Tag: ಕಿಕಿ ಚಾಲೆಂಜ್

  • ಕಾರ್, ಬೈಕ್, ಎತ್ತಿನಗಾಡಿ ನಂತರ ವಿಮಾನದಿಂದ ಇಳಿದು ಕಿಕಿ ಡ್ಯಾನ್ಸ್: ವಿಡಿಯೋ ವೈರಲ್

    ಕಾರ್, ಬೈಕ್, ಎತ್ತಿನಗಾಡಿ ನಂತರ ವಿಮಾನದಿಂದ ಇಳಿದು ಕಿಕಿ ಡ್ಯಾನ್ಸ್: ವಿಡಿಯೋ ವೈರಲ್

    ಕಾರ್, ಬೈಕ್, ಎತ್ತಿನಗಾಡಿ ನಂತರ ವಿಮಾನದಿಂದ ಇಳಿದು ಪೈಲೆಟ್ ಇಬ್ಬರು ಕಿಕಿ ಚಾಲೆಂಜ್‍ಗೆ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಲೆಜಾಂದ್ರ ಹಾಗೂ ಆಕೆಯ ಸಹ ಚಾಲಕಿ ಇಬ್ಬರು ವಿಮಾನದಿಂದ ಇಳಿದು ಕಿಕಿ ಚಾಲೆಂಜ್ ಸ್ವೀಕರಿಸಿದ್ದಾರೆ. ವಿಡಿಯೋದಲ್ಲಿ ಪೈಲೆಟ್ ಇಬ್ಬರು ಚಲಿಸುತ್ತಿರುವ ವಿಮಾನದಿಂದ ಇಳಿದು ‘ಮೈ ಫೀಲಿಂಗ್ಸ್’ ಹಾಡಿಗೆ ಡ್ಯಾನ್ಸ್ ಮಾಡಿ ಕಿಕಿ ಚಾಲೆಂಜ್ ಸ್ವೀಕರಿಸಿದ್ದಾರೆ.

    ಈ ವಿಡಿಯೋದಲ್ಲಿ ಮೊದಲು ಇಬ್ಬರು ಪೈಲೆಟ್ ಕಾಕ್‍ಪಿಟ್‍ನಲ್ಲಿ ಕುಳಿತಿರುತ್ತಾರೆ. ನಂತರ ವಿಮಾನದ ಸ್ಪೀಡ್ ಲೀವರ್ ಕಂಟ್ರೋಲ್ ಮಾಡಿ ವಿಮಾನವನ್ನು ಚಲಿಸುವ ಹಾಗೇ ಮಾಡಿದ್ದಾರೆ. ನಂತರ ಇಬ್ಬರು ವಿಮಾನದಿಂದ ಬೇಗ ಕೆಳಗೆ ಇಳಿದು ಇಂಗ್ಲೀಷ್ ಹಾಡಿಗೆ ಡ್ಯಾನ್ಸ್ ಮಾಡಲು ಶುರು ಮಾಡಿಡಿದ್ದಾರೆ.

    ಸದ್ಯ ಮಹಿಳಾ ಪೈಲೆಟ್ ಇಬ್ಬರು ಕಿಕಿ ಚಾಲೆಂಜ್ ಸ್ವೀಕರಿಸಿ ವಿಮಾನದ ಹೊರಗೆ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋ 25 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಏನಿದು ಕಿಕಿ ಚಾಲೆಂಜ್ ?
    ಟ್ರಾಫಿಕ್ ಮಧ್ಯೆ ಚಲಿಸುವ ವಾಹನದಿಂದ ಜಿಗಿದು ಹಾಲಿವುಡ್ ಗಾಯಕ ಡ್ರೇಕ್ ನ “ಇನ್ ಮೈ ಫೀಲಿಂಗ್ಸ್” ಹಾಡು ಹೇಳಿಕೊಂಡು ವಾಹನದ ವೇಗಕ್ಕೆ ರಸ್ತೆಯಲ್ಲಿ ಡ್ಯಾನ್ಸ್ ಮಾಡಬೇಕು. ಮತ್ತೆ ಕಾರಿನೊಳಗೆ ಜಿಗಿದು ಕುಳಿತುಕೊಳ್ಳಬೇಕು. ಈ ಅಪಾಯಕಾರಿ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿತ್ತು.

    ವಿಶ್ವದಲ್ಲಿರುವ ಎಲ್ಲ ಸೆಲೆಬ್ರಿಟಿಗಳು ಈ ಚಾಲೆಂಜ್ ಸ್ವೀಕರಿಸಿ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ನಟಿ ಆದಾ ಶರ್ಮಾ ಈ ಚಾಲೆಂಜ್ ಸ್ವೀಕರಿಸಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಅಲ್ಲದೇ ಕನ್ನಡದಲ್ಲಿ ಬಿಗ್ ಬಾಸ್ ನಿವೇದಿತಾ ಗೌಡ ಮೊದಲ ಬಾರಿಗೆ ಕಿಕಿ ಚಾಲೆಂಜ್ ಸ್ವೀಕರಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರಿನ ಹೈಕೋರ್ಟ್ ಬಳಿಯೇ ಕಿಕಿ ಡ್ಯಾನ್ಸ್ – ಯುವತಿಯ ಮೋಜು ಮಸ್ತಿ

    ಬೆಂಗ್ಳೂರಿನ ಹೈಕೋರ್ಟ್ ಬಳಿಯೇ ಕಿಕಿ ಡ್ಯಾನ್ಸ್ – ಯುವತಿಯ ಮೋಜು ಮಸ್ತಿ

    ಬೆಂಗಳೂರು: ದಿನದಿಂದಕ್ಕೆ ಹೆಚ್ಚಾಗುತ್ತಿದ್ದ ಅಪಾಯಕಾರಿ ಕಿಕಿ ಡ್ಯಾನ್ಸ್ ಚಾಲೆಂಜ್ ನನ್ನು ಪೊಲೀಸರು ತಡೆಯಲು ಮುಂದಾಗಿದ್ದಾರೆ. ಆದರೆ ಈ ಮಧ್ಯೆ ಯುವತಿಯೊಬ್ಬಳು ನಗರದ ಹೈಕೋರ್ಟ್ ಬಳಿಯೇ ಡ್ಯಾನ್ಸ್ ಮಾಡಿದ್ದಾಳೆ.

    ಹೈಕೋರ್ಟ್ ಹಿಂಭಾಗದಲ್ಲಿ ಯುವತಿ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ. ಭಾನುವಾರ ರಜೆ ಇದ್ದ ಕಾರಣ ಯುವತಿ ಸಂಜೆ ಕಬ್ಬನ್ ಪಾರ್ಕ್ ಬಳಿ ಇರುವ ಹೈಕೋರ್ಟ್ ಬಳಿ ಕಾರಿನಲ್ಲಿ ಹೋಗಿದ್ದಾಳೆ. ಬಳಿಕ ಯಾರು ಇಲ್ಲದ ವೇಳೆ ಕಾರಿನಿಂದ ಇಳಿದು ಡ್ಯಾನ್ಸ್ ಮಾಡುತ್ತಾ ಹೋಗಿದ್ದಾಳೆ. ಅಲ್ಲದೇ ಡ್ಯಾನ್ಸ್ ಮಾಡುತ್ತಲೇ ಯುವತಿ ಕಾರ್ ಹತ್ತಿದ್ದಾಳೆ. ಈ ಎಲ್ಲ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.

    ಬೆಂಗಳೂರು ಪೊಲೀಸರು ಕಿಕಿ ಚಾಲೆಂಜ್ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದರು ಯುವಕ-ಯುವತಿಯರು ಕಿಕಿ ಚಾಲೆಂಜ್ ಮಾಡುತ್ತಿದ್ದಾರೆ. ಮೊದಲಿಗೆ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಕಿಕಿ ಚಾಲೆಂಜ್ ಮಾಡಿದ್ದರು. ಬಳಿಕ ಆಕೆಯ ವಿರುದ್ಧ ಪೊಲೀಸ್ ಕಂಪ್ಲೆಂಟ್ ಕೂಡ ಆಗಿತ್ತು. ನಂತರ ಈ ಬಗ್ಗೆ ಗೊತ್ತಿರಲಿಲ್ಲ ಎಂದು ನಿವೇದಿತಾ ಗೌಡ ವಿಡಿಯೋವನ್ನು ಡಿಲೀಟ್ ಮಾಡಿದ್ದರು. ಇದಾದ ನಂತರ ನಟಿ ಪ್ರಣಿತಾ ಕೂಡ ಕಿಕಿ ಡ್ಯಾನ್ಸ್ ಮಾಡಿದ್ದರು.

    ನಟ-ನಟಿಯರು ಮಾತ್ರವಲ್ಲದೇ ಮಕ್ಕಳು ಕೂಡ ಈ ಡ್ಯಾನ್ಸ್ ಮಾಡುತ್ತಿದ್ದಾರೆ. ಕಾರ್ ಮಾತ್ರವಲ್ಲದೇ ಬೈಕ್, ಟ್ರೈನ್ ಮುಂದೆಯೂ ಡ್ಯಾನ್ಸ್ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಈ ಚಾಲೆಂಜ್ ಟ್ರೆಂಡಿಂಗ್ ನಲ್ಲಿದೆ. ಈಗ ಈ ಚಾಲೆಂಜ್ ಜೊತೆ ಮೋಮೋ ಚಾಲೆಂಜ್ ಗೇಮ್ ಕೂಡ ಬಂದಿದೆ.

    ಏನಿದು ಚಾಲೆಂಜ್ ?
    ಟ್ರಾಫಿಕ್ ಮಧ್ಯೆ ಚಲಿಸುವ ಕಾರಿನಿಂದ ಜಿಗಿದು ಹಾಲಿವುಡ್ ಗಾಯಕ ಡ್ರೇಕ್ ನ “ಇನ್ ಮೈ ಫೀಲಿಂಗ್ಸ್ ” ಹಾಡು ಹೇಳಿಕೊಂಡು ಕಾರಿನ ವೇಗಕ್ಕೆ ರಸ್ತೆಯಲ್ಲಿ ಡ್ಯಾನ್ಸ್ ಮಾಡಬೇಕು. ಮತ್ತೆ ಕಾರಿನೊಳಗೆ ಜಿಗಿದು ಕುಳಿತುಕೊಳ್ಳಬೇಕು. ಈ ಅಪಾಯಕಾರಿ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

    ಮೋಮೋ ಚಾಲೆಂಜ್ ಆಟ
    ಮೊದಲು ಅಪರಿಚಿತ ನಂಬರಿನಿಂದ ಎಲ್ಲರಿಗೂ ಒಂದು ಸಂದೇಶವನ್ನು ಬರುತ್ತದೆ. ಬಳಿಕ ಆ ಚಾಲೆಂಜ್ ಒಪ್ಪಿಕೊಂಡರೆ ಹಾಯ್-ಹಲೋ ಎಂದು ಸಂದೇಶ ಕಳುಹಿಸಬೇಕಾಗುತ್ತದೆ. ನಂತರ ಒಂದು ಅಪರಿಚಿತ ನಂಬರ್ ಕೊಟ್ಟು ಮಾತನಾಡುವಂತೆ ಚಾಲೆಂಜ್ ನೀಡುತ್ತದೆ. ಬಳಕೆದಾರರಿಗೆ ಕೆಲವು ಕೆಲಸಗಳನ್ನು ಕೊಡಲಾಗುತ್ತದೆ. ಒಂದು ವೇಳೆ ಆ ಕೆಲಸವನ್ನು ಅವರು ಪೂರ್ಣ ಮಾಡದಿದ್ದರೆ, ಬಳಕೆದಾರಿಗೆ ಬೆದರಿಕೆ ಒಡ್ಡುತ್ತದೆ. ಕೊನೆಯದಾಗಿ ಬೆದರಿಕೆ ಮತ್ತು ಭಯದಿಂದ ಬಳಕೆದಾರರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಬ್ಲೂವೇಲ್, ಕಿಕಿ ಆಯ್ತು, ಲಗ್ಗೆ ಇಟ್ಟಿದೆ ಮೋಮೋ ಚಾಲೆಂಜ್

    ಬ್ಲೂವೇಲ್, ಕಿಕಿ ಆಯ್ತು, ಲಗ್ಗೆ ಇಟ್ಟಿದೆ ಮೋಮೋ ಚಾಲೆಂಜ್

    ನವದೆಹಲಿ: ಈಗಾಗಲೇ ಬ್ಲೂವೇಲ್ ಚಾಲೆಂಜ್ ಜಗತ್ತಿನಾದ್ಯಂತ ಅವಾಂತರ ಸೃಷ್ಟಿಸಿದ್ದು, ಅನೇಕರನ್ನು ಬಲಿ ತೆಗೆದುಕೊಂಡಿತ್ತು. ನಂತರ ಕಿಕಿ ಚಾಲೆಂಚ್ ಬಂತು. ಈಗ ಇವೆರಡನ್ನು ಮೀರಿಸುವಂತಹ ಡೆಡ್ಲಿ ಗೇಮ್ ಮೋಮೋ ಚಾಲೆಂಜ್ ಹುಟ್ಟಿಕೊಂಡಿದೆ.

    ಇತ್ತೀಚಿನ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮೋಮೋ ಚಾಲೆಂಜ್ ವೈರಲ್ ಆಗಿದೆ. ಈ ಮೋಮೋ ಚಾಲೆಂಜ್ ಆಟವನ್ನು ಫೇಸ್‍ಬುಕ್ ಮತ್ತು ವಾಟ್ಸಪ್ ಮೂಲಕ ಆಡಲಾಗುತ್ತದೆ. ಇದು ಜನರನ್ನು ದೈಹಿಕವಾಗಿ ಹಾನಿ ಮಾಡುವುದು ಮತ್ತು ತಮ್ಮನ್ನು ತಾವೇ ಕೊಲೆ ಮಾಡಿಕೊಳ್ಳುವಂತೆ ಪ್ರಚೋದನೆಯನ್ನು ನೀಡುತ್ತದೆ.

    ಮೋಮೋ ಚಾಲೆಂಜ್:
    ಈ ಚಾಲೆಂಜ್ ತುಂಬಾ ಅಪಾಯಕಾರಿಯಾಗಿದೆ. ಒಂದು ವೇಳೆ ಈ ಗೇಮ್ ನನ್ನು ಪೂರ್ಣಗೊಳಿಸದಿದ್ದರೆ ಕಠಿಣವಾದ ಶಿಕ್ಷೆಯನ್ನು ಕೊಡುತ್ತದೆ. ಇದರಿಂದ ಈ ಆಟವನ್ನು ಆಡಲು ಜನರು ಭಯಪಡುತ್ತಿದ್ದಾರೆ. ಮೋಮೋ ಚಾಲೆಂಜ್ ನಲ್ಲಿ ಸಿಲುಕಿದವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ತಮ್ಮ ಜೀವವನ್ನು ಕಳೆದುಕೊಳ್ಳುವ ಹಂತಕ್ಕೆ ಹೋಗುತ್ತಾರೆ.

    ಮೋಮೋ ಚಾಲೆಂಜ್ ಆಟ
    * ಮೊದಲು ಅಪರಿಚಿತ ನಂಬರಿನಿಂದ ಎಲ್ಲರಿಗೂ ಒಂದು ಸಂದೇಶವನ್ನು ಬರುತ್ತದೆ. ಬಳಿಕ ಆ ಚಾಲೆಂಜ್ ಒಪ್ಪಿಕೊಂಡರೆ ಹಾಯ್-ಹಲೋ ಎಂದು ಸಂದೇಶ ಕಳುಹಿಸಬೇಕಾಗುತ್ತದೆ. ನಂತರ ಒಂದು ಅಪರಿಚಿತ ನಂಬರ್ ಕೊಟ್ಟು ಮಾತನಾಡುವಂತೆ ಚಾಲೆಂಜ್ ನೀಡುತ್ತದೆ. ಬಳಕೆದಾರರಿಗೆ ಕೆಲವು ಕೆಲಸಗಳನ್ನು ಕೊಡಲಾಗುತ್ತದೆ. ಒಂದು ವೇಳೆ ಆ ಕೆಲಸವನ್ನು ಅವರು ಪೂರ್ಣ ಮಾಡದಿದ್ದರೆ, ಬಳಕೆದಾರಿಗೆ ಬೆದರಿಕೆ ಒಡ್ಡುತ್ತದೆ. ಕೊನೆಯದಾಗಿ ಬೆದರಿಕೆ ಮತ್ತು ಭಯದಿಂದ ಬಳಕೆದಾರರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡುತ್ತದೆ.

    ಮೋಮೋ ಚಾಲೆಂಜ್ ಜಪಾನ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಲಾಗುತ್ತದೆ. ಮೋಮೋ ಚಾಲೆಂಜ್‍ಗಳಿಗೆ ಭಯಾನಕ ಫೋಟೋ ಮತ್ತು ವಿಡಿಯೋಗಳನ್ನು ಬಳಸಿಕೊಳ್ಳಲಾಗುತ್ತದೆ. ಭಯಬೀಳಿಸುವ ಚಿತ್ರವೊಂದನ್ನು ಮೋಮೋ ಚಾಲೆಂಜ್ ಗೆ ಬಳಕೆ ಮಾಡಲಾಗುತ್ತದೆ. ಜಪಾನ್ ದೇಶದ ಆಯೇಶಾ ಎಂಬ ಕಲಾವಿದೆ ಈ ಫೋಟೋವನ್ನು ಸಿದ್ಧಪಡಿಸಿದ್ದು, ಅವರಿಗೂ ಈ ಮೋಮೋ ಚಾಲೆಂಜ್‍ಗೆ ಯಾವುದೇ ಸಂಬಂಧವಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಮಕ್ಕಳು, ಯುವಕರೇ ಟಾರ್ಗೆಟ್:
    ಈ ಮೋಮೋ ಚಾಲೆಂಜ್ ಹೆಚ್ಚಾಗಿ ಮಕ್ಕಳನ್ನು ಮತ್ತು ಯುವಜನತೆಯನ್ನು ಸೆಳೆಯುತ್ತದೆ. ಅದರಲ್ಲೂ ಮಕ್ಕಳನ್ನು ಅತಿ ಹೆಚ್ಚಾಗಿ ಸೆಳೆಯುತ್ತದೆ. ಈ ಚಾಲೆಂಜ್ ನಲ್ಲಿ ತೊಡಗಿದರವ ಬಳಿ ಅವರ ಕುಟುಂಬದವರ ವಿವರಗಳನ್ನು ತಿಳಿದುಕೊಂಡು ಅವರಿಗೆ ಬ್ಲಾಕ್ ಮೇಲ್ ಮಾಡುತ್ತದೆ. ಈ ಚಾಲೆಂಜ್ ಸ್ವೀಕರಿಸಿದವರಲ್ಲಿ ಕೆಲವು ಬದಲಾವಣೆಗಳು ಆಗುತ್ತವೆ. ಈ ಬಗ್ಗೆ ಮುಂಬೈಯ ಆಸ್ಕರ್ ಆಸ್ಪತ್ರೆಯ ಡಾ. ರಾಜೇಶ್ ಕಾಕಡೆ ಅವರು ತಿಳಿಸಿದ್ದಾರೆ.

    ಈ ಚಾಲೆಂಜ್ ಸ್ವೀಕರಿಸಿದ ಮಕ್ಕಳು ಅತಿ ಹೆಚ್ಚಾಗಿ ವಾಟ್ಸಪ್ ಮತ್ತು ಫೇಸ್‍ಬುಕ್ ನಲ್ಲಿ ಸಕ್ರಿಯವಾಗಿರುತ್ತಾರೆ. ಆದ್ದರಿಂದ ಮ್ಕಕಳ ಮೇಲೆ ಪೋಷಕರು ಗಮನಹರಿಸಬೇಕು. ಒಂದು ವೇಳೆ ಅವರು ಅಪರಿಚಿತ ನಂಬರ್ ಜೊತೆ ಮಾತನಾಡುತ್ತಿದ್ದರೆ ಮೊದಲು ಅದನ್ನು ತಡೆಯಬೇಕು. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ ಕಂಡು ಬಂದರೆ ಅಂದರೆ ಸರಿಯಾಗಿ ಕುಡಿಯುವುದು, ತಿನ್ನುವುದನ್ನು ಬಿಟ್ಟಿದ್ದರೆ, ನಿಮ್ಮ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಕಂಡು ಬಂದ ತಕ್ಷಣ ಮನೋವೈದ್ಯರ ಸಹಾಯ ಪಡೆಯಿರಿ ಎಂದು ಡಾ. ರಾಜೇಶ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕಿಕಿ ಚಾಲೆಂಜ್ ಸ್ವೀಕರಿಸಿದ ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡ- ವಿಡಿಯೋ ನೋಡಿ

    ಕಿಕಿ ಚಾಲೆಂಜ್ ಸ್ವೀಕರಿಸಿದ ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡ- ವಿಡಿಯೋ ನೋಡಿ

    ಬೆಂಗಳೂರು: ಚಲಿಸುತ್ತಿರುವ ಕಾರಿನಲ್ಲಿ ಡ್ಯಾನ್ಸ್ ಮಾಡುವ ಚಾಲೆಂಜ್‍ನ್ನು ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡ ಸ್ವೀಕರಿಸಿದ್ದಾರೆ.

    ಕಾರು ಚಲಿಸುತಿದ್ದಾಗ ಅದೇ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕೋದು ಸದ್ಯದ ಟ್ರೆಂಡ್ ಆಗಿದೆ. ವಿದೇಶದಲ್ಲಿ ಭಾರೀ ಪ್ರಮಾಣದಲ್ಲಿ ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ. ಈ ಚಾಲೆಂಜ್ ಭಾರತಕ್ಕೂ ಕಾಲಿಟ್ಟಿದ್ದು, ಬಿಟೌನ್ ತಾರೆಯರು ಚಾಲೆಂಜ್ ಸ್ವೀಕರಿಸಿದ್ದರು.

    ಇದೀಗ ನಿವೇದಿತಾ ಗೌಡ ಚಲಿಸುತ್ತಿರುವ ಕಾರಿನಿಂದ ಕೆಳಗಿಳಿದು ಡ್ಯಾನ್ಸ್ ಮಾಡುವ ಮೂಲಕ ಕರ್ನಾಟಕ್ಕೆ ಪರಿಚಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಂತೆ ನಿವೇದಿತಾ ಡ್ಯಾನ್ಸ್ ಗೆ ಪರ/ವಿರೋಧ ಕಮೆಂಟ್ ಬಂದಿದೆ. ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಶುರುವಾಯ್ತು ಕಿಕಿ ಚಾಲೆಂಜ್ ಭಯ- ಏನಿದು ಕಿಕಿ ಚಾಲೆಂಜ್?

    ಇದೊಂದು ಅಪಾಯಕಾರಿ ಚಾಲೆಂಜ್ ಆಗಿದ್ದು, ಎಷ್ಟೋ ಮಂದಿ ಈ ಸಾಹಸ ಮಾಡೋದಕ್ಕೆ ಹೋಗಿ ಗಾಯ ಮಾಡಿಕೊಂಡಿದ್ದಾರೆ. ಐಟಿ ಸಿಟಿ ಬೆಂಗಳೂರಿಗೆ ಕಿಕಿ ಚಾಲೆಂಜ್ ಜ್ವರ ಬರಬಹುದು ಅಂತಾ ಟ್ರಾಫಿಕ್ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಕಿಕಿ ಚಾಲೆಂಜ್ ಅಪಾಯಕಾರಿ ಈ ರೀತಿ ಮಾಡಿದರೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸುಮ್ಮನಿರಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದರು. ಕಿಕಿ ಚಾಲೆಂಜ್ ನಿಮ್ಮ ಬಾಡಿಗೂ ಗಾಡಿಗೂ ಅಪಾಯಕಾರಿ ಅಂತಾ ಜಾಗೃತಿ ನಡೆಸಿದರು. ಜೊತೆಗೆ ಕಿಕಿ ಚಾಲೆಂಜ್‍ನಿಂದ ತಲೆಬುರುಡೆ ಒಡೆದುಕೊಂಡ ಯುವಕನ ವಿಡಿಯೋ ಕೂಡ ಆಡುಗೋಡಿ ಟ್ರಾಫಿಕ್ ಪೊಲೀಸರು ಅಪ್ಲೋಡ್ ಮಾಡಿದರು.

  • ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಶುರುವಾಯ್ತು ಕಿಕಿ ಚಾಲೆಂಜ್ ಭಯ- ಏನಿದು ಕಿಕಿ ಚಾಲೆಂಜ್?

    ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಶುರುವಾಯ್ತು ಕಿಕಿ ಚಾಲೆಂಜ್ ಭಯ- ಏನಿದು ಕಿಕಿ ಚಾಲೆಂಜ್?

    ಬೆಂಗಳೂರು: ಬಾಲಿವುಡ್ ಸೆಲಬ್ರಿಟಿಗಳ ಕಿಕಿ ಚಾಲೆಂಜ್ ಕಾಟಕ್ಕೆ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಭಯ ಶುರುವಾಗಿದೆ.

    ಮುಂಬೈ ಸೇರಿದಂತೆ ಕೆಲ ಸಿಟಿಗಳಲ್ಲಿ ಈ ಕಿಕಿ ಚಾಲೆಂಜ್ ವೈರಲ್ ಆಗಿದೆ. ಈ ಚಾಲೆಂಜ್‍ಗೆ ಮುಂಬೈ ಪೊಲೀಸರು ಬೇಸತ್ತು ಹೋಗಿದ್ದು, ಈಗ ಈ ಚಾಲೆಂಜ್ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ತಲೆ ನೋವಾಗಿದೆ.

    ಏನಿದು ಕಿಕಿ ಚಾಲೆಂಜ್ ?
    ಟ್ರಾಫಿಕ್ ಮಧ್ಯೆ ಚಲಿಸುವ ಕಾರಿನಿಂದ ಜಿಗಿದು ಹಾಲಿವುಡ್ ಗಾಯಕ ಡ್ರೇಕ್ ನ “ಇನ್ ಮೈ ಫೀಲಿಂಗ್ಸ್ ” ಹಾಡು ಹೇಳಿಕೊಂಡು ಕಾರಿನ ವೇಗಕ್ಕೆ ರಸ್ತೆಯಲ್ಲಿ ಡ್ಯಾನ್ಸ್ ಮಾಡಬೇಕು. ಮತ್ತೆ ಕಾರಿನೊಳಗೆ ಜಿಗಿದು ಕುಳಿತುಕೊಳ್ಳಬೇಕು. ಈ ಅಪಾಯಕಾರಿ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

    ಬಾಲಿವುಡ್‍ನ ಸೆಲೆಬ್ರಿಟಿಯರು ಈ ಚಾಲೆಂಜ್ ಸ್ವೀಕರಿಸಿ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇತ್ತೀಚಿಗೆ ನಟಿ ಆದಾ ಶರ್ಮಾ ಈ ಚಾಲೆಂಜ್ ಸ್ವೀಕರಿಸಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಿಂದ ಯುವಕ ಯುವತಿಯರಲ್ಲಿ ಹೆಚ್ಚಾಗಿ ಕಿಕಿ ಚಾಲೆಂಜ್ ಹುಚ್ಚು ಶುರುವಾಗಿದೆ.

    ಐಟಿ ಸಿಟಿ ಬೆಂಗಳೂರಿಗೆ ಕಿಕಿ ಚಾಲೆಂಜ್ ಜ್ವರ ಬರಬಹುದು ಅಂತಾ ಟ್ರಾಫಿಕ್ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಕಿಕಿ ಚಾಲೆಂಜ್ ಅಪಾಯಕಾರಿ ಈ ರೀತಿ ಮಾಡಿದರೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸುಮ್ಮನಿರಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕಿಕಿ ಚಾಲೆಂಜ್ ನಿಮ್ಮ ಬಾಡಿಗೂ ಗಾಡಿಗೂ ಅಪಾಯಕಾರಿ ಅಂತಾ ಜಾಗೃತಿ ನಡೆಸುತ್ತಿದ್ದಾರೆ. ಜೊತೆಗೆ ಕಿಕಿ ಚಾಲೆಂಜ್‍ನಿಂದ ತಲೆಬುರುಡೆ ಒಡೆದುಕೊಂಡ ಯುವಕನ ವಿಡಿಯೋ ಕೂಡ ಆಡುಗೋಡಿ ಟ್ರಾಫಿಕ್ ಪೊಲೀಸರು ಅಪ್ಲೋಡ್ ಮಾಡಿದ್ದಾರೆ.