರಣವಾದರು.

    ಅಂತಾರಾಷ್ಟ್ರೀಯ ಪಂದ್ಯದಂತೆಯೇ ಆಯೋಜನೆ ಮಾಡಿದ್ದ ಆಯೋಜಕರಿಗೆ ಸುರೇಶ್ ರೈನಾ ಧನ್ಯವಾದಗಳನ್ನು ತಿಳಿಸಿದ್ದಾರೆ. ಅದರಲ್ಲೂ ಈ ಪಂದ್ಯಾವಳಿಯಲ್ಲಿ ಆಡುವುದಕ್ಕೆ ಅವಕಾಶ ಮಾಡಿಕೊಟ್ಟ ಕಿಚ್ಚ ಸುದೀಪ್ (Kiccha Sudeep) ಅವರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ. ಇಂತಹ ಪಂದ್ಯವನ್ನು ನಾನು ಯಾವತ್ತೂ ನೋಡಿಲ್ಲ. ನನಗೆ ಇದು ಮರೆಯಲಾರದ ಕ್ಷಣವಾಗಿತ್ತು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ನಟ ಉಪೇಂದ್ರ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣಾ ಆಯೋಗ

    ಈ ಬಾರಿ ಆರು ತಂಡಗಳ ನಡುವೆ ಪಂದ್ಯಾವಳಿ ಆಯೋಜನೆ ಆಗಿತ್ತು. ದಿನಕ್ಕೆ ಮೂರು ಪಂದ್ಯಗಳಂತೆ ಒಟ್ಟು ಆರು ತಂಡಗಳು ಕಪ್ ಗಾಗಿ ಸೆಣೆಸಿದವು. ನುರಿತ ಕ್ರಿಕೆಟ್ ಆಟಗಾರರಂತೆಯೇ ಸಿನಿಮಾ ರಂಗದ ಕಲಾವಿದರು ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದರು. ಕಿಚ್ಚ ಸುದೀಪ್, ಗಣೇಶ್, ಧನಂಜಯ್, ಶಿವರಾಜ್ ಕುಮಾರ್, ಡಾರ್ಲಿಂಗ್ ಕೃಷ್ಣ ಸೇರಿದಂತೆ ಇತರರು ಒಂದೊಂದು ತಂಡದ ನೇತೃತ್ವವಹಿಸಿದ್ದರು.

  • ಹೊಸ ಕಥೆ ಇದ್ದರೆ ಜನ ಒಪ್ಪಿಕೊಳ್ತಾರೆ, `ಕಾಂತಾರ’ ಸಕ್ಸಸ್ ಬಗ್ಗೆ ಕಿಚ್ಚನ ಮಾತು

    ಹೊಸ ಕಥೆ ಇದ್ದರೆ ಜನ ಒಪ್ಪಿಕೊಳ್ತಾರೆ, `ಕಾಂತಾರ’ ಸಕ್ಸಸ್ ಬಗ್ಗೆ ಕಿಚ್ಚನ ಮಾತು

    ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) `ವಿಕ್ರಾಂತ್ ರೋಣ’ (Vikrantrona) ಸಿನಿಮಾ ನಂತರ ಹೊಸ ಸಿನಿಮಾ ಮೂಲಕ ಬರುವ ತಯಾರಿ ನಡೆಯಲ್ಲಿದ್ದಾರೆ. ಹೀಗಿರುವಾಗ ಕಾಂತಾರ (KANTARA) ಸಿನಿಮಾ ಸಕ್ಸಸ್ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ -ಕಿಯಾರಾ ಜೋಡಿ

    ಕನ್ನಡ ಮತ್ತು ಸೌತ್ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾವಾಗಿ ಗೆಲ್ಲುತ್ತಿದೆ. ಬಾಲಿವುಡ್‌ನಲ್ಲಿ ದಕ್ಷಿಣದ ಸಿನಿಮಾಗಳು ಕಮಾಲ್ ಮಾಡುತ್ತಿದೆ. ಹೀಗಿರುವಾದ ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್‌ಗೆ ಪ್ರಶ್ನೆಯೊಂದು ಎದುರಾಗಿದೆ. ಸಿನಿಮಾ ಸಕ್ಸಸ್ ಸೂತ್ರಗಳು ಬಗ್ಗೆ ನಟ ಮಾಡಿದ್ದಾರೆ. ಇತ್ತೀಚಿಗೆ ಕಾರ್ಯಕ್ರಮದಲ್ಲಿವೊಂದರಲ್ಲಿ ಭಾಗವಹಿಸಿದ ಸುದೀಪ್‌ಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಹೇಗೆ ಗೆಲ್ಲುತ್ತವೆ, ಯಾವ ಚಿತ್ರಗಳನ್ನು ಪ್ಯಾನ್ ಇಂಡಿಯಾ ಮಾಡಬೇಕು ಎಂಬುದನ್ನು ನಿರ್ಧರಿಸುವುದು ಹೇಗೆ, ಇದರ ಒತ್ತಡ ನಿರ್ಮಾಪಕರ ಮೇಲೆ ಯಾವ ರೀತಿ ಬೀಳಲಿದೆ ಎಂಬ ಪ್ರಶ್ನೆ ಎದುರಾಯಿತು.

    ಈ ಪ್ರಶ್ನೆಗಳಿಗೆ ಉತ್ತರಿಸಲು ಆರಂಭಿಸಿದ ಸುದೀಪ್ ಚೈನೀಸ್ ಸಿನಿಮಾಗಳನ್ನು ಉದಾಹರಣೆಯಾಗಿ ನೀಡಿದರು. ಬೇರೆ ಭಾಷೆಗಳಿಗೆ ಡಬ್ ಮಾಡಿ ವಿಶ್ವದಾದ್ಯಂತ ತಮ್ಮ ಸಿನಿಮಾಗಳು ಹಬ್ಬುವಂತೆ ಮಾಡಿದರು. ಇಂಗ್ಲಿಷ್ ಭಾಷೆಗೆ ಡಬ್ ಆದ ಚೈನೀಸ್ ಭಾಷೆಗಳು ದೇಶದೆಲ್ಲೆಡೆ ಗೆದ್ದವು, ಪ್ರೇಕ್ಷಕನಿಗೆ ಹೊಸತನ್ನು ನೋಡುವ ಬಯಕೆ ಇರುತ್ತದೆ. ಹಾಗಾಗಿಯೇ ಹೊಸತನದಿದ್ದ ಚೈನೀಸ್ ಕೊರಿಯನ್ ಚಿತ್ರಗಳನ್ನು ಭಾರತದ ಅಭಿಮಾನಿಗಳು ಮೆಚ್ಚಿಕೊಂಡರು ಎಂದು ಕಿಚ್ಚ ಮಾತನಾಡಿದ್ದಾರೆ.

    ಇದೇ ವೇಳೆ ರಿಷಬ್‌ ನಟನೆ, ನಿರ್ದೇಶನದ `ಕಾಂತಾರ’ (KANTARA) ಚಿತ್ರ ಒಂದು ಕನ್ನಡ ಚಿತ್ರ, ಕರ್ನಾಟಕದ (Karnataka) ಆಚರಣೆಯಾದ ಭೂತಕೋಲದ ಕಥೆ ಇರುವ ಚಿತ್ರ, ಈ ಚಿತ್ರವನ್ನು ಉತ್ತರ ಪ್ರದೇಶದ ಸಿನಿ ರಸಿಕ ಮೆಚ್ಚಿಕೊಳ್ಳಲು ಕಾರಣವೇನು ಎಂಬ ಪ್ರಶ್ನೆಯೂ ಸಹ ಸುದೀಪ್ ಅವರಿಗೆ ಎದುರಾಯಿತು. ಇದರ ಬಗ್ಗೆಯೂ ಮಾತನಾಡಿದ ಸುದೀಪ್ ʻಕಾಂತಾರʼ ನಮ್ಮ ನಾಡಿನ ಕಥೆಯಾದರೂ ಬೇರೆ ಭಾಷೆಯ ಜನರಿಗೆ ಹೊಸತು, ಸಾಮಾನ್ಯ ಕಥೆಗಳನ್ನು ನೋಡಿರುವ ಸಿನಿ ರಸಿಕರಿಗೆ ಆ ಚಿತ್ರ ಹೊಸ ಅನುಭವವನ್ನು ನೀಡಿತು, ಅದು ಬೇರೆ ರಾಜ್ಯದ ಸಿನಿ ರಸಿಕರಿಗೆ ಹೊಸತು, ಹಾಗಾಗಿ ಗೆಲುವು ಕಂಡಿತು, ಪ್ಯಾನ್ ಇಂಡಿಯಾ ಚಿತ್ರಗಳು ಗೆಲ್ಲುವುದೇ ಈ ರೀತಿ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕ್ರಿಕೆಟಿಗ ಶಿಖರ್ ಧವನ್ ಭೇಟಿಯಾದ ಕಿಚ್ಚ ಸುದೀಪ್

    ಕ್ರಿಕೆಟಿಗ ಶಿಖರ್ ಧವನ್ ಭೇಟಿಯಾದ ಕಿಚ್ಚ ಸುದೀಪ್

    ಸ್ಯಾಂಡಲ್‌ವುಡ್‌ನ (Sandalwood) ಸೂಪರ್ ಸ್ಟಾರ್ ಕಿಚ್ಚ ಸುದೀಪ್ (Kiccha Sudeep), ಕ್ರಿಕೆಟಿಗ ಶಿಖರ್ ಧವನ್ (Shikhar Dhawan) ಅವರನ್ನು ಭೇಟಿ ಮಾಡಿದ್ದಾರೆ. ಭೇಟಿಯಾದ ಕ್ಷಣಗಳ ಫೋಟೋ ಹಂಚಿಕೊಂಡು, ಶಿಖರ್‌ಗೆ ನಟ ಶುಭಹಾರೈಸಿದ್ದಾರೆ.

    ಅಭಿನಯ ಚಕ್ರವರ್ತಿ ಸುದೀಪ್ ಇತ್ತೀಚಿಗೆ ಕರ್ನಾಟಕ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (Kcc) ವಿಚಾರವಾಗಿ ಸುದ್ದಿಯಲ್ಲಿದ್ದರು. ಈ ಬೆನ್ನಲ್ಲೇ ಕ್ರಿಕೆಟಿಗ ಶಿಖರ್ ಧವನ್ ಅವರನ್ನ ಸುದೀಪ್ ಭೇಟಿ ಮಾಡಿದ್ದಾರೆ. ಇದನ್ನೂ ಓದಿ: `ಆರ್‌ಆರ್‌ಆರ್’ ಸಕ್ಸಸ್ ನಂತರ ಮುಂದಿನ ಚಿತ್ರದ ಬಗ್ಗೆ ಜ್ಯೂ.ಎನ್‌ಟಿಆರ್ ಪ್ರತಿಕ್ರಿಯೆ

     

    View this post on Instagram

     

    A post shared by KicchaSudeepa (@kichchasudeepa)

    ಎಡಗೈ ಬ್ಯಾಟ್ಸ್‌ಮೆನ್ ಶಿಖರ್ ಜೊತೆಗಿನ ಫೋಟೋ ಹಂಚಿಕೊಂಡು ಎಂತಹ ಅದ್ಭುತ ಮತ್ತು ಪರಿಪೂರ್ಣ ರಾತ್ರಿ. ಮುಂಬರುವ ಐಪಿಎಲ್‌ಗೆ ನನ್ನ ಸಹೋದರನಿಗೆ ಶುಭಾಶಯಗಳು ಎಂದು ಕಿಚ್ಚ ಸುದೀಪ್ (Kiccha Sudeep) ವಿಶ್ ಮಾಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಇನ್ನೂ 2023ರ IPLಗಾಗಿ ಆಡಲು ಶಿಖರ್ ಧವನ್ ಸಿದ್ಧತೆಯಲ್ಲಿದ್ದಾರೆ. IPL ನಲ್ಲಿ ಅಬ್ಬರಿಸಲು ಶಿಖರ್ ರೆಡಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಂಗ್ರೆಸ್‍ಗೆ ಬನ್ನಿ ಅಂತ ಕರೆದಿಲ್ಲ- ಸುದೀಪ್ ಭೇಟಿಗೆ ಡಿಕೆಶಿ ಸ್ಪಷ್ಟನೆ

    ಕಾಂಗ್ರೆಸ್‍ಗೆ ಬನ್ನಿ ಅಂತ ಕರೆದಿಲ್ಲ- ಸುದೀಪ್ ಭೇಟಿಗೆ ಡಿಕೆಶಿ ಸ್ಪಷ್ಟನೆ

    ಕೋಲಾರ: ನಾವು ಯಾವುದೇ ರಾಜಕೀಯ ವಿಚಾರವನ್ನು ಚರ್ಚೆ ಮಾಡಿಲ್ಲ. ಕಾಂಗ್ರೆಸ್‍ಗೆ ಬನ್ನಿ ಅಂತ ಕರೆದಿಲ್ಲ. ಚಿತ್ರರಂಗದ ಸಮಸ್ಯೆ ಕುರಿತು ಪ್ರಣಾಳಿಕೆ ಮಾಡಲು ಚರ್ಚೆ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಸ್ಪಷ್ಟನೆ ಕೊಟ್ಟಿದ್ದಾರೆ.

    ಮುಳಬಾಗಿಲು ತಾಲೂಕಿನಲ್ಲಿ ಕಪ್ಪಲಮಡಗೂ ಗ್ರಾಮದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ (Ambareesh), ಪುನೀತ್ ಹಾಗೂ ವಿಷ್ಣುವರ್ಧನ್ ರೀತಿ ಸುದೀಪ್ (Kichcha Sudeep) ಉತ್ತಮ ನಾಯಕ ನಟ. ಕಾಂಗ್ರೆಸ್ (Congress) ಪರ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ. ನಾನು ರಾಜಕೀಯ ಆಹ್ವಾನ ನೀಡಿಲ್ಲ, ಅನೇಕ ವಿಚಾರವಾಗಿ ಸಲಹೆ ಪಡೆಯಲು ಭೇಟಿ ಮಾಡಿದ್ದೇನೆ ಎಂದರು.

    ಕೊರೊನಾ (Corona Virus) ವೇಳೆಯಲ್ಲಿ ಚಿತ್ರರಂಗದ ಸಹಾಯಕ್ಕೆ ಸರ್ಕಾರ ಬಂದಿಲ್ಲ. ಮೊದಲಿನಿಂದಲೂ ಅವರು ನಮ್ಮ ಖಾಸಗಿ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ, ಒಳ್ಳೆಯ ಸ್ನೇಹಿತ ಎಂದು ಹೇಳಿದರು. ಇದನ್ನೂ ಓದಿ: ಸುದೀಪ್ ಕಾಂಗ್ರೆಸ್ ಸೇರಿದರೆ ಸ್ವಾಗತ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

    ಪರಮೇಶ್ವರ್ ಪ್ರಣಾಳಿಕೆ ಸಮಿತಿಗೆ ರಾಜೀನಾಮೆ ನೀಡಿಲ್ಲ. ಬೆಂಗಳೂರು ಟ್ರಾಫಿಕ್ ಹಾಗೂ ಕುಡಿಯುವ ನೀರಿನ ವಿಚಾರವಾಗಿ ಸುರ್ಜೆವಾಲ ಜೊತೆ ಚರ್ಚೆ ಮಾಡಿದ್ದೇವೆ. ಅವರು ರಾಜೀನಾಮೆ ಏಕೆ ಕೊಡ್ತಾರೆ, ಅದರ ಅವಶ್ಯಕತೆ ಇಲ್ಲ. ಪರಮೇಶ್ವರ್ ಅಂತ ಶಿಸ್ತಿನ ಸಿಪಾಯಿ ಈ ರಾಜ್ಯದಲ್ಲಿ ಯಾರೂ ಇಲ್ಲ. ಕೆ.ಎಚ್.ಮುನಿಯಪ್ಪಗೆ ಯಾವುದು ಅಸಮಾಧಾನ ಇಲ್ಲ, ಒಗ್ಗಟಾಗಿದ್ದೇವೆ ಎಂದು ತಿಳಿಸಿದರು.

    ಸಿದ್ದರಾಮಯ್ಯ (Siddaramaiah) ನನ್ನ ವಿರುದ್ಧ ಯಾವುದೇ ಪತ್ರ ಬರೆದಿಲ್ಲ. ಬಿಜೆಪಿ ಕುಚೇಷ್ಟೆ ಮಾಡಿಕೊಂಡು ಬೋಗಸ್ ಮಾಡ್ತಿದ್ದಾರೆ. ದಿನಕ್ಕೆ ಒಂದು ವೀಡಿಯೋ ಹಾಕೋದು, ಪತ್ರ ಹಾಕೋದು ಮಾಡಿ ಬಿಜೆಪಿ ಅವರು ಮಿಸ್ ಗೈಡ್ ಮಾಡುತ್ತಿದ್ದಾರೆ. ಅದು ಸಿದ್ದರಾಮಯ್ಯನವರ ಸಹಿ ಅಲ್ಲ, ಈ ಬಗ್ಗೆ ಸಿದ್ದರಾಮಯ್ಯನವರೇ ದೂರು ದಾಖಲು ಮಾಡಿದ್ದಾರೆ ಎಂದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಾಡುಗಳು ರೊಮ್ಯಾಂಟಿಕ್ ಆಗಿಲ್ಲ ಅಂತ ಹೇಳೋಕೆ ನಾನು ಮೂರ್ಖಳಲ್ಲ : ರಶ್ಮಿಕಾ ಮಂದಣ್ಣ

    ಹಾಡುಗಳು ರೊಮ್ಯಾಂಟಿಕ್ ಆಗಿಲ್ಲ ಅಂತ ಹೇಳೋಕೆ ನಾನು ಮೂರ್ಖಳಲ್ಲ : ರಶ್ಮಿಕಾ ಮಂದಣ್ಣ

    ಸಿನಿಮಾಗಳಲ್ಲಿ ಬಾಲಿವುಡ್ ಹಾಡುಗಳಷ್ಟು ದಕ್ಷಿಣದ ಸಾಂಗ್ಸ್ ರೊಮ್ಯಾಂಟಿಕ್ ಆಗಿ ಇರುವುದಿಲ್ಲ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದ ಮಾತು ಭಾರೀ ಚರ್ಚೆಗೆ ಕಾರಣವಾಗಿತ್ತು. ದಕ್ಷಿಣದ ಸಿನಿಮಾಗಳಿಂದಲೇ ಬಾಲಿವುಡ್ ಗೆ ಪರಿಚಯವಾಗಿದ್ದ ರಶ್ಮಿಕಾ ಈ ರೀತಿ ಮಾತನಾಡಿದ್ದು, ಅವರ ಅಹಂಕಾರಕ್ಕೆ ಹಿಡಿದ ಕನ್ನಡಿ ಎಂದೇ ಹಲವರು ಪ್ರತಿಕ್ರಿಯಿಸಿದ್ದರು. ಸಾಕಷ್ಟು ಟ್ರೋಲ್ ಪೇಜ್ ಗಳು ಇದರ ಬಗ್ಗೆ ಬೆಳಕುವ ಚೆಲ್ಲುವ ಪ್ರಯತ್ನ ಮಾಡಿದ್ದವು. ಇದೀಗ ಆ ಮಾತಿಗೆ ಸ್ವತಃ ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ.

    ಮಾಧ್ಯಮವೊಂದರ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ರಶ್ಮಿಕಾ, ‘ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಅಥವಾ ನಾನು ಮಾತನಾಡುವುದನ್ನು ಕಲಿಯಬೇಕಿದೆ. ನಾನು ಏನೇ ಮಾತನಾಡಿದರೂ ಅದು ವಿವಾದವಾಗಿಯೇ ಬದಲಾಗುತ್ತದೆ. ರೊಮ್ಯಾಂಟಿಕ್ ಹಾಡುಗಳ ಕುರಿತಾಗಿ ನಾನು ಆ ರೀತಿಯಲ್ಲಿ ಮಾತನಾಡಿರಲಿಲ್ಲ. ದಕ್ಷಿಣದ ಹಾಡುಗಳು ರೊಮ್ಯಾಂಟಿಕ್ ಆಗಿಲ್ಲ ಅಂತ ಹೇಳುವುದಕ್ಕೆ ನಾನು ಮೂರ್ಖಳಲ್ಲ’ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ತೆರಿಗೆ ಇಲಾಖೆ ವಿರುದ್ದ ಹೈಕೋರ್ಟ್ ಮೆಟ್ಟಿಲು ಏರಿದ ನಟಿ ಅನುಷ್ಕಾ ಶರ್ಮಾ

    ರಶ್ಮಿಕಾ ಆಡುತ್ತಿರುವ ಮಾತುಗಳೇ ಅವರಿಗೆ ಮುಳುವಾಗುತ್ತಿವೆ ಎನ್ನುವ ಅರಿವು ಈಗ ಬಂದಂತಿವೆ. ಹಾಗಾಗಿ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡುವೆ ಎಂದೂ ಅವರು ಹೇಳಿಕೊಂಡಿದ್ದಾರೆ. ಇಂಥದ್ದೇ ವಿಚಾರಕ್ಕಾಗಿ ಈ ಹಿಂದೆ ಇವರು, ಕಿಚ್ಚ ಸುದೀಪ್ ಅವರಿಂದ ಪಾಠ ಮಾಡಿಸಿಕೊಂಡಿದ್ದರು. ಸೆಲೆಬ್ರಿಟಿಗಳು ಆಗಿದ್ದವರು, ಹೇಗೆ ವರ್ತಿಸಬೇಕು ಎನ್ನುವ ಕುರಿತು ಕಿಚ್ಚ ಮೊನ್ನೆಯಷ್ಟೇ ಮಾತನಾಡಿದ್ದರು. ಈ ವಿಷಯ ಕೂಡ ರಶ್ಮಿಕಾ ಅವರಿಗೆ ತಲುಪಿದೆ. ಹಾಗಾಗಿಯೇ ಮಾತಿನ ಕುರಿತಾಗಿ ಅವರು ಪ್ರತಿಕ್ರಿಯಿಸಿದ್ದಾರೆ.

    ಸದ್ಯ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಅವರ ಹಿಂದಿ ಸಿನಿಮಾವೊಂದು ಬಿಡುಗಡೆ ಸಿದ್ಧವಾಗಿದ್ದು, ಆ ಚಿತ್ರದ ಪ್ರಚಾರದಲ್ಲಿ ಅವರು ತೊಡಗಿದ್ದಾರೆ. ಕಳೆದ ಒಂದು ವಾರದಿಂದಲೂ ಅವರು ಮುಂಬೈನಲ್ಲೇ ಠಿಕಾಣಿ ಹೂಡಿದ್ದು, ಬಾಲಿವುಡ್ ನಲ್ಲಿ ಈ ಸಿನಿಮಾ ಅವರಿಗೊಂದು ನೆಲೆ ಕಲ್ಪಿಸಬಹುದು ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೂವಿನ ಹಾರ, ಮೊಟ್ಟೆ, ಕಲ್ಲು ಹಾಗೂ ರಶ್ಮಿಕಾ: ಕಿಚ್ಚನ ಸಖತ್ ಉತ್ತರ

    ಹೂವಿನ ಹಾರ, ಮೊಟ್ಟೆ, ಕಲ್ಲು ಹಾಗೂ ರಶ್ಮಿಕಾ: ಕಿಚ್ಚನ ಸಖತ್ ಉತ್ತರ

    ಸಂದರ್ಶನ ಯಾರೇ ಮಾಡುತ್ತಿರಲಿ ಕಿಚ್ಚ ಸುದೀಪ್ ಮಾತ್ರ ಅಚ್ಚುಕಟ್ಟಾಗಿ ಅದರಲ್ಲಿ ಭಾಗಿಯಾಗುತ್ತಾರೆ. ಪ್ರಶ್ನೆಗೆ ಹೊಸ ರೀತಿಯಲ್ಲೇ ಉತ್ತರ ನೀಡುತ್ತಾರೆ. ಅವರ ಮಾತಿನಲ್ಲೊಂದು ತೂಕ ಇರುತ್ತದೆ. ಪ್ರತಿಮೆ ಬಳಸಿಕೊಂಡೇ ಅವರು ಮಾತನಾಡುತ್ತಾರೆ. ರಶ್ಮಿಕಾ ಮಂದಣ್ಣ ಮೇಲೆ ಆಗುತ್ತಿರುವ ಟ್ರೋಲ್ ವಿಚಾರವಾಗಿಯೂ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ. ನಾವು ಏನು ಮಾತನಾಡುತ್ತಿದ್ದೇವೆ ಎನ್ನುವುದರ ಬಗ್ಗೆ ಅರಿವೂ ಇರಬೇಕು ಅಂದಿದ್ದಾರೆ.

    ನಾನಾ ಕಾರಣಗಳಿಂದಾಗಿ ರಶ್ಮಿಕಾ ಮಂದಣ್ಣ ಟ್ರೋಲ್ ಆಗುತ್ತಲೇ ಇರುತ್ತಾರೆ. ಬಹುಶಃ ಈ ವರ್ಷದಲ್ಲಿ ಅತೀ ಹೆಚ್ಚು ಟ್ರೋಲ್ ಆದ ನಟಿ ಎಂಬ ಹೆಗ್ಗಳಿಕೆಯೂ ಅವರದ್ದು. ಅದರಲ್ಲೂ ಕನ್ನಡ ಸಿನಿಮಾರಂಗ ಮತ್ತು ಕನ್ನಡದ ವಿಚಾರವಾಗಿ ಅವರು ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಕಾಂತಾರ ಸಿನಿಮಾವನ್ನೂ ಇನ್ನೂ ನೋಡಿಲ್ಲ ಎನ್ನುವ ಕಾರಣಕ್ಕಾಗಿ ಟ್ರೋಲಿಗರಿಗೆ ಆಹಾರವಾಗಿದ್ದರು. ಇದೇ ವಿಚಾರವಾಗಿಯೇ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನೂ ಮಾರ್ಮಿಕವಾಗಿಯೇ ವಿವರಿಸಿದ್ದಾರೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ಟ್ರೋಲ್ ವಿಚಾರದಲ್ಲಿ ಮುಂದುವರೆದು ಮಾತನಾಡಿರುವ ಸುದೀಪ್, ‘ಪಬ್ಲಿಕ್ ಫಿಗರ್ ಎಂಬ ಹಣೆಪಟ್ಟಿ ಬಂದಾಕ್ಷಣ ಹೂವಿನ ಹಾರದ ಜೊತೆ, ಟೊಮ್ಯಾಟೊ, ಮೊಟ್ಟೆ, ಕಲ್ಲುಗಳು ಸಹ ಬರಬಹುದು’ ಎಂದು ಹೇಳಿದ್ದಾರೆ. ಈ ಮೂಲಕ ಸಿಲೆಬ್ರಿಟಿ ಆದವನು ಹೇಗೆ ಇರಬೇಕು, ಹೇಗೆ ಇದ್ದರೆ ತಮ್ಮತ್ತ ಏನು ತೂರಿ ಬರುತ್ತವೆ ಎನ್ನುವುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಅದರಲ್ಲೂ ಸಾರ್ವಜನಿಕ ಬದುಕಿನಲ್ಲಿ ಇರುವವರು ಹೇಗೆ ಇರಬೇಕು, ಯಾವ ರೀತಿಯಲ್ಲಿ ವರ್ತಿಸಬೇಕು ಎನ್ನುವುದನ್ನು ವಿವರಿಸಿದ್ದಾರೆ.

    ಬಿಗ್ ಬಾಸ್ ವೇದಿಕೆಯಲ್ಲೂ ಕಿಚ್ಚ ಇಂತಹ ಅನೇಕ ಸಂಗತಿಗಳನ್ನು ಹೇಳಿಕೊಂಡಿದ್ದಾರೆ. ಉದಾಹರಣೆ ಸಹಿತ ವಿವರಿಸಿದ್ದಾರೆ. ಯಾರೋ ಯಾರಿಗೋ ಅವಮಾನ ಮಾಡಿದಾಗ ನೇರವಾಗಿಯೇ ಅವರಿಗೆ ತಿವಿದಿದ್ದಾರೆ. ಸಲಹೆಗಳನ್ನು ನೀಡಿದ್ದಾರೆ. ಎಚ್ಚರಿಕೆಯ ಮಾತುಗಳನ್ನೂ ಆಡಿದ್ದಾರೆ. ಹಾಗಾಗಿ ಕಿಚ್ಚ ಸುದೀಪ್ ಅವರ ಮಾತುಗಳು ಯಾವತ್ತಿಗೂ ವಿಶೇಷವಾಗಿ ಇರುತ್ತವೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಿಂದ ರೂಪೇಶ್ ರಾಜಣ್ಣ ಔಟ್

    ಬಿಗ್ ಬಾಸ್ ಮನೆಯಿಂದ ರೂಪೇಶ್ ರಾಜಣ್ಣ ಔಟ್

    ಬಿಗ್ ಬಾಸ್ (Bigg Boss) ಆಟ ಈಗ ಅಂತಿಮ ಹಂತದಲ್ಲಿದೆ. ದಿವ್ಯಾ ಉರುಡುಗ ಎಲಿಮಿನೇಷನ್ (Elimination) ನಂತರ ಇದೀಗ ರೂಪೇಶ್ ರಾಜಣ್ಣ ಆಟಕ್ಕೆ ಬ್ರೇಕ್ ಬಿದ್ದಿದೆ. ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ರಾಜಣ್ಣ ಅವರ ಆಟ ಅಂತ್ಯವಾಗಿದೆ.

    ಕನ್ನಡ ಪರ ಹೋರಾಟಗಾರ ಗಮನ ಸೆಳೆದಿದ್ದ ರೂಪೇಶ್ ರಾಜಣ್ಣ (Roopesh Rajanna) ನವೀನರ ಪೈಕಿ ಒಬ್ಬರಾಗಿ ಮನೆಗೆ ಕಾಲಿಟ್ಟಿದ್ದರು. ಇತರೆ ಸ್ಪರ್ಧಿಗಳಿಗೂ ಪೈಪೋಟಿ ಕೊಟ್ಟು ಟಾಪ್ 5 ಫೈನಲಿಸ್ಟ್‌ಗಳ ಪೈಕಿ ಇವರು ಒಬ್ಬರಾಗಿದ್ದರು. ಈಗ ರೂಪೇಶ್ ರಾಜಣ್ಣ ನಾಲ್ಕನೇ ರನ್ನರ್ ಅಪ್ ಆಗಿ ಬಿಗ್‌ ಬಾಸ್‌ನಿಂದ ಹೊರಬಂದಿದ್ದಾರೆ. ಇದನ್ನೂ ಓದಿ:ವಿನ್ನರ್‌ ಘೋಷಣೆಗೆ ಕೌಂಟ್‌ಡೌನ್‌, ಯಾರ ಕೈ ಸೇರಲಿದೆ ಬಿಗ್ ಬಾಸ್ ಟ್ರೋಫಿ?

    ರೂಪೇಶ್ ಶೆಟ್ಟಿ, ರಾಕೇಶ್, ದೀಪಿಕಾ ದಾಸ್‌ಗೆ ಪೈಪೋಟಿ ಕೊಟ್ಟಿದ್ದರು. ಇದೀಗ ರಾಜಣ್ಣ ಅದೃಷ್ಟ ಕೈಕೊಟ್ಟಿದೆ. ದಿವ್ಯಾ ಉರುಡುಗ ನಂತರ ಮನೆಯಿಂದ ರಾಜಣ್ಣ ಹೊರಬಂದಿದ್ದಾರೆ.

    ಸಿನಿಮಾ ರಂಗದ ಯಾವುದೇ ಹಿನ್ನೆಲೆ ಇಲ್ಲದೇ, ರಿಯಾಲಿಟಿ ಶೋ ಬಗ್ಗೆ ಅರಿವಿಲ್ಲದೇ ನವೀನರ ಪೈಕಿ ಗಟ್ಟಿ ಸ್ಪರ್ಧಿಯಾಗಿ ರೂಪೇಶ್ ರಾಜಣ್ಣ ಫೈಟ್ ಕೊಟ್ಟರು. ಟಾಸ್ಕ್, ಮನರಂಜನೆಯ ಮೂಲಕ ಕನ್ನಡಿಗರ ಮನೆಗೆದ್ದಿದ್ದರು.

    Live Tv
    [brid partner=56869869 player=32851 video=960834 autoplay=true]

  • ವಿನ್ನರ್‌ ಘೋಷಣೆಗೆ ಕೌಂಟ್‌ಡೌನ್‌, ಯಾರ ಕೈ ಸೇರಲಿದೆ ಬಿಗ್ ಬಾಸ್ ಟ್ರೋಫಿ?

    ವಿನ್ನರ್‌ ಘೋಷಣೆಗೆ ಕೌಂಟ್‌ಡೌನ್‌, ಯಾರ ಕೈ ಸೇರಲಿದೆ ಬಿಗ್ ಬಾಸ್ ಟ್ರೋಫಿ?

    ಬಿಗ್ ಬಾಸ್ ಸೀಸನ್ 9 (Bigg Boss Kannada 9) ಮುಗಿಯಲು ಕ್ಷಣಗಣನೆ ಶುರುವಾಗಿದೆ. ಬಿಗ್ ಬಾಸ್ ವಿನ್ನರ್ ಕಿರೀಟ ಯಾರ ಕೈ ಸೇರಲಿದೆ ಎಂಬುದನ್ನ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

    ದೊಡ್ಮನೆಯ ಆಟಕ್ಕೆ ಬ್ರೇಕ್ ಬೀಳಲು ಕೆಲವೇ ಗಂಟೆಗಳು ಬಾಕಿಯಿದೆ. ಸದ್ಯ ಬಿಗ್ ಬಾಸ್ ಮನೆಯಿಂದ ದಿವ್ಯಾ ಉರುಡುಗ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಈ ಬಾರಿಯೂ ಕೂಡ ದಿವ್ಯಾ ಉರುಡುಗಗೆ (Divya Uruduga) ಅದೃಷ್ಟ ಕೈಕೊಟ್ಟಿದೆ. ಇದನ್ನೂ ಓದಿ:BREAKING: ಕೊನೆಗೂ ಗುಡ್ ನ್ಯೂಸ್ ಕೊಟ್ರು ನರೇಶ್, ಪವಿತ್ರಾ: ಮದುವೆ ಡೇಟ್ ಫಿಕ್ಸ್

    ಸದ್ಯ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರಾಜಣ್ಣ, ದೀಪಿಕಾ ದಾಸ್ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದೆ. ಅದರಲ್ಲೂ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ನಡುವೆ ಸಖತ್ ಫೈಟ್ ಇದೆ.

    ಬಿಗ್ ಬಾಸ್ ಸೀಸನ್ ೯ರ ವಿನ್ನರ್ ಯಾರು ಎಂದು ಡಿ.31ರಂದು ಅನೌನ್ಸ್ ಆಗಲಿದೆ. ಯಾರಿಗೆ ಒಲಿಯಲಿದೆ ವಿಜಯಲಕ್ಷಿö್ಮ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]