Tag: ಕಿಚ್ಚ ಸುದೀಪ್

  • ಮಾನವೀಯತೆ ಮರೆತ ಭಾಗ್ಯಶ್ರೀಗೆ ಕಿವಿ ಹಿಂಡಿದ ಸುದೀಪ್

    ಮಾನವೀಯತೆ ಮರೆತ ಭಾಗ್ಯಶ್ರೀಗೆ ಕಿವಿ ಹಿಂಡಿದ ಸುದೀಪ್

    ದೊಡ್ಮನೆಯ ಮೊದಲ ಪಂಚಾಯಿತಿಯಲ್ಲಿ ಕಿಚ್ಚ (Kiccha Sudeep) ಎಲ್ಲರಿಗೂ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ತುಕಾಲಿ ಸಂತುಗೆ ಬೆವರಿಳಿಸಿದ ಕಿಚ್ಚ, ಹಿರಿಯ ನಟಿ ಭಾಗ್ಯಶ್ರೀ (Bhagyashree) ಅವರಿಗೆ ಬೆವರಿಳಿಸಿದ್ದಾರೆ. ಮೇಕಪ್ ಮಾಡಿಕೊಂಡು ಟಿಪ್ ಟಾಪ್ ಆಗಿ ಬಂದಿದ್ದ ನಟಿಯ ಮೇಲೆ ಬಾಣಗಳ ಸುರಿಮಳೆಯನ್ನೇ ಸುರಿಸಿದರು ಸುದೀಪ್. ಮುಖಕ್ಕೆ ಹಾಕಿದ ಮೇಕಪ್ ಹರಿದು ಗಲ್ಲದ ಮೇಲೆ ಹರಿಯುವಂತೆ ಭಾಗ್ಯಶ್ರೀಗೆ ಕ್ಲಾಸ್ ತೆಗೆದುಕೊಂಡರು. ಇದನ್ನೂ ಓದಿ:ಆಕ್ಟರ್‌ ಆಗಿರೋ ಶ್ರೀಲೀಲಾ ಮೆಡಿಕಲ್‌ ಓದಿದ್ದೇಕೆ ಗೊತ್ತಾ? ಇಲ್ಲಿದೆ ಸೀಕ್ರೆಟ್

    ಭಾಗ್ಯಶ್ರೀ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ ಕಲಾವಿದೆ. ತುಂಬಾನೇ ಎಮೋಷನಲ್ ನಟಿ. ಆದರೆ, ಹಸಿದಾಗ ಹೊಟ್ಟೆ ತುಂಬಾ ಅನ್ನ ಹಾಕಿದವರನ್ನು ಮರೆತು, ಎಡವಟ್ಟು ಮಾಡಿಕೊಂಡಿದ್ದಾರೆ. ತೀರಾ ಹಸಿವು ಅಂತ ಒದ್ದಾಡಿದಾಗ ಡ್ರೋನ್ ಪ್ರತಾಪ್ (Drone Prathap) ಅವರು ಭಾಗ್ಯಶ್ರೀ ಅವರಿಗೆ ರೊಟ್ಟಿ ಮಾಡಿ ಕೊಟ್ಟಿದ್ದಾರೆ. ಹೊಟ್ಟೆ ತುಂಬಾ ಅನ್ನ ಹಾಕಿದ್ದಾರೆ. ಹಸಿವು ನೀಗಿಸಿದ್ದಾರೆ. ಇಂತಹ ವ್ಯಕ್ತಿಯನ್ನೇ ಮನೆಯಿಂದ ಆಚೆ ಹಾಕೋಕೆ ಹೊರಟಿದ್ದಾರೆ ಭಾಗ್ಯಶ್ರೀ. ಇದು ಸುದೀಪ್ ಅವರ ಕೋಪಕ್ಕೆ ಕಾರಣವಾಗಿದೆ.

    ಅನ್ನ ಹಾಕಿದ ಕೈಗಳನ್ನು ಜೀವನಪೂರ್ತಿ ಮರೀಬಾರದು ಎಂಬ ಗಾದೆ ಇದೆ. ಅದನ್ನು ಬಿಗ್ ಬಾಸ್ (Bigg Boss Kannada 10) ವೇದಿಕೆಯ ಮೇಲೆ ನೆನಪಿಸಿದ್ದಾರೆ ಕಿಚ್ಚ. ಅನ್ನ ಹಾಕಿದ ವ್ಯಕ್ತಿಗೆ ಹೀಗೆ ಮರೆಯೋದು ಸರಿ ಅಲ್ಲ ಅಂತ ಪಾಠ ಮಾಡಿದ್ದಾರೆ. ಕಿಚ್ಚನ ಮಾತು ಸರಿ ಅನಿಸಿ ಭಾಗ್ಯಶ್ರೀ ಭಾವುಕರಾಗಿದ್ದಾರೆ. ಇದು ಕೇವಲ ಭಾಗ್ಯಶ್ರೀ ಅವರಿಗೆ ಹೇಳಿದ ಪಾಠದಂತೆ ಇರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಇರೋರಿಗೆ ಹೇಳಿದ ಕಿವಿಮಾತಿನಂತೆ ಇತ್ತು. ಕಿಚ್ಚನ ಮಾತು ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಯಿತು.

    ಬಿಗ್ ಬಾಸ್ ಮನೆಯಲ್ಲಿ ಉಳಿಯಲು ಏನೆಲ್ಲ ತಂತ್ರಗಳನ್ನು ಕಂಟೆಸ್ಟೆಂಟ್ ಹೆಣೆಯುತ್ತಾರೆ. ಬಹುಶಃ ಭಾಗ್ಯಶ್ರೀ ಅದನ್ನೇ ಮಾಡಿರಬೇಕು. ಆದರೆ, ಕಿಚ್ಚನಿಗೆ ಈ ನಡೆ ಸರಿ ಕಾಣಿಸಿಲ್ಲ. ಹಾಗಾಗಿ ನೇರವಾಗಿಯೇ ಕ್ಲಾಸ್ ತಗೆದುಕೊಂಡಿದ್ದಾರೆ. ಇದನ್ನು ಎಲ್ಲರೂ ನೆನಪಲ್ಲಿ ಇಟ್ಟುಕೊಂಡು ಉಳಿದವರು ಹೇಗೆ ನಡೆದುಕೊಳ್ಳುತ್ತಾರೆ ಎನ್ನೋದೇ ಸದ್ಯಕ್ಕಿರುವ ಪ್ರಶ್ನೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತುಕಾಲಿ ಸಂತುಗೆ ಮಾತಲ್ಲೇ ಚಾಟಿಯೇಟು ಬೀಸಿದ ಕಿಚ್ಚ ಸುದೀಪ್

    ತುಕಾಲಿ ಸಂತುಗೆ ಮಾತಲ್ಲೇ ಚಾಟಿಯೇಟು ಬೀಸಿದ ಕಿಚ್ಚ ಸುದೀಪ್

    ದೊಡ್ಮನೆಯಲ್ಲಿ ಕಂಟೆಸ್ಟೆಂಟ್ ಪೈಕಿ, ಪಕ್ಕಾ ಎಂಟರ್‌ಟೈನರ್ ಅಂದರೆ, ಅದು ತುಕಾಲಿ ಸಂತು. ಇಡೀ ಮನೆಯನ್ನು ಲವಲವಿಕೆಯಲ್ಲಿ ಇಟ್ಟ ಹೆಗ್ಗಳಿಕೆ ಸಂತು ಅವರದ್ದು. ತಮಾಷೆ ಮಾಡ್ತಾ, ಡೈಲಾಗ್ ಹೇಳ್ತಾ, ಮಿಮಿಕ್ರಿ ಮಾಡ್ತಾ ನೋಡುಗರಿಗೆ ಸಖತ್ ಮನರಂಜನೆ ನೀಡುತ್ತಿದ್ದಾರೆ. ಈ ನಡೆಯೇ ಅವರಿಗೆ ಮುಳುವಾಗಿದೆ. ಇಂದು ನಡೆದ ಕಿಚ್ಚನ ಪಂಚಾಯತಿಯಲ್ಲಿ, ಸುದೀಪ್ ಅವರು ಸಂತು ಮೇಲೆ ಹರಿಹಾಯ್ದಿದ್ದಾರೆ. ಒಬ್ಬರ ವ್ಯಕ್ತಿತ್ವವನ್ನು ಕೊಲ್ಲೋಕೆ ನಿಮಗೆ ಅಧಿಕಾರ ಕೊಟ್ಟೋರು ಯಾರು? ಎಂದು ನೇರವಾಗಿಯೇ ಸಂತುಗೆ ಸುದೀಪ್ (Kichcha Sudeep) ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ನಮ್ರತಾ ಜೊತೆ ‘ರಾಜಾ ಶಿವರಾಜ’ ಹಾಡಿಗೆ ಸ್ಟೆಪ್ ಹಾಕಿದ ತುಕಾಲಿ ಸಂತು

    ಬಿಗ್ ಬಾಸ್ (Bigg Boss Kannada) ಶುರುವಾಗಿ ಇಂದಿಗೆ ಸರಿಯಾಗಿ ಒಂದು ವಾರ ಕಳೆದಿದೆ. ಮೊದಲ ಕಿಚ್ಚನ ಪಂಚಾಯತಿ ಕೂಡ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿ ಮತ್ತು ಪಂಚಾಯತಿಯಲ್ಲಿ ಹೆಚ್ಚು ಚರ್ಚೆಗೆ ಕಾರಣರಾಗಿದ್ದು ಡ್ರೋನ್ ಪ್ರತಾಪ್. ವಾರವೀಡಿ ಬಿಗ್ ಬಾಸ್ ಮನೆಗೆ ಬಹುತೇಕ ಸದಸ್ಯರು ಡ್ರೋನ್ ಪ್ರತಾಪ್ ಅವರ ಮೇಲೆ ಮುಗಿಬಿದ್ದಿದ್ದರು. ಅವರ ಡ್ರೋನ್ ಸಾಧನೆಯನ್ನು ಅನುಮಾನದಿಂದ ನೋಡಿದ್ದರು. ಕ್ಷಣ ಕ್ಷಣಕ್ಕೂ ಅಪಮಾನ ಮಾಡಿದ್ದರು. ಪ್ರತಾಪ್ (Drone Prathap) ತಿರುಗಿ ಬೀಳಲಿಲ್ಲ ಅನ್ನುವ ಕಾರಣಕ್ಕಾಗಿ ಅದು ನಿರಂತರವಾಗಿ ನಡೆದಿತ್ತು. ಅದಕ್ಕೆ ಸುದೀಪ್ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ.

    ವಿನಯ್ ಗೌಡ, ತುಕಾಲಿ ಸಂತು (Tukali Santhosh) ಅಂಡ್ ಗ್ಯಾಂಗ್ ಪದೇ ಪದೇ ಡ್ರೋನ್ ಪ್ರತಾಪ್ ಅವರನ್ನು ಕೆಣಕಿದೆ. ಕೀಳು ಮಟ್ಟದಲ್ಲಿ ಜರಿದಿದೆ. ಆ ಹುಡುಗನ ಸಾಧನೆಯನ್ನು ಕೆಳಮಟ್ಟದಲ್ಲಿ ನೋಡಿದೆ. ವೈಯಕ್ತಿಕ ನಿಂದನೆ ಮಾಡಿದೆ. ಖಾಸಗಿ ವಿಚಾರವನ್ನು ಆಡಿಕೊಂಡಿದೆ. ಇದೆಲ್ಲವನ್ನೂ ಸುದೀಪ್ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಹಾಗಾಗಿಯೇ ಒಬ್ಬರ ನೋವು ಇನ್ನೊಬ್ಬರಿಗೆ ತಮಾಷೆ ಆಗತ್ತಾ ಎಂದು ಪ್ರಶ್ನಿಸಿದ್ದಾರೆ. ಒಬ್ಬ ವ್ಯಕ್ತಿಯ ಚಾರಿತ್ರ‍್ಯವಧೆ ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು? ಎಂದು ತುಕಾಲಿ ಸಂತುಗೆ ನೇರವಾಗಿಯೇ ಜಡಿಸಿದ್ದಾರೆ ಸುದೀಪ್. ಇದನ್ನೂ ಓದಿ:ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ನಟನೆಯ ‘ಪೆಂಟಗನ್’ ಹಿಂದಿಯಲ್ಲಿ ರಿಲೀಸ್

    ನನ್ನ ಮಾತಿಗೆ ಮನೆಯರವಲ್ಲ ನಗುತ್ತಿದ್ದರು, ತಮಾಷೆಯಾಗಿಯೇ ಎಲ್ಲರೂ ಸ್ವೀಕರಿಸಿದ್ದರು. ಹಾಗಾಗಿ ನಾನು ಮಾತನಾಡಿದೆ ಎಂದು ಸಂತು ಸಮಜಾಯಿಸಿ ಕೊಡೋಕೆ ಬಂದರೂ, ಸುದೀಪ್ ಅದನ್ನು ಒಪ್ಪಲಿಲ್ಲ. ಒಬ್ಬರು ಸಾವು ಮತ್ತೊಬ್ಬರಿಗೆ ತಮಾಷೆ ಆಗಬಾರದು ಎಂದು ಖಡಕ್ಕಾಗಿಯೇ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಸಂತು & ಗ್ಯಾಂಗ್‌ಗೆ ಚಳಿ ಬಿಡಿಸಿದ್ದಾರೆ. ಸದ್ಯ ಡ್ರೋನ್ ಪ್ರತಾಪ್ ಬಗ್ಗೆ ಸಿಂಪತಿ ಕ್ರಿಯೇಟ್ ಮಾಡುವಂತಹ ಕೆಲಸವನ್ನು ಸುದೀಪ್ ಮಾಡಿದ್ದಾರೆ. ಬಳಿಕ ಸಂತೂ, ಡ್ರೋನ್ ಪ್ರತಾಪ್‌ಗೆ ಕ್ಷಮೆ ಕೇಳಿದ್ದಾರೆ. ಸುದೀಪ್ ಮಾತು, ಸಾಥ್ ನೀಡಿರುವ ರೀತಿಗೆ ಡ್ರೋನ್ ಪ್ರತಾಪ್‌ಗೆ ಭಾವುಕರನ್ನಾಗಿಸಿದೆ. ಮುಂದಿನ ದಿನಗಳಲ್ಲಿ ಮನೆಯರು ಡ್ರೋನ್ ಪ್ರತಾಪ್ ಅವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

    ಮೂಲಗಳ ಪ್ರಕಾರ, ದೊಡ್ಮನೆಯಿಂದ ಮೊದಲ ವಾರ ಸ್ನೇಕ್ ಶ್ಯಾಮ್ (Snake Shyam) ಹೊರಬಂದಿದ್ದಾರೆ ಎನ್ನಲಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada: ಡ್ರೋನ್ ಪ್ರತಾಪ್ ಬಳಿಕ ವೇಟಿಂಗ್ ಲಿಸ್ಟ್‌ನಲ್ಲಿ ತನಿಶಾ ಕುಪ್ಪಂಡ

    Bigg Boss Kannada: ಡ್ರೋನ್ ಪ್ರತಾಪ್ ಬಳಿಕ ವೇಟಿಂಗ್ ಲಿಸ್ಟ್‌ನಲ್ಲಿ ತನಿಶಾ ಕುಪ್ಪಂಡ

    ನ್ನಡ ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada 10) ಕಾರ್ಯಕ್ರಮ ಶುರುವಾಗಿದೆ. ದೊಡ್ಮನೆ ಆಟಕ್ಕೆ ತನಿಶಾ ಕುಪ್ಪಂಡ (Tanisha Kuppanda) ಎಂಟ್ರಿ ಕೊಟ್ಟಿದ್ದಾರೆ. ಪ್ರೇಕ್ಷಕರ ವೋಟ್ ಮೇರೆಗೆ ಡ್ರೋನ್‌ ಪ್ರತಾಪ್‌ (Drone Prathap) ಬಳಿಕ ತನಿಶಾ ಹೋಲ್ಡ್‌ನಲ್ಲಿದ್ದಾರೆ.

    ಕಿಚ್ಚನ (Kichcha Sudeep) ನಿರೂಪಣೆಯಲ್ಲಿ ಬಿಗ್ ಬಾಸ್‌ಗೆ ಅದ್ದೂರಿ ಚಾಲನೆ ಸಿಕ್ಕಿದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಪ್ರೇಕ್ಷಕರ ವೋಟ್ ಮೇರೆಗೆ ಸ್ಪರ್ಧಿ ತನಿಶಾ ವೇಟಿಂಗ್ ಲಿಸ್ಟ್‌ನಲ್ಲಿದ್ದಾರೆ. ಅದರಂತೆ 41% ವೋಟ್ ಪಡೆದು ಸದ್ಯ ಹೋಲ್ಡ್‌ನಲ್ಲಿದ್ದಾರೆ. ಕಾಂಟ್ರವರ್ಸಿ ಕ್ವೀನ್ ತನಿಶಾ ಕುಪ್ಪಂಡ, ಬಿಗ್ ಬಾಸ್ ಮನೆಯ ಬಾಗಿಲು ತೆರೆಯುತ್ತಾರಾ? ಕಾಯಬೇಕಿದೆ.

    ಈಗಾಗಲೇ ಬಿಗ್ ಬಾಸ್ ಸ್ಪರ್ಧಿಗಳಾಗಿ ಪ್ರೇಕ್ಷಕರ ವೋಟ್ ಪಡೆದು ನಮ್ರತಾ ಗೌಡ, ಸ್ನೇಹಿತ್ ಗೌಡ, ವಿನಯ್ ಗೌಡ, ರ‍್ಯಾಪರ್ ಇಶಾನಿ, ಸಂತೋಷ್ ಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:Bigg Boss Kannada10 : ಬಿಗ್ ಬಾಸ್ ಶುರುವಾಗುವ ಮುನ್ನವೇ ಶಾಕ್ ಕೊಟ್ಟ ಕಿಚ್ಚ ಸುದೀಪ್

    ವಿಶೇಷ ಅತಿಥಿಗಳಾಗಿ ಹಿರಿಯ ನಟಿ ಶ್ರುತಿ, ಪ್ರಥಮ್, ಚಂದನ್ ಶೆಟ್ಟಿ, ಮುಂಜು ಪಾವಗಡ ಭಾಗಿಯಾಗಿ ಕಿಚ್ಚನಿಗೆ ಸಾಥ್ ನೀಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada 10: ದೊಡ್ಮನೆಗೆ ಕಾಲಿಡುವ ಸ್ಪರ್ಧಿಗಳು ಇವರೇ ನೋಡಿ

    Bigg Boss Kannada 10: ದೊಡ್ಮನೆಗೆ ಕಾಲಿಡುವ ಸ್ಪರ್ಧಿಗಳು ಇವರೇ ನೋಡಿ

    ನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ಯಾರೆಲ್ಲಾ ಕಾಲಿಟ್ಟಿದ್ದಾರೆ ಎಂಬ ಕುತೂಹಲಕ್ಕ ಇಂದು ಸಂಜೆ ತೆರೆ ಬೀಳಲಿದೆ. ಅದಕ್ಕೂ ಬಿಗ್ ಬಾಸ್ ಸ್ಪರ್ಧಿಗಳು ಲಿಸ್ಟ್ ಲೀಕ್ ಆಗಿದೆ. ಯಾರು ಯಾರು ಮನೆಯೊಳಗೆ ಕಾಲಿಟ್ಟಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.

    ಡ್ರೋನ್ ಪ್ರತಾಪ್, ಕರ‍್ತಿಕ್ ಮಹೇಶ್, ರಕ್ಷಕ್ ಬುಲೆಟ್, ತ್ರಿಪುರ ಸುಂದರಿ ಹೀರೋ ಅಭಿನವ್, ಈಶಾನಿ, ಕಾಮಿಡಿ ಕಿಲಾಡಿಗಳು ಸಂತೋಷ್, ಸಂಗೀತಾ ಶೃಂಗೇರಿ, ಚರ‍್ಲಿ, ನಾಗಿಣಿ 2 ನಮ್ರತಾ ಗೌಡ, ಸ್ನೇಕ್ ಶ್ಯಾಮ್, ವಿನಯ್ ಗೌಡ, ನೀತು ವನಜಾಕ್ಷಿ, ತನಿಶಾ ಕುಪ್ಪಂಡ, ‘ಲಕ್ಷಣ’ ನಟಿ ಭಾಗ್ಯಾ ಈ ಶೋನಲ್ಲಿ ಸ್ರ‍್ಧಿಗಳಾಗಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.

    ಅಕ್ಟೋಬರ್ 8ರ ಸಂಜೆ 6ಕ್ಕೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿರಲಿದೆ. ಸದ್ಯ ರಿಲೀಸ್ ಆಗಿರುವ ಸೀಸನ್ 10ರ ಬಿಗ್ ಬಾಸ್ ಪ್ರೋಮೋ ಕೂಡ ಗಮನ ಸೆಳೆಯುತ್ತಿದೆ.

    ಬಿಗ್‌ ಬಾಸ್‌ ಪ್ರೋಮೋದಲ್ಲಿ ಒಬ್ಬ ರಾವಣ, 10 ತಲೆ, ಒಂದೇ ಮನೆ 10 ಸೀಸನ್ ಎಂಬ ಸುದೀಪ್ ಡೈಲಾಗ್ ಖಡಕ್ ಆಗಿ ಮೂಡಿ ಬಂದಿದೆ. ಇದನ್ನೂ ಓದಿ:ದೊಡ್ಮನೆ ಆಟ ಆಡ್ತಾರಾ ವಿನಯ್ ಗೌಡ? ಅನುಮಾನ ಮೂಡಿಸಿದ ಪತ್ನಿ ಅಕ್ಷತಾ ಪೋಸ್ಟ್

    ದೊಡ್ಮನೆ ವೇದಿಕೆಯಲ್ಲಿ ಈ ಹಿಂದಿನ ಸೀಸನ್‌ಗಳ ವಿಜೇತರಾದ ಹಿರಿಯ ನಟಿ ಶ್ರುತಿ, ಪ್ರಥಮ್, ಮಂಜು ಪಾವಗಡ, ಚಂದನ್ ಶೆಟ್ಟಿ ಭಾಗಿಯಾಗುವ ಮೂಲಕ ಕರ‍್ಯಕ್ರಮದ ಕಳೆಯನ್ನ ಹೆಚ್ಚಿಸಿದ್ದಾರೆ. ಬಿಗ್ ಬಾಸ್ ಶುರುವಿಗೆ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss: ಒಬ್ಬ ರಾವಣ, 10 ತಲೆ, ಒಂದೇ ಮನೆ 10 ಸೀಸನ್‌- ಸುದೀಪ್‌ ಖಡಕ್‌ ಡೈಲಾಗ್

    Bigg Boss: ಒಬ್ಬ ರಾವಣ, 10 ತಲೆ, ಒಂದೇ ಮನೆ 10 ಸೀಸನ್‌- ಸುದೀಪ್‌ ಖಡಕ್‌ ಡೈಲಾಗ್

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada 10) ಚಾಲನೆಗೆ ಕೌಂಟ್ ಡೌನ್ ಶುರುವಾಗಿದೆ. ಬಿಗ್ ಬಾಸ್ ಗ್ರ್ಯಾಂಡ್ ಪ್ರೀಮಿಯರ್ ಮೊದಲ ಪ್ರೋಮೋ (Promo) ಕೂಡ ರಿವೀಲ್ ಆಗಿದೆ. ಬಿಗ್ ಬಾಸ್ ಮನೆ ಹೇಗಿದೆ ಎಂಬುದರ ಝಲಕ್ ಕೂಡ ತೋರಿಸಲಾಗಿದ್ದು, ನಟ ಕಮ್ ನಿರೂಪಕ ಕಿಚ್ಚ ಸುದೀಪ್ (Kichcha Sudeep) ಖಡಕ್ ಡೈಲಾಗ್ ಹೊಡೆದು ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

    ದೊಡ್ಮನೆ ಆಟಕ್ಕೆ ಅಕ್ಟೋಬರ್ 8ರ ಸಂಜೆ 6ಕ್ಕೆ ಚಾಲನೆ ಸಿಗಲಿದೆ. ಬಿಗ್ ಬಾಸ್ ಮೊದಲ ಪ್ರೋಮೋನಲ್ಲಿ ಸುದೀಪ್ ಲುಕ್‌ ಜೊತೆ ಡೈಲಾಗ್ ಕೂಡ ಮೋಡಿ ಮಾಡ್ತಿದೆ. ಇದು ಬಿಗ್‌ಬಾಸ್ ಇತಿಹಾಸದಲ್ಲೇ ಫಸ್ಟ್ ಟೈಂ ಪ್ರೋಮೋ ಬಿಟ್ಟು, ವೀಕ್ಷಕರಿಗೆ ಕಿಚ್ಚು ಹೆಚ್ಚಿಸಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಮದುವೆ ಸಡಗರ

    ಇಂದು ಕಿಚ್ಚ ಸುದೀಪ್, ಸ್ಪರ್ಧಿಗಳನ್ನು ದೊಡ್ಮನೆಗೆ ಪರಿಚಯ ಮಾಡಿಕೊಡುವ ಮೂಲಕ ಸ್ವಾಗತಿಸಲಿದ್ದಾರೆ. ಇದೀಗ ಕಲರ್ಸ್ ಕನ್ನಡ ಪ್ರೊಮೋ ಒಂದನ್ನು ರಿಲೀಸ್ ಮಾಡಿ ಅಭಿಮಾನಿಗಳಿಗೆ ಮತ್ತಷ್ಟು ಕಿಚ್ಚು ಹಚ್ಚಿಸಿದೆ. ವಿಶೇಷ ಪ್ರೋಮೋದಲ್ಲಿ ಬಿಗ್ ಸರ್ಪ್ರೈಸ್ ಒಂದನ್ನು ನೀಡಲಾಗಿದೆ.

    ಬಿಗ್‌ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಡಿಯನ್ಸ್ ಪೋಲ್‌ಗಳ ಮೂಲಕ ಸ್ಪರ್ಧಿಗಳ ಆಯ್ಕೆ ನಡೆಯಲಿದೆ ಎಂದು ಪ್ರೊಮೋದಲ್ಲಿ ತಿಳಿಸಲಾಗಿದೆ. ಇದು ಹೇಗೆ ಇರುತ್ತದೆ ಅನ್ನೋದು ಇಂದು ಸಂಜೆಯೇ ಗೊತ್ತಾಗಲಿದೆ. ಸುದೀಪ್ ಅವರ ಡೈಲಾಗ್ ಕೂಡ ಗಮನ ಸೆಳೆದಿದೆ. ಒಂದು ರಾವಣ, 10 ತಲೆ, ಒಂದು ಮನೆ 10 ಸೀಸನ್ ಎಂದು ಸುದೀಪ್ ಡೈಲಾಗ್ ಹೊಡೆದಿದ್ದಾರೆ.

    ಬಿಗ್ ಬಾಸ್ ಸೀಸನ್ 10ಕ್ಕೆ ಅತಿಥಿಗಳಾಗಿ ಹಳೆಯ ಸೀಸನ್ ವಿನ್ನರ್‌ಗಳು ವೇದಿಕೆ ಏರಿದ್ದಾರೆ. ಹಿರಿಯ ನಟಿ ಶ್ರುತಿ, ಪ್ರಥಮ್, ಮಂಜು ಪಾವಗಡ, ಚಂದನ್ ಶೆಟ್ಟಿ ಈ ಶೋನಲ್ಲಿ ಹೈಲೆಟ್ ಆಗಿದ್ದಾರೆ. ಒಟ್ನಲ್ಲಿ ಈ ಸೀಸನ್ ಹೇಗಿರಲಿದೆ ಎಂಬ ಕುತೂಹಲ ಈಗಾಗಲೇ ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ.

    ದೊಡ್ಮನೆಗೆ ಈಗಾಗಲೇ ನಮ್ರತಾ ಗೌಡ (Namratha Gowda), ನೀತು ವನಜಾಕ್ಷಿ, ರಕ್ಷಕ್ ಬುಲೆಟ್, ಸ್ನೇಕ್ ಶ್ಯಾಮ್, ಈಶಾನಿ ಸೇರಿದಂತೆ ಹಲವರು ಕಾಲಿಟ್ಟಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಮ್ಮ ಜಲ, ನಮ್ಮ ಹಕ್ಕು: ಸಿಎಂಗೆ ಮನವಿ ಮಾಡಿದ ಕಿಚ್ಚ ಸುದೀಪ್

    ನಮ್ಮ ಜಲ, ನಮ್ಮ ಹಕ್ಕು: ಸಿಎಂಗೆ ಮನವಿ ಮಾಡಿದ ಕಿಚ್ಚ ಸುದೀಪ್

    ಕಾವೇರಿ (Cauvery) ನದಿ ನೀರಿನ ವಿಚಾರವಾಗಿ ಕನ್ನಡದ ಹೆಸರಾಂತ ನಟ ಕಿಚ್ಚ ಸುದೀಪ್ (Kiccha Sudeep) ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಅವರಿಗೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಸುದೀರ್ಘವಾಗಿ ಪತ್ರವೊಂದನ್ನು ಬರೆದಿರುವ ಸುದೀಪ್, ಆ ಪತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಕಾವೇರಿ ಸಮಸ್ಯೆ ಈ ವರ್ಷವೂ ಶುರುವಾಗಿದೆ. ಕನ್ನಡ ಪರ ಸಂಘಟನೆಗಳು, ರೈತರು, ಹೋರಾಟ ನೆಡೆಸುತ್ತಿದ್ದಾರೆ. ಕನ್ನಡದ ನೆಲ, ಜಲ, ಭಾಷೆಯ ಎಲ್ಲ ಹೋರಾಟಗಳಲ್ಲೂ ನಾನು ಸದಾ ನಿಮ್ಮೊಂದಿಗೆ ಇದ್ದೇನೆ. ಮುಂಗಾರು ಮಳೆಯ ಅಭಾವದಿಂದ ರೈತರಿಗೆ ಜನತೆಯ ಕೃಷಿ ಮಾತ್ರವಲ್ಲದೇ, ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಮುಂಗಾರಿನ ಹೊರತಾಗಿ ನಮಗೆ ಕುಡಿಯುವ ನೀರಿಗಾಗಿ ಬೇರೆ ಮೂಲಗಳಿಲ್ಲ. ನಾವು ಕಾವೇರಿಯನ್ನೇ ನಂಬಿದ್ದೇವೆ. ನಾನು ತಿಳಿದುಕೊಂಡಂತೆ ಬರ ಅಧ್ಯಯನ ಸಮಿತಿ- ಕಾವೇರಿ ಸಮಿತಿಯ ತಂತ್ರಜ್ಞರು ಕೂಡಲೇ ನ್ಯಾಯಾಧಿಕರಣ ಮತ್ತು ಕೇಂದ್ರ ಸರಕಾರಕ್ಕೆ ಪ್ರಸ್ತುತ ಕರ್ನಾಟಕದ ಬರ ಪರಿಸ್ಥಿತಿಯನ್ನು ತುರ್ತಾಗಿ ಮನವರಿಕೆ ಮಾಡಕೊಡಬೇಕಿದೆ.

    ಹಿಂದಿನ ಕೆಲವು ಮುಖ್ಯಮಂತ್ರಿಗಳಂತೆಯೇ ನಮ್ಮ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ತಮಿಳುನಾಡಿನ ಮುಖ್ಯಮಂತ್ರಿಗಳೊಂದಿಗೆ ಸೌಹಾರ್ದ ಮಾತುಕತೆಯ ಮೂಲಕ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬರೆಹರಿಸಬಹುದು ಎಂದು ಹಿರಿಯರು ಹೇಳಿದ್ದನ್ನು ಕೇಳಿ ತಿಳಿದುಕೊಂಡಿದ್ದೇನೆ. ಸದ್ಯದ ಬರ ಜಲ ಹಾಹಾಕಾರಕ್ಕೆ ಪರಿಹಾರ ಒದಗಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಇದನ್ನೂ ಓದಿ:ಬಾಲಿವುಡ್‌ನಲ್ಲಿ 7 ಸಿನಿಮಾಗಳು ಫ್ಲಾಪ್, ಮತ್ತೆ ಸೌತ್‌ನತ್ತ ‘ಗಿಲ್ಲಿ’ ನಟಿ

    ಕೇಂದ್ರ ಸರಕಾರಕ್ಕೆ ಕರ್ನಾಟಕದ ಪರಿಸ್ಥಿತಿಯನ್ನು ಅರ್ಥ ಮಾಡಿಸಲು ಎಲ್ಲ ಪಕ್ಷದ ನಾಯಕರು ಒಗ್ಗಟ್ಟಾಗಿ ಮುಂದಾಗಲು ಮನವಿ ಮಾಡುತ್ತೇನೆ. ತಮಿಳುನಾಡು ರೈತರಿಗೂ ಕುರವೈ ಬೆಳೆಗೆ ನೀರು ಸಿಗಲಿ. ಆದರೆ, ನಮ್ಮ ಕುಡಿಯುವ ನೀರಿನ ಅಭಾವ ಮೊದಲು ಬಗೆಹರಿಯಲಿ. ಆದಷ್ಟು ಬೇಗ ಈ ಸಮಸ್ಯೆ ಬಗೆ ಹರಿದು ಹೋರಾಟಕ್ಕೆ ಜಯವಾಗಲಿ.

     

    ಇದರ ಜೊತೆಗೆ ಉತ್ತರ ಕರ್ನಾಟಕದ ಕೃಷ್ಣ ನದಿ, ಮಹದಾಯಿ ನದಿ ಮತ್ತು ಕಳಸಾ ಬಂಡೂರಿ ವಿವಾದಗಳು ಬಗೆ ಹರಿದು ಜನರ ಸಂಕಷ್ಟ ತೀರಲೆಂದು ಆಶಿಸುವೆ. ನಮ್ಮ ಜಲ ನಮ್ಮ ಹಕ್ಕು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಿಚ್ಚನ 50ನೇ ಚಿತ್ರಕ್ಕೆ ‘ಕಾಂತಾರ’ ಹೀರೋ ಆ್ಯಕ್ಷನ್ ಕಟ್

    ಕಿಚ್ಚನ 50ನೇ ಚಿತ್ರಕ್ಕೆ ‘ಕಾಂತಾರ’ ಹೀರೋ ಆ್ಯಕ್ಷನ್ ಕಟ್

    ಸ್ಯಾಂಡಲ್‌ವುಡ್ ಸ್ಟಾರ್ ಸುದೀಪ್ (Kichcha Sudeep) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಕಿಚ್ಚನ ಹುಟ್ಟುಹಬ್ಬದ (ಸೆ.7) ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಕಾಂತಾರ ಹೀರೋ ಕಮ್ ಡೈರೆಕ್ಟರ್ ರಿಷಬ್ ಶೆಟ್ಟಿ ಜೊತೆ ಕಿಚ್ಚ ಕೈಜೋಡಿಸಿದ್ದಾರೆ. ಸುದೀಪ್ 50ನೇ ಸಿನಿಮಾಗೆ ರಿಷಬ್ (Rishab Shetty) ನಿರ್ದೇಶನ ಮಾಡಲಿದ್ದಾರೆ.

    ಗಾಂಧಿನಗರದ ಗಲ್ಲಿಯಲ್ಲಿ ಬಿಸಿ ಬಿಸಿ ಸುದ್ದಿಯೊಂದು ಹರಿದಾಡುತ್ತಿದೆ. ಕಿಚ್ಚನ ಮುಂಬರುವ ಸಿನಿಮಾಗೆ ರಿಷಬ್ ನಿರ್ದೇಶನ ಮಾಡ್ತಿದ್ದಾರೆ. ಈ ಬಗ್ಗೆ ಒಂದು ಸುತ್ತಿನ ಮಾತುಕತೆಯಾಗಿದೆ ಎಂದು ಹೇಳಲಾಗುತ್ತಿದೆ. ಡಿಫರೆಂಟ್ ಕಥೆ ಮತ್ತು ಲುಕ್‌ನಲ್ಲಿ ಕಿಚ್ಚನನ್ನು ತೆರೆಯ ಮೇಲೆ ತೋರಿಸುವ ಪ್ಲ್ಯಾನ್‌ನಲ್ಲಿದ್ದಾರೆ ರಿಷಬ್ ಎನ್ನಲಾಗುತ್ತಿದೆ. ಇದನ್ನೂ ಓದಿ:ರಕ್ತದಿಂದ ಪತಿ ಚಿತ್ರ ಬಿಡಿಸಿದ ‘ಜೊತೆ ಜೊತೆಯಲಿ’ ನಟಿ

    ಸದ್ಯ ಸುದೀಪ್ 46ನೇ ಚಿತ್ರಕ್ಕೆ ವಿಜಯ್ ಕಾರ್ತಿಕೇಯನ್ (Vijay Karthikeyan) ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದಾದ ಬಳಿಕ ವಿಜೇಂದ್ರ ಪ್ರಸಾದ್ ಬರೆಯಲಿರುವ ಕಥೆಯಲ್ಲಿ ಸುದೀಪ್ ನಟಿಸಲಿದ್ದು, ಆರ್. ಚಂದ್ರು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ವಿಕ್ರಾಂತ್ ರೋಣ ಡೈರೆಕ್ಟರ್ ಅನೂಪ್- ಕೆಆರ್‌ಜಿ ಸಂಸ್ಥೆ ಜೊತೆ ಹೊಸ ಸಿನಿಮಾ ಮಾಡುವ ಬಗ್ಗೆ ಅಧಿಕೃತ ಅಪ್‌ಡೇಟ್‌ ಸಿಕ್ಕಿದೆ. ಸದ್ಯದಲ್ಲೇ ರಿಷಬ್ ಜೊತೆಗಿನ ಸಿನಿಮಾ ಅಧಿಕೃತ ಅಪ್‌ಡೇಟ್ ಸಿಗುತ್ತಾ? ಕಾಯಬೇಕಿದೆ.

    ರಿಷಬ್‌ ಕೂಡ ಕಾಂತಾರ 2 (Kantara 2) ಸಿನಿಮಾ ಕೆಲಸದ ತಯಾರಿಯಲ್ಲಿ ನಿರತರಾಗಿದ್ದಾರೆ. ಜೊತೆಗೆ ಬಾಲಿವುಡ್‌ ಚಿತ್ರವೊಂದನ್ನ ನಟ ಫೈನಲ್‌ ಮಾಡಿದ್ದಾರೆ.

    ಇದೆಲ್ಲದರ ನಡುವೆ ಬಿಗ್ ಬಾಸ್ (Bigg Boss) ಕಾರ್ಯಕ್ರಮ ಕೂಡ ಸುದೀಪ್ ನಿರೂಪಣೆ ಮಾಡಿ ಕೊಡಬೇಕಿದೆ. ಬಿಗ್ ಬಾಸ್ 10ನೇ ಸೀಸನ್ ಆಗಿರುವ ಕಾರಣ ಅದ್ದೂರಿಯಾಗಿ ಮೂಡಿ ಬರಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ಯುಸಿ ನಡುವೆಯೂ ‘ಉಸಿರೇ ಉಸಿರೇ’ ಚಿತ್ರದ ಡಬ್ಬಿಂಗ್ ಮುಗಿಸಿದ ಕಿಚ್ಚ

    ಬ್ಯುಸಿ ನಡುವೆಯೂ ‘ಉಸಿರೇ ಉಸಿರೇ’ ಚಿತ್ರದ ಡಬ್ಬಿಂಗ್ ಮುಗಿಸಿದ ಕಿಚ್ಚ

    ಸಿರೇ ಉಸಿರೇ (Usire Usire) ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ತಮ್ಮ ಹುಟ್ಟು ಹಬ್ಬದ ಹಿಂದಿನ ದಿನವೇ ಈ ಚಿತ್ರದ ಡಬ್ಬಿಂಗ್ (Dubbing) ಮುಗಿಸಿಕೊಟ್ಟಿದ್ದಾರೆ. ಇದೊಂದು ನವೀರದ ಪ್ರೇಮಕಥೆ ಎನ್ನುವ ನಿರ್ಮಾಪಕ ಪ್ರದೀಪ್ ಯಾದವ್,  ಇದು ನನ್ನ ಮೊದಲ ನಿರ್ಮಾಣದ ಚಿತ್ರ.‌ ನಾನು ಚಿತ್ರ ನಿರ್ಮಾಣ ಮಾಡಲು ಕಿಚ್ಚ ಸುದೀಪ್ ಅವರೆ ಸ್ಫೂರ್ತಿ. ಅವರು ನನ್ನ ಬೆನ್ನೆಲುಬಾಗಿ ನಿಂತರು ಹಾಗೂ ಪ್ರಮುಖಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಸುದೀಪ್ ಅವರಿಗೆ ಹಾಗೂ ನನ್ನ ಇಡೀ ತಂಡಕ್ಕೆ ಧನ್ಯವಾದ ತಿಳಿಸುತ್ತಾರೆ.

    ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಅಕ್ಟೋಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆಗಳಿವೆ.  ಉಸಿರೇ ಉಸಿರೇ ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ರಾಜೀವ್ (Rajeev) ಅವರಿಗೆ ನಾಯಕಿಯಾಗಿ ಶ್ರೀಜಿತ ನಟಿಸಿದ್ದಾರೆ. ಕಿಚ್ಚ ಸುದೀಪ್ ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:Bigg Boss Kannada 10 ಆರಂಭ- ಈ 3 ಸೀರಿಯಲ್‌ಗೆ ಗೇಟ್ ಪಾಸ್

    ತೆಲುಗಿನ ಖ್ಯಾತ ನಟರಾದ ಆಲಿ ಹಾಗೂ ಪದ್ಮಭೂಷಣ ಪ್ರಶಸ್ತಿ ವಿಜೇತರು, ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿ  ಗಿನ್ನಿಸ್ ರೆಕಾರ್ಡ್ ಮಾಡಿರುವ ಬ್ರಹ್ಮಾನಂದಂ ಮೊದಲ ಬಾರಿಗೆ ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್, ಸಾಧುಕೋಕಿಲ, ಮಂಜು ಪಾವಗಡ, ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಶೈನಿಂಗ್ ಸೀತಾರಾಮು,ಜಗಪ್ಪ, ಸುಶ್ಮಿತಾ  ಮುಂತಾದವರ ತಾರಾಬಳಗವಿದೆ.

     

    ಸಿ.ಎಂ.ವಿಜಯ್ (C.M. Vijay) ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು,  ಮನು ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ಮತ್ತು ಹೈಟ್ ಮಂಜು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದ್ದು, ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಿಚ್ಚ ಸುದೀಪ್‌ ಅದ್ದೂರಿ ಹುಟ್ಟುಹಬ್ಬ ಆಚರಣೆ

    ಕಿಚ್ಚ ಸುದೀಪ್‌ ಅದ್ದೂರಿ ಹುಟ್ಟುಹಬ್ಬ ಆಚರಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ಯಾರಿಕೇಡ್ ಮುರಿದು ನುಗ್ಗಿದ ಅಭಿಮಾನಿಗಳು: ಭೇಟಿ ನಿಲ್ಲಿಸಿ ಕ್ಷಮೆ ಕೇಳಿದ ಕಿಚ್ಚ

    ಬ್ಯಾರಿಕೇಡ್ ಮುರಿದು ನುಗ್ಗಿದ ಅಭಿಮಾನಿಗಳು: ಭೇಟಿ ನಿಲ್ಲಿಸಿ ಕ್ಷಮೆ ಕೇಳಿದ ಕಿಚ್ಚ

    ಕಿಚ್ಚ ಸುದೀಪ್ (Kiccha Sudeep) ನಿನ್ನೆಯಿಂದಲೇ ಅಭಿಮಾನಿಗಳ ಜೊತೆ ಹುಟ್ಟು ಹಬ್ಬವನ್ನು (birthday) ಆಚರಿಸಿಕೊಳ್ಳುತ್ತಿದ್ದಾರೆ. ಇಡೀ ರಾತ್ರಿ ಮತ್ತು ಇಂದು ಬೆಳಗ್ಗೆಯಿಂದ ನೆಚ್ಚಿನ ಅಭಿಮಾನಿಗಳ (fans) ಜೊತೆಯೇ ಇದ್ದು, ಅವರೊಂದಿಗೆ ಸಂಭ್ರಮಿಸಿದ್ದಾರೆ. ಆದರೆ, ಕೊನೆಯ ಕ್ಷಣದಲ್ಲಿ ಆದ ಘಟನೆಯಿಂದಾಗಿ ಅಭಿಮಾನಿಗಳ ಭೇಟಿ ನಿಲ್ಲಿಸಿದ್ದಾರೆ ಸುದೀಪ್.

    ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳ ಜೊತೆ ಸುದೀಪ್ ನಿದ್ದೆ ಬಿಟ್ಟು, ಅವರೊಂದಿಗೆ ಬೆರೆತಿದ್ದರು. ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ಇಂದು ಸುದೀಪ್ ಮನೆ ಮುಂದೆ ಯಾರೂ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದರೂ ಅಭಿಮಾನಿಗಳು ಬಿಡಲಿಲ್ಲ. ಹಾಗಾಗಿ ಎಲ್ಲರ ಭೇಟಿಗಾಗಿ ಅವರ ಮನೆಮುಂದೆ ಬ್ಯಾರಿಕೇಡ್ ಹಾಕಿ ಭೇಟಿಯ ವ್ಯವಸ್ಥೆ ಮಾಡಲಾಗಿತ್ತು.

    ನೆಚ್ಚಿನ ನಟನಿಗೆ ಕೈ ಕುಲುಕಿ ಶುಭ ಹಾರೈಸುವುದಕ್ಕಾಗಿ ಮತ್ತೆ ಸಾವಿರಾರು ಜನರು ಮನೆ ಮುಂದೆ ಜಮಾಯಿಸಿದ್ದರು. ಮೊದ ಮೊದಲು ವ್ಯವಸ್ಥಿತವಾಗಿಯೇ ಭೇಟಿ ಸಾಧ್ಯವಾಯಿತು. ಸೆಕ್ಯೂರಿಟಿ ಕೂಡ ಚೆನ್ನಾಗಿತ್ತು. ಅಭಿಮಾನಿಗಳ ಸಂಖ್ಯೆ ಜಾಸ್ತಿಯಾಗುತ್ತಾ ನೂಕುನುಗ್ಗಲು ಉಂಟಾಯಿತು. ಸೆಕ್ಯೂರಿಟಿಗೆ ಎಂದೇ ಹಾಕಿದ್ದ ಬ್ಯಾರಿಕೇಡ್ ಗಳನ್ನು ಮುರಿದು ಹಾಕಿ ಅಭಿಮಾನಿಗಳು ಸುದೀಪ್ ಅವರತ್ತ ನುಗ್ಗಿದರು. ಸೆಕ್ಯೂರಿಟಿ ಅಸಾಧ್ಯವಾಯಿತು. ಹಾಗಾಗಿ ಭೇಟಿ ನಿಲ್ಲಿಸಿ ಮನೆಯೊಳಗೆ ಹೊರಟು ಬಿಟ್ಟರು.

     

    ಅಭಿಮಾನಿಗಳಿಗೆ ಅದರಿಂದ ನಿರಾಸೆಯಾಗಿದೆ ಎಂದು ಅರಿತ ಸುದೀಪ್, ವಿಡಿಯೋವೊಂದನ್ನು ಪೋಸ್ಟ್‌ ಮಾಡಿ ಕ್ಷಮೆ ಕೇಳಿದ್ದಾರೆ. ‘ಎಲ್ಲರನ್ನೂ ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ಎಲ್ಲಾ ಬ್ಯಾರಿಕೇಡ್ ಗಳು ಮುರಿದು ಹೋಗಿದ್ದರಿಂದ ಮತ್ತು ಜನರು ವಿಶೇಷವಾಗಿ ಎಲ್ಲಾ ಮಕ್ಕಳು ಉಸಿರುಗಟ್ಟಲು ಪ್ರಾರಂಭಿಸಿದ್ದರಿಂದ ಅದರ ಭದ್ರತೆಯಿಂದ ಹಿಂತೆಗೆದುಕೊಳ್ಳಲಾಯಿತು. ಉತ್ತಮ ವ್ಯವಸ್ಥೆಗಳೊಂದಿಗೆ ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ’ ಎಂದು ಬರೆದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]