Tag: ಕಿಚ್ಚ ಸುದೀಪ್

  • ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ

    ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ

    ಕಿಚ್ಚ ಸುದೀಪ್ (Kiccha Sudeep) ಅವರ ಅಳಿಯ ಸಂಚಿತ್ ಸಂಜೀವ್ (Sanchith Sanjeev) ಅವರು ಸ್ಯಾಂಡಲ್‌ವುಡ್‌ಗೆ (Sandalwood) ಪಾದಾರ್ಪಣೆ ಮಾಡಲು ವೇದಿಕೆ ಸಜ್ಜಾಗಿದೆ. ದೊಡ್ಡ ಸಿನಿಮಾ ಮೂಲಕವೇ ಸಂಜಿತ್ ಪರಿಚಯವಾಗುತ್ತಿದ್ದಾರೆ. ಸಿನಿಮಾಗೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.

    ಸಾಕಷ್ಟು ಸಮಯದಿಂದ ಸಂಚಿತ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಮಾತುಗಳು ಕೇಳಿಬರುತ್ತಿತ್ತು. ಇದೀಗ ಫೈನಲಿ ಅದಕ್ಕೆ ವೇದಿಕೆ ಸಿದ್ಧವಾಗಿದೆ. ಈಗಾಗಲೇ ಕಿಚ್ಚನ ‘ಅಂಬಿ ನಿಂಗೆ ವಯಸ್ಸಾಯ್ತೋ’, ‘ವಿಕ್ರಾಂತ್ ರೋಣ’ ಸಿನಿಮಾಗಳಲ್ಲಿ ಸಂಚಿತ್ ಕೆಲಸ ಮಾಡಿದ್ದರು. ಆದರೆ ಕ್ಯಾಮೆರಾ ಮುಂದೆ ಅಲ್ಲ ಹಿಂದೆ ಗುರುತಿಸಿಕೊಂಡಿದ್ದರು. ಸುದೀಪ್ ಸೋದರಳಿಯ ಮುಂಬೈನಲ್ಲಿ ನಟನೆಯನ್ನು ಕೂಡ ಕಲಿತು ಬಂದಿದ್ದಾರೆ. ಇದನ್ನೂ ಓದಿ:ಐವತ್ತನೇ ದಿನದ ಸಂಭ್ರಮದಲ್ಲಿ ಬಿಸಿಲು ಕುದುರೆ

    ಸಕಲ ತಯಾರಿಯೊಂದಿಗೆ ಸಂಚಿತ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ತಾವು ನಟಿಸುವ ಚೊಚ್ಚಲ ಚಿತ್ರವನ್ನು ತಾವೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಜೊತೆ ಕೆ.ಪಿ ಶ್ರೀಕಾಂತ್, ಮನೋಹರ್ ನಾಯ್ಡು ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಶ್ರೀಕಾಂತ್ ಮಾಹಿತಿ ನೀಡಿದ್ದಾರೆ. ಸಂಚಿತ್ ಸಿನಿಮಾ ಬಗ್ಗೆ ಅಧಿಕೃತವಾಗಿ ಜೂನ್ 14ರಂದು ಘೋಷಣೆ ಮಾಡಿದ್ದಾರೆ.

    ಲಹರಿ ಸಂಸ್ಥೆಯ (Lahari Films) ಮನೋಹರ್ ನಾಯ್ಡು, ವೀನಸ್ ಮೂವಿಸ್‌ನ ಕೆ. ಪಿ ಶ್ರೀಕಾಂತ್ ಈಗಾಗಲೇ 2 ಸಿನಿಮಾ ನಿರ್ಮಿಸ್ತಿದ್ದಾರೆ. ಉಪೇಂದ್ರ ನಟನೆಯ ‘ಯುಐ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಸೆಟ್ಟೇರಿ ನಿಂತೇ ಹೋಗಿದ್ದ ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಮರುಜೀವ ಕೊಟ್ಟಿದ್ದಾರೆ. ಜೂನ್ 15ರ ಗುರುವಾರ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ.

    ತಮ್ಮ ಮೊದಲ ಸಿನಿಮಾದಲ್ಲೇ ನಟನೆಯ ಜೊತೆ ನಿರ್ದೇಶನ (Direction) ಕೂಡ ಸಂಚಿತ್ ಮಾಡ್ತಿದ್ದಾರೆ. ಈ ಮೂಲಕ ಚಿತ್ರರಂಗಕ್ಕೆ ಯುವನಟ ಸಂಚಿತ್ ಹೆಜ್ಜೆ ಇಡ್ತಿದ್ದಾರೆ. ಇದೊಂದು ಕ್ರೈಂ ಡ್ರಾಮಾ ಆಗಿದ್ದು, ತಂದೆ-ಮಗನ ಬಾಂಧವ್ಯವನ್ನು ಸಾರುವ ಕಥೆಯನ್ನ ಈ ಚಿತ್ರದ ಮೂಲಕ ತೋರಿಸಲಿದ್ದಾರೆ.

  • ಸುದೀಪ್ ನಟನೆಯ 46ನೇ ಸಿನಿಮಾ: ಇನ್ನಷ್ಟು, ಮತ್ತಷ್ಟು ಸುದ್ದಿ

    ಸುದೀಪ್ ನಟನೆಯ 46ನೇ ಸಿನಿಮಾ: ಇನ್ನಷ್ಟು, ಮತ್ತಷ್ಟು ಸುದ್ದಿ

    ಕಿಚ್ಚ ಸುದೀಪ್ (Kichcha Sudeep) ನಟನೆಯ ಹೊಸ ಸಿನಿಮಾದ ಕುರಿತು ದಿನಕ್ಕೊಂದು ಸುದ್ದಿ ಹೊರ ಬೀಳುತ್ತಿವೆ. ಅಧಿಕೃತವಾಗಿ ಚಿತ್ರತಂಡ ಹೇಳಿಕೊಳ್ಳದೇ ಇದ್ದರೂ, ಈ ಸಿನಿಮಾಗೆ ತಮಿಳು ನಿರ್ದೇಶಕರು ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾಹಿತಿ ಇದೆ. ಜೊತೆಗೆ ಈ ಸಿನಿಮಾದ ನಾಯಕಿಯನ್ನು ಬಾಲಿವುಡ್ ನಿಂದ ಕರೆತರಲಾಗುತ್ತಿದೆಯಂತೆ. ಅಲ್ಲದೇ, ತಂತ್ರಜ್ಞರು ಮಾತ್ರ ಕನ್ನಡದವರೇ ಇರಲಿದ್ದಾರೆ ಎನ್ನುವುದು ಲೇಟೆಸ್ಟ್ ಅಪ್ ಡೇಟ್.

    ಈ ಹೊಸ ಸಿನಿಮಾವನ್ನು ತಮಿಳು ನಿರ್ದೇಶಕರು ಹಾಗೂ ತಮಿಳು ಚಿತ್ರ ನಿರ್ಮಾಣ ಸಂಸ್ಥೆ ತಯಾರಿಸುತ್ತಿದ್ದರೆ, ಸಂಗೀತ, ಸಿನಿಮಾಟೋಗ್ರಫಿ ಮತ್ತು ಕಲಾ ನಿರ್ದೇಶನವನ್ನು ಕನ್ನಡದ ತಂತ್ರಜ್ಞರೇ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಜನೀಶ್ ಲೋಕನಾಥ (Ajanish Loknath) ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದರೆ, ಶಿವಕುಮಾರ್ ಕಲಾನಿರ್ದೇಶಕ. ಶೇಖರ್ ಚಂದ್ರ ಅವರ ಸಿನಿಮಾಟೋಗ್ರಫಿ ಚಿತ್ರಕ್ಕೆ ಇರಲಿದೆಯಂತೆ. ಆದರೆ, ಈ ಮಾಹಿತಿಯನ್ನು ಚಿತ್ರತಂಡ ಇನ್ನೂ ಖಚಿತ ಪಡಿಸಿಲ್ಲ. ಇದನ್ನೂ ಓದಿ:ನಟ ಚಿರಂಜೀವಿ ಸರ್ಜಾ 3 ನೇ ವರ್ಷದ ಪುಣ್ಯತಿಥಿ

    ಈ ಸಿನಿಮಾವನ್ನು ತಮಿಳು (Tamil) ನಿರ್ದೇಶಕ ವಿಜಯ್ (Vijay) ಎನ್ನುವವರು ನಿರ್ದೇಶನ ಮಾಡಲಿದ್ದು, ಈ ಸಿನಿಮಾ ಮೂಲಕ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ತಮಿಳಿನ ಕಲೈಪುಲಿ ಎಸ್ ತನು (Kalaipuli S Tanu) ನಿರ್ಮಾಣ ಸಂಸ್ಥೆ ಚಿತ್ರಕ್ಕೆ ಹಣ ಹೂಡಿದೆ. ಮೊನ್ನೆಯಷ್ಟೇ ಕಿಚ್ಚ ಕಾರಿನಿಂದ ಇಳಿಯುವುದರ ಜೊತೆಗೆ ಮೇಕಪ್ ನಲ್ಲಿ ಭಾಗಿಯಾಗುವ ಸಣ್ಣದೊಂದು ವಿಡಿಯೋ ಬಿಡುಗಡೆ ಮಾಡಿತ್ತು ಚಿತ್ರತಂಡ. ಸುದೀಪ್ ಅವರ ಗೆಟಪ್ ಜಭರದಸ್ತಾಗಿ ಇರಲಿದೆ ಎನ್ನುವ ಸುಳಿವನ್ನೂ ನೀಡಿತ್ತು.

    ಒಂದು ದಿನದಲ್ಲಿ ನಡೆಯುವ ಕಥೆಯು ಇದಾಗಿದ್ದು, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮಾದರಿಯ ಚಿತ್ರವಂತೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಭಾರೀ ಬಜೆಟ್ ನ ಚಿತ್ರ ಇದಾಗಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಈ ಸಿನಿಮಾ ಏಕಕಾಲಕ್ಕೆ ರೆಡಿಯಾಗಲಿದೆ. ಅರ್ಜುನ್ ಜನ್ಯ ಬದಲಾಗಿ ಈ ಚಿತ್ರಕ್ಕೆ ಹ್ಯಾರೀಸ್ ಜೈರಾಜ್ ಎನ್ನುವವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅಧಿಕೃತವಾಗಿ ಚಿತ್ರತಂಡ ಮಾಹಿತಿ ಕೊಡದೇ ಇದ್ದರೂ, ಸುದೀಪ್ ಅವರ ಆಪ್ತರಿಂದಲೇ ಇವಿಷ್ಟು ಮಾಹಿತಿ ಹೊರ ಬಂದಿವೆ.

     

    ಈ ಹಿಂದೆಯಷ್ಟೇ ತಾವು ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಕುರಿತು ಕಿಚ್ಚ ಸುದೀಪ್ (Sudeep) ಬಹಿರಂಗ ಪಡಿಸಿದ್ದರು. ಮೂರು ಸಿನಿಮಾಗಳಲ್ಲಿ ಮೊದಲು ಯಾವುದು ಶುರುವಾಗಲಿದೆ ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ‘ಬಿಲ್ಲ ರಂಗ ಬಾಷಾ’ (Billa Ranga Basha) ಮೊದಲು ಮೂಡಿ ಬರಲಿದೆ ಎನ್ನಲಾಗಿತ್ತು. ಆದರೆ, ಅದಕ್ಕೂ ಮುನ್ನ ವಿಜಯ್ ನಿರ್ದೇಶನದ ಚಿತ್ರ ತಯಾರಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ.

  • ಅಭಿಷೇಕ್ ಅಂಬರೀಶ್ ಮದುವೆಗೆ ಕಿಚ್ಚ ಕೊಟ್ಟ ಉಡುಗೊರೆ ಏನು?

    ಅಭಿಷೇಕ್ ಅಂಬರೀಶ್ ಮದುವೆಗೆ ಕಿಚ್ಚ ಕೊಟ್ಟ ಉಡುಗೊರೆ ಏನು?

    ಕಿಚ್ಚ ಸುದೀಪ್ ಕುಟುಂಬ ಸಮೇತ ಅಭಿಷೇಕ್ ಅಂಬರೀಶ್ (Abhishek Ambarish)ಅವರ ಮದುವೆಗೆ ಆಗಮಿಸಿದ್ದರು. ಪತ್ನಿ ಪ್ರಿಯಾ, ಪುತ್ರಿ ಶಾನ್ವಿ ಜೊತೆ ಆಗಮಿಸಿದ್ದ ಅವರು ಅಂಬಿಮಾಮನ ಮಗನಿಗೆ ಬೆಲೆಬಾಳುವ ಉಡುಗೊರೆಯನ್ನು ನೀಡಿದ್ದಾರೆ. ಆ ಉಡುಗೊರೆಯನ್ನು ಸ್ವತಃ ಅಭಿಷೇಕ್ ಕೊರಳಿಗೆ ಹಾಕಿದ್ದಾರೆ. ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ ಸುದೀಪ್ (Kichcha Sudeep), ಹೊಸ ಜೀವನಕ್ಕೆ ಕಾಲಿಡುತ್ತಿರುವ ಅಭಿ ಮತ್ತು ಅವಿವಾಗೆ ಶುಭ ಹಾರೈಸಿದರು.

    ಈ ಮದುವೆಗೆ (Marriage) ಅನೇಕ ಗಣ್ಯರು ಸಾಕ್ಷಿಯಾಗಿದ್ದು ನಟ ರಜನಿಕಾಂತ್, ತೆಲುಗು ನಟ ಚಿರಂಜೀವಿ, ನಟ ಯಶ್,  ಕ್ರಿಕೆಟಿಗ ಅನಿಲ್ ಕುಂಬ್ಳೆ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳು ನಟ ಮೋಹನ್ ಬಾಬು, ತೆಲುಗು ನಟ ನರೇಶ್, ನಟಿ ಪವಿತ್ರ ಲೋಕೇಶ್, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಆಗಮಿಸಿದ್ದರು.

    ನಟ ಅಭಿಷೇಕ್ ಅಂಬರೀಶ್ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅವಿವಾ ಬಿಡಪ್ಪ (Aviva Bidappa) ಇಂದು ಹೊಸ ಜೀವನಕ್ಕೆ ಕಾಲಿಟ್ಟರು. ಗೌಡರ ಸಂಪ್ರದಾಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವಿವಾಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ದೀರ್ಘಕಾಲದ ಗೆಳತಿಯೊಂದಿಗೆ ಹಸೆಮಣೆ ಏರಿದರು. ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ಅನೇಕ ಗಣ್ಯರು ಹಾಜರಿದ್ದರು. ಗುರು ಹಿರಿಯರ ನಿಶ್ಚಯದಂತೆ ಬೆಳಗ್ಗೆ 9.30 ರಿಂದ 10.30ರ ಒಳಗೆ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಯಿತು.

    ಅಭಿಷೇಕ್- ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿಡಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯರ ಮೇರೆಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಮೂರು ದಿನಗಳಿಂದ ಅಂಬಿ ಮನೆಯಲ್ಲಿ ಸಡಗರ ಮನೆಮಾಡಿತ್ತು. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಅಲಂಕಾರಗೊಂಡಿದೆ. ಈಗಾಗಲೇ ಹಳದಿ ಶಾಸ್ತ್ರ, ವರಪೂಜೆ, ಮೆಹಂದಿ ಶಾಸ್ತ್ರದ ಕಾರ್ಯಕ್ರಮಗಳನ್ನು ಅಂಬಿ ಮನೆಯಲ್ಲೇ ನೆರವೇರಿಸಲಾಗಿದೆ.

    ಇಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆದದ್ದು, ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ- ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.

  • ಜೂ 7ಕ್ಕೆ ಕಿಚ್ಚನ ಹೊಸ ಸಿನಿಮಾದ ಟೀಸರ್

    ಜೂ 7ಕ್ಕೆ ಕಿಚ್ಚನ ಹೊಸ ಸಿನಿಮಾದ ಟೀಸರ್

    ಜೂನ್ 1 ರಂದು ತಮ್ಮ ಹೊಸ ಸಿನಿಮಾದ ಟೀಸರ್ (Teaser) ಅನ್ನು ರಿಲೀಸ್ ಮಾಡುವುದಾಗಿ ಈ ಹಿಂದೆ ಘೋಷಿಸಿದ್ದರು ಸುದೀಪ್ (Kichcha Sudeep) . ಆದರೆ, ತಾಂತ್ರಿಕ ಕಾರಣದಿಂದಾಗಿ ಇಂದು ಟೀಸರ್ ಬಿಡುಗಡೆ ಆಗುತ್ತಿಲ್ಲ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿತ್ತು. ಇದೀಗ ಟೀಸರ್ ಯಾವಾಗ ಬಿಡುಗಡೆ ಆಗಲಿದೆ ಎನ್ನುವ ಕುರಿತು ಮಾಹಿತಿ ಸಿಕ್ಕಿದ್ದು, ಜೂನ್ 7 ರಂದು ಟೀಸರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಈ ನಡುವೆ ಬಾಲಿವುಡ್ ಅಂಗಳದಿಂದ ಮತ್ತೊಂದು ಹೊಸ ಸುದ್ದಿ ಬಂದಿದ್ದು, ಸುದೀಪ್ ಅವರ 46ನೇ ಚಿತ್ರಕ್ಕೆ ಬಾಲಿವುಡ್ ನಟಿ ಸಿಮ್ರಾತ್ ಕೌರ್  (Simrat Kaur) ನಾಯಕಿಯಾಗಲಿದ್ದಾರಂತೆ.

    ಈ ಕುರಿತು ಅಧಿಕೃತವಾಗಿ ಸಿನಿಮಾ ತಂಡದಿಂದ ಯಾವುದೇ ಮಾಹಿತಿ ಬಾರದೇ ಇದ್ದರೂ, ಮಿಲ್ಕಿ ಬ್ಯೂಟಿ ಸಿಮ್ರಾತ್ ಕೌರ್ ಹೆಸರು ಮಾತ್ರ ಸಖತ್ ವೈರಲ್ ಆಗುತ್ತಿದೆ. ಮೂಲತಃ ಮುಂಬೈ ಮೂಲದವರಾದ ಸಿಮ್ರಾತ್, ತೆಲುಗು ಚಿತ್ರಗಳ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟವರು. ಆ ಮೇಲೆ ಬಾಲಿವುಡ್ ನಲ್ಲಿ ಮಿಂಚಿದ್ದಾರೆ. ಇದೀಗ ಸಿಮ್ರಾತ್ ನಟನೆಯ ಗದಾರ್ 2 ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇದನ್ನೂ ಓದಿ:‘ಬಾಹುಬಲಿ’ ಪ್ರಭಾಸ್‌ಗೆ ಸ್ಟಾರ್ ನಟ ಕಮಲ್ ಹಾಸನ್ ವಿಲನ್

    ಅಂದಹಾಗೆ ಈ ಸಿನಿಮಾವನ್ನು ತಮಿಳು (Tamil) ನಿರ್ದೇಶಕರೊಬ್ಬರು ನಿರ್ದೇಶನ ಮಾಡಲಿದ್ದಾರಂತೆ. ಈ ಸಿನಿಮಾದ ಮೂಲಕ ಹೊಸ ಹುಡುಗ ವಿಜಯ್ (Vijay) ಎನ್ನುವವರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾಹಿತಿ ಇದೆ. ಇದು ಕೂಡ ಅಧಿಕೃತ ಹೇಳಿಕೆಯಲ್ಲ. ಸುದೀಪ್ ತಂಡದಿಂದ ಸಿಕ್ಕಿರುವ ಮಾಹಿತಿಯಾಗಿದೆ.

     

    ಒಂದು ದಿನದಲ್ಲಿ ನಡೆಯುವ ಕಥೆಯು ಇದಾಗಿದ್ದು, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮಾದರಿಯ ಚಿತ್ರವಂತೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಭಾರೀ ಬಜೆಟ್ ನ ಚಿತ್ರ ಇದಾಗಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಈ ಸಿನಿಮಾ ಏಕಕಾಲಕ್ಕೆ ರೆಡಿಯಾಗಲಿದೆ. ಅರ್ಜುನ್ ಜನ್ಯ ಬದಲಾಗಿ ಈ ಚಿತ್ರಕ್ಕೆ ಹ್ಯಾರೀಸ್ ಜೈರಾಜ್ ಎನ್ನುವವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅಧಿಕೃತವಾಗಿ ಚಿತ್ರತಂಡ ಮಾಹಿತಿ ಕೊಡದೇ ಇದ್ದರೂ, ಸುದೀಪ್ ಅವರ ಆಪ್ತರಿಂದಲೇ ಇವಿಷ್ಟು ಮಾಹಿತಿ ಹೊರ ಬಂದಿವೆ.

  • ಸುದೀಪ್ ಹೊಸ ಚಿತ್ರದ ಮೂಲಕ ಕನ್ನಡಕ್ಕೆ ಬರ್ತಿದ್ದಾರೆ ಬಾಲಿವುಡ್ ನಟಿ

    ಸುದೀಪ್ ಹೊಸ ಚಿತ್ರದ ಮೂಲಕ ಕನ್ನಡಕ್ಕೆ ಬರ್ತಿದ್ದಾರೆ ಬಾಲಿವುಡ್ ನಟಿ

    ಕಿಚ್ಚ ಸುದೀಪ್ (Kiccha Sudeep) ಅವರ ಹೊಸ ಸಿನಿಮಾದ ಬಗ್ಗೆ ವಾರಕ್ಕೊಂದು ವಿಷಯ ಹೊರ ಬರುತ್ತಿವೆ. ಸ್ವತಃ ಸುದೀಪ್ ಅವರೇ ತಿಳಿಸಿದಂತೆ ಇಂದು (ಜೂನ್ 1) ಹೊಸ ಸಿನಿಮಾದ ಟೀಸರ್ ರಿಲೀಸ್ ಆಗಬೇಕಿತ್ತು. ಆದರೆ, ಅದರ ಬಗ್ಗೆ ಯಾವುದೇ ಸದ್ದಿಲ್ಲ. ಈ ನಡುವೆ ಬಾಲಿವುಡ್ ಅಂಗಳದಿಂದ ಹೊಸ ಸುದ್ದಿಯೊಂದು ಬಂದಿದ್ದು, ಸುದೀಪ್ ಅವರ 46ನೇ ಚಿತ್ರಕ್ಕೆ ಬಾಲಿವುಡ್ (Bollywood) ನಟಿ ಸಿಮ್ರಾತ್ ಕೌರ್ (Simrat Kaur) ನಾಯಕಿಯಾಗಲಿದ್ದಾರಂತೆ.

    ಈ ಕುರಿತು ಅಧಿಕೃತವಾಗಿ ಸಿನಿಮಾ ತಂಡದಿಂದ ಯಾವುದೇ ಮಾಹಿತಿ ಬಾರದೇ ಇದ್ದರೂ, ಮಿಲ್ಕಿ ಬ್ಯೂಟಿ ಸಿಮ್ರಾತ್ ಕೌರ್ ಹೆಸರು ಮಾತ್ರ ಸಖತ್ ವೈರಲ್ ಆಗುತ್ತಿದೆ. ಮೂಲತಃ ಮುಂಬೈ ಮೂಲದವರಾದ ಸಿಮ್ರಾತ್, ತೆಲುಗು ಚಿತ್ರಗಳ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟವರು. ಆ ಮೇಲೆ ಬಾಲಿವುಡ್ ನಲ್ಲಿ ಮಿಂಚಿದ್ದಾರೆ. ಇದೀಗ ಸಿಮ್ರಾತ್ ನಟನೆಯ ಗದಾರ್ 2 ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.

    ಅಂದಹಾಗೆ ಈ ಸಿನಿಮಾವನ್ನು ತಮಿಳು (Tamil) ನಿರ್ದೇಶಕರೊಬ್ಬರು ನಿರ್ದೇಶನ ಮಾಡಲಿದ್ದಾರಂತೆ. ಈ ಸಿನಿಮಾದ ಮೂಲಕ ಹೊಸ ಹುಡುಗ ವಿಜಯ್ (Vijay) ಎನ್ನುವವರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾಹಿತಿ ಇದೆ. ಇದು ಕೂಡ ಅಧಿಕೃತ ಹೇಳಿಕೆಯಲ್ಲ. ಸುದೀಪ್ ತಂಡದಿಂದ ಸಿಕ್ಕಿರುವ ಮಾಹಿತಿಯಾಗಿದೆ. ಇದನ್ನೂ ಓದಿ:ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ರಚಿತಾ ರಾಮ್ ಭೇಟಿ

    ಒಂದು ದಿನದಲ್ಲಿ ನಡೆಯುವ ಕಥೆಯು ಇದಾಗಿದ್ದು, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮಾದರಿಯ ಚಿತ್ರವಂತೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಭಾರೀ ಬಜೆಟ್ ನ ಚಿತ್ರ ಇದಾಗಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಈ ಸಿನಿಮಾ ಏಕಕಾಲಕ್ಕೆ ರೆಡಿಯಾಗಲಿದೆ. ಅರ್ಜುನ್ ಜನ್ಯ ಬದಲಾಗಿ ಈ ಚಿತ್ರಕ್ಕೆ ಹ್ಯಾರೀಸ್ ಜೈರಾಜ್ ಎನ್ನುವವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅಧಿಕೃತವಾಗಿ ಚಿತ್ರತಂಡ ಮಾಹಿತಿ ಕೊಡದೇ ಇದ್ದರೂ, ಸುದೀಪ್ ಅವರ ಆಪ್ತರಿಂದಲೇ ಇವಿಷ್ಟು ಮಾಹಿತಿ ಹೊರ ಬಂದಿವೆ.

    ಸ್ವತಃ ಸುದೀಪ್ ಅವರೇ ಜೂನ್ 1ನೇ ತಾರೀಖಿನಂದು ಹೊಸ ಸಿನಿಮಾದ ಅಪ್ ಡೇಟ್ ನೀಡುವುದಾಗಿ ತಿಳಿಸಿದ್ದರು. ಹೊಸ ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡುವುದಾಗಿ ಘೋಷಿಸಿದ್ದರು. ಅದಕ್ಕೂ ಆರು ದಿನ ಮುಂಚೆಯೇ ಮೊನ್ನೆ ಆ ಸಿನಿಮಾದ ಸಣ್ಣ ಸುಳಿವು ಕೊಟ್ಟಿದ್ದರು. ಆ ಸಿನಿಮಾದ ನಿರ್ಮಾಪಕರು ಯಾರು ಎಂದು ಸಣ್ಣದೊಂದು ಝಲಕ್ ರಿಲೀಸ್ ಮಾಡುವ ಮೂಲಕ ತಿಳಿಸಿದ್ದರು.

    ಸುದೀಪ್ ಅವರ ಮುಂದಿನ ಸಿನಿಮಾವನ್ನು ತಮಿಳು (Tamil) ನಿರ್ಮಾಣ ಸಂಸ್ಥೆಯೊಂದು ನಿರ್ಮಾಣ ಮಾಡುತ್ತಿದ್ದು, ಸುದೀಪ್ ಟೀಸರ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಣ್ಣದೊಂದು ವಿಡಿಯೋ ರಿಲೀಸ್ ಮಾಡಿತ್ತು ತಮಿಳಿನ ಕಲೈಪುಲಿ ಎಸ್ ತನು (Kalaipuli S Tanu) ನಿರ್ಮಾಣ ಸಂಸ್ಥೆ. ಕಿಚ್ಚ ಕಾರಿನಿಂದ ಇಳಿಯುವುದರ ಜೊತೆಗೆ ಮೇಕಪ್ ನಲ್ಲಿ ಭಾಗಿಯಾಗುವ ಸಣ್ಣದೊಂದು ವಿಡಿಯೋ ಬಿಡುಗಡೆ ಮಾಡಿದ್ದರು. ಸುದೀಪ್ ಅವರ ಗೆಟಪ್ ಜಭರದಸ್ತಾಗಿ ಇರಲಿದೆ ಎನ್ನುವ ಸುಳಿವನ್ನೂ ನೀಡಿದ್ದರು.

     

    ಈ ಹಿಂದೆಯಷ್ಟೇ ತಾವು ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಕುರಿತು ಕಿಚ್ಚ ಸುದೀಪ್ (Sudeep) ಬಹಿರಂಗ ಪಡಿಸಿದ್ದರು. ಮೂರು ಸಿನಿಮಾಗಳಲ್ಲಿ ಮೊದಲು ಯಾವುದು ಶುರುವಾಗಲಿದೆ ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ‘ಬಿಲ್ಲ ರಂಗ ಬಾಷಾ’ (Billa Ranga Basha) ಮೊದಲು ಮೂಡಿ ಬರಲಿದೆ ಎನ್ನಲಾಗಿತ್ತು. ಆದರೆ, ಅದಕ್ಕೂ ಮುನ್ನ ವಿಜಯ್ ನಿರ್ದೇಶನದ ಚಿತ್ರ ತಯಾರಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ.

  • ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಅಂಗಡಿಯಲ್ಲಿ ಟೀ ಕುಡಿದ ಕಿಚ್ಚ ಸುದೀಪ್‌

    ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಅಂಗಡಿಯಲ್ಲಿ ಟೀ ಕುಡಿದ ಕಿಚ್ಚ ಸುದೀಪ್‌

    – ದೇವದುರ್ಗದಲ್ಲಿ ರೋಡ್ ಶೋ; ಶಿವನಗೌಡ ನಾಯಕ್‌ ಪರ ಪ್ರಚಾರ

    ರಾಯಚೂರು: ನಟ ಕಿಚ್ಚ ಸುದೀಪ್ (Kichcha Sudeepa) ಜಿಲ್ಲೆಯ ದೇವದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ (BJP Candidate) ಶಿವನಗೌಡ ನಾಯಕ್ ಪರ ರೋಡ್ ಶೋ (Sudeep RoadShow) ಮೂಲಕ ಮತಪ್ರಚಾರ ನಡೆಸಿದರು.

    ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಭಾಷಣ ಮಾಡಿದ ಸುದೀಪ್ ನಮ್ಮ ಹಿರಿಯ ಸಹೋದರ ಶಿವನಗೌಡ ನಾಯಕ್ ರನ್ನ 4 ಸಾರಿ ಗೆಲ್ಲಿಸಿದ್ದಿರಾ ಅಂದ್ರೆ, ಅವರು ಒಳ್ಳೆಯವರು ಅಂತಾ ಅರ್ಥ. ಜನರೂ ಬುದ್ಧಿವಂತರಾಗಿದ್ದಾರೆ ಎಂದರ್ಥ. ಎಜುಕೇಶನ್ ಲೇಔಟ್ ಮಾಡಿ ಶಿವನಗೌಡ ಸಕ್ಸಸ್ ಮಾಡಿದ್ದಾರೆ. ಅವರನ್ನ ಮತ್ತೊಮ್ಮೆ ಗೆಲ್ಲಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಕಿರುಕುಳ ನೀಡುವ ಬಜರಂಗದಳಕ್ಕೂ ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ: ಎಚ್ ವಿಶ್ವನಾಥ್

    ಶಿವನಗೌಡ ನಾಯಕ್ ಬೇರೆ ಯಾರೂ ಅಲ್ಲ ಅವ ನಮ್ಮವ. ಶಿವನಗೌಡ ಅವ್ರಿಗೆ ವೋಟ್ ಹಾಕೋದು ಒಂದೇ ನನ್ನ ಗೆಲ್ಲಿಸೋದು ಒಂದೇ. ನಾನು ಪ್ರಚಾರ ಮಾಡ್ತಿರಬಹುದು. ಆದ್ರೆ ನಾನೋಬ್ಬ ಸಾಮಾನ್ಯ ಕಲಾವಿದ. ಶಿವನಗೌಡ ಅವರು ಮಾಡಿದ್ದು ಸರಿ ಅನ್ನಿಸಿದ್ರೆ, ಅವರು ನಿಮ್ಮವರು ಅನಿಸಿಕೊಂಡಿದ್ರೆ ಉಳಿಸಿಕೊಳ್ಳಿ. 10ನೇ ತಾರೀಕು ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಅಮಿತ್ ಶಾ ತಮ್ಮ ಮಗನನ್ನು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಲಿ – ಕಾಂಗ್ರೆಸ್ ಕಿಡಿ

    ಇನ್ನೂ ರೋಡ್ ಶೋ ಮಧ್ಯೆ ರಸ್ತೆ ಬದಿಯ ಸಣ್ಣ ಚಹಾ ಅಂಗಡಿಯಲ್ಲಿ ಚಹಾ ಕುಡಿದು ಕಿಚ್ಚ ಸುದೀಪ್ ಚೆನ್ನಾಗಿದೆ ಅಂತಾ ಖುಷಿ ವ್ಯಕ್ತಪಡಿಸಿದರು. ದೇವದುರ್ಗದ ಬಸವೇಶ್ವರ ವೃತ್ತದಲ್ಲಿ ರೋಡ್ ಶೋ ವೇಳೆ ಚಹಾದಂಗಡಿಯ ಅಭಿಮಾನಿ ಕಿಚ್ಚನಿಗೆ ಟೀ ತಂದು ಕೊಟ್ಟರು. ಟೀ ಸೂಪರ್ ಅಂತಾ ಸನ್ನೆ ಮಾಡುತ್ತಾ ಕಿಚ್ಚ ಖುಷಿ ವ್ಯಕ್ತಪಡಿಸಿದರು. ಟೀ ಕುಡಿದು ಮತ್ತೆ ಪ್ರಚಾರದಲ್ಲಿ ತೊಡಗಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

  • ಮದಕರಿ ಡೈಲಾಗ್ ಹೇಳಿದ್ರೆ ಜಾತೀಯತೆ ಮಾಡ್ತೀನಿ ಅಂತಾರೆ ಏನ್ಮಾಡ್ಲಿ – ಕಿಚ್ಚ ಸುದೀಪ್

    ಮದಕರಿ ಡೈಲಾಗ್ ಹೇಳಿದ್ರೆ ಜಾತೀಯತೆ ಮಾಡ್ತೀನಿ ಅಂತಾರೆ ಏನ್ಮಾಡ್ಲಿ – ಕಿಚ್ಚ ಸುದೀಪ್

    ಬಾಗಲಕೋಟೆ: ಕಳೆದ ಕೆಲವು ದಿನಗಳಿಂದ ರಾಜಕೀಯ ಅಖಾಡಕ್ಕಿಳಿದಿರುವ ನಟ ಕಿಚ್ಚ ಸುದೀಪ್ (Kiccha Sudeep) ಸ್ಟಾರ್ ಪ್ರಚಾರಕರಾಗಿ ಬಿಜೆಪಿ ಅಭ್ಯರ್ಥಿಗಳ (BJP Candidates) ಪರ ಪ್ರಚಾರ ನಡೆಸುತ್ತಿದ್ದಾರೆ.

    ಮಂಗಳವಾರ ಬಾಗಲಕೋಟೆ (Bagalkot) ಜಿಲ್ಲೆಯ ಜಮಖಂಡಿ ನಗರ ಹಾಗೂ ಬೀಳಗಿ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಿದರು. ಜಮಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಗುಡಗುಂಟಿ ಪರ, ರೋಡ್ ಶೋ ಆರಂಭಿಸಿದ ಕಿಚ್ಚ ಸುದೀಪ್, ನಗರದ ಕಟ್ಟೆ ಕೆರೆಯಿಂದ, ದೇಸಾಯಿ ಸರ್ಖ್ ವರೆಗೆ ರೋಡ್ ಶೋ ನಡೆಸಿದರು. ಬೀಳಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಪರವಾಗಿಯೂ ಪ್ರಚಾರ ನಡೆಸಿದರು. ಇದನ್ನೂ ಓದಿ: ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಭಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ‌ ಹರಿಪ್ರಸಾದ್

    ಕಿಚ್ಚ ಸುದೀಪ್ ಹೋದಲೆಲ್ಲಾ ರಸ್ತೆಯುದ್ದಕ್ಕೂ ಅಭಿಮಾನಿಗಳು ಕಿಕ್ಕಿರಿದಿದ್ದರು. ಬೀಳಗಿ ಕ್ಷೇತ್ರದ ಅಂಬೇಡ್ಕರ್ ವೃತ್ತದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಅಭಿಮಾನಿಗಳ ಒತ್ತಾಯದ ಮೇರೆಗೆ `ಸಾವು ಅಂದ್ರೆ ಭಯಪಡೋದಕ್ಕೆ ಗಲ್‌ಗಲ್ಲಿ ತಿರ್ಗೋ ಕಂತ್ರಿ, ಕಜ್ಜಿ ಗೂಂಡಾ ರೌಡಿ ಅನ್ಕೊಂಡ್ರೆನೋ ನನ್ನನ್ನ, ಮದಕರಿ…. ವೀರ ಮದಕರಿ…’ ಚಿತ್ರದ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಇದನ್ನೂ ಓದಿ: ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಭಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ‌ ಹರಿಪ್ರಸಾದ್

    ಇದೇ ವೇಳೆ ಮಾತನಾಡಿ, ನೀವು ಮದಕರಿ ಡೈಲಾಗ್ ಕೇಳ್ತೀರಾ ಸರ್, ಆದ್ರೆ ನಾನು ಜಾತಿಯತೆ ಮಾಡ್ತೀನಿ ಅಂತಾರೆ, ಆದ್ರೆ ನಾವು ಸಿನೆಮಾರಂಗದವ್ರು. ಆದ್ರೆ ಮೂರು ಬಾರಿ ಗೆದ್ದಿರುವ ನಿರಾಣಿಯವರ ಮೇಲೆ ಜನರ ಪ್ರೀತಿ ಸಾಕಷ್ಟಿದೆ. 75 ಸಾವಿರ ಜನರಿಗೆ ನಿರಾಣಿಯವರು ಉದ್ಯೋಗ ನೀಡಿದ್ದಾರೆ. ಈ ಬಾರಿಯೂ ಬಹುಮತದಿಂದ ನಿರಾಣಿಯವರನ್ನ ಗೆಲ್ಲಿಸಿ ಅಂತಾ ಮನವಿ ಮಾಡಿದರು.

  • ಅಭಿಮಾನಿ ಬಳಗವೇ ನಮ್ಮ ಆನೆ ಬಲ – ಬಿಜೆಪಿ ಅಭ್ಯರ್ಥಿ ಗೆಲ್ಲಿಸುವಂತೆ ಕಿಚ್ಚ ಸುದೀಪ್‌ ಮನವಿ

    ಅಭಿಮಾನಿ ಬಳಗವೇ ನಮ್ಮ ಆನೆ ಬಲ – ಬಿಜೆಪಿ ಅಭ್ಯರ್ಥಿ ಗೆಲ್ಲಿಸುವಂತೆ ಕಿಚ್ಚ ಸುದೀಪ್‌ ಮನವಿ

    ಬೆಳಗಾವಿ: ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಪರ ನಟ ಕಿಚ್ಚ ಸುದೀಪ್‌ (Kichcha Sudeepa) ಅದ್ಧೂರಿ ಪ್ರಚಾರ ನಡೆಸಿದರು. ನಟ ಕಿಚ್ಚ ಸುದೀಪ್‌ ನೋಡಲು ಅಭಿಮಾನಿಗಳು ರಸ್ತೆಯುದ್ಧಕ್ಕೂ ಮುಗಿಬೀಳುತ್ತಿದ್ದರು.  ಕಿತ್ತೂರು ಕ್ಷೇತ್ರದ (Kittur Constituency) ನೇಸರಗಿ ಗ್ರಾಮದಲ್ಲಿ ರೋಡ್‌ಶೋ (Sudeepa RoadShow) ಬಳಿಕ ಮಾತನಾಡಿದ ಕಿಚ್ಚ ಸುದೀಪ್‌, ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಪ್ರಚಾರಕ್ಕೆ ಬಂದಿರುವುದು ನನಗೂ ಖುಷಿಯಿದೆ. ಸಲವೂ ಅವರಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

    ಕಿತ್ತೂರು ರಾಣಿ ಚೆನ್ನಮ್ಮನ ಊರಿಗೆ ಪ್ರೀತಿಯಿಂದ ಸ್ವಾಗತಿಸಿದ್ದಕ್ಕೆ ಥ್ಯಾಂಕ್ ಯೂ. ಜನರು, ಅಭಿಮಾನಿ ಬಳಗವೇ ನಮ್ಮ ಆನೆ ಬಲ. ನೀವು ಪ್ರೀತಿ ತೋರಿದ ರೀತಿ ನಾನು ಯಾವತ್ತೂ ಮರೆಯಲ್ಲ. ಕಿತ್ತೂರು ಅಭಿವೃದ್ದಿಯಲ್ಲಿ 5ನೇ ಸ್ಥಾನದಲ್ಲಿದೆ ಅಂದ್ರೆ ಅದು ಸುಮ್ನೆ ಅಲ್ಲ. ಅಭಿವೃದ್ಧಿ ಮಾಡಲು ಸಾಕಷ್ಟು ಅಡೆತಡೆಗಳು ಇರುತ್ತವೆ, ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಮಹಾಂತೇಶ ದೊಡ್ಡಗೌಡರ ಅವರ ಪ್ರಚಾರಕ್ಕೆ ಬಂದಿದ್ದು ನನಗೂ ಖುಷಿಯಿದೆ. ಈ ಸಲವೂ ಅವರಿಗೇ ಬೆಂಬಲಿಸಿ ಎಂದು ಕೋರಿದರು.

    ಇದೇ ವೇಳೆ ʻಗೆದ್ದೆ ಗೆಲ್ಲುವೇ ಒಂದು ದಿನ ಗೆಲ್ಲಲೇಬೇಕು ಒಳ್ಳೆತನʼಎನ್ನುವ ʻಸ್ವಾತಿಮುತ್ತುʼ ಚಿತ್ರದ ಗೀತೆಯ ಸಾಲನ್ನು ಹೇಳುತ್ತಾ ನಿಮ್ಮೆಲ್ಲರಲ್ಲೂ ಒಂದು ಒಳ್ಳೆತನವಿದೆ. ಆ ಒಳ್ಳೆತನ ಸದಾ ಗೆಲ್ಲಲಿ ಎಂದು ನುಡಿದರು.

  • ತಮಿಳಿನ ನಟ ವಿಜಯ್ ಆಂಟೋನಿ ಚಿತ್ರಕ್ಕೆ ಕಿಚ್ಚನ ಬೆಂಬಲ

    ತಮಿಳಿನ ನಟ ವಿಜಯ್ ಆಂಟೋನಿ ಚಿತ್ರಕ್ಕೆ ಕಿಚ್ಚನ ಬೆಂಬಲ

    ಮಿಳು ಚಿತ್ರರಂಗದ ಖ್ಯಾತ ನಟ – ಸಂಗೀತ ನಿರ್ದೇಶಕರು ಆಗಿರುವ ವಿಜಯ್ ಆಂಟೋನಿ (Vijay Antony) ಭಿಕ್ಷುಕ-2 (Pichaikkaran 2) ಸಿನಿಮಾ ಮೂಲಕ ನಿರ್ದೇಶನದ ಅಖಾಡಕ್ಕಿಳಿದಿರುವುದು ಗೊತ್ತೇ ಇದೆ. ಪಿಕೈಕ್ಕಾರನ್ ಸಿನಿಮಾದ ಸೀಕ್ವೆಲ್ ಆಗಿರುವ ಈ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗಿದೆ. ಕನ್ನಡದಲ್ಲಿ ಭಿಕ್ಷುಕ-2 ಎಂಬ ಟೈಟಲ್ ನಡಿ ಮೂಡಿ ಬರ್ತಿದ್ದು, ಈ ಸಿನಿಮಾದ ಕನ್ನಡದ ಟ್ರೇಲರ್ ನ್ನು ಕಿಚ್ಚ ಸುದೀಪ್ (Kiccha Sudeep) ಬಿಡುಗಡೆ ಮಾಡಿ ನೆಚ್ಚಿನ ಗೆಳೆಯ ವಿಜಯ್ ಆಂಥೋನಿಗೆ ಶುಭ ಕೋರಿದ್ದಾರೆ.

    ಪಿಚೈಕ್ಕರನ್ ಮೊದಲ ಭಾಗ ಅಭೂತಪೂರ್ವ ಯಶಸ್ಸು ಕಂಡಿತ್ತು. ಈ ಚಿತ್ರ ವಿಜಯ್ ಅಂಥೋನಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಈಗ ಪಿಚೈಕ್ಕರನ್ ಸೀಕ್ವೆಲ್ ಮೂಲಕ ವಿಜಯ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ತಮ್ಮದೇ ವಿಜಯ್ ಆಂಟೋನಿ ಫಿಲ್ಮಂ ಕಾರ್ಪೊರೇಷನ್ ನಡಿ ಅವರೇ ನಿರ್ಮಿಸಿದ್ದು, ಪತ್ನಿ ಫಾತೀಮಾ ವಿಜಯ್ ಆಂಟೋನಿ ಭಿಕ್ಷುಕ-2 ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಲಂಕೆಯಲ್ಲಿ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ

     

    View this post on Instagram

     

    A post shared by Vijay Antony (@vijayantony)

    ಮಲೇಷ್ಯಾದಲ್ಲಿ ಭಿಕ್ಷುಕ-2 ಶೂಟಿಂಗ್ ನಡೆಯುತ್ತಿದ್ದ ವೇಳೆ ವಿಜಯ್ ಆಂಟೋನಿ ಗಂಭೀರ ಗಾಯಗೊಂಡಿದ್ದರು. ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಕೆ ಕಂಡಿರುವ ಅವರೀಗ ಪ್ರಮೋಷನ್ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಅದರ ಮೊದಲ ಭಾಗವಾಗಿ ಭಿಕ್ಷುಕ-2 ಟ್ರೇಲರ್ ರಿಲೀಸ್ ಆಗಿದೆ. ಖ್ಯಾತ ಉದ್ಯಮಿ ವಿಜಯ್ ಮೂರ್ತಿಯನ್ನು ಸತ್ಯ ಕೊಲೆ ಮಾಡ್ತಾನೆ. ಕೊಲೆ ನಂತರ ಮುಂದೇನಾಗುತ್ತದೆ ಎಂಬ ಒಂದಷ್ಟು ಟ್ವಿಸ್ಟ್ ಅಂಡ್ ಟರ್ನ್ ಅಂಶಗಳು ಟ್ರೇಲರ್ ನ ಹೈಲೆಟ್ಸ್.

    ವಿಜಯ್ ಆಂಟೋನಿ ನಿರ್ದೇಶನದ ಈ ಚಿತ್ರದಲ್ಲಿ ದೇವ್ ಗಿಲ್, ಹರೀಶ್ ಪೆರಾಡಿ, ಜಾನ್ ವಿಜಯ್, ರಾಧಾ ರವಿ, ಮನ್ಸೂರ್ ಅಲಿ ಖಾನ್, ವೈ ಜಿ ಮಹೇಂದ್ರನ್, ರಾಜಾ ಕೃಷ್ಣಮೂರ್ತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾವ್ಯ ಥಾಪರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ವಿಜಯ್ ಆಂಟೋನಿ ನಟನೆ ನಿರ್ದೇಶನದ ಜೊತೆಗೆ ಸಂಗೀತ, ಸಂಕಲನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮೇ 19 ರಂದು ಕನ್ನಡ ಸೇರಿ ಪಂಚ ಭಾಷೆಯಲ್ಲಿ ಭಿಕ್ಷುಕ-2 ರಿಲೀಸ್ ಆಗಲಿದೆ.

  • ಭಾವಿ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ‘ವಿಕ್ರಾಂತ್ ರೋಣ’ ನಟಿ

    ಭಾವಿ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ‘ವಿಕ್ರಾಂತ್ ರೋಣ’ ನಟಿ

    ‘ವಿಕ್ರಾಂತ್ ರೋಣ’ (Vikrant Rona) ನಟಿ ನೀತಾ ಅಶೋಕ್ (Neetha Ashok) ಅವರು ಎಂಗೇಜ್ ಆಗುವ ಮೂಲಕ ಪಡ್ಡೆ ಹುಡುಗರಿಗೆ ಬ್ಯಾಡ್ ನ್ಯೂಸ್ ಕೊಟ್ಟಿದ್ದರು. ಬಹುಕಾಲದ ಗೆಳೆಯ ಸತೀಶ್ (Satish) ಜೊತೆ ಎಂಗೇಜ್ ಆಗಿರುವ ನೀತಾ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾವಿ ಪತಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

    ‘ಯಶೋದೆ’, ‘ನಾ ನಿನ್ನ ಬಿಡಲಾರೆ’ ಸೀರಿಯಲ್ ಮೂಲಕ ಮೋಡಿ ಮಾಡಿದ ಉಡುಪಿ (Udupi) ಮೂಲದ ನಟಿ ನೀತಾ ಓದಿದ್ದು ಎಂಬಿಎ, ಆದರೆ ಅಚಾನಕ್ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ. ಬಳಿಕ ಕಿಚ್ಚ ಸುದೀಪ್ (Kiccha Sudeep), ನಿರೂಪ್ ಭಂಡಾರಿ ಜೊತೆ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಮಿಂಚುತ್ತಾರೆ.

     

    View this post on Instagram

     

    A post shared by Neetha Ashok (@neethaashok01)

    ಕಳೆದ ವರ್ಷ ಅಂತ್ಯದಲ್ಲಿ ಕುಟುಂಬಸ್ಥರು- ಆಪ್ತರ ಸಮ್ಮುಖದಲ್ಲಿ ನೀತಾ ಅವರು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ತನ್ನೂರಿನ ಕ್ಲಾಸ್‌ಮೇಟ್ ಸತೀಶ್ ಜೊತೆ ಪ್ರೇಮಾಂಕುರವಾಗಿ, ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ಸೀತಾ ಮಾತೆಯಾಗಿ ಬಂದ ಕೃತಿ ಸನೋನ್- ಫಸ್ಟ್ ಲುಕ್ ಔಟ್

     

    View this post on Instagram

     

    A post shared by Neetha Ashok (@neethaashok01)

    ಭಾವಿ ಪತಿ ಸತೀಶ್ ಜೊತೆಗಿನ ಎಂಗೇಜ್‌ಮೆಂಟ್ ಫೋಟೋ- ವೀಡಿಯೋವನ್ನ ನಟಿ ನೀತಾ ಹಂಚಿಕೊಂಡಿದ್ದಾರೆ. ಇಬ್ಬರೂ ಲೈಟ್ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ನೀತಾ ಜೋಡಿಗೆ ಫ್ಯಾನ್ಸ್‌ ಶುಭಹಾರೈಸುತ್ತಿದ್ದಾರೆ.