Tag: ಕಾಶಿ ವಿಶ್ವನಾಥ ದೇವಾಲಯ

  • ಜ್ಞಾನವಾಪಿ ಮಸೀದಿಯಲ್ಲಿ ಸರ್ವೇಗೆ ಕೋರ್ಟ್ ಅನುಮತಿ

    ಜ್ಞಾನವಾಪಿ ಮಸೀದಿಯಲ್ಲಿ ಸರ್ವೇಗೆ ಕೋರ್ಟ್ ಅನುಮತಿ

    ಲಕ್ನೋ: ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ (Gyanvapi Mosque) ಸರ್ವೆ (Survey) ನಡೆಸಲು ವಾರಣಾಸಿ ನ್ಯಾಯಾಲಯ (Varanasi Court) ಶುಕ್ರವಾರ ಅನುಮತಿ ನೀಡಿದೆ.

    ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ವಿವಾದಿತ ಶಿವಲಿಂಗದ (Shivling) ರಚನೆಯನ್ನು ಹೊರತುಪಡಿಸಿ ಸಂಕೀರ್ಣದಲ್ಲಿ ಕಾರ್ಬನ್ ಡೇಟಿಂಗ್ ನಡೆಸಲು ಅನುಮತಿ ನೀಡಲಾಗಿದೆ. ವೈಜ್ಞಾನಿಕ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ನಡೆಸಲಿದೆ. ವಿಚಾರಣೆಗೆ ಮುಂದಿನ ದಿನಾಂಕವಾಗಿರುವ ಆಗಸ್ಟ್ 4 ರೊಳಗೆ ಪ್ರಾಥಮಿಕ ವರದಿ ಸಲ್ಲಿಸುವಂತೆ ನ್ಯಾಯಾಲಯ ಎಎಸ್‌ಐಗೆ ತಿಳಿಸಿದೆ.

    ಹಿಂದೂಗಳ ದೇವಾಲಯ ಇರುವ ಜಾಗದಲ್ಲಿ ಮಸೀದಿ ಕಟ್ಟಲಾಗಿದ್ದು, ಈ ಕುರಿತು ವೈಜ್ಞಾನಿಕ ಸರ್ವೇ ಆಗಬೇಕು ಎಂದು ಹಿಂದೂಗಳ ಪರವಾಗಿ ಎಕೆ ವಿಶ್ವೇಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಇದಕ್ಕೂ ಮುನ್ನ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ವಾದ-ಪ್ರತಿವಾದಗಳನ್ನು ನ್ಯಾಯಾಲಯ ಆಲಿಸಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಜ್ಞಾನವಾಪಿ ಮಸೀದಿಯ ಸಂಪೂರ್ಣ ಸರ್ವೇ ನಡೆಸಬೇಕು ಎಂದು ಹಿಂದೂ ಭಕ್ತರ ಪರ ವಕೀಲರು ಒತ್ತಾಯಿಸಿದ್ದರು. ಇದನ್ನೂ ಓದಿ: ನಾಳೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

    ಸದ್ಯ ಮಸೀದಿಯ ಕಾರ್ಬನ್ ಡೇಟಿಂಗ್‌ಗೆ ವಾರಣಾಸಿ ನ್ಯಾಯಲಯ ಆದೇಶಿಸಿದೆ. ಇದಕ್ಕೂ ಮೊದಲು ವಜೂ ಸ್ಥಳದಲ್ಲಿದ್ದ ಶಿವಲಿಂಗ ಆಕೃತಿಯು ಶಿವಲಿಂಗ ಅಥವಾ ಕಾರಂಜಿಯೇ ಎಂದು ತಿಳಿಯಲು ಕಾರ್ಬನ್ ಡೇಟಿಂಗ್ ಮಾಡಲು ಅಲಹಾಬಾದ್ ಹೈಕೋರ್ಟ್ ಆದೇಶಿಸಿತ್ತು. ಆದರೆ ವಿವಾದಿತ ಶಿವಲಿಂಗ ರಚನೆಯ ಕಾರ್ಬನ್ ಡೇಟಿಂಗ್ ನಡೆಸದಂತೆ ಎಎಸ್‌ಐಗೆ ಕಳೆದ ಮೇನಲ್ಲಿ ಸೂಚಿಸಿತ್ತು.

    ವಾರಣಾಸಿ ಕೋರ್ಟ್‌ನಲ್ಲಿ ಹಿಂದೂ ಅರ್ಜಿದಾರರಿಗೆ ಗೆಲುವು ಸಿಕ್ಕಿದೆ. ಆದರೆ ಮಸೀದಿಯ ಆಡಳಿತ ಮಂಡಳಿ ಅಲಹಾಬಾದ್ ಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದ್ದು, ಕೋರ್ಟ್ ಇಲ್ಲಿ ಅನುಮತಿ ನೀಡಲಿದ್ಯಾ ಕಾದು ನೋಡಬೇಕು. ಇದನ್ನೂ ಓದಿ: ಶಸ್ತ್ರಾಸ್ತ್ರ ಹಿಡಿದುಕೊಂಡು ಮಮತಾ ಮನೆಗೆ ನುಗ್ಗಲು ಯತ್ನಿಸಿದ ವ್ಯಕ್ತಿ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧಾರ್ಮಿಕ ಕೇಂದ್ರಗಳ ನಿರ್ಲಕ್ಷ್ಯಕ್ಕೆ ಗುಲಾಮಗಿರಿ ಮನಸ್ಥಿತಿಯೇ ಕಾರಣ – ಮೋದಿ

    ಧಾರ್ಮಿಕ ಕೇಂದ್ರಗಳ ನಿರ್ಲಕ್ಷ್ಯಕ್ಕೆ ಗುಲಾಮಗಿರಿ ಮನಸ್ಥಿತಿಯೇ ಕಾರಣ – ಮೋದಿ

    ಡೆಹ್ರಾಡೂನ್: ದೇಶದಾದ್ಯಂತ ಇರುವ ಧಾರ್ಮಿಕ ಕೇಂದ್ರಗಳನ್ನು (Religious Center) ಹಿಂದಿನ ಸರ್ಕಾರಗಳು ನಿರ್ಲಕ್ಷಿಸಿದ್ದವು. ಗುಲಾಮಗಿರಿ ಮನಸ್ಥಿತಿಯೇ ಇದಕ್ಕೆ ಕಾರಣ. ಈಗ ಅವುಗಳ ವೈಭವ ಮರುಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.

    ಉತ್ತರಾಖಂಡದ ಭಾರತ-ಚೀನಾ ಗಡಿಯಲ್ಲಿರುವ ಮನ ಗ್ರಾಮದಲ್ಲಿ ಕೇದಾರನಾಥ (Kedarnath Temple) ಮತ್ತು ಹೇಮಕುಂಡ್ ಸಾಹಿಬ್ ರೋಪ್ ವೇ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಕಾಶಿ ವಿಶ್ವನಾಥ ದೇವಾಲಯ (Kashi Vishwanath Temple), ಉಜ್ಜಯಿನಿ ಮತ್ತು ಅಯೋಧ್ಯೆಯಲ್ಲಿ ಈಚೆಗೆ ಪುನರ್‌ನಿರ್ಮಾಣ ಕಾರ್ಯಗಳು ನಡೆದಿರುವುದನ್ನು ಉದಾಹರಣೆ ನೀಡಿ ಅವರು ಮಾತನಾಡಿದರು. ಇದನ್ನೂ ಓದಿ: 4ರ ಬಾಲಕಿ ಮೇಲೆ ಪ್ರಾಂಶುಪಾಲರ ಚಾಲಕನಿಂದ ಅತ್ಯಾಚಾರ – ಶಾಲೆಯನ್ನೇ ಮುಚ್ಚಿಸಿದ ಸರ್ಕಾರ

    ನಮ್ಮ ಧಾರ್ಮಿಕ ಕೇಂದ್ರಗಳು ಕೇವಲ ಕಟ್ಟಡಗಳಲ್ಲ. ಅವು ನಮ್ಮ ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯ ಸಂಕೇತಗಳು. ಆದರೆ ಹಿಂದಿನ ಸರ್ಕಾರಗಳು (Government) ಧಾರ್ಮಿಕ ಕೇಂದ್ರಗಳನ್ನು ನಿರ್ಲಕ್ಷಿಸಿದ್ದವು. ಗುಲಾಮಗಿರಿ ಮನಸ್ಥಿತಿಯೇ ಇದಕ್ಕೆ ಕಾರಣ ಎಂದು ಕುಟುಕಿದರು. ಇದನ್ನೂ ಓದಿ: ಅಭಿಮಾನಿಗಳ ಮೂಲಕ ಅಪ್ಪು ಇನ್ನೂ ಜೀವಂತವಾಗಿದ್ದಾರೆ: ನಟಿ ರಮ್ಯಾ

    ಹಿಮಾಲಯದ ತಪ್ಪಲಿನ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯು ಯಾತ್ರಿಕರಿಗೆ ಅನುಕೂಲ ಉಂಟುಮಾಡುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಸಿದೆ. ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡಿದೆ. ಹೇಮಕುಂಡ್ ಸಾಹಿಬ್ ಗುರುದ್ವಾರಕ್ಕೆ ರೋಪ್‌ವೇ ನಿರ್ಮಿಸುವ ಯೋಜನೆಗೆ ಚಾಲನೆ ನೀಡಿರುವುದು ದೇಶದಲ್ಲಿ ಮಾತ್ರವಲ್ಲದೆ ಬ್ರಿಟನ್, ಜರ್ಮನಿ ಕೆನಡಾದಲ್ಲಿ ನೆಲೆಸಿರುವ ಸಿಖ್ ಸಮುದಾಯದವರಲ್ಲಿ ಹರ್ಷ ಉಂಟುಮಾಡಿದೆ ಎಂದು ಶ್ಲಾಘಿಸಿದರು.

    ಇದಕ್ಕೂ ಮೊದಲು ಮೋದಿ ಅವರು ಕೇದಾರನಾಥ ಮತ್ತು ಬದರೀನಾಥ ದೇವಾಲಯಗಳಿಗೆ ಭೇಟಿ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]