Tag: ಕಿಚ್ಚ ಸುದೀಪ್

  • ವಿವಾದದ ನಡುವೆಯೂ ಪಾರ್ಟಿ ಮೂಡ್‌ಗೆ ಜಾರಿದ ಕಿಚ್ಚ ಸುದೀಪ್

    ವಿವಾದದ ನಡುವೆಯೂ ಪಾರ್ಟಿ ಮೂಡ್‌ಗೆ ಜಾರಿದ ಕಿಚ್ಚ ಸುದೀಪ್

    ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸದ್ಯದ ಸುದ್ದಿ ಅಂದರೆ ನಿರ್ಮಾಪಕ ಎನ್.ಕುಮಾರ್- ಕಿಚ್ಚ ಸುದೀಪ್ (Kiccha Sudeep) ಅವರ ವಿವಾದ. ತನ್ನಿಂದ ಹಣ ಪಡೆದು ಕಾಲ್‌ಶೀಟ್ ನೀಡುತ್ತಿಲ್ಲ ಎಂದು ಕುಮಾರ್ ಆರೋಪಿಸಿದ್ದರು. ಈ ವಿಚಾರವಾಗಿ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದರು. ಇಬ್ಬರ ಮಧ್ಯೆ ಜಟಾಪಟಿ ನಡೆಯುತ್ತಿದೆ. ಹೀಗಿರುವಾಗ ಸದ್ಯ ಸುದೀಪ್, ವಿವಾದ ಮರೆತು ಪಾರ್ಟಿ ಮೂಡ್‌ನಲ್ಲಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಕಿಚ್ಚ ಸುದೀಪ್ ಅವರಿಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಕಿಚ್ಚನ ಮೇಲೆ ಈ ರೀತಿ ಆರೋಪ ಮಾಡಿರೋದು ಸುದೀಪ್ ಫ್ಯಾನ್ಸ್‌ಗೆ ಬೇಸರವಾಗಿದೆ. ನೆಚ್ಚಿನ ನಟನ ವಿರುದ್ಧ ಆರೋಪಿಸಿದವರಿಗೆ ಕಿಚ್ಚನ ಫ್ಯಾನ್ಸ್ ಆಕ್ರೋಶ ಹೊರಹೊಕಿದ್ದಾರೆ. ಇನ್ನೂ ಕುಮಾರ್ ವಿರುದ್ಧ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸದ್ಯ ಸಂಕಷ್ಟಗಳನ್ನ ಮರೆತು ಸುದೀಪ್ ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ:‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಪ್ರಕಾಶ್ ರೈ- ರಮ್ಯಾಕೃಷ್ಣ

    ಜುಲೈ 18ರ ರಾತ್ರಿ ಸುದೀಪ್ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಸಂದೀಪ್ ಶರ್ಮಾ, ಕೆಸಿ ಕರಿಯಪ್ಪ, ಡೆಲ್ಲಿ ಕ್ಯಾಪಿಟಲ್ಸ್ ಪೃಥ್ವಿ ಶಾ, ‘ಹೆಬ್ಬುಲಿ’ ನಿರ್ದೇಶಕ ಕೃಷ್ಣ ಸೇರಿ ಮೊದಲಾದವರ ಜೊತೆ ಸುದೀಪ್ ಪಾರ್ಟಿ ಮಾಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. ಸುದೀಪ್ ಸೂಪರ್ ಕೂಲ್ ಆಗಿರುವುದನ್ನು ನೋಡಿ ಕಿಚ್ಚನ ಫ್ಯಾನ್ಸ್ ಖುಷಿ ಕೊಟ್ಟಿದೆ.

    ಇನ್ನೂ ಸುದೀಪ್ ನಟನೆಯ  ‘K46’ ಸಿನಿಮಾ ಫಸ್ಟ್ ಲುಕ್ ಟೀಸರ್ ಅಭಿಮಾನಿಗಳ ಗಮನ ಸೆಳೆದಿದೆ. ಚಿತ್ರದ ಮುಂದಿನ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುದೀಪ್-ಕುಮಾರ್ ಪ್ರಕರಣ: ಶಿವಣ್ಣ ಮಧ್ಯಸ್ಥಿಕೆ ಅನುಮಾನ

    ಸುದೀಪ್-ಕುಮಾರ್ ಪ್ರಕರಣ: ಶಿವಣ್ಣ ಮಧ್ಯಸ್ಥಿಕೆ ಅನುಮಾನ

    ಕಿಚ್ಚ ಸುದೀಪ್ (Kichcha Sudeep) ಮತ್ತು ನಿರ್ಮಾಪಕ ಎನ್.ಕುಮಾರ್ (N. Kumar) ಆರೋಪ ಪ್ರತ್ಯಾರೋಪದ ಮಾತುಗಳು ನಟ ಶಿವರಾಜ್ ಕುಮಾರ್ ಮನೆಯಲ್ಲಿ ಕೊನೆಗೊಳ್ಳಲಿವೆ ಎಂದು ನಂಬಲಾಗಿತ್ತು. ಇನ್ನೊಂದು ವಾರದಲ್ಲಿ ಈ ಪ್ರಕರಣಕ್ಕೆ ಇತಿಶ್ರೀ ಹಾಡುವಂತಹ ಮಾತುಗಳನ್ನು ಸ್ವತಃ ಶಿವರಾಜ್ ಕುಮಾರ್ (Shivaraj Kumar)ಆಡಿದ್ದರು. ಆದರೆ, ಸುದೀಪ್ ಯಾಕೋ ಅದಕ್ಕೆ ಮನಸು ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಇಂದು ಕಿಚ್ಚ ಕೋರ್ಟ್ (Court)ಮೆಟ್ಟಿಲು ಏರಿದ್ದಾರೆ.

    ಎನ್.ಕುಮಾರ್ ಪರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘದಲ್ಲಿ ಹಲವು ಸಭೆಗಳು ನಡೆದಿವೆ. ಕಿಚ್ಚ ಕೋರ್ಟ್ ಮೆಟ್ಟಿಲು ಏರುತ್ತಿದ್ದಂತೆಯೇ ಮತ್ತೆ ನಿರ್ಮಾಪಕ ಸಂಘ ಹಾಗೂ ವಾಣಿಜ್ಯ ಮಂಡಳಿ ಮತ್ತೊಂದು ಸಭೆ ಮಾಡಿ, ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

    ಕಿಚ್ಚ ಕೋರ್ಟಿನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಎನ್.ಕುಮಾರ್, ‘ನಾನು ಸುದೀಪ್ ಅವರ ಮಾನ ತೆಗೆಯುವಂತಹ ಕೆಲಸ ಮಾಡಿಲ್ಲ. ನನ್ನ ನೋವನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದೇನೆ. ಅದಕ್ಕೂ ಮೊದಲ ನಿರ್ಮಾಪಕರ ಸಂಘ ಮತ್ತು ವಾಣಿಜ್ಯ ಮಂಡಳಿಯ ಗಮನಕ್ಕೂ ತಂದಿದ್ದೆ. ಒಟ್ಟಿಗೆ ಕೂತು ಮಾತನಾಡಿ, ಬಗೆಹರಿಸಿಕೊಳ್ಳಬೇಕು ಎನ್ನುವುದು ನನ್ನ ಉದ್ದೇಶವಾಗಿತ್ತು’ ಎಂದಿದ್ದಾರೆ.

    ಆದರೆ, ಸುದೀಪ್ ಈ ವಿಚಾರದಲ್ಲಿ ಸಿಡಿದೆದ್ದಂತೆ ಕಾಣುತ್ತಿದೆ. ಕೋರ್ಟ್ ಆವರಣದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸುದೀಪ್, ಕಾನೂನು ಮೂಲಕವೇ ಉತ್ತರಿಸುತ್ತೇನೆ ಎಂದು ಸ್ಪಷ್ಟವಾಗಿ ನುಡಿಡಿದ್ದಾರೆ. ಶಿವರಾಜ್ ಕುಮಾರ್ ಮಧ್ಯ ಪ್ರವೇಶದ ಕುರಿತು ಮಾತನಾಡಿದ ಸುದೀಪ್, ‘ಕೋರ್ಟಿಗಿಂತ ಮತ್ತೊಂದು ಸ್ಥಳ ಬೇಕಿಲ್ಲ’ ಎಂದು ಸ್ಪಷ್ಟವಾಗಿ ಸಂದೇಶವನ್ನು ರವಾಣಿಸಿದ್ದಾರೆ.  ಅಲ್ಲಿಗೆ ಬಹುಶಃ ಶಿವಣ್ಣನ ಮಧ್ಯ ಪ್ರವೇಶ ಗೊಂದಲದಿಂದ ಕೂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುದೀಪ್ ಕಾನೂನು ಸಮರ: ವಕೀಲರ ಜೊತೆ ಚರ್ಚಿಸ್ತೀನಿ ಎಂದ ನಿರ್ಮಾಪಕ ಕುಮಾರ್

    ಸುದೀಪ್ ಕಾನೂನು ಸಮರ: ವಕೀಲರ ಜೊತೆ ಚರ್ಚಿಸ್ತೀನಿ ಎಂದ ನಿರ್ಮಾಪಕ ಕುಮಾರ್

    ನಿರ್ಮಾಪಕ ಎನ್.ಕುಮಾರ್ (N. Kumar) ವಿರುದ್ದ ಕಾನೂನು ಸಮರಕ್ಕೆ ಇಂದು ಸುದೀಪ್ (Kiccha Sudeep) ಅಧಿಕೃತವಾಗಿ ಇಳಿದಿದ್ದಾರೆ. ಇಂದು ಬೆಂಗಳೂರಿನ ಎಸಿಎಂಎಂ ನ್ಯಾಯಾಲಯಕ್ಕೆ ಆಗಮಿಸಿದ್ದ ಅವರು, ನಿರ್ಮಾಪಕ ಎನ್.ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ (Defamation) ಪ್ರಕರಣ ದಾಖಲಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುದೀಪ್, ‘ನಾನು ಯಾರಿಗೆ ಉತ್ತರ ಕೊಡಬೇಕಿದೆಯೋ, ಅದನ್ನು ಕೋರ್ಟಿನಲ್ಲಿ (Court) ಕೊಡುವೆ’ ಎಂದರು.

    ಈ ಕುರಿತು ನಿರ್ಮಾಪಕ ಎನ್.ಕುಮಾರ್ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ‘ಅವರು ಈ ಹಿಂದೆ ನನಗೆ ಕಳುಹಿಸಿದ್ದ ನೋಟಿಸ್ ಜುಲೈ 13ಕ್ಕೆ ಸಿಕ್ಕಿದೆ. ಅದು ಇಂಗ್ಲಿಷಿನಲ್ಲಿತ್ತು. ನನಗೆ ಇಂಗ್ಲಿಷ್ ಬರುವುದಿಲ್ಲ. ಹಾಗಾಗಿ ಇಂದು ವಕೀಲರನ್ನು ಭೇಟಿ ಮಾಡಲು ಸಮಯ ನಿಗದಿ ಮಾಡಿದ್ದೆ. ಅಷ್ಟರಲ್ಲೇ ಅವರು ಕೋರ್ಟಿಗೆ ಹೋಗಿದ್ದಾರೆ. ನನ್ನ ಮೇಲೆ ಏನೆಲ್ಲ ಆರೋಪ ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಕಾನೂನು ಸಲಹೆ ಪಡೆದುಕೊಂಡು ನಾನು ಪ್ರತಿಕ್ರಿಯೆ ಮಾಡುತ್ತೇನೆ’ ಎಂದರು. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

    ನಾನು ತುಂಬಾ ತಾಳ್ಮೆ ಇರುವಂತಹ ನಿರ್ಮಾಪಕ. ನನಗೆ ಆದ ನೋವನ್ನು ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದೇನೆ. ನಾನು ನಿರ್ಮಾಪಕನಾಗಿ ಮೂವತ್ತಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ. ವಿತರಕನಾಗಿ ನೂರಾರು ಚಿತ್ರಗಳನ್ನು ವಿತರಣೆ ಮಾಡಿದ್ದೇನೆ. ಸರಿ ತಪ್ಪುಗಳು ನನಗೂ ಅರ್ಥವಾಗುತ್ತವೆ. ನಾನು ಮತ್ತು ಸುದೀಪ್ ಇಬ್ಬರ ಮಧ್ಯ ನಡೆದ ಮಾತುಕತೆಗೆ ಅವರು ಬದ್ಧರಾಗಲಿ ಎಂದಷ್ಟೇ ಹೇಳುತ್ತೇನೆ’ ಎಂದರು ಕುಮಾರ್.

    ನಮಗೆ ಏನೇ ತೊಂದರೆಯಾದರೂ ನಾವು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೊರೆ ಹೋಗುತ್ತೇವೆ. ನಾನು ಅಲ್ಲಿಗೇ ಹೋಗಿದ್ದು. ವಾಣಿಜ್ಯ ಮಂಡಳಿಯಲ್ಲಿ ಕೂತು ಮಾತನಾಡೋಣ ಬನ್ನಿ ಎಂದು ಕರೆದರೂ ಅವರು ಬರಲಿಲ್ಲ. ಕೋರ್ಟಿಗೆ ಹೋಗಿದ್ದಾರೆ. ನಾನು ಈ ಕುರಿತು ನನ್ನ ವಕೀಲರನ್ನು ಸಂಪರ್ಕಿಸುತ್ತೇನೆ ಎನ್ನುವುದು ಕುಮಾರ್ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋರ್ಟಿಗೆ ಹಾಜರಾದ ಕಿಚ್ಚ : ಕಾನೂನು ಮೂಲಕ ಉತ್ತರ ಎಂದ ಸುದೀಪ್

    ಕೋರ್ಟಿಗೆ ಹಾಜರಾದ ಕಿಚ್ಚ : ಕಾನೂನು ಮೂಲಕ ಉತ್ತರ ಎಂದ ಸುದೀಪ್

    ನ್ನ ವಿರುದ್ಧ ಯಾರೆಲ್ಲ ಆರೋಪ ಮಾಡಿದ್ದಾರೋ ಅವರಿಗೆ ಕಾನೂನು ಮೂಲಕ ಉತ್ತರ ಕೊಡಬೇಕಿದೆ. ಹಾಗಾಗಿ ಕೋರ್ಟಿಗೆ ಹಾಜರಾಗುತ್ತಿರುವುದಾಗಿ ಕಿಚ್ಚ ಸುದೀಪ್ (Kiccha Sudeep) ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನಾನು ಕಷ್ಟಪಟ್ಟು ಹೆಸರು ಸಂಪಾದಿಸಿದ್ದೇನೆ. ಅದನ್ನು ಹಾಳು ಮಾಡಿಕೊಳ್ಳಲು ನಾನು ಸಿದ್ದನಿಲ್ಲ. ಜನರಿಗೆ ತಪ್ಪು ಸಂದೇಶ ಹೋಗಬಾರದು ಎನ್ನುವ ಕಾರಣಕ್ಕಾಗಿ ಕೋರ್ಟಿಗೆ ಬಂದಿರುವೆ. ಅಲ್ಲಿಯೇ ಅವರಿಗೆಲ್ಲ ಉತ್ತರ ನೀಡುತ್ತೇನೆ’ ಎಂದರು ಕಿಚ್ಚ.

    ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಬೆಂಗಳೂರಿನ ಕಾರ್ಪೊರೇಷನ್ ಹತ್ತಿರದ ಎಸಿಎಂಎಂ ನ್ಯಾಯಾಲಯಕ್ಕೆ ಕಿಚ್ಚ ಸುದೀಪ್ ಆಗಮಿಸಿ, ನಿರ್ಮಾಪಕ ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣ (Defamation) ಹೂಡಿದ್ದಾರೆ. ಕೋರ್ಟ್ (Court) ಹಾಲ್ 13 ರಲ್ಲಿ ಸುದೀಪ್ ಹಾಜರಾಗಿದ್ದರು. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು 17.08.2023ಕ್ಕೆ ನಿಗದಿ ಮಾಡಿದೆ.

    ಈ ಹಿಂದೆ ಕುಮಾರ್ (N. Kumar) ಅವರಿಗೆ ಸುದೀಪ್ ಲೀಗಲ್ ನೋಟಿಸ್ (Notice) ನೀಡಿದ್ದರು. ಹತ್ತು ದಿನಗಳ ಗಡುವು ಕೂಡ ನೀಡಿದ್ದರು. ಕುಮಾರ್ ಬಹಿರಂಗ ಕ್ಷಮೆ ಕೇಳದೇ ಇದ್ದರೆ, ಕ್ರಿಮಿನಲ್ ಡಿಪಾಮೇಷನ್ ಹಾಕುವುದಾಗಿಯೂ ನೋಟಿಸ್ ನಲ್ಲಿ ತಿಳಿಸಿದ್ದರು. ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡದೇ ಇರುವ ಕಾರಣಕ್ಕಾಗಿ ಕಾನೂನು ಹೋರಾಟ ನಡೆಸಲು ಸುದೀಪ್ ಮುಂದಾಗಿದ್ದಾರೆ.

    ಸುದೀಪ್ ಅವರು ತಮ್ಮಿಂದ ಹಣ ಪಡೆದು, ವಂಚಿಸಿದ್ದಾರೆ ಎಂದು ಕುಮಾರ್ ಈ ಹಿಂದೆ ಆರೋಪ ಮಾಡಿದ್ದರು. ಕಾಲ್ ಶೀಟ್ ಕೊಡದೇ ತಮಗೆ ಸತಾಯಿಸುತ್ತಿದ್ದಾರೆ ಎಂದು ಅವರು ಸುದೀಪ್ ಮೇಲೆ ಆರೋಪ ಮಾಡಿದ್ದರು. ಅದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಮಾತಿನ ಹಿನ್ನೆಲೆಯಾಗಿ ಸುದೀಪ್ ಕಾನೂನು ಮೊರೆ ಹೋಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿರ್ಮಾಪಕ ಕುಮಾರ್ ಆರೋಪ : ಕೋರ್ಟಿಗೆ ಇಂದು ಕಿಚ್ಚ ಹಾಜರ್?

    ನಿರ್ಮಾಪಕ ಕುಮಾರ್ ಆರೋಪ : ಕೋರ್ಟಿಗೆ ಇಂದು ಕಿಚ್ಚ ಹಾಜರ್?

    ನಿರ್ಮಾಪಕ ಎನ್.ಕುಮಾರ್ (N. Kumar) ವಿರುದ್ಧ ಮಾನನಷ್ಟ ನೋಟಿಸ್ ಕಳುಹಿಸಿದ್ದ ಕಿಚ್ಚ ಸುದೀಪ್ (Kiccha Sudeep) ಅವರಿಗೆ ಕುಮಾರ್ ಅವರಿಂದ ಯಾವುದೇ ಉತ್ತರ ಬಾರದೇ ಇರುವ ಕಾರಣಕ್ಕಾಗಿ ಇಂದು ಸುದೀಪ್ ಕೋರ್ಟಿಗೆ (Court) ಹಾಜರಾಗಲಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.

    ಮಧ್ಯಾಹ್ನ ಸುದೀಪ್ ಬೆಂಗಳೂರಿನ ಕಾರ್ಪೊರೇಷನ್ ಹತ್ತಿರದ ಎಸಿಎಂಎಂ ನ್ಯಾಯಾಲಯಕ್ಕೆ ಕಿಚ್ಚ ಸುದೀಪ್ ಹಾಜರಾಗಿದ್ದು, ಕುಮಾರ್ ವಿರುದ್ಧ ಕ್ರಿಮಿನಲ್ ಡಿಪಾಮೇಷನ್ (Defamation) ಕೇಸ್ ಹೂಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೋರ್ಟ್ ಹಾಲ್ 21ರಲ್ಲಿ ಸುದೀಪ್ ಹಾಜರಾಗಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

    ಈ ಹಿಂದೆ ಕುಮಾರ್ ಅವರಿಗೆ ಸುದೀಪ್ ಲೀಗಲ್ ನೋಟಿಸ್ ನೀಡಿದ್ದರು. ಹತ್ತು ದಿನಗಳ ಗಡುವು ಕೂಡ ನೀಡಿದ್ದರು. ಕುಮಾರ್ ಬಹಿರಂಗ ಕ್ಷಮೆ ಕೇಳದೇ ಇದ್ದರೆ, ಕ್ರಿಮಿನಲ್ ಡಿಪಾಮೇಷನ್ ಹಾಕುವುದಾಗಿಯೂ ನೋಟಿಸ್ ನಲ್ಲಿ ತಿಳಿಸಿದ್ದರು. ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡದೇ ಇರುವ ಕಾರಣಕ್ಕಾಗಿ ಕಾನೂನು ಹೋರಾಟ ನಡೆಸಲು ಸುದೀಪ್ ಮುಂದಾಗಿದ್ದಾರೆ.

    ಸುದೀಪ್ ಅವರು ತಮ್ಮಿಂದ ಹಣ ಪಡೆದು, ವಂಚಿಸಿದ್ದಾರೆ ಎಂದು ಕುಮಾರ್ ಈ ಹಿಂದೆ ಆರೋಪ ಮಾಡಿದ್ದರು. ಕಾಲ್ ಶೀಟ್ ಕೊಡದೇ ತಮಗೆ ಸತಾಯಿಸುತ್ತಿದ್ದಾರೆ ಎಂದು ಅವರು ಸುದೀಪ್ ಮೇಲೆ ಆರೋಪ ಮಾಡಿದ್ದರು. ಅದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಮಾತಿನ ಹಿನ್ನೆಲೆಯಾಗಿ ಸುದೀಪ್ ಕಾನೂನು ಮೊರೆ ಹೋಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‌’ವಿಕ್ರಾಂತ್‌ ರೋಣ’ ಖ್ಯಾತಿಯ ನೀತಾ ಅಶೋಕ್ ಮದುವೆ ಫೋಟೋಸ್‌

    ‌’ವಿಕ್ರಾಂತ್‌ ರೋಣ’ ಖ್ಯಾತಿಯ ನೀತಾ ಅಶೋಕ್ ಮದುವೆ ಫೋಟೋಸ್‌

    ಚಂದನವನದ ಚೆಂದದ ನಟಿ ನೀತಾ ಅಶೋಕ್  (Neetha Ashok) ಅವರು ಜುಲೈ 10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೀತಿಸಿದ ಹುಡುಗನ ಜೊತೆ ವೈವಾಹಿಕ ಬದುಕಿಗೆ ಕಾಲಿಡುವ ಮೂಲಕ ನಟಿ ಗುಡ್ ನ್ಯೂಸ್ ನೀಡಿದ್ದಾರೆ. ‘ವಿಕ್ರಾಂತ್ ರೋಣ’ ನಟಿಯ ಮದುವೆಯ (Wedding) ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಪಡ್ಡೆಹುಡುಗರ ನಿದ್ದೆಗೆಡಿಸಿದ ‘ನಾಗಿಣಿ 2’ ಖ್ಯಾತಿಯ ನಮ್ರತಾ

    ‘ಯಶೋದ’ (Yashoda) ಸೀರಿಯಲ್ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ನೀತಾ ಅಶೋಕ್ ಅವರು ನಾ ನಿನ್ನ ಬಿಡಲಾರೆ, ಸೇರಿದಂತೆ ಹಿಂದಿ ಸೀರಿಯಲ್‌ನಲ್ಲೂ ನಟಿಸಿದ್ದರು. ಬಳಿಕ ಕಿಚ್ಚ ಸುದೀಪ್ (Kiccha Sudeep) ನಟನೆಯ ‘ವಿಕ್ರಾಂತ್ ರೋಣ’ (Vikrant Rona)  ಸಿನಿಮಾದಲ್ಲಿ ನಿರೂಪ್ ಭಂಡಾರಿ ಜೋಡಿಯಾಗಿ ನೀತಾ ಮೋಡಿ ಮಾಡಿದ್ದರು. ನಟಿಯ ಮುದ್ದು ಮುಖ, ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

    ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಏಕಾಏಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನೀತಾ ಅಶೋಕ್ ಅವರು ಆಮೇಲೆ ಬಹುಕಾಲದ ಪ್ರೀತಿ ಬಗ್ಗೆ ಹೇಳಿಕೊಂಡಿದ್ದರು. ಕಾಲೇಜಿನಿಂದಲೇ ಇವರಿಬ್ಬರು ಸ್ನೇಹಿತರಾಗಿದ್ದು, ಆಮೇಲೆ ಪ್ರೀತಿ ಹುಟ್ಟಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಅಂದಹಾಗೆ ಸತೀಶ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ನೀತಾ ಅವರು ಮೂಲತಃ ಉಡುಪಿಯವರು.

    ಉಡುಪಿಯಲ್ಲಿ ನೀತಾ ಅಶೋಕ್ ಹಾಗೂ ಸತೀಶ್ ಮೆಸ್ತಾ ಅವರು ಕುಟುಂಬದ ಸಾಕ್ಷಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಮದುವೆ ಕೂಡ ಉಡುಪಿಯಲ್ಲಿ (Udupi) ನಡೆದಿದೆ. ನೀತಾ- ಸತೀಶ್ ಅವರು ಸರಳವಾಗಿ ಕುಟುಂಬಸ್ಥರು, ಆತ್ಮೀಯರ ಸಾಕ್ಷಿಯಾಗಿ 12.25ಕ್ಕೆ ಅಭಿಜಿತ್ ಲಗ್ನ ಮುಹೂರ್ತದಲ್ಲಿ ಮದುವೆ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ಬಗ್ಗೆ ಅಷ್ಟಾಗಿ ಮಾಹಿತಿ ಹಂಚಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ನೀತಾ ಅವರು ಮದುವೆಯ ಫೋಟೋಗಳನ್ನು ಹಂಚಿಕೊಳ್ಳಬಹುದು. ಅಂದಹಾಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ನೀತಾ ಅಶೋಕ್ ಅವರ ಮದುವೆ ಆಹ್ವಾನ ಪತ್ರಿಕೆ ಸದ್ದು ಮಾಡುತ್ತಿದೆ.

    ಮದುವೆಯ ಬಳಿಕ ಮತ್ತೆ ನಟಿ ನೀತಾ ಅಶೋಕ್ ಬಣ್ಣ ಹಚ್ಚುತ್ತಾರಾ.? ಅಥವಾ ವೈವಾಹಿಕ ಜೀವನದ ಕಡೆ ಗಮನ ಕೊಡುತ್ತಾರಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೀತಿಸಿದ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ʼವಿಕ್ರಾಂತ್ ರೋಣ’ ನಟಿ

    ಪ್ರೀತಿಸಿದ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ʼವಿಕ್ರಾಂತ್ ರೋಣ’ ನಟಿ

    ಸ್ಯಾಂಡಲ್‌ವುಡ್ ನಟಿ ನೀತಾ ಅಶೋಕ್ (Neetha Ashok) ಅವರು ಜುಲೈ 10ರಂದು(ಇಂದು) ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದಾರೆ. ಪ್ರೀತಿಸಿದ ಹುಡುಗನ ಜೊತೆ ವೈವಾಹಿಕ ಬದುಕಿಗೆ ಕಾಲಿಡುವ ಮೂಲಕ ನಟಿ ಗುಡ್ ನ್ಯೂಸ್ ನೀಡಿದ್ದಾರೆ. ‘ವಿಕ್ರಾಂತ್ ರೋಣ’ (Vikrant Rona) ನಟಿಯ ಮದುವೆಯ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ‘ಯಶೋದ’ ಸೀರಿಯಲ್ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ನೀತಾ ಅಶೋಕ್ ಅವರು ನಾ ನಿನ್ನ ಬಿಡಲಾರೆ, ಸೇರಿದಂತೆ ಹಿಂದಿ ಸೀರಿಯಲ್‌ನಲ್ಲೂ ನಟಿಸಿದ್ದರು. ಬಳಿಕ ಕಿಚ್ಚ ಸುದೀಪ್ (Kiccha Sudeep) ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ನಿರೂಪ್ ಭಂಡಾರಿ ಜೋಡಿಯಾಗಿ ನೀತಾ ಮೋಡಿ ಮಾಡಿದ್ದರು. ನಟಿಯ ಮುದ್ದು ಮುಖ, ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಇದನ್ನೂ ಓದಿ:ಪವನ್ ಒಡೆಯರ್ ನಿರ್ದೇಶನದ ಬಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

    ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಏಕಾಏಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನೀತಾ ಅಶೋಕ್ ಅವರು ಆಮೇಲೆ ಬಹುಕಾಲದ ಪ್ರೀತಿ ಬಗ್ಗೆ ಹೇಳಿಕೊಂಡಿದ್ದರು. ಕಾಲೇಜಿನಿಂದಲೇ ಇವರಿಬ್ಬರು ಸ್ನೇಹಿತರಾಗಿದ್ದು, ಆಮೇಲೆ ಪ್ರೀತಿ ಹುಟ್ಟಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಅಂದಹಾಗೆ ಸತೀಶ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ನೀತಾ ಅವರು ಮೂಲತಃ ಉಡುಪಿಯವರು.

    ಉಡುಪಿಯಲ್ಲಿ ನೀತಾ ಅಶೋಕ್ ಹಾಗೂ ಸತೀಶ್ ಮೆಸ್ತಾ (Satish Mesta) ಅವರು ಕುಟುಂಬದ ಸಾಕ್ಷಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಮದುವೆ ಕೂಡ ಉಡುಪಿಯಲ್ಲಿ ನಡೆದಿದೆ. ನೀತಾ ಅವರು ಸರಳವಾಗಿ ಕುಟುಂಬಸ್ಥರು, ಆತ್ಮೀಯರ ಸಾಕ್ಷಿಯಾಗಿ ಮದುವೆ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ಬಗ್ಗೆ ಅಷ್ಟಾಗಿ ಮಾಹಿತಿ ಹಂಚಿಕೊಡಿಲ್ಲ. ಮುಂದಿನ ದಿನಗಳಲ್ಲಿ ನೀತಾ ಅವರು ಮದುವೆಯ ಫೋಟೋಗಳನ್ನು ಹಂಚಿಕೊಳ್ಳಬಹುದು. ಅಂದಹಾಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ನೀತಾ ಅಶೋಕ್ ಅವರ ಮದುವೆ ಆಹ್ವಾನ ಪತ್ರಿಕೆ ಸದ್ದು ಮಾಡುತ್ತಿದೆ.

    ಮದುವೆಯ ಬಳಿಕ ಮತ್ತೆ ನಟಿ ನೀತಾ ಅಶೋಕ್ ಬಣ್ಣ ಹಚ್ಚುತ್ತಾರಾ.? ಅಥವಾ ವೈವಾಹಿಕ ಜೀವನದ ಕಡೆ ಗಮನ ಕೊಡುತ್ತಾರಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಕಿನಿ ಧರಿಸಿ ಹಾಟ್ ಆಗಿ ಕಾಣಿಸಿಕೊಂಡ ‘ಬಿಗ್ ಬಾಸ್’ ಜಯಶ್ರೀ

    ಬಿಕಿನಿ ಧರಿಸಿ ಹಾಟ್ ಆಗಿ ಕಾಣಿಸಿಕೊಂಡ ‘ಬಿಗ್ ಬಾಸ್’ ಜಯಶ್ರೀ

    ನ್ನಡ ಸಿನಿಮಾ ರಂಗದ ಹಿರಿಯ ನಟಿ ಮಾರಿಮುತ್ತು (Marimuttu) ಮೊಮ್ಮಗಳು ಜಯಶ್ರೀ ಆರಾಧ್ಯ ಕೂಡ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಆಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ಶೋ (Bigg Boss Kannada) ಮುಗಿದ ಮೇಲೆ ತಮ್ಮ ಬ್ಯುಸಿನೆಸ್ ಕಡೆ ಗಮನ ಕೊಡುತ್ತಿದ್ದ ನಟಿ ಈಗ ಥೈಲ್ಯಾಂಡ್‌ಗೆ ಹಾರಿದ್ದಾರೆ. ಬಿಕಿನಿ ಧರಿಸಿ ಕಡಲ ಕಿನಾರೆಯಲ್ಲಿ ಮಿಂಚಿದ್ದಾರೆ.

    ‘ಪುಟ್ಟರಾಜು’ (Puttaraju) ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಜಯಶ್ರೀ ಆರಾಧ್ಯ ಅವರು ಒಟಿಟಿ ಬಿಗ್ ಬಾಸ್‌ಗೆ ಕಾಲಿಟ್ಟಿದ್ದರು. ನಂದು ಜೊತೆಗಿನ ಗುದ್ದಾಟದ ಮೂಲಕ ಜಯಶ್ರೀ ಹೈಲೆಟ್ ಆಗಿದ್ದರು. ಸದಾ ಒಂದಲ್ಲಾ ಒಂದು ಕಿರಿಕ್ ಮಾಡಿಕೊಳ್ಳುವ ಮೂಲಕ ಸದ್ದು ಮಾಡ್ತಿದ್ರು. ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ಹೇಳಿಕೊಳ್ಳುವಂತಹ ಅವಕಾಶ ಚಿತ್ರರಂಗದಲ್ಲಿ ಜಯಶ್ರೀ ಆರಾಧ್ಯಗೆ(Jayashree Aradhya) ಸಿಗಲಿಲ್ಲ.

    ಈ ವರ್ಷದ ಆರಂಭದಲ್ಲಿ ಜಯಶ್ರೀ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಬಾಯ್‌ಫ್ರೆಂಡ್ ಸ್ಟಿವನ್ ಜೊತೆ ಬ್ಯುಸಿನೆಸ್ ಕ್ಷೇತ್ರದಲ್ಲಿ ಆಕ್ಟೀವ್ ಆಗಿದ್ದಾರೆ. ಈಗ ಕೆಲಸಕ್ಕೆಲ್ಲಾ ಬ್ರೇಕ್ ಹಾಕಿ ದೂರದ ಥೈಲ್ಯಾಂಡ್‌ಗೆ ಹಾರಿದ್ದಾರೆ. ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಡಿಫರೆಂಟ್ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಇದನ್ನೂ ಓದಿ:ವಿಶೇಷ ಆಮ್ಲಜನಕ ಚಿಕಿತ್ಸೆಯ ಮೊರೆ ಹೋದ ಸಮಂತಾ

    ಥೈಲ್ಯಾಂಡ್‌ನ ಸುಂದರ ತಾಣಗಳಿಗೆ ನಟಿ ಭೇಟಿ ನೀಡ್ತಿದ್ದಾರೆ. ಜಯಶ್ರೀ ಆರಾಧ್ಯ ಟ್ರಿಪ್‌ಗೆ ವೈನಿಧಿ ಕೂಡ ಸಾಥ್ ನೀಡಿದ್ದಾರೆ. ಜೈಜಗದೀಶ್ ಪುತ್ರಿ ಕೂಡ ಇದ್ದಾರೆ. ಇಬ್ಬರ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.

    ಇನ್ನೂ ಸಾಕಷ್ಟು ವರ್ಷದಿಂದ ಸ್ಟೀವನ್‌ ಎಂಬುವವರ ಜೊತೆ ಜಯಶ್ರೀ ಡೇಟ್‌ ಮಾಡ್ತಿದ್ದಾರೆ.  ಇಬ್ಬರ ಪ್ರೀತಿಗೆ ಗುರುಹಿರಿಯರ ಸಮ್ಮತಿಯುಯಿದೆ. ಸದ್ಯದಲ್ಲೇ ಮದುವೆ ಬಗ್ಗೆ ಗುಡ್‌ ನ್ಯೂಸ್‌ ಕೊಡುತ್ತಾರಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿರ್ಮಾಪಕ ಕುಮಾರ್ ಆರೋಪದಲ್ಲಿ ಸತ್ಯ ಇಲ್ಲ- ಸುದೀಪ್ ಆಪ್ತ ಜಾಕ್ ಮಂಜು ಸ್ಪಷ್ಟನೆ

    ನಿರ್ಮಾಪಕ ಕುಮಾರ್ ಆರೋಪದಲ್ಲಿ ಸತ್ಯ ಇಲ್ಲ- ಸುದೀಪ್ ಆಪ್ತ ಜಾಕ್ ಮಂಜು ಸ್ಪಷ್ಟನೆ

    ಸ್ಯಾಂಡಲ್‌ವುಡ್‌ನಲ್ಲಿ (Sandalwood) ಕೆಲ ದಿನಗಳಿಂದ ಸಂಚಲನ ಮೂಡಿಸಿದ ವಿಚಾರ ಅಂದರೆ ಕಿಚ್ಚ ಸುದೀಪ್- ನಿರ್ಮಾಪಕ ಕುಮಾರ್ (Producer Kumar) ಅವರ ವಾರ್. ಸುದೀಪ್ ತಮಗೆ ಕಾಲ್ ಶೀಟ್ ನೀಡದೇ ವಂಚನೆ ಮಾಡಿದ್ದಾರೆ ಎಂದು ನಿರ್ಮಾಪಕ ಕುಮಾರ್ ಆರೋಪಕ್ಕೆ ಸುದೀಪ್ ಆಪ್ತ ಸ್ಪಷ್ಟನೆ ನೀಡಿದ್ದಾರೆ. ನಿರ್ಮಾಪಕ ಕುಮಾರ್ ಆರೋಪದಲ್ಲಿ ಸತ್ಯ ಇಲ್ಲ ಎಂದು ಸುದೀಪ್ (Sudeep) ಪರ ಜಾಕ್ ಮಂಜು (Jack Manju) ಬ್ಯಾಟಿಂಗ್ ಮಾಡಿದ್ದಾರೆ.

    ಕುಮಾರ್-ಸುದೀಪ್ ನಡುವೆ ವಾಗ್ವಾದ ನಡೆಯುತ್ತಿದೆ. ನಟ ಸುದೀಪ್ ಅಭಿಮಾನಿಗಳಿಗೆ ನಾನೇ ಕ್ಲಾರಿಟಿ ಕೊಡ್ತೀನಿ. ‘ಪಾರ್ಥ’ ಸಿನಿಮಾದಿಂದ ‘ವಿಕ್ರಾಂತ್ ರೋಣ’ (Vikranth Rona) ಸಿನಿಮಾದವರೆಗೂ ನಾನು ಸುದೀಪ್‌ ಜೊತೆ ಇದ್ದೇನೆ. ಕಿಚ್ಚ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಅವರ ಸಿನಿಜರ್ನಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಬೆಳೆದಿದ್ದಾರೆ. ಇತ್ತೀಚಿಗೆ ಭಾಮಾ ಹರೀಶ್ ಅವರು ಸುದೀಪ್‌ನ ಭೇಟಿಯಾಗಿದ್ರು. ಕುಮಾರ್ ಪತ್ರ ಕಳಿಸಿದ್ರು, ನಾವು ಅದಕ್ಕೆ ಉತ್ತರ ಕೊಟ್ಟಿದ್ದೇವೆ. ಆದರೂ ಕುಮಾರ್ ಅವರು ನಾವು ಉತ್ತರ ಕೊಟ್ಟಿಲ್ಲ ಅಂತ ತಪ್ಪು ಸಂದೇಶ ಕೊಟ್ಟಿದ್ದಾರೆ.

    ‘ರನ್ನ’ ಸಿನಿಮಾ ಸಮಯದಲ್ಲಿ ಸುದೀಪ್-ಕುಮಾರ್ ಭೇಟಿಯಾಗಿದ್ದು ನಿಜ. ಕುಮಾರ್ ಆರ್ಥಿಕ ಕಷ್ಟದಲ್ಲಿದ್ದಾರೆ ಗೊತ್ತು. ಆ ಸಿನಿಮಾ ಬೇಗ ಸೆಟ್ಟೇರಲಿಲ್ಲ. ಕುಮಾರ್ ಅವರು ಒತ್ತಡದಲ್ಲಿ ಇದ್ದಿದ್ದರಿಂದ ಅವರು ಮಾತನಾಡುವ ರೀತಿ ಬದಲಾಯಿತು. ನಂತರ ಒಬ್ಬ ನಿರ್ದೇಶಕನನ್ನು ಸುದೀಪ್ ಆಯ್ಕೆ ಮಾಡಿದರು. ಆದರೆ ಆ ನಿರ್ದೇಶಕರು ಕೇಳಿದಷ್ಟು ಸಂಭಾವನೆ ನೀಡಲು ಕುಮಾರ್ ಒಪ್ಪಲಿಲ್ಲ. 2020ರ ಜನವರಿಯಲ್ಲಿ ಸುದೀಪ್ ‘ವಿಕ್ರಾಂತ್ ರೋಣ’ ಶುರುಮಾಡಿದರು. ಅದಕ್ಕೆ ಮೂರು ವರ್ಷ ಹಿಡಿಯಿತು. ಅನಾರೋಗ್ಯ, ಕೆಲಸದ ಒತ್ತಡ ಮುಂತಾದ ಕಾರಣಗಳಿಂದ ಕುಮಾರ್ ಅವರನ್ನು ಭೇಟಿಯಾಗಲು ಸುದೀಪ್ ಅವರಿಗೆ ಸಾಧ್ಯವಾಗಲಿಲ್ಲ. ನಂತರ ಪ್ರಿಯಾ ಮೇಡಂ ಅವರ ಜೊತೆ ಕುಮಾರ್ ಮೀಟಿಂಗ್ ನಡೆಸಿದರು. ಕುಮಾರ್ ಅವರ ಕಷ್ಟ ಏನು ಎಂಬುದನ್ನು ಸುದೀಪ್‌ಗೆ ಹೇಳಲಾಯ್ತು. ನಂತರ ಅವರನ್ನು ಕರೆಸಿ ತಾತ್ಕಾಲಿಕವಾಗಿ 5 ಕೋಟಿ ರೂಪಾಯಿ ಸಹಾಯ ಮಾಡಲು ಸುದೀಪ್ ಮುಂದಾದರು. ಆದರೆ ಕುಮಾರ್ ಅವರು ಕೋಪದಲ್ಲಿ ಅದನ್ನು ಒಪ್ಪಿಕೊಳ್ಳಲಿಲ್ಲ. ಈ ರೀತಿ ಭಿಕ್ಷೆಯ ಹಣ ಬೇಡ, ಸಿನಿಮಾ ಮಾಡಿ ಅಂತ ಪಟ್ಟು ಹಿಡಿದರು ಎಂದು ಜಾಕ್ ಮಂಜು ಹೇಳಿದ್ದಾರೆ. ಇದನ್ನೂ ಓದಿ:ಕನ್ನಡತಿ ಶ್ರೀಲೀಲಾ ಹಿಂದಿಕ್ಕಿದ ‘ಸೀತಾರಾಮಂ’ ಬೆಡಗಿ ಮೃಣಾಲ್

    ನನಗೆ ಬರಬೇಕಾದ ಹಣ ಕೊಡಿ ಎಂದು ಕುಮಾರ್ ಅವರು ಪಟ್ಟು ಹಿಡಿದಿದ್ದರು. ಅದು ಸುದೀಪ್‌ಗೆ ಬೇಸರ ಮೂಡಿಸಿತ್ತು. ನಾನು ಕುಮಾರ್ ಬಳಿ ಹಣ ತೆಗೆದುಕೊಂಡಿಲ್ಲ. ಸಹಾಯ ಕೇಳಿಕೊಂಡು ಬಂದವರು ಈಗ ಈ ರೀತಿ ಮಾತಾಡಿದ್ದು ಸರಿಯಲ್ಲ ಅಂತ ಸುದೀಪ್ ಕೊಂಚ ಗರಂ ಆಗಿದ್ದರು. ಸುದೀಪ್ ಅವರಿಂದ ತಮಗೆ ಹಣ ಬರಬೇಕು. ಆ ಬಳಿಕ ನಿಮ್ಮ ಸಾಲ ತೀರಿಸುತ್ತೇನೆ ಅಂತ ಎನ್. ಕುಮಾರ್ ಅವರು ಕಂಡಕಂಡಲ್ಲಿ ಹೇಳಿಕೊಂಡು ತಿರುಗಾಡಿದ್ದಾರೆ ಎಂಬುದು ಜಾಕ್ ಮಂಜು ಆರೋಪಿಸಿದ್ದಾರೆ. ನಿರ್ಮಾಪಕ ಕುಮಾರ್‌ ಅವರ ಆರೋಪಕ್ಕೆ ದಾಖಲೆಗಳಿಲ್ಲದೇ ಮಾತಾಡ್ತಿದ್ದಾರೆ. ಅದಕ್ಕಾಗಿ ನಾವು ಕಾನೂನು ಹೋರಾಟಕ್ಕೆ ಹೋಗಿದ್ದೀವಿ ಎಂದು ಜಾಕ್ ಮಂಜು ಮಾತನಾಡಿದ್ದಾರೆ.

    ನಿನ್ನೆಯಷ್ಟೇ, ನಿರ್ಮಾಪಕ ಎಂ.ಎನ್.ಕುಮಾರ್, ನಾನು ಮಾಧ್ಯಮದ ಮುಂದೆ ಮಾತನಾಡಿದ್ದರು. ನಾನು ಹಣ ಕೊಟ್ಟು ಇಷ್ಟು ವರ್ಷ ಆಗಿದೆ ಸ್ಪಂದಿಸುತ್ತಿಲ್ಲ. ವಾಣಿಜ್ಯ ಮಂಡಳಿಯಲ್ಲಿ ಕುಳಿತು ಸಮಸ್ಯೆ ಬಗೆಹರಿಸಿಕೊಡಿ ಅಂತ ಕೇಳಿದ್ದೆ. ಈಗ ನನಗೆ ವಾಟ್ಸಪ್ ಮೂಲಕ ನೋಟಿಸ್ ಬಂದಿದೆ. ಪೋಸ್ಟ್ ಮುಖಾಂತರ ಬಂದಿಲ್ಲ. ಅನಾಮಿಕ ನಂಬರ್‌ನಿಂದ ಬಂದಿದೆ. ಅಫೀಶಿಯಲ್ ಆಗಿ ಬರುವ ತನಕ ರಿಯಾಕ್ಟ್ ಮಾಡಲ್ಲ. ಬಂದ ಬಳಿಕ ವಾಣಿಜ್ಯ ಮಂಡಳಿ, ನಿರ್ಮಾಪಕ ಅಸೋಸಿಯೇಷನ್ ನಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡ್ತವೆ ಎಂದು ಕುಮಾರ್ ಮಾತನಾಡಿದ್ದರು.

    ಸುದೀಪ್ 45 ಸಿನಿಮಾ ಮಾಡಿದ್ದಾರೆ. ಅಷ್ಟು ಸಿನಿಮಾದ ಅಗ್ರಿಮೆಂಟ್ ಕೊಡೋಕೆ ಹೇಳಿ. ಸಿನಿಮಾ ನಡೆಯೋದು ನಂಬಿಕೆ ಮೇಲೆ. ಅದರಂತೆ ಹಣ ಕೊಟ್ಟಿದ್ದೇನೆ. ‘ವಿಕ್ರಾಂತ್ ರೋಣ’ ಬಳಿಕ ಸಿನಿಮಾ ಮಾಡಿಕೊಡ್ತೀನಿ ಅಂತ ಹೇಳಿದ್ರು ಮಾಡಲಿಲ್ಲ. ಆ ಕಡೆ ನಂದಕಿಶೋರ್ ‘ಮುತ್ತತ್ತಿ ಸತ್ಯರಾಮ’ ಟೈಟಲ್ ಗೊತ್ತಿಲ್ಲ ಅಂತಾರೆ. ಬಹಿರಂಗ ಚರ್ಚೆಗೆ ಬರಲಿ ಬೇಕಿದ್ದರೆ. ಕಾನೂನು ಎಲ್ಲರಿಗೂ ಒಂದೇ ಎಂದು ಕುಮಾರ್ ಸುದೀಪ್ ವಿರುದ್ಧ ಆರೋಪ ಮಾಡಿದ್ದರು. ಈ ಎಲ್ಲಾ ಆರೋಪಗಳಿಗೆ ಸುದೀಪ್ ಆಪ್ತ ಜಾಕ್ ಮುಂಜು ಈಗ  ಸ್ಪಷ್ಟನೆ ನೀಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಿಚ್ಚನ ರಾಕ್ಷಸ ಯುದ್ಧ ಶುರು

    ಕಿಚ್ಚನ ರಾಕ್ಷಸ ಯುದ್ಧ ಶುರು