Tag: ಕಾಶ್ಮೀರಿ ಮಹಿಳೆ

  • ಕಾಶ್ಮಿರಿ ಪಂಡಿತೆಯನ್ನು ಹತೈಗೈದ ಉಗ್ರರು

    ಕಾಶ್ಮಿರಿ ಪಂಡಿತೆಯನ್ನು ಹತೈಗೈದ ಉಗ್ರರು

    ಶ್ರೀನಗರ: ಕಾಶ್ಮೀರಿ ಪಂಡಿತೆಯನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲಪುರಾ ಪ್ರದೇಶದಲ್ಲಿ ನಡೆದಿದೆ.

    ಸಾಂಬಾ ಜಿಲ್ಲೆಯ ರಾಜ್ ಕುಮಾರ್ ಅವರ ಪತ್ನಿ ರಜನಿ ಹತ್ಯೆಯಾದ ಕಾಶ್ಮೀರಿ ಪಂಡಿತೆ. ರಜನಿ ಶಾಲಾ ಶಿಕ್ಷಕಿ ಹಾಗೂ ಜಮ್ಮು ವಿಭಾಗದ ಸಾಂಬಾ ನಿವಾಸಿಯಾಗಿದ್ದರು. ಕುಲ್ಗಾಮ್‌ನ ಗೋಪಾಲ್‌ಪೋರಾ ಹೈಸ್ಕೂಲ್‌ನಲ್ಲಿ ರಜನಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಆಕೆ ತೀವ್ರವಾಗಿ ಗಾಯಗೊಂಡಿದ್ದರು.

    crime

    ತಕ್ಷಣವೇ ಆಕೆಯನ್ನು ಕುಲ್ಗಾಮ್‌ನ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟರು. ಘಟನೆ ನಡೆದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭದ್ರತಾ ಪಡೆಗಳು ದೌಡಾಯಿಸಿವೆ. ಇದನ್ನೂ ಓದಿ: ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್‍ಸಿಯಲ್ಲಿ ಟಾಪರ್

    ಆ ದಾಳಿಯು ಇತ್ತೀಚಿಗೆ ಕಣಿವೆಯಲ್ಲಿ ಕಾಶ್ಮೀರಿ ನಾಗರಿಕ ಹತ್ಯೆಗಳ ಸರಣಿಯಲ್ಲಿ ಒಂದಾಗಿದೆ. ಮೇ 12 ರಂದು ಬುದ್ಗಾಮ್ ಜಿಲ್ಲೆಯಲ್ಲಿ ಕಂದಾಯ ಇಲಾಖೆ ನೌಕರ ರಾಹುಲ್ ಭಟ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು. ಕಳೆದ ವಾರ, ಬುದ್ಗಾಮ್‍ನ ಚದೂರ ಪ್ರದೇಶದಲ್ಲಿ ಕಲಾವಿದೆ ಅಮ್ರೀನ್ ಭಟ್ ಸಾವನ್ನಪ್ಪಿದ್ದರು.

    Omar Abdullah

    ಘಟನೆಯ ಬಗ್ಗೆ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಸಂತಾಪ ಸೂಚಿಸಿ, ತುಂಬಾ ದುಃಖವಾಗಿದೆ. ಇದು ನಾಗರಿಕರನ್ನು ಗುರಿಯಾಗಿಸಿಕೊಂಡು ಮಾಡಿರುವ ದಾಳಿಯಾಗಿದೆ. ಸರ್ಕಾರದ ಭರವಸೆಗಳಂತೆ ಖಂಡನೆ ಮತ್ತು ಸಂತಾಪಗಳ ಮಾತುಗಳು ಸುಳ್ಳಾಗಿದೆ ಎಂದರು. ಇದನ್ನೂ ಓದಿ: ನಾಗರಿಕರನ್ನು ಕೊಂದಿದ್ದ ಇಬ್ಬರು ಉಗ್ರರ ಹತ್ಯೆ