Tag: ಕಿಚ್ಚ ಸುದೀಪ್

  • ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ತಾರಾ ಮೆರುಗು

    ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ತಾರಾ ಮೆರುಗು

    ಗದಗ: ಬಿಜೆಪಿ (BJP) ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ಚುನಾವಣಾ (Election) ಪ್ರಚಾರಕ್ಕೆ ತಾರಾ ಮೆರುಗು ಸಿಕ್ಕಿದೆ.

    ಸ್ಯಾಂಡಲ್‍ವುಡ್‍ನ ಖ್ಯಾತ ನಟ ಭುವನ್ ಹಾಗೂ ಬಹುಭಾಷಾ ನಟಿ ಹರ್ಷಿಕಾ ಪೂಣಚ್ಚಾ (Harshika Poonacha) ಗದಗ (Gadag) ಹಾಗೂ ಬೆಟಗೇರಿ ಅವಳಿ ನಗರದ ಅನೇಕ ವಾರ್ಡ್‍ಗಳಲ್ಲಿ ಭಾನುವಾರ ಸಂಚರಿಸಿ ಅನಿಲ್ ಪರ ಪ್ರಚಾರ ಮಾಡಿದ್ದಾರೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ನಟ ನಟಿಯರಿಬ್ಬರೂ ಮತದಾರರ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲೇ ಕುಳಿತು ಪ್ರಚಾರದ ರೂಟ್ ಮ್ಯಾಪ್ ಸಿದ್ಧಪಡಿಸಿದ ಹೆಚ್‌ಡಿಕೆ

    ಈ ವೇಳೆ ಹರ್ಷಿಕಾ ಪೂಣಚ್ಚಾ ಮಾತನಾಡಿ, ನನಗೆ ಮತ್ತು ಅನಿಲ್ ಮೆಣಸಿನಕಾಯಿ ಅವರಿಗೆ ಬಹಳ ವರ್ಷಗಳಿಂದ ಪರಿಚಯವಿದೆ. ಅವರು ಉತ್ತಮ ಅಭ್ಯರ್ಥಿಯಾಗಿದ್ದು, ಸ್ವ-ಇಚ್ಛೆಯಿಂದ ಅವರ ಪರ ಪ್ರಚಾರಕ್ಕೆ ಬಂದಿದ್ದೇನೆ. ಅವರಿಗೆ ಗದಗದ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಇದೆ. ಆದರೆ ದುರದೃಷ್ಟವಶಾತ್ ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿದ್ದರು. ಈಗಿನ ಕಾಂಗ್ರೆಸ್ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ವಸತಿ ರಹಿತರಿಗೆ ಮನೆ ಹಂಚಿಕೆ ಮಾಡಿಲ್ಲ. ಸರಿಯಾಗಿ ಕುಡಿಯುವ ನೀರು ಸಿಗುತ್ತಿಲ್ಲ. ಚರಂಡಿ ವ್ಯವಸ್ಥೆ ಸರಿ ಇಲ್ಲ. ಅಲ್ಲದೆ ಗದಗ ಹಾಗೂ ಬೆಟಗೇರಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಇವು ದೂರವಾಗಬೇಕಾದರೆ ಈ ಬಾರಿ ಅನಿಲ್ ಅವರನ್ನು ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.

    ಯುವಕರಿಗೆ ಉದ್ಯೋಗ, ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಬೇಕು ಎಂಬ ಹಂಬಲವಿದ್ದರೆ ಈ ಬಾರಿ ಗದಗದಲ್ಲಿ ಅನಿಲ ಮೆಣಸಿನಕಾಯಿ ಅವರನ್ನು ಗೆಲ್ಲಿಸಲೇಬೇಕೆಂದು ಮನವಿ ಮಾಡಿಕೊಂಡರು. ಈ ವೇಳೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಹಾಜರಿದ್ದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ನಾಮಪತ್ರ ಸಲ್ಲಿಕೆ ದಿನ ನಟ ಕಿಚ್ಚ ಸುದೀಪ್ (Sudeep), ಸಿಎಂ ಜೊತೆ ರೋಡ್ ಶೋನಲ್ಲಿ ಭಾಗಿಯಾಗಿದ್ದರು. ಶಿಗ್ಗಾಂವಿ ಕ್ಷೇತ್ರದ ಜನರ ಸಹಕಾರದೊಂದಿಗೆ ಬೊಮ್ಮಾಯಿಯವರನ್ನು ಗೆಲ್ಲಿಸುತ್ತೇನೆ ಎಂದಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಮೇಲಿನ ಆರೋಪ ಇಡೀ ಕುರುಬ ಸಮಾಜಕ್ಕೆ ಮಾಡ್ತಿರೋ ಅವಮಾನವಲ್ಲವೇ – ಕಾಂಗ್ರೆಸ್‌ ಪ್ರಶ್ನೆ

  • ಕಿಚ್ಚ ಸುದೀಪ್ ಸಿನಿಮಾ ಮೂಲಕ ಕನ್ನಡಕ್ಕೆ ಬರಲಿದ್ದಾರಾ ನಿರ್ದೇಶಕ ಚರಣ್

    ಕಿಚ್ಚ ಸುದೀಪ್ ಸಿನಿಮಾ ಮೂಲಕ ಕನ್ನಡಕ್ಕೆ ಬರಲಿದ್ದಾರಾ ನಿರ್ದೇಶಕ ಚರಣ್

    ಮೂರು ಕಥೆಗಳನ್ನು ಒಪ್ಪಿಕೊಂಡಿರುವುದಾಗಿ ಮೊನ್ನೆಯಷ್ಟೇ ಕಿಚ್ಚ ಸುದೀಪ್ (Kichcha Sudeep) ಹೇಳಿದ್ದರು. ಈ ಮಾತಿನ ಬೆನ್ನಲ್ಲೇ ರಾಷ್ಟ್ರ ಪ್ರಶಸ್ತಿ ತಮಿಳು ನಿರ್ದೇಶಕ ಚರಣ್ (Charan)  ಕನ್ನಡಕ್ಕೆ ಬರುತ್ತಿರುವುದಾಗಿ ಸುದ್ದಿ ಆಗಿದೆ. ಕಿಚ್ಚನಿಗಾಗಿ ಸಿನಿಮಾ ಮಾಡಲು ಕನ್ನಡದ ಇಬ್ಬರು ನಿರ್ದೇಶಕರು ರೆಡಿಯಾಗಿದ್ದಾರೆ. ಅವರು ಹೆಸರು ಕೂಡ ಬಹಿರಂಗವಾಗಿದೆ ಮತ್ತು ಅವರು ಸಿನಿಮಾ ಮಾಡುವ ಕುರಿತು ಹೇಳಿಕೊಂಡಿದ್ದಾರೆ. ಇದೀಗ ಮತ್ತೊಂದು ಅಚ್ಚರಿಯ ಹೆಸರು ಕೇಳಿ ಬಂದಿದೆ.

    ವಿಕ್ರಾಂತ್ ರೋಣ ಚಿತ್ರದ ನಂತರ ಕಿಚ್ಚನಿಗಾಗಿ ಸಿನಿಮಾ ಮಾಡುತ್ತಿರುವುದಾಗಿ ಅನೂಪ್ ಭಂಡಾರಿ (Anoop Bhandari) ಈ ಹಿಂದೆಯೇ ಹೇಳಿಕೊಂಡಿದ್ದಾರೆ. ಅವರಿಗಾಗಿಯೇ ಕಥೆ ಬರೆಯುತ್ತಿರುವುದಾಗಿಯೂ ತಿಳಿಸಿದ್ದರು. ಅಲ್ಲದೇ, ನಂದಕಿಶೋರ್ (Nandakishore) ಕೂಡ ಕಿಚ್ಚನಿಗಾಗಿ ಸಿನಿಮಾವೊಂದನ್ನು ಮಾಡಲಿದ್ದಾರೆ. ಆ ಕಥೆಯೂ ಲಾಕ್ ಆಗಿದೆ. ಇದೀಗ ಚರಣ್ ಹೆಸರು ಕೇಳಿ ಬಂದಿದೆ.  ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ

    ಚರಣ್ ತಮಿಳಿನಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟವರು. ತಮ್ಮ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಅವರು ಪಡೆದಿದ್ದಾರೆ. ಸುದೀಪ್ ಗಾಗಿ ಪ್ಯಾನ್ ಇಂಡಿಯಾ ಸಿನಿಮಾವನ್ನು ಅವರು ಮಾಡಲಿದ್ದಾರಂತೆ. ಅಧಿಕೃತವಾಗಿ ಈ ವಿಷಯವನ್ನು ಚರಣ್ ಆಗಲಿ ಅಥವಾ ಸುದೀಪ್ ಆಗಲಿ ಹೇಳದೇ ಇದ್ದರೂ ಗಾಂಧಿನಗರದಲ್ಲಂತೂ ಈ ಸುದ್ದಿ ಭರ್ಜರಿಯಾಗಿ ಸೇಲ್ ಆಗುತ್ತಿದೆ.

    ಸದ್ಯ ಸುದೀಪ್ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರು ಹೇಳಿದ ಅಭ್ಯರ್ಥಿಗಳ ಪರ ಅವರು ಪ್ರಚಾರ ಮಾಡಲಿದ್ದಾರೆ. ಶಿಗ್ಗಾಂವಿಯಿಂದ ಶುರುವಾದ ಪ್ರಚಾರ ರಾಜ್ಯಾದ್ಯಂತ ಮುಂದುವರೆಯಲಿದೆ. ಚುನಾವಣೆ ನಂತರವೇ ಅವರು ತಮ್ಮ ಸಿನಿಮಾಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  • ಬೊಮ್ಮಾಯಿ ಪರ ಕಿಚ್ಚ ಸುದೀಪ್ ಕ್ಯಾಂಪೇನ್ – ಶಿಗ್ಗಾಂವಿ ಕ್ಷೇತ್ರದಲ್ಲಿ ಇಂದು ಮಿಂಚಿನ ಸಂಚಾರ

    ಬೊಮ್ಮಾಯಿ ಪರ ಕಿಚ್ಚ ಸುದೀಪ್ ಕ್ಯಾಂಪೇನ್ – ಶಿಗ್ಗಾಂವಿ ಕ್ಷೇತ್ರದಲ್ಲಿ ಇಂದು ಮಿಂಚಿನ ಸಂಚಾರ

    ಹಾವೇರಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ರಾಜ್ಯದಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಹೀಗಾಗಿ ಹೈವೋಲ್ಟೇಜ್ ಕ್ಷೇತ್ರವಾದ ಸಿಎಂ ಬಸವರಾಜ ಬೊಮ್ಮಾಯಿಯ (Basavaraj Bommai) ಶಿಗ್ಗಾಂವಿ (Shiggaavi) ಕ್ಷೇತ್ರಕ್ಕೆ ನಟ ಕಿಚ್ಚ ಸುದೀಪ್ (Sudeep) ಆಗಮಿಸಲಿದ್ದಾರೆ. ಸುದೀಪ್ ಆಗಮನ ಬೊಮ್ಮಾಯಿಗೆ ಬಲವನ್ನು ತಂದುಕೊಡಲಿದೆ.

    ಶಿಗ್ಗಾಂವಿ ಪಟ್ಟಣದ ನಗರದ ಪ್ರಮುಖ ಬೀದಿಗಳಲ್ಲಿ ಕಿಚ್ಚ ಸುದೀಪ್ 1 ಗಂಟೆ 15 ನಿಮಿಷಗಳ ಕಾಲ ರೋಡ್ ಶೋ (Road Show) ನಡೆಸಲಿದ್ದಾರೆ. ಬೆಳಗ್ಗೆ 10:45ಕ್ಕೆ ಹುಬ್ಬಳ್ಳಿಯಿಂದ ಶಿಗ್ಗಾಂವಿ ಹೆಲಿಪ್ಯಾಡ್‌ಗೆ ಆಗಮಿಸಿ, 11 ಗಂಟೆಗೆ ಬೊಮ್ಮಾಯಿ ಪರ ಬೃಹತ್ ರೋಡ್ ಶೋದಲ್ಲಿ ಕಿಚ್ಚ ಸುದೀಪ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗವಹಿಸಲಿದ್ದಾರೆ.

    ಶಿಗ್ಗಾಂವಿ ಪಟ್ಟಣದ ಸಂತೆಮೈದಾನದಿಂದ ಬೃಹತ್ ರೋಡ್ ಶೋ ಪ್ರಾರಂಭ ಆಗಲಿದೆ. ಚೆನ್ನಮ್ಮ ವೃತ್ತ, ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ತಾಲೂಕು ಕ್ರೀಡಾಂಗಣವರೆಗೆ ಸುಮಾರು 2 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ. 12:15ಕ್ಕೆ ಶಿಗ್ಗಾಂವಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಯಲಿದೆ. 2023 ರ ಚುನಾವಣೆಯಲ್ಲಿ ಬೊಮ್ಮಾಯಿ ಹೇಳಿದವರಿಗೆ ಬೆಂಬಲಿಸುತ್ತೇನೆ ಎಂದು ಹೇಳಿದ್ದ ಬಳಿಕ ಇಂದು ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಸುದೀಪ್ ಧುಮುಕಲಿದ್ದಾರೆ.

    ಸುದೀಪ್ ಪ್ರಚಾರದಿಂದ ಬೊಮ್ಮಾಯಿಗೆ ಯಾವ ರೀತಿ ಲಾಭ?
    * ಹೆಸರಾಂತ ನಟನ ನೋಡಲು ಸಾಗರೋಪಾದಿಯಲ್ಲಿ ಸೇರಲಿರುವ ಜನರು.
    * ಅದ್ದೂರಿ ರೋಡ್ ಶೋಗೆ ಸ್ಟಾರ್ ಪ್ರಚಾರಕನಿಂದ ಮೆರಗು.
    * ಸುದೀಪ್ ರೋಡ್ ಶೋದಿಂದ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿ.
    * ಕಿಚ್ಚನ ಪ್ರಚಾರದಿಂದ ಜಾತಿ ಲೆಕ್ಕಾಚಾರದಲ್ಲೂ ಮತಬುಟ್ಟಿ ತುಂಬುವ ನಿರೀಕ್ಷೆ.
    * ವಾಲ್ಮೀಕಿ ಸಮಾಜಕ್ಕೆ ಸೇರಿದ ಸುದೀಪ್ ಪ್ರಚಾರದಿಂದ ವಾಲ್ಮೀಕಿ ಮತಗಳು ಬೊಮ್ಮಾಯಿ ಕಡೆ ವಾಲುವ ನಿರೀಕ್ಷೆ. ಇದನ್ನೂ ಓದಿ: ಕೈ ಅಭ್ಯರ್ಥಿಯ ಬಿ ಫಾರಂಗೆ ತಡೆ – ಪದ್ಮನಾಭನಗರದಲ್ಲಿ ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಕಣಕ್ಕೆ?

    ಬೊಮ್ಮಾಯಿ ಕ್ಷೇತ್ರದಲ್ಲಿ ನಟ ಕಿಚ್ಚ ಸುದೀಪ್ ಭರ್ಜರಿ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಲಿದ್ದಾರೆ. ವಾಲ್ಮೀಕಿ ಸಮುದಾಯದ ಮತ ಹಾಗೂ ಅಭಿಮಾನಿಗಳ ವೋಟ್ ಬಿಜೆಪಿ ಪರ ವಾಲುತ್ತದೋ ಇಲ್ಲವೋ ಅನ್ನೋದು ಕಾದು ನೋಡಬೇಕಾಗಿದೆ. ನಟ ಸುದೀಪ್ ಪ್ರಚಾರದಿಂದ ಹೀಗೆ ನೂರೆಂಟು ಲೆಕ್ಕಾಚಾರ ರಾಜಕೀಯ ಪಡಸಾಲೆಯಲ್ಲಿ ನಡೆದಿದೆ. ಇದರಿಂದ ಬೊಮ್ಮಾಯಿ ಗೆಲುವಿಗೆ ಬಹಳಷ್ಟು ಸಹಕಾರಿ ಆಗಲಿದೆ. ಇದನ್ನೂ ಓದಿ: ಎನ್‌ಸಿಪಿ ಲೋಗೋ ತೆಗೆದ ಅಜಿತ್‌ ಪವಾರ್‌ – ಮಹಾ ಬಿಜೆಪಿ ಜತೆ ಮೈತ್ರಿಗೆ 40 ಶಾಸಕರ ಸಮ್ಮತಿ?

  • ನಾಳೆಯಿಂದ ಸಿಎಂ ಬೊಮ್ಮಾಯಿ ಪರ ಅಖಾಡಕ್ಕೆ ಇಳಿವ ಸುದೀಪ್

    ನಾಳೆಯಿಂದ ಸಿಎಂ ಬೊಮ್ಮಾಯಿ ಪರ ಅಖಾಡಕ್ಕೆ ಇಳಿವ ಸುದೀಪ್

    ಕಿಚ್ಚ ಸುದೀಪ್ (Kiccha Sudeep) ಹಲವು ದಿನಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಪರವಾಗಿ ಮತ್ತು ಅವರು ಸೂಚಿಸಿದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸಿದ್ದರು. ಬೊಮ್ಮಾಯಿ ಮಾಮಾ ತಮಗೆ ಈ ಹಿಂದೆ ಮಾಡಿದ ಸಹಾಯಕ್ಕಾಗಿ ಅವರ ಪರ ಅಖಾಡಕ್ಕೆ ಇಳಿಯುತ್ತಿರುವುದಾಗಿ ಸ್ಪಷ್ಟ ಪಡಿಸಿದ್ದರು. ತಾವು ಮಾತು ಕೊಟ್ಟಂತೆ ನಾಳೆಯಿಂದ ಪ್ರಚಾರದಲ್ಲಿ ಸುದೀಪ್ ಭಾಗಿಯಾಗಲಿದ್ದಾರಂತೆ.

    ನಾಳೆ ಬಸವರಾಜ ಬೊಮ್ಮಾಯಿ ಶಿಗ್ಗಾಂವಿಯಲ್ಲಿ (Shiggavi) ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ಕಾರ್ಯದಲ್ಲೂ ಸುದೀಪ್ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಇಂದಿನಿಂದ ಸುದೀಪ್ ರಾಜಕೀಯ ಅಖಾಡಕ್ಕೆ ಇಳಿಯಬೇಕಿತ್ತು. ಕಾರ್ಯಕ್ರಮ ಸರಿಯಾದ ರೀತಿಯಲ್ಲಿ ನಿಗದಿ ಆಗದೇ ಇರುವ ಕಾರಣದಿಂದಾಗಿ ನಾಳೆಯಿಂದ ಅವರು ಶಿಗ್ಗಾಂವಿಯಿಂದಲೇ ಪ್ರಚಾರದ ಕಾರ್ಯವನ್ನು ಶುರು ಮಾಡಲಿದ್ದಾರಂತೆ. ಇದನ್ನೂ ಓದಿ: ಮ್ಯಾಕ್ಸಿ, ಡುಪ್ಲೆಸಿಸ್‌ ಸ್ಫೋಟಕ ಫಿಫ್ಟಿ – ಹೋರಾಡಿ ಕೊನೆಗೆ ಸೋತ ಆರ್‌ಸಿಬಿ

    ಸದ್ಯ ಬೊಮ್ಮಾಯಿ ಪರವಾಗಿ ಪ್ರಚಾರಕ್ಕೆ ಹೋಗುವ ಕಿಚ್ಚ ಮುಂದಿನ ದಿನಗಳಲ್ಲಿ ಯಾರೆಲ್ಲ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಬೊಮ್ಮಾಯಿ ಸೂಚಿಸುವ ಅಭ್ಯರ್ಥಿಗಳ ಪರವಾಗಿ ಕಿಚ್ಚ ಪ್ರಚಾರ ಮಾಡಲಿದ್ದಾರೆ. ಅದರಲ್ಲೂ ಸುದೀಪ್ ಅವರ ಆತ್ಮೀಯರ ಪರವಾಗಿಯೇ ಅವರು ಪ್ರಚಾರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಶಿಗ್ಗಾಂವಿಗೆ ಹೋಗುವುದಕ್ಕಾಗಿ ನಾಳೆ ಹೆಲಿಕಾಪ್ಟರ್ ಸಿದ್ಧವಾಗಿದೆ ಎನ್ನುವ ಮಾಹಿತಿ ಇದ್ದು, ಬೆಂಗಳೂರಿನಿಂದ ಅವರು ನೇರವಾಗಿ ಶಿಗ್ಗಾಂವಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ರೋಡ್ ಶೋನಲ್ಲಿ ಕಿಚ್ಚ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಇದೆ.

  • ನಟರು ರಾಜಕೀಯ ಹಂಗು, ಹಗರಣದಲ್ಲೇಕೆ ಸಿಕ್ಕಿಕೊಳ್ತಾರೆ – ವಿಶ್ವನಾಥ್‌ ಪ್ರಶ್ನೆ

    ನಟರು ರಾಜಕೀಯ ಹಂಗು, ಹಗರಣದಲ್ಲೇಕೆ ಸಿಕ್ಕಿಕೊಳ್ತಾರೆ – ವಿಶ್ವನಾಥ್‌ ಪ್ರಶ್ನೆ

    ಮೈಸೂರು: ನಟರು (Actors) ಸಾಂಸ್ಕೃತಿಕ ವ್ಯಕ್ತಿಗಳು, ಸಾಂಸ್ಕೃತಿಕವಾಗಿಯೇ ಇರಬೇಕು. ಈ ರಾಜಕೀಯ ಹಂಗು, ಹಗರಣದಲ್ಲಿ ಯಾಕೆ ಸಿಕ್ಕಿಹಾಕಿಕೊಳ್ತಾರೆ ಎಂದು ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಹೆಚ್‌. ವಿಶ್ವನಾಥ್‌ (H Vishwanath) ಪ್ರಶ್ನಿಸಿದ್ದಾರೆ.

    ನಟ ಕಿಚ್ಚ ಸುದೀಪ್‌ (Kichcha Sudeepa), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಬೆಂಬಲ ಘೋಷಣೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆ, ಮತದಾನದಂತಹ ಪ್ರಕ್ರಿಯೆಗಳಲ್ಲಿ ಮತದಾರನ ಮನಸ್ಸನ್ನ ನಟರು ಆಕರ್ಷಣೆ ಮಾಡಿಬಿಡ್ತಾರೆ ಅನ್ನೋದು ಸುಳ್ಳು. ಸುಮ್ಮನೇ ಶೋಕಿಗೆ ಕರೆತರಬೇಕು ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ: ಸುದೀಪ್ ವಿರುದ್ಧ ಚುನಾವಣೆ ಆಯೋಗಕ್ಕೆ ಜೆಡಿಎಸ್ ಪತ್ರ

    ನಟರು ಮತದಾರನ ಹೃದಯದಲ್ಲಿ ಇಳಿಯಲು ಸಾಧ್ಯವಿಲ್ಲ. ಅವರು ಸಾಂಸ್ಕೃತಿಕ ವ್ಯಕ್ತಿಗಳು, ಸಾಂಸ್ಕೃತಿಕವಾಗಿಯೇ ಇರಬೇಕು. ಈ ರಾಜಕೀಯ ಹಂಗು, ಹಗರಣದಲ್ಲಿ ಯಾಕೆ ಸಿಕ್ಕಿಹಾಕಿಕೊಳ್ತಾರೆ ಅನ್ನೋದು ಗೊತ್ತಾಗ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತ ವೀಡಿಯೋ ಇಲ್ಲಿದೆ.. ಇದನ್ನೂ ಓದಿ: ಸುದೀಪ್ ಸುಮ್ಮನಿದ್ದರೂ ಬಿಡುತ್ತಿಲ್ಲ ಪ್ರಕಾಶ್ ರೈ: ಮಾಮನೋ.. ಅತ್ತೆನೋ..

  • ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ ಪ್ರಕರಣದಲ್ಲಿ ಹೊಸ ತಿರುವು

    ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ ಪ್ರಕರಣದಲ್ಲಿ ಹೊಸ ತಿರುವು

    ಸ್ಯಾಂಡಲ್‌ವುಡ್‌ನ (Sandalwood) ಸದ್ಯ ಲೇಟೆಸ್ಟ್ ಸುದ್ದಿ ಸಮಾಚಾರ ಅಂದರೆ ಕಿಚ್ಚ ಸುದೀಪ್‌ಗೆ (Kiccha Sudeep) ಬೆದರಿಕೆ ಪತ್ರ ಬಂದಿರೋದು. ಖಾಸಗಿ ವೀಡಿಯೋ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ಮತ್ತು ಮ್ಯಾನೇಜರ್ ಜಾಕ್ ಮಂಜು ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಸಿಸಿಬಿ ತನಿಖೆ ಕೂಡ ಶುರುವಾಗಿದ್ದು, ಈ ಬಗ್ಗೆ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ.

    ಬೆದರಿಕೆ ಪತ್ರದ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಮೊನ್ನೆಯಷ್ಟೇ ಸುದೀಪ್ ಹೇಳಿದ್ದರು. ಸಿನಿಮಾ ರಂಗದವರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಾನೂನು ಮೂಲಕವೇ ಅವರಿಗೆ ಉತ್ತರ ಕೊಡುತ್ತೇನೆ ಎಂದೂ ಹೇಳಿಕೊಂಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸುಳಿವು ಸಿಕ್ಕಿದೆ. ಸುದೀಪ್ ಮನೆಗೆ ಬಂದಿದ್ದ ಆ ಎರಡೂ ಬೆದರಿಕೆ ಪತ್ರಗಳು ದೊಮ್ಮಲೂರಿನಿಂದ ಪೋಸ್ಟ್ ಆಗಿದೆ. ಆ ಬೆದರಿಕೆ ಪತ್ರಗಳ ಸಂಬಂಧ ಸಿಸಿಬಿಯಿಂದ (Central Crime Branc) ತನಿಖೆ ಶುರುವಾಗಿದ್ದು, ಶಂಕಿತ ಜಾಡು ಹಿಡಿದು ಹೊರಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ಜನ್ಮ ನೀಡಿದ ‘ಆಕಾಶದೀಪ’ ನಟಿ ದಿವ್ಯಾ ಶ್ರೀಧರ್

    ಸುದೀಪ್‌ಗೆ ಬೆದರಿಕೆ ಪತ್ರ ಹಾಕಲು ಸ್ವಿಫ್ಟ್ ಕಾರು ಬಳಸಲಾಗಿದೆ. ಈ ವೇಳೆ ನಂಬರ್ ಪ್ಲೇಟ್ ಅನ್ನೇ ಬದಲಿಸಿ ದುಷ್ಕರ್ಮಿಗಳು ಕಾರು ಬಳಸಿದ್ದಾರೆ. ಈ ಮೂಲಕ ದೊಮ್ಮಲೂರು ಪೋಸ್ಟ್ ಆಫೀಸ್‌ಗೆ ಸ್ವಿಫ್ಟ್ ಕಾರಿನಲ್ಲಿ ಆರೋಪಿಗಳು ಬಂದು ಲೆಟರ್ ಹಾಕಿದ್ದಾರೆ. ಸಿಸಿಟಿಟಿವಿಯಲ್ಲಿ ಸ್ವಿಫ್ಟ್ ಕಾರ್ ಬಳಸಿರೋದು ತಿಳಿದು ಬಂದಿದೆ. ಈ ಕಾರು ಕೆಂಗೇರಿ ಬಳಿಯ ವ್ಯಕ್ತಿಗೆ ಸೇರಿರೋದು ಪತ್ತೆಯಾಗಿದೆ. ವ್ಯಕ್ತಿಯ ವಿಚಾರಣೆಯ ನಂತರ ಆತನಿಗೂ ಈ ಪತ್ರಕ್ಕೂ ಸಂಬಂಧವಿಲ್ಲ ಅನ್ನೋದು ತಿಳಿದು ಬಂದಿದೆ. ನಕಲಿ ನಂಬರ್ ಪ್ಲೇಟ್ ಬಳಸಿ ಸುದೀಪ್ ಮನೆಗೆ ಬೆದರಿಕೆ ಪತ್ರ ಕಳುಹಿಸಿರೋದು ಇದೀಗ ಬೆಳಕಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ರೀತಿಯ ತಿರುವು ಪಡೆಯಲಿದೆ ಎಂಬುದನ್ನ ಕಾದುನೋಡಬೇಕಿದೆ.

  • ಸುದೀಪ್ ಗೆ ‘ಬಾಸ್’ ಎಂದ ಸಿಎಂ ಬೊಮ್ಮಾಯಿ : ವಿಡಿಯೋ ವೈರಲ್

    ಸುದೀಪ್ ಗೆ ‘ಬಾಸ್’ ಎಂದ ಸಿಎಂ ಬೊಮ್ಮಾಯಿ : ವಿಡಿಯೋ ವೈರಲ್

    ಮೊನ್ನೆಯಷ್ಟೇ ಕಿಚ್ಚ ಸುದೀಪ್ (Kiccha Sudeep) ತಾವು ಬಸವರಾಜ ಬೊಮ್ಮಾಯಿ (Basavaraja Bommai) ಅವರನ್ನು ‘ಮಾಮ’ (Maama)ಎಂದು ಕರೆಯುವುದಾಗಿ ಹೇಳಿಕೊಂಡಿದ್ದರು. ಚಿಕ್ಕ ವಯಸ್ಸಿನಿಂದಲೇ ಬೊಮ್ಮಾಯಿ ಅವರ ಜೊತೆ ಒಡನಾಟ ಹೊಂಡಿದ್ದೇನೆ. ಆವತ್ತಿನಿಂದಲೂ ಅವರನ್ನು ಮಾಮ ಎಂದೇ ಕರೆಯುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿದ್ದರು. ಈ ಮಾತು ಸಾಕಷ್ಟು ಟ್ರೋಲ್ ಆಗಿತ್ತು.

    ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುದೀಪ್ ಗೆ ‘ಬಾಸ್’ (Boss) ಎಂದು ಕರೆದಿದ್ದಾರೆ. ಈ ಮಾತು ಕೂಡ ಟ್ರೋಲ್ ಆಗುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಸುದೀಪ್ ಅಭಿಮಾನಿಗಳು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸುದೀಪ್ ಅಭಿಮಾನಿಗಳು ಈ ವಿಡಿಯೋ ಹಂಚಿಕೊಳ್ಳುವುದಕ್ಕೆ ಕಾರಣವೂ ಇದೆ. ಬಾಸ್ ಅನ್ನುವ ಪದಕ್ಕಾಗಿ ಹಲವು ವರ್ಷಗಳಿಂದ ಗಾಂಧಿನಗರದಲ್ಲಿ ಕಿತ್ತಾಟ ಶುರುವಾಗಿದೆ. ಇದನ್ನೂ ಓದಿ: ಕರಣ್ ಜೋಹಾರ್ ವಿರುದ್ಧ ಮತ್ತೆ ಕೆಂಡಕಾರಿದ ಕಂಗನಾ ರಣಾವತ್

    ತಮ್ಮನ್ನು ಬೆಂಬಲಿಸಿದ ಕಾರಣಕ್ಕಾಗಿ ಸುದೀಪ್ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ. ಈ ಕುರಿತು ಏನು ಹೇಳುತ್ತೀರಿ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆ ಉತ್ತರಿಸಿದ ಬೊಮ್ಮಾಯಿ, ‘ನಾನೇನಪ್ಪ ಮಾಡ್ಲಿ? ಬೆಂಬಲದ ವಿಷಯವಾಗಿ ಬಾಸ್ (ಸುದೀಪ್) ಮೊನ್ನೆ ಎಲ್ಲವನ್ನೂ ಸ್ಪಷ್ಟ ಪಡಿಸಿದ್ದಾರಲ್ಲ. ಮತ್ತೆ ಏನು ಹೇಳೋದು’ ಎಂದಷ್ಟೇ ಉತ್ತರಿಸಿದ್ದಾರೆ. ಈ ಮಾತಿನ ಮಧ್ಯ ಬಂದ ‘ಬಾಸ್’ ಪದವು ಸಾಕಷ್ಟು ವೈರಲ್ ಆಗಿದೆ.

    ಸುದೀಪ್ ಅವರ ಖಾಸಗಿ ವಿಡಿಯೋ ವಿಚಾರವಾಗಿಯೂ ಸಿಎಂ ಪ್ರತಿಕ್ರಿಯೆ ನೀಡಿದ್ದು, ಅದಕ್ಕೂ ಅವರು ಬೆಂಬಲಿಸಿದ್ದಕ್ಕೂ ಯಾವುದೇ ಸಂಬಂಧವಿಲ್ಲ. ಅದು ಮುಗಿದ ನಂತರವೇ ಅವರು ಪತ್ರಿಕಾಗೋಷ್ಠಿಗೆ ಬಂದಿದ್ದು. ಬೆಂಬಲಿಸಿದ್ದಕ್ಕೆ ವಿಡಿಯೋ ಬೆದರಿಕೆ ಹಾಕಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.

  • ನಮ್ಮ ಜೊತೆಗೆ ಸೂಪರ್ ಸ್ಟಾರ್ ಬಂದ್ರೆ ಕುಮಾರಸ್ವಾಮಿಗೆ ಯಾಕೆ ಚಿಂತೆ – ಸಿಎಂ ಪ್ರಶ್ನೆ

    ನಮ್ಮ ಜೊತೆಗೆ ಸೂಪರ್ ಸ್ಟಾರ್ ಬಂದ್ರೆ ಕುಮಾರಸ್ವಾಮಿಗೆ ಯಾಕೆ ಚಿಂತೆ – ಸಿಎಂ ಪ್ರಶ್ನೆ

    ಹುಬ್ಬಳ್ಳಿ: ನಟರು ರಾಜಕೀಯ ಪಕ್ಷಕ್ಕೆ ಬೆಂಬಲ ಕೊಡೋದು ಹೊಸದೇನಲ್ಲ, ಈ ಹಿಂದೆ ಎಲ್ಲಾ ಪಕ್ಷಗಳಿಗೂ ಬೆಂಬಲ ಕೊಟ್ಟಿದ್ದಾರೆ. 1996ರ ಚುನಾವಣೆಯಲ್ಲಿ ನಾನು, ಕುಮಾರಸ್ವಾಮಿ (HD Kumaraswamy) ದಿವಂಗತ ಅಂಬರೀಶ್‌ ಅವರನ್ನ ಕರೆದುಕೊಂಡು ಪ್ರಚಾರ ಮಾಡಿರಲಿಲ್ವಾ? ನಮ್ಮ ಜೊತೆ ಸೂಪರ್‌ ಸ್ಟಾರ್‌ ಬಂದ್ರೆ ಇವರಿಗೇಕೆ ಚಿಂತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಪ್ರಶ್ನಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಮಾತನಾಡುತ್ತಾ ನಟ ಸುದೀಪ್‌ ಬೆಂಬಲ ಕುರಿತು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಕುಮಾರಸ್ವಾಮಿ ಈ ಹಿಂದೆ ಯಾವ ಸ್ಟಾರ್ ನಟರನ್ನ ನಿಲ್ಲಿಸಿರಲಿಲ್ವಾ? 1996 ರಾಮನಗರ ಉಪಚುನಾವಣೆಯಲ್ಲಿ ನಾನು ಮತ್ತು ಕುಮಾರಸ್ವಾಮಿ, ನಟ ಅಂಬರೀಶ್ ಕರೆದುಕೊಂಡು ಬಂದು ಪ್ರಚಾರ ಮಾಡಿಸಿದ್ವಿ‌. ನಾನೇ ಅಂಬರೀಶ್ ಕರೆದುಕೊಂಡು ಬಂದು ಪ್ರಚಾರ ಮಾಡಿದ್ದೆ. ಇದನ್ನು ಅವರು ಮರೆತುಬಿಟ್ರಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಷ್ಟದ ಸಮಯದಲ್ಲಿ ನಮ್ಮನ್ನ ಕೈ ಬಿಟ್ಟಿದೆ – ಕಾಂಗ್ರೆಸ್‌ಗೆ ರಾಜೀನಾಮೆ ಘೋಷಿಸಿದ ಇನಾಮ್ದಾರ್ ಕುಟುಂಬ

    ನಮ್ಮ ಜೊತೆಗೆ ಸೂಪರ್ ಸ್ಟಾರ್ ಬಂದ್ರೆ ಯಾಕೆ ಇವರಿಗೇಕೆ ಕಳವಳ. ಅವರಿಗೆ ಆತಂಕ ಇದೆ ಹಾಗಾಗಿ ಟೀಕೆ ಮಾಡ್ತೀದ್ದಾರೆ. ಅವರು ಸೋಲನ್ನ ಎದುರು ನೋಡ್ತಿದ್ದಾರೆ, ಈಗಾಗಲೇ ಗೋಡೆ ಮೇಲೆ ಸೋಲು ಕಾಣ್ತಿದೆ. ಆದರೆ ನಮಗೆ ಗೆಲುವಿನ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಿಕ್ವೆಸ್ಟ್‌ ಮಾಡಿ ಕೊಹ್ಲಿ ಕೈಹಿಡಿದು ಡಾನ್ಸ್‌ ಮಾಡಿಸಿದ ಬಾದ್‌ ಷಾ – ಚಾಂಪಿಯನ್ಸ್‌ ಆಗೋಣ ಎಂದ ಜೂಹಿ ಚಾವ್ಲಾ

    ಇದೇ ವೇಳೆ ಟಿಕೆಟ್‌ ಘೋಷಣೆ ವಿಚಾರವಾಗಿ ಮಾತನಾಡಿ, ಬಿಜೆಪಿಯಿಂದ ಒಂದು ಕ್ಷೇತ್ರಕ್ಕೆ ಮೂರು ಜನರ ಹೆಸರು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಅಂತಿಮವಾಗಿ ಸಂಸದೀಯ ಮಂಡಳಿ ಸಮಿತಿಯಲ್ಲಿ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

  • ಚುನಾವಣೆ ಗದ್ದಲದ ನಡುವೆ ಸೈಲೆಂಟ್ ಆಗಿ ಶೂಟಿಂಗ್ ನಲ್ಲಿ ಭಾಗಿಯಾದ ಕಿಚ್ಚ ಸುದೀಪ್

    ಚುನಾವಣೆ ಗದ್ದಲದ ನಡುವೆ ಸೈಲೆಂಟ್ ಆಗಿ ಶೂಟಿಂಗ್ ನಲ್ಲಿ ಭಾಗಿಯಾದ ಕಿಚ್ಚ ಸುದೀಪ್

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುವುದಾಗಿ ರಾಜಕೀಯ ಕಣಕ್ಕೆ ಇಳಿದಿರುವ ಸುದೀಪ್ (Kiccha Sudeep), ಅನೇಕರಿಂದ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಮತ್ತೊಂದು ಕಡೆ ಖಾಸಗಿ ವಿಡಿಯೋ ಹರಿಬಿಡುವುದಾಗಿ ಬೆದರಿಕೆ. ಈ ಎಲ್ಲದರ ನಡುವೆ ಸುದೀಪ್ ತಣ್ಣಗೆ ಚಿತ್ರೀಕರಣ (Shooting) ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರದೀಪ್ ಯಾದವ್ ನಿರ್ಮಾಣದ ಹಾಗೂ ಸಿ.ಎಂ ವಿಜಯ್ ನಿರ್ದೇಶನದ ‘ಉಸಿರೇ ಉಸಿರೇ’ (Usire Usire) ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ.

    ಈಗಾಗಲೇ ‘ಉಸಿರೇ ಉಸಿರೇ’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ. ಕೊನೆಯ ಹಂತದ ಚಿತ್ರೀಕರಣದಲ್ಲಿ ಅವರು ಭಾಗಿಯಾಗಿ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಲಿದ್ದಾರೆ. ಇದನ್ನೂ ಓದಿ: ‘ವಿಷ್ಣುಪ್ರಿಯಾ’ಗಾಗಿ ಕೇರಳದಿಂದ ಹಾರಿಬಂದ ಕಣ್ಸನ್ನೆ ಬೆಡಗಿ ಪ್ರಿಯಾ

    ಬಿಗ್ ಬಾಸ್ ಖ್ಯಾತಿಯ ರಾಜೀವ್ (Rajeev) ಈ ಚಿತ್ರದ ನಾಯಕ. ಶ್ರೀಜಿತ ನಾಯಕಿ. ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ,ಆಲಿ, ಬ್ರಹ್ಮಾನಂದಂ, ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವು, ಸುಶ್ಮಿತಾ  ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಿಚ್ಚ ಸುದೀಪ್ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

    ಸಿ.ಎಂ.ವಿಜಯ್ ನಿರ್ದೇಶನದ ಈ ಚಿತ್ರಕ್ಕೆ ಮನು ಬಿ ಕೆ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ಮತ್ತು ಹೈಟ್ ಮಂಜು ಅವರ ನೃತ್ಯ ನಿರ್ದೇಶನವಿದೆ ವಿವೇಕ್ ಚಕ್ರವರ್ತಿ ಅವರ ಸಂಗೀತ ನಿರ್ದೇಶನ ‘ಉಸಿರೇ ಉಸಿರೇ’ ಚಿತ್ರಕ್ಕಿದೆ.