Tag: ಕಾಶಿಯಾತ್ರೆ

  • ಕಾಶಿ ಯಾತ್ರೆಗೆ ಮುಜರಾಯಿ ಇಲಾಖೆಯಿಂದ ವಿಶೇಷ ರೈಲು

    ಕಾಶಿ ಯಾತ್ರೆಗೆ ಮುಜರಾಯಿ ಇಲಾಖೆಯಿಂದ ವಿಶೇಷ ರೈಲು

    – ಕರ್ನಾಟಕ ಭಾರತ್ ಗೌರವ್ ಕಾಶಿಯಾತ್ರೆಯ 4ನೇ ರೈಲಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

    ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯಿಂದ (Muzrai Department) ಕಾಶಿ ಯಾತ್ರೆಗೆ (Kashi Darshan) ವಿಶೇಷ ರೈಲು (Train) ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ ಭಾರತ್ ಗೌರವ್ ಕಾಶಿಯಾತ್ರೆಯ ನಾಲ್ಕನೇ ರೈಲಿಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.

    ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಟಿರುವ ಕರ್ನಾಟಕ ಭಾರತ್ ಗೌರವ್ ಕಾಶಿಯಾತ್ರೆ ರೈಲು ವಾರಣಾಸಿ, ಅಯೋಧ್ಯೆ, ಪ್ರಯಾಗ್ ರಾಜ್ ದರ್ಶನ ಮಾಡಲಿರುವ ಯಾತ್ರ್ರಿಗಳನ್ನು ಕರೆದೊಯ್ಯಲಿದೆ. ಒಟ್ಟು 8 ದಿನಗಳ ಕಾಶಿ ಪ್ರವಾಸಕ್ಕೆ ಒಬ್ಬರಿಗೆ 20 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಇದರಲ್ಲಿ ಸಬ್ಸಿಡಿ 5 ಸಾವಿರ ರೂ. ಸರ್ಕಾರದಿಂದ ಸಿಗಲಿದೆ. ಅಂದರೆ ಒಬ್ಬರಿಗೆ 15 ಸಾವಿರ ರೂ. ಖರ್ಚು ಪ್ರಯಾಣಿಕರಿಗೆ ಬರಲಿದೆ. ಊಟ, ವಸತಿ ವ್ಯವಸ್ಥೆ ಸಹ ಇರಲಿದೆ. 700 ಸೀಟ್ ಸಾಮಥ್ರ್ಯ ಹೊಂದಿರುವ ರೈಲಿನಲ್ಲಿ ಸದ್ಯ 403 ಸೀಟ್ ಬುಕ್ಕಿಂಗ್ ಆಗಿವೆ. ಇದನ್ನೂ ಓದಿ: ಸರ್ಕಾರಿ ಕಾರ್ಯಕ್ರಮದಲ್ಲಿ ಯತೀಂದ್ರ ಸಿದ್ದರಾಮಯ್ಯ ಭಾಗಿ – ಅಹವಾಲು ಕೊಡಲು ಮುಗಿಬಿದ್ದ ಜನ

    ಯಶವಂತಪುರ ರೈಲು ನಿಲ್ದಾಣದಿಂದ ಕಾಶಿಗೆ ತಲುಪಲು ಎರಡು ದಿನ ಆಗಲಿದೆ. ವಾರಣಾಸಿಗೆ ತಲುಪಿದ ಬಳಿಕ ಗಂಗಾ ಸ್ನಾನ, ತುಳಸಿ ಮಂದಿರ ದರ್ಶನ, ಶ್ರೀ ಹನ್ಮಾನ್ ದರ್ಶನ, ಕಾಶಿ ವಿಶ್ವನಾಥ ದರ್ಶನ ಪಡೆದ ಬಳಿಕ ಒಂದು ದಿನ ಕಾಶಿಯಲ್ಲಿ ತಂಗುವುದು. ಬಳಿಕ 5ನೇ ದಿನ ವಾರಣಾಸಿಯಿಂದ ಆಯೋಧ್ಯೆಗೆ ತೆರಳುವುದು. ಇಲ್ಲಿ ಶ್ರೀರಾಮ ಭೂಮಿ ದರ್ಶನ ಮಾಡಿ, ಸಂಜೆ ಸರಾಯು ಆರತಿ ವೀಕ್ಷಣೆ ಮಾಡುವುದು. ಸಂಜೆಯ ಬಳಿಕ ಪ್ರಯಾಗ್ ರಾಜ್‍ಗೆ ಪ್ರಯಾಣ, 6ನೇ ದಿನ ಪ್ರಯಾಗ್ ರಾಜ್ ತಲುಪುವ ರೈಲು ತಲುಪಲಿದೆ. ಬಳಿಕ ತ್ರಿವೇಣಿ ಸಂಗಮ ಸ್ನಾನ, ಶ್ರೀ ಹನುಮಾನ್ ಮಂದಿರ ದರ್ಶನ ಇರಲಿದೆ. ಬಳಿಕ ಅದೇ ದಿನ ಪ್ರಯಾಗ್ ರಾಜ್‍ನಿಂದ ಬೆಂಗಳೂರಿಗೆ ರೈಲು ಹೊರಡಲಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಮುಜರಾಯಿ ಸಚಿವ ರಾಮಲಿಂಗರೆಡ್ಡಿಯವರು, ಹಿಂದೆ ಮೂರು ಟ್ರಿಪ್ ಆಗಿದೆ. ಇದು ನಾಲ್ಕನೇ ಟ್ರಿಪ್, ಈ ಬೋಗಿಗಳು ರಾಜ್ಯ ಸರ್ಕಾರದ್ದಾಗಿದ್ದು, ರಾಜ್ಯ ಸರ್ಕಾರವೇ ಹಣ ಕೊಟ್ಟು ಮಾಡಿಸಿದೆ. ಮುಂದೆ ಬೇರೆ ಭಾಗಗಳಿಗೂ ಈ ಬೋಗಿಗಳನ್ನು ಬಳಕೆ ಮಾಡಲಾಗುತ್ತದೆ. ಪ್ರವಾಸದ ವೇಳೆ ಊಟದ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳಾಗಿವೆ. ರೈಲಿನಲ್ಲಿ ರಾಜ್ಯ ಆರೋಗ್ಯ ಇಲಾಖೆಯ ಇಬ್ಬರು ವೈದ್ಯರು ಇರಲಿದ್ದಾರೆ. ಆಗಸ್ಟ್ 15ಕ್ಕೆ ಮತ್ತೆ 5ನೇ ಕಾಶಿಯಾತ್ರೆ ಆರಂಭವಾಗಲಿದೆ ಎಂದಿದ್ದಾರೆ.

    ರಾಜ್ಯದಲ್ಲಿ ಎಲ್ಲೆಲ್ಲಿ ನಿಲ್ದಾಣಗಳಿವೆ: ಯಶವಂತಪುರ, ದಾವಣಗೆರೆ, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗದಲ್ಲಿ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಸಿ.ಟಿ.ರವಿಗೆ ಕೊಕ್ – ಒಲಿಯುತ್ತಾ ರಾಜ್ಯಾಧ್ಯಕ್ಷ ಪಟ್ಟ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಶಿಯಾತ್ರೆ ಕೈಗೊಂಡ ಖಡಕ್ ನಟ ಪ್ರಮೋದ್ ಶೆಟ್ಟಿ

    ಕಾಶಿಯಾತ್ರೆ ಕೈಗೊಂಡ ಖಡಕ್ ನಟ ಪ್ರಮೋದ್ ಶೆಟ್ಟಿ

    ಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ಪ್ರಮೋದ್ ಶೆಟ್ಟಿ ಮೊಟ್ಟಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಚಿತ್ರ “ಕಾಶಿಯಾತ್ರೆ”. ಇತ್ತೀಚೆಗೆ ಪ್ರಮೋದ್ ಶೆಟ್ಟಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ  ಪ್ರಮೋದ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. “ಕಾಶಿಯಾತ್ರೆ” ಗೆ ಹೊರಟಿರುವ ಮಧುಮಗನ ವೇಷದಲ್ಲಿ ಕಾಣಿಸಿಕೊಂಡಿರುವ ಪ್ರಮೋದ್ ಶೆಟ್ಟಿ ಅವರ ವಿಭಿನ್ನ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.

    ನೋಡುಗರನ್ನು ನಗೆಗಡಲಿನಲ್ಲಿ ತೇಲಿಸುವ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿನಯ್ ಶಾಸ್ತ್ರಿ ನಿರ್ದೇಶಿಸುತ್ತಿದ್ದಾರೆ. ಕಿರುಚಿತ್ರ ನಿರ್ದೇಶಿಸಿರುವ ವಿನಯ್ ಶಾಸ್ತ್ರಿ ಅವರಿಗೆ ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. gunnybag studios ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಿಶ್ವಿ ಸಂಗೀತ ನಿರ್ದೇಶನ ಹಾಗೂ ಸುನೀತ್ ಹಲಗೇರಿ ಅವರ ಛಾಯಾಗ್ರಹಣವಿದೆ‌. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಸೆಪ್ಟೆಂಬರ್ 12ರಿಂದ ಬೆಂಗಳೂರು ಹಾಗೂ ಮೈಸೂರಿನಲ್ಲಿ “ಕಾಶಿಯಾತ್ರೆ” ಚಿತ್ರದ ಚಿತ್ರೀಕರಣ ನಡೆಯಲಿದೆ. ಪ್ರಮೋದ್ ಶೆಟ್ಟಿ, ಟಿ.ಎಸ್.ನಾಗಾಭರಣ, ಚಿತ್ತರಂಜನ್ ಕಶ್ಯಪ್, ಸ್ವರ ಶೆಟ್ಟಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಂಗಾರತಿ ಸ್ಥಳಕ್ಕೆ ವೀಲ್ ಚೇರ್ ಸೌಲಭ್ಯ – ಕಾಶಿಯಾತ್ರಿಗಳಿಗೆ ಇಲ್ಲಿದೆ ನೋಡಿ ಗುಡ್ ನ್ಯೂಸ್

    ಗಂಗಾರತಿ ಸ್ಥಳಕ್ಕೆ ವೀಲ್ ಚೇರ್ ಸೌಲಭ್ಯ – ಕಾಶಿಯಾತ್ರಿಗಳಿಗೆ ಇಲ್ಲಿದೆ ನೋಡಿ ಗುಡ್ ನ್ಯೂಸ್

    ಲಕ್ನೋ: ಜೀವನದಲ್ಲಿ ಒಮ್ಮೆ ಕಾಶಿ ಯಾತ್ರೆ ಮಾಡಬೇಕು ಗಂಗಾರತಿ ನೋಡಬೇಕು ಅನ್ನೋದು ಬಹುತೇಕ ಹಿಂದೂಗಳ ಆಶಯ. ಆದರೆ ಅಂಗವಿಕಲರು ಮತ್ತು ವಿಶೇಷ ಚೇತನರಿಗೆ ಇದು ಕಷ್ಟವಾಗುತ್ತಿತ್ತು. ಆದರೆ ಇನ್ನು ಆ ತೊಂದರೆ ಇಲ್ಲ, ವಾರಾಣಸಿಯ ಪ್ರಮುಖ ಮೂರು ಗಂಗಾನದಿಯ ಘಾಟ್ ಗಳಿಗೆ ವೀಲ್ ಚೇರ್ ರ‍್ಯಾಂಪ್ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ದೇಶದಲ್ಲಿನ ಪುಣ್ಯಕ್ಷೇತ್ರಗಳ ಪೈಕಿ ಮೊದಲ ಬಾರಿ ಇಲ್ಲಿ ವೀಲ್ ಚೇರ್ ರ‍್ಯಾಂಪ್  ನಿರ್ಮಿಸಲಾಗುತ್ತಿದೆ ಎನ್ನಲಾಗಿದೆ.

    ಹೊಸ ವರ್ಷದ ಗಿಫ್ಟ್ ಎನ್ನುವಂತೆ ಗಂಗಾ ನದಿ ತಟದಲ್ಲಿರುವ ಮಣಿಕರ್ಣಿಕ, ಅಸ್ಸಿ ಮತ್ತು ದಶಾಶ್ವಮೇಧ ಘಾಟ್ ನಲ್ಲಿ ವೀಲ್ ಚೇರ್ ರ‍್ಯಾಂಪ್ ನಿರ್ಮಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಮೂರು ಕೋಟಿ ಬಜೆಟ್ ನಲ್ಲಿ ಅರ್ಧವನ್ನು ಉತ್ತರ ಪ್ರದೇಶ ಸರ್ಕಾರ ಬಿಡುಗಡೆ ಮಾಡಿದೆ. ವಾರಾಣಸಿಯ ಘಾಟ್ ಗಳ ಪೈಕಿ ಈ ಮೂರು ಘಾಟ್ ಗಳು ಹೆಚ್ಚು ಜನಸಂದಣಿಯಿಂದ ಕೂಡಿರುತ್ತೆ ಅಲ್ಲದೇ ಇಲ್ಲಿ ನಡೆಯುವ ಗಂಗಾರಾತಿ ನೋಡಲು ಜನರು ಬಯಸುತ್ತಾರೆ. ಆದರೆ ದೊಡ್ಡ ಪ್ರಮಾಣದಲ್ಲಿ ಹೆಚ್ಚು ಮೆಟ್ಟಿಲುಗಳು ಇರುವ ಕಾರಣ ಅಂಗವಿಕಲರಿಗೆ ವಿಶೇಷ ಚೇತನರಿಗೆ ಇದು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡಿರುವ ಸರ್ಕಾರ ಈ ಮೂರು ಘಾಟ್ ಗಳಲ್ಲಿ ಗಂಗಾರತಿ ನಡೆಯುವ ಸ್ಥಳಕ್ಕೆ ವೀಲ್ ಚೇರ್ ರ‍್ಯಾಂಪ್ ನಿರ್ಮಿಸಲು ಚಿಂತಿಸಿದೆ.

    ಸ್ಥಳೀಯ ಬಿಜೆಪಿ ನಾಯಕರ ಪ್ರಕಾರ ವಿಶೇಷ ಚೇತನರು ಗಂಗಾರತಿ ನೋಡಲು ಕಷ್ಟ ಪಡುವುದನ್ನು ಪ್ರಧಾನಿ ನರೇಂದ್ರ ಮೋದಿ ಗಮನಿಸಿದ್ದರಂತೆ. ಬಳಿಕ ವೀಲ್ ಚೇರ್ ರ‍್ಯಾಂಪ್ ನಿರ್ಮಿಸುವ ಈ ಕಾರ್ಯಕ್ಕೆ ಹೆಚ್ಚು ಆಸಕ್ತಿ ವಹಿಸಿದ್ದರು ಎನ್ನಲಾಗಿದ್ದು ಕೇಂದ್ರ ನೆರವಿನಲ್ಲಿ ಈ ಮೂರು ಘಾಟ್ ಗಳನ್ನು ಅಭಿವೃದ್ಧಿ ಪಡಿಸಲು ಸೂಚಿಸಲಾಗಿದೆಯಂತೆ. ಅಲ್ಲದೇ ಕುಡಿಯುವ ನೀರಿನ ಅರವಟಿಕೆ, ಶೌಚಾಲಯಗಳಲ್ಲಿ ಬ್ರೇನ್ ಲಿಪಿ ಅಳವಡಿಸಲು ಸೂಚಿಸಿಲಾಗಿದೆ.

    ವಾರಾಣಸಿಯಲ್ಲಿ ಈ ಮೂರು ಘಾಟ್‍ಗಳು ಅತಿಹೆಚ್ಚು ಜನ ಸಂದಣಿಯಿಂದ ಕೂಡಿದ್ದು, ಇಲ್ಲಿ ಅಂಗವಿಕಲರು ಮತ್ತು ವಿಶೇಷ ಚೇತನರು ಗಂಗಾರತಿ ನೋಡುವುದು ಕಠಿಣ, ಹೆಚ್ಚು ಮೆಟ್ಟಿಲುಗಳಿರುವುದರಿಂದ ವೀಕಲಚೇತನರಿಗೆ ಕಷ್ಟವಾಗುತ್ತಿದೆ ಎಂದು ವರದಿ ನೀಡಲಾಗಿತ್ತು. ಈ ವರದಿ ಆಧರಿಸಿ ಕೇಂದ್ರ ನೆರವಿನಲ್ಲಿ ರಾಜ್ಯ ಸರ್ಕಾರ ಕಾಮಗಾರಿ ಆರಂಭಿಸಲು ಮುಂದಾಗಿದೆ.