Tag: ಕಾಶ್ಮೀರಿ ಪಂಡಿತ

  • ಜಮ್ಮುವಿನ ಮನೆಯಲ್ಲಿ ಒಂದೇ ಕುಟುಂಬದ 6 ಮಂದಿ ಶವವಾಗಿ ಪತ್ತೆ!

    ಜಮ್ಮುವಿನ ಮನೆಯಲ್ಲಿ ಒಂದೇ ಕುಟುಂಬದ 6 ಮಂದಿ ಶವವಾಗಿ ಪತ್ತೆ!

    ಶ್ರೀನಗರ: ಜಮ್ಮುವಿನ ಸಿದ್ರಾ ಪ್ರದೇಶದ ಮನೆಯಲ್ಲಿ ಒಂದೇ ಕುಟುಂಬದ ಆರು ಮಂದಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ಸಂಬಂಧ ಹೆಚ್ಚಿನ ತನಿಖೆ ಕೈಗೊಂಡಿದ್ದು, ಮೃತದೇಹಗಳನ್ನು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಮತ್ತೆ ಪಂಡಿತರು ಟಾರ್ಗೆಟ್ – ಓರ್ವನ ಹತ್ಯೆ, ಮತ್ತೋರ್ವ ಗಂಭೀರ

    ನಿನ್ನೆಯಷ್ಟೇ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚೋಟಿಪೋರಾ ಪ್ರದೇಶದ ಸೇಬಿನ ತೋಟದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಕಾಶ್ಮೀರಿ ಪಂಡಿತನೊಬ್ಬನನ್ನು ಗುಂಡಿಕ್ಕಿ ಕೊಂದರು. ಈ ವೇಳೆ ಆತನ ಸಹೋದರ ಗಾಯಗೊಂಡಿದ್ದರು.

    ಮೃತ ವ್ಯಕ್ತಿ ಸುನೀಲ್ ಕುಮಾರ್ ಭಟ್ ಎಂದು ಗುರುತಿಸಲಾಗಿದೆ. ಆತನ ಸಹೋದರ ಪಿಂಟು ಅವರಿಗೆ ಗಾಯಗಳಾಗಿವೆ. ಘಟನೆ ಬಳಿಕ ಸ್ಥಳದಲ್ಲಿ ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತನ ಹತ್ಯೆ ಬಳಿಕ ಮತ್ತಷ್ಟು ದಾಳಿಗಳ ಎಚ್ಚರಿಕೆ

    ಈ ಘಟನೆಯಾದ ಮಾರನೇ ದಿನವೇ ಒಂದೇ ಕುಟುಂಬದ ಆರು ಮಂದಿ ಶವಗಳು ಪತ್ತೆಯಾಗಿವೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಶ್ಮೀರಿ ಪಂಡಿತನ ಹತ್ಯೆ ಬಳಿಕ ಮತ್ತಷ್ಟು ದಾಳಿಗಳ ಎಚ್ಚರಿಕೆ

    ಕಾಶ್ಮೀರಿ ಪಂಡಿತನ ಹತ್ಯೆ ಬಳಿಕ ಮತ್ತಷ್ಟು ದಾಳಿಗಳ ಎಚ್ಚರಿಕೆ

    ಶ್ರೀನಗರ: ಇಂದು ನಡೆದ ಕಾಶ್ಮೀರಿ ಪಂಡಿತನ ಹತ್ಯೆ ಬಳಿಕ ಮತ್ತಷ್ಟು ದಾಳಿಗಳು ನಡೆಯುವ ಸಾಧ್ಯತೆಯಿದೆ ಎಂದು ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆಯನ್ನು ನೀಡಿದೆ.

    ಸ್ವಾತಂತ್ರ್ಯೋತ್ಸವದಂದು ಕಾಶ್ಮೀರದಲ್ಲಿ ರಾಷ್ಟ್ರ ಧ್ವಜಾರೋಹಣ ಹಾಗೂ ವಿವಿಧ ಸ್ಥಳಗಳಲ್ಲಿ ತಿರಂಗಾ ರ‍್ಯಾಲಿಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಭಯೋತ್ಪಾದಕ ಸಂಘಟನೆಗಳು ಮತ್ತೆ ದಾಳಿ ನಡೆಸುವ ಸಾಧ್ಯತೆಯಿದೆ. ಅದರಲ್ಲೂ ವಿಶೇಷವಾಗಿ ಕಾಶ್ಮೀರೇತರರ ಮೇಲೆ ದಾಳಿ ಆಗಬಹುದು ಎಂದು ಕೇಂದ್ರ ಸಚಿವಾಲಯದ ಮೂಲಗಳು ತಿಳಿಸಿವೆ.

    ಇಂದು ಶೋಪಿಯಾನ್ ಜಿಲ್ಲೆಯ ಸೇಬಿನ ತೋಟದಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಕಾಶ್ಮೀರಿ ಪಂಡಿತನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆತನ ಸಹೋದರ ದಾಳಿ ವೇಳೆ ಗಾಯಗೊಂಡಿದ್ದರು. ಈ ದಾಳಿಯನ್ನು ಅಲ್ ಬದ್ರ್‍ನ ಶಾಖೆಯಾದ ಕಾಶ್ಮೀರ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ್ದಾರೆ ಎನ್ನಲಾಗುತ್ತಿದ್ದು, ತಿರಂಗಾ ರ್ಯಾಲಿಗಳಲ್ಲಿ ಭಾಗವಹಿಸಲು ಜನರನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಈ ಪಂಡಿತ ಸಹೋದರರ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

    1990ರ ದಶಕದಲ್ಲಿ ಕಾಶ್ಮೀರದಿಂದ ಎಂದಿಗೂ ವಲಸೆ ಹೋಗದ ಕುಟುಂಬಗಳಲ್ಲಿ ಹತ್ಯೆಯಾದ ಸುನಿಲ್ ಕುಮಾರ್ ಅವರ ಕುಟುಂಬವೂ ಒಂದಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಮೇಲೆ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಕಾಶ್ಮೀರವನ್ನು ಬಿಟ್ಟು ಬನ್ನಿ: ಕಾಶ್ಮೀರಿ ಪಂಡಿತರ ಸಂಘರ್ಷ ಸಮಿತಿ ಒತ್ತಾಯ

    Kashmiri_Pandits

    ಘಟನೆಗೆ ಸಂಬಂಧಿಸಿ ಗುಪ್ತಚರ ಇಲಾಖೆ ಇನ್ನಷ್ಟು ಮಾಹಿತಿ ನೀಡಿದ್ದು, ಗಡಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಹಾಗೂ ಮದ್ದು ಗುಂಡುಗಳು ಕಳ್ಳ ಸಾಗಣೆಯಾಗಿವೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಹತ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಈ ರೀತಿಯ ಘಟನೆಗಳನ್ನು ತರಬೇತಿ ಇಲ್ಲದವರೂ ಸೇರಿದಂತೆ ಯಾರು ಬೇಕಾದರೂ ನಡೆಸಬಹುದಾಗಿದೆ. ಈ ಉಗ್ರರು ಜನಪ್ರತಿನಿಧಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಮತ್ತೆ ಪಂಡಿತರು ಟಾರ್ಗೆಟ್ – ಓರ್ವನ ಹತ್ಯೆ, ಮತ್ತೋರ್ವ ಗಂಭೀರ

    Live Tv
    [brid partner=56869869 player=32851 video=960834 autoplay=true]

  • ಕಾಶ್ಮೀರವನ್ನು ಬಿಟ್ಟು ಬನ್ನಿ: ಕಾಶ್ಮೀರಿ ಪಂಡಿತರ ಸಂಘರ್ಷ ಸಮಿತಿ ಒತ್ತಾಯ

    ಕಾಶ್ಮೀರವನ್ನು ಬಿಟ್ಟು ಬನ್ನಿ: ಕಾಶ್ಮೀರಿ ಪಂಡಿತರ ಸಂಘರ್ಷ ಸಮಿತಿ ಒತ್ತಾಯ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತನ ಹತ್ಯೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಾಶ್ಮೀರಿ ಪಂಡಿತರ ಸಂಘರ್ಷ ಸಮಿತಿ (ಕೆಪಿಎಸ್‌ಎಸ್‌) ಪ್ರತಿಕ್ರಿಯಿಸಿದ್ದು, ಪಂಡಿತರೇ ಕಾಶ್ಮೀರವನ್ನು ತೊರೆಯಿರಿ ಎಂದು ವಿನಂತಿಸಿಕೊಂಡಿದೆ.

    ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಮತ್ತೊಂದು ದಾಳಿ ನಡೆಸಿರುವ ಉಗ್ರರು ಕಾಶ್ಮೀರದಲ್ಲಿರುವ ಎಲ್ಲಾ ಕಾಶ್ಮೀರಿ ಪಂಡಿತರನ್ನು ಕೊಲ್ಲಲಿದ್ದಾರೆ ಎಂದು ಕೆಪಿಎಸ್‌ಎಸ್‌ ಅಧ್ಯಕ್ಷ ಸಂಜಯ್‌ ಟಿಕ್ಕೊ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಮತ್ತೆ ಪಂಡಿತರು ಟಾರ್ಗೆಟ್ – ಓರ್ವನ ಹತ್ಯೆ, ಮತ್ತೋರ್ವ ಗಂಭೀರ

    ಪ್ರವಾಸಿಗರು ಸುರಕ್ಷಿತವಾಗಿರುವ ಸ್ಥಳ ಕಾಶ್ಮೀರ. ಅಮರನಾಥ ಯಾತ್ರೆಯ ಸಮಯದಲ್ಲಿ ಯಾವುದೇ ದಾಳಿ ನಡೆದಿಲ್ಲ. ಆದರೆ ಮುಸ್ಲಿಮೇತರರು, ವಿಶೇಷವಾಗಿ ಕಾಶ್ಮೀರಿ ಪಂಡಿತರು ದುರ್ಬಲರಾಗಿದ್ದಾರೆ ಎಂದು ಹೇಳಿದ್ದಾರೆ.

    ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರನ್ನು ರಕ್ಷಿಸುವಲ್ಲಿ ನ್ಯಾಯಾಂಗ ಮತ್ತು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾಶ್ಮೀರದಲ್ಲಿ ಯಾವುದೇ ಕಾಶ್ಮೀರಿ ಪಂಡಿತರು ಸುರಕ್ಷಿತವಾಗಿಲ್ಲ. ಕಾಶ್ಮೀರಿ ಪಂಡಿತರಿಗೆ ಉಳಿದಿರುವ ಏಕೈಕ ಆಯ್ಕೆಯೆಂದರೆ ಕಾಶ್ಮೀರವನ್ನು ತೊರೆಯುವುದು. ಇಲ್ಲವೇ ಸ್ಥಳೀಯರ ಬೆಂಬಲ ಹೊಂದಿರುವ ಧಾರ್ಮಿಕ ಮತಾಂಧ ಮನಸ್ಸುಗಳಿಂದ ಕೊಲ್ಲಲ್ಪಡುವುದಾಗಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರಿಗೆ ಭದ್ರತೆ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ: ಓವೈಸಿ

    ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರ ಗುಂಡು ಮತ್ತೆ ಸದ್ದು ಮಾಡಿದ್ದು, ದಾಳಿಯಲ್ಲಿ ಓರ್ವ ಕಾಶ್ಮೀರಿ ಪಂಡಿತ ಸಾವನ್ನಪ್ಪಿದ್ದು, ಮತ್ತೋರ್ವನ ಪರಿಸ್ಥಿತಿ ಚಿಂತಾಜನಕವಾಗಿದೆ. ಶೋಪಿಯಾನ್‍ನ ಚೋಟಿಪೋರಾ ಪ್ರದೇಶದಲ್ಲಿದ್ದ ಆಪಲ್ ಆರ್ಕಿಡ್‍ನಲ್ಲಿ ಭಯೋತ್ಪಾದಕರು ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿ ಈ ಹತ್ಯೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಶ್ಮೀರಿ ಪಂಡಿತರಿಗೆ ಭದ್ರತೆ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ: ಓವೈಸಿ

    ಕಾಶ್ಮೀರಿ ಪಂಡಿತರಿಗೆ ಭದ್ರತೆ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ: ಓವೈಸಿ

    ನವದೆಹಲಿ: ಜಮ್ಮುವಿನ ಶೋಪಿಯಾನ್‌ ಜಿಲ್ಲೆಯಲ್ಲಿ ಭಯೋತ್ಪಾದಕರ ಗುಂಡಿಗೆ ಕಾಶ್ಮೀರಿ ಪಂಡಿತನ ಹತ್ಯೆಗೆ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ ಬೇಸರ ವ್ಯಕ್ತಪಡಿಸಿದ್ದಾರೆ. ಕಾಶ್ಮೀರಿ ಪಂಡಿತರನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.

    ಕೇಂದ್ರ ಮತ್ತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಓವೈಸಿ, ಕಾಶ್ಮೀರದಲ್ಲಿ ನಡೆದ ಘಟನೆ ನರೇಂದ್ರ ಮೋದಿ ಸರ್ಕಾರದ ವೈಫಲ್ಯಕ್ಕೆ ಮತ್ತೊಂದು ಉದಾಹರಣೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಮತ್ತೆ ಪಂಡಿತರು ಟಾರ್ಗೆಟ್ – ಓರ್ವನ ಹತ್ಯೆ, ಮತ್ತೋರ್ವ ಗಂಭೀರ

    ಕಾಶ್ಮೀರಿ ಪಂಡಿತರಿಗೆ ಭದ್ರತೆ ಒದಗಿಸಲು ಕೇಂದ್ರ ವಿಫಲವಾಗಿದೆ. ಹೀಗಾಗಿ ಅವರು ಹೆಚ್ಚಿನ ಹಿಂಸಾಚಾರಕ್ಕೆ ಹೆದರಿ ಕಣಿವೆಯನ್ನು ತೊರೆಯಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ಬಿಜೆಪಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ನೇಮಿಸಿತು. ಈಗ ಅಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದು ಮಾಡಿದ್ದು ಕೂಡ ಸಹಾಯ ಮಾಡಲಿಲ್ಲ. ಇಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ಮೊದಲ ದಾಳಿ ಇದಲ್ಲ. ಅವರಿಗೆ ಭದ್ರತೆ ನೀಡುವಲ್ಲಿ ಕೇಂದ್ರ ವಿಫಲವಾಗಿದ್ದು, ಕಾಶ್ಮೀರಿ ಪಂಡಿತರು ಈಗ ಕಾಶ್ಮೀರವನ್ನು ತೊರೆಯಲು ಬಯಸುತ್ತಿದ್ದಾರೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಜಿಯೋ ಬಿಡುಗಡೆ ಮಾಡಲಿದೆ ಕಡಿಮೆ ಬೆಲೆಯ 5G ಫೋನ್‌ – ಬೆಲೆ ಎಷ್ಟು? ಗುಣ ವೈಶಿಷ್ಟ್ಯಗಳು ಏನು?

    Live Tv
    [brid partner=56869869 player=32851 video=960834 autoplay=true]

  • ಕಾಶ್ಮೀರದಲ್ಲಿ ಮತ್ತೆ ಪಂಡಿತರು ಟಾರ್ಗೆಟ್ – ಓರ್ವನ ಹತ್ಯೆ, ಮತ್ತೋರ್ವ ಗಂಭೀರ

    ಕಾಶ್ಮೀರದಲ್ಲಿ ಮತ್ತೆ ಪಂಡಿತರು ಟಾರ್ಗೆಟ್ – ಓರ್ವನ ಹತ್ಯೆ, ಮತ್ತೋರ್ವ ಗಂಭೀರ

    ಶ್ರೀನಗರ: ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರ ಗುಂಡು ಮತ್ತೆ ಸದ್ದು ಮಾಡಿದ್ದು, ದಾಳಿಯಲ್ಲಿ ಓರ್ವ ಕಾಶ್ಮೀರಿ ಪಂಡಿತ ಸಾವನ್ನಪ್ಪಿದ್ದು, ಮತ್ತೋರ್ವನ ಪರಿಸ್ಥಿತಿ ಚಿಂತಾಜನಕವಾಗಿದೆ. ಶೋಪಿಯಾನ್‍ನ ಚೋಟಿಪೋರಾ ಪ್ರದೇಶದಲ್ಲಿದ್ದ ಆಪಲ್ ಆರ್ಕಿಡ್‍ನಲ್ಲಿ ಭಯೋತ್ಪಾದಕರು ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿ ಈ ಹತ್ಯೆ ಮಾಡಿದ್ದಾರೆ.

    45 ವರ್ಷದ ಕಾಶ್ಮೀರ ಪಂಡಿತ ಸುನೀಲ್ ಭಟ್ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದು, ಭಟ್ ಸಹೋದರನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಪ್ರದೇಶವನ್ನು ಜಮ್ಮು-ಕಾಶ್ಮೀರ ಪೊಲೀಸರು ಸುತ್ತುವರಿದಿದ್ದು ಭಯೋತ್ಪಾದಕರ ಹುಡುಕಾಟ ಆರಂಭವಾಗಿದೆ.

    ಕಳೆದ ಕೆಲವು ತಿಂಗಳುಗಳಿಂದ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರು ಮತ್ತು ಇತರ ನಾಗರಿಕರನ್ನು ಗುರಿಯಾಗಿಸಿಕೊಂಡ ಉದ್ದೇಶಿತ ಹತ್ಯೆಗಳ ನಡೆಯುತ್ತಿವೆ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆಯೇ ಹೊಸ ದಾಳಿ ನಡೆದಿದ್ದು, ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನದಿ ಕಣಿವೆಗೆ ಉರುಳಿದ ಬಸ್- 6 ಮಂದಿ ಯೋಧರು ಹುತಾತ್ಮ

    Kashmiri_Pandits

    ಮೇ 31 ರಂದು ಜಮ್ಮುವಿನ ಸಾಂಬಾ ಜಿಲ್ಲೆಗೆ ಸೇರಿದ ಶಾಲಾ ಶಿಕ್ಷಕಿ ರಜನಿ ಬಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಕಾಶ್ಮೀರಿ ಪಂಡಿತರಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು. ಅವರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸದಿದ್ದರೆ ಕಣಿವೆಯಿಂದ ಸಾಮೂಹಿಕ ವಲಸೆಯನ್ನು ಕೈಗೊಳ್ಳುವುದಾಗಿ ಬೆದರಿಕೆ ಹಾಕಿದರು.

    ಶಾಲೆಯಲ್ಲಿ ನಡೆದ ದಾಳಿಗೆ ಕೇವಲ ಎರಡು ವಾರಗಳ ಮೊದಲು ಅಂದರೆ ಮೇ 12 ರಂದು ಕಾಶ್ಮೀರದ ಚದೂರ ಪಟ್ಟಣದ ಸರ್ಕಾರಿ ಕಚೇರಿಗೆ ಬಂದೂಕುಧಾರಿಯೊಬ್ಬ ನುಗ್ಗಿ ಕಾಶ್ಮೀರಿ ಹಿಂದೂ ಉದ್ಯೋಗಿ ರಾಹುಲ್ ಭಟ್ ಮೇಲೆ ಗುಂಡು ಹಾರಿಸಿದನು. ರಾಹುಲ್ ಭಟ್‍ನನ್ನು ಕೊಂದ ಲತೀಫ್ ರಾಥರ್ ಸೇರಿದಂತೆ ಮೂವರು ಆರೋಪಿಗಳು ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ್ದರು. ಈ ತಿಂಗಳ ಆರಂಭದಲ್ಲಿ ಬುದ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‍ಕೌಂಟರ್‍ನಲ್ಲಿ ಇವರನ್ನು ಹೊಡೆದುರುಳಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಜಮ್ಮು-ಕಾಶ್ಮಿರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮುಂದುವರಿಯುತ್ತಿದೆ: ಒಮರ್ ಅಬ್ದುಲ್ಲಾ

    ಜಮ್ಮು-ಕಾಶ್ಮಿರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮುಂದುವರಿಯುತ್ತಿದೆ: ಒಮರ್ ಅಬ್ದುಲ್ಲಾ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‍ನಲ್ಲಿ ಭಯೋತ್ಪಾದಕರಿಂದ ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಹತ್ಯೆ ನಡೆದಿದೆ. ಈ ಹಿನ್ನೆಲೆ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಖಂಡಿಸಿದ್ದಾರೆ. ಈ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.

    Omar Abdullah

    ಟ್ವೀಟ್‍ನಲ್ಲಿ ಒಮರ್ ಅಬ್ದುಲ್ಲಾ ಅವರು, ರಾಹುಲ್ ಭಟ್ ಮೇಲಿನ ಹಂತಕ ಉಗ್ರಗಾಮಿ ದಾಳಿಯನ್ನು ನಾನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇನೆ. ತಹಸಿಲ್ ಕಚೇರಿಯಲ್ಲಿ ಸರ್ಕಾರಿ ನೌಕರನಾಗಿದ್ದ ರಾಹುಲ್ ಅವರ ಮೇಲೆ ದಾಳಿ ನಡೆಸಲಾಯಿತು. ಈ ಹತ್ಯೆಯನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ. ಇದು ಮುಂದುವರಿಯುತ್ತೆ. ಇದರಿಂದ ಜಮ್ಮು-ಕಾಶ್ಮೀರದಲ್ಲಿ ಭಯದ ಭಾವನೆ ಬೆಳೆಯುತ್ತ ಹೋಗುತ್ತೆ. ರಾಹುಲ್ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲಿ ಉಪನ್ಯಾಸಕನ ಬರ್ಬರ ಹತ್ಯೆ 

    ಭಟ್ ಅವರ ಜೀವನವು ಇಂದು ಕ್ರೂರವಾಗಿ ನಶಿಸಿರುವುದು ದುರಂತ. ರಾಹುಲ್ ಭಟ್ ವಿಶ್ರಾಂತಿ ಪಡೆಯಿರಿ ಎಂದು ಬರೆದುಕೊಂಡಿದ್ದಾರೆ.

    ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಸರ್ಕಾರಿ ನೌಕರಾಗಿದ್ದರು. ಚದೂರ ಪ್ರದೇಶದಲ್ಲಿನ ಅವರ ಕಚೇರಿಯಲ್ಲಿಯೇ ಭಯೋತ್ಪಾದಕರು ನುಗ್ಗಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಈ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಫಲಕಾರಿಯಾಗದೆ ಪ್ರಾಣ ಬಿಟ್ಟರು.

    ಪೊಲೀಸರು ಈ ಕುರಿತು ಮಾಹಿತಿ ಕೊಟ್ಟಿದ್ದು, ಭಟ್ ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಶ್ರೀನಗರದ ಎಸ್‍ಎಂಎಚ್‍ಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಪ್ರಾಥಮಿಕ ತನಿಖೆಯಿಂದ ಇಬ್ಬರು ಭಯೋತ್ಪಾದಕರು ಈ ಘೋರ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕೃತ್ಯಕ್ಕೆ ಪಿಸ್ತೂಲ್ ಬಳಸಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ:  ಪಾಕ್‍ನಲ್ಲಿ ಹಿಂದೂ ದೇವಾಲಯ ಧ್ವಂಸ ಮಾಡಿದ 22 ಮಂದಿಗೆ 5 ವರ್ಷ ಜೈಲು ಶಿಕ್ಷೆ 

    ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ರಾಹುಲ್ ಭಟ್ ಅವರ ಬರ್ಬರ ಹತ್ಯೆಯನ್ನು ಖಂಡಿಸಿದ್ದಾರೆ. ಈ ಹೇಯ ಭಯೋತ್ಪಾದನಾ ದಾಳಿಯ ಹಿಂದಿರುವವರನ್ನು ಶಿಕ್ಷಿಸಲೇ ಬೇಕು. ದುಃಖತಪ್ತ ಕುಟುಂಬದೊಂದಿಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಒಗ್ಗಟ್ಟಿನಿಂದ ನಿಂತಿದೆ ಎಂದು ಭರವಸೆ ಕೊಟ್ಟರು.

  • ಗುಂಡಿನ ದಾಳಿ ನಡೆಸಿ ಕಾಶ್ಮೀರಿ ಪಂಡಿತನನ್ನು ಹತ್ಯೆಗೈದ ಉಗ್ರರು

    ಗುಂಡಿನ ದಾಳಿ ನಡೆಸಿ ಕಾಶ್ಮೀರಿ ಪಂಡಿತನನ್ನು ಹತ್ಯೆಗೈದ ಉಗ್ರರು

    ಶ್ರೀನಗರ: ಕಾಶ್ಮೀರಿ ಪಂಡಿತರೊಬ್ಬರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಕಂದಾಯ ಇಲಾಖೆಯ ಕಚೇರಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

    ಕಾಶ್ಮೀರಿ ಪಂಡಿತ್ ಸಮುದಾಯದ ರಾಹುಲ್ ಭಟ್ ಹತ್ಯೆಗೀಡಾದ ವ್ಯಕ್ತಿ. ಮೃತರು ಕಂದಾಯ ಇಲಾಖೆಯ ನೌಕರರಾಗಿದ್ದರು. ಕೇಂದ್ರ ಕಾಶ್ಮೀರದ ಚದೂರದಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿಯೇ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡಿ ಸಾವನ್ನಪ್ಪಿದ್ದಾರೆ.

    ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿ, ಬುದ್ಗಾಮ್‍ನ ತಹಸೀಲ್ದಾರ್ ಕಚೇರಿ ಚದೂರದಲ್ಲಿ ಅಲ್ಪಸಂಖ್ಯಾತ ಸಮುದಾಯದ ರಾಹುಲ್ ಭಟ್ ಎಂಬ ನೌಕರನ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೇಲ್‌ನಿಂದ ಹೊರಬಂದು ಮದುವೆಯಾಗು ಎಂದ – ರೌಡಿ ಅಂತ ರಿಜೆಕ್ಟ್‌ ಮಾಡಿದ್ದಕ್ಕೆ ಪ್ರೇಯಸಿಯನ್ನೇ ಕೊಂದ

    ಘಟನೆಯ ನಂತರ, ಭದ್ರತಾ ಪಡೆಗಳು ಘಟನೆ ನಡೆದ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಘಟನೆಯ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಅಶ್ವನಿ ಹಂಡಾ, ಕಣಿವೆಯಲ್ಲಿ ಕಾಶ್ಮೀರಿ ಪಂಡಿತರಿಗೆ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ತಾಜ್‌ ಮಹಲ್‌ ಹಿಂದೆ ʼತೇಜೋ ಮಹಾಲಯʼವಾಗಿತ್ತು, ಅಲ್ಲಿ ಹಿಂದೂ ವಿಗ್ರಹಗಳಿವೆ – ತನಿಖೆಗಾಗಿ ಕೋರ್ಟ್‌ಗೆ ಮನವಿ

    ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಉಗ್ರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದರು

  • ಉಗ್ರರ ದಾಳಿ- ಕಾಶ್ಮೀರಿ ಪಂಡಿತನಿಗೆ ಗುಂಡೇಟು

    ಉಗ್ರರ ದಾಳಿ- ಕಾಶ್ಮೀರಿ ಪಂಡಿತನಿಗೆ ಗುಂಡೇಟು

    ಶ್ರೀನಗರ: ಶೋಪಿಯಾನ್‌ ಜಿಲ್ಲೆಯ ಗಡಿ ಭಾಗದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ವ್ಯಾಪಾರಿ ಕಾಶ್ಮೀರಿ ಪಂಡಿತರೊಬ್ಬರಿಗೆ ಗುಂಡೇಟು ಬಿದ್ದಿದೆ.

    ಕಾಶ್ಮೀರಿ ಪಂಡಿತ ಬಾಲ ಕೃಷ್ಣನ್‌ ಗಾಯಗೊಂಡಿರುವ ವ್ಯಕ್ತಿ. ಉಗ್ರರ ದಾಳಿಯಿಂದ ಬಾಲ ಕೃಷ್ಣನ್ ಕೈ ಮತ್ತು ಕಾಲುಗಳಿಗೆ ಗುಂಡುಗಳು ತಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.‌ ಅವರನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀನಗರದಲ್ಲಿ ಉಗ್ರರ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮ

    ಈಚೆಗಷ್ಟೇ ಶ್ರೀನಗರದ ಮೈಸುಮಾದಲ್ಲಿ ಉಗ್ರರು ದಾಳಿ ನಡೆಸಿದ ಪರಿಣಾಮ ಸಿಆರ್‌ಪಿಎಫ್‌ ಯೋಧ ಮೃತಪಟ್ಟಿದ್ದರು. ಘಟನೆಯಲ್ಲಿ ಮತ್ತೊಬ್ಬರು ಗಾಯಗೊಂಡಿದ್ದರು.

    ಪುಲ್ವಾಮಾದಲ್ಲಿ ಇಬ್ಬರು ವಲಸೆ ಕಾರ್ಮಿಕರ ಮೇಲೆ ಗುಂಡು ಹಾರಿಸಿದ ಕೆಲವೇ ಗಂಟೆಗಳಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆಸಲಾಗಿತ್ತು. ಗಾಯಾಳುಗಳಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸ್‌ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇದನ್ನೂ ಓದಿ: ಬಿರ್ಭೂಮ್ ಹಿಂಸಾಚಾರ – ಮೃತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ಕೊಟ್ಟ ಮಮತಾ ಬ್ಯಾನರ್ಜಿ