Tag: ಕಿಚ್ಚು

  • ಕಿಚ್ಚು ಹಾಯಿಸುವಾಗ ದುರ್ಘಟನೆ – ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

    ಕಿಚ್ಚು ಹಾಯಿಸುವಾಗ ದುರ್ಘಟನೆ – ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

    ಮೈಸೂರು: ಸಂಕ್ರಾಂತಿ ಹಬ್ಬಕ್ಕೆ ದನಗಳಿಗೆ ಕಿಚ್ಚು ಹಾಯಿಸುವಾಗ ನಾಲ್ವರು ಗಾಯಗೊಂಡಿರುವ ದುರ್ಘಟನೆ ಜಿಲ್ಲೆಯ ಹೊರವಲಯದ ಸಿದ್ದಲಿಂಗಪುರದಲ್ಲಿ ನಡೆದಿದೆ.

    ಸಿದ್ದಲಿಂಗಪುರದ ನಿವಾಸಿಗಳಾದ ಪುರುಷೋತ್ತಮ್, ಸಂಜು, ಜೀವನ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುರುಷೋತ್ತಮ್(24) ಗಂಭೀರ ಗಾಯಗೊಂಡಿದ್ದು, ಜಿಲ್ಲೆಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಂಕ್ರಾಂತಿ ಹಬ್ಬದಲ್ಲಿ ಎತ್ತು, ದನಗಳಿಗೆ ಸಿಂಗರಿಸಿ ಕಿಚ್ಚು ಹಾಯಿಸಲಾಗುತ್ತದೆ. ಹೀಗೆ ಹಬ್ಬದ ಸಂಭ್ರಮದಲ್ಲಿ ಮೈಸೂರು-ಬೆಂಗಳೂರು ರಸ್ತೆಯಲ್ಲಿ ದನಗಳಿಗೆ ಕಿಚ್ಚು ಹಾಯಿಸುವಾಗ ಈ ದುರ್ಘಟನೆ ಸಂಭವಿಸಿದೆ. ಕಿಚ್ಚು ಹಾಯಿಸುವಾಗ ಎತ್ತು ತುಳಿದ ಪರಿಣಾಮ ಯುವಕನೋರ್ವ ಗಾಯಗೊಂಡಿದ್ದು, ಆತನನ್ನು ಕೂಡ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎರಡು ಕೈ ಸೇರಿದ್ರೆ ಚಪ್ಪಾಳೆ ಆಗೋದು- ಕಾಸ್ಟಿಂಗ್ ಕೌಚ್ ಬಗ್ಗೆ ರಾಗಿಣಿ

    ಎರಡು ಕೈ ಸೇರಿದ್ರೆ ಚಪ್ಪಾಳೆ ಆಗೋದು- ಕಾಸ್ಟಿಂಗ್ ಕೌಚ್ ಬಗ್ಗೆ ರಾಗಿಣಿ

    ಬೆಂಗಳೂರು: ಇತ್ತೀಚೆಗೆ ಭಾರತದ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಹೀಗಿರುವಾಗ ನಟಿ ರಾಗಿಣಿ ದ್ವಿವೇದಿ ಕಾಸ್ಟಿಂಗ್ ಕೌಚ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಕಿಚ್ಚು ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ರಾಗಿಣಿ, ಕಾಸ್ಟಿಂಗ್ ಕೌಚ್ ನಟಿಯರ ವಿಚಾರಕ್ಕೆ ಬಿಟ್ಟಿದ್ದು ಅವರ ವಯಕ್ತಿಕ ವಿಚಾರ. ಆದರೆ ನನಗೆ ಯಾವುದೇ ಅನುಭವವಾಗಿಲ್ಲ. ಒಂದು ಕೈಯಿಂದ ಚಪ್ಪಾಳೆ ಆಗಲ್ಲ. ಎರಡು ಕೈ ಸೇರಿದರೆ ಚಪ್ಪಾಳೆ ಆಗೊದು ಎಂದು ಹೇಳಿದ್ದಾರೆ.

    ಆದರೆ ನಟಿಯರನ್ನು ಮಂಚಕ್ಕೆ ಕರೆಯೊದು ಕೆಟ್ಟ ಸಂಸ್ಕೃತಿ ಎಂದು ನಟಿ ರಾಗಿಣಿ ತಿಳಿಸಿದರು.

    ಇತ್ತೀಚೆಗೆ ನಡೆದ ಚಿಟ್ಟೆ ಸಿನಿಮಾದ ಸಾಂಗ್ ಲಾಂಚ್‍ನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಹರ್ಷಿಕಾ ಪೂಣಚ್ಚ ಮಾತನಾಡಿದ್ದರು. ಬಾಲಿವುಡ್ ನಲ್ಲಿ ನನಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ ಎಂದು ಹೇಳಿದ್ದರು. ಅಲ್ಲದೇ ಬಾಲಿವುಡ್‍ನಲ್ಲಿ ನಾನು ಎರಡು ದೊಡ್ಡ ಸಿನಿಮಾಗಳನ್ನು ಮಾಡಬೇಕಿತ್ತು. ಕಾಸ್ಟಿಂಗ್ ಕೌಚ್ ಕಾರಣದಿಂದಾಗಿ ಸಿನಿಮಾ ಬಾಲಿವುಡ್ ಸಿನಿಮಾ ಬಿಟ್ಟು ಹೊರ ಬಂದಿದ್ದೇನೆ ಎಂದು ನಟಿ ಹರ್ಷಿಕಾ ಪೂಣಚ್ಚ ಚಿಟ್ಟೆ ಸಿನಿಮಾದ ಸಾಂಗ್ ಲಾಂಚ್ ವೇಳೆ ಅನುಭವವನ್ನು ಹಂಚಿಕೊಂಡಿದ್ದರು.