Tag: ಕಿಂಗ್ ಫಿಶರ್

  • ಮಲ್ಯ ಮನೆ ಇಂಟೀರಿಯರ್ ಡಿಸೈನ್‍ಗೆ ಸಿಗ್ತಿಲ್ಲ ಎಂಜಿನಿಯರ್ಸ್..!

    ಮಲ್ಯ ಮನೆ ಇಂಟೀರಿಯರ್ ಡಿಸೈನ್‍ಗೆ ಸಿಗ್ತಿಲ್ಲ ಎಂಜಿನಿಯರ್ಸ್..!

    ಬೆಂಗಳೂರು: ಸಾವಿರಾರು ಕೋಟಿ ಸಾಲ ಮಾಡಿ ಬ್ಯಾಂಕ್‍ಗಳಿಗೆ ನಾಮ ಹಾಕಿ ವಿದೇಶಕ್ಕೆ ಓಡಿಹೋಗಿರುವ ವಿಜಯ್ ಮಲ್ಯಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಮಲ್ಯ ಅವರ ಬೆಂಗಳೂರಿನಲ್ಲಿರುವ ಮನೆಯ ಇಂಟೀರಿಯರ್ ಡಿಸೈನ್ ಮಾಡೋಕೆ ಎಂಜಿನಿಯರ್ ಸಿಗುತ್ತಿಲ್ಲ.

    ಹೌದು. ಮಲ್ಯ ಕನಸಿನ ಅರಮನೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಬೆಂಗಳೂರಿನ ಯುಬಿಸಿಟಿ ಪಕ್ಕದಲ್ಲಿ ಅಮೆರಿಕಾದ ವೈಟ್ ಹೌಸ್ ಮಾದರಿಯಲ್ಲಿ ಅರಮನೆ ನಿರ್ಮಾಣ ಕಾರ್ಯ ನಡೀತಿತ್ತು. 8 ವರ್ಷಗಳ ಹಿಂದೆಯೇ ಮನೆ ನಿರ್ಮಾಣ ಕಾರ್ಯ ಶುರುವಾಗಿದ್ದು, ಈಗಾಗಲೇ ಔಟ್‍ಲುಕ್ ಪೂರ್ಣಗೊಂಡಿದೆ.

    ಆದ್ರೆ ಇದೀಗ ಇಂಟೀರಿಯರ್ ಡಿಸೈನ್ ಮಾಡಲು ಎಂಜಿನಿಯರ್‍ಗಳೇ ಸಿಗುತ್ತಿಲ್ಲ. ಮಲ್ಯ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರೋದ್ರಿಂದ ಯಾವ ಎಂಜಿನಿಯರ್‍ಗಳೂ ಅರಮನೆ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಹೀಗಾಗಿ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿರುವ ಪ್ರೆಸ್ಟೀಜ್ ಗ್ರೂಪ್ ಎಂಜಿನಿಯರ್‍ಗಳ ಹುಡುಕಾಟದಲ್ಲಿದೆ. ಈ ಬಗ್ಗೆ ಕಿಂಗ್‍ಫಿಶರ್ ಸಿಬ್ಬಂದಿಯೇ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    100 ಕೋಟಿ ವೆಚ್ಚದಲ್ಲಿ ಮನೆ:
    ಬೆಂಗಳೂರಿನ ಟಾಪ್ ಅಪಾರ್ಟ್ ಮೆಂಟ್ ಇದಾಗಿದ್ದು, ಅತ್ಯಂತ ದುಬಾರಿ ವೆಚ್ಚದ್ದಾಗಿದೆ. ಈ ಅಪಾರ್ಟ್ ಮೆಂಟ್ ಅನ್ನು ಮಲ್ಯ ಒಡೆತನದ ಯುಬಿ ಗ್ರೂಫ್ ಹಾಗೂ ಪ್ರೆಸ್ಟೀಜ್ ಪಾಲುದಾರರಾಗಿ ಕಟ್ಟಿದೆ. 82 ಪ್ಲ್ಯಾಟ್ ಇದೆ. ಪ್ಲೋರ್ ರೂಪ್ ಟಾಫ್‍ನಲ್ಲಿ ಪೆಂಟ್ ಹೌಸ್‍ನಲ್ಲಿ ಮಲ್ಯನ ರಾಜ ದರ್ಬಾರ್ ನಡೆಯಲಿದೆ. ಅಮೆರಿಕದ ವೈಟ್ ಹೌಸ್ ಮಾದರಿಯಲ್ಲಿ ನಿರ್ಮಾಣವಾಗುತ್ತಿದೆ.

    ಮಲ್ಯನ ಭವ್ಯ ಅರಮನೆ 400 ಅಡಿ ಎತ್ತರದಲ್ಲಿದ್ದು, 34 ಹಾಗೂ 35ನೇ ಲೆವಲ್‍ನಲ್ಲಿ ಮಲ್ಯ ಮನೆಯಿದೆ. ಮನೆಯ ಟಾಪ್‍ನಲ್ಲಿ ಹೆಲಿಪ್ಯಾಡ್, ಜೊತೆಗೆ ದೊಡ್ಡ ಸ್ವಿಮ್ಮಿಂಗ್ ಪೂಲ್ ಮತ್ತು ದೊಡ್ಡದಾದ ಬಾರ್ ಹೌಸ್ ಕೂಡ ಇದೆ. ಜಗತ್ತಿನ ದುಬಾರಿ ಎಣ್ಣೆಗಳು ಇಲ್ಲಿ ಸಿಗಲಿದೆ. ಬರೋಬ್ಬರಿ ನೂರು ಕೋಟಿಯಷ್ಟು ವೆಚ್ಚದಲ್ಲಿ ಈ ವೈಟ್ ಹೌಸ್ ನಿರ್ಮಾಣವಾಗುತ್ತಿದೆ. ಆದರೆ ಮಾರ್ಕೆಟ್ ನ ಮೌಲ್ಯ 500 ಕೋಟಿ ಎಂದು ಹೇಳಲಾಗುತ್ತಿದೆ.

    ಈ ಅಪಾರ್ಟ್ ಮೆಂಟ್ ಎರಡು ಸಾವಿರ ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣಗಲಿದ್ದು, ಪ್ರತಿ ರೂಂಗೂ ಅದ್ಭುತ ಇಂಟಿರಿಯರ್ ವರ್ಕ್, ಜಗತ್ತಿನ ದುಬಾರಿ ಸೋಫಾಸೆಟ್, ಬಂಗಾರದ ಬಣ್ಣದಂತೆ ಹೊಳೆಯುವ ಬೆಡ್‍ಗಳು. ಇಟಲಿಯನ್ ಮಾರ್ಬಲ್ ಸ್ಟೋನ್, ಕೇನ್ಯನ್ ಹಾರ್ಡ್ ವುಡ್ ಮಾರ್ಬಲ್, ಗೋಲ್ಡನ್ ಬಾತ್ ರೂಂ ಟೈಲ್ಸ್, ಅಲ್ಲದೇ ಕಣ್ಣು ಕೋರೈಸುವ ಮಂದ ಬೆಳಕಲ್ಲಿ ಪಬ್ ಕೂಡ ಇದ್ದು, ಇದು ಮಲ್ಯ ಅರಮನೆಯ ಸ್ಪೆಷಾಲಿಟಿಯಾಗಿದೆ.

    ಈ ಮನೆಯಲ್ಲಿ ಎರಡು ಲಿಫ್ಟ್ ಇದ್ದು, ಒಂದು ವಿಜಯಮಲ್ಯಗಷ್ಟೇ ಮೀಸಲು. ಇನ್ನೊಂದು ಗೆಸ್ಟ್ ಗಳಿಗೆ ಮೀಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಇರುವ ಈ ಲಿಫ್ಟ್ ಮಲ್ಯ ಪಿಂಗರ್ ಫ್ರಿಂಟ್ ಇಲ್ಲದೇ ತೆರೆಯಲ್ಲ. ಅಷ್ಟೊಂದು ಭದ್ರತೆಯಿಂದ ಕೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv