Tag: ಕಿಚ್ಚ ಸುದೀಪ್

  • ಸುದೀಪ್ ಬಿಜೆಪಿಗೆ ಬೆಂಬಲ – ಕಾಂಗ್ರೆಸ್‌ನವರಿಗೆ ಸಹಿಸೋಕಾಗ್ತಿಲ್ಲ: ಬಿಎಸ್‌ವೈ

    ಸುದೀಪ್ ಬಿಜೆಪಿಗೆ ಬೆಂಬಲ – ಕಾಂಗ್ರೆಸ್‌ನವರಿಗೆ ಸಹಿಸೋಕಾಗ್ತಿಲ್ಲ: ಬಿಎಸ್‌ವೈ

    ಬೆಂಗಳೂರು: ನಟ ಕಿಚ್ಚ ಸುದೀಪ್ (Sudeep) ಬಿಜೆಪಿಗೆ (BJP) ಬೆಂಬಲ ನೀಡುತ್ತಿರುವ ವಿಚಾರವನ್ನು ಸ್ವಾಗತಿಸುತ್ತೇನೆ. ಆದರೆ ಬಿಜೆಪಿಗೆ ಸುದೀಪ್ ಸಪೋರ್ಟ್ ಸಿಗುತ್ತಿರುವುದು ಕಾಂಗ್ರೆಸ್‌ನವರಿಂದ (Congress) ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಟಾಂಗ್ ನೀಡಿದ್ದಾರೆ.

    ಬಿಜೆಪಿ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ಬಿಜೆಪಿ ಕಚೇರಿಯಲ್ಲಿ ಪಕ್ಷದ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಯಡಿಯೂರಪ್ಪ, ಚಲನಚಿತ್ರದಲ್ಲಿ ಫೇಮಸ್ ಆಗಿರುವಂತಹ ವ್ಯಕ್ತಿ ಬಿಜೆಪಿಗೆ ಸಪೋರ್ಟ್ ಮಾಡುತ್ತೇನೆ ಎಂದು ಹೇಳಿರುವ ವಿಚಾರವನ್ನು ನಾನು ಸ್ವಾಗತ ಮಾಡುತ್ತೇನೆ. ಆದರೆ ಈ ವಿಚಾರವನ್ನು ಸಹಿಸೋಕಾಗದೇ ಕಾಂಗ್ರೆಸ್‌ನವರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಅವರಿಗೆ ತಲೆ ಕೆಟ್ಟಿದೆ. ಇದಕ್ಕಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಭವಾನಿಗೆ ಟಿಕೆಟ್ ಮಿಸ್ ಆದ್ರೆ ಕೆಆರ್ ಪೇಟೆ ಮೇಲೂ ಪ್ರಭಾವ?

    ವಿ ಸೋಮಣ್ಣ ವರುಣಾದಲ್ಲಿ ಸ್ಪರ್ಧೆ ಬಗ್ಗೆ ಚರ್ಚೆ ನಡೆಯುತ್ತಿರುವ ವಿಚಾರವಾಗಿ ಮಾತನಾಡಿದ ಬಿಎಸ್‌ವೈ, ಹೈಕಮಾಂಡ್ ಏನು ಹೇಳುತ್ತೋ ಅದರಂತೆಯೇ ನಡೆಯುತ್ತೆ. ಶುಕ್ರವಾರ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.

    ಬುಧವಾರ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ಸುದೀಪ್, ಬಸವರಾಜ ಬೊಮ್ಮಾಯಿ ಪರ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಏ. 9ಕ್ಕೆ ಮೋದಿ ಬಂಡೀಪುರ ಭೇಟಿ – ಪ್ರವಾಸಿಗರಿಗೆ ಇಂದಿನಿಂದ 4 ದಿನ ಸಫಾರಿ, ರೆಸಾರ್ಟ್ ವಾಸ್ತವ್ಯ ಬಂದ್

  • ನಟ ಸುದೀಪ್ ಪ್ರಚಾರಕ್ಕೆ ಮಹತ್ವ ಕೊಡಬೇಕಿಲ್ಲ, ನಟರನ್ನ ನಾನು ದುರುಪಯೋಗಪಡಿಸಿಕೊಳ್ಳಲ್ಲ: ಹೆಚ್‌ಡಿಕೆ

    ನಟ ಸುದೀಪ್ ಪ್ರಚಾರಕ್ಕೆ ಮಹತ್ವ ಕೊಡಬೇಕಿಲ್ಲ, ನಟರನ್ನ ನಾನು ದುರುಪಯೋಗಪಡಿಸಿಕೊಳ್ಳಲ್ಲ: ಹೆಚ್‌ಡಿಕೆ

    ಬೆಂಗಳೂರು: ನಟ ಸುದೀಪ್ (Kichcha Sudeepa) ಅವರು ಸಿಎಂ ಬೊಮ್ಮಾಯಿ (BasavarajBommai) ಪರ ಪ್ರಚಾರ ಮಾಡೋದ್ರಿಂದ ನಮಗೇನು ತೊಂದರೆ ಇಲ್ಲ. ಸುದೀಪ್‌ ಪ್ರಚಾರಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ ಅಂತಾ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.

    ನಟ ಸುದೀಪ್ ಬೆಂಬಲದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದಿನಿಂದಲೂ ವಿಶ್ವಾಸದ ಮೇಲೆ ಹಲವು ನಟರು ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗ್ತಾರೆ, ಅದು ಮಾಮೂಲಿಯಾಗಿ ನಡೆಯುತ್ತಿದೆ. ಬೊಮ್ಮಾಯಿ ಮೇಲಿನ ವಿಶ್ವಾಸದಲ್ಲಿ ಸುದೀಪ್ ಪ್ರಚಾರ ಮಾಡ್ತೀನಿ ಅಂತಾ ಹೇಳಿದ್ದಾರೆ. ಇದು ಅವರ ನಡುವೆ ಇರುವ ವೈಯಕ್ತಿಕ ಸಂಬಂಧಗಳು. ಅದಕ್ಕೆ‌ ಹೆಚ್ಚು ಮಹತ್ವದ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಖಾಸಗಿ ವಿಡಿಯೋ ಲೀಕ್ ಬೆದರಿಕೆ ಪತ್ರ ಬರೆದದ್ದು ಚಿತ್ರರಂಗದವರೆ : ಸುದೀಪ್

    ಬಿಜೆಪಿ ಅವರು ಅಭಿವೃದ್ಧಿ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಈ ರೀತಿ ಮಾಡಿಯೇ ಚುನಾವಣೆಯಲ್ಲಿ ಮತ ಪಡೆಯೋಕೆ ಮುಂದಾಗಿದ್ದಾರೆ. ಇದ್ಯಾವುದೂ ವರ್ಕ್ ಆಗಲ್ಲ. ನಟರನ್ನ ನೋಡೋಕೆ ಜನ ಬರ್ತಾರೆ. ಅಭಿಮಾನಿಗಳು ಜೈಕಾರ ಹಾಕ್ತಾರೆ, ‌ಶಿಳ್ಳೆ ಹೊಡೆಯುತ್ತಾರೆ. ನಟರು ಅನೇಕರ ಪರ ಪ್ರಚಾರಕ್ಕೆ ಹೋಗ್ತಾರೆ. ಕಾಂಗ್ರೆಸ್ ಪರವೂ ಹೋಗ್ತಾರೆ, ಬಿಜೆಪಿಗೂ ಹೋಗ್ತಾರೆ. ಬೇರೆ ಬೇರೆ ಕಡೆ ಹೋಗ್ತಾರೆ. ನಟರಲ್ಲಿ ಸ್ಥಿರತೆ ಇಲ್ಲ. ವೈಯಕ್ತಿಕ ಬಾಂಧವ್ಯ, ಸ್ನೇಹದ ಮೇಲೆ ಹೋಗ್ತಾರೆ. ಆದ್ರೆ ಜನ ಅಂತಿಮವಾಗಿ ತೀರ್ಮಾನ ಮಾಡ್ತಾರೆ ಅಂತಾ ಹೇಳಿದ್ದಾರೆ.

    ಜೆಡಿಎಸ್‌ಗೆ ಸ್ಟಾರ್ ಕ್ಯಾಂಪೇನ್ ನನ್ನ ಕಾರ್ಯಕರ್ತರು. ಪಂಚರತ್ನ ಯೋಜನೆಯೇ ಪಕ್ಷದ ಪ್ರಮುಖ ಆಕರ್ಷಣೆ. ಅ ಕಾರ್ಯಕ್ರಮ ಇಟ್ಟುಕೊಂಡು ಜನತೆ ಮುಂದೆ ಹೋಗ್ತೀನಿ. ಅಲ್ಲದೇ ಮುಖ್ಯಮಂತ್ರಿಗಳಾದ ಕೆ.ಚಂದ್ರಶೇಖರ ರಾವ್‌ ಮತ್ತು ಮಮತಾ ಬ್ಯಾನರ್ಜಿ ಅವರು ಕೆಲವು ಕಡೆ ಅವಶ್ಯಕತೆ ಇದ್ದರೆ ಪ್ರಚಾರಕ್ಕೆ ಬರ್ತೀನಿ ಅಂತಾ ಹೇಳಿದ್ದಾರೆ. ಮುಂದೆ ಅದನ್ನ ತೀರ್ಮಾನ ಮಾಡ್ತೀನಿ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: Breaking- ಬಿಜೆಪಿ ಪರವಾಗಿ ಪ್ರಚಾರಕ್ಕೆ ಹೊರಟ ಸುದೀಪ್ : ‘ಮಾಮಾ’ಗಾಗಿ ಇದೆಲ್ಲ ಎಂದ ಕಿಚ್ಚ

    ನಾನು ಯಾವ ಚಿತ್ರ ನಟರನ್ನು ವಯಕ್ತಿಕವಾಗಿ ದುರುಪಯೋಗ ಪಡಿಸಿಕೊಳ್ಳಲ್ಲ. ಅವರು ಸಮಾಜದಲ್ಲಿ ಎಲ್ಲಾ ವರ್ಗಕ್ಕೆ ಸೇರಿದ ಚಿತ್ರನಟರು. ಅವರನ್ನ ಸ್ವಂತಕ್ಕೆ ದುರುಪಯೋಗ ಪಡಿಸಿಕೊಂಡು ಅವರ ಘನತೆ ಗೌರವವನ್ನ ಸ್ಥಿಮಿತ ಮಾಡೋಕೆ‌ ಇಷ್ಟಪಡಲ್ಲ. ನನ್ನ ಕಾರ್ಯಕರ್ತರೇ ಸ್ಟಾರ್ ಕ್ಯಾಂಪೇನ್ ಗಳು. ಅವರೇ ನಮ್ಮ ಪಕ್ಷದ ಪರ ಪ್ರಚಾರ ಮಾಡ್ತಿದ್ದಾರೆ. ಮುಂದೆಯೂ ಮಾಡ್ತಾರೆ ಎಂದಿದ್ದಾರೆ.

  • ಸುದೀಪ್ ಬಂದ್ರೆ ಪಕ್ಷಕ್ಕೆ ಲಾಭ ಆಗುತ್ತೆ: ಶ್ರೀರಾಮುಲು

    ಸುದೀಪ್ ಬಂದ್ರೆ ಪಕ್ಷಕ್ಕೆ ಲಾಭ ಆಗುತ್ತೆ: ಶ್ರೀರಾಮುಲು

    ಬೆಂಗಳೂರು: ನಟ ಕಿಚ್ಚ ಸುದೀಪ್ (Kichcha Sudeep) ಬಿಜೆಪಿ ಪಕ್ಷಕ್ಕೆ ಬಂದರೆ ಲಾಭ ಆಗುತ್ತೆ ಎಂದು ಸಚಿವ ಶ್ರೀರಾಮುಲು (B. Sriramulu) ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದೀಪ್ ಪಕ್ಷಕ್ಕೆ ಬರ್ತಾರೆ ಅನ್ನೋದು ಗೊತ್ತಿಲ್ಲ. ನಾನೂ ಮಾಧ್ಯಮಗಳಲ್ಲಿ ನೋಡಿದ್ದು, ಇದನ್ನು ತಿಳಿದುಕೊಂಡು ಮಾತಾಡ್ತೇನೆ. ಸುದೀಪ್ ಬಂದ್ರೆ ಪಕ್ಷಕ್ಕೆ ಲಾಭ ಆಗುತ್ತೆ. ಸುದೀಪ್ ಪಕ್ಷಕ್ಕೆ ಬಂದ್ರೆ ಸ್ವಾಗತಿಸುತ್ತೇನೆ ಎಂದರು. ಇದನ್ನೂ ಓದಿ: ಕಿಚ್ಚ ಸುದೀಪ್ ಗೆ ಖಾಸಗಿ ವಿಡಿಯೋ ಲೀಕ್ ಬೆದರಿಕೆ ಪತ್ರ : ದೂರು ದಾಖಲು

    ಕಿಚ್ಚ ಸುದೀಪ್ ಇಂದು ಬಿಜೆಪಿ (BJP) ಗೆ ಸೇರ್ಪಡೆ ಆಗಲಿದ್ದಾರೆ ಎನ್ನುವ ವಿಚಾರ ರಾಜಕೀಯದ ಪಡಸಾಲೆಯಲ್ಲಿ ಗಿರಕಿ ಹೊಡೆಯುತ್ತಿದೆ. ಇಂದು ಮಧ್ಯಾಹ್ನ 1.30ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸುದೀಪ್ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರನ್ನು ಬರಮಾಡಿಕೊಳ್ಳಲು ಸರ್ವ ರೀತಿಯಲ್ಲೂ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ.

    ಈ ಕುರಿತು ಸುದೀಪ್ ಯಾವುದೇ ಹೇಳಿಕೆಯನ್ನು ನೀಡದೇ ಇದ್ದರೂ, ಸುದೀಪ್ ಅವರ ಆಪ್ತರು ಹೇಳುವ ಪ್ರಕಾರ ಕಿಚ್ಚ ಬಿಜೆಪಿಗೆ ಬರುವುದು ಕನ್ಫರ್ಮ್. ಆದರೆ, ಸ್ಟಾರ್ ಪ್ರಚಾರಕರಾಗಿ ಬರಲಿದ್ದಾರಾ ಅಥವಾ ಅಧಿಕೃತವಾಗಿ ಪಕ್ಷವನ್ನು ಸೇರುತ್ತಿದ್ದಾರೆ ಎನ್ನುವ ಗೊಂದಲವಿದೆ. ಈ ಗೊಂದಲಕ್ಕೆ ಮಧ್ಯಾಹ್ನ ತೆರೆಬೀಳಲಿದೆ.

  • ಬರೋಬ್ಬರಿ 3 ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟ ಕಿಚ್ಚ ಸುದೀಪ್

    ಬರೋಬ್ಬರಿ 3 ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟ ಕಿಚ್ಚ ಸುದೀಪ್

    ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) , VikrantRona ಸಿನಿಮಾ ನಂತರ ಬ್ರೇಕ್ ತೆಗೆದುಕೊಂಡಿದ್ದರು. ಕಿಚ್ಚನ 46ನೇ ಸಿನಿಮಾ ಯಾವುದು? ಸಿನಿಮಾ ಬಗ್ಗೆ ಅಪ್‌ಡೇಟ್ ಬೇಕು ಎಂದು ಕಾದು ಕುಳಿತಿದ್ದ ಫ್ಯಾನ್ಸ್‌ಗೆ ಸುದೀಪ್ ಇದೀಗ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಒಟ್ಟೊಟ್ಟಿಗೆ 3 ಸಿನಿಮಾ ಒಪ್ಪಿಕೊಳ್ಳುವ ಮೂಲಕ ಸುದೀಪ್ ಸಿಹಿಸುದ್ದಿ ನೀಡಿದ್ದಾರೆ.

    ಕಳೆದ ವರ್ಷ ಜುಲೈನಲ್ಲಿ ತೆರೆ ಅಪ್ಪಳಿಸಿದ `ವಿಕ್ರಾಂತ್ ರೋಣ’ ಚಿತ್ರದಲ್ಲಿ ಸುದೀಪ್ ಅಬ್ಬರಿಸಿದ್ದರು. ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರದ ರಿಲೀಸ್ ನಂತರ ಬಿಗ್ ಬಾಸ್ ಶೋ, ಸ್ಪೋಟ್ಸ್ ಅಂತಾ ಕಿಚ್ಚ ಬ್ಯುಸಿಯಾಗಿದ್ದರು. ಕಿಚ್ಚನ ಮುಂದಿನ ಚಿತ್ರದ ಬಗ್ಗೆ ಅಪ್‌ಡೇಟ್ ಸಿಗದೇ ನಿರಾಸೆಯಲ್ಲಿದ್ದ ಅಭಿಮಾನಿಗಳಿಗೆ ಸುದೀಪ್ ಟ್ವೀಟ್ ಮಾಡುವ ಮೂಲಕ ಅಪ್‌ಡೇಟ್ ನೀಡಿದ್ದಾರೆ.

    ಎಲ್ಲರಿಗೂ ನಮಸ್ಕಾರಗಳು.. `ಕಿಚ್ಚ 46′ ಕುರಿತಾಗಿ ನಿಮ್ಮ ಟ್ವೀಟ್‌ಗಳು ಮತ್ತು ಮೀಮ್‌ಗಳು ನನಗೆ ಅರ್ಥವಾಗಿದೆ. ಧನ್ಯವಾದಗಳು. ಈಗ ಇದೇ ವಿಚಾರದ ಕುರಿತಾಗಿ ಈ ಸಣ್ಣ ಸ್ಪಷ್ಟೀಕರಣವನ್ನು ನೀಡಲು ನಿರ್ಧರಿಸಿದ್ದೇನೆ. ನಾನು ವಿರಾಮ ತೆಗೆದುಕೊಂಡಿದ್ದೆ. ಇದು ನನ್ನ ವೃತ್ತಿಜೀವನದ ಮೊಟ್ಟಮೊದಲ ವಿರಾಮ. ವಿಕ್ರಾಂತ್ ರೋಣ ಚಿತ್ರದ ನಂತರ ನನಗೆ ಬ್ರೇಕ್ ಬೇಕಾಗಿತ್ತು. ಸುದೀರ್ಘವಾದ ವೇಳಾಪಟ್ಟಿ ಹೊಂದಿದ್ದ ಬಿಗ್ ಬಾಸ್ (ಒಟಿಟಿ- ಟಿವಿ) `ವಿಕ್ರಾಂತ್ ರೋಣ’ ಚಿತ್ರದಲ್ಲಿ ಭಾಗಿಯಾಗುವುದು ಶ್ರಮದಾಯಕವಾಗಿತ್ತು. ಆದ್ದರಿಂದ ಈ ವಿರಾಮ ನನಗೆ ಅಗತ್ಯವಿತ್ತು. ನನ್ನ ವಿರಾಮವನ್ನು ಆನಂದಿಸಲು ಉತ್ತಮ ಮಾರ್ಗವೆಂದರೆ ನನಗೆ ಸಂತೋಷ ನೀಡುವ ಕೆಲಸವನ್ನು ಮಾಡುವುದು.

    ಕ್ರಿಕೆಟ್ ಖಂಡಿತವಾಗಿಯೂ ನನಗೆ ವಿಶ್ರಾಂತಿ ನೀಡುವ ಕ್ರೀಡೆ. ಆ ವಲಯದಲ್ಲಿ ನಾನು ಸಂತೋಷವಾಗಿರುತ್ತೇನೆ. ಕೆಸಿಸಿಯಲ್ಲಿ ಸಮಯ ಕಳೆದಿದ್ದು ನನಗೆ ಖುಷಿ ನೀಡಿದೆ. ಇದರಿಂದ ನನಗೆ ಖಂಡಿತವಾಗಿಯೂ ಉತ್ತಮ ವಿರಾಮ ಸಿಕ್ತು ಎಂದು ನಾನು ಹೇಳಬಲ್ಲೆ. ಆದರೂ, ನನ್ನ ಸ್ಕ್ರಿಪ್ಟ್ ಚರ್ಚೆಗಳು ನನ್ನ ದೈನಂದಿನ ಜೀವನದ ಒಂದು ಭಾಗವಾಗಿತ್ತು. ಮೂರು ಸ್ಕ್ರಿಪ್ಟ್‌ ಅಂತಿಮಗೊಳಿಸಿದ್ದೇನೆ. ಅಂದರೆ ಮೂರು ಚಿತ್ರಗಳನ್ನು ಅಂತಿಮಗೊಳಿಸಲಾಗಿದೆ. ಎಲ್ಲಾ ಮೂರು ಸ್ಕ್ರಿಪ್ಟ್‌ಗಳಿಗೆ ಭಾರೀ ಪ್ರಮಾಣದ ಹೋಮ್ ವರ್ಕ್ನ ಬೇಡಿಕೆಯಿರುವುದರಿಂದ ಸಿದ್ಧತೆಗಳು ನಡೆಯುತ್ತಿವೆ. ಆಯಾ ತಂಡಗಳು ಹಗಲಿರುಳು ಶ್ರಮಿಸುತ್ತಿವೆ ಮತ್ತು ಶೀಘ್ರದಲ್ಲೇ ಅಧಿಕೃತವಾಗಿ ಅನೌನ್ಸ್ ಮಾಡ್ತಾರೆ. ಪ್ರೀತಿ ಹಾಗು ಅಪ್ಪುಗೆಗಳೊಂದಿಗೆ ನಿಮ್ಮ ಕಿಚ್ಚ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

    ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಸುದೀಪ್ ಉತ್ತರಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ 3 ಚಿತ್ರಗಳನ್ನ ಒಪ್ಪಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸಮಾಚಾರವನ್ನೇ ಸುದೀಪ್ ಕೊಟ್ಟಿದ್ದಾರೆ. ಸದ್ಯದಲ್ಲೇ ತಮ್ಮ ಮುಂಬರುವ ಚಿತ್ರದ ಬಗ್ಗೆ ಅಧಿಕೃತ ಅಪ್‌ಡೇಟ್ ನೀಡಲಿದ್ದಾರೆ.

  • ಡಾಲಿ ಜೊತೆನೇ ಯಾಕೆ ಅಮೃತಾ ಸಿನಿಮಾ ಮಾಡ್ತಾರೆ? ಕಾಲೆಳೆದ ಕಿಚ್ಚ

    ಡಾಲಿ ಜೊತೆನೇ ಯಾಕೆ ಅಮೃತಾ ಸಿನಿಮಾ ಮಾಡ್ತಾರೆ? ಕಾಲೆಳೆದ ಕಿಚ್ಚ

    ಡಾಲಿ (Dali) ಮತ್ತು ಅಮೃತಾ ಅಯ್ಯಂಗಾರ್ `ಗುರುದೇವ ಹೊಯ್ಸಳ’ (Gurudeva Hoysala) ಸಿನಿಮಾದ ಮೂಲಕ ರಂಜಿಸಲು ಬರುತ್ತಿದ್ದಾರೆ. ಟ್ರೈಲರ್‌ ಲಾಂಚ್ ಕಾರ್ಯಕ್ರಮದಲ್ಲಿ ಡಾಲಿ ಮತ್ತು ಅಮೃತಾಗೆ ಕಿಚ್ಚ ಸುದೀಪ್ ಕಾಲೆಳೆದಿದ್ದಾರೆ. ಡಾಲಿ ಜೊತೆನೇ ನೀವ್ಯಾಕೆ ಸಿನಿಮಾ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡ ಕ್ರೇಜಿಸ್ಟಾರ್ ರವಿಚಂದ್ರನ್

    ತೆರೆಯ ಮೇಲೆ ಮೋಡಿ ಮಾಡಿರುವ ನಟರಾಕ್ಷಸ ಡಾಲಿ- ಅಮೃತಾ ಜೋಡಿ `ಪಾಪ್‌ಕಾರ್ನ್ ಮಂಕಿ ಟೈಗರ್’ ಮತ್ತು `ಬಡವ ರಾಸ್ಕಲ್’, `ಗುರುದೇವ ಹೊಯ್ಸಳ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇವರ ಮಧ್ಯೆ ಒಳ್ಳೆಯ ಆಪ್ತತೆ ಬೆಳೆದಿದೆ. ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಕೂಡಯಿದೆ. ಆದರೆ, ಇದನ್ನು ಇಬ್ಬರು ಒಪ್ಪಿಕೊಂಡಿಲ್ಲ. ಅವರ ಮಧ್ಯೆ ಪ್ರೀತಿ ಇದೆಯೋ ಇಲ್ಲವೋ ಒಳ್ಳೆಯ ಫ್ರೆಂಡ್‌ಶಿಪ್ ಅಂತೂ ಇದೆ. ಸುದೀಪ್ (Sudeep) ವೇದಿಕೆ ಏರಿದಾಗ ಇವರ ವಿಚಾರವನ್ನು ಇಟ್ಟುಕೊಂಡು ಎಲ್ಲರನ್ನೂ ನಕ್ಕು ನಗಿಸಿದ್ದಾರೆ.

    ಮೊದಲು ವೇದಿಕೆ ಏರಿದ ಅಮೃತಾ ಅವರು ಡಾಲಿಯನ್ನು ನಾಲ್ಕೈದು ಬಾರಿ ಹೊಗಳಿದರು. ಅವರು ಸುಂದರವಾಗಿ ಕಾಣ್ತಿದಾರೆ ಎಂದು ಮೆಚ್ಚುಗೆ ಸೂಚಿಸಿದರು. ನಂತರ ಸುದೀಪ್ ಜೊತೆ ವೇದಿಕೆ ಏರಿದ ಡಾಲಿ ಅವರು ಒಂದೇ ಬಾರಿ ಅಮೃತಾ ಹೆಸರನ್ನು ಹೇಳಿದರು. ಇದನ್ನು ಸುದೀಪ್ ನೆನಪಿಟ್ಟುಕೊಂಡಿದ್ದರು. ಧನಂಜಯ್ ಈ ರೀತಿ ಒಂದೇ ಮಾತಲ್ಲಿ ಅಮೃತಾ ಅವರ ಬಗ್ಗೆ ಹೇಳಿದ್ದು ನ್ಯಾಯ ಅಲ್ಲ ಎಂದರು ಕಿಚ್ಚ.

    ಆಗ ಡಾಲಿ ಅಮೃತಾ ಅವರನ್ನು ಹೊಗಳಲು ಮುಂದಾಗಿದ್ದಾರೆ. ನಟಿ ಬಗ್ಗೆ ಮಾತಾಡಿ ಎಂದು ಕಿಚ್ಚ ಕೂಡ ಕಾಲೆಳೆದಿದ್ದಾರೆ.  ಮೂರು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ವಿ. ಎಲ್ಲಾ ಸಿನಿಮಾಗಳಲ್ಲೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ ಎಂದು ಡಾಲಿ ಹೇಳುತ್ತಿದ್ದಂತೆ ಸುದೀಪ್ ಅವರು ಮತ್ತೆ ಕಾಲೆಳೆಯಲು ಮುಂದಾದರು. ಹೌದು ನೀವ್ಯಾಕೆ ಇವರೊಟ್ಟಿಗೆ ಕೆಲಸ ಮಾಡ್ತೀರಾ ಬೇರೆ ಕಲಾವಿದರಿಗೆ ಡೇಟ್ಸ್ ಕೊಡಿ. ಅವರ ಜೊತೆಯೂ ಕೆಲಸ ಮಾಡಿ. ಇವರೊಟ್ಟಿಗೆ ಸಿನಿಮಾ ಮಾಡ್ತಾ ಇದ್ರೆ ಬೇರೆ ಹೀರೋಗಳಿಗೆ ನೀವು ಹೇಗೆ ಸಿಗ್ತೀರಾ ಇಷ್ಟೆಲ್ಲ ಮಾಡಿದ್ರೂ ನಿಮ್ಮನ್ನು ಹೊಗಳುತ್ತಿಲ್ಲ ಎಂದು ಅಮೃತಾಗೆ ಸುದೀಪ್ ಹೇಳಿದರು. ಈ ಮಾತನ್ನು ಕೇಳಿ ಎಲ್ಲರೂ ನಕ್ಕರು. ಕೊನೆಯಲ್ಲಿ ಇವರ ಕೆಮಿಸ್ಟ್ರಿ ಬಗ್ಗೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಕಾರ್ತಿಕ್ ಮತ್ತು ಯೋಗಿ ಜಿ ನಿರ್ಮಾಣದ `ಗುರುದೇವ ಹೊಯ್ಸಳ’ ಸಿನಿಮಾ ಇದೇ ಮಾರ್ಚ್ 30ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಡಾಲಿ – ಅಮೃತಾ ಜೋಡಿ ಈ ಬಾರಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬುದನ್ನ ಕಾದುನೋಡನೋಡಬೇಕಿದೆ.