Tag: ಕಿಚ್ಚ ಸುದೀಪ್

  • Kiccha 46: ನಾನು ಮನುಷ್ಯನಲ್ಲ, ರಾಕ್ಷಸ- ಸುದೀಪ್‌ ಖಡಕ್‌ ಡೈಲಾಗ್

    Kiccha 46: ನಾನು ಮನುಷ್ಯನಲ್ಲ, ರಾಕ್ಷಸ- ಸುದೀಪ್‌ ಖಡಕ್‌ ಡೈಲಾಗ್

    ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ನಟನೆಯ 46ನೇ ಸಿನಿಮಾದ ಬಿಗ್ ಅಪ್‌ಡೇಟ್‌ವೊಂದು ಹೊರ ಬಿದ್ದಿದೆ. ಅದೆಷ್ಟೋ ತಿಂಗಳುಗಳಿಂದ ಕಿಚ್ಚನ ಮುಂದಿನ ಸಿನಿಮಾ ಬಗ್ಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದೆ. ರಗಡ್ ಲುಕ್, ಖಡಕ್ ಡೈಲಾಗ್ ಹೇಳುವ ಮೂಲಕ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಸಾರಥ್ಯದಲ್ಲಿ ಪ್ಯಾನ್‌ ಇಂಡಿಯಾದತ್ತ ಗಣೇಶ್ ಗೋಲ್ಡನ್ ಹೆಜ್ಜೆ

    ಸುದೀಪ್ ನಟನೆಯ 46ನೇ ಸಿನಿಮಾಗೆ ತಮಿಳಿನ ಯುವ ನಿರ್ದೇಶಕ ವಿಜಯ್ ಕಾರ್ತಿಕೇಯ (Vijay Karthikeya) ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ‘ವಿಕ್ರಾಂತ್ ರೋಣ’ ಸಿನಿಮಾದ ಸೂಪರ್ ಸಕ್ಸಸ್ ನಂತರ ಎಂದೂ ಕಾಣಿಸಿಕೊಂಡಿರದ ಹೊಸ ಅವತಾರದಲ್ಲಿ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಸದ್ಯ Kiccha 46 ಸಿನಿಮಾ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ.

    ದೊಡ್ಡ ಕಥೆದು ಚಿಕ್ಕ ಸಂದರ್ಭ ಹೇಳೋದಾ ಎಂದು ಹೇಳುವ ಡೈಲಾಗ್ ಮೂಲಕ ಕಿಚ್ಚ ಸುದೀಪ್ ರಾ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಒಬ್ಬನನ್ನ ಮುಗಿಸೋಕೆ ಅಷ್ಟು ಜನ ಹೋಗಿದ್ದಾರಾ. ಇನ್ನೂ ಅವನನ್ನ ಸಾಯಿಸಿಲ್ವ ಅನ್ನೋ ಕೆಡಿ ಖಡಕ್ ಮಾತಿಗೆ ಗನ್ ಹಿಡಿದು ಸುದೀಪ್ ರಗಡ್ ಆಗಿ ಎಂಟ್ರಿ ನೀಡಿದ್ದಾರೆ. ಯುದ್ಧ ನಾ ಹುಟ್ಟು ಹಾಕೋರನ್ನ ಕಂಡರೆ ಆಗಲ್ಲ. ಯುದ್ಧಕ್ಕೆ ಹೆದರಿಕೊಂಡು ಓಡಿಹೋಗೋರನ್ನ ಕಂಡರೂ ನನಗೆ ಆಗಲ್ಲ. ಅಖಾಡಕ್ಕೆ ಇಳಿದು ಎದುರಾಳಿಗಳ ಎದೆ ಬಗೆದು ರಕ್ತ ಚೆಲ್ಲಾಡಿ, ಆ ರಕ್ತ ಸುರಿಸಿಕೊಂಡು ಓಡಿ ಹೋಗೋದನ್ನ ನೋಡೋನು ನಾನು. ಇಳಿದ ಮೇಲೆ ದಯೆ, ಕ್ಷಮೆ, ಸಂಧಾನ ಇದ್ಯಾವುದು ಇರೋದಿಲ್ಲ ಎಂದು ಎದುರಾಳಿಗಳಿಗೆ ಸುದೀಪ್ ಖಡಕ್ ಡೈಲಾಗ್‌ನಿಂದ ವಾರ್ನಿಂಗ್ ನೀಡಿದ್ದಾರೆ. ಚಿತ್ರದ ಮೊದಲ ಟೀಸರ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಾನು ಮನುಷ್ಯನಲ್ಲ, ರಾಕ್ಷಸ ಎಂದು ಹೇಳುವ ಕಿಚ್ಚನ ಖಡಕ್ ಮಾತು ಅಭಿಮಾನಿಗಳ ಗಮನ ಸೆಳೆದಿದೆ.

    ಕಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ವಿ ಕ್ರಿಯೇಷನ್ಸ್’ ಜೊತೆ ಕಿಚ್ಚ ಸುದೀಪ್ ಕೈ ಜೋಡಿಸಿದ್ದಾರೆ. ಕಿಚ್ಚನ 46ನೇ ಚಿತ್ರಕ್ಕೆ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಕಬಾಲಿ, ತುಪಾಕಿ, ಅಸುರನ್, ಸಿನಿಮಾಗಳಂತಹ ಬಿಗ್ ಬಜೆಟ್ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಕಲೈಪುಲಿ ಎಸ್. ಧಾನು ಅವರು ಸುದೀಪ್ ಅವರ ಈ ಚಿತ್ರಕ್ಕೆ ಸಾಥ್ ನೀಡ್ತಿದ್ದಾರೆ.

    ಕಿಚ್ಚ ಸುದೀಪ್ ಸಿನಿಮಾಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಖುಷಿ ಪಡೋವಂತಹ ರಗಡ್ ಟೀಸರ್ ಸಿಕ್ಕಿದೆ. ಸುದೀಪ್ ರಣ ರಣ ರಕ್ತ ಸಿಕ್ತ ಅವತಾರ ನೋಡಿ ಕಿಚ್ಚ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Kiccha 46 ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್- ಸುದೀಪ್ ಫ್ಯಾನ್ಸ್‌ಗೆ ಇಲ್ಲಿದೆ ಗುಡ್ ನ್ಯೂಸ್

    Kiccha 46 ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್- ಸುದೀಪ್ ಫ್ಯಾನ್ಸ್‌ಗೆ ಇಲ್ಲಿದೆ ಗುಡ್ ನ್ಯೂಸ್

    ಸ್ಯಾಂಡಲ್‌ವುಡ್ ಬಾದಷಾ ಕಿಚ್ಚ ಸುದೀಪ್ ಅವರು ವಿಕ್ರಾಂತ್ ರೋಣ ಸಿನಿಮಾ, ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಣೆ ಅಂತಾ ಬ್ಯುಸಿಯಾಗಿದ್ರು. ವಿಕ್ರಾಂತ್ ರೋಣನಾಗಿ ಮಿಂಚಿದ ಮೇಲೆ ಕಿಚ್ಚ ಕೊಂಚ ಸೈಲೆಂಟ್ ಆಗಿದ್ರು. ಈಗ ಕಿಚ್ಚನ 46ನೇ ಸಿನಿಮಾದ ಅಪ್ಡೇಟ್ ಕೊಡುವ ಮೂಲಕ ಸುದೀಪ್ ಸುದ್ದಿ ಯಲ್ಲಿದ್ದಾರೆ. ಸುದೀಪ್ ಹೊಸ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಹಂಚಿಕೊಂಡಿದ್ದಾರೆ.

    ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ ಸಿನಿಮಾದ ಅದ್ದೂರಿ ಟೈಟಲ್ ಲಾಂಚ್ ನಂತರ ತಮ್ಮ ಸಿನಿಮಾ ಬಗ್ಗೆ ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಹಳ ದಿನಗಳ ಬಳಿಕ ಅವರು ಕಿಚ್ಚ 46ನೇ ಸಿನಿಮಾ ಕೆಲಸಗಳಿಗೆ ಚಾಲನೆ ನೀಡಿದರು. ಈಗ ಈ ಸಿನಿಮಾ ತಂಡದಿಂದ ಹೊಸ ಅಪ್​ಡೇಟ್​ ನೀಡಲಾಗಿದೆ. ಈ ಸಿನಿಮಾದ ಟೀಸರ್​ ರಿಲೀಸ್​ ದಿನಾಂಕವನ್ನು ಬಹಿರಂಗ ಮಾಡಲಾಗಿದೆ. ಜುಲೈ 2ರಂದು ಬೆಳಗ್ಗೆ 11.46ಕ್ಕೆ ‘ಕಿಚ್ಚ 46’ ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ಈಗಾಗಲೇ ತಿಳಿದಿರುವಂತೆ ಕಿಚ್ಚ ಸುದೀಪ್​ ಅವರು ಮೂರು ಸಿನಿಮಾಗಳಿಗೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಆ ಪೈಕಿ ‘ವಿ ಕ್ರಿಯೇಷನ್ಸ್​’ನ ಕಲೈಪುಲಿ ಎಸ್​. ಧಾನು ಅವರು ನಿರ್ಮಾಣ ಮಾಡುತ್ತಿರುವ ಸಿನಿಮಾ ಮೊದಲು ಸೆಟ್ಟೇರಿದೆ. ಕೆಲವೇ ದಿನಗಳ ಹಿಂದೆ ಅವರು ಪ್ರೋಮೋ ಶೂಟಿಂಗ್​ನಲ್ಲಿ ಭಾಗಿ ಆಗಿದ್ದರು. ಇದನ್ನೂ ಓದಿ: ಜನವರಿಯಲ್ಲಿ ಅರ್ಜುನ್ ಸರ್ಜಾ ಮಗಳ ಮದುವೆ: ಮಾವನ ಮನೆಯಿಂದ ಅಧಿಕೃತ ಘೋಷಣೆ

    ಕಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ವಿ ಕ್ರಿಯೇಷನ್ಸ್​’ ಜೊತೆ ಕಿಚ್ಚ ಸುದೀಪ್ ​ ಅವರು ಕೈ ಜೋಡಿಸಿದ್ದು, ಅದ್ದೂರಿ ಬಜೆಟ್​ನಲ್ಲಿ ‘ಕಿಚ್ಚ 46’ ಚಿತ್ರ ನಿರ್ಮಾಣ ಆಗುತ್ತಿದೆ. ‘ಕಬಾಲಿ’, ‘ತುಪಾಕಿ’, ‘ಅಸುರನ್​’ ಮುಂತಾದ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಕಲೈಪುಲಿ ಎಸ್​. ಧಾನು ಅವರಿಗೆ ಇದೆ. ಇದನ್ನೂ ಓದಿ: ಶ್ರುತಿ ಹಾಸನ್ ಸೈಕೋ, ಡ್ರಗ್ಸ್ ವ್ಯಸನಿ : ಟ್ವೀಟ್ ಮಾಡಿದ ಉಮೈರ್ ಸಂಧು

    ಒಂದು ವರ್ಷಗಳ ಕಾಯುವಿಕೆಯ ಬಳಿಕ ಸುದೀಪ್‌ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಹೊಸ ಅಪ್‌ಡೇಟ್‌ನ ಪ್ರಕಾರ, ಕಿಚ್ಚ-46 ನ ಮೊದಲ ಟೀಸರ್‌ ಇದೇ ಜುಲೈ 2 ರಂದು ಬೆಳಗ್ಗೆ 11.46ಕ್ಕೆ ರಿವೀಲ್‌ ಆಗಲಿದೆ. ಡಾರ್ಲಿಂಗ್ ಕೃಷ್ಣ, ನವೀನ್ ಶಂಕರ್, ಕಾಂತಾರ ನಟಿ ಸಪ್ತಮಿ ಗೌಡ, ವಾಸುಕಿ ವೈಭವ್, ಅನುಪ್ ಭಂಡಾರಿ, ವಿನಯ್ ರಾಜ್‌ಕುಮಾರ್ ಮತ್ತು ಡಾಲಿ ಧನಂಜಯ ಮುಂತಾದ ಕನ್ನಡದ ಪ್ರಮುಖ ಕಲಾವಿದರನ್ನು ಒಳಗೊಂಡ ವಿಶೇಷ ವೀಡಿಯೊದೊಂದಿಗೆ ಚಿತ್ರ ನಿರ್ಮಾಪಕರು ಈ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: Breaking – ಸ್ಯಾಂಡಲ್ ವುಡ್ ಹಿರಿಯ ನಟ, ನಿರ್ದೇಶಕ ಸಿ.ವಿ.ಶಿವಶಂಕರ್ ವಿಧಿವಶ

    ಒಂದ್ ಕಡೆ ಮನೆ ಮಗ ಸಂಚಿತ್ ಸಂಜೀವ್ ಚೊಚ್ಚಲ ನಿರ್ದೇಶನ, ನಟನೆಯ ಜಿಮ್ಮಿ ಸಿನಿಮಾಗೆ ಸುದೀಪ್ ಸಾಥ್ ನೀಡ್ತಿದ್ದಾರೆ. ತಮ್ಮ ಸಲಹೆಗಳ ಮೂಲಕ ಬೆಂಬಲಿಸುತ್ತಿದ್ದಾರೆ‌. ಇನ್ನೊಂದ್ ಕಡೆ ತಮ್ಮ Kiccha 46 ಮೂಲಕ ಗ್ರ್ಯಾಂಡ್ ಎಂಟ್ರಿ ಕೊಡಲು ಸುದೀಪ್ ರೆಡಿಯಾಗಿದ್ದಾರೆ. ಅಭಿಮಾನಿಗಳು ಕೂಡ ಕಿಚ್ಚನ ಅವತಾರ ನೋಡಲು ಕಾತರದಿಂದ ಕಾಯ್ತಿದ್ದಾರೆ. ಇದನ್ನೂ ಓದಿ: ಸ್ಟಾರ್ ನಟಿಯರಿಗೆ ಕೊಕ್ ನೀಡಿ, ಯುವ ನಟಿಗೆ ಅವಕಾಶ ಕೊಟ್ಟ ಗುಂಟೂರು ಖಾರಂ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಜಿಮ್ಮಿ ಚಿತ್ರದ ಕ್ಯಾರೆಕ್ಟರ್ ಟೀಸರ್ : ಸ್ಯಾಂಡಲ್ ವುಡ್ ನಿಂದ ಪ್ರಶಂಸೆ

    ಜಿಮ್ಮಿ ಚಿತ್ರದ ಕ್ಯಾರೆಕ್ಟರ್ ಟೀಸರ್ : ಸ್ಯಾಂಡಲ್ ವುಡ್ ನಿಂದ ಪ್ರಶಂಸೆ

    ಖ್ಯಾತ ನಟ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕರಾಗಿ ನಟಿಸಿ, ನಿರ್ದೇಶಿಸುತ್ತಿರುವ ಚಿತ್ರ ಜಿಮ್ಮಿ. ಇತ್ತೀಚೆಗೆ ಈ ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆಯಾಯಿತು. ಸುದೀಪ್ ಅವರ ತಂದೆ ಸಂಜೀವ್ ಹಾಗೂ ತಾಯಿ ಸರೋಜ ಸಂಜೀವ್ (ಸಂಚಿತ್ ಅಜ್ಜಿ-ತಾತಾ) ಟೀಸರ್ ಬಿಡುಗಡೆ ಮಾಡಿದರು.  ಕ್ರೇಜಿಸ್ಟಾರ್ ರವಿಚಂದ್ರನ್, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಶಾಸಕ ಮುನಿರತ್ನ, ಸಂಗೀತ ನಿರ್ದೇಶಕ ಗುರುಕಿರಣ್, ನಿರ್ದೇಶಕರಾದ ಆರ್. ಚಂದ್ರು, ಅನೂಪ್ ಭಂಡಾರಿ ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

    ಕ್ಯಾರೆಕ್ಟರ್ ಟೀಸರ್ ಗೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಸುದೀಪ್ ಪುತ್ರಿ ಸಾನ್ವಿ ಹಾಡಿದ್ದಾರೆ.  ವೆಲ್ಕಮ್ ಟು ಎಸ್ ಗ್ರೂಪ್ ಎಂದು ಮಾತು ಆರಂಭಿಸಿದ ಶಿವರಾಜಕುಮಾರ್,  ಎಸ್ ಅಂದರೆ ಸುಪೀರಿಯರ್ ಮತ್ತು ಸೂಪರ್ಬ್ ಅಂತ. ನಿಮ್ಮಲ್ಲಿ ನಿಮ್ಮ ತಾಯಿ ಮುಖ ಇದೆ. ಸಂಜೀವ್ ಅವರ ಗಾಂಭೀರ್ಯ ಮತ್ತು ಸುದೀಪ್ ಅವರ ಧ್ವನಿ ಇದೆ. ತಾಯಿ ಮುಖ ಬಂದರೆ ಲಕ್ ಜಾಸ್ತಿ. ತುಂಬಾ ಚೆನ್ನಾಗಿ ಕಾಣುತ್ತೀರಾ. ಮೇಕಿಂಗ್ ಚೆನ್ನಾಗಿದೆ. ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದೀರಾ ಒಳ್ಳೆಯದಾಗಲಿ ಎಂದು ಶುಭ  ಕೋರಿದರು ‌.  ಇದನ್ನೂ ಓದಿ:ಆಸ್ಕರ್ ನಗೆ ಬೀರಿದ್ದ ಬೊಮ್ಮನ್-ಬೆಳ್ಳಿ ಬದುಕು ಮೂರಾಬಟ್ಟೆ

    ಈ ಸಂದರ್ಭದಲ್ಲಿ ಮಾತನಾಡಿದ ಕ್ರೇಜಿಸ್ಟಾರ್ ರವಿಚಂದ್ರನ್, ಸಂಚಿತ್ ನಾಯಕನಾಗಿ ನಟಿಸುತ್ತಿದ್ದಾರೆ ಅಂದುಕೊಂಡಿದ್ದೆ. ನಿರ್ದೇಶನ ಮಾಡುತ್ತಿರುವುದು ಗೊತ್ತಿರಲಿಲ್ಲ. ಇಲ್ಲಿ ಬಂದ ಮೇಲೆ ಗೊತ್ತಾಯಿತು. ಮೊದಲು ಖುಷಿಯಾಗಿದ್ದು ಅವರ(ಸಂಚಿತ್) ಅಜ್ಜಿ ಮುಖದ ಮೇಲಿರುವ ನಗು. ಅವರಿಗಾಗುತ್ತಿರುವ ಸಂತೋಷ ನೋಡಿ ಖುಷಿ ಆಯ್ತು. ಸುದೀಪ್ ಎಲ್ಲದಕ್ಕೂ ಕರೆಯುತ್ತಾರೆ. ಬರುವುದಿಲ್ಲ ಅಂದರೂ ಬಿಡುವುದಿಲ್ಲ. ಅದು ಹೇಗೆ ಬರುವುದಿಲ್ಲ ಎನ್ನುತ್ತಾರೆ? ಆ ರೀತಿ ನನ್ನ ಅವರ ಸಂಬಂಧ. ಸುದೀಪ್ ಅವರ ತಂದೆಯವರದು ನಮ್ಮದು ಕೂಡ ಹಳೆಯ ಸಂಬಂಧ. ಟ್ರೈಲರ್ ನೋಡಿದ ತಕ್ಷಣ ವೈಬ್ರೇಷನ್ ಇದೆ.  ನೀವು ತೆರೆಯ ಮೇಲೆ ಚೆನ್ನಾಗಿ ಕಾಣುತ್ತೀರಾ. ಸುದೀಪ್ ನೋಡಿದ ಹಾಗೆ ಅನಿಸುತ್ತದೆ. ವಾಸುಕಿ ವೈಭವ್ ತಮ್ಮ ಜಾನರ್ ಬದಲಾಯಿಸಿದ್ದಾರೆ. ಈ ಬಾರಿ ಬೇರೆ ತರಹ ಸಂಗೀತ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

    ನನಗೆ ಶಿವರಾಜಕುಮಾರ್ ಹಾಗೂ ರವಿಚಂದ್ರನ್ ಅವರು ಸ್ಪೂರ್ತಿ. ಅವರಿಂದಲೇ ನಮ್ಮ ಸಂಚಿತ್ ನನ್ನು ಚಿತ್ರರಂಗಕ್ಕೆ ಪರಿಚಯಿಸುವ ಆಸೆಯಿತ್ತು. ಅದು ಇಂದು ಈಡೇರಿದೆ. ಹಾಗಾಗಿ ಅವರಿಬ್ಬರಿಗೂ ವಿಶೇಷ ಧನ್ಯವಾದ. ಅನೇಕ ಹಿರಿಯರು ಕನ್ನಡ ಚಿತ್ರರಂಗದಲ್ಲಿ ಭದ್ರಕೋಟೆ ಕಟ್ಟಿದ್ದಾರೆ.  ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಸಂಚಿತ್ ನಂತಹ ಯುವಕರದು ಎಂದು ಕಿಚ್ಚ ಸುದೀಪ್ ಹೇಳಿದರು.

    ರವಿಚಂದ್ರನ್ ಹಾಗೂ ಶಿವರಾಜಕುಮಾರ್ ಅವರಿಗೆ ನನ್ನ ಧನ್ಯವಾದ. ಸುದೀಪ್ ಮಾವ ಹಾಗೂ ಪ್ರಿಯ ಅತ್ತೆ ಅವರ ಪ್ರೋತ್ಸಾಹಕ್ಕೆ ನಾನು ಚಿರ ಋಣಿ. ನಿರ್ಮಾಪಕರಾದ ಜಿ.ಮನೋಹರನ್, ಕೆ.ಪಿ.ಶ್ರೀಕಾಂತ್ ಹಾಗೂ ಪ್ರಿಯಾ ಸುದೀಪ್ ಅವರು ನನ್ನ‌ ಮೇಲೆ ಭರವಸೆಯಿಟ್ಟು ನಿರ್ಮಾಣ ಮಾಡುತ್ತಿದ್ದಾರೆ. ಅವರಿಗೂ ವಿಶೇಷ ಧನ್ಯವಾದ. ಆಗಸ್ಟ್ ನಲ್ಲಿ ಚಿತ್ರೀಕರಣ ಆರಂಭಿಸುತ್ತಿದ್ದೇವೆ‌. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚು ಮಾಹಿತಿ ನೀಡುವುದಾಗಿ ನಾಯಕ ಹಾಗೂ ನಿರ್ದೇಶಕ ಸಂಚಿತ್ ಸಂಜೀವ್ ತಿಳಿಸಿದರು. ಲಹರಿ ವೇಲು, ಕೆ.ಪಿ.ಶ್ರೀಕಾಂತ್,  ಪ್ರಿಯಾ ಸುದೀಪ್, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಚಿತ್ರದ ಕುರಿತು ಮಾತನಾಡಿದರು.  ಸಾನ್ವಿ ಸುದೀಪ್ ಜಿಮ್ಮಿ ಚಿತ್ರದ ಹಾಡು ಹಾಡಿದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಅಳಿಯನ ಚಿತ್ರಕ್ಕೆ ‘ಜಿಮ್ಮಿ’ ಟೈಟಲ್ ಕೊಟ್ಟವರ ಹೆಸರು ಬಹಿರಂಗ ಪಡಿಸಿದ ಕಿಚ್ಚ

    ಅಳಿಯನ ಚಿತ್ರಕ್ಕೆ ‘ಜಿಮ್ಮಿ’ ಟೈಟಲ್ ಕೊಟ್ಟವರ ಹೆಸರು ಬಹಿರಂಗ ಪಡಿಸಿದ ಕಿಚ್ಚ

    ಕಿಚ್ಚ ಸುದೀಪ್ ಅವರ ಸಹೋದರಿ ಮಗ ಸಂಚಿತ್ ಸಂಜೀವ್ (Sanchit Sanjeev)  ಅವರ ಹೊಸ ಸಿನಿಮಾದ ಟೈಟಲ್ (Title) ಲಾಂಚ್ ಕಾರ್ಯಕ್ರಮ ನಿನ್ನೆಯಷ್ಟೇ ನಡೆದಿದೆ. ‘ಜಿಮ್ಮಿ’ ಎನ್ನುವ ಟೈಟಲ್ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಷ್ಟಕ್ಕೂ ಜಿಮ್ಮಿ ಎಂದರೇನು? ಇಂಥದ್ದೊಂದು ಟೈಟಲ್ ಇಡುವುದಕ್ಕೆ ಕಾರಣವೇನು? ಯಾರು ಈ ಟೈಟಲ್ ಅನ್ನು ಸಜೆಸ್ಟ್ ಮಾಡಿದ್ದು ಎನ್ನುವ ಕುರಿತು ಕುತೂಹಲ ಮೂಡಿತ್ತು. ಅದೆಲ್ಲದಕ್ಕೂ ಉತ್ತರ ನೀಡಿದ್ದಾರೆ ಕಿಚ್ಚ ಸುದೀಪ್.

    ಸಂಚಿತ್ ಸಂಜೀವ್ ನಿರ್ದೇಶಿಸಿ, ನಟಿಸುತ್ತಿರುವ ಜಿಮ್ಮಿ ಚಿತ್ರದ ಟೈಟಲ್ ಅನ್ನು ಕೊಟ್ಟಿದ್ದು ಖ್ಯಾತ ನಿರ್ದೇಶಕ ಅನೂಪ್ ಭಂಡಾರಿ (Anoop Bhandari) ಎನ್ನುವುದನ್ನು ಸ್ವತಃ ಸುದೀಪ್ ಅವರೇ ಬಹಿರಂಗ ಪಡಿಸಿದ್ದಾರೆ. ಕಥೆಗೂ, ಚಿತ್ರದ ಹೀರೋಗೂ ಮತ್ತು ಜಿಮ್ಮಿ ಟೈಟಲ್ ಗೂ ಒಂದಕ್ಕೊಂದು ಸಂಬಂಧವಿದೆಯಂತೆ. ಅದೇನು ಅನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್

    ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ಅಳಿಯನಿಗೆ ನಟ ಕಿಚ್ಚ ಸುದೀಪ್ (Kichcha Sudeep) ಕಿವಿಮಾತು ಹೇಳಿದ್ದಾರೆ. ಹಿರಿಯರು ನಡೆಸಿಕೊಂಡು ಬಂದ ದೊಡ್ಡ ಕೋಟೆ ಸ್ಯಾಂಡಲ್‍ವುಡ್ (Sandalwood) ಅದಕ್ಕೆ ನೀವು ಕಾಲಿಡುತ್ತಿದ್ದೀರಿ. ಬೆಳೆಸಲಾಗದಿದ್ರೂ ಕಾಪಾಡಿಕೊಂಡು ಹೋಗಿ ಎಂದು ಅಳಿಯ ಸಂಚಿತ್‌ಗೆ ಹೇಳಿದ್ದಾರೆ.

    ಸುದೀಪ್ ಸಹೋದರಿಯ ಮಗ ಸಂಚಿತ್ ಸಂಜೀವ್ ‘ಜಿಮ್ಮಿ’ (Jimmy) ಯಾಗಿ ಚಂದನವನದ ಅಡ್ಡಾಗೆ ಎಂಟ್ರಿ ಕೊಡುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಸಂಜೆ ಟೈಟಲ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ವೇಳೆ ಮಾತನಾಡಿದ ಸುದೀಪ್, ಚಿತ್ರರಂಗದ ನಿಮ್ಮ ಸಮಕಾಲೀನ ನಟರೆಲ್ಲರ ಜೊತೆ ಚೆನ್ನಾಗಿರಿ, ಸ್ನೇಹ ಬೆಳೆಸಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದಾರೆ.

    ಜಿಮ್ಮಿ ಚಿತ್ರದಲ್ಲಿ ಪುತ್ರಿ ಸಾನ್ವಿ ಹಿನ್ನೆಲೆ ಗಾಯನ ಮಾಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಿಚ್ಚ, ಮಗಳು ಹಾಡಿದ್ದು ಖುಷಿಯಾಯ್ತು. ನನ್ನ ಮಗಳು ಚೆನ್ನಾಗಿ ಹಾಡ್ತಾಳೆ ಅಂತ ಗೊತ್ತಿತ್ತು. ಇಷ್ಟು ಚೆನ್ನಾಗಿ ಅಂತ ಇವತ್ತೇ ಗೊತ್ತಾಗಿದ್ದು. ವಾಸುಕಿ ವೈಭವ್ ಧ್ವನಿಯನ್ನ ಇನ್ನೂ ತಿದ್ದಿ ಇಂಪಾಗಿ ಹಾಡುವಂತಾಯ್ತು ಎಂದರು.

     

    ಇದೇ ವೇಳೆ ನಟ ಸಂಚಿತ್ ಸಂಜೀವ್ ಮಾತನಾಡಿ, ಮಾತು ಬರ್ತಿಲ್ಲ. ಒಂದ್ಕಡೆ ಭಯ, ನರ್ವಸ್ ಇದೆ. ಹಾಗೆಯೇ ಎಕ್ಸೈಟ್ಮೆಂಟ್ ಕೂಡ ಇದೆ. ಒಂದು ಮಾತು ಹೇಳಬೇಕಂದರೆ ನಿಮ್ಮ ನಂಬಿಕೆ ಉಳಿಸಿಕೊಳ್ತೀನಿ. ಸುದೀಪ್ ಮಾಮರಿಂದ ಬಹಳ ಕಲಿತಿದ್ದೇನೆ. ಅವರ ಶ್ರಮ, ಪ್ರೀತಿ ನೋಡಿದ್ದೀನಿ. ಏನೇ ಮಾಡಿದ್ರೂ 100% ಎಫರ್ಟ್ ಹಾಕಬೇಕು ಅನ್ನೋದನ್ನು ಮಾಮ ಹೇಳುತ್ತಿರುತ್ತಾರೆ. ಜಿಮ್ಮಿ ಯಾರಿಗೂ ಇಲ್ಲ ಕಮ್ಮಿ ಎಂದು ಹೇಳಿದರು.

  • ಬೆಳೆಸಲಾಗದಿದ್ರೂ ಕಾಪಾಡಿಕೊಂಡು ಹೋಗಿ- ಚಂದನವನಕ್ಕೆ ಕಾಲಿಟ್ಟ ಅಳಿಯನಿಗೆ ಸುದೀಪ್ ಕಿವಿಮಾತು

    ಬೆಳೆಸಲಾಗದಿದ್ರೂ ಕಾಪಾಡಿಕೊಂಡು ಹೋಗಿ- ಚಂದನವನಕ್ಕೆ ಕಾಲಿಟ್ಟ ಅಳಿಯನಿಗೆ ಸುದೀಪ್ ಕಿವಿಮಾತು

    ನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ಅಳಿಯನಿಗೆ ನಟ ಕಿಚ್ಚ ಸುದೀಪ್ (Kichcha Sudeep) ಕಿವಿಮಾತು ಹೇಳಿದ್ದಾರೆ. ಹಿರಿಯರು ನಡೆಸಿಕೊಂಡು ಬಂದ ದೊಡ್ಡ ಕೋಟೆ ಸ್ಯಾಂಡಲ್‍ವುಡ್ (Sandalwood) ಅದಕ್ಕೆ ನೀವು ಕಾಲಿಡುತ್ತಿದ್ದೀರಿ. ಬೆಳೆಸಲಾಗದಿದ್ರೂ ಕಾಪಾಡಿಕೊಂಡು ಹೋಗಿ ಎಂದು ಅಳಿಯ ಸಂಚಿತ್‌ಗೆ ಹೇಳಿದ್ದಾರೆ.

    ಸುದೀಪ್ ಸಹೋದರಿಯ ಮಗ ಸಂಚಿತ್ ಸಂಜೀವ್ ‘ಜಿಮ್ಮಿ’ (Jimmy) ಯಾಗಿ ಚಂದನವನದ ಅಡ್ಡಾಗೆ ಎಂಟ್ರಿ ಕೊಡುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಸಂಜೆ ಟೈಟಲ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಈ ವೇಳೆ ಮಾತನಾಡಿದ ಸುದೀಪ್, ಚಿತ್ರರಂಗದ ನಿಮ್ಮ ಸಮಕಾಲೀನ ನಟರೆಲ್ಲರ ಜೊತೆ ಚೆನ್ನಾಗಿರಿ, ಸ್ನೇಹ ಬೆಳೆಸಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದಾರೆ.

    ಜಿಮ್ಮಿ ಚಿತ್ರದಲ್ಲಿ ಪುತ್ರಿ ಸಾನ್ವಿ ಹಿನ್ನೆಲೆ ಗಾಯನ ಮಾಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಿಚ್ಚ, ಮಗಳು ಹಾಡಿದ್ದು ಖುಷಿಯಾಯ್ತು. ನನ್ನ ಮಗಳು ಚೆನ್ನಾಗಿ ಹಾಡ್ತಾಳೆ ಅಂತ ಗೊತ್ತಿತ್ತು. ಇಷ್ಟು ಚೆನ್ನಾಗಿ ಅಂತ ಇವತ್ತೇ ಗೊತ್ತಾಗಿದ್ದು. ವಾಸುಕಿ ವೈಭವ್ ಧ್ವನಿಯನ್ನ ಇನ್ನೂ ತಿದ್ದಿ ಇಂಪಾಗಿ ಹಾಡುವಂತಾಯ್ತು ಎಂದರು. ಇದನ್ನೂ ಓದಿ: ಕಿಚ್ಚ ಸುದೀಪ್ ಕುಟುಂಬದಿಂದ ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಸ್ಟಾರ್ ಎಂಟ್ರಿ

    ಇದೇ ವೇಳೆ ನಟ ಸಂಚಿತ್ ಸಂಜೀವ್ ಮಾತನಾಡಿ, ಮಾತು ಬರ್ತಿಲ್ಲ. ಒಂದ್ಕಡೆ ಭಯ, ನರ್ವಸ್ ಇದೆ. ಹಾಗೆಯೇ ಎಕ್ಸೈಟ್ಮೆಂಟ್ ಕೂಡ ಇದೆ. ಒಂದು ಮಾತು ಹೇಳಬೇಕಂದರೆ ನಿಮ್ಮ ನಂಬಿಕೆ ಉಳಿಸಿಕೊಳ್ತೀನಿ. ಸುದೀಪ್ ಮಾಮರಿಂದ ಬಹಳ ಕಲಿತಿದ್ದೇನೆ. ಅವರ ಶ್ರಮ, ಪ್ರೀತಿ ನೋಡಿದ್ದೀನಿ. ಏನೇ ಮಾಡಿದ್ರೂ 100% ಎಫರ್ಟ್ ಹಾಕಬೇಕು ಅನ್ನೋದನ್ನು ಮಾಮ ಹೇಳುತ್ತಿರುತ್ತಾರೆ. ಜಿಮ್ಮಿ ಯಾರಿಗೂ ಇಲ್ಲ ಕಮ್ಮಿ ಎಂದು ಹೇಳಿದರು.

  • ಕಿಚ್ಚ ಸುದೀಪ್ ಕುಟುಂಬದಿಂದ ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ನಟನ ಎಂಟ್ರಿ

    ಕಿಚ್ಚ ಸುದೀಪ್ ಕುಟುಂಬದಿಂದ ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ನಟನ ಎಂಟ್ರಿ

    ಸ್ಯಾಂಡಲ್‌ವುಡ್‌ ಸ್ಟಾರ್ ನಟ ಕಿಚ್ಚ ಸುದೀಪ್ (Kichacha Sudeep) ಅವರ ಕುಟುಂಬದಿಂದ ಮತ್ತೊಬ್ಬ ಪ್ರತಿಭೆಯ ಎಂಟ್ರಿಯಾಗಿದೆ. ‘ಜಿಮ್ಮಿʼ (Jimmy)ಯಾಗಿ ಸಂಚಿತ್ ಸಂಜೀವ್ ಚಂದನವನದ ಅಡ್ಡಾಗೆ ಎಂಟ್ರಿ ಕೊಡ್ತಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಸಂಜೆ ಟೈಟಲ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.

    ಕಿಚ್ಚ ಸುದೀಪ್ ಸಹೋದರಿ ಮಗ ಸಂಚಿತ್ ಸಂಜೀವ್ (Sanchit Sanjeev) ಅವರು ನಟನಾಗಿ ಮಿಂಚಬೇಕು ಎಂಬ ಕನಸನ್ನ ಕಟ್ಟಿಕೊಂಡು ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಡುತ್ತಿದ್ದಾರೆ. ಸಂಚಿತ್ ಚೊಚ್ಚಲ ಸಿನಿಮಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಿಚ್ಚ ಸುದೀಪ್, ಶಿವಣ್ಣ ಹಾಗೂ ರವಿಚಂದ್ರನ್ ಭಾಗಿಯಾಗಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಹಾಗೂ ಶಾಸಕ ಮುನಿರತ್ನ ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್

    ಸಂಚಿತ್ ನಟನೆ, ನಿರ್ದೇಶನ ಮೊದಲ ಸಿನಿಮಾಗೆ ಪ್ರಿಯಾ ಸುದೀಪ್ (Priya Sudeep), ಲಹರಿ ಸಂಸ್ಥೆ (Lahari) ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಾಣ ಮಾಡ್ತಿದ್ದಾರೆ. ಸಕಲ ತಯಾರಿ ಮಾಡಿಕೊಂಡೆ ಮಾವನ ದಾರಿಯಲ್ಲೇ ಸಂಚಿತ್ ಸಿನಿ ದುನಿಯಾಗೆ ಪಾದಾರ್ಪಣೆ ಮಾಡ್ತಿದ್ದಾರೆ. ಮತ್ತೊಂದು ವಿಶೇಷ ಅಂದರೆ ಸಂಚಿತ್ ಲಾಂಚಿಂಗ್ ‘ಜಿಮ್ಮಿ’ ಚಿತ್ರದಲ್ಲಿ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಹಿನ್ನೆಲೆ ಗಾಯನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ‘ಜಿಮ್ಮಿ’ ಚಿತ್ರದ ಟೈಟಲ್ ಲಾಂಚ್ ವೇಳೆ ಲೈವ್ ಪರ್ಫಾಮೆನ್ಸ್ ನೀಡಿ ಸಾನ್ವಿ ಮೆಚ್ಚುಗೆ ಗಳಿಸಿದರು. ವಾಸುಕಿ ವೈಭವ್ ಸಂಗೀತ ಸಂಯೋಜನೆಯಲ್ಲಿ ಸಾನ್ವಿ ಹಿನ್ನೆಲೆ ಗಾಯನ ಮಾಡಿದರು.

    ಜಿಮ್ಮಿ ಇದೊಂದು ಕ್ರೈಂ-ಡ್ರಾಮಾ ಕಥೆಯಾಗಿದ್ದು, ತಂದೆ ಮಗನ ಸೆಂಟಿಮೆಂಟ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಸುದೀಪ್ ಸಲಹೆಯಂತೆ ಸಂಚಿತ್ ತಯಾರಿ ಮಾಡಿಕೊಂಡಿದ್ದು, ಬಹುತೇಕ ಹೊಸಬರೇ ಕೂಡಿಕೊಂಡಿರುವ ಚಿತ್ರತಂಡ ಇದಾಗಿದೆ. ಒಟ್ಟಿನಲ್ಲಿ ಸುದೀಪ್ ಕುಟುಂಬದಿಂದ ಮತ್ತೊಬ್ಬ ನಟನ ಎಂಟ್ರಿಯಾಗುತ್ತಿರೋದು ಕಿಚ್ಚ ಫ್ಯಾನ್ಸ್ ಖುಷಿ ಕೊಟ್ಟಿದೆ.

  • ಇಂದು ಕಿಚ್ಚ ಸುದೀಪ್ ಕುಟುಂಬದ ಕುಡಿ ಸಂಚಿತ್ ನಟನೆಯ ಟೀಸರ್ ರಿಲೀಸ್

    ಇಂದು ಕಿಚ್ಚ ಸುದೀಪ್ ಕುಟುಂಬದ ಕುಡಿ ಸಂಚಿತ್ ನಟನೆಯ ಟೀಸರ್ ರಿಲೀಸ್

    ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kiccha Sudeep) ಅವರ ಸಹೋದರಿಯ ಪುತ್ರ ಸಂಚಿತ್ (Sanchit Sanjeev) ನಟಿಸಿ, ನಿರ್ದೇಶನ ಮಾಡುತ್ತಿರುವ ಸಿನಿಮಾದ ಟೀಸರ್ (Teaser) ಇಂದು ಬೆಂಗಳೂರಿನಲ್ಲಿ ರಿಲೀಸ್ ಆಗುತ್ತಿದೆ. ಈ ವರ್ಣರಂಜಿತ ಸಮಾರಂಭಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್, ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಜೆ 7ಕ್ಕೆ ಟೀಸರ್ ಬಿಡುಗಡೆ ಆಗಲಿದೆ.

    ಸಕಲ ತಯಾರಿಯೊಂದಿಗೆ ಸಂಚಿತ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ವಿಶೇಷ ಅಂದ್ರೆ ತಾವು ನಟಿಸುವ ಚೊಚ್ಚಲ ಚಿತ್ರವನ್ನು ತಾವೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಜೊತೆ ಕೆ.ಪಿ ಶ್ರೀಕಾಂತ್, ಮನೋಹರ್ ನಾಯ್ಡು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಶ್ರೀಕಾಂತ್ ಮಾಹಿತಿ ನೀಡಿದ್ದರು. ಸಂಚಿತ್ ಸಿನಿಮಾ ಬಗ್ಗೆ ಅಧಿಕೃತವಾಗಿ ಜೂನ್ 14ರಂದು ಘೋಷಣೆ ಮಾಡಿದ್ದರು.

    ತಮ್ಮ ಮೊದಲ ಸಿನಿಮಾದಲ್ಲೇ ನಟನೆಯ ಜೊತೆ ನಿರ್ದೇಶನ (Direction) ಕೂಡ ಸಂಚಿತ್ ಮಾಡ್ತಿದ್ದಾರೆ. ಈ ಮೂಲಕ ಚಿತ್ರರಂಗಕ್ಕೆ ಯುವನಟ ಸಂಚಿತ್ ಹೊಸ ಹೆಜ್ಜೆ ಇಟ್ಟಿದ್ದಾರೆ. ಇದೊಂದು ಕ್ರೈಂ ಡ್ರಾಮಾ ಆಧರಿಸಿದ ಸಿನಿಮಾವಾಗಿದ್ದು, ತಂದೆ-ಮಗನ ಬಾಂಧವ್ಯವನ್ನು ಸಾರುವ ಕಥೆಯನ್ನು ಈ ಚಿತ್ರದ ಮೂಲಕ ತೋರಿಸಲಿದ್ದಾರೆ. ಇದನ್ನೂ ಓದಿ:Exclusive: ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರದಲ್ಲಿ ಉಪ್ಪಿ ಅಣ್ಣನ ಮಗ ನಟಿಸುತ್ತಾರಾ? ನಿರಂಜನ್ ಸ್ಪಷ್ಟನೆ

    ಲಹರಿ ಸಂಸ್ಥೆಯ (Lahari Films) ಮನೋಹರ್ ನಾಯ್ಡು, ವೀನಸ್ ಮೂವಿಸ್‌ನ ಕೆ. ಪಿ ಶ್ರೀಕಾಂತ್ ಈಗಾಗಲೇ 2 ಸಿನಿಮಾ ನಿರ್ಮಿಸ್ತಿದ್ದಾರೆ. ಉಪೇಂದ್ರ ನಟನೆಯ ‘ಯುಐ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಸೆಟ್ಟೇರಿ ನಿಂತೇ ಹೋಗಿದ್ದ ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಮರುಜೀವ ಕೊಟ್ಟಿದ್ದಾರೆ. ನಂತರ ಸಂಚಿತ್ ನಟನೆಯ ಚಿತ್ರಕ್ಕೆ ಈ ಜೋಡಿ ಬಂಡವಾಳ ಹೂಡಿದೆ.

    ಸಂಚಿತ್ ಸಂಜೀವ್ ನಿರ್ದೇಶನ ಹಾಗೂ ನಾಯಕನಾದ ಜಿಮ್ಮಿ (Jimmy) ಚಿತ್ರದ ಟೀಸರ್ ಇಂದು ಅನಾವರಣವಾಗಲಿದೆ. ಇದಾದ ಎರಡು ದಿನಕ್ಕೆ ಕಿಚ್ಚ 46 ಧಗಧಗಿಸಲಿದೆ. ಆ ದಿನವೇ ಕಿಚ್ಚನ ಹೊಸ ಸಿನಿಮಾದ ವಿವರಗಳು ಹೊರ ಬೀಳಲಿವೆ. ಟೈಟಲ್ ಹೇಳ್ತಾರಾ? ರಿಲೀಸ್ ಡೇಟ್ ಅನೌನ್ಸ್ ಮಾಡ್ತಾರಾ? ಟೀಸರ್ ಬಿಡ್ತಾರಾ? ಯಾವುದೂ ಗೊತ್ತಿಲ್ಲ. ಏನಾದರಾಗಲಿ. ಕೊನೆಗೂ ಸುದೀಪ್ ಮತ್ತೆ ಅಖಾಡಕ್ಕೆ ಇಳಿದರಲ್ಲ ಅಷ್ಟು ಸಾಕು ಅಂತಿದ್ದಾರೆ ಅಭಿಮಾನಿ ಬಳಗ.

    ಸುದೀಪ್ ಕೊನೆಗೂ ಸಿಹಿ ಸುದ್ದಿ ಕೊಟ್ಟಿದ್ದಾರೆ. ನಲವತ್ತಾರನೇ ಸಿನಿಮಾದ ಬಗ್ಗೆ ಅಪ್‌ಡೇಟ್ ಕೊಡಲು ಒಂದು ದಿನಾಂಕ ಫೀಕ್ಸ್ ಮಾಡಿದ್ದಾರೆ. ಮೂರು ಚಿತ್ರಗಳನ್ನು ಒಪ್ಪಿಕೊಂಡಿರುವ ಕಿಚ್ಚ ಮೊದಲಿಗೆ ಇದಕ್ಕೆ ಕ್ಯಾಮೆರಾ ಮುಂದೆ ನಿಲ್ಲಲಿದ್ದಾರೆ. ಯಾವುದು ಸಿನಿಮಾ ? ರಿಲೀಸ್ ಯಾವಾಗ ? ಟೈಟಲ್ ಏನು ? ಕಿಚ್ಚನ ಮೆರವಣಿಗೆ ಇಲ್ಲಿದೆ..

    ವಿಕ್ರಾಂತ್ ರೋಣ. ಅದೇ ಕೊನೆ. ಮತ್ತೆ ಬಣ್ಣ ಹಚ್ಚಿಲ್ಲ ಸುದೀಪ್. ಅದು ಬಿಟ್ಟು ಇದು ಬಿಟ್ಟು ಮತ್ಯಾವುದು? ಫ್ಯಾನ್ಸ್ ಪ್ರಶ್ನೆ ಕೇಳುತ್ತಿದ್ದರು. ಸುದೀಪ್ ಮಾತ್ರ ಮೌನಂ ಶರಣ ಗಚ್ಚಾಮಿ. ಕೆಲವು ದಿನಗಳ ಹಿಂದೆ ಕೊನೆಗೂ ಸಿನಿಮಾ ವಿಷಯ ಹರವಿಟ್ಟಿದ್ದರು. ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಅದರಲ್ಲಿ ಮೊದಲಿಗೆ ನಟಿಸುವ ಸಿನಿಮಾದ ವಿವರ ಹೇಳುತ್ತೇನೆ ಎಂದಿದ್ದರು. ಅದಕ್ಕೀಗ ಡೇಟ್ ಫಿಕ್ಸ್ ಮಾಡಿದ್ದಾರೆ. ಇದೇ 27ರಂದು ಟ್ವೀಟರ್‌ನಲ್ಲಿ ಸಕಲ ಮಾಹಿತಿ ಕೊಡಲಿದ್ದಾರೆ.

  • Breaking: ʼಕಿಚ್ಚ 46ʼ ಸಿನಿಮಾ ಬಗ್ಗೆ ಸಿಹಿ ಸುದ್ದಿ ಹಂಚಿಕೊಂಡ ಕಿಚ್ಚ ಸುದೀಪ್

    Breaking: ʼಕಿಚ್ಚ 46ʼ ಸಿನಿಮಾ ಬಗ್ಗೆ ಸಿಹಿ ಸುದ್ದಿ ಹಂಚಿಕೊಂಡ ಕಿಚ್ಚ ಸುದೀಪ್

    ಸ್ಯಾಂಡಲ್‌ವುಡ್ ಬಾದಷಾ ಕಿಚ್ಚ ಸುದೀಪ್ (Kichcha Sudeep) ಅವರು ವಿಕ್ರಾಂತ್ ರೋಣ ಬಳಿಕ ಬಿಗ್ ಬಾಸ್ ಸೀಸನ್‌ನಲ್ಲಿ ಬ್ಯುಸಿಯಾಗಿದ್ರು. ಇತ್ತೀಚಿಗೆ ಕಿಚ್ಚ ‘ಕೆ46’ (ಕಿಚ್ಚ 46) ಸಿನಿಮಾ ಬರೋದರ ಬಗ್ಗೆ ಗುಡ್ ನ್ಯೂಸ್ ಹಂಚಿಕೊಂಡಿದ್ರು. ಈಗ ಇದೇ ಚಿತ್ರದ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ.

    ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆದ್ಮೇಲೆ ಕಿಚ್ಚನ‌ ಸಿನಿಮಾ ಬಗ್ಗೆ ಅಪ್ಡೇಟ್ ಸಿಗದೇ ಫ್ಯಾನ್ಸ್‌ ನಿರಾಶರಾಗಿದ್ದರು. ಸುದೀಪ್ ಅವರ ಮುಂದಿನ ಚಿತ್ರ ಯಾವಾಗ ಅಂತ ಕ್ಯೂರಿಯಸ್ ಆಗಿದ್ರು. ಈ ಬೆನ್ನಲ್ಲೇ 3 ಸಿನಿಮಾ ಒಟ್ಟಿಗೆ ಮಾಡೋದಾಗಿ ಕಿಚ್ಚ ಅನೌನ್ಸ್ ಮಾಡಿದ್ರು. ಈ ನಡುವೆ ಕಿಚ್ಚ ಜ್ಯೂನಿಯರ್ ಸಂಚಿತ್ ಸಂಜೀವ್ (ಸುದೀಪ್ ಅವರ ಅಕ್ಕನ ಮಗ) ಚೊಚ್ಚಲ ಸಿನಿಮಾದ ಚಾಲನೆಗೆ ಆಗಮಿಸಿ ಶುಭ ಹಾರೈಸಿ ಹೋಗಿದ್ದರು. ಇದನ್ನೂ ಓದಿ: ಮದುವೆಯಾದ್ಮೇಲೆ ದೇಹದ ಸರ್ಜರಿ ಮಾಡಿಸಿಕೊಂಡ್ರಾ ಎಂದವರಿಗೆ ಹನ್ಸಿಕಾ ಖಡಕ್ ಉತ್ತರ

    ಈಗ ಮತ್ತೆ ತಮ್ಮ ಚಿತ್ರದ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಇದೇ ಜೂನ್ 25ಕ್ಕೆ ತಮ್ಮ ಸಿನಿಮಾ ಕಿಚ್ಚ 46 (K46) ಸಿನಿಮಾದ ಟೀಸರ್ ರಿವೀಲ್ ಮಾಡುವುದಾಗಿ ಸುದೀಪ್ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಅದೇ ದಿನ ಸೋದರಳಿಯ ಸಂಚಿತ್ ನಟನೆಯ ಮೊದಲ ಸಿನಿಮಾದ ಟೀಸರ್ ಅಪ್‌ಡೇಟ್ ಕೂಡ ಶೇರ್ ಮಾಡಿದ್ದಾರೆ. ಜೂನ್ 27ಕ್ಕೆ ಕಿಚ್ಚ 46 ಸಿನಿಮಾದ ರಿಲೀಸ್ ಡೇಟ್ ಕೂಡ ರಿವೀಲ್ ಆಗಲಿದೆ ಎಂದಿದ್ದಾರೆ.

    ಒಟ್ನಲ್ಲಿ ಕಿಚ್ಚನ ಹೊಸ ಸಿನಿಮಾದ ಅಪ್‌ಡೇಟ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ‘ವಿಕ್ರಾಂತ್ ರೋಣ’ ಸಿನಿಮಾದ ಬಳಿಕ ಕಿಚ್ಚನ ನಯಾ ಅವತಾರ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಇದನ್ನೂ ಓದಿ: ಬಾಲಿವುಡ್ ‘ಮೂವೀ ಮಾಫಿಯಾ’ ವಿರುದ್ಧ ಮತ್ತೆ ಗುಡುಗಿದ ಕಂಗನಾ ರಣಾವತ್

  • ಸೋದರಳಿಯನ ಸಿನಿಮಾಗೆ ಕ್ಲ್ಯಾಪ್ ಮಾಡಿ ಶುಭಕೋರಿದ ಕಿಚ್ಚ ಸುದೀಪ್

    ಸೋದರಳಿಯನ ಸಿನಿಮಾಗೆ ಕ್ಲ್ಯಾಪ್ ಮಾಡಿ ಶುಭಕೋರಿದ ಕಿಚ್ಚ ಸುದೀಪ್

    ಕಿಚ್ಚ ಸುದೀಪ್ (Kicha Sudeep) ಕುಟುಂಬದಿಂದ ಮತ್ತೊಬ್ಬ ಯುವನಟನ ಎಂಟ್ರಿಯಾಗುತ್ತಿದೆ. ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ (Sanchith Sanjeev) ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಸಂಚಿತ್ ಅವರ ಚೊಚ್ಚಲ ಸಿನಿಮಾದ ಮುಹೂರ್ತ ಜೂನ್ 15ರಂದು ಬೆಂಗಳೂರಿನ ಗವಿಪುರದ ಬಂಡೆಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಅಕ್ಕನ ಮಗನ ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಸುದೀಪ್ ವಿಶ್ ಮಾಡಿದ್ದಾರೆ.

    ಕಿಚ್ಚನ ಮಾರ್ಗದರ್ಶನದೊಂದಿಗೆ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲು ಸಂಚಿತ್ ಸಂಜೀವ್ ರೆಡಿಯಾಗಿದ್ದಾರೆ. ಸಾಕಷ್ಟು ಸಮಯದಿಂದ ಸಂಚಿತ್ ಕನ್ನಡ ಚಿತ್ರರಂಗಕ್ಕೆ (Sandalwood) ಎಂಟ್ರಿ ಕೊಡುವ ಬಗ್ಗೆ ಮಾತುಗಳು ಕೇಳಿಬರುತ್ತಿತ್ತು. ಇದೀಗ ಫೈನಲಿ ಅದಕ್ಕೆ ವೇದಿಕೆ ಸಿದ್ಧವಾಗಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಟೀ ಕುಡಿದ ಅಭಿಷೇಕ್: ಥೇಟ್ ಅಪ್ಪನಂತೆ ಮಗ ಎಂದ ಫ್ಯಾನ್ಸ್

    ಈಗಾಗಲೇ ಕಿಚ್ಚನ ‘ಅಂಬಿ ನಿಂಗೆ ವಯಸ್ಸಾಯ್ತೋ’, ‘ವಿಕ್ರಾಂತ್ ರೋಣ’ ಸಿನಿಮಾಗಳಲ್ಲಿ ಸಂಚಿತ್ ಕೆಲಸ ಮಾಡಿದ್ದರು. ಆದರೆ ಕ್ಯಾಮೆರಾ ಮುಂದೆ ಅಲ್ಲ ಹಿಂದೆ ಗುರುತಿಸಿಕೊಂಡಿದ್ದರು. ಸುದೀಪ್ ಸೋದರಳಿಯ ಮುಂಬೈನಲ್ಲಿ ನಟನೆಯನ್ನು ಕೂಡ ಕಲಿತು ಬಂದಿದ್ದಾರೆ.

    ವಿಶೇಷ ಅಂದ್ರೆ ತಾವು ನಟಿಸುವ ಚೊಚ್ಚಲ ಚಿತ್ರವನ್ನು ತಾವೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಜೊತೆ ಕೆ.ಪಿ ಶ್ರೀಕಾಂತ್, ಮನೋಹರ್ ನಾಯ್ಡು ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಜೂನ್‌ರಂದು ಬೆಂಗಳೂರಿನ ಬಂಡೆಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭವು ಸರಳವಾಗಿ ನಡೆದಿದೆ. ಚಿತ್ರಕ್ಕೆ ‘ಜಿಮ್ಮಿ’ (Jimmy Kannada Film) ಎಂದು ಟೈಟಲ್ ಫಿಕ್ಸ್ ಮಾಡಲಾಗಿದ್ದು, ಸೋದರಳಿಯನ ಮೊದಲ ಹೆಜ್ಜೆಗೆ ಸುದೀಪ್ ಕೂಡ ಸಾಥ್ ನೀಡಿದ್ದಾರೆ.

    ಇದೊಂದು ಕ್ರೈಂ-ಡ್ರಾಮಾ ಸಿನಿಮಾ ಆಗಿದ್ದು, ತಂದೆ- ಮಗನ ಬಾಂಧವ್ಯ ಸಾರುವ ಕಥೆಯಾಗಿದೆ. ಸುದೀಪ್ ಸಲಹೆಯ ಮೇರೆಗೆ ಮೊದಲ ಚಿತ್ರದಲ್ಲೇ ಸಂಚಿತ್ ನಟನೆಯ ಜೊತೆ ನಿರ್ದೇಶನ ಕೂಡ ಮಾಡ್ತಿದ್ದಾರೆ. ನೆಚ್ಚಿನ ನಟ ಸುದೀಪ್ ಫ್ಯಾಮಿಲಿಯಿಂದ ಸಂಚಿತ್ ಕೂಡ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಿರೋದು ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆ ಮೂಡಿದೆ.

  • ಸುದೀಪ್ ಮನೆಯಿಂದ ಮತ್ತೊಬ್ಬ ಸ್ಟಾರ್: ಸಂಚಿತ್ ಚಿತ್ರಕ್ಕೆ ಮುಹೂರ್ತ

    ಸುದೀಪ್ ಮನೆಯಿಂದ ಮತ್ತೊಬ್ಬ ಸ್ಟಾರ್: ಸಂಚಿತ್ ಚಿತ್ರಕ್ಕೆ ಮುಹೂರ್ತ

    ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ (Sanchit Sanjeev) ಇಂದು ಅಧಿಕೃತವಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಸಂಚಿತ್ ಸಂಜೀವ ನಟಿಸಿ, ನಿರ್ದೇಶನ ಮಾಡಲಿರುವ ಚಿತ್ರಕ್ಕೆ ಇಂದು ಬೆಂಗಳೂರಿನ ಗವಿಪುರಂನ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ (Muhurta) ನಡೆಯಿತು. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅತಿಥಿಯಾಗಿ ಆಗಮಿಸಿದ್ದರು.

    ಪ್ರಿಯಾ ಸುದೀಪ್, ಲಹರಿ ಸಂಸ್ಥೆ ಹಾಗೂ ಕೆ.ಪಿ.ಶ್ರೀಕಾಂತ್ (K.P. Srikanth) ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ನಟನೆಯ ಜೊತೆ ಸಂಚಿತ್ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ. ಕ್ರೈಂ-ಡ್ರಾಮಾ ಆಧರಿಸಿದ ಸಿನಿಮಾದಲ್ಲಿ ತಂದೆ ಮಗನ ಸೆಂಟಿಮೆಂಟ್ ಇದೆಯಂತೆ. ಸುದೀಪ್ (Kichcha Sudeep) ಸಲಹೆಯಂತೆ ಸಂಚಿತ್ ಈ ಸಿನಿಮಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರಂತೆ. ಬಹುತೇಕ ಹೊಸಬರೇ ಕೂಡಿಕೊಂಡು ಈ ಸಿನಿಮಾವನ್ನು ತಯಾರಿಸುತ್ತಿದ್ದಾರೆ. ಇದನ್ನೂ ಓದಿ:‘ಗೀತಾ ಗೋವಿಂದಂ’ ತಂಡದಿಂದ ಹೊಸ ಚಿತ್ರ- ರಶ್ಮಿಕಾ ಬದಲು ವಿಜಯ್‌ಗೆ ನಾಯಕಿಯಾದ ಮೃಣಾಲ್

    ಸಾಕಷ್ಟು ಸಮಯದಿಂದ ಸಂಚಿತ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಮಾತುಗಳು ಕೇಳಿಬರುತ್ತಿತ್ತು. ಇದೀಗ ಅದು ನೆರವೇರಿದೆ. ಹಾಗಂತ ಸಂಚಿತ್ ದಿಢೀರ್ ಅಂತ ಸಿನಿಮಾ ರಂಗಕ್ಕೆ ಬರುತ್ತಿಲ್ಲ. ಈಗಾಗಲೇ ಕಿಚ್ಚನ ‘ಅಂಬಿ ನಿಂಗೆ ವಯಸ್ಸಾಯ್ತೋ’, ‘ವಿಕ್ರಾಂತ್ ರೋಣ’ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಕ್ಯಾಮೆರಾ ಮುಂದೆ ಅಲ್ಲ ಹಿಂದೆ ಗುರುತಿಸಿಕೊಂಡಿದ್ದರು. ಜೊತೆಗೆ ಮುಂಬೈನಲ್ಲಿ ನಟನೆಯನ್ನು ಕೂಡ ಕಲಿತು ಬಂದಿದ್ದಾರೆ.

     

    ಲಹರಿ ಸಂಸ್ಥೆಯ (Lahari Films) ಮನೋಹರ್ ನಾಯ್ಡು, ವೀನಸ್ ಮೂವಿಸ್‌ನ ಕೆ. ಪಿ ಶ್ರೀಕಾಂತ್ ಈಗಾಗಲೇ 2 ಸಿನಿಮಾ ನಿರ್ಮಿಸ್ತಿದ್ದಾರೆ. ಉಪೇಂದ್ರ ನಟನೆಯ ‘ಯುಐ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಸೆಟ್ಟೇರಿ ನಿಂತೇ ಹೋಗಿದ್ದ ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಮರುಜೀವ ಕೊಟ್ಟಿದ್ದಾರೆ. ಈ ಜೋಡಿಯ ಯಾದಿಗೆ ಇದೊಂದು ಚಿತ್ರ ಸೇರ್ಪಡೆಯಾಗಿದೆ.