Tag: ಕಿಚನ್

  • ಕೆಲವರಿಗೆ ಅದೃಷ್ಟ ಹಿಡಿದರೆ, ನನಗೆ ದರಿದ್ರ ಹಿಡಿದಿದೆ: ಮಂಜು

    ಕೆಲವರಿಗೆ ಅದೃಷ್ಟ ಹಿಡಿದರೆ, ನನಗೆ ದರಿದ್ರ ಹಿಡಿದಿದೆ: ಮಂಜು

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್ ಆರಂಭದಲ್ಲಿಯೇ ಮಂಜು ಕೈಗೆ ರಾಕಿ ಕಟ್ಟಿ ಅಣ್ಣ-ತಂಗಿಯಾಗಿರುವ ವೈಷ್ಣವಿ ಮಂಜುಗೆ ಸಿಕ್ಕಾಪಟ್ಟೆ ಕೀಟಲೆ ಕೊಡುತ್ತಿದ್ದಾರೆ. ಸದ್ಯ ಮಂಜುಗೆ ಸೊಪ್ಪಿನ ಅಲಂಕಾರ ಮಾಡಿ ವೈಷ್ಣವಿ ದೃಷ್ಟಿ ತೆಗೆದಿದ್ದಾರೆ.

    ಈ ವಾರ ದೊಡ್ಮನೆ ಕಿಚನ್ ಜವಾಬ್ದಾರಿ ಹೊತ್ತುಕೊಂಡಿರುವ ಗಂಡೈಕ್ಳು ಅಡುಗೆ ಮಾಡಲು ಸೊಪ್ಪನ್ನು ಬಿಡುಸುತ್ತಿರುತ್ತಾರೆ. ಈ ವೇಳೆ ಹೊಟ್ಟೆ ಹಸಿವಿನಿಂದಾಗಿ ಸೋಫಾ ಮೇಲೆ ಕುಳಿತಿದ್ದ ವೈಷ್ಣವಿ ಮಂಜುರನ್ನು ಕರೆಯುತ್ತಾರೆ. ಆಗ ಆಗೊಯ್ತು ಇಷ್ಟೇ ಸೊಪ್ಪಿದೆ ಇನ್ನೂ ಕೆಲವು ಹೊತ್ತಿನಲ್ಲಿಯೇ ಉಪ್ಪು-ಖಾರ ಹಾಕಿ ಕೊಡುತ್ತೇನೆ ತಿಂದುಕೊಂಡು ಹೋಗಿ, ಸೊಪ್ಪು ಬಿಡುಸುವುದಕ್ಕೂ ನೆಮ್ಮದಿಯಾಗಿ ಬಿಡುವುದಿಲ್ವಾಲ್ಲ ಎನ್ನುತ್ತಾರೆ.

    ಆಗ ವೈಷ್ಣವಿ ನಿಮ್ಮನ್ನು ನೋಡಬೇಕು ಅನಿಸಿತು. ನೋಡಲು ಬಾರದಾ ಎಂದು ಕೇಳುತ್ತಾ, ಮಂಜಣ್ಣಾ, ಹೇ ಮಂಜಣ್ಣಾ ಎಂದು ಕರೆಯುತ್ತಾರೆ. ಏನಮ್ಮ ಎಂದು ಮಂಜು ಕೇಳಿದಾಗ, ವೈಷ್ಣವಿ ಹೇಗಿದ್ದೀರಾ? ಎಂದಾಗ ಚೆನ್ನಾಗಿದ್ದೀನಿ ಎಂದು ಮಂಜು ಹೇಳುತ್ತಾರೆ. ನಂತರ ನೀವು ಹೇಳುತ್ತಿರುವುದು ಕೇಳಿಸುತ್ತಿಲ್ಲ. ಬರ್ಲಾ ಅಲ್ಲಿ, ಬಂದೇ ಇರಿ ಎಂದು ರೇಗಿಸುತ್ತಾ ಕಿಚನ್ ಬಳಿ ಹೋಗುತ್ತಾರೆ.

    ನೀವು ಹೆಂಗಸರು ಕಿಚನ್ ಬಳಿ ಬರಬೇಡಿ ಎಂದು ಹೇಳಿದ್ನಾಲ್ಲ ಎಂದು ಮಂಜು ಹೇಳಿದಾಗ ವೈಷ್ಣವಿ ನಾನು ಹೆಂಗಸಲ್ಲ, ನಾನು ಮನುಷ್ಯಿ ಎನ್ನುತ್ತಾ, ಅರವಿಂದ್, ರಘು ಹಾಗೂ ಮಂಜು ಬಿಡಿಸಿದ್ದ ಸೊಪ್ಪನ್ನು ಒಂದೊಂದಾಗಿಯೇ ಮಂಜು ಕೂದಲಿಗೆ ಸಿಗಿಸುತ್ತಾರೆ. ಈ ವೇಳೆ ದಿವ್ಯಾ ಉರುಡುಗ ತಲೆಯನ್ನೇ ಸಾಂಬರ್ ಮಾಡಿ ಬಿಡೋಣ ಎಂದು ಕೇಳಿದಾಗ, ವೈಷ್ಣವಿ ತಲೆಯನ್ನೇ ಸ್ಟಾವ್ ಮೇಲೆ ಇಟ್ಟು ಅಡುಗೆ ಮಾಡಿಬಿಡೋಣ ಎಂದು ಇಬ್ಬರು ನಗುತ್ತಾರೆ.

    ಈ ವೇಳೆ ಮಂಜು ಅದೃಷ್ಟ ಹಿಡಿದಿದೆ ಎಂದು ಕೆಲವರು ಹೇಳುತ್ತಾರೆ ಗೊತ್ತಾ? ಹಾಗೆಯೇ ನನಗೆ ದರಿದ್ರ ಹಿಡಿದಿದೆ. ನಾನು ನಿನಗೆ ಏನು ಅನ್ಯಾಯ ಮಾಡಿದ್ದೆ ವೈಷ್ಣವಿ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ವೈಷ್ಣವಿ ನನಗೆ ಅಣ್ಣ ಅದ್ರಲ್ಲಾ ಎನ್ನುತ್ತಾ ಸೊಪ್ಪಿನಿಂದ ಮಂಜು ತಲೆಯನ್ನು ಅಲಂಕಾರ ಮಾಡುತ್ತಾರೆ. ಅದನ್ನು ಕಂಡು ಶುಭಾ ಪೂಂಜಾ ಯಾರು ಇಷ್ಟು ಚೆನ್ನಾಗಿ ನಿನಗೆ ಅಲಂಕಾರ ಮಾಡಿರುವುದು ಬಹಳ ಚೆನ್ನಾಗಿ ಕಾಣಿಸುತ್ತಿದ್ದೀಯಾ ಎಂದು ಆಡಿಕೊಳ್ಳುತ್ತಾರೆ.

    ನಂತರ ತಲೆಗಷ್ಟೇ ಅಲ್ಲದೇ ಮಂಜು ಬಾಯಿಗೂ ಸೊಪ್ಪನ್ನು ಸಿಗಿಸಿ ಚೆನ್ನಾಗಿ ಕಾಣಿಸುತ್ತಿದ್ದೀರಾ ಎಂದು ವೈಷ್ಣವಿ ಕಾಮೆಂಟ್ ಮಾಡುತ್ತಾ, ದೃಷ್ಟಿ ತೆಗೆದಿದ್ದಾರೆ.  ಇದನ್ನೂ ಓದಿ:  ನನ್ನ ಫ್ರೆಂಡ್ಸ್, ನನ್ನ ವಸ್ತುಗಳ ವಿಚಾರದಲ್ಲಿ ನಾನು ತುಂಬಾ ಪೊಸೆಸಿವ್: ಅರವಿಂದ್

  • ನಾಳೆ ಬೆಳಗ್ಗೆ ಆ್ಯಪಲ್ ಪಲ್ಯ ಮಾಡೋಣ: ಮಂಜು

    ನಾಳೆ ಬೆಳಗ್ಗೆ ಆ್ಯಪಲ್ ಪಲ್ಯ ಮಾಡೋಣ: ಮಂಜು

    ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ವಿಜೇತರಾಗಿ ಬಿಗ್‍ಬಾಸ್ ಸೀಸನ್-8 ರಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಸದಸ್ಯರಲ್ಲಿ ದಿವ್ಯಾ ಉರುಡುಗ ಕ್ಯಾಪ್ಟನ್ ಆಗಿದ್ದು, ಮನೆಯ ಪುರುಷರಿಗೆ ಕಿಚನ್ ಏರಿಯಾದ ಜವಾಬ್ದಾರಿ ನಿಭಾಯಿಸುವಂತೆ ತಿಳಿಸಿದ್ದಾರೆ.

    ಇಷ್ಟು ದಿನ ದೊಡ್ಮನೆಯಲ್ಲಿ ಅಡುಗೆ ಮಾಡುವ ಕೆಲಸ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ವಾರ ಕ್ಯಾಪ್ಟನ್ ಆಗಿರುವ ದಿವ್ಯಾ ಉರುಡುಗ ವಿಶೇಷವಾಗಿ ಮನೆಯ ಎಲ್ಲಾ ಸದಸ್ಯರಿಗೆ ಅಡುಗೆ ಮಾಡಲು ಪುರುಷ ಸದಸ್ಯರಿಗೆ ಸೂಚಿಸಿದ್ದಾರೆ.

    ಅದರಂತೆ ಈ ವಿಚಾರವಾಗಿ ಮಂಜು ಹಾಗೂ ಅರವಿಂದ್ ಕಿಚನ್‍ನಲ್ಲಿ ಚರ್ಚೆ ನಡೆಸಿದ್ದಾರೆ. ಈ ವಾರದಲ್ಲಿ ನೀನೆಷ್ಟು ಅಡುಗೆ ಕಲಿಯುತ್ತಿಯಾ ಹಾಗೂ ನಾನು ಎಷ್ಟು ಕಲಿಯುತ್ತೀನಿ ನೋಡೋಣ. ಅಲ್ಲದೇ ಮುಂದಿನ ವಾರ ಕೂಡ ನಾವೇ ಮಾಡಬೆಕಾಗುತ್ತೇನೋ ನನಗೆ ಅದು ಬೇರೆ ಟೆನ್ಷನ್ ಆಗುತ್ತಿದೆ ಎಂದು ಮಂಜು ಅರವಿಂದ್‍ಗೆ ಹೇಳುತ್ತಾರೆ.

    ನಂತರ ನಾವು ಅಡುಗೆಯ ರುಚಿಯನ್ನು ಸ್ವಲ್ಪ ಕಡಿಮೆ ಮಾಡೋಣ ಇಲ್ಲ ಅಂದರೆ ಲಾಕ್ ಆಗಿ ಬಿಡುತ್ತೇವೆ ಎಂದು ಮಂಜು ಅಂದಾಗ, ರುಚಿ ಏನಾದರೂ ಜಾಸ್ತಿಯಾಯಿತು ಎಂದರೆ ಹುಳಿ ಹಿಂಡಿ ಬೀಡೋಣ ಎಂದು ಅರವಿಂದ್ ಹೇಳುತ್ತಾರೆ.

    ಎಲ್ಲರೂ ಟೆಸ್ಟಿಂಗ್ ಪೌಡರ್ ಕೇಳುತ್ತಾರೆ ಆದರೆ ನಾವು ಟೆಸ್ಟ್ ಲೇಸ್ ಪೌಡರ್ ಕೇಳೋಣ. ನಾವು ಮಾಡುವುದು ಚೆನ್ನಾಗಿಯೇ ಇರುತ್ತದೆ. ಹಾಗಾಗಿ ಟೆಸ್ಟ್ ಲೇಸ್ ಪೌಡರ್ ಹಾಕುವುದು ಉತ್ತಮ. ನಾಳೆ ಬೆಳಗ್ಗೆ ಆ್ಯಪಲ್ ಪಲ್ಯ ಮಾಡೋಣ ಎಂದು ಮಂಜು ಹೇಳುತ್ತಾರೆ. ಆಗ ದಿವ್ಯಾ ಉರುಡಗ, ಅರವಿಂದ್ ಜೋರಾಗಿ ನಗುತ್ತಾರೆ.