Tag: ಕಾವ್ಯ ಶೆಟ್ಟಿ

  • ವಸಿಷ್ಠ ಸಿಂಹ ನಟನೆಯ ‘ಲವ್ ಲಿ’ ಸಿನಿಮಾದಲ್ಲಿ ಸೊಂಟ ಬಳುಕಿಸಿದ ಕಾವ್ಯ ಶೆಟ್ಟಿ, ನಂದು

    ವಸಿಷ್ಠ ಸಿಂಹ ನಟನೆಯ ‘ಲವ್ ಲಿ’ ಸಿನಿಮಾದಲ್ಲಿ ಸೊಂಟ ಬಳುಕಿಸಿದ ಕಾವ್ಯ ಶೆಟ್ಟಿ, ನಂದು

    ಸ್ಯಾಂಡಲ್‌ವುಡ್ ನಟ ವಸಿಷ್ಠ ಸಿಂಹ (Vasista Simha) ನಟನೆಯ ‘ಲವ್ ಲಿ’ (Loveli Film)  ಸಿನಿಮಾದಿಂದ ಸ್ಪೆಷಲ್ ಸಾಂಗ್‌ವೊಂದು ಇದೀಗ ರಿಲೀಸ್ ಆಗಿದೆ. ‘ಚಿಕ್ಕಿಮಿಕ್ಕಾ’ ಎಂಬ ಕಲರ್‌ಫುಲ್ ಸಾಂಗ್‌ಗೆ ಕಾವ್ಯಾ ಶೆಟ್ಟಿ (Kavya Shetty)  ಮತ್ತು ‘ಬಿಗ್ ಬಾಸ್’ ಖ್ಯಾತಿಯ ನಂದು (Nandu) ಸೊಂಟ ಬಳುಕಿಸಿದ್ದಾರೆ.

     

    View this post on Instagram

     

    A post shared by Vasishta N Simha (@imsimhaa)

    ‘ಚಿಕ್ಕಿಮಿಕ್ಕಾ’ ಎಂಬ ಹಾಡಿಗೆ ಮಸ್ತ್ ಆಗಿ ಕಾವ್ಯ ಶೆಟ್ಟಿ ಮತ್ತು ನಂದು ಹೆಜ್ಜೆ ಹಾಕಿದ್ದಾರೆ. ಸಾಂಗ್ ಕೂಡ ಕಲರ್‌ಫುಲ್ ಆಗಿ ಮೂಡಿ ಬಂದಿದ್ದು, ಇಬ್ಬರೂ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಾಂಗ್ ರಿಲೀಸ್ ಆಗುತ್ತಿದ್ದಂತೆ ಯೂಟ್ಯೂಬ್‌ನಲ್ಲಿ ಭರ್ಜರಿ ವಿವ್ಸ್ ಪಡೆಯುತ್ತಿದೆ. ಇದನ್ನೂ ಓದಿ:ವಿಜಯ್ ಹೆಸರು ಹೇಳ್ತಿದ್ದಂತೆ ನಾಚಿ ನೀರಾದ ರಶ್ಮಿಕಾ ಮಂದಣ್ಣ

     

    View this post on Instagram

     

    A post shared by Nandu (@nandu_ofl)

    ಕೆಲದಿನಗಳ ಹಿಂದೆ ವಸಿಷ್ಠ ಸಿಂಹ ಹಾಡಿರುವ ಲವ್..ಲಿ ಸಿನಿಮಾದ ಹಾಡೊಂದನ್ನು ಚಿತ್ರತಂಡ ರಿಲೀಸ್‌ ಮಾಡಿತ್ತು. ಸಮುದ್ರ ತೀರದಲ್ಲಿ ಕುಳಿತು ನಾಯಕಿಯನ್ನು ಹಾಡಿನ ಮೂಲಕ ವಸಿಷ್ಠ ಬಣ್ಣಿಸಿದ್ದರು. ಚೇತನ್ ಕೇಶವ್ ಮತ್ತು ಪ್ರಜ್ವಲ್ ಕೆ.ಪಿ ಸಾಹಿತ್ಯ ಬರೆದಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿರುವ ಹಾಡಿಗೆ ವಸಿಷ್ಠ ಸೊಗಸಾಗಿ ಹಾಡಿದ್ದರು. ರಿಲೀಸ್ ಆದ ಚಿತ್ರದ ಮೊದಲ ಹಾಡು ಇದಾಗಿದ್ದು, ಭರ್ಜರಿ ವಿವ್ಸ್ ಪಡೆದುಕೊಂಡಿತ್ತು.

    ಅಂದಹಾಗೆ, ಈ ಚಿತ್ರದಲ್ಲಿ ವಸಿಷ್ಠ ಸಿಂಹಗೆ ನಾಯಕಿಯಾಗಿ ಸ್ಟೆಫಿ ಪಟೇಲ್ ನಟಿಸಿದ್ದಾರೆ. ‘ಲವ್ ಲಿ’ ಒಂದು ದಶಕದ ಹಿಂದೆ ನಡೆದ ನೈಜ ಘಟನೆಗಳನ್ನು ಆಧರಿಸಿದ ಕಮರ್ಷಿಯಲ್ ರೊಮ್ಯಾಂಟಿಕ್ ಪ್ರೇಮಕಥೆಯಾಗಿದೆ. ಇದು ಯುವಕನ ಜೀವನದ ಬಗ್ಗೆ ಮತ್ತು ಪ್ರೀತಿಯಲ್ಲಿ ಬಿದ್ದ ನಂತರ ಅದು ಹೇಗೆ ಬದಲಾಗುತ್ತದೆ ಎಂಬುದೇ ಈ ಸಿನಿಮಾ. ಅಂದಹಾಗೆ, ಈ ಚಿತ್ರವನ್ನು ರವೀಂದ್ರ ಕುಮಾರ್ ನಿರ್ಮಾಣ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ.

  • ಎರಡು ಭಾಗದಲ್ಲಿ ಬರಲಿದೆ ನೀನಾಸಂ ಸತೀಶ್ ನಟನೆಯ ಅಶೋಕ ಬ್ಲೇಡ್

    ಎರಡು ಭಾಗದಲ್ಲಿ ಬರಲಿದೆ ನೀನಾಸಂ ಸತೀಶ್ ನಟನೆಯ ಅಶೋಕ ಬ್ಲೇಡ್

    ನ್ನಡ ಚಿತ್ರೋದ್ಯಮದ ಹೆಸರಾಂತ ನಟ ನೀನಾಸಂ ಸತೀಶ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ಯ ತಾವು ನಟಿಸುತ್ತಿರುವ ಅಶೋಕ ಬ್ಲೇಡ್ (Ashoka Blade) ಕುರಿತಾಗಿ ಮಹತ್ವದ ಸುದ್ದಿಯೊಂದನ್ನು ನೀಡಿದ್ದು, ಈ ಸಿನಿಮಾ ಎರಡು ಭಾಗದಲ್ಲಿ ಮೂಡಿ ಬರಲಿದೆ ಎಂದಿದ್ದಾರೆ. ಪಾರ್ಟ್ 1  (Part 1) ಮತ್ತು ಪಾರ್ಟ್ 2 (Part 2) ಒಟ್ಟಿಗೆ ಶೂಟ್ ಮಾಡಿ, ನಂತರದ ದಿನಗಳಲ್ಲಿ ಒಂದೊಂದೇ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ.

    ಈ ಸಿನಿಮಾ ಎರಡು ಕಾಲ ಘಟ್ಟದಲ್ಲಿ ಮೂಡಿ ಬರಲಿದ್ದು, 70ರ ದಶಕದಿಂದ 2022ರವರೆಗಿನ ಕಥೆಯು ಸಿನಿಮಾದಲ್ಲಿದೆಯಂತೆ. ಈ ಎರಡು ಘಟ್ಟಗಳನ್ನು ವಿಭಾಗಗಳಾಗಿ ವಿಂಗಡಿಸಿ ಸಿನಿಮಾ ಮಾಡುತ್ತಿರುವುದಾಗಿ ಸತೀಶ್ (Ninasam Satish) ಮಾತನಾಡಿದ್ದಾರೆ. ಎರಡು ಭಾಗಗಳಲ್ಲಿ ಸಿನಿಮಾ ಮಾಡಲು ಕಥೆಯೇ ಪ್ರೇರೇಪಿಸಿತು. ಹಾಗಾಗಿ ಇಂಥದ್ದೊಂದು ತೀರ್ಮಾನಕ್ಕೆ ಬರಲಾಗಿದೆ ಎನ್ನುವುದು ಸತೀಶ್ ಮಾತು.

    ಈಗಾಗಲೇ ಬರೋಬ್ಬರಿ 100 ದಿನಗಳ ಕಾಲ ಅಶೋಕ ಬ್ಲೇಡ್ ಸಿನಿಮಾದ ಶೂಟಿಂಗ್ ನಡೆದಿದೆ. ಇನ್ನೂ ಮೂವತ್ತು ದಿನಗಳ ಕಾಲ ಚಿತ್ರೀಕರಣವಾದರೆ, ಸಿನಿಮಾ ಕಂಪ್ಲೀಟ್. ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದರಿಂದ ಆದಷ್ಟು ನೈಜತೆಗೆ ಹತ್ತಿರವಾಗುವಂತೆ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾದಲ್ಲಿ ಸತೀಶ್ ಹೊಸ ಬಗೆಯ ಪಾತ್ರವನ್ನು ಮಾಡಿದ್ದಾರೆ. ಹಲವು ಭಾಷೆಗಳಲ್ಲಿ ಈ ಸಿನಿಮಾ ತಯಾರಾಗಲಿದೆ. ಇದನ್ನೂ ಓದಿ:ನೀನು ಆಂಟಿಯಾಗಿ 1 ವರ್ಷದ ಅನುಭವವಿದೆ- ಬರ್ತ್‌ಡೇಯಂದು ಪತ್ನಿ ಕಾಲೆಳೆದ ನಟ ಸುದರ್ಶನ್

    ಸತೀಶ್ ನಾಯಕನಾದರೆ, ಕಾವ್ಯ ಶೆಟ್ಟಿ (Kavya Shetty) ನಾಯಕಿಯಾಗಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಕಾವ್ಯ ಪೊಲೀಸ್ ಇನ್ಸೆಪೆಕ್ಟರ್ ಪಾತ್ರವನ್ನು ಮಾಡಿದ್ದಾರೆ. ವಿನೋದ್ ಈ ಸಿನಿಮಾದ ನಿರ್ದೇಶಕರಾದರೆ, ನರಹರಿ ನಿರ್ಮಾಪಕರು.

    ಮೈಸೂರು ಸೀಮೆಯಲ್ಲಿ 70ರ ದಶಕದಲ್ಲಿ ನಡೆದ ಒಂದು ಘಟನೆ ಬಗ್ಗೆ ಕೇಳಿದ್ದೆ. ಅದು ಎಲ್ಲೂ ದಾಖಲಾಗಿಲ್ಲ. ಎಲ್ಲೂ ಅದರ ಬಗ್ಗೆ ಉಲ್ಲೇಖವಿಲ್ಲ. ಕೊನೆಗೆ ಆ ಕಥೆಯ ವಿವರಗಳನ್ನು ಹುಡುಕಿಕೊಂಡು ಹೋದಾಗ ಹಲವು ಮಹತ್ವದ ವಿಷಯಗಳು ಗೊತ್ತಾಯಿತು. ಇದು ಕನ್ನಡ ನೆಲದ ವೀರರ ಕಥೆ. ಯುದ್ಧ ಎಂದರೆ ಯುದ್ಧಭೂಮಿ ಅಥವಾ ಸಾಮ್ರಾಜ್ಯ ವಿಸ್ತರಣೆಯ ಕಥೆಯಲ್ಲ. ಎರಡು ಸಮುದಾಯಗಳ ಕುರಿತ ಕಥೆ ಇದೆ. ವ್ಯಾಪಾರಿಗಳು ಮತ್ತು ಕಾರ್ಮಿಕರ ನಡುವಿನ ಕಥೆ ಇದೆ. ಇದರಲ್ಲಿ ಭಾಗವಹಿಸಿದ ಕೆಲವರನ್ನು ಹುಡುಕಿ ಮಾತಾಡಿಸಿದೆ. ಒಂದಿಷ್ಟು ಮಾಹಿತಿ ಸಿಕ್ಕಿತು. ಅದನ್ನು ಬೆಳೆಸಿ ಚಿತ್ರಕಥೆ ಮಾಡಿದ್ದೇನೆ. ಈ ಕಥೆ ಎಲ್ಲರಿಗೂ ಇಷ್ಟವಾಗಿದೆ ಎಂದು‌ ಚಿತ್ರದ ಕಥೆಯ ಬಗ್ಗೆ ಟಿ.ಕೆ.ದಯಾನಂದ್ ಹೇಳುವ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಲುಗಿನ ನಟ ನಾಗಾರ್ಜುನ್ ಜೊತೆ ತೆರೆಹಂಚಿಕೊಂಡ ಕಾವ್ಯ ಶೆಟ್ಟಿ

    ತೆಲುಗಿನ ನಟ ನಾಗಾರ್ಜುನ್ ಜೊತೆ ತೆರೆಹಂಚಿಕೊಂಡ ಕಾವ್ಯ ಶೆಟ್ಟಿ

    ನ್ನಡದ ನಟಿ ಕಾವ್ಯಾ ಶೆಟ್ಟಿ (Kavya Shetty) ಅವರು ಇದೀಗ ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಈ ನಡುವೆ ತೆಲುಗಿನ ಸ್ಟಾರ್ ನಟ ನಾಗಾರ್ಜುನ್ (Nagarjuna) ಜೊತೆ ಕಾವ್ಯ ತೆರೆಹಂಚಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ‘ನಮ್ ದುನಿಯಾ ನಮ್ ಸ್ಟೈಲ್’ ಸಿನಿಮಾ ಮೂಲಕ ಚಂದನವನಕ್ಕೆ ಪರಿಚಿತರಾದ ನಟಿ ಕಾವ್ಯ ಅವರು ಇಷ್ಟಕಾಮ್ಯ, ಸಂಹಾರ, ಯುವರತ್ನ, ಲಂಕೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿ ಅಭಿನಯಿಸಿದ್ದಾರೆ. ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ:ಭಾವಿ ಪತ್ನಿ ಜೊತೆಗಿನ ಅಭಿಷೇಕ್ ಅಂಬರೀಶ್ ವೀಡಿಯೋ ವೈರಲ್

    ತೆಲುಗಿನ ನಟ ನಾಗಾರ್ಜುನ್ ಅವರ ಜೊತೆ ತೆರೆಹಂಚಿಕೊಳ್ಳುವ ಮೂಲಕ ಕಾವ್ಯ ಶೆಟ್ಟಿ ಸುದ್ದಿಯಲ್ಲಿದ್ದಾರೆ. ಜಾಹಿರಾತುವೊಂದರಲ್ಲಿ ನಟಿ ಕಾವ್ಯ, ನಾಗಾರ್ಜುನ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

     

    View this post on Instagram

     

    A post shared by Kavya Manohar (@kavyashettyofficial)

    ಕರಾವಳಿ ಕುವರಿ ಕಾವ್ಯ ಶೆಟ್ಟಿ ಅವರು ಕನ್ನಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುವ ಮೂಲಕ ನಟಿ ಸದ್ದು ಮಾಡ್ತಿದ್ದಾರೆ.

  • ಲಂಡನ್‌ಗೆ ಹಾರಿದ ಸ್ಯಾಂಡಲ್‌ವುಡ್‌ ನಟಿ ಕಾವ್ಯ ಶೆಟ್ಟಿ

    ಲಂಡನ್‌ಗೆ ಹಾರಿದ ಸ್ಯಾಂಡಲ್‌ವುಡ್‌ ನಟಿ ಕಾವ್ಯ ಶೆಟ್ಟಿ

    `ನಮ್ ದುನಿಯಾ ನಮ್ ಸ್ಟೈಲ್’ (Nam Duniya Nam Style) ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಕರಾವಳಿ ಬ್ಯೂಟಿ ಕಾವ್ಯ ಶೆಟ್ಟಿ (Kavya Shetty) ಇದೀಗ ಬಹುಭಾಷೆಗಳಲ್ಲಿ ಮಿಂಚ್ತಿದ್ದಾರೆ. ಸದ್ಯ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ, ಲಂಡನ್‌ಗೆ ಹಾರಿದ್ದಾರೆ.

    ಇಷ್ಟಕಾಮ್ಯ, ರವಿ ಭೋಪಣ್ಣ, ಲಂಕೆ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ಕಾವ್ಯ ಶೆಟ್ಟಿ ಇತ್ತೀಚೆಗೆ ಕನ್ನಡದ `ಲವ್ ಮಾಕ್ಟೈಲ್’ (Love Mocktail) ಚಿತ್ರ ತೆಲುಗಿನಲ್ಲಿ ರಿಮೇಕ್ ಆಗಿತ್ತು. ಈ ಚಿತ್ರದಲ್ಲಿ ಕಾವ್ಯ ಶೆಟ್ಟಿ ತಮ್ಮ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಇದೀಗ ಸಿನಿಮಾ ರಿಲೀಸ್ ನಂತರ ನಟಿ ಲಂಡನ್‌ಗೆ ಹಾರಿದ್ದಾರೆ. ಇದನ್ನೂ ಓದಿ: ನನ್ನ ಅಪ್ಪ ಜಗತ್ತಿನಲ್ಲಿಯೇ ಸೇಫ್ ಡ್ರೈವರ್: ರಾಧಿಕಾ ಸ್ಪೆಷಲ್ ಪೋಸ್ಟ್

    ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಲಂಡನ್ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಸುಂದರ ತಾಣಗಳಿಗೆ ಭೇಟಿ ನೀಡಿರುವ ಬಗೆ ಬಗೆಯ ಫೋಟೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ನಟಿ ಸದ್ದು ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]