Tag: ಕಿಚ್ಚ ಸುದೀಪ್

  • Kiccha 46: ಸುದೀಪ್‌ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡ್

    Kiccha 46: ಸುದೀಪ್‌ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡ್

    ‘ಲೈಫು ಇಷ್ಟೇನೆ’ ಎಂದು ಹೇಳುತ್ತ ಸ್ಯಾಂಡಲ್‌ವುಡ್‌ಗೆ(Sandalwood) ಪಾದಾರ್ಪಣೆ ಮಾಡಿದ್ದ ಚೆಂದುಳ್ಳಿ ಚೆಲುವೆ ಸಂಯುಕ್ತಾ ಹೊರನಾಡ್ (Samyukta Hornad) ಈಗ ಕಿಚ್ಚನ ಬಳಗಕ್ಕೆ ಜಾಯಿನ್ ಆಗಿದ್ದಾರೆ. ಕಿಚ್ಚ 46ನಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:‘ಭಾಗ್ಯಲಕ್ಷ್ಮಿ’ ನಕಲಿ ಅಪ್ಪನಾಗಿ ಬಿಗ್ ಬಾಸ್ ಮಂಜು ಪಾವಗಡ ಎಂಟ್ರಿ

    ಕಿಚ್ಚ ಸುದೀಪ್ (Kiccha Sudeep) ನಟನೆಯ ‘K 46’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಸಿನಿಮಾದ ಮೊದಲ ಟೀಸರ್‌ಗೆ ಕಿಚ್ಚನ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈಗ ಕಿಚ್ಚ 46ನಲ್ಲಿ ಸಂಯುಕ್ತಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗ್ತಿದೆ.

    ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಜನ್ಮದಿನವಾಗಿದ್ದು, ಅಂದು ಸುದೀಪ್ ನಟನೆಯ 46ನೇ ಸಿನಿಮಾದ ಟೈಟಲ್ ರಿವೀಲ್ ಮಾಡಲು ಚಿತ್ರತಂಡ ಯೋಚಿಸಿದೆ. ಸಿನಿಮಾ ಬಗೆಗಿನ ಇನ್ನಿತರ ಮಾಹಿತಿ ಹಂಚಿಕೊಳ್ಳುತ್ತಾರಾ ಕಾದುನೋಡಬೇಕಿದೆ.

    ಈ ವರ್ಷ ಹೊಂದಿಸಿ ಬರೆಯಿರಿ, ಕ್ರಾಂತಿ, ಲವ್ ಬರ್ಡ್ಸ್ (Love Birds) ಸಿನಿಮಾದಲ್ಲಿ ಸಂಯುಕ್ತಾ ನಟಿಸಿದ್ದಾರೆ. ಕಿಚ್ಚನ ಟೀಮ್‌ ಕಡೆಯಿಂದ ಸಂಯುಕ್ತಾ ರೋಲ್ ಕುರಿತು ಅಫಿಷಿಯಲ್ ಅಪ್‌ಡೇಟ್ ಸಿಗದೇ ಇದ್ದರೂ, ಸದ್ಯದ ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖುದ್ದು ಕೋರ್ಟಿಗೆ ಹಾಜರಾಗುವಂತೆ ನಿರ್ಮಾಪಕ ಕುಮಾರ್, ಸುರೇಶ್ ಗೆ ಸಮನ್ಸ್

    ಖುದ್ದು ಕೋರ್ಟಿಗೆ ಹಾಜರಾಗುವಂತೆ ನಿರ್ಮಾಪಕ ಕುಮಾರ್, ಸುರೇಶ್ ಗೆ ಸಮನ್ಸ್

    ಕಿಚ್ಚ ಸುದೀಪ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯವು ನಿರ್ಮಾಪಕರಾದ ಎನ್.ಎಂ. ಸುರೇಶ್ (N.M. Suresh) ಮತ್ತು ಎಂ.ಎನ್. ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಮೊನ್ನೆಯಷ್ಟೇ ನಟ ಸುದೀಪ್ ಖುದ್ದು ಕೋರ್ಟಿಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.

    ಸುದೀಪ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ 13ನೇ ಎಸಿಎಂಎಂ ಕೋರ್ಟ್ ಆರೋಪಿಗಳ ವಿರುದ್ಧ ಕ್ರಿಮಿನಲ್ ಮಾನನಷ್ಟ ಕೇಸ್ ದಾಖಲಿಸುವುದರ ಜೊತೆಗೆ ಆಗಸ್ಟ್ 26ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ (Summons) ಜಾರಿ ಮಾಡಿದೆ.

    ಈವರೆಗೂ ಆಗಿದ್ದೇನು?

    ನಿರ್ಮಾಪಕ ಕುಮಾರ್ ಮತ್ತು ನಟ ಸುದೀಪ್‌ ನಡುವೆ ಜಟಾಪಟಿ ಮತ್ತೊಂದು ಹಂತ ತಲುಪಿದೆ. ಮೊನ್ನೆಯಷ್ಟೇ ಸುದೀಪ್ ಈ ವಿಚಾರವಾಗಿ ಕೋರ್ಟಿಗೆ ಹಾಜರಾಗಿದ್ದರು. ಸುದೀಪ್ ಅವರ ಹೇಳಿಕೆಯನ್ನು ಆಲಿಸಿದ್ದ 13ನೇ ಎಸಿಎಂಎಂ ಕೋರ್ಟನ ನ್ಯಾ.ವೆಂಕಣ್ಣ ಬಸಪ್ಪ ಹೊಸಮನಿ ಅವರು ತೀರ್ಪು ಕಾಯ್ದಿರಿಸಿದ್ದರು. ನಿನ್ನೆಯಷ್ಟೇ ತೀರ್ಪು ಪ್ರಕಟವಾಗಿದ್ದು, ಸುದೀಪ್ ಸಲ್ಲಿಸಿದ್ದ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ‌ ಅಂಗೀಕಾರವಾಗಿದೆ. ಜೊತೆಗೆ ನಿರ್ಮಾಪಕರಾದ ಎಂ.ಎನ್.ಕುಮಾರ್ ಹಾಗೂ ಸುರೇಶ್‌ಗೆ ಸಮನ್ಸ್  ಜಾರಿಯಾಗಿದೆ.

    ನಿರ್ಮಾಪಕ ಎಂ.ಎನ್‌. ಕುಮಾರ್‌ (M.n Kumar) ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಿ ನಟ ಸುದೀಪ್‌ (Sudeep) ತಮ್ಮ ಹೇಳಿಕೆಯನ್ನು ನಿನ್ನೆ ದಾಖಲಿಸಿದ್ದರು. ಹಲವು ಫೋಟೋಗಳೊಂದಿಗೆ ಕೋರ್ಟ್‌ ಮುಂದೆ ದಾಖಲೆಗಳನ್ನೂ ಅವರು ಸಲ್ಲಿಸಿದ್ದರು.

    13ನೇ ಎಸಿಎಂಎಂ ಕೋರ್ಟ್‌ ಮುಂದೆ ಗುರುವಾರ ಹಾಜರಾದ ನಟ ಸುದೀಪ್‌, ತಾವು ಹೂಡಿದ್ದ ಮಾನನಷ್ಟ ಮೊಕದ್ದಮೆ ಬಗ್ಗೆ ಹೇಳಿಕೆ ದಾಖಲಿಸಿದ್ದರು. ನ್ಯಾ. ವೆಂಕಣ್ಣ ಬಸಪ್ಪ ಹೊಸಮನಿ ಎದುರು ಹೇಳಿಕೆ ದಾಖಲಿಸಿದ ನಟ, ಪ್ರಕರಣ ಸಂಬಂಧ ರಾಜೀ ಆಗುವ ಪ್ರಮೇಯ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

    ಸುದೀಪ್‌ (Sudeep) ಹೇಳಿಕೆ ದಾಖಲಿಸಿಕೊಳ್ಳುವ ವೇಳೆ ನ್ಯಾಯಾಧೀಶರು, ನಿರ್ಮಾಪಕರು ಕ್ಷಮಾಪಣೆ ಕೇಳಿದರೆ ಕ್ಷಮಿಸುತ್ತೀರಾ? ರಾಜೀ ಸಂಧಾನ ಮಾಡಿಕೊಂಡು ಕಕ್ಷಿದಾರರಿಗೆ ಮಾದರಿಯಾಗುತ್ತೀರಾ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಸುದೀಪ್‌, ಅವರ ಹೇಳಿಕೆಯಿಂದ ನಾನು ಇಷ್ಟು ವರ್ಷ ಕಷ್ಟಪಟ್ಟು ಗಳಿಸಿದ ವರ್ಚಸ್ಸಿಗೆ ಹಾನಿಯಾಗಿದೆ. ಒಬ್ಬ ಸುದೀಪ್‌ನನ್ನು ಬಗ್ಗಿಸಿದರೆ ಹಲವರನ್ನು ಬಗ್ಗಿಸಬಹುದೆಂದು ತಿಳಿದಿದ್ದಾರೆ ಎನ್ನುವ ಮೂಲಕ ತಾವು ರಾಜೀ ಸಂಧಾನಕ್ಕೆ ಸಿದ್ಧರಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು.

    ಎಂ.ಎನ್.ಕುಮಾರ್ (M.n Kumar) ಹೇಳಿಕೆಯನ್ನು ಎಂ.ಎನ್.ಸುರೇಶ್ ಬೆಂಬಲಿಸಿದ್ದಾರೆ. ಇವರ ಸುದ್ದಿಗೋಷ್ಠಿಯಿಂದ ಮಾನಹಾನಿಯಾಗಿದೆ. ಹಲವರು ನನ್ನನ್ನು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಂ.ಎನ್.ಕುಮಾರ್ ಮಾಡಿದ ಆರೋಪಗಳೆಲ್ಲ ಸುಳ್ಳು. ರಾಜರಾಜೇಶ್ವರಿ ನಗರದಲ್ಲಿ ಮನೆ ಕಟ್ಟಲು ಹಣದ ನೆರವಿನ ಆರೋಪವೂ ಸುಳ್ಳು. ಮನೆ ದುರಸ್ತಿಗೆ ಹಣ ನೀಡಿದ್ದಾಗಿ ಮಾಡಿದ ಆರೋಪ ಸುಳ್ಳು ಎಂದು ಪ್ರಾಮಾಣಿಕ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ಸುದೀಪ್‌ ದಾಖಲಿಸಿದ್ದರು.

     

    ವಕೀಲ ಅಜಯ್ ಕಡಕೋಳ್ ಅವರೊಡನೆ ನಟ ಸುದೀಪ್‌ ಕೋರ್ಟ್‌ಗೆ ಹಾಜರಾಗಿದ್ದರು. ಸುದೀಪ್‌ಗೆ ಆಪ್ತ ಚಂದ್ರಚೂಡ್, ನಿರ್ಮಾಪಕ ಜಾಕ್ ಮಂಜು (Jack Manju) ಸಾಥ್‌ ನೀಡಿದರು. ಸುದೀಪ್ ಪರ ವಕೀಲ ಅಜಯ್ ಮಾತನಾಡಿ, ಸೆಕ್ಷನ್ 300 ಅಡಿಯಲ್ಲಿ ಕೇಸ್ ಫೈಲ್ ಮಾಡಿದ್ದರು. ಕುಮಾರ್ ಮತ್ತು ಸುರೇಶ್ ವಿರುದ್ಧ ಕೇಸ್ ಫೈಲ್ ಮಾಡಿದ್ದರು. ಕುಮಾರ್ ಮತ್ತು ಸುರೇಶ್ ಮಾತನಾಡಿರೋ ದಾಖಲೆಗಳು ಹಾಗೂ ಪೋಟೋಗಳನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘Chef ಚಿದಂಬರ’ ಅನಿರುದ್ಧಗೆ ಕಿಚ್ಚ ಸುದೀಪ್ ಸಾಥ್

    ‘Chef ಚಿದಂಬರ’ ಅನಿರುದ್ಧಗೆ ಕಿಚ್ಚ ಸುದೀಪ್ ಸಾಥ್

    ಕಿರುತೆರೆ ಆಯ್ತು ಇದೀಗ ಬೆಳ್ಳಿತೆರೆಯಲ್ಲಿ ಹೊಸ ಪರ್ವ ಶುರು ಮಾಡಲು ನಟ ಅನಿರುದ್ಧ(Aniruddha) ಅವರು ರೆಡಿಯಾಗಿದ್ದಾರೆ. ‘ಶೆಫ್ ಚಿದಂಬರನಾಗಿ’ (Chef Chidambara) ಜೊತೆ ಜೊತೆಯಲಿ ಹೀರೋ ಬರುತ್ತಿದ್ದಾರೆ. ಅನಿರುದ್ಧ ಹೊಸ ಹೆಜ್ಜೆಗೆ ಕಿಚ್ಚ ಸುದೀಪ್ (Kiccha Sudeep) ಕೂಡ ಸಾಥ್ ನೀಡಿದ್ದಾರೆ. ಇತ್ತೀಚಿಗೆ ಸಿನಿಮಾದ ಅದ್ದೂರಿ ಮುಹೂರ್ತ ನೆರವೇರಿತ್ತು. ಈಗ ಚಿತ್ರದ ಟೈಟಲ್ ರಿವೀಲ್ ಆಗಿದೆ.

    ಕಿರುತೆರೆಯಲ್ಲಿ ‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿ ಹೊಸ ಇತಿಹಾಸ ಸೃಷ್ಟಿ ಮಾಡಿತ್ತು. ಆರ್ಯನಾಗಿ ಅನಿರುದ್ಧ ಟಿವಿ ಲೋಕದ ಮನೆಮಾತಾದರು. ಈ ಹಿಂದೆ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದ ಅನಿರುದ್ಧ ಅವರು ಐದು ವರ್ಷಗಳ ನಂತರ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗುತ್ತಿದ್ದಾರೆ. ‘ರಾಘು’ (Raghu) ಚಿತ್ರದ ಖ್ಯಾತಿಯ ನಿರ್ದೇಶಕ ಎಂ.ಆನಂದರಾಜ್ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂದು ಈ ಮೊದಲೇ ಘೋಷಣೆ ಮಾಡಲಾಗಿತ್ತು. ಈಗ ಆ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಚಿತ್ರಕ್ಕೆ ‘Chef ಚಿದಂಬರ’ (Chef Chidambara) ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಟೈಟಲ್‌ ಅನ್ನು ನಟ ಕಿಚ್ಚ ಸುದೀಪ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದನ್ನೂ ಓದಿ:ತಮಿಳಿಗೆ ಹಾರಿದ ‘ಸೀತಾರಾಮಂ’ ನಟಿ- ಶಿವಕಾರ್ತಿಕೇಯನ್‌ಗೆ ಮೃಣಾಲ್ ನಾಯಕಿ

    ನಟ ಅನಿರುದ್ಧ ಈ ಚಿತ್ರದಲ್ಲಿ ಶೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೇ ಆಗಸ್ಟ್ 10ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಡಾರ್ಕ್ ಕಾಮಿಡಿ ಜಾನರ್‌ನ ಈ ಚಿತ್ರದಲ್ಲಿ ಅನಿರುದ್ಧ ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಸಹ ಬಿಡುಗಡೆಯಾಗಿದೆ. ರೂಪಾ ಡಿ ಎನ್ ಅವರು ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ.

    ಅನಿರುದ್ಧ ನಾಯಕಿಯರಾಗಿ ಪಂಚರಂಗಿ ಸುಂದರಿ ನಿಧಿ ಸುಬ್ಬಯ್ಯ(Niddhi Subbaih), ಲವ್ ಮಾಕ್ಟೈಲ್‌ 2 ಖ್ಯಾತಿಯ ರಾಚೆಲ್, ಶರತ್ ಲೋಹಿತಾಶ್ವ ಸೇರಿದಂತೆ ಹಲವರು ನಟಿಸಲಿದ್ದಾರೆ. ಒಂದು ಸುಂದರ ಪ್ರೇಮಕಥೆ ಜೊತೆ ಹೊಸ ಲುಕ್‌ನಲ್ಲಿ ಅನಿರುದ್ಧ ಅವರನ್ನ ಕಣ್ತುಂಬಿಕೊಳ್ಳಬಹುದಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜೀವ್ ಅಭಿನಯದ ‘ಉಸಿರೇ ಉಸಿರೇ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ರಾಜೀವ್ ಅಭಿನಯದ ‘ಉಸಿರೇ ಉಸಿರೇ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ಬಿಗ್ ಬಾಸ್ ಖ್ಯಾತಿಯ ನಟ ರಾಜೀವ್ (Rajeev) ನಾಯಕರಾಗಿ ನಟಿಸಿರುವ  ‘ಉಸಿರೇ ಉಸಿರೇ’ (Usire Usire) ಚಿತ್ರಕ್ಕಾಗಿ ಪ್ರೇಮಕವಿ ಕೆ.ಕಲ್ಯಾಣ್ ಬರೆದಿರುವ ಉಸಿರೇ ನನ್ನ ಉಸಿರೇ ಎಂಬ ಚಿತ್ರದ ಮೊದಲ ಹಾಡು (Song) ಇತ್ತೀಚೆಗೆ ಬಿಡುಗಡೆಯಾಯಿತು. ವಿವೇಕ್ ಚಕ್ರವರ್ತಿ ಸಂಗೀತ ನೀಡಿರುವ ಹಾಗೂ ವಾಸುಕಿ ವೈಭವ್ ಹಾಡಿರುವ ಈ ಹಾಡನ್ನು  ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ ಹರೀಶ್ ಹಾಗೂ ವಿಷ್ಣು ಭಟ್ ಬಿಡುಗಡೆ ಮಾಡಿದರು.

    ಇದೊಂದು ನವೀರದ ಪ್ರೇಮಕಥೆ. ಪ್ರೀತಿಗೆ ಜಾತಿಯಿಲ್ಲ ಎಂದು ಸಾರುವ ಕಥೆ ಎಂದು ಮಾತು ಪ್ರಾರಂಭಿಸಿದ ನಾಯಕ ರಾಜೀವ್, ಉಸಿರೇ ಉಸಿರೇ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ‌. ಇತ್ತೀಚೆಗೆ ಬಳ್ಳಾರಿಯ ರೇಣುಕಾಂಬ ಜಾತ್ರೆಯಲ್ಲಿ ಹಾಗೂ ಮಂತ್ರಾಲಯದ ಗುರು ಸಾರ್ವಭೌಮರ ಸನ್ನಿಧಿಯಲ್ಲಿ ಚಿತ್ರದ ಟೀಸರ್ ಬಿಡುಗಡೆ‌ ಮಾಡಿದ್ದೆವು. ಇಂದು ಮೊದಲ ಹಾಡು ಬಿಡುಗಡೆಯಾಗಿದೆ. ಎಲ್ಲರೂ ಸಾಮಾನ್ಯವಾಗಿ ಮೊದಲು ಡ್ಯುಯೆಟ್ ಸಾಂಗ್ ಬಿಡುಗಡೆ ಮಾಡುತ್ತಾರೆ. ಆದರೆ ನಾವು ಪ್ಯಾಥೋ ಸಾಂಗ್ ಬಿಡುಗಡೆ ಮಾಡಿದ್ದೇವೆ. ಈ ಹಾಡನ್ನು ಮೊದಲು ಬಿಡುಗಡೆ ಮಾಡಲು ಕಾರಣವೆಂದರೆ, ಈ ಹಾಡಿನಲ್ಲಿ ಇಡೀ ಚಿತ್ರದ ಕಥೆಯಿದೆ. ಹಾಡನ್ನು ಗಮನವಿಟ್ಟು ಕೇಳಿದಾಗ ನಮ್ಮ ಚಿತ್ರದ ಕಥೆ ಅರ್ಥವಾಗುತ್ತದೆ. ಈ ಹಾಡನ್ನು ಬಿಡುಗಡೆ ಮಾಡಿಕೊಟ್ಟ ಗುರುಕಿರಣ್, ಭಾ.ಮ.ಹರೀಶ್ ಹಾಗೂ ವಿಷ್ಣು ಭಟ್ ಅವರಿಗೆ ಧನ್ಯವಾದ ತಿಳಿಸಿದರು.

    ಇದು ನನ್ನ ಮೊದಲ ನಿರ್ಮಾಣದ ಚಿತ್ರ.‌ ನಾನು ಚಿತ್ರ ನಿರ್ಮಾಣ ಮಾಡಲು ಕಿಚ್ಚ ಸುದೀಪ್ (Kiccha Sudeep)ಅವರೆ ಸ್ಫೂರ್ತಿ. ಅವರು ನನ್ನ ಬೆನ್ನೆಲುಬಾಗಿ ನಿಂತರು ಹಾಗೂ ಪ್ರಮುಖಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಕ್ಲೈಮ್ಯಾಕ್ಸ್ ನಲ್ಲಿ ಸುದೀಪ್ ಅವರ ಅಭಿನಯದ ಸನ್ನಿವೇಶಗಳು ಸುಮಾರು 18 ನಿಮಿಷಗಳು ಬರುತ್ತದೆ‌. ಸುದೀಪ್ ಅವರಿಗೆ ಹಾಗೂ ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ಪ್ರದೀಪ್ ಯಾದವ್. ಇದನ್ನೂ ಓದಿ:ದಕ್ಷಿಣದ ಸಿನಿಮಾಗಳಲ್ಲಿ ಸಂಜಯ್ ದತ್ ಬ್ಯುಸಿ

    ನಮ್ಮ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಸೆಪ್ಟೆಂಬರ್ ನಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ರಾಜೀವ್ ಅವರಿಗೆ ನಾಯಕಿಯಾಗಿ ಶ್ರೀಜಿತ ನಟಿಸಿದ್ದಾರೆ. ಕಿಚ್ಚ ಸುದೀಪ್ ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಖ್ಯಾತ ನಟರಾದ ಆಲಿ ಹಾಗೂ ಪದ್ಮಭೂಷಣ ಪ್ರಶಸ್ತಿ ವಿಜೇತರು, ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿ  ಗಿನ್ನಿಸ್ ರೆಕಾರ್ಡ್ ಮಾಡಿರುವ ಬ್ರಹ್ಮಾನಂದಂ ಮೊದಲ ಬಾರಿಗೆ ನಮ್ಮ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ.

     

    ಡೈನಾಮಿಕ್ ಸ್ಟಾರ್ ದೇವರಾಜ್, ಸಾಧುಕೋಕಿಲ, ಮಂಜು ಪಾವಗಡ, ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಶೈನಿಂಗ್ ಸೀತಾರಾಮು, ಜಗಪ್ಪ, ಸುಶ್ಮಿತಾ ಇನ್ನೂ ಮುಂತಾದವರ ತಾರಾಬಳಗವಿದೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ. ಮುಂದೆ  ಉಳಿದ ಹಾಡುಗಳು ಹಾಗೂ ಟ್ರೇಲರ್ ಸಹ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಸಿ.ಎಂ.ವಿಜಯ್ (CM Vijay)ತಿಳಿಸಿದರು. ನಾಯಕಿ ಶ್ರೀಜಿತ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಾಡುಗಳ ಕುರಿತು ವಿವೇಕ್ ಚಕ್ರವರ್ತಿ ಮಾಹಿತಿ ನೀಡಿದರು. ನಿರ್ಮಾಪಕರ ತಾಯಿ ಪ್ರಮಿಳಾ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕಿಚ್ಚ 46’ ಚಿತ್ರಕ್ಕೆ 65 ದಿನಗಳ ನಿರಂತರ ಚಿತ್ರೀಕರಣ: 5 ಭಾಷೆಗಳಲ್ಲಿ ಸಿನಿಮಾ

    ‘ಕಿಚ್ಚ 46’ ಚಿತ್ರಕ್ಕೆ 65 ದಿನಗಳ ನಿರಂತರ ಚಿತ್ರೀಕರಣ: 5 ಭಾಷೆಗಳಲ್ಲಿ ಸಿನಿಮಾ

    ವಿವಾದದ ಕಾರಣದಿಂದ ಬೇಸತ್ತಿದ್ದ ಕಿಚ್ಚನ (Kichcha Sudeep) ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸುದೀಪ್ ಅವರ ಹೊಸ ಸಿನಿಮಾದ ಶೂಟಿಂಗ್ ನಾಳೆಯಿಂದ ಶುರುವಾಗಲಿದ್ದು, ಚೆನ್ನೈನಲ್ಲಿ ಸುದೀಪ್ ಬೀಡು ಬಿಡಲಿದ್ದಾರೆ. ನಿರಂತರ ಚಿತ್ರೀಕರಣಕ್ಕೆ ನಿರ್ದೇಶಕರು ಪ್ಲ್ಯಾನ್ ಮಾಡಿದ್ದು, ಚೆನ್ನೈ ಮತ್ತು ಸುತ್ತಮುತ್ತ ಶೂಟಿಂಗ್ ನಡೆಯಲಿದೆ ಎಂದು ಹೇಳಲಾಗುತ್ತಿದೆ.

    ಕಿಚ್ಚ 46 (Kichcha 46) ಸಿನಿಮಾದ ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ಸುದೀಪ್ ತಿರುಪತಿಗೆ (Thirupathi Thimmappa) ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಹಲವು ದಿನಗಳಿಂದ ಕಿರಿಕಿರಿ ಅನುಭವಿಸುತ್ತಿದ್ದ ಕಿಚ್ಚ, ದೇವರ ದರ್ಶನ ಪಡೆದುಕೊಂಡು ನಿರಾಳರಾಗಿದ್ದಾರೆ. ಅಲ್ಲದೇ, ಹೊಸ ಸಿನಿಮಾದ ಚಿತ್ರೀಕರಣ ನಿರಾತಂಕವಾಗಿ ನಡೆಯಲಿ ಎಂದು ಬೇಡಿಕೊಂಡಿದ್ದಾರೆ. ಇದನ್ನೂ ಓದಿ:ಓ ಮೈ ಗಾಡ್: ಅಕ್ಷಯ್ ಕುಮಾರ್ ಶಿವನಾಗೋದು ಬೇಡ ಅಂದಿತಾ ಸೆನ್ಸಾರ್ ಮಂಡಳಿ?

    ʼವಿಕ್ರಾಂತ್ ರೋಣ’ (Vikrant Rona) ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಸುದೀಪ್ ಒಂದು ಬ್ರೇಕ್ ಪಡೆದರು. ವೃತ್ತಿ ಜೀವನದಲ್ಲಿ ಅವರು ಪಡೆದ ಮೊದಲ ಬ್ರೇಕ್ ಇದು ಅನ್ನೋದು ವಿಶೇಷ. ಈ ಸಮಯದಲ್ಲಿ ಸುದೀಪ್ ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ಕೊಟ್ಟರು. ಚುನಾವಣಾ ಪ್ರಚಾರದಲ್ಲಿ ಭಾಗಿ ಆದರು. ಬಿಜೆಪಿ ಕ್ಷೇತ್ರದ ಪರ ಪ್ರಚಾರಕ್ಕೆ ಕಣಕ್ಕೆ ಇಳಿದರು. ಈಗ ಅವರು ಶೂಟಿಂಗ್ ಹೊರಡೋಕೆ ರೆಡಿ ಆಗಿದ್ದಾರೆ.

     

    ಒಟ್ಟು 65 ದಿನಗಳ ಸುದೀರ್ಘ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ನಡೆಯಲಿದ್ದು, ಐದು ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ(Mahabalipuram) ಸಿನಿಮಾದ ಬಹುತೇಕ ಚಿತ್ರೀಕರಣ ನಡೆಯಲಿದೆ. ಸಿನಿಮಾದ ಮೊದಲ ಝಲಕ್ ಸಂಚಲನ ಮೂಡಿಸಿದೆ. ನಾನು ಮನುಷ್ಯನಲ್ಲ ರಾಕ್ಷಸ ಎನ್ನುವ ಕಿಚ್ಚನ ಖಡಕ್ ಡೈಲಾಗ್ ಫ್ಯಾನ್ಸ್ ಕಿಕ್ ಕೊಟ್ಟಿತ್ತು. ಈಗ ಸಿನಿಮಾ ಚಿತ್ರೀಕರಣಕ್ಕೆ ಕೌಂಟ್‌ಡೌನ್ ಶುರುವಾಗಿದೆ. ವಿಜಯ್ ಕಾರ್ತಿಕೇಯ ಅವರು ‘K 46ʼ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ. ವಿ ಕ್ರಿಯೇಷನ್ಸ್ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಲ್‌ಶೀಟ್‌ ಕದನಕ್ಕೆ ಬ್ರೇಕ್‌ ಬೀಳುವ ಮುಂಚೆಯೇ ‘K46’ ಸಿನಿಮಾಗೆ ಸಜ್ಜಾದ ಕಿಚ್ಚ ಸುದೀಪ್

    ಕಾಲ್‌ಶೀಟ್‌ ಕದನಕ್ಕೆ ಬ್ರೇಕ್‌ ಬೀಳುವ ಮುಂಚೆಯೇ ‘K46’ ಸಿನಿಮಾಗೆ ಸಜ್ಜಾದ ಕಿಚ್ಚ ಸುದೀಪ್

    ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್(Kiccha Sudeep)- ನಿರ್ಮಾಪಕ ಕುಮಾರ್ ಕಾಲ್‌ಶೀಟ್ ಕದನಕ್ಕೆ ಪೂರ್ಣ ವಿರಾಮ ಬೀಳುವ ಮುಂಚಯೇ ಕಿಚ್ಚನ 46 ಸಿನಿಮಾಗೆ ಸಿದ್ಧತೆ ನಡೆಯುತ್ತಿದೆ. ಕುಮಾರ್ ಜೊತೆಗಿನ ಸಂಧಾನದ ಮಾತುಕತೆ ನಡೆಯುತ್ತಿದೆ. ಈ ವಾರದ ಅಂತ್ಯದಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ. ಈ ಬೆನ್ನಲ್ಲೇ ವಿವಾದ ಬದಿಗಿಟ್ಟು ಕಾಯಕವೇ ಕೈಲಾಸ ಅಂತಾ ಸುದೀಪ್ ಹೊಸ ಸಿನಿಮಾದ ಶೂಟಿಂಗ್‌ನತ್ತ ಮುಖ ಮಾಡಿದ್ದಾರೆ.‌ ಇದನ್ನೂ ಓದಿ:‘BAD’ ಸಿನಿಮಾದಲ್ಲಿ ಪ್ರೀತಿಯ ಪ್ರತಿನಿಧಿಯಾದ ಅಪೂರ್ವ ಭಾರದ್ವಾಜ್

    ‘ವಿಕ್ರಾಂತ್ ರೋಣ’ ಸಿನಿಮಾದ ಬಳಿಕ ತನ್ನ ಜೊತೆ ಸಿನಿಮಾ ಮಾಡ್ತಾರೆ ಅಂತಾ ಮಾತುಕತೆ ಆಗಿತ್ತು. ಹಣ ಪಡೆದು ಸಾಕಷ್ಟು ಸಮಯದಿಂದ ಕಾಲ್‌ಶೀಟ್ ನೀಡದೇ ಸುದೀಪ್ ಸತಾಯಿಸುತ್ತಿದ್ದಾರೆ ಎಂದು ನಿರ್ಮಾಪಕ ಕುಮಾರ್ (Producer Kumar) ಆರೋಪಿಸಿದ್ದರು. ಇದಾದ ಬಳಿಕ ಸುದೀಪ್ ಕಾನೂನು ಸಮರ ಸಾರಿದ್ದರು. ಬಳಿಕ ರವಿಚಂದ್ರನ್ (Ravichandran) ಅವರ ಜೊತೆ ಕುಮಾರ್-ಸುದೀಪ್ ಇಬ್ಬರ ಸಂಧಾನ ಸಭೆ ನಡೆದಿತ್ತು. ಆದರೆ ಇದು ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ. ಕೊನೆಯ ಮೀಟಿಂಗ್‌ನಲ್ಲಿ ಶಿವಣ್ಣ (Shivarajkumar) ಕೂಡ ಭಾಗಿಯಾಗಲಿದ್ದಾರೆ. ಬಳಿಕ ಕಾಲ್‌ಶೀಟ್ ಕದನಕ್ಕೆ ಬ್ರೇಕ್ ಸಿಗಲಿದೆ.

    ʼವಿಕ್ರಾಂತ್ ರೋಣ’ (Vikrant Rona) ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಸುದೀಪ್ ಒಂದು ಬ್ರೇಕ್ ಪಡೆದರು. ವೃತ್ತಿ ಜೀವನದಲ್ಲಿ ಅವರು ಪಡೆದ ಮೊದಲ ಬ್ರೇಕ್ ಇದು ಅನ್ನೋದು ವಿಶೇಷ. ಈ ಸಮಯದಲ್ಲಿ ಸುದೀಪ್ ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ಕೊಟ್ಟರು. ಚುನಾವಣಾ ಪ್ರಚಾರದಲ್ಲಿ ಭಾಗಿ ಆದರು. ಬಿಜೆಪಿ ಕ್ಷೇತ್ರದ ಪರ ಪ್ರಚಾರಕ್ಕೆ ಕಣಕ್ಕೆ ಇಳಿದರು. ಈಗ ಅವರು ಶೂಟಿಂಗ್ ಹೊರಡೋಕೆ ರೆಡಿ ಆಗಿದ್ದಾರೆ.

    ‘K 46’ ಚಿತ್ರದ ಶೂಟಿಂಗ್ ಆಗಸ್ಟ್ ಮೊದಲ ವಾರದಿಂದ ಪ್ರಾರಂಭ ಆಗಲಿದೆ. 55 ದಿನಗಳ ಸುದೀರ್ಘ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಯಲಿದೆ. ಸಿನಿಮಾದ ಮೊದಲ ಝಲಕ್ ಸಂಚಲನ ಮೂಡಿಸಿದೆ. ನಾನು ಮನುಷ್ಯನಲ್ಲ ರಾಕ್ಷಸ ಎನ್ನುವ ಕಿಚ್ಚನ ಖಡಕ್ ಡೈಲಾಗ್ ಫ್ಯಾನ್ಸ್ ಕಿಕ್ ಕೊಟ್ಟಿತ್ತು. ಈಗ ಸಿನಿಮಾ ಚಿತ್ರೀಕರಣಕ್ಕೆ ಕೌಂಟ್‌ಡೌನ್ ಶುರುವಾಗಿದೆ. ವಿಜಯ್ ಕಾರ್ತಿಕೇಯ ಅವರು ‘K 46ʼ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ. ವಿ ಕ್ರಿಯೇಷನ್ಸ್ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುದೀಪ್‌ ಕೋಪ ಶಮನ.. ಕಮಾರ್ ಜೊತೆ ಸಂಧಾನ!?‌

    ಸುದೀಪ್‌ ಕೋಪ ಶಮನ.. ಕಮಾರ್ ಜೊತೆ ಸಂಧಾನ!?‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುದೀಪ್-ಕುಮಾರ್ ಸಂಧಾನ ಸಭೆ ನಡೆಯೋದು ಅನುಮಾನ

    ಸುದೀಪ್-ಕುಮಾರ್ ಸಂಧಾನ ಸಭೆ ನಡೆಯೋದು ಅನುಮಾನ

    ಅಂದುಕೊಂಡಂತೆ ಆಗಿದ್ದರೆ ರವಿವಾರವೇ ಕಿಚ್ಚ ಸುದೀಪ್ (Kiccha Sudeep) ಮತ್ತು ನಿರ್ಮಾಪಕ ಎನ್.ಕುಮಾರ್ (N. Kumar) ನಡುವಿನ ಗಲಾಟೆಗೆ ಅಂತ್ಯ ಸಿಗಬೇಕಿತ್ತು. ಆದರೆ, ರವಿವಾರವೂ ಸಂಧಾನ ಸಭೆ ನಡೆದಿಲ್ಲ. ಇಂದು ಕೂಡ ನಡೆಯುವುದು ಬಹುತೇಕ ಅನುಮಾನ ಎನ್ನುವ ಮಾಹಿತಿ ಸಿಕ್ಕಿದೆ. ರವಿಚಂದ್ರನ್ (Ravichandran) ಅವರು ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವುದರಿಂದ ಮತ್ತು ಶಿವರಾಜ್ ಕುಮಾರ್ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರಿಂದ ಇಂದು ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

    ಬಲ್ಲ ಮೂಲಗಳು ಮಾಹಿತಿಯಂತೆ ಬುಧವಾರ ಅಥವಾ ಗುರುವಾರ ಸಭೆ ನಡೆಯುವ ಸಾಧ್ಯತೆ ಇದೆ. ಹಾಗಂತ ಸ್ವತಃ ರವಿಚಂದ್ರನ್ ಅವರೇ ಸುದೀಪ್ ಮತ್ತು ಕುಮಾರ್ ಅವರಿಗೆ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದು ಚಿತ್ರರಂಗದ ಸಮನಸ್ಕರರು ಸೇರಿ ಈ ಸಮಸ್ಯೆಗೆ ಒಂದು ಪರಿಹಾರ ಸೂಚಿಸಲಿದ್ದಾರಂತೆ.

    ಮೊನ್ನೆಯಷ್ಟೇ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ರವಿಚಂದ್ರನ್ ನಿವಾಸದಲ್ಲಿ ಸಂಧಾನ ಸಭೆ ರಾತ್ರಿ ಹತ್ತು ಗಂಟೆಯವರೆಗೂ ನಡೆದಿದೆ ಎಂದು ಹೇಳಲಾಗುತ್ತಿದೆ. ಸುದೀಪ್, ಕುಮಾರ್, ರಾಕ್ ಲೈನ್ ವೆಂಕಟೇಶ್, ಭಾ.ಮಾ ಹರೀಶ್, ಉಮೇಶ್ ಬಣಕಾರ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಮೊನ್ನೆಯ ಸಂಧಾನ ಯಶಸ್ವಿ ಆಗಿಲ್ಲ ಎಂದು ಹೇಳಲಾಗುತ್ತಿದೆ. ಕಿಚ್ಚ ಸುದೀಪ್ ಮತ್ತು ಕುಮಾರ್ ಪ್ರತ್ಯೇಕವಾಗಿ ತಮ್ಮ ನೋವುಗಳನ್ನು ಹೇಳಿಕೊಂದ್ದಾರೆ.

    ಎನ್.ಕುಮಾರ್ ಈ ಹಿಂದೆ ಪ್ರತ್ಯೇಕವಾಗಿ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಸುದೀಪ್ ಮತ್ತು ತಮ್ಮ ನಡುವಿನ ಮನಸ್ತಾಪವನ್ನು ಬಗೆ ಹರಿಸುವಂತೆ ವಿನಂತಿಸಿಕೊಂಡಿದ್ದರು. ತಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ಅವರು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ:ಟಾಲಿವುಡ್‌ನಲ್ಲಿ ಕನ್ನಡತಿಯರ ದರ್ಬಾರ್- ತೆಲುಗು ನಟಿಯರ ಬಗ್ಗೆ ಅಲ್ಲು ಅರ್ಜುನ್ ಬೇಸರ

    ಈ ನಡುವೆ ಕುಮಾರ್ ವಿರುದ್ಧ ಸುದೀಪ್ ಕೋರ್ಟ್ ಮೆಟ್ಟಿಲು ಏರಿದ್ದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. ತಾವು ಯಾವುದೇ ಸಂಧಾನಕ್ಕೆ ಬರುವುದಿಲ್ಲ ಕೋರ್ಟ್ ನಲ್ಲೇ ನ್ಯಾಯ ಸಿಗಲಿ ಎಂದು ಸುದೀಪ್ ಹೇಳಿಕೆ ನೀಡಿದ್ದರು. ಈ ಮಾತಿನ ಬೆನ್ನಲ್ಲೇ ಕುಮಾರ್ ವಾಣಿಜ್ಯ ಮಂಡಳಿಯ ಮುಂದೆ ಧರಣೆಗೆ ಕೂತಿದ್ದರು.

     

    ರವಿಚಂದ್ರನ್ ಅವರ ಮಾತಿನಂತೆ ಪ್ರತಿಭಟನೆಯಿಂದ ಹಿಂದೆ ಸರಿದಿದ್ದ ಕುಮಾರ್, ಆನಂತರ ಶಿವರಾಜ್ ಕುಮಾರ್ ಅವರನ್ನೂ ಭೇಟಿ ಮಾಡಿದ್ದರು. ಇದೀಗ ರವಿಚಂದ್ರನ್ ಇಬ್ಬರನ್ನೂ ಕರೆಯಿಸಿಕೊಂಡು ಮಾತುಕತೆ ನಡೆಸಿದ್ದಾರೆ. ಈ ಸಭೆಗಳ ನಂತರ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಿಚ್ಚ- ಕುಮಾರ್ ಕದನ ಫಲಿತಾಂಶ 1 ದಿನ ಬಾಕಿಯಾ…?

    ಕಿಚ್ಚ- ಕುಮಾರ್ ಕದನ ಫಲಿತಾಂಶ 1 ದಿನ ಬಾಕಿಯಾ…?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುದೀಪ್-ಕುಮಾರ್ ಕಾಲ್‌ಶೀಟ್ ಕದನದ ನಡುವೆ ಚಂದ್ರಚೂಡ್‌ಗೆ ಸೂರಪ್ಪ ಬಾಬು ಕ್ಲಾಸ್

    ಸುದೀಪ್-ಕುಮಾರ್ ಕಾಲ್‌ಶೀಟ್ ಕದನದ ನಡುವೆ ಚಂದ್ರಚೂಡ್‌ಗೆ ಸೂರಪ್ಪ ಬಾಬು ಕ್ಲಾಸ್

    ಸ್ಯಾಂಡಲ್‌ವುಡ್ ನಟ ಸುದೀಪ್- ನಿರ್ಮಾಪಕ ಕುಮಾರ್ (Kumar) ಕಾಲ್‌ಶೀಟ್ ಕದನ ಸಂಧಾನದ ಹಂತದಲ್ಲಿದೆ. ಜುಲೈ 21ರ ಶುಕ್ರವಾರದಿಂದ ಸುದೀಪ್- ಕುಮಾರ್ ಸಂಧಾನಕ್ಕೆ ರವಿಚಂದ್ರನ್ ಎಂಟ್ರಿಯಾಗಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ರವಿಚಂದ್ರನ್ ಪ್ರಕಟಿಸುವ ನಿರ್ಧಾರಕ್ಕೆ ಇಬ್ಬರು ಬದ್ಧರಾಗ್ತಾರಾ ಎಂಬ ಪ್ರಶ್ನೆಯ ನಡುವೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ‘ಕೋಟಿಗೊಬ್ಬ’ (Kotigobba) ನಿರ್ಮಾಪಕ ಸೂರಪ್ಪ ಬಾಬು (Soorappa Babu) ಅವರು ಪ್ರತಿಕಾಗೋಷ್ಠಿ ನಡೆಸಿ, ಚಂದ್ರಚೂಡ್ ಅವರ ವಿರುದ್ಧ ಕಿಡಿಕಾರಿದ್ದಾರೆ.  ಇದನ್ನೂ ಓದಿ:ಮನೀಷ್ ಮಲ್ಹೋತ್ರಾ ನಿರ್ದೇಶನದಲ್ಲಿ ಮೀನಾ ಕುಮಾರಿ ಬಯೋಪಿಕ್- ಕೃತಿ ಸನೋನ್ ನಾಯಕಿ?

    ಸುದೀಪ್ ವಿರುದ್ಧ ಕುಮಾರ್ ಮಾಡಿರುವ ಆರೋಪದ ಹಿಂದೆ ನಿರ್ಮಾಪಕ ಸೂರಪ್ಪ ಬಾಬು ಕೈವಾಡವಿದೆ ನಟ ಚಂದ್ರಚೂಡ್‌ ಅವರು ಈ ಹಿಂದೆ ಹೇಳಿದ್ದರು. ಸೂರಪ್ಪ ಬಾಬು ಒಬ್ಬ ಶಿಖಂಡಿ. ಕೋಟಿಗೊಬ್ಬ 2 ಸಿನಿಮಾದ ಸಂಭಾವನೆ 2.50 ಕೋಟಿ ರೂಪಾಯಿ, ಜಾಕ್ ಮಂಜು ಅವರಿಗೆ ಒಂದೂವರೆ ಕೋಟಿ ರೂಪಾಯಿ, ಕೋಟಿಗೊಬ್ಬ 3 ಸಿನಿಮಾದ 3.5 ಕೋಟಿ ಸೇರಿ ಒಟ್ಟು ಏಳು ಕೋಟಿ ಬಾಕಿ ಹಣವನ್ನು ಸೂರಪ್ಪ ಬಾಬು ಕೊಡಬೇಕಿದೆ ಎಂದು ಚಕ್ರವರ್ತಿ ಚಂದ್ರಚೂಡ್ ಈ ಹಿಂದೆ ಆರೋಪಿಸಿದ್ದರು. ಕೋಟಿಗೊಬ್ಬ 3 ಸಿನಿಮಾ ರಿಲೀಸ್ ತಡವಾದಾಗ ಸೂರಪ್ಪ ಅವರ ಮಗಳು ಸುದೀಪ್‌ಗೆ ವಿನಂತಿಸಿದ್ದರು. ಅಂದು ನಾನು ಜೊತೆ ಇದ್ದೆ ಎಂದು ಚಂದ್ರಚೂಡ್ ಅವರು ಮಾತನಾಡಿದ್ದರು. ಈ ವಿಚಾರಕ್ಕೆ ನಿರ್ಮಾಪಕ ಸೂರಪ್ಪ ಬಾಬು ಪ್ರತಿಕ್ರಿಯೆ ನೀಡಿದ್ದಾರೆ.

    ಚಂದ್ರ ಚೂಡ್ (Chandrachud) ಅವರು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಹಕ್ಕಿಲ್ಲದೇ ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ನಾನು ಉತ್ತರ ಕೊಡಬೇಕಾಗಿರೋದು ನನಗೆ ಹಣ ಕೊಟ್ಟವರಿಗೆ ಹಾಗೂ ನನ್ನ ಮನೆಯವರಿಗೆ ಮಾತ್ರ. ನೀವು ಸತ್ಯ ಹರಿಶ್ಚಂದ್ರನ ತುಂಡು ಅಂತ ಅಂದ್ಕೊಂಡಿದ್ದಾರಾ ಅಂತಾ ಚಂದ್ರಚೂಡ್‌ಗೆ ಸೂರಪ್ಪ ಬಾಬು ಟಾಂಗ್ ಕೊಟ್ಟಿದ್ದಾರೆ.

    ನನ್ನ ಶಿಖಂಡಿ ಅಂತ ಚಂದ್ರಚೂಡ್ ಹೇಳ್ತಿದ್ದಾರೆ. ನನಗೆ ಹೆಂಡತಿ ಮತ್ತು ಇಬ್ಬರು ಮಕ್ಕಳು ಇದ್ದಾರೆ. ನಾನು 34 ವರ್ಷ ಆಯ್ತು ಚಿತ್ರರಂಗಕ್ಕೆ ಬಂದು. ಚಿತ್ರರಂಗಕ್ಕೆ ಬರುವ ಮುಂಚೆ ನಾನು ಕಾಫಿ ಲೋಟ ತೊಳೀತಿದ್ದೆ, ಈಗ ಕೋಟಿ ಕೋಟಿ ರೂಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡ್ತಿದ್ದಿನಿ ಅಂತ ಹೆಮ್ಮೆ ಇದೆ. ವೀರ ಸ್ವಾಮಿ ಅವರು ಮೊದಲು ಒಂದು ಆಫೀಸಲ್ಲಿ ಕೆಲಸ ಮಾಡ್ತಿದ್ರು. ನಂತರ ಅವರೂ ದೊಡ್ಡ ನಿರ್ಮಾಪಕರಾಗಿದ್ರು. ಹಾಗೆ ನಾವೂ ಬೆಳೆದು ಬಂದ ದಾರಿ ಇತ್ತು.

    ಕುಮಾರ್ ಅವರ ಆರೋಪದ ಹಿಂದೆ ನಾನಿದ್ದೀನಿ ಅಂತಾ ಸುಳ್ಳು ಆರೋಪ ಮಾಡ್ತಿದ್ದಾರೆ. ಎಲ್ಲೋ ಕುತ್ಕೊಂಡು ಮನೆ ಹಾಳು ಮಾಡ್ತೀರಾ. ಕುಮಾರ್ ಅವರು ನನ್ನ ಸ್ನೇಹಿತ. 8 ತಿಂಗಳು ಅವೈಡ್ ಮಾಡಿದ್ದೆ, ಕುಮಾರ್ 2 ಸಲ ಸುಸೈಡ್ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಅವರು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು, ಯಾರಿಗಾದ್ರು ಗೊತ್ತಾ? ದೇವರ ಮೇಲೆ ಭಾರ ಹಾಕಿ ಎಲ್ಲಾ ಸರಿ ಹೋಗುತ್ತೆ ಅಂತಾ ಹೇಳಿದ್ದೆ, ಇಂಡಸ್ಟ್ರಿಯಲ್ಲಿ ಈಗಾಗಲೇ ಸಿನಿಮಾ ಇಲ್ಲದೇ ಸಾಯುತ್ತಾ ಇದ್ದೀವಿ? ಅದನ್ನ ಮತ್ತಷ್ಟು ಹಾಳು ಮಾಡಬೇಡಿ ಎಂದು ಸೂರಪ್ಪ ಬಾಬು ಹೇಳಿದ್ದಾರೆ. ಸುದೀಪ್ ಅವರು ನನ್ನ ಬಗ್ಗೆ ಏನೂ ಮಾತನಾಡಿಲ್ಲ. ಆದರೆ ನಮ್ಮ ಮಧ್ಯೆ ತಂದು ಇಡುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ:ಟಾಲಿವುಡ್‌ನಲ್ಲಿ ಕನ್ನಡತಿಯರ ದರ್ಬಾರ್- ತೆಲುಗು ನಟಿಯರ ಬಗ್ಗೆ ಅಲ್ಲು ಅರ್ಜುನ್ ಬೇಸರ

    ಇನ್ನೂ ಕುಮಾರ್- ಸುದೀಪ್ (Sudeep) ಸಂಧಾನದ ಬಗ್ಗೆ ಮೀಟಿಂಗ್ ನಡೆದಿದೆ. ಕಾಲ್‌ಶೀಟ್ ಕದನದಲ್ಲಿ ಇಬ್ಬರ ದಾಖಲೆಗಳನ್ನ ರವಿಚಂದ್ರನ್ ಅವರು ಪರಿಶೀಲನೆ ನಡೆಸಿದ್ದಾರೆ. ಕಳೆದ 3 ದಿನಗಳ ಸತತ ಮೀಟಿಂಗ್ ನಂತರ ರವಿಚಂದ್ರನ್ (Ravichandran) ಅವರ ಮಾತಿಗೆ ಸುದೀಪ್- ಕುಮಾರ್ ಇಬ್ಬರೂ ಆಲ್‌ಮೋಸ್ಟ್ ಓಕೆ ಅಂದಿದ್ದಾರೆ ಎಂಬುದು ಇನ್‌ಸೈಡ್ ಸ್ಟೋರಿ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]