Tag: ಕಿಂಗ್ಸ್ ಪಂಜಾಬ್

  • IPL 2023: ಸಂಜು ಸೈನ್ಯಕ್ಕೆ ಪ್ಲೇ ಆಫ್‌ ಕನಸು ಜೀವಂತ – ರಾಜಸ್ಥಾನ್‌ಗೆ 4 ವಿಕೆಟ್‌ಗಳ ರೋಚಕ ಜಯ

    IPL 2023: ಸಂಜು ಸೈನ್ಯಕ್ಕೆ ಪ್ಲೇ ಆಫ್‌ ಕನಸು ಜೀವಂತ – ರಾಜಸ್ಥಾನ್‌ಗೆ 4 ವಿಕೆಟ್‌ಗಳ ರೋಚಕ ಜಯ

    ಶಿಮ್ಲಾ: ಶಿಮ್ರಾನ್‌ ಹೆಟ್ಮೇಯರ್‌, ಯಶಸ್ವಿ ಜೈಸ್ವಾಲ್‌, ದೇವದತ್‌ ಪಡಿಕಲ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌, ಪಂಜಾಬ್‌ ಕಿಂಗ್ಸ್‌ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಪ್ಲೇ ಆಫ್‌ ಕನಸು ಜೀವಂತವಾಗಿಸಿಕೊಂಡಿದೆ. ಕೊನೆಯವರೆಗೂ ಹೋರಾಡಿದ ಪಂಜಾಬ್‌ ಕಿಂಗ್ಸ್‌ ಸೋಲಿನೊಂದಿಗೆ ವಿದಾಯ ಹೇಳಿದೆ.

    ಪಂಜಾಬ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ 14 ಅಂಕ ಪಡೆದು +0.148 ರನ್‌ರೇಟ್‌ನೊಂದಿಗೆ 5ನೇ ಸ್ಥಾನಕ್ಕೆ ಜಿಗಿದಿದೆ. ಒಂದು ವೇಳೆ ಭಾನುವಾರದ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಮುಂಬೈ ತಂಡಗಳು ಸೋತರೇ ರಾಜಸ್ಥಾನ್‌ ರಾಯಲ್ಸ್‌ಗೆ ಪ್ಲೇ ಆಫ್‌ ತಲುಪುವ ಅವಕಾಶ ಸಿಗಲಿದೆ.

    ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಪಂಜಾಬ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಪಡೆದ ರಾಜಸ್ಥಾನ್‌ ರಾಯಲ್ಸ್‌ 19.4 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿ ಗೆಲುವು ಸಾಧಿಸಿತು.

    ಕೊನೆಯ 4 ಓವರ್‌ಗಳಲ್ಲಿ ರಾಜಸ್ಥಾನ್‌ಗೆ 39 ರನ್‌ಗಳ ಅಗತ್ಯವಿತ್ತು. 17ನೇ ಓವರ್‌ನಲ್ಲಿ 6 ರನ್‌, 18ನೇ ಓವರ್‌ನಲ್ಲಿ 14 ರನ್‌ ಹಾಗೂ 19ನೇ ಓವರ್‌ನಲ್ಲಿ 11 ರನ್‌ ಸೇರ್ಪಡೆಯಾಯಿತು. ಈ ವೇಳೆ ಸ್ಫೋಟಕ ಆಟವಾಡುತ್ತಿದ್ದ ಶಿಮ್ರಾನ್‌ ಹೆಟ್ಮೇಯರ್‌ 28 ಎಸೆತಗಳಲ್ಲಿ ಭರ್ಜರಿ 46 ರನ್‌ (4 ಬೌಂಡರಿ, 3 ಸಿಕ್ಸ್‌) ಚಚ್ಚಿ ಔಟಾದರು. ಕೊನೆಯ 6 ಎಸೆತಗಳಲ್ಲಿ 9 ರನ್‌ ಬೇಕಿದ್ದಾಗ. ಮೊದಲ 3 ಎಸೆತಗಳಲ್ಲಿ 4 ರನ್‌ ಸೇರ್ಪಡೆಯಾಯಿತು. 4ನೇ ಎಸೆತದಲ್ಲಿ ಕ್ರೀಸ್‌ ತೆಗೆದುಕೊಂಡ ಧ್ರುವ್‌ ಜುರೆಲ್‌ ಸಿಕ್ಸ್‌ ಬಾರಿಸುವ ಮೂಲಕ ಜಯ ತಂದುಕೊಟ್ಟರು.

    ಚೇಸಿಂಗ್‌ ಆರಂಭಿಸಿದ ರಾಜಸ್ಥಾನ್ ರಾಯಲ್ಸ್‌ ಮೊದಲ ವಿಕೆಟ್‌ ಕಳೆದುಕೊಂಡರೂ 2 ವಿಕೆಟ್‌ಗೆ ಉತ್ತಮ ಆರಂಭ ಪಡೆಯಿತು. 2ನೇ ವಿಕೆಟ್‌ಗೆ ಜೊತೆಯಾದ ದೇವದತ್‌ ಪಡಿಕಲ್‌ ಹಾಗೂ ಯಶಸ್ವೀ ಜೈಸ್ವಾಲ್‌ ಭರ್ಜರಿ ಅರ್ಧ ಶತಕ ಸಿಡಿಸಿ ಔಟಾದರು.

    ಜೈಸ್ವಾಲ್‌ 36 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 50 ರನ್‌ ಗಳಿಸಿದರು. ಈ ಮೂಲಕ 14 ಲೀಗ್‌ ಪಂದ್ಯಗಳಲ್ಲಿ 600 ರನ್‌ ಪೂರೈಸಿದರು. ಪಡಿಕಲ್‌ 30 ಎಸೆತಗಳಲ್ಲಿ 51 ರನ್‌ (3 ಸಿಕ್ಸರ್‌, 5 ಬೌಂಡರಿ) ಚಚ್ಚಿದರು. ಕೊನೆಯ ಪಂದ್ಯದಲ್ಲೂ ನಾಯಕ ಸಂಜು ಸ್ಯಾಮ್ಸನ್‌ ಕೇವಲ 2 ರನ್‌ ಗಳಿಸಿ ನಿರಾಸೆ ಮೂಡಿಸಿದರು. ರಿಯಾನ್‌ ಪರಾಗ್‌ 12 ಎಸೆತಗಳಲ್ಲಿ 2 ಸಿಕ್ಸರ್‌, 1 ಬೌಂಡರಿಯೊಂದಿಗೆ 20 ರನ್‌ ಗಳಿಸುವ ಮೂಲಕ ತಂಡಕ್ಕೆ ಇನ್ನಷ್ಟು ರನ್‌ ಕೊಡುಗೆ ನೀಡಿದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಯಾಮ್‌ ಕರ್ರನ್‌, ಜಿತೇಶ್‌ ಶರ್ಮಾ ಹಾಗೂ ಶಾರೂಖ್‌ ಖಾನ್‌ ಬ್ಯಾಟಿಂಗ್‌ ನೆರವಿನಿಂದ 187 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು.

    ಜಿತೇಶ್‌ ಶರ್ಮಾ 44 ರನ್‌ (28 ಎಸೆತ, 3 ಸಿಕ್ಸ್‌, 3 ಬೌಂಡರಿ) ಗಳಿಸಿದರೆ, ಶಾರೂಖ್‌ ಖಾನ್‌ 41 ರನ್‌ (23 ಎಸೆತ, 2 ಸಿಕ್ಸರ್‌, 4 ಬೌಂಡರಿ), ಸ್ಯಾಮ್‌ ಕರ್ರನ್‌ 49 ರನ್‌ (31 ಎಸೆತ, 4 ಬೌಂಡರಿ, 2 ಸಿಕ್ಸ್‌) ಗಳಿಸಿ ಅಜೇಯರಾಗುಳಿದರು. ನಾಯಕ ಶಿಖರ್‌ ಧವನ್‌ 17 ರನ್‌, ಅಥರ್ವ್‌ ಟೈಡೆ 19 ರನ್‌ ಕೊಡುಗೆ ನೀಡಿದರು.

    ರಾಜಸ್ಥಾನ್‌ ಪರ ನವದೀಪ್‌ ಸೈನಿ 4 ಓವರ್‌ಗಳಲ್ಲಿ 40 ರನ್‌ ನೀಡಿ 3 ವಿಕೆಟ್‌ ಕಿತ್ತರೆ, ಟ್ರೆಂಟ್‌ ಬೋಲ್ಟ್‌ ಹಾಗೂ ಆಡಂ ಜಂಪಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • IPLನಲ್ಲಿ ನಂ.1 ಪಟ್ಟ ಕಳೆದುಕೊಳ್ಳದ RCB – ರನ್‌ ಹೊಳೆಯಲ್ಲಿ ತೇಲಾಡಿ 2ನೇ ಸ್ಥಾನಕ್ಕೇರಿದ ಲಕ್ನೋ

    IPLನಲ್ಲಿ ನಂ.1 ಪಟ್ಟ ಕಳೆದುಕೊಳ್ಳದ RCB – ರನ್‌ ಹೊಳೆಯಲ್ಲಿ ತೇಲಾಡಿ 2ನೇ ಸ್ಥಾನಕ್ಕೇರಿದ ಲಕ್ನೋ

    ಮೊಹಾಲಿ: ಇಲ್ಲಿನ ಐಎಸ್‌ ಬಿಂದ್ರಾ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ಹಾಗೂ ಪಂಜಾಬ್‌ ಕಿಂಗ್ಸ್‌ (Punjab Kings) ನಡುವಿನ ರಣರೋಚಕ ಪಂದ್ಯದಲ್ಲಿ ಕೆ.ಎಲ್‌.ರಾಹುಲ್‌ (KL Rahul) ನಾಯಕತ್ವದ ಲಕ್ನೋ‌ ತಂಡ 56 ರನ್‌ಗಳ ಭರ್ಜರಿ ಜಯ ಸಾಧಿಸಿತು.

    ರನ್‌ ಹೊಳೆಯಲ್ಲಿ ತೇಲಾಡಿದ ಇತ್ತಂಡಗಳು ಕೊನೆಯವರೆಗೂ ಭರ್ಜರಿ ಬ್ಯಾಟಿಂಗ್‌ ನಡೆಸಿದವು. ಅಲ್ಲದೇ ಇದು ಐಪಿಎಲ್‌ನಲ್ಲಿ (IPL 2023) ಅತಿ ಹೆಚ್ಚು ರನ್‌ ದಾಖಲಾದ ಪಂದ್ಯ ಎನಿಸಿಕೊಂಡಿತು. ಆದ್ರೆ ಏಕೈಕ ತಂಡವಾಗಿ ಅತಿಹೆಚ್ಚು ರನ್‌ ಗಳಿಸಿ ನಂ.1 ಸ್ಥಾನದಲ್ಲಿರುವ ಆರ್‌ಸಿಬಿ ದಾಖಲೆ ಮುರಿಯುವಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿಫಲವಾಯಿತು. ಇದನ್ನೂ ಓದಿ: ಸಿಕ್ಸರ್‌, ಬೌಂಡರಿಗಳ ಸುರಿಮಳೆ ಆಟಕ್ಕೆ ಪಂಜಾಬ್‌ ಪಂಚರ್‌, ಲಕ್ನೋಗೆ 56 ರನ್‌ಗಳ ಭರ್ಜರಿ ಜಯ

    2013ರ ಐಪಿಎಲ್‌ ಆವೃತ್ತಿಯಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ 263 ರನ್‌ ಗಳಿಸಿತ್ತು. ಆದ್ರೆ ಎದುರಾಳಿ ಪುಣೆ ವಾರಿಯರ್ಸ್‌ 133 ರನ್‌ ಗಳಿಸಲಷ್ಟೇ ಸಾಧ್ಯವಾಗಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ 263 ರನ್‌ ಗಳಿಸಿದ್ದು ಈವರೆಗೆ ಯಾರೂ ಮುರಿಯದ ದಾಖಲೆಯಾಗಿದೆ. ಇದೀಗ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 257 ರನ್‌ ಗಳಿಸಿ 2ನೇ ಸ್ಥಾನಕ್ಕೇರಿದೆ. 7 ರನ್‌ಗಳ ಅಂತರದಲ್ಲಿ ನಂ1. ಪಟ್ಟದಿಂದ ತಪ್ಪಿಸಿಕೊಂಡಿದೆ. ವಿಶೇಷವೆಂದರೆ 3ನೇ ಸ್ಥಾನದಲ್ಲೂ ಆರ್‌ಸಿಬಿಯೇ (248 ರನ್‌ ಗಳಿಸಿ) ಇದ್ದು, 246 ರನ್‌ ಗಳಿಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ 4ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಕುಸ್ತಿಪಟುಗಳು ಬೀದಿಗಿಳಿದು ಪ್ರತಿಭಟನೆ ಮಾಡ್ತಿರೋದು ದೇಶದ ಘನತೆಗೆ ಧಕ್ಕೆ – ಪಿ.ಟಿ ಉಷಾ ಬೇಸರ

    ದಾಖಲೆ ಬರೆದ ಕಿಂಗ್ಸ್‌, ಜೈಂಟ್ಸ್‌: 2023ರ ಐಪಿಎಲ್‌ ಆವೃತ್ತಿಯಲ್ಲಿ ಕಿಂಗ್ಸ್‌ ಪಂಜಾಬ್‌ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ನಡುವಿನ ಪಂದ್ಯ ಅತ್ಯಧಿಕ ರನ್‌ ಸಿಡಿಸಿದ ದಾಖಲೆ ಬರೆದಿದೆ. ಈ ಬಾರಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ 240 ಎಸೆತಗಳಲ್ಲಿ 444 ರನ್‌ ದಾಖಲಾಗಿತ್ತು. ಆದ್ರೆ ನಿನ್ನೆ ಪಂದ್ಯದಲ್ಲಿ 239 ಎಸೆತಗಳಲ್ಲಿ ಬರೋಬ್ಬರಿ 458 ರನ್‌ ದಾಖಲಾಗಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 257 ರನ್‌ ಗಳಿಸಿದರೆ, ಚೇಸಿಂಗ್‌ನಲ್ಲಿ ಪಂಜಾಬ್‌ 19.5 ಓವರ್‌ಗಳಲ್ಲಿ 201 ರನ್‌ ಗಳಿಸುವ ಮೂಲಕ ಪೈಪೋಟಿ ನೀಡಿತು.

  • ಕ್ಯಾಪ್ಟನ್‌ ಕೊಹ್ಲಿ, ಡುಪ್ಲೆಸಿಸ್‌ ಶತಕದಾಟಕ್ಕೆ ಪಂಜಾಬ್‌ ಪಂಚರ್‌ – RCBಗೆ 24 ರನ್‌ಗಳ ಭರ್ಜರಿ ಜಯ

    ಕ್ಯಾಪ್ಟನ್‌ ಕೊಹ್ಲಿ, ಡುಪ್ಲೆಸಿಸ್‌ ಶತಕದಾಟಕ್ಕೆ ಪಂಜಾಬ್‌ ಪಂಚರ್‌ – RCBಗೆ 24 ರನ್‌ಗಳ ಭರ್ಜರಿ ಜಯ

    ಮೊಹಾಲಿ: ನಾಯಕ ವಿರಾಟ್‌ ಕೊಹ್ಲಿ ಹಾಗೂ ಫಾಫ್‌ ಡು ಪ್ಲೆಸಿಸ್‌ ಶತಕದ ಜೊತೆಯಾಟ ಹಾಗೂ ಮೊಹಮ್ಮದ್‌ ಸಿರಾಜ್‌ ಮಾರಕ ಬೌಲಿಂಗ್‌ ದಾಳಿ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಕಿಂಗ್ಸ್‌ ಪಂಜಾಬ್‌ ವಿರುದ್ಧ 24 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಂಡಿದ್ದು ಮತ್ತೊಂದು ವಿಶೇಷ.

    ಮೊಹಾಲಿಯ ಐಎಸ್‌ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ್ದ ಪಂಜಾಬ್‌ ಕಿಂಗ್ಸ್‌ 18.2 ಓವರ್‌ಗಳಲ್ಲೇ 150 ರನ್‌ಗಳಿಗೆ ಸರ್ವಪತನ ಕಂಡು, ಆರ್‌ಸಿಬಿ ಎದುರು ಮಂಡಿಯೂರಿತು.

    ಆರ್‌ಸಿಬಿ ನೀಡಿದ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಕಿಂಗ್ಸ್‌ ಪಂಜಾಬ್‌ ತಂಡದ ಆಟಗಾರರು ಆರ್‌ಸಿಬಿ ಬೌಲರ್‌ಗಳ ದಾಳಿಗೆ ತತ್ತರಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಅಥರ್ವ ತೈದೆ 4 ರನ್‌, ಮ್ಯಾಥಿವ್‌ ಶಾರ್ಟ್‌ 8 ರನ್‌, ಲಿಯಾಮ್‌ ಲಿವಿಂಗ್ಸ್ಟನ್‌ 2 ರನ್‌ ಹಾಗೂ ಹರ್ಪ್ರೀತ್‌ ಸಿಂಗ್‌ 13 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಈ ನಡುವೆ ಮತ್ತೋರ್ವ ಆರಂಭಿಕ ಪ್ರಭ್‌ಸಿಮ್ರಾನ್‌ ಸಿಂಗ್‌ ಹಾಗೂ ಸ್ಯಾಮ್‌ ಕರ್ರನ್‌ ಉತ್ತಮ ಜೊತೆಯಾಟವಾಡಲು ಪ್ರಯತ್ನಿಸಿದರು. ಆದ್ರೆ ಆರ್‌ಸಿಬಿ ಬೌಲರ್‌ಗಳು ಇವರಿಬ್ಬರ ಆಟಕ್ಕೆ ಬ್ರೇಕ್‌ ಹಾಕಿದರು. ಸ್ಯಾಮ್‌ ಕರ್ರನ್‌ ಕೇವಲ 10 ರನ್‌ ಗಳಿಸಿ ರನೌಟ್‌ಗೆ ತುತ್ತಾದ ಬೆನ್ನಲ್ಲೇ 46 ರನ್‌ (30 ಎಸೆತ, 3 ಬೌಂಡರಿ, 4 ಸಿಕ್ಸರ್‌) ಗಳಿಸಿದ್ದ ಪ್ರಭ್‌ಸಿಮ್ರಾನ್‌ ಸಹ ಕ್ಲೀನ್‌ ಬೌಲ್ಡ್‌ ಆದರು.

    ಮಧ್ಯಮ ಕ್ರಮಾಂಕದಲ್ಲಿ ಬಂದ ಎಂ.ಶಾರೂಖ್‌ ಖಾನ್‌ 7 ರನ್‌ ಗಳಿಸಿದ್ರೆ, ಹರ್ಪ್ರೀತ್‌ ಬ್ರಾರ್‌ 13 ರನ್‌, ನಾಥನ್‌ ಎಲ್ಲಿಸ್‌ ಕೇವಲ 1 ರನ್‌ ಗಳಿಸಿದರು. ಇತ್ತ ತಂಡ ವಿಕೆಟ್‌ ಕಳೆದುಕೊಳ್ಳುತ್ತಿದ್ದರ ಹೊರತಾಗಿಯೂ ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಜಿತೇಶ್‌ ಶರ್ಮಾ 27 ಎಸೆತಗಳಲ್ಲಿ 41 ರನ್‌ (3 ಸಿಕ್ಸರ್‌, 2 ಬೌಂಡರಿ) ಸಿಡಿಸಿದ್ದರು. ಕೊನೆಯ 11 ಎಸೆತಗಳಲ್ಲಿ 25 ರನ್‌ ಬೇಕಿದ್ದಾಗಲೇ ಶರ್ಮಾ ಸಿಕ್ಸರ್‌ ಸಿಡಿಸಲು ಮುಂದಾಗಿ ಕ್ಯಾಚ್‌ ನೀಡಿದರು. ಇದರಿಂದ ತಂಡ ನಿರಾಸೆಗೊಂಡಿತು. ಅಂತಿಮವಾಗಿ ಅರ್ಷ್‌ದೀಪ್‌ ಸಿಂಗ್‌ ಅಜೇಯರಾಗುಳಿದರು.

    ಆರ್‌ಸಿಬಿ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಮೊಹಮ್ಮದ್‌ ಸಿರಾಜ್‌ 4 ಓವರ್‌ಗಳಲ್ಲಿ ಕೇವಲ 21 ರನ್‌ ನೀಡಿ 4 ವಿಕೆಟ್‌ ಕಿತ್ತರು. ಇನ್ನುಳಿದಂತೆ ವಾನಿಂದು ಹಸರಂಗ 2 ವಿಕೆಟ್‌ ಪಡೆದರೆ, ವೇಯ್ನ್ ಪಾರ್ನೆಲ್ ಹಾಗೂ ಹರ್ಷಲ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಆರ್‌ಸಿಬಿ ತಂಡದಿಂದ ಆರಂಭಿಕರಾಗಿ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಫಾಫ್‌ ಡುಪ್ಲೆಸಿಸ್‌ ಸಿಕ್ಸರ್‌, ಬೌಂಡರಿಗಳ ಆಟದಿಂದ ಉತ್ತಮ ಶುಭಾರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 16.1 ಓವರ್‌ಗಳಲ್ಲಿ 137 ರನ್‌ಗಳ ಜೊತೆಯಾಟವಾಡಿತು. ಕೊಹ್ಲಿ 47 ಎಸೆತಗಳಲ್ಲಿ 59 ರನ್ (4 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾದರು. ಈ ಬೆನ್ನಲ್ಲೇ ಫಾಫ್‌ ಡುಪ್ಲೆಸಿಸ್‌ 56 ಎಸೆತಗಳಲ್ಲಿ 84 ರನ್ (5 ಬೌಂಡರಿ, 5 ಸಿಕ್ಸರ್ ) ಸಿಡಿಸಿ ಶತಕವಂಚಿತರಾದರು.

    ಕೊನೆಯಲ್ಲಿ ದಿನೇಶ್ ಕಾರ್ತಿಕ್ 7 ರನ್‌ ಗಳಿಸಿ ಔಟಾದರೆ, ಮಹಿಪಾಲ್ ಲೋಮ್ರೋರ್ 6 ರನ್‌, ಶಹಬಾಜ್ ಅಹ್ಮದ್ 5 ರನ್ ಗಳಿಸಿ ಅಜೇಯರಾಗುಳಿದರು. ಇನ್ನೂ ಕಳೆದ ಪಂದ್ಯದಲ್ಲಿ ಸಿಎಸ್‌ಕೆ ಬೌಲರ್‌ಗಳನ್ನು ಚೆಂಡಾಡಿದ್ದ ಗ್ಲೇನ್‌ ಮ್ಯಾಕ್ಸ್‌ವೆಲ್‌ ಮೊದಲ ಎಸೆತದಲ್ಲೇ ಡಕೌಟ್‌ ಆಗಿ ನಿರಾಸೆ ಮೂಡಿಸಿದರು.

    ಪಂಜಾಬ್ ಪರ ಹರ್ಪ್ರೀತ್‌ ಬ್ರಾರ್ 2 ವಿಕೆಟ್‌ ಪಡೆದರೆ, ನಾಥನ್ ಎಲ್ಲಿಸ್, ಅರ್ಷ್‌ದೀಪ್‌ ಸಿಂಗ್‌ ತಲಾ ಒಂದೊಂದು ವಿಕೆಟ್ ಕಬಳಿಸಿದರು.

    ಮತ್ತೆ ಕ್ಯಾಪ್ಟನ್‌ ಆಗಿ ಕಣಕ್ಕಿಳಿದ ಕೊಹ್ಲಿ: ಪಂಜಾಬ್‌ ಕಿಂಗ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿ ಅಭಿಮಾನಿಗಳು ನಿರೀಕ್ಷಿಸದ ಅಚ್ಚರಿಯೊಂದು ಕಾದಿತ್ತು. ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದರು. ವಿರಾಟ್ ಕೊಹ್ಲಿ 2022ರ ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ನಾಯಕತ್ವ ತ್ಯಜಿಸಿದ್ದರು. ಹೀಗಾಗಿ ಫಾಫ್ ಡು ಪ್ಲೆಸಿಸ್ ಕಳೆದ ವರ್ಷದ ಆವೃತ್ತಿಯಿಂದ ಆರ್‌ಸಿಬಿ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ವಿರಾಟ್ ಕೊಹ್ಲಿ ಅನುಭವಿ ಆಟಗಾರನಾಗಿ ನಾಯಕನಿಗೆ ಸಾಥ್ ನೀಡುತ್ತಿದ್ದಾರೆ. ಆದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮತ್ತೆ ನಾಯಕನಾಗಿ ಕಣಕ್ಕಿಳಿಯುವ ಮೂಲಕ ಅಭಿಮಾನಿಗಳನ್ನ ರಂಜಿಸಿದರು.

  • IPL 2023: ಪಂಜಾಬ್‌ಗೆ ಪಂಚ್‌ ಕೊಟ್ಟ ಸನ್‌ ರೈಸರ್ಸ್‌ – ಹೈದರಾಬಾದ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

    IPL 2023: ಪಂಜಾಬ್‌ಗೆ ಪಂಚ್‌ ಕೊಟ್ಟ ಸನ್‌ ರೈಸರ್ಸ್‌ – ಹೈದರಾಬಾದ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

    ಹೈದರಾಬಾದ್‌: ರಾಹುಲ್‌ ತ್ರಿಪಾಠಿ ಭರ್ಜರಿ ಅರ್ಧ ಶತಕದ ಬ್ಯಾಟಿಂಗ್‌ ಹಾಗೂ ಶಿಸ್ತುಬದ್ಧ ಬೌಲಿಂಗ್‌ ದಾಳಿ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು ಕಿಂಗ್ಸ್‌ ಪಂಜಾಬ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಪಂಜಾಬ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿತು. 144 ರನ್‌ಗಳ ಗುರಿ ಬೆನ್ನತ್ತಿದ್ದ ಹೈದರಾಬಾದ್‌ ತಂಡ 17.1 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 145 ರನ್‌ ಗಳಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: IPL 2023: ಮೋದಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ ರಶೀದ್‌ ಖಾನ್‌

    ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಹೈದರಾಬಾದ್‌ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಆರಂಭಿಕರಾದ ಹ್ಯಾರಿ ಬ್ರೂಕ್‌ 13 ರನ್‌, ಮಯಾಂಕ್‌ ಅಗರ್ವಾಲ್‌ 21 ರನ್‌ ಗಳಿಸಿ ಔಟಾಗಿದ್ದರು. ಮೊದಲ 6 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಕೇವಲ 34 ರನ್‌ ಗಳಿಸಿತ್ತು. ನಂತರ 3ನೇ ವಿಕೆಟ್‌ಗೆ ಜೊತೆಯಾದ ರಾಹುಲ್‌ ತ್ರಿಪಾಠಿ ಹಾಗೂ ನಾಯಕ ಏಡನ್‌ ಮಾರ್ಕಮ್ ಮುರಿಯದ 3ನೇ ವಿಕೆಟ್‌ಗೆ 52 ಎಸೆತಗಳಲ್ಲಿ 100 ರನ್‌ಗಳ ಜೊತೆಯಾಟವಾಡಿದರು.

    ರಾಹುಲ್‌ ತ್ರಿಪಾಠಿ 48 ಎಸೆತಗಳಲ್ಲಿ 74 ರನ್‌ (10 ಬೌಂಡರಿ, 3 ಸಿಕ್ಸರ್‌) ಸಿಡಿಸಿದರೆ, ಮಾರ್ಕಮ್‌ 37 ರನ್‌ (21 ಎಸೆತ, 6 ರನ್‌) ಗಳಿಸಿ ತಂಡದ ಗೆಲುವಿಗೆ ಆಸರೆಯಾದರು. ಕಿಂಗ್ಸ್‌ ಪಂಜಾಬ್‌ ಪರ ಅರ್ಷ್‌ದೀಪ್‌ ಸಿಂಗ್‌ ಹಾಗೂ ರಾಹುಲ್‌ ಚಹಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: IPL 2023: ಕೊನೆಯ ಓವರ್‌ನಲ್ಲಿ 6, 6, 6, 6, 6 -‌ KKRಗೆ 3 ವಿಕೆಟ್‌ಗಳ ರೋಚಕ ಜಯ

    ಇನ್ನೂ ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಪಂಜಾಬ್‌ ಪರ ಏಕಾಂಗಿ ಹೋರಾಟ ನಡೆಸಿದ ಶಿಖರ್ ಧವನ್ 1 ರನ್‌ನಿಂದ ಶತಕವಂಚಿತರಾದರು. 66 ಎಸೆತಗಳಲ್ಲಿ ಅಜೇಯ 99 ರನ್ ಗಳಿಸಿದ ಶಿಖರ್ ತಂಡ ಮೊತ್ತ 140ರ ಗಡಿದಾಟಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಸ್ಯಾಮ್‌ ಕರ್ರನ್‌ 22 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಯಾರೊಬ್ಬರೂ ಎರಡಂಕಿಯ ಮೊತ್ತ ಗಳಿಸದ ಕಾರಣ ಪಂಜಾಬ್‌ ಅಲ್ಪಮೊತ್ತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

    ಹೈದರಾಬಾದ್‌ ಪರ ಮಿಂಚಿನ ಬೌಲಿಂಗ್‌ ದಾಳಿ ನಡೆಸಿದ ಮಯಾಂಕ್‌ ಮಾರ್ಕಂಡೆ, 4 ವಿಕೆಟ್‌ ಕಿತ್ತರೆ, ಉಮ್ರಾನ್‌ ಮಲಿಕ್‌, ಮಾರ್ಕೊ ಜಾನ್ಸೆನ್‌ ತಲಾ 2 ವಿಕೆಟ್‌ ಹಾಗೂ ಭುವನೇಶ್ವರ್‌ ಕುಮಾರ್‌ ಒಂದು ವಿಕೆಟ್‌ ಕಿತ್ತರು.

  • T20 ಸರಣಿಯಲ್ಲಿ ಟೀಂ ಇಂಡಿಯಾದಿಂದ ಹೊರಬಿದ್ದ ಧವನ್‌ಗೆ ಅಪ್ಪನಿಂದಲೇ ಥಳಿತ!

    T20 ಸರಣಿಯಲ್ಲಿ ಟೀಂ ಇಂಡಿಯಾದಿಂದ ಹೊರಬಿದ್ದ ಧವನ್‌ಗೆ ಅಪ್ಪನಿಂದಲೇ ಥಳಿತ!

    ಮುಂಬೈ: ಕನ್ನಡಿಗ ಮಯಾಂಕ್ ಅಗರ್‌ವಾಲ್ ನೇತೃತ್ವದ ಕಿಂಗ್ಸ್ ಪಂಜಾಬ್ ತಂಡವು ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಗಿದೆ. ಆದರೆ ತಮ್ಮ ಬ್ಯಾಟಿಂಗ್ ವೈಖರಿಯಿಂದ ಅತ್ಯುತ್ತಮ ಪ್ರದರ್ಶನ ನೀಡಿದ ಶಿಖರ್‌ಧವನ್ ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯಲಿರುವ ಟಿ20 ಸರಣಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

    ಈ ಬೆನ್ನಲ್ಲೇ ಮನೆಗೆ ಹಿಂದಿರುಗುತ್ತಿದ್ದಂತೆ ಶಿಖರ್‌ಧವನ್ ಅವರ ತಂದೆ ಮನಬಂದಂತೆ ಥಳಿಸಿದ್ದಾರೆ. ಮನೆಗೆ ಬರುತ್ತಿದ್ದಂತೆ ಜಾಡಿಸಿ ಒದ್ದು, ಕೆಳಗೆ ಬೀಳಿಸಿದ್ದಾರೆ. ಕುಟುಂಬದವರು ತಡೆಯಲು ಬಂದರೂ ಸುಮ್ಮನಾಗದೇ ಧವನ್‌ಗೆ ಮನಬಂದಂತೆ ಥಳಿಸಿದ್ದಾರೆ. ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಿಖರ್ ಧವನ್ ಅಭಿಮಾನಿಗಳು ಶಾಖ್ ಆಗಿದ್ದಾರೆ. ಇದನ್ನೂ ಓದಿ: ವನಿಂದು ಹಸರಂಗ ಕ್ಯಾಚ್ ವಿವಾದ – ಐಸಿಸಿ ನಿಯಮವೇನು 

    IPL CSK VS PANJAB

    ಶಿಖರ್ ಧವನ್‌ಗೆ ತನ್ನ ತಂದೆ ಥಳಿಸುತ್ತಿರುವುದನ್ನು ಕಂಡು ಕುಟುಂಬದಲ್ಲಿ ಕೋಲಾಹಲ ಎದ್ದಿತೇ? ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಅಚ್ಚರಿ ಪಡಬೇಕಾದ್ದಿಲ್ಲ. ಏಕೆಂದರೆ ಇದೊಂದು ಫನ್ನಿ ವೀಡಿಯೋ ಆಗಿದೆ. ಇದನ್ನೂ ಓದಿ: ಸೋಲಿನ ಬಳಿಕ ನಾಯಕ ರಾಹುಲ್‌ನನ್ನು ದಿಟ್ಟಿಸಿದ ಗಂಭೀರ್ – ನೆಟ್ಟಿಗರಿಂದ ಟ್ರೋಲ್

    ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ನಾಕೌಟ್‌ಗೆ ಕ್ವಾಲಿಫೈಯರ್ ಆಗದೇ ಹೋಗಿದ್ದರಿಂದ ನನ್ನ ತಂದೆ ನನ್ನನ್ನು ಮನೆಯಿಂದ ನಾಕೌಟ್ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Shikhar Dhawan (@shikhardofficial)

    ಶಿಖರ್ ಧವನ್ ಕೇವಲ ಮನರಂಜನೆಯ ಉದ್ದೇಶದಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಅಭಿಮಾನಿಗಳು ಎಂಜಾಯ್ ಮಾಡಲಿ ಎನ್ನುವ ಉದ್ದೇಶದಿಂದ ಶಿಖರ್ ಧವನ್ ಆಗಾಗ ಇಂತಹ ಫನ್ನಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅದರಂತೆ ಅಪರೋಪದ ವೀಡಿಯೋ ಒಂದರಲ್ಲಿ ಕುಟುಂಬಸ್ಥರೂ ಕಾಣಿಸಿಕೊಂಡಿದ್ದಾರೆ.

    ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು ಗೆಲುವು ಸಾಧಿಸುವ ಮೂಲಕ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದೇ ಆವೃತ್ತಿಯಲ್ಲಿ ಧವನ್ 6 ಸಾವಿರ ರನ್‌ಗಳಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡು ಸಾಧನೆ ಮಾಡಿದರು.

  • ಡಿಕಾಕ್‌, ಹೂಡಾ ಉತ್ತಮ ಬ್ಯಾಟಿಂಗ್‌ – ಲಕ್ನೋಗೆ 20 ರನ್‌ಗಳ ಜಯ

    ಡಿಕಾಕ್‌, ಹೂಡಾ ಉತ್ತಮ ಬ್ಯಾಟಿಂಗ್‌ – ಲಕ್ನೋಗೆ 20 ರನ್‌ಗಳ ಜಯ

    ಮುಂಬೈ: 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ 42ನೇ ಪಂದ್ಯದಲ್ಲಿ ಲಕ್ನೋ ತಂಡವು 20 ರನ್‌ಗಳ ಗೆಲುವು ದಾಖಲಿಸಿತು.

    154 ರನ್‌ಗಳ ಗುರಿಯನ್ನು ಪಡೆದ ಪಂಜಾಬ್‌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 133 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ಗೆದ್ದು ಫೀಲ್ಡಿಂಗಿಳಿದ ಕಿಂಗ್ಸ್ ಪಂಜಾಬ್ ತಂಡವು ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 153 ರನ್ ಕಲೆಹಾಕಿ, ಎದುರಾಳಿ ಪಂಜಾಬ್ ತಂಡಕ್ಕೆ 154 ರನ್‌ಗಳ ಗುರಿ ನೀಡಿತ್ತು. ಇದನ್ನೂ ಓದಿ: ಸ್ಟಾರ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್‌ಗೆ ನಾಯಕನ ಪಟ್ಟ ಕಟ್ಟಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್

    IPL 2022 LUC VS KP 2

    ಪಂಜಾಬ್‌ ತಂಡವು ಮೊದಲ 3 ಓವರ್‌ಗಳಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿತು. ಪಂಜಾಬ್ ಟೀಂ ಕ್ಯಾಪ್ಟನ್ ಮಯಾಂಕ್ ಅಗರ್ವಾಲ್ 17 ಎಸೆತಗಳಲ್ಲಿ 25 ರನ್‌ಗಳಿಸಿ, 4ನೇ ಓವರ್‌ನಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ಇನ್ನೂ ಕಳೆದ ಪಂದ್ಯದಲ್ಲಿ ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌ಗಳಿಸಿ 2ನೇ ಸ್ಥಾನ ಗಳಿಸಿಕೊಂಡ ಶಿಖರ್ ಧವನ್ ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು. 15 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಔಟಾದರು.

    IPL 2022 LUC VS KP 2

    3ನೇ ಕ್ರಮಾಂಕದಲ್ಲಿ ಬಂದ  ಜಾನಿ ಬೈರ್‌ಸ್ಟೋವ್ 28 ಎಸೆತಗಳಲ್ಲಿ 32 ರನ್‌ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು. ಇದರಿಂದ ತಂಡದಲ್ಲಿ ಗೆಲುವಿನ ಭರವಸೆ ಚಿಗುರಿತ್ತು. 15 ಓವರ್‌ಗೆ ಪಂಜಾಬ್ ತಂಡವು 103 ರನ್‌ಗಳನ್ನು ಕಲೆಹಾಕಿತ್ತು. ಇನ್ನು 5 ಓವರ್‌ಗಳಲ್ಲಿ 51 ರನ್‌ಗಳ ಅಗತ್ಯವಿದ್ದಾಗಲೇ ಜಾನಿ ಬೈರ್‌ಸ್ಟೋವ್ ತಮ್ಮ ವಿಕೆಟ್ ಒಪ್ಪಿಸಿದರು. ಇದರಿಂದ ಪಂಜಾಬ್ ಗೆಲುವಿನ ಭರವಸೆ ಕಳೆದುಕೊಂಡಿತು. ಇದನ್ನೂ ಓದಿ: ಸಿಕ್ಸ್ ಸಿಡಿಸಿದಕ್ಕೆ ಕೋಪ – ಕ್ರೀಡಾ ಸ್ಫೂರ್ತಿ ಮರೆತ ಹರ್ಷಲ್ ಪಟೇಲ್

    ನಂತರ ಬಂದ ಜೀತೇಶ್ ಶರ್ಮಾ 2 ರನ್, ಲಿಯಾಮ್ ಲಿವಿಂಗ್‌ಸ್ಟೋನ್ 18 ರನ್, ಕಗಿಸೋ ರಬಾಡ 2 ರನ್, ರಾಹುಲ್ ಚಹಾರ್ 4 ರನ್ ಗಳಿಸಿದ್ದರು. ಪ್ರಮುಖ ಬ್ಯಾಟರ್‌ಗಳನ್ನು ಕಳೆದುಕೊಂಡಿದ್ದ ಪಂಜಾಬ್ ತಂಡ 18 ಓವರ್ ಮುಗಿಯುವ ವೇಳೆಗೆ ತನ್ನ ಗೆಲುವಿನ ಸಂಪೂರ್ಣ ಭರವಸೆ ಕಳೆದುಕೊಂಡಿತು. ಕೊನೆಯ ಓವರ್‌ ವರೆಗೂ ಹೋರಾಡಿದ ರಿಷಿ ಧವನ್‌ 22 ಎಸೆತಗಳಲ್ಲಿ 21 ರನ್‌ಗಳನ್ನು ಸಿಡಿಸಿದರು.

    IPL 2022 LUC VS KP 2

    ರಬಾಡಾ ಬೌಲಿಂಗ್ ಕಮಾಲ್: ಆರಂಭದಿಂದಲೇ ಲಕ್ನೋ ತಂಡವನ್ನು ಮಂಕಾಗಿಸುವಲ್ಲಿ ಪಂಜಾಬ್ ತಂಡ ಯಶಸ್ವಿಯಾಯಿತು. ನಾಯಕನ ನಿರೀಕ್ಷೆಗೆ ತಕ್ಕಂತೆ ಪ್ರಮುಖ ಬ್ಯಾಟರ್‌ಗಳನ್ನು ಕಡಿಮೆ ರನ್‌ಗಳಲ್ಲೇ ಔಟಾಗಿಸಿದರು. ದಕ್ಷಿಣ ಆಫ್ರಿಕಾದ ವೇಗಿಯ ಬೌಲರ್ ಕಗಿಸೋ ರಬಾಡ 4 ಓವರ್‌ಗಳಲ್ಲಿ 38 ರನ್ ನೀಡಿದರೂ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಉಳಿದಂತೆ ರಾಹುಲ್ ಚಹರ್ 2 ವಿಕೆಟ್ ಮತ್ತು ಸಂದೀಪ್ ಶರ್ಮಾ ಒಂದು ವಿಕೆಟ್‌ ಪಡೆದರು. ಬೌಲಿಂಗ್‌ನಲ್ಲಿ ಲಕ್ನೋ ಬ್ಯಾಟರ್‌ಗಳನ್ನು ಉರುಳಿಸಿದ ತಂಡ ಬ್ಯಾಟಿಂಗ್‌ ವೈಫಲ್ಯದಿಂದ ಸೋಲು ಕಂಡಿತು. ಇದನ್ನೂ ಓದಿ: 6 ಸಾವಿರ ರನ್‌ಗಳ ಗಡಿ ದಾಟಿ ಐಪಿಎಲ್ `ಶಿಖರ’ವೇರಿದ ಧವನ್

    IPL 2022 LUC VS KP 2

    ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಲಕ್ನೋ ಸೂಪರ್ ಜೈಂಟ್ಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕನ್ನಡಿಗ ಕೆ.ಎಲ್.ರಾಹುಲ್ 11 ಎಸೆತಗಳಲ್ಲಿ 6 ರನ್ ಕಲೆಹಾಕಿ ಔಟಾದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ 13 ರನ್‌ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಹಿನ್ನಡೆ ಅನುಭವಿಸಿತು.

    IPL 2022 LUC VS KP 4

    ಈ ವೇಳೆ ದಕ್ಷಿಣ ಆಫ್ರಿಕಾದ ಮತ್ತೋರ್ವ ಆಟಗಾರ ಕ್ವಿಂಟನ್ ಡಿಕಾಕ್ ಹಾಗೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡಾ ಅವರ 85 ರನ್‌ಗಳ ಜೊತೆಯಾಟವು ತಂಡ 150 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಕ್ವಿಂಟನ್ ಡಿ ಕಾಕ್ ತಮ್ಮ ಜವಾಬ್ದಾರಿಯುತ ಆಟದಿಂದ 46 ರನ್  (37 ಎಸೆತ, 4 ಫೋರ್‌, 2 ಸಿಕ್ಸರ್) ಗಳಿಸಿದರೆ, ದೀಪಕ್ ಹೂಡಾ 34 ರನ್  ( 28 ಎಸೆತ, 1 ಫೋರ್‌, 2 ಸಿಕ್ಸರ್) ಗಳಿಸಿ ನಿರ್ಗಮಿಸಿದರು. ಉಳಿದಂತೆ ಕೃನಾಲ್ ಪಾಂಡ್ಯ 7 ರನ್, ಮಾರ್ಕಸ್ ಸ್ಟೊಯಿನಿಸ್ 1 ರನ್, ಆಯುಷ್ ಬದೋನಿ 4 ರನ್, ಜೇಸನ್ ಹೋಲ್ಡರ್ 11 ರನ್, ದುಷ್ಮಂತ ಚಮೀರ 17 ರನ್ ಕಲೆಹಾಕಿದರೆ, ಮೊಹ್ಸಿನ್ ಖಾನ್ ಅಜೇಯ 13 ರನ್ ಹಾಗೂ ಅವೇಶ್ ಖಾನ್ ಅಜೇಯ 2 ರನ್ ದಾಖಲಿಸಿದರು.

  • 6 ಸಾವಿರ ರನ್‌ಗಳ ಗಡಿ ದಾಟಿ ಐಪಿಎಲ್ `ಶಿಖರ’ವೇರಿದ ಧವನ್

    6 ಸಾವಿರ ರನ್‌ಗಳ ಗಡಿ ದಾಟಿ ಐಪಿಎಲ್ `ಶಿಖರ’ವೇರಿದ ಧವನ್

    ಮುಂಬೈ: ಚೆನ್ನೈ ಸೂಪರ್‌ಕಿಂಗ್ಸ್ (CSK) ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಅಧಿಕ ರನ್‌ಗಳಿಸಿ ಮ್ಯಾನ್ ಆಫ್ ದಿ ಮ್ಯಾಚ್ (ಪಂದ್ಯಶ್ರೇಷ್ಠ) ಪ್ರಶಸ್ತಿ ಗಳಿಸಿದ ಶಿಖರ್ ಧವನ್ ಐಪಿಎಲ್‌ನಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಐಪಿಎಲ್‌ನಲ್ಲಿ ಹೆಚ್ಚು ರನ್‌ಗಳಿಸಿರುವ ಬ್ಯಾಟ್ಸ್‌ಮನ್‌ ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ.

    CRICKET-IND-T20-IPL-DELHI-PUNJAB

    ಐಪಿಎಲ್‌ನಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿರುವ ಶಿಖರ್ ಧವನ್, ತಮ್ಮ ಅದ್ಭುತ ಬ್ಯಾಟಿಂಗ್ ವೈಖರಿಯಿಂದ ಅಬ್ಬರಿಸಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ 200ನೇ ಪಂದ್ಯವಾಡಿದ ಅವರು, 6 ಸಾವಿರ ರನ್‌ಗಳ ಗಡಿ ದಾಟಿದ್ದಾರೆ. ಪೂರೈಸುವ ಮೂಲಕ ಐಪಿಎಲ್‌ನಲ್ಲಿ ಹೆಚ್ಚು ರನ್‌ಗಳಿಸಿದ 2ನೇ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೊದಲ ಪತ್ನಿಯಿಂದ ಒಪ್ಪಿಗೆ ಪಡೆದು 38 ವರ್ಷದ ಟೀಚರ್ ಜೊತೆ 66ರ ಅರುಣ್ ಲಾಲ್ ಮದುವೆ

    DHAVAN

    ಶಿಖರ್ ಧವನ್ ಅವರಿಗಿಂತ ಮೊದಲು ಈ ಸಾಧನೆ ಮಾಡಿರುವ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ 3ನೇ ಸ್ಥಾನ, ಡೇವಿಡ್ ವಾರ್ನರ್ ನಾಲ್ಕನೇ ಸ್ಥಾನ ಹಾಗೂ ಸುರೇಶ್ ರೈನಾ 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: 4 ವರ್ಷಗಳ ನಂತರ ನನಗೆ ಐಪಿಎಲ್‍ನಲ್ಲಿ ಅವಕಾಶ ಸಿಕ್ಕಿದೆ: ರಿಷಿ ಧವನ್

    2022ರಲ್ಲಿ ನಡೆಯುತ್ತಿರುವ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಆಗಿರುವ ಶಿಖರ್ ಧವನ್, ಈ ಹಿಂದೆ ಡೆಕ್ಕನ್ ಚಾರ್ಜರ್ಸ್, ಸನ್‌ರೈಸರ್ಸ್ ಹೈದ್ರಾಬಾದ್, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಲ್ಲಿ ಆಡಿರುವ ಅನುಭವ ಹೊಂದಿದ್ದಾರೆ.

    ಅಲ್ಲದೆ, ತಮ್ಮ ಟಿ20 ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ಗಳ ಗಡಿ ದಾಟಿದ್ದು, ಇದೀಗ ಅತಿಹೆಚ್ಚು ರನ್‌ಗಳಿಸಿದ ಭಾರತದ 3ನೇ ಆಟಗಾರ ಎಂಬ ಖ್ಯಾತಿಯನ್ನೂ ಗಳಿಸಿದ್ದಾರೆ.

    ಐಪಿಎಲ್‌ನಲ್ಲಿ ಅತ್ಯಧಿಕ ರನ್‌ಗಳಿಸಿದವರು
    ವಿರಾಟ್ ಕೊಹ್ಲಿ – 215 ಪಂದ್ಯಗಳು- 6402 ರನ್
    ಶಿಖರ್ ಧವನ್ – 200 ಪಂದ್ಯಗಳು- 6086 ರನ್
    ರೋಹಿತ್ ಶರ್ಮಾ 221 ಪದ್ಯಗಳು- 5764
    ಡೇವಿಡ್ ವಾರ್ನರ್ 155 ಪಂದ್ಯಗಳು – 5668
    ಸುರೇಶ್ ರೈನಾ- 205 ಪಂದ್ಯಗಳು- 5528

  • ಕೊನೆಯವರೆಗೆ ಹೋರಾಡಿ ಸೋತ ಚೆನ್ನೈ – ಪಂಜಾಬ್‌ಗೆ 11 ರನ್‌ಗಳ ಜಯ

    ಕೊನೆಯವರೆಗೆ ಹೋರಾಡಿ ಸೋತ ಚೆನ್ನೈ – ಪಂಜಾಬ್‌ಗೆ 11 ರನ್‌ಗಳ ಜಯ

    ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 187 ರನ್‌ಗಳಿಸಿದ ಕಿಂಗ್ಸ್ ಪಂಜಾಬ್ ತಂಡವು ಶಿಖರ್ ಧವನ್(88) ಹಾಗೂ ಬನುಕಾ ರಾಜಪಕ್ಸ ಅವರ ಅಬ್ಬರ ಆಟದಿಂದ 11 ರನ್‌ಗಳ ಗೆಲುವು ದಾಖಲಿಸಿದೆ.

    ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲ ಬ್ಯಾಟಿಂಗ್ ಅವಕಾಶ ಪಡೆದ ಪಂಜಾಬ್ ಕಿಂಗ್ಸ್, 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 187 ರನ್‌ಗಳ ಮೊತ್ತಗಳಿಸಿತು. 187 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ತಂಡವು 20 ಓವರ್‌ಗಳಲ್ಲಿ 176 ರನ್‌ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಇದನ್ನೂ ಓದಿ: ವಿಕೆಟ್ ನೀಡಿದ ಪೋಲಾರ್ಡ್‍ಗೆ ಮುತ್ತು ಕೊಟ್ಟು ಸಂಭ್ರಮಿಸಿದ ಕೃನಾಲ್ ಪಾಂಡ್ಯ

    Dhavan

    ಚೆನ್ನೈ ಮೊದಲ 6 ಎಸೆತಗಳಲ್ಲಿ 10 ರನ್‌ಗಳನ್ನು ಗಳಿಸಿತು. ನಂತರದಲ್ಲಿ ರಾಬಿನ್ ಉತ್ತಪ್ಪ. ಶಿವಂ ದುಬೆ ಬಹುಬೇಗನೇ ನಿರ್ಗಮಿಸಿದರು. ಆದರೆ 2ನೇ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ ಆಗಿ ಕ್ರೀಸ್‌ಗಿಳಿದ ಅಂಬಟಿ ರಾಯುಡು 78ರನ್ (39 ಎಸೆತ, 7 ಬೌಂಡರಿ, 6 ಸಿಕ್ಸರ್) ಗಳನ್ನು ಚಚ್ಚುವ ಮೂಲಕ ಪಂಜಾಬ್ ಬೌಲರ್‌ಗಳ ಬೆವರಳಿಸಿದ್ದರು. ಇದರಿಂದಾಗಿ ಚೆನ್ನೈ ತಂಡಕ್ಕೆ ಗೆಲುವಿನ ಕನಸು ಚಿಗುರಿತ್ತು. ಇದನ್ನೂ ಓದಿ: 3.10 ಕೋಟಿ ರೂಪಾಯಿಯ ಐಷಾರಾಮಿ ಕಾರು ಖರೀದಿಸಿದ ಹಿಟ್ ಮ್ಯಾನ್

    RAYUDU CSK.png IPl

    ರಾಯುಡು ಆಟಕ್ಕೆ ಬ್ರೇಕ್ ಹಾಕುವಲ್ಲಿ ರಬಾಡಾ ಯಶಸ್ವಿಯಾದರು. 39ನೇ ಎಸೆತದಲ್ಲಿ ತಮ್ಮ ವಿಕೆಟ್ ಒಪ್ಪಿಸಿ ಹೊರನಡೆದರು. 5ನೇ ಕ್ರಮಾಂಕದಲ್ಲಿ ಬಂದ ಮಹೇಂದ್ರ ಸಿಂಗ್ ಧೋನಿ ಅವರು ಬಿರುಸಿನ ಆಟವನ್ನೇ ಆಡಿದರು. ಕೊನೆಯ 7ನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡ ಧೋನಿ ಕೊನೆಯ ಓವರ್‌ನಲ್ಲಿ ತಮ್ಮಲ್ಲೇ ಸ್ಟ್ರೈಕ್‌ ಉಳಿಸಿಕೊಂಡರು. 6 ಎತೆಗಳಿಗೆ 28 ರನ್‌ಗಳಷ್ಟೇ ಬೇಕಿತ್ತು. ಮೊದಲ ಬಾಲ್‌ಗೆ ಸಿಕ್ಸರ್ ಬಾರಿಸಿದರು. ಆದರೆ, 2ನೇ ಎಸೆತ ಬೌನ್ಸ್ ಆದ ಹಿನ್ನೆಲೆ ಮತ್ತೊಂದು ಸಿಕ್ಸ್ ಹೊಡೆಯುವ ಪ್ರಯತ್ನವೂ ಕೈತಪ್ಪಿತು. 3ನೇ ಎಸೆತವೂ ವಿಫಲವಾಯಿತು. ನಾಲ್ಕನೆ ಎಸೆತದಲ್ಲಿ ಸಿಕ್ಸ್ ಎತ್ತುವ ಪ್ರಯತ್ನದಲ್ಲಿದ್ದ ಧೋನಿ ಕ್ಯಾಚ್ ನೀಡಿ ನಿರ್ಗಮಿಸಿದರು. ಚೆನ್ನೈ ಅನಿವಾರ್ಯವಾಗಿ ಸೋಲಿನ ಹೊಣೆ ಹೊರಬೇಕಾಯಿತು. ಋತುರಾಜ್ ಗಾಯಕ್ವಾಡ್ 30(27), ರಾಬಿನ್ ಉತ್ತಪ್ಪ 1 (7), ಮಿಚೆಲ್ ಸ್ಯಾಟ್ನರ್ 9 (15), ಶಿವಂ ದುಬೆ 8 (7) ರನ್‌ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಡ್ವೇನ್ ಬ್ರಾವೋ(2/42) ಹಾಗೂ ಮಹೀಶ್ ತೀಕ್ಷಣ(1/32) ವಿಕೆಟ್ ಪಡೆದರು.

    CSK

    ಟಾಸ್ ಸೋತು ಬ್ಯಾಂಟಿಂಗ್ ಇಳಿದ ಪಂಜಾಬ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್(88) ಹಾಗೂ ಬನುಕಾ ರಾಜಪಕ್ಸ(42) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ 187 ರನ್‌ಗಳ ಪೈಪೋಟಿಯ ಮೊತ್ತ ಕಲೆಹಾಕಿತು.

    ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಪರ ನಾಯಕ ಮಯಾಂಕ್ ಅಗರ್ವಾಲ್(18) ಬಹುಬೇಗನೆ ನಿರ್ಗಮಿಸಿದರು. ಆದರೆ 2ನೇ ಜೊತೆಯಾದ ಶಿಖರ್ ಧವನ್ 88 ರನ್(59 ಬಾಲ್, 9 ಬೌಂಡರಿ, 2 ಸಿಕ್ಸ್) ಐಪಿಎಲ್‌ನಲ್ಲಿ ಮತ್ತೊಂದು ಅರ್ಧಶತಕ ಬಾರಿಸಿ ಅಬ್ಬರಿಸಿದರು. ಇವರಿಗೆ ಸಾಥ್ ನೀಡಿದ ಬನುಕಾ ರಾಜಪಕ್ಸ 42 ರನ್(32 ಬಾಲ್, 2 ಬೌಂಡರಿ, 2 ಸಿಕ್ಸ್) ಬ್ಯಾಟಿಂಗ್ ಪ್ರದರ್ಶಿಸಿದರು. ಸಿಎಸ್‌ಕೆ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ 2ನೇ ವಿಕೆಟ್‌ಗೆ 110(71) ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.

    panjab

    ರಾಜಪಕ್ಸ ವಿಕೆಟ್ ಪತನದ ನಂತರ ಬಂದ ಲಿಯಮ್ ಲಿವಿಂಗ್‌ಸ್ಟೋನ್ 19 ರನ್ (7 ಬಾಲ್, 1 ಬೌಂಡರಿ, 2 ಸಿಕ್ಸ್) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೇ ಧವನ್ ಹಾಗೂ ಲಿವಿಂಗ್‌ಸ್ಟೋನ್ 3ನೇ ವಿಕೆಟ್‌ಗೆ 27(11 ಎಸೆತ) ಜೊತೆಯಾಟದ ಕಾಣಿಕೆ ನೀಡಿದರು. ನಂತರ ಬಂದ ಇಂಗ್ಲೆಂಡ್ ಟೀಂನ ಆರಂಭಿಕ ಆಟಗಾರ ಜಾನಿ ಬ್ರೈಸ್ಟೋ 3 ಎಸೆತಗಳಲ್ಲಿ ಕೇವಲ 6 ರನ್‌ಗಳನ್ನು ಗಳಿಸಿ ರನೌಟ್‌ನಲ್ಲಿ ತಮ್ಮ ವಿಕೆಟ್ ಒಪ್ಪಿಸಿ ನಡೆದರು. ಬೌಲಿಂಗ್‌ನಲ್ಲಿ ಕಾಗಿಸೋ ರಬಾಡಾ ಹಾಗೂ ರಿಶಿ ಧವನ್ ತಲಾ 2 ವಿಕೆಟ್‌ಗಳನ್ನು ಪಡೆದುಕೊಳ್ಳುವ ಮೂಲಕ ತಂಡದ ಗೆಲುವಿಗೆ ನೆರವಾದರು.

    IPL 2022 PBKS VS CSK

    ರನ್ ಏರಿಕೆಯಾಗಿದ್ದು ಹೇಗೆ?
    74 ಎಸೆತಗಳಲ್ಲಿ 50 ರನ್
    75 ಎಸೆತಗಳಲ್ಲಿ 100 ರನ್
    108 ಎಸೆತಗಳಲ್ಲಿ 150 ರನ್
    120 ಎಸೆತಗಳಲ್ಲಿ 187 ರಬ್

  • ಪ್ಲೆ-ಆಫ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಔಟ್?

    ಪ್ಲೆ-ಆಫ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಔಟ್?

    ಮುಂಬೈ: 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಬಹುತೇಕ ಪಂದ್ಯಗಳು ಅರ್ಧದಷ್ಟು ಮುಗಿದಿದೆ. ಆದರೂ, ಚೆನ್ನೈ ಸೂಪರ್‌ಕಿಂಗ್ಸ್(ಸಿಎಸ್‌ಕೆ) 6 ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ದಾಖಲಿಸಿದ್ದು, ಈ ಬಾರಿ ಪ್ಲೆಆಫ್ ತಲುಪುವ ಕನಸು ಬಹುತೇಕ ಅಂತ್ಯವಾಗಿದೆ.

    ಗುಜರಾತ್ ಟೈಟನ್ಸ್, ರಾಜಾಸ್ಥಾನ್ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಕಿಂಗ್ಸ್ ಪಂಜಾಬ್, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಲಾ 6 ಪಂದ್ಯಗಳನ್ನಾಡಿದ್ದರೆ, ಆರ್‌ಸಿಬಿ, ಲಕ್ನೋ ಸೂಪರ್ ಜೈಂಟ್ಸ್, ಕೊಲ್ಕತ್ತಾ ನೈಟ್‌ರೈಡರ್ಸ್ ತಂಡಗಳು ತಲಾ 7 ಪಂದ್ಯಗಳನ್ನಾಡಿವೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ 5 ಪಂದ್ಯಗಳನ್ನಾಡಿದೆ. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್-2 ಡೈಲಾಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ವ್ಯಂಗ್ಯ

    csk won

    ಐಪಿಎಲ್ ಕ್ರಮಾಂಕದಲ್ಲಿ ಟಾಪ್- 4ರಲ್ಲಿ ಗುಜರಾತ್ ಟೈಟನ್ಸ್ 6 ಪಂದ್ಯಗಳಿಗೆ ಹಾಗೂ ಆರ್‌ಸಿಬಿ ತಂಡವು 7 ಪಂದ್ಯಗಳಿಗೆ ತಲಾ ಪಂದ್ಯಗಳಲ್ಲಿ ಜಯ ಸಾಧಿಸಿದ್ದು, 10 ಅಂಕಗಳನ್ನು ಗಳಿದ್ದರೆ, ರಾಜಾಸ್ಥಾನ್, ಲಕ್ನೋ ಮತ್ತು ಹೈದರಾಬಾದ್ ತಂಡವು ತಲಾ 8 ಅಂಕಗಳನ್ನು ಪಡೆದಿವೆ. ನಂತರದ ಸ್ಥಾನಲ್ಲಿರುವ ಕೆಕೆಆರ್ ಮತ್ತು ಪಂಜಾಬ್ 6 ಅಂಕ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 4 ಅಂಕಗಳನ್ನು ಪಡೆದಿದೆ. ಇನ್ನೂ ಸತತ ಸೋಲಿನ ರುಚಿ ಕಂಡಿರುವ ಮುಂಬೈ ಒಂದೂ ಅಂಕವನ್ನು ಗಳಿಸದೇ ಕೊನೆಯಲ್ಲಿದೆ. ಒಂದೇ ಒಂದು ಪಂದ್ಯ ಗೆದ್ದಿರುವ ಚೆನ್ನೈ 9ನೇ ಸ್ಥಾನದಲ್ಲಿದೆ. ಹಾಗಾಗಿ, ಸಿಎಸ್‌ಕೆ ತಂಡ ಈ ಬಾರಿ ಪ್ಲೇ-ಆಫ್ ಸುತ್ತಿಗೆ ಬರುವುದು ಕಷ್ಟ ಎನ್ನಲಾಗಿದೆ. ಇನ್ನು ಒಂದು ಪಂದ್ಯದಲ್ಲಿ ಸೋತರೂ ಶೇ.95ರಷ್ಟು ಪ್ಲೇ-ಆಫ್ ಸುತ್ತಿಗೆ ಪ್ರವೇಶ ಪಡೆಯುವುದಿಲ್ಲ ಎಂದು ಐಪಿಎಲ್ ಮಂಡಳಿ ಹೇಳಿದೆ. ಇದನ್ನೂ ಓದಿ: ಐಪಿಎಲ್ 2022: ದೆಹಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರ ಮಿಚೆಲ್ ಮಾರ್ಷ್‍ಗೆ ಕೋವಿಡ್ ದೃಢ

    IPL 2022 RR VS LSG (3)

    ಐಪಿಎಲ್ ಪ್ಲೆಆಫ್ ಸುತ್ತಿಗೆ ತಲುಪಲು ಕನಿಷ್ಠ 7 ಪಂದ್ಯಗಳನ್ನು ಗೆದ್ದಿರಬೇಕು. ಮೊದಲ 2 ಸ್ಥಾನದಲ್ಲಿರುವ ತಂಡ ಹೆಚ್ಚು ಗೆಲುವು ಸಾಧಿಸಿದ್ರೆ, 3 ಅಥವಾ 4ನೇ ಸ್ಥಾನದಲ್ಲಿರುವ ತಂಡಗಳು 8 ಪಂದ್ಯಗಳನ್ನು ಗೆದ್ದು ಪ್ಲೆಆಫ್ ಸೇರುತ್ತವೆ. ಕೆಲವೊಮ್ಮೆ ರನ್‌ರೇಟ್ ಹೆಚ್ಚಾಗಿದ್ದಾಗ 7 ಪಂದ್ಯಗಳನ್ನು ಗೆದ್ದ ತಂಡಗಳು ಪ್ಲೆ-ಆಫ್ ಸೇರಿದ್ದ ಉದಾಹರಣೆಗಳಿವೆ. ಹಾಗಾಗಿ ಸಿಎಸ್‌ಕೆ ತಂಡವು ಉಳಿದ 8 ಪಂದ್ಯಗಳಲ್ಲಿ ಕನಿಷ್ಠ 6 ಅಥವಾ 7 ಪಂದ್ಯಗಳನ್ನಾದರೂ ಗೆದ್ದರೆ ಪ್ಲೆ-ಆಫ್ ಕನಸು ಕೊಂಚವಾದರೂ ಜೀವಂತವಾಗಿರಿಸಿಕೊಳ್ಳಬಬಹುದು ಎನ್ನಲಾಗುತ್ತಿದೆ.  ಇದನ್ನೂ ಓದಿ: 2023ರಲ್ಲಿ ಆರಂಭಗೊಳ್ಳಲಿದೆ 6 ತಂಡಗಳ ನಡುವಿನ ಮಹಿಳಾ ಐಪಿಎಲ್

    IPL 2022 SRH (1)

    ಕಳಪೆ ಬೌಲಿಂಗ್: ಸಿಎಸ್‌ಕೆ ತಂಡ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಲೇ ಇದ್ದರೂ, ಬೌಲಿಂಗ್ ವಿಭಾಗ ಕೆಟ್ಟ ಪ್ರದರ್ಶನ ನೀಡುತ್ತಿದೆ. ತಂಡ 200 ಸಮೀಪ ರನ್‌ಗಳಿಸಿದರೂ ಬೌಲಿಂಗ್ ವೈಫಲ್ಯದಿಂದ ಗೆಲುವನ್ನು ಕೈಚೆಲ್ಲಬೇಕಾಗುತ್ತಿದೆ. ಹಾಗಾಗಿ, ಆಟಗಾರರು ಎದುರಾಳಿಯ ಸಂಪೂರ್ಣ ವಿಕೆಟ್ ಪಡೆದರೆ ಮಾತ್ರ ಸಿಎಸ್‌ಕೆ ತಂಡ ಮುಂಬರುವ ಪಂದ್ಯಗಳನ್ನು ಗೆಲ್ಲಲು ಸಾಧ್ಯ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಿಎಸ್‌ಕೆ ಅಭಿಮಾನಿಗಳು ಪ್ಲೆ ಆಫ್ ತಲುಪುತ್ತದೆ ಎನ್ನುವ ಭರವಸೆಯನ್ನೇ ಕಳೆದುಕೊಂಡಿದ್ದು, ಇದಕ್ಕಾಗಿ ಚೆನ್ನೈ ಹೊಸ ಆಲೋಚನಾ ಕ್ರಮದಲ್ಲಿ ಮುಂದಿನ ಪಂದ್ಯಗಳನ್ನು ಎದುರಿಸಲು ಸಜ್ಜಾಗುತ್ತಿದೆ.

  • ಬಲಿಷ್ಠ ತಂಡಗಳ ಹಣಾ-ಹಣಿ ಇಂದು – ಐಪಿಎಲ್ ಪ್ರಿಯರಿಗೆ ಡಬಲ್ ಧಮಾಕ

    ಬಲಿಷ್ಠ ತಂಡಗಳ ಹಣಾ-ಹಣಿ ಇಂದು – ಐಪಿಎಲ್ ಪ್ರಿಯರಿಗೆ ಡಬಲ್ ಧಮಾಕ

    ಮುಂಬೈ: ತಲಾ 3 ಪಂದ್ಯಗಳನ್ನು ಗೆದ್ದು ವಿಶ್ವಾಸದಲ್ಲಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕತ್ವದ ಕಿಂಗ್ಸ್ ಪಂಜಾಬ್ ಮತ್ತು ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇಂದು ಸೆಣಸಲಿವೆ.

    ಸಂಜೆ 7.30ಕ್ಕೆ ನಡೆಯುವ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳು ಹಣಾಹಣಿ ನಡೆಸಲಿವೆ. ಇದನ್ನೂ ಓದಿ: ಡಿಕೆ ಸ್ಫೋಟಕ ಫಿಫ್ಟಿ – ಕೊಹ್ಲಿ ಸ್ಟನ್ನಿಂಗ್ ಕ್ಯಾಚ್‌ – ಡೆಲ್ಲಿ ವಿರುದ್ಧ ಆರ್​ಸಿಬಿಗೆ 16 ರನ್‍ಗಳ ಜಯ

    IPL 2022 SRH (1)

    ಡಿ.ವೈ.ಪಾಟೀಲ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂಜಾಬ್ ಮತ್ತು ಎಸ್‌ಆರ್‌ಎಚ್ ನಡುವಿನ ಪಂದ್ಯವು ರೋಚಕ ಹಣಾಹಣಿಗೆ ಸಾಕ್ಷಿಯಾಗಲಿವೆ. ಎರಡೂ ತಂಡಗಳೂ ಈ ಟೂರ್ನಿಯಲ್ಲಿ ಸಿಹಿ, ಕಹಿಯನ್ನು ಸಮನಾಗಿ ಅನುಭವಿಸಿದ್ದು, 5ಕ್ಕೆ ತಲಾ 3 ಪಂದ್ಯಗಳಲ್ಲಿ ಜಯ ಸಾಧಿಸಿವೆ. ಈವರೆಗೆ 17 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 5 ಪಂದ್ಯಗಳಲ್ಲಿ ಪಂಜಾಬ್ ಹಾಗೂ 12 ಪಂದ್ಯಗಳಲ್ಲಿ ಹೈದರಾಬಾದ್ ಗೆಲುವು ಸಾಧಿಸಿದೆ.

    ಮೊದಲೆರಡು ಪಂದ್ಯಗಳಲ್ಲಿ ಸೋತ ನಂತರ ಹೈದ್ರಾಬಾದ್ ತಂಡವು ಸತತ 3 ಪಂದ್ಯಗಳಲ್ಲಿ ಜಯ ಸಾಧಿಸಿತು. ಬ್ಯಾಟಿಂಗ್ ಲಯಕ್ಕೆ ಮರಳಿರುವ ಜೇಸನ್ ರಾಯ್ ಮತ್ತು ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸುತ್ತಿದ್ದರೆ, ಜೇಸನ್ ಹೋಲ್ಡರ್, ಭುವನೇಶ್ವರ್ ಕುಮಾರ್, ರಶೀದ್ ಖಾನ್ ಬೌಲಿಂಗ್‌ನಲ್ಲಿ ತಮ್ಮ ಪ್ರಾಬಲ್ಯ ಮೆರೆಯುತ್ತಾ ಗೆಲುವಿನ ಹಾದಿಗೆ ತರುತ್ತಿದ್ದಾರೆ.

    IPL 2022 CSK (1)

    ಪಂಜಾಬ್ ತಂಡವು ಆರ್‌ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಸೋಲಿಸಿದೆ. ಅಲ್ಲದೆ ತಾನು ಸೋತ ಎರಡು ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಮಯಾಂಕ್ ಅಗರ್ವಾಲ್, ಶಿಖರ್ ಧವನ್, ಹೊಸಪ್ರತಿಭೆ ಜಿತೇಶ್ ಶರ್ಮಾ ಉತ್ತಮ ಲಯದಲ್ಲಿದ್ದಾರೆ. ಇದನ್ನೂ ಓದಿ: 7 ವಿಕೆಟ್‌ಗಳಿಂದ ಗೆದ್ದ ಟೀಂ ಇಂಡಿಯಾಗೆ ಶೇ.20ರಷ್ಟು ದಂಡ

    ಆಲ್‌ರೌಂಡರ್‌ಗಳ ಸವಾಲ್
    ಮೊದಲ ಬಾರಿಗೆ ಐಪಿಎಲ್ ನಾಯಕತ್ವದ ಹೊಣೆ ಹೊತ್ತಿರುವ ಭಾರತ ಕ್ರಿಕೆಟ್ ತಂಡದ ಇಬ್ಬರು ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡಗಳು ಇಂದು ಮುಖಾಮುಖಿಯಾಗವೆ. ಗುಜರಾತ್ ಹೊಸ ತಂಡದ ಸೇರ್ಪಡೆಯಿಂದ ಇದೇ ಮೊದಲಬಾರಿಗೆ ತಂಡಗಳು ಮುಖಾಮುಖಿಯಾಗುತ್ತಿದ್ದು, ಪಂದ್ಯವು ಸಂಜೆ 7.30ಕ್ಕೆ ಪುಣೆಯಲ್ಲಿರುವ ಮಹಾರಾಷ್ಟç ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದನ್ನೂ ಓದಿ: ಅಯ್ಯರ್‌ಗೆ 12 ಲಕ್ಷ ದಂಡ – ಐಪಿಎಲ್‌ನಲ್ಲಿ ದಂಡ ಹಾಕೋದು ಯಾಕೆ?

    IPL 2022 SRH (1)

    ಬಲಿಷ್ಠ ತಂಡಗಳ ಪೈಕಿ ಈಗಾಗಲೇ ವೋಟಿಂಗ್‌ಪೋಲ್ ನಡೆಸಲಾಗುತ್ತಿದ್ದು, ಪಂಜಾಬ್ ಗೆಲುವಿಗೆ 19,764 ಮಂದಿ, ಎಸ್‌ಆರ್‌ಎಚ್‌ಗೆ 20,554 ಮಂದಿ ಬೆಂಬಲಿಸಿದ್ದಾರೆ. ಅಂತೆಯೇ ಗುಜರಾತ್ ಟೈಟನ್ಸ್‌ಗೆ 9,682 ಮಂದಿ ಪ್ರೋತ್ಸಾಹಿಸಿದ್ದು, ಚೆನ್ನೈ 10,618 ಜನರ ಬೆಂಬಲ ಗಳಿಸಿದೆ. ಚೆನ್ನೈ ಈಗಾಗಲೇ ಐಪಿಎಲ್ ಕ್ರಮಾಂಕದಲ್ಲಿ ಕೆಳಕ್ಕೆ ಕುಸಿದಿದ್ದು, ಪ್ಲೆ-ಆಫ್ ತಲುಪಲು ಮುಂದಿನ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.