Tag: ಕಾಶಿ ವಿಶ್ವನಾಥ

  • ಕರ್ನಾಟಕ ಯಾತ್ರಿಗಳಿಗಾಗಿ ಇಡೀ ರೈಲು ಬುಕ್‌ – 8 ದಿನ ಅಯೋಧ್ಯೆ, ಕಾಶಿ ಪ್ರವಾಸ

    ಕರ್ನಾಟಕ ಯಾತ್ರಿಗಳಿಗಾಗಿ ಇಡೀ ರೈಲು ಬುಕ್‌ – 8 ದಿನ ಅಯೋಧ್ಯೆ, ಕಾಶಿ ಪ್ರವಾಸ

    ಬೆಂಗಳೂರು:  ಅಯೋಧ್ಯೆ ಮತ್ತು ಕಾಶಿಗೆ ಹೋಗಬೇಕು ಎಂಬ ಆಸೆ ಇದ್ದೆ ಇರುತ್ತದೆ. ಅದರಲ್ಲೂ ಅಯೋಧ್ಯೆಯ ಶ್ರೀರಾಮನನ್ನು (Ayodhya Shree Ram) ಹಾಗೂ ಕಾಶಿಯ ವಿಶ್ವನಾಥನನ್ನು (Kashi Vishwanath) ನೋಡಬೇಕು ಎಂಬ ಬಯಕೆ ಎಲ್ಲರಲ್ಲಿ ಇರುತ್ತದೆ.

    ಎಷ್ಟೋ ಜನರಿಗೆ ಈ ಆಸೆ ಇದ್ದಾಗಲೂ ಸಹ ಹೋಗುವುದಕ್ಕೆ ಸಾಧ್ಯವಾಗಿರಲ್ಲ. ಆರ್ಥಿಕ ಸಮಸ್ಯೆಯಿಂದ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಭಾಷೆಯ ಸಮಸ್ಯೆಯಿಂದ ಹೇಗಪ್ಪ ಹೋಗುವುದು ಎಂಬ ಚಿಂತೆ ಅವರಲ್ಲಿರುತ್ತದೆ. ಯಾರಾದರೂ ಜೊತೆಗಿದ್ದರೆ ಹೋಗಬಹುದು ಎಂಬ ಧೈರ್ಯ ಇರುತ್ತೆ. ಹೀಗೆ ಆಸೆ ಇಟ್ಟುಕೊಂಡ ಅನೇಕ ಜನರಿಗೆ ʼಓಂ ಶಕ್ತಿʼ ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ. ಇದೇ ತಿಂಗಳು 30ನೇ ತಾರೀಖಿನಂದು ಬೆಳಿಗ್ಗೆ 6 ಗಂಟೆಗೆ ರೈಲಿನ ಮೂಲಕ ಉಚಿತವಾಗಿ ಅಯೋಧ್ಯೆ ಹಾಗೂ ಕಾಶಿಗೆ ಕರೆದುಕೊಂಡು ಸಂಸ್ಥೆ ಕರೆದುಕೊಂಡು ಹೋಗುತ್ತಿದೆ. ಇದನ್ನೂ ಓದಿ: ಐತಿಹಾಸಿಕ ಗಂಗೈಕೊಂಡ ಚೋಳಪುರಂ ದೇವಾಲಯಕ್ಕೆ ಭೇಟಿ ನೀಡಿದ ಮೋದಿ

    ಒಂದೊಂದು ಜಿಲ್ಲೆಯಿಂದ 100 ಜನರನ್ನು ಅದರಲ್ಲೂ ಆರ್ಥಿಕವಾಗಿ ಹಿಂದುಳಿದವರನ್ನ ಗುರುತಿಸಿ ಈಗಾಗಲೇ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ನಿಗದಿ ಮಾಡಿದಂತೆ ಒಟ್ಟು ಎಂಟು ದಿನ ಈ ಪ್ರವಾಸ ಇರಲಿದೆ. ಉಚಿತವಾಗಿ ಪ್ರಯಾಣ, ಹಾಗೂ ಊಟ ಜೊತೆಗೆ ಉಳಿದುಕೊಳ್ಳಲೂ ಸಹ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ.

    ಇದಕ್ಕಾಗಿ ರೈಲ್ವೇ ಇಲಾಖೆಯನ್ನು (Indian Railways) ಸಂಪರ್ಕಿಸಿ ಇಡಿ ಒಂದು ರೈಲನ್ನು 8 ದಿನಕ್ಕಾಗಿ ಬುಕ್ ಮಾಡಿ ಕರೆದುಕೊಂಡು ಹೋಗಲಾಗುತ್ತಿದೆ.

  • ಕಾಶಿ ಸನ್ನಿಧಿಯಲ್ಲಿ ರಣವೀರ್ ಸಿಂಗ್, ಕೃತಿ ಸನೋನ್

    ಕಾಶಿ ಸನ್ನಿಧಿಯಲ್ಲಿ ರಣವೀರ್ ಸಿಂಗ್, ಕೃತಿ ಸನೋನ್

    ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಮತ್ತು ನಟಿ ಕೃತಿ ಸನೋನ್ (Kriti Sanon) ಕಾಶಿಗೆ ಬಂದಿಳಿದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಬಂದಿದ್ದ ಈ ಜೋಡಿ ಅದಕ್ಕೂ ಮುನ್ನ ವಿಶ್ವನಾಥನ (Kashi Vishwanatha) ದರ್ಶನ ಪಡೆದಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿವೆ.

    ವಾರಣಾಸಿಯಲ್ಲಿ ನಡೆಯುತ್ತಿರುವ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳ ಫ್ಯಾಶನ್ ಶೋನಲ್ಲಿ ರಣವೀರ್ ಮತ್ತು ಕೃತಿ ಭಾಗಿಯಾಗಲು ಬಂದಿದ್ದರು. ಮನೀಶ್ ಮಲ್ಹೋತ್ರ ನೇತೃತ್ವದಲ್ಲಿ ನಡೆಯುತ್ತಿರುವ ಈ ಫ್ಯಾಷನ್ ಶೋ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳಿಗೆ ಉತ್ತೇಜನ ನೀಡುವುದು ಆಗಿದೆಯಂತೆ.

     

    ಈ ಶೋನಲ್ಲಿ ಭಾಗಿವಹಿಸಿರುವ ರಣವೀರ್ ಮತ್ತು ಕೃತಿ ಇಂಥದ್ದೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖುಷಿ ತಂದಿದೆ ಅಂದಿದ್ದಾರೆ. ಜೊತೆಗೆ ಕಾಶಿ ವಿಶ್ವನಾಥನ ದರ್ಶನ ಮಾಡಿದ್ದು ಮನಸ್ಸಿಗೆ ಸಾಕಷ್ಟು ಸಮಾಧಾನ ತಂದಿದೆ ಎಂದು ಮಾತನಾಡಿದ್ದಾರೆ.

  • ಮಹಾ ಶಿವರಾತ್ರಿ: ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭಕ್ತರಿಗಾಗಿ ಹೊಸ ಆ್ಯಪ್ ಬಿಡುಗಡೆ

    ಮಹಾ ಶಿವರಾತ್ರಿ: ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭಕ್ತರಿಗಾಗಿ ಹೊಸ ಆ್ಯಪ್ ಬಿಡುಗಡೆ

    ಲಕ್ನೋ: ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ನಿಂದ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ.

    ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಕಾಶಿ ವಿಶ್ವನಾಥನ ದರ್ಶನ ಪಡೆಯಲು ಹಲವು ಭಕ್ತಾದಿಗಳು ತುಂಬಾ ದಿನದಿಂದ ಕಾಯುತ್ತಿರುತ್ತಾರೆ. ಭಕ್ತರಿಗಾಗಿ ದೇವಸ್ಥಾನ ಟ್ರಸ್ಟ್ ಒಂದು ಹೊಸ ಅಪ್ಲಿಕೇಶನ್ ಬಿಟ್ಟಿದೆ. ಈ ಅಪ್ಲಿಕೇಶನ್ ನಲ್ಲಿ ಭಕ್ತರು ನೋಂದಾಯಿಸಿಕೊಳ್ಳುವ ಮೂಲಕ ದರ್ಶನವನ್ನು ಪಡೆಯಬಹುದು. ಈ ಆ್ಯಪ್ ಮೂಲಕ ಯಾವ ವೇಳೆ ಕಾಶಿ ದರ್ಶನ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳಬಹುದು. ಆ್ಯಪ್ ನಲ್ಲಿ ದರ್ಶನಕ್ಕೆ ಸರಿಯಾದ ಮಾರ್ಗ ಮತ್ತು ಸಮಯದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತೆ. ಇದನ್ನೂ ಓದಿ: ಈ ಅಪರೂಪದ ಕೃತಿಯ ದರ್ಶನ ಪಡೆದರೆ ಮಾನವನ ಎಲ್ಲ ಸಂಕಷ್ಟ ದೂರ!

    ಆ್ಯಪ್‍ನಲ್ಲಿ ಭಕ್ತರು ನೋಂದಾಯಿಸಿಕೊಂಡರೆ ದೇವಾಲಯದ ಆಡಳಿತವು ಅವರಿಗೆ ಒಂದು ನಿರ್ದಿಷ್ಟ ಸಮಯ ಕೊಟ್ಟು ದೇವರ ದರ್ಶನ ಪಡೆಯುವಂತೆ ಸೂಚಿಸುತ್ತೆ. ಈ ಮೂಲಕ ದೇವಾಲಯದ ಆಡಳಿತ ಮಂಡಳಿಯು ಜನಸಂದಣಿಯನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

    ಡೌನ್‍ಲೋಡ್ ಮಾಡುವುದು ಹೇಗೆ!
    ಮಾಹಿತಿಗಳ ಪ್ರಕಾರ, ಆ್ಯಪ್ ಸದ್ಯಕ್ಕೆ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಲಿದೆ. ಇದನ್ನು ಪ್ಲೇ ಸ್ಟೋರ್‌ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು. ಅಪ್ಲಿಕೇಶನ್‍ನ ವೈಶಿಷ್ಟ್ಯವೆಂದರೆ ಇದು ಹಿಂದಿ, ಇಂಗ್ಲಿಷ್ ಮತ್ತು ದಕ್ಷಿಣ ಭಾರತದ ಹಲವು ಭಾಷೆಗಳನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.

    ಯಾವ ರೀತಿ ಇರುತ್ತೆ?
    ಶಿವರಾತ್ರಿ(ಮಾರ್ಚ್ 1) ದಿನ ಗಂಗಾನದಿಯ ಕಡೆಯಿಂದಲೂ ಹಲವು ಭಕ್ತರು ಬರತ್ತಾರೆ. ಅದಕ್ಕೆ ಭಕ್ತರಿಗಾಗಿ ಹೊಸ ಮಾರ್ಗವನ್ನು ತೆರೆಯಲಾಗುತ್ತಿದೆ ಎಂದು ವಿಭಾಗೀಯ ಆಯುಕ್ತ ದೀಪಕ್ ಅಗರವಾಲ್ ತಿಳಿಸಿದ್ದಾರೆ. ಅಲ್ಲದೆ ಎಲ್ಲ ಪ್ರವೇಶ ದ್ವಾರಗಳಿಂದ ಗರ್ಭಗುಡಿ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿದೆ.

    ವಿವಿಧೆಡೆ LED ಅಳವಡಿಸುವ ಮೂಲಕ ಕಾಶಿ ವಿಶ್ವನಾಥ ದೇವಸ್ಥಾನದ ಗರ್ಭಗುಡಿಯ ನೇರ ದರ್ಶನವನ್ನು ಭಕ್ತರಿಗೆ ಮಾಡಿಲಾಗುತ್ತಿದೆ. ವಿವಿಐಪಿಗಳು ಜಲಮಾರ್ಗದ ಮೂಲಕ ಬರುವಂತೆ ಮನವಿ ಮಾಡಲಾಗಿದೆ. ಮೈದಾಗಿನ್ ಮತ್ತು ಗೋಡೋಲಿಯಾದಿಂದ ಯಾವುದೇ ದೊಡ್ಡ ವಾಹನಗಳನ್ನು ಅನುಮತಿಸಲಾಗುವುದಿಲ್ಲ. ವಿಕಲಚೇತನರು ಮತ್ತು ವೃದ್ಧರಿಗಾಗಿ ದೇವಾಲಯದ ಆಡಳಿತ ಮಂಡಳಿಯಿಂದ ಇ-ರಿಕ್ಷಾಗಳನ್ನು ನಡೆಸಲಾಗುವುದು.

    ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದ್ದು, ವಿವಿಧೆಡೆ ನೀರಿಗಾಗಿ ಹಾಗೂ ರಾತ್ರಿ ವೇಳೆ ನಡೆಯುವ ಕಾರ್ಯಕ್ರಮಗಳಿಗೆ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ನಿಲ್ಲಲು ಆವರಣದಲ್ಲಿ ಸ್ಟೀಲ್ ರೇಲಿಂಗ್‍ಗಳನ್ನು ಅಳವಡಿಸಲಾಗುವುದು. ದೇವಾಲಯದಲ್ಲಿ ಟ್ಯಾಬ್ಲೋ ದರ್ಶನದ ವ್ಯವಸ್ಥೆಯು ಮುಂದುವರಿಯುತ್ತದೆ. ಈ ಮೂಲಕ ಭಕ್ತರಿಗೆ ದರ್ಶನ ಸುಲಭವಾಗಲಿದೆ. ಇದನ್ನೂ ಓದಿ: ಕೇವಲ 13 ಗಂಟೆಯಲ್ಲಿ 135 ಕಿ.ಮೀ ಬಂದ ಎತ್ತಿನ ಚಕ್ಕಡಿ – ಎತ್ತುಗಳಿಗೆ ಅದ್ಧೂರಿ ಸ್ವಾಗತ

    ಶ್ರೀ ಕಾಶಿ ವಿಶ್ವನಾಥ ಧಾಮದ ನಿರ್ಮಾಣದ ನಂತರ, ಇದು ಮಹಾ ಶಿವರಾತ್ರಿಯ ಮೊದಲ ಆಚರಣೆಯಾಗಿದೆ. ವಿವಿಧ ಆಚರಣೆಗಳು ಮತ್ತು ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಗರದಲ್ಲಿ ಬಿಗಿ ಭದ್ರತೆ ಮಾಡುವಂತೆ ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ.

  • ತಮ್ಮ ಹೆಸರಿನ ರಹಸ್ಯ ಬಿಚ್ಚಿಟ್ಟ ಎಂಎಲ್‍ಸಿ ಎಚ್. ವಿಶ್ವನಾಥ್

    ತಮ್ಮ ಹೆಸರಿನ ರಹಸ್ಯ ಬಿಚ್ಚಿಟ್ಟ ಎಂಎಲ್‍ಸಿ ಎಚ್. ವಿಶ್ವನಾಥ್

    ಮೈಸೂರು: ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತಮ್ಮ ಹೆಸರಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

    ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ನನ್ನ ಹೆತ್ತವರಿಗೆ ಮೊದಲ ಮಗು ಸತ್ತು ಹೋಗಿತ್ತು. ಎರಡನೇ ಮಗು ಸಾವನ್ನಪ್ಪಬಾರದು ಅಂತಾ ನಮ್ಮಪ್ಪ ಹರಕೆ ಹೊತ್ತಿದ್ದರು. ಕಾಶಿಗೆ ಹೋಗಿ ಹರಕೆ ಹೊತ್ತಿದ್ದ ಕಾರಣ ನನಗೆ ಆ ಹೆಸರು ಇಟ್ಟರು ಎಂದರು.

    ಕಾಶಿಯಲ್ಲಿ ಮೋಕ್ಷ ಪಡೆಯಲು ಎಲ್ಲರೂ ಹಂಬಲಿಸುತ್ತಾರೆ. ಮುಸ್ಲಿಮರಿಗೆ ಮೆಕ್ಕಾ ಇದ್ದಂತೆ ಕ್ರೈಸ್ತರಿಗೆ ರೋಮ್ ಇದ್ದಂತೆ. ಹಿಂದೂಗಳಿಗೆ ಕಾಶಿ ಪವಿತ್ರವಾದದ್ದು ಎಂದು ಹೇಳಿದರು. ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ 15 ಸೀಟ್ ಗೆಲುವು- ಬಿಎಸ್‌ವೈ ವಿಶ್ವಾಸ

    ಇದೇ ವೇಳೆ ವಾರಣಾಸಿಯಲ್ಲಿ ವಿಶ್ವನಾಥ್ ಕಾರಿಡಾರ್ ನಿರ್ಮಾಣ ಸ್ವಾಗತಾರ್ಹ. ಆದರೆ ಕಾರ್ಯಕ್ರಮದಲ್ಲಿ ಒಂದು ಸಣ್ಣ ಲೋಪವಾಗಿದೆ. ವಾರಣಾಸಿಯನ್ನು ಬೇರೆ ಬೇರೆ ಧರ್ಮದವರು ನಾಶ ಮಾಡಿದ್ದರು. 16ನೇ ಶತಮಾನದಲ್ಲಿ ಉಳಿಸಿದ್ದು ಅಹಲ್ಯಬಾಯಿ. ಅವರೇ ಕಾಶಿ ವಿಶ್ವನಾಥ ದೇವಸ್ಥಾನ ಉಳಿಸಿದ್ದರು. ಯುದ್ಧದ ಬದಲು ಯುಕ್ತಿಯಿಂದ ಉಳಿಸಿದ್ದರು. ಶಿವನ ಹೆಸರಲ್ಲೇ ಅವರು ಆಡಳಿತ ಮಾಡಿದ್ದರು. ಇಂತಹ ಯುಕ್ತಿ ಪ್ರದರ್ಶಿಸಿದ ಅಹಲ್ಯಬಾಯಿ ಅವರನ್ನು ಎಲ್ಲರೂ ಮರೆತಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಧಾನಿ ನರೇಂದ್ರ ಮೋದಿ ಸಹ ಮರೆತಿದ್ದಾರೆ ಎಂದು ಆರೋಪಿಸಿದರು.

  • ತಾಯಿ ಗಂಗೆ, ಕಾಶಿ ವಿಶ್ವನಾಥ ಎಲ್ಲರಿಗೂ ಸೇರಿದವರು: ಮೋದಿ

    ತಾಯಿ ಗಂಗೆ, ಕಾಶಿ ವಿಶ್ವನಾಥ ಎಲ್ಲರಿಗೂ ಸೇರಿದವರು: ಮೋದಿ

    ಲಕ್ನೋ: ಗಂಗಾನದಿಗೆ ಸಂಪರ್ಕ ಕಲ್ಪಿಸುವ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ. ವಾರಣಾಸಿಯ ಕೇಂದ್ರ ಭಾಗದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ಈ ಯೋಜನೆಯಿಂದಾಗಿ ಪ್ರವಾಸೋದ್ಯಮ ಚೇತರಿಕೆ ಕಾಣಲಿದೆ.

    ಕಾಶಿ ವಿಶ್ವನಾಥ್ ಕಾರಿಡಾರ್‍ನ್ನು ಉದ್ಘಾಟಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಇದೊಂದು ಐತಿಹಾಸಿಕ ಕ್ಷಣವಾಗಿದೆ. ದೇಶದ ಇತಿಹಾಸದಲ್ಲೇ ದೊಡ್ಡ ದಿನವಾಗಿದೆ. ಈ ಕ್ಷಣಕ್ಕೆ ಸಾಕ್ಷಿಯಾಗಿದ್ದು ನಮ್ಮ ಪುಣ್ಯವಾಗಿದೆ. ಮುಕ್ಕಾಲು ಕೋಟಿ ದೇವರು ಕಾಶಿಯಲ್ಲಿ ಇದ್ದಾರೆ. ಕಾಲಭೈರವನ ದರ್ಶನ ಪಡೆದು ಬಂದಿದ್ದೇನೆ. ಕಾಶಿಯ ದರ್ಶನದಿಂದ ಸಕಲ ಸಂಕಷ್ಟ ದೂರವಾಗುತ್ತದೆ. ಈ ಕಾರ್ಯಕ್ರಮವು ನನಗೆ ಸಂತೋಷವನ್ನು ತಂದಿದೆ ಎಂದರು. ಇದನ್ನೂ ಓದಿ: ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?

    ಕಣ್ಮರೆಯಾಗಿರುವ ಮಂದಿರಗಳನ್ನು ಮರುಸ್ಥಾಪನೆ ಮಾಡಿದ್ದೇವೆ. ಕಾಶಿ ನಮ್ಮ ಆದ್ಯಾತ್ಮಿಕತೆಯ ಪ್ರತೀಕವಾಗಿದೆ. ಪರಂಪರೆ ಪ್ರೇರಣೆಯಾಗುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈ ಪರಿಸರದಲ್ಲಿ ದೈವಿಕ ವಾತಾವರಣದೆ. ಪ್ರಾಚಿನ ಕಾಶಿಗೆ ಆಧುನಿಕ ಸ್ಪರ್ಶ ಸಿಕ್ಕಿದೆ. ಇಂದು ಶಿವನ ಪ್ರಿಯ ವಾರವಾಗಿದ್ದು, ಇಂದೇ ಕಾರಿಡಾರ್ ಲೋಕಾರ್ಪಣೆಗೊಂಡಿದೆ. ತಾಯಿ ಗಂಗೆ, ಕಾಶಿ ವಿಶ್ವನಾಥ ಎಲ್ಲರಿಗೂ ಸೇರಿದವರು ಎಂದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ದೃಷ್ಟಿ ನಿವಾರಿಸಿದ ಅರ್ಚಕ

    ಕಾಶಿ ವಿಶ್ವನಾಥನ ಕ್ಷೇತ್ರಕ್ಕೆ ಹೊಸ ರೂಪ ನೀಡುವ 399 ಕೋಟಿ ರೂ. ಮೊದಲ ಹಂತದ ಕಾಶಿ ಕಾರಿಡಾರ್ ನ್ನು ಮೋದಿ ಉದ್ಘಾಟಿಸಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಮೋದಿಯವರು ಕಾಲ ಭೈರವೇಶ್ವರನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಅಲಕಾನಂದ ಕ್ರೂಸ್‍ನಲ್ಲಿ ಲಲಿತಾ ಘಾಟ್‍ಗೆ ತೆರಳಿ ಅಲ್ಲಿ ಕಾವಿಧಾರಿಯಾಗಿ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಅಲ್ಲಿ ಅಘ್ರ್ಯ ಅರ್ಪಿಸಿ ರುದ್ರಾಕ್ಷಿ ಮಾಲೆ ಹಿಡಿದು ಜಪ ಮಾಡಿದರು.

  • ಪ್ರಧಾನಿ ಮೋದಿಗೆ ದೃಷ್ಟಿ ನಿವಾರಿಸಿದ ಅರ್ಚಕ

    ಪ್ರಧಾನಿ ಮೋದಿಗೆ ದೃಷ್ಟಿ ನಿವಾರಿಸಿದ ಅರ್ಚಕ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ಕಾರಿಡಾರ್‌ನನ್ನು ಇಂದು ಮಧ್ಯಾಹ್ನ 1 ಗಂಟೆಗೆ ಉದ್ಘಾಟಿಸಲಿದ್ದಾರೆ. ಈ ನಿಮಿತ್ತ ಆಗಮಿಸಿರುವ ಪ್ರಧಾನಿಯವರು, ಕಾಲಭೈರವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಆಗ ದೇವಸ್ಥಾನದ ಅರ್ಚಕರು ಮೋದಿಗೆ ದೃಷ್ಟಿ ನಿವಾರಣೆ ಮಾಡಿದ್ದಾರೆ.

    ಕಾಲಭೈರವೇಶ್ವರ ದೇವರಿಗೆ ವಿಶೇಷ ಪೂಜೆಯನ್ನು ಮೋದಿ ಸಲ್ಲಿಸಿದ್ದಾರೆ. ಹೂವಿನ ಮಾಲೆ ಹಾಕಿ ಆರತಿ ಬೆಳಗಿ ಮೋದಿ ತಲೆ ಬಾಗಿ ನಮಸ್ಕರಿಸಿದ್ದಾರೆ. ಈ ವೇಳೆ ದೇವಸ್ಥಾನದ ಅರ್ಚಕರು ಮೋದಿ ಅವರ ಹಣೆಗೆ ತಿಲಕ ಇಟ್ಟು ಆಶಿರ್ವದಿಸಿದ್ದಾರೆ. ಮೋದಿ ಅವರ ಈ ವಿಶೇಷ ಪೂಜೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಜೊತೆಯಾಗಿದ್ದರು. ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್‍ಗೆ 71ನೇ ಹುಟ್ಟುಹಬ್ಬದ ಸಂಭ್ರಮ

    ಸುಮಾರು 900 ಕೋಟಿ.ರೂ ವೆಚ್ಚದಲ್ಲಿ ನಿರ್ಮಿಸಲಾದ ಶ್ರೀ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಮೊದಲ ಹಂತಕ್ಕೆ ಚಾಲನೆ ನೀಡಲಿದ್ದಾರೆ. ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಮೋದಿಯವರ ಕನಸಿನ ಯೋಜನೆಯಾಗಿದ್ದು, ಸುಮಾರು 5 ಸಾವಿರ ಚದರಿ ಅಡಿ ಪ್ರದೇಶಕ್ಕೆ ದೇಗುಲ ವ್ಯಾಪ್ತಿ ವಿಸ್ತಾರವಾಗಿದೆ. ಕಾರಿಡಾರ್ 320 ಮೀಟರ್ ಉದ್ದ ಮತ್ತು 20 ಮೀಓಟರ್ ಅಗಲ ಇದೆ. ಮೊದಲಿನಂತೆ ಕಿಕ್ಕಿರಿದ ರಸ್ತೆಗಳ ಬದಲಾಗಿ ಇದೀಗ ಸರಾಗವಾಗಿ ಕೇವಲ ಒಂದು ನಿಮಿಷದಲ್ಲಿ ದೇಗುಲದಿಂದ ಲಲಿತಾಘಾಟ್‍ಗೆ ತಲುಪಬಹುದಾಗಿದೆ. ಇದನ್ನೂ ಓದಿ: ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿ ಜೈಲಿನಲ್ಲಿಯೇ ಆತ್ಮಹತ್ಯೆ